ಕೈಕಂಬ

ಭಾರತ ದೇಶದ ಗ್ರಾಮಗಳು

ಕೈಕಂಬ ಹಿಂದಿನಕಾಲದಲ್ಲಿ ಕಂದಾವರ ಎಂಬ ಹೆಸರಿನಿಂದ ಕರೆಯಲ್ಪಡುವ ಮಂಗಳೂರು ತಾಲೂಕಿನ ಒಂದು ನಗರ ಪಟ್ಟಣ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಮತ್ತು ಮಂಗಳೂರು ನಗರದ ನಡುವೆ ನೆಲೆಗೊಂಡಿದೆ. ಈ ಪಟ್ಟಣವು ಮಂಗಳೂರು - ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ ೧೬೯ ನಲ್ಲಿ ಬರುತ್ತದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬಜಪೆಯಿಂದ ೮ ಕಿಮೀ ದೂರದಲ್ಲಿದೆ. ೨೦೦೯ ರ ಜನಗಣತಿಯ ಪ್ರಕಾರ ಕೈಕಂಬದ ಜನಸಂಖ್ಯೆ ಸುಮಾರು ೧೫೩೨೫ ಆಗಿದೆ. ಕೈಕಂಬದ ಭಾಗಗಳನ್ನು ಕಂದಾವರ ಪಂಚಾಯತ್ ಮತ್ತು ಗುರುಪುರ ಪಂಚಾಯತ್ ನಿಯಂತ್ರಿಸುತ್ತಿದೆ.ವಿಮಾನ ನಿಲ್ದಾಣ, ನಗರ ಮತ್ತು ಕೈಗಾರಿಕಾ ಪ್ರದೇಶಕ್ಕೆ ಸಮೀಪವಿರುವ ಭೌಗೋಳಿಕ ಸ್ಥಳದಿಂದಾಗಿ ಭೂಮಿ ಬೆಲೆಗಳು ಏರಿದೆ. ಕೈಕಂಬದಲ್ಲಿರುವ ಗೈಡ್-ಪೋಲ್ನ ಭೌಗೋಳಿಕ ಸ್ಥಳ ನಿಖರವಾಗಿ ೧೨.೯೬೦೭° ಉತ್ತರ ಮತ್ತು ೭೪.೯೩೩೨° ಪೂರ್ವ ಮತ್ತು ಸಮುದ್ರ ಮಟ್ಟದಿಂದ ಸುಮಾರು ೧೦೦ ಮೀಟರ್‌ಗಳಾಷ್ಟು ದೂರದಲ್ಲಿದೆ.

ಕೈಕಂಬ

ವ್ಯುತ್ಪತ್ತಿ

ಬದಲಾಯಿಸಿ

ಕೈಕಂಬ ಪದವು ತುಳು ಭಾಷೆಯಲ್ಲಿ ಕೈ-ಪೋಸ್ಟ್ ಮತ್ತು ಕನ್ನಡ ಭಾಷೆಯಲ್ಲಿ ಮಾರ್ಗದರ್ಶಿ-ಪೋಲ್ ಎಂದರ್ಥ. ಈ ಪದವನ್ನು ತುಳುನಾಡಿನಲ್ಲಿರುವ ರಸ್ತೆಗಳ ಜಂಕ್ಷನ್‌ಗಳಲ್ಲಿ ಹಳೆಯ ದಿನಗಳಲ್ಲಿ ಬಳಸಲಾಗುತ್ತಿತ್ತು, ಮರದ ಕಂಬಗಳು ಜಂಕ್ಷನ್ ಮಧ್ಯದಲ್ಲಿ ಸ್ಥಳಗಳ ದಿಕ್ಕನ್ನು ಸೂಚಿಸುತ್ತದೆ. ಈ ಪಟ್ಟಣದ ಚಿಕ್ಕ ಜಂಕ್ಷನ್ ಮಂಗಳೂರು ಮತ್ತು ಬಜ್ಪೆ, ಮೂಡಬಿದ್ರಿಗಳಿಗೆ ದಾರಿ ಮಾಡುವ ಮೂರು-ಮಾರ್ಗದ ರಸ್ತೆ ಸಂಪರ್ಕವನ್ನು ಹೊಂದಿದೆ.ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಮಾರ್ಗದರ್ಶಿ-ಪೋಲ್ ಹೊಂದಿದೆ.

ವಾಣಿಜ್ಯ ಮತ್ತು ಕೈಗಾರಿಕೆಗಳು

ಬದಲಾಯಿಸಿ

ಮಂಗಳೂರು ಟೈಲ್ ಕಾರ್ಖಾನೆಗಳು ಕಡಿಮೆ ಸಂಖ್ಯೆಯಲ್ಲಿವೆ. ಗೋಡಂಬಿ , ರೈಸ್ ಸಂಸ್ಕರಣೆ ಮತ್ತು ಅಡಿಕೆ ಸಂಸ್ಕರಣೆ ಕೈಗಾರಿಕೆಗಳು ಕೈಂಕಬ ವನ್ನು ಉನ್ನತಿಕರಿಸುತ್ತಿದೆ. ಕೋಳಿ ಸಾಕಣೆ , ಗೋಡಂಬಿ ತೋಟ, ಭತ್ತದ ಕೃಷಿಯನ್ನು ನಾವು ಕಾಣಬಹುದು. ರಿಯಲ್ ಎಸ್ಟೇಟ್ ವ್ಯವಹಾರವು ಮತ್ತೊಂದು ಪ್ರಮುಖ ವಾಣಿಜ್ಯ ಪ್ರದೇಶವಾಗಿದೆ.

ಜನರು ಮತ್ತು ಸಂಸ್ಕೃತಿ

ಬದಲಾಯಿಸಿ

ಎಲ್ಲಾ ಜನರು ಸಾಕ್ಷರರಾಗಿದ್ದಾರೆ. ಈ ಪಟ್ಟಣದ ವಿಶೇಷತೆ ಪ್ರತಿ ಕುಟುಂಬವೂ ಕನಿಷ್ಟ ಒಂದು ವ್ಯಕ್ತಿ ವಿದೇಶದಲ್ಲಿ / ವಿದೇಶಿಯಾಗಿರುತ್ತಾನೆ. ಮುಖ್ಯವಾಗಿ ತುಳು, ಕೊಂಕಣಿ ಮತ್ತು ಉರ್ದು ಭಾಷೆ ಮಾತನಾಡುವವರು ಈ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಕನ್ನಡ ,ಹಿಂದಿ ಮತ್ತು ಇಂಗ್ಲಿಷ್ ಜ್ಞಾನವನ್ನು ಹೊಂದಿದ್ದಾರೆ. ದೀಪಾವಳಿ, ಈದ್ ಉಲ್-ಫಿತ್ರ್, ವಿಜಯದಶಮಿ (ದಸರಾ), ಗಣೇಶ ಚೌತಿ, ಕ್ರಿಸ್ಮಸ್ ಹಬ್ಬಗಳನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. ಜನರು ಶಾಂತಿಯಲ್ಲಿ ವಾಸಿಸುತ್ತಾರೆ. ಮಂಗಳೂರಿನ ಇತರ ಉಪನಗರಗಳಿಗೆ ಹೋಲಿಸಿದರೆ ಈ ಧರ್ಮಗಳ ನಡುವೆ ಬಹಳ ಕಡಿಮೆ ಸಂಘರ್ಷಗಳಿವೆ.[]

ಸಮೀಪದ ಸ್ಥಳಗಳು

ಬದಲಾಯಿಸಿ

ಸಮೀಪದ ಸ್ಥಳಗಳೆಂದರೆ ಗುರುಪುರ, ಮಂಗಳೂರು, ಪೊಳಲಿ, ಅಡ್ಡೂರು, ಬಜ್ಪೆ, ಬಂಟ್ವಾಳ ಸುರಲ್ಪಾಡಿ ಮತ್ತು ಮೂಡಬಿದ್ರಿ, ಗಂಜಿನಮಠ, ಕಿನ್ನಿಕಂಬಳ, ಮಳಲಿ, ನಾರಳ

ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳು

ಬದಲಾಯಿಸಿ
  1. ಜಾಮಿಯಾ ಮಸೀದಿ (ಕೈಕಂಬ ನಗರ)
  2. ಶ್ರೀ ಡೂಮಾವತಿ ದೈವಸ್ಥಾನ, ಬೈಲು
  3. ರಾಜರಾಜೇಶ್ವರಿ ದೇವಾಲಯ ,ಪೊಳಲಿ
  4. ಲೇಡಿ ಆಫ್ ಪೊಂಪೈ ಚರ್ಚ್ ,ಕವ್ದೂರ್
  5. ನೂರುಲ್ ಉಲೂಮ್ ,ಸುರಲ್ಪಾಡಿ
  6. ಶ್ರೀ ಮಹಾಗಣಪತಿ ದೇವಸ್ಥಾನ, ಗಂಜಿಮಠ
  7. ಬ್ರಹ್ಮ ಬಾಲಾಂಡಿ ದೇವಸ್ಥಾನ, ಮೂಡುಪೆರಾರ
  8. ಜಾಮಿಯಾ ಮಸೀದಿ ,ಗಂಜಿಮಠ
  9. ಹಜರತ್ ಅಸ್ರುರುದ್ದೀನ್ ಅಲ್ಲ್ಯ ಅಲ್ಲಾ ದರ್ಗಾ ಮತ್ತು ಮಸೀದಿ
  10. ಹಜರತ್ ಅಸ್ರರುದ್ದೀನ್ ಜಾಮಿಯಾ ಮಸೀದಿ
  11. ಶ್ರೀ ರಾಮ್ ಭಜನಾ ಮಂದಿರ, ನಾರಳ
  12. ಶ್ರೀ ರಾಧಾ ಕೃಷ್ಣ ಭಜನಾ ಮಂದಿರ, ಕಿನ್ನಿಕಂಬಳ
  13. ಜಾಮಿಯಾ ಮಸೀದಿ, ಕಂದಾವರ
  14. ಬದ್ರಿಯಾ ಮದರಾಸ ,ಕಂದಾವರ

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು

ಬದಲಾಯಿಸಿ
  1. ವಿಜಯಾ ಬ್ಯಾಂಕ್
  2. ಸಿಂಡಿಕೇಟ್ ಬ್ಯಾಂಕ್
  3. ಕೆನರಾ ಬ್ಯಾಂಕ್
  4. ಕರಾವಳಿ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ
  5. ನೇತ್ರಾವತಿ ಗ್ರಾಮೀಣ ಬ್ಯಾಂಕ್
  6. ಶ್ರೀ ಭಗವತಿ ಸಹಕಾರಿ ಬ್ಯಾಂಕ್
  7. ಎಸ್ಸಿಡಿಸಿ ಬ್ಯಾಂಕ್
  8. ಕುಂಬರ ಗುಡಿ ಕೈಗರಿಕ ಬ್ಯಾಂಕ್, ಮಳಲಿ
  9. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
  10. ಆಕ್ಸಿಸ್ ಬ್ಯಾಂಕ್ ಎಟಿಎಂ
  11. ಸಿಂಡಿಕೇಟ್ ಬ್ಯಾಂಕ್ ಎಟಿಎಂ
  12. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಕೈಕಂಬ&oldid=1250216" ಇಂದ ಪಡೆಯಲ್ಪಟ್ಟಿದೆ