ಪರಿಧಮನಿಯ ರೋಗ

(ಕೊರೋನರಿ ಆರ್ಟರಿ ಡಿಸೀಸ್ ಇಂದ ಪುನರ್ನಿರ್ದೇಶಿತ)

ಪರಿಧಮನಿಯ ರೋಗವು (ಕೊರೋನರಿ ಆರ್ಟರಿ ಡಿಸೀಸ್) ಹೃದಯಕ್ಕೆ ಸಂಬಂಧಿಸಿದ ರೋಗ. ಇದನ್ನು ಪರಿಧಮನಿಯ ಹೃದಯರೋಗ ಎಂದೂ ಕರೆಯಲಾಗುತ್ತದೆ.[೧] ಈ ಕಾಯಿಲೆಯಲ್ಲಿ ಹೃದಯದ ಅಪಧಮನಿಗಳಲ್ಲಿ ಪ್ಲಾಕ್ ಅಥವಾ ಕೊಬ್ಬಿನ ಶೇಖರಣೆಯಿಂದ ಹೃದಯದ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ಹೃದಯಾಘಾತ ಉಂಟಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಸಾಮಾನ್ಯವಾಗಿದೆ.[೨][೩] ಸಾಮಾನ್ಯ ಲಕ್ಷಣವೆಂದರೆ ಎದೆ ನೋವು ಅಥವಾ ಅಸೌಖ್ಯ. ಇದು ಭುಜ, ತೋಳು, ಬೆನ್ನು, ಕುತ್ತಿಗೆ ಅಥವಾ ದವಡೆಯೊಳಗೆ ಚಲಿಸಬಹುದು. ಕೆಲವೊಮ್ಮೆ ಇದು ಎದೆಯುರಿಯಾಗಿ ಕಾಣಿಸಬಹುದು.[೪] ವ್ಯಾಯಾಮ ಅಥವಾ ಭಾವನಾತ್ಮಕ ಒತ್ತಡ ಸಂಭವಿಸುವ ಸಮಯದಲ್ಲಿ ಹೆಚ್ಚು ಕಡಿಮೆ ಕೆಲವು ನಿಮಿಷಗಳ ಒಳಗೆ ನೋವು ಎದೆಯುರಿ ಕಾಣಿಸಬಹುದು. ಮತ್ತು ಸ್ವಲ್ಪ ವಿಶ್ರಾಂತಿಯ ನಂತರ ಸುಧಾರಣೆ ಕಾಣುವುದು. ಉಸಿರಾಟದ ತೊಂದರೆ ಸಂಭವಿಸಬಹುದು ಮತ್ತು ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳು ಕಾಣದಿರಬಹುದು. ಮೊದಲ ರೋಗ ಚಿಹ್ನೆ ಕೆಲವೊಮ್ಮೆ ಹೃದಯಾಘಾತವೇ ಆಗಬಹುದು. ಇತರ ಲಕ್ಷಣಗಳಲ್ಲಿ ಹೃದಯಸ್ತಂಭನ ಅಥವಾ ಅನಿಯಮಿತ ಎದೆಬಡಿತಗಳು ಸೇರಿವೆ.[೫][೬]

ರೋಗಲಕ್ಷಣಗಳು ಬದಲಾಯಿಸಿ

ಪರಿಧಮನಿಗಳ ಕಿರಿದಾಗುವಿಕೆಯು ಹೃದಯಕ್ಕೆ ಹರಿಯುವ ಆಮ್ಲಜನಕ ಮತ್ತು ರಕ್ತದ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಶ್ರಮದಾಯಕ ಚಟುವಟಿಕೆಗಳಲ್ಲಿ ಹೃದಯವು ವೇಗವಾಗಿ ಬಡಿಯುತ್ತದೆ. ಕೆಲವರಿಗೆ ಇದು ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಮತ್ತು ಕೆಲವರು ಯಾವುದೇ ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲ. ಚಟುವಟಿಕೆ ಮತ್ತು ತಿಂದ ನಂತರ ನಿಯಮಿತವಾಗಿ ಸಂಭವಿಸುವ ಎದೆ ನೋವು ಅಥವಾ ಅಸೌಖ್ಯ ಸಾಮಾನ್ಯ ಲಕ್ಷಣವಾಗಿದೆ. ಗಂಟಲೂತ, ಎದೆಯ ಬಿಗಿತ, ಭಾರ, ಒತ್ತಡ, ಮರಗಟ್ಟುವಿಕೆ, ಉಸಿರಾಟದ ತೊಂದರೆ, ಬೆವರುವುದು, ವಾಕರಿಕೆ ಅಥವಾ ವಾಂತಿ ಮತ್ತು ಲಘು ತಲೆನೋವುಗಳು ಹೃದಯಾಘಾತ ಅಥವಾ ಹೃದಯ ಸ್ನಾಯುವಿನ ಸೋಂಕಿನ ಲಕ್ಷಣಗಳಾಗಿವೆ ಮತ್ತು ತಕ್ಷಣದ ತುರ್ತು ವೈದ್ಯಕೀಯ ಸೇವೆಗಳು ಈ ಸಮಯದಲ್ಲಿ ಅಗತ್ಯವಿರುತ್ತದೆ.

ರೋಗನಿದಾನ ಬದಲಾಯಿಸಿ

ಪರಿಧಮನಿಯ ಕಾಯಿಲೆಯ ರೋಗನಿದಾನವು ನಿರ್ದಿಷ್ಟ ರೋಗಲಕ್ಷಣಗಳನ್ನು ಅವಲಂಬಿಸಿರುತ್ತದೆ. ಆಧಾರರೇಖೆಯ ವಿದ್ಯುತ್ ಹೃಲ್ಲೇಖನ (ಇಸಿಜಿ),ಒತ್ತಡ ಪರೀಕ್ಷೆ, ರೇಡಿಯೊಐಸೋಟೋಪ್ ಪರೀಕ್ಷೆ, ನ್ಯೂಕ್ಲಿಯರ್ ಸ್ಟ್ರೆಸ್ ಟೆಸ್ಟ್, ಮಯೋಕಾರ್ಡಿಯಲ್ ಸಿಂಟಿಗ್ರಾಫಿ, ಎಕೋಕಾರ್ಡಿಯೋಗ್ರಫಿ, ಪರಿಧಮನಿಯ ಆಂಜಿಯೋಗ್ರಫಿ,[೭] ಇಂಟ್ರಾವಾಸ್ಕುಲರ್ ಅಲ್ಟ್ರಾಸೌಂಡ್, ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ತಂತ್ರಜ್ಞಾನ ಮುಖೇನ ರೋಗ ಲಕ್ಷಣಗಳನ್ನು ಪರೀಕ್ಷಿಸಿ ರೋಗನಿದಾನವನ್ನು ಮಾಡಲಾಗುತ್ತದೆ.[೮]

ಮುಂಜಾಗ್ರತಾ ಕ್ರಮಗಳು ಬದಲಾಯಿಸಿ

ಶೇ.೯೦ ರಷ್ಟು ಹೃದಯರಕ್ತನಾಳದ ಕಾಯಿಲೆಗಳನ್ನು ಮುಂಜಾಗ್ರತಾ ಕ್ರಮಗಳಿಂದ ತಡೆಯಬಹುದು. ದೈಹಿಕ ವ್ಯಾಯಾಮದಿಂದ ಕೊಬ್ಬು ಶೇಖರಣೆಗೊಳ್ಳುವುದನ್ನು ತಡೆಯುವುದು, ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡುವುದು, ಆರೋಗ್ಯಕರ ಆಹಾರವನ್ನು ಸೇವಿಸುವುದು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು, ಧೂಮಪಾನ ತಡೆಯುವುದು ಪರಿಣಾಮಕಾರಿಯಾದ ಮುಂಜಾಗ್ರತಾ ಕ್ರಮಗಳು.[೯] ಹೆಚ್ಚಿನ ದೈಹಿಕ ಚಟುವಟಿಕೆಯು ಪರಿಧಮನಿಯ ಕಾಯಿಲೆಯ ಅಪಾಯವನ್ನು ಸುಮಾರು ೨೫% ರಷ್ಟು ಕಡಿಮೆ ಮಾಡುತ್ತದೆ.[೧೦] ರಕ್ತದಲ್ಲಿನ ಸಕ್ಕರೆ ನಿಯಂತ್ರಣವು ಹೃದಯದ ಅಪಾಯವನ್ನು ಸುಧಾರಿಸುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ, ಆದರೆ ಸುಧಾರಿತ ಸಕ್ಕರೆ ನಿಯಂತ್ರಣವು ಮೂತ್ರಪಿಂಡ ವೈಫಲ್ಯ ಮತ್ತು ಕುರುಡುತನದಂತಹ ಇತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಉಲ್ಲೇಖ ಬದಲಾಯಿಸಿ

  1. Bhatia, Sujata K. (2010). Biomaterials for clinical applications (Online-Ausg. ed.). New York: Springer. p. 23. ISBN 9781441969200. Archived from the original on 10 January 2017.
  2. "Ischemic Heart Disease". National Heart, Lung, and Blood Institute (NHLBI). Retrieved 2 February 2019.
  3. name=GDB2013>GBD 2013 Mortality Causes of Death Collaborators (January 2015). "Global, regional, and national age-sex specific all-cause and cause-specific mortality for 240 causes of death, 1990-2013: a systematic analysis for the Global Burden of Disease Study 2013". Lancet. 385 (9963): 117–71. doi:10.1016/S0140-6736(14)61682-2. PMC 4340604. PMID 25530442. {{cite journal}}: |author1= has generic name (help)CS1 maint: numeric names: authors list (link)
  4. "Coronary Artery Disease (CAD)". 12 March 2013. Archived from the original on 2 March 2015. Retrieved 23 February 2015.
  5. What Are the Signs and Symptoms of Coronary Heart Disease
  6. Coronary Artery Disease (CAD)
  7. https://www.heartfoundation.org.nz/your-heart/heart-tests/coronary-angiography#:~:text=Angiography%20is%20an%20imaging%20test,heart%2C%20abdomen%2C%20and%20legs.
  8. https://www.mayoclinic.org/diseases-conditions/coronary-artery-disease/diagnosis-treatment/drc-20350619
  9. https://www.ahajournals.org/doi/10.1161/CIRCULATIONAHA.107.717033
  10. https://www.ncbi.nlm.nih.gov/pmc/articles/PMC4979358/