ಬೆವರು
ಬೆವರು (ಬಾಷ್ಪವಿಸರ್ಜನೆ, ಅಥವಾ ಡಾಯಫರೀಸಿಸ್) ಸ್ತನಿಗಳ ಚರ್ಮದಲ್ಲಿನ ಸ್ವೇದ ಗ್ರಂಥಿಗಳಿಂದ ವಿಸರ್ಜಿಸಲಾಗುವ, ಮುಖ್ಯವಾಗಿ ನೀರು ಮತ್ತು ವಿವಿಧ ಕರಗಿದ ಘನಪದಾರ್ಥಗಳನ್ನು (ಪ್ರಮುಖವಾಗಿ ಕ್ಲೋರೈಡ್‌ಗಳು) ಹೊಂದಿರುವ ಒಂದು ಪ್ರವಾಹಿ ಪದಾರ್ಥ. ಬೆವರು ರಾಸಾಯನಿಕಗಳು ಅಥವಾ ಕಂಪು ಪದಾರ್ಥಗಳಾದ ನಿಯತ-ಕ್ರೀಸಾಲ್ ಮತ್ತು ಅಭಿಮುಖಿ-ಕ್ರೀಸಾಲ್‌ಗಳನ್ನು ಹೊಂದಿರುವುದರ ಜೊತೆಗೆ ಸಣ್ಣ ಪ್ರಮಾಣದಲ್ಲಿ ಯೂರಿಯಾವನ್ನೂ ಹೊಂದಿರುತ್ತದೆ. ಮಾನವರಲ್ಲಿ, ಬೆವರುವಿಕೆಯು ಮುಖ್ಯವಾಗಿ ಉಷ್ಣನಿಯಂತ್ರಣದ ಒಂದು ಉಪಾಯ, ಜೊತೆಗೆ ಪುರುಷರ ಬೆವರಿನ ಘಟಕಗಳು ಫೆರಮೋನ್‌ನ ಸಂಕೇತಗಳಾಗಿ ಕಾರ್ಯನಿರ್ವಹಿಸಬಲ್ಲವೆಂದು ಪ್ರಸ್ತಾಪಿಸಲಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |