ಕಾಯಸ್ಥ
ಕಾಯಸ್ಥ ಅಥವಾ ಕಾಯಸ್ಥ್ (ಹಿಂದಿ:कायस्थ) ಎಂಬುದು ಭಾರತದ ಒಂದು ಜಾತಿ/ಜನಾಂಗೀಯ-ಗುಂಪಾಗಿದೆ. ಅವರು ಒಂದು ವೈದಿಕ ದೇವರ ನೇರ ವಂಶಸ್ಥರು ಎಂಬಂತೆ ಧಾರ್ಮಿಕ ಗ್ರಂಥಪಾಠಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಏಕೈಕ ಒಳಪಂಗಡವಾಗಿದ್ದಾರೆ ಮತ್ತು ಚಿತ್ರಾಂಶಿ/ದೇವಪುತ್ರ[೧] ಎಂದೂ ಕರೆಯಲಾಗುವ ಪೂರ್ವಜನನ್ನು ಪೂಜಿಸುವ ಹಿಂದೂಧರ್ಮದ ಏಕೈಕ ಒಳಪಂಗಡವಾಗಿದ್ದಾರೆ. ವೇದಗಳು ಮತ್ತು ಪುರಾಣಗಳಲ್ಲಿ ಹೇಳಲಾಗಿರುವಂತೆ ಅವರು ಒಂದು ಇಬ್ಬಗೆಯ-ಜಾತಿ ಸ್ಥಾನಮಾನವನ್ನು, ಅಂದರೆ ಬ್ರಾಹ್ಮಣ ಹಾಗೂ ಕ್ಷತ್ರಿಯ ಜಾತಿಗಳ ಸ್ಥಾನಮಾನವನ್ನು ಹೊಂದಿದ್ದಾರೆ. ಮುಖ್ಯವಾಗಿ ಉತ್ತರ ಭಾರತದಾದ್ಯಂತ ಹರಡಿಕೊಂಡಿರುವ ಅವರು, ಬರಹಗಾರಿಕೆಯನ್ನು ಪ್ರಾಚೀನ ವೃತ್ತಿಯನ್ನಾಗಿ ಹೊಂದಿದ್ದ ಬ್ರಾಹ್ಮಣರ ಒಂದು ಉಪ-ಒಳಪಂಗಡವಾಗಿದ್ದಾರೆ. [೨] [೩] [೪] [೫]
- Hindunet.org ನಲ್ಲಿರುವ ಸಂಸ್ಕೃತ ನಿಘಂಟು ಕಾಯಸ್ಥನನ್ನು ಈ ಕೆಳಕಂಡಂತೆ ವ್ಯಾಖ್ಯಾನಿಸುತ್ತದೆ:
- ಕಾ_ಯಸ್ಥ, ಕಾ_ಯತ ಎಂದರೆ ಬರಹಗಾರ-ಜಾತಿಗೆ ಸೇರಿರುವ ಓರ್ವ ಮನುಷ್ಯ; ಬರಹಗಾರಿಕೆಯೇ ಒಂದು ಉದ್ಯೋಗವಾಗಿರುವ ಬ್ರಾಹ್ಮಣರ ಒಂದು ಬಣ (ಕಾ.)( ಕಾ.ಲೆಕ್ಸ್.)[೪]
- vedah.net [೨] ವತಿಯಿಂದ ಬರೆಯಲ್ಪಟ್ಟಿರುವ BRAHMINS ಎಂಬ ಲೇಖನದಲ್ಲಿ ಬ್ರಾಹ್ಮಣರೆಂದರೆ ಯಾರು ಮತ್ತು ಬ್ರಾಹ್ಮಣರ ವಿವಿಧ ಒಳ-ಗುಂಪುಗಳು ಯಾವುವು ಎಂಬುದರ ವಿವರಗಳನ್ನು ನೀಡಲಾಗಿದೆ. ಕ್ರಮ ಸಂಖ್ಯೆ ೧೫ರಲ್ಲಿ (ವರ್ಣಮಾಲೆಯ ಅನುಕ್ರಮದಲ್ಲಿ) ಕಾಯಸ್ಥ ಬ್ರಾಹ್ಮಣರ ಕುರಿತು ಉಲ್ಲೇಖಿಸಲಾಗಿದೆ.
- ದಿ ಬ್ರಾಹ್ಮಿನ್ಸ್: ಎ ಲಿಸ್ಟ್ ಆಫ್ ಬ್ರಾಹ್ಮಿನ್ ಕಮ್ಯುನಿಟೀಸ್ ಎಂಬುದು Kamat.com [೩] ವತಿಯಿಂದ ತಯಾರಿಸಲ್ಪಟ್ಟಿರುವ, ಭಾರತದಲ್ಲಿನ ಎಲ್ಲಾ ಬ್ರಾಹ್ಮಣ ಸಮುದಾಯಗಳ ಒಂದು ವ್ಯಾಪಕವಾದ ಪಟ್ಟಿಯಾಗಿದೆ. ಇಲ್ಲಿ (ವರ್ಣಮಾಲೆಯ ಅನುಕ್ರಮದಲ್ಲಿ) ಕಾಯಸ್ಥ ಬ್ರಾಹ್ಮಣರು ಉಲ್ಲೇಖಿಸಲ್ಪಟ್ಟಿದ್ದಾರೆ.
- ಶಬ್ದ-ಕಲ್ಪದ್ರುಮದಲ್ಲಿ ಉಲ್ಲೇಖಿಸಲ್ಪಟ್ಟಿರುವ ವ್ಯೋಮ ಸಂಹಿತೆಯು ಹೀಗೆ ಹೇಳುತ್ತದೆ:
- ಕಾಯಸ್ಥರು ಬ್ರಹ್ಮ ದೇವರ ಕಾಯ ಅಥವಾ ದೇಹದಿಂದ ಉದ್ಭವಿಸಿದ್ದಾರೆ. ಅವರು ಬ್ರಾಹ್ಮಣರಿಗೆ ಹೋಲುವ ದರ್ಜೆಯಲ್ಲಿದ್ದಾರೆ.
ಈ ಅಧಿಕಾರವಂತ ವರ್ಗ ಹಾಗೂ ವಾಸ್ತವಿಕ ಪುರೋಹಿತರ ವರ್ಗದ ನಡುವಿನ ಪ್ರಮುಖ ವ್ಯತ್ಯಾಸಗಳು ಕಾಶ್ಮೀರ ರಾಜ್ಯದಲ್ಲಿ ಸುಮಾರು ೧೫೦೦ ವರ್ಷಗಳ ಹಿಂದೆ ಶುರುವಾಯಿತು. ಅಧಿಕಾರದ ದುರುಪಯೋಗ ನಡೆಯುತ್ತಿರುವುದರ ಕುರಿತು ಅಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರ ಮೇಲೆ ಸೂಚಿಸಿ ಆರೋಪಿಸುತ್ತಿದ್ದರು.[೬] [೭]
ವೈದಿಕ ಗ್ರಂಥಪಾಠಗಳಲ್ಲಿನ ಉಲ್ಲೇಖಗಳು
ಬದಲಾಯಿಸಿಅತ್ಯಂತ ಪ್ರಾಚೀನವಾಗಿರುವ ಪುರಾಣಗಳು, ಸ್ಮೃತಿಗಳು ಹಾಗೂ ಶೃತಿಗಳಲ್ಲಿ ಕಾಯಸ್ಥರು ವಿವರಿಸಲ್ಪಟ್ಟಿದ್ದಾರೆ:
- ವೈದಿಕ ಧರ್ಮಗ್ರಂಥಗಳ ಪ್ರಕಾರ, ಸಾವಿನ ನಂತರ ಮನುಷ್ಯರ ಆತ್ಮಗಳು ತಮ್ಮ ಪಾಪಗಳು ಮತ್ತು ಸದ್ಗುಣಗಳಿಗೆ ಅನುಸಾರವಾಗಿ ಪ್ರತಿಫಲಗಳು ಮತ್ತು ಶಿಕ್ಷೆಗಳನ್ನು ಸ್ವೀಕರಿಸುತ್ತವೆ. ಆದ್ದರಿಂದ ಮನುಷ್ಯರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ನಾಶವಾಗುವುದಿಲ್ಲ ಎಂದು ನಂಬಲಾಗುತ್ತದೆ. ಸಾವಿನ ನಂತರ ಮನುಷ್ಯರ ಆತ್ಮಗಳು ಯಮಪುರಿಗೆ ಹೋಗುತ್ತವೆ. ಯಮರು ಎಂದು ಕರೆಯಲ್ಪಡುವ ದೇವತೆಗಳ ಉಪಸ್ಥಿತಿ ಅಲ್ಲಿರುತ್ತದೆ. ಮನುಷ್ಯರ ಕರ್ಮಗಳ ಕುರಿತಾದ ದಾಖಲೆಗಳನ್ನು ಈ ಯಮರು ನಿರ್ವಹಿಸುವುದರ ಜೊತೆಗೆ, ಅದಕ್ಕನುಸಾರವಾಗಿ ಆ ಮನುಷ್ಯರಿಗೆ ಸಲ್ಲಬೇಕಾದುದನ್ನು ಸಲ್ಲಿಸುತ್ತಾರೆ. ಪ್ರಮುಖ ಯಮನನ್ನು ಯಮರಾಜ ಅಥವಾ ಧರ್ಮರಾಜ ಎಂದು, ಅಂದರೆ, ಯಮಪುರಿಯ ರಾಜ ಅಥವಾ ಕಾನೂನುಗಳ ರಾಜ ಎಂದು ಕರೆಯಲಾಗುತ್ತದೆ.
- ಯಮ ಸಂಹಿತೆ ಯು ಹಿಂದೂ ಕಾನೂನಿನ ಒಂದು ಕೃತಿಯಾದ ಅಹಿಲ್ಯಾ ಕಾಮಧೇನುವಿನ ೯ನೇ ಅಧ್ಯಾಯದಿಂದ ಪಡೆಯಲಾಗಿರುವ ಒಂದು ಉದ್ಧೃತ ಭಾಗವಾಗಿದ್ದು, ಅದರಲ್ಲಿರುವ ಒಂದು ಕಥೆಯು ಹೀಗಿದೆ: ಮನುಷ್ಯರ ಕರ್ಮಗಳಿಗೆ ಸಂಬಂಧಿಸಿದ ದಾಖಲೆಗಳನ್ನಿಡುವ ಮತ್ತು ಅವರಿಗೆ ನ್ಯಾಯಸಮ್ಮತ ತೀರ್ಪನ್ನು ನೀಡುವ ತನ್ನ ಅತ್ಯಂತ ಜವಾಬ್ದಾರಿಯುತ ಕರ್ತವ್ಯಗಳನ್ನು ನೆರವೇರಿಸುವಲ್ಲಿ ತಾನು ಎದುರಿಸುತ್ತಿರುವ ತೊಡಕುಗಳ ಕುರಿತು ಧರ್ಮರಾಜನು ಬ್ರಹ್ಮ ದೇವರಿಗೆ ದೂರುನೀಡಿದ. ಬ್ರಹ್ಮ ದೇವರು ಧ್ಯಾನಸ್ಥನಾದ. ಅವನ ದೇಹದಿಂದ ಶ್ರೀ ಚಿತ್ರಗುಪ್ತನು ಉದ್ಭವಿಸಿದ ಹಾಗೂ ಒಂದು ಶಾಯಿಕುಡಿಕೆ ಮತ್ತು ಒಂದು ಲೇಖನಿಯನ್ನು ಹಿಡಿದುಕೊಂಡು ಬ್ರಹ್ಮನ ಮುಂದೆ ನಿಂತ. ಅವನನ್ನು ನೋಡಿದ (ಸೃಷ್ಟಿಕರ್ತ) ಬ್ರಹ್ಮದೇವನು ಹೀಗೆ ಹೇಳಿದ: "ನನ್ನ ದೇಹದಿಂದ (ಕಾಯದಿಂದ) ನೀನು ಉದ್ಭವಿಸಿರುವುದರಿಂದ ನೀನು ಕಾಯಸ್ಥ ಎಂಬ ಹೆಸರಿನಿಂದ ಕರೆಸಿಕೊಳ್ಳುವೆ ಮತ್ತು ಯಾರಿಗೂ ಕಾಣದಂತೆ ನನ್ನ ಶರೀರದಲ್ಲಿ ನೀನು ನಿನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದ್ದರಿಂದಾಗಿ ನಾನು ನಿನಗೆ ಚಿತ್ರಗುಪ್ತ ಎಂಬ ಹೆಸರನ್ನು ನೀಡುವೆ." ಆತ ನಂತರ ಯಮಪುರಿಯ ಜವಾಬ್ದಾರಿಯನ್ನು ವಹಿಸಿಕೊಂಡ. ಧರ್ಮಶರ್ಮ ತನ್ನ ಮಗಳು ಇರಾವತಿಯನ್ನು ಚಿತ್ರಗುಪ್ತನಿಗೆ ಮದುವೆ ಮಾಡಿಕೊಟ್ಟ ಮತ್ತು ಸೂರ್ಯನ (ಆಕಾಶಕಾಯ ಸೂರ್ಯ) ಮಗನಾದ ಮನುಜಿ ತನ್ನ ಮಗಳಾದ ಸುದಾಖಿನಾಳನ್ನು ಅವನಿಗೆ ಮದುವೆಮಾಡಿಕೊಟ್ಟ." ಚಿತ್ರಗುಪ್ತನು ತನ್ನ ಮೊದಲಿನ ಹೆಂಡತಿಯಿಂದ ಎಂಟು ಗಂಡುಮಕ್ಕಳನ್ನು ಹಾಗೂ ಎರಡನೇ ಹೆಂಡತಿಯಿಂದ ನಾಲ್ವರು ಗಂಡುಮಕ್ಕಳನ್ನು ಪಡೆದ. ಈ ಹನ್ನೆರಡು ಮಕ್ಕಳು ಚಿತ್ರಗುಪ್ತವಂಶಿ ಕಾಯಸ್ಥರ ಹನ್ನೆರಡು ಉಪ-ವಿಭಾಗಗಳ ಮೂಲಜನಕರಾಗಿ ಮಾರ್ಪಟ್ಟರು. ಅವರೆಂದರೆ: ಮಾಥುರ್, ಗೌರ್, ನಿಗಮ್, ಅಷ್ಠಾನ, ಕುಲಶ್ರೇಥ, ಸೂರ್ಯಧ್ವಜ, ಬಲ್ಮೀಕ ಭಟ್ನಾಗರ್, ಸ್ರೀವಾಸ್ತವ, ಅಂಬಷ್ಠಾ, ಸಕ್ಸೇನಾ ಮತ್ತು ಕರಣ.
- ಪದ್ಮ ಪುರಾಣ ದ ಉತ್ತರ ಕಾಂಡದಲ್ಲಿ ತಿಳಿಸಿರುವ ಪ್ರಕಾರ, ಶ್ರೀ ಚಿತ್ರಗುಪ್ತನು ಇಬ್ಬರು ಹೆಂಡತಿಯರಿಂದ ಹನ್ನೆರಡು ಗಂಡುಮಕ್ಕಳನ್ನು ಪಡೆದಿದ್ದ. ಅವರೆಲ್ಲರಿಗೂ ಜನಿವಾರ ಧಾರಣೆಯನ್ನು ಮಾಡಲಾಯಿತು ಮತ್ತು ನಾಗಕನ್ಯೆಯರೊಂದಿಗೆ ಅವರ ಮದುವೆ ಮಾಡಲಾಯಿತು. ಅವರು ಕಾಯಸ್ಥರ ಹನ್ನೆರಡು ಉಪ-ವಿಭಾಗಗಳ ಪೂರ್ವಜರಾಗಿದ್ದರು.
- ಕೊಂಚಮಟ್ಟಿಗಿನ ವ್ಯತ್ಯಾಸದೊಂದಿಗೆ ಇದೇ ಪುರಾಣಕಥೆಯನ್ನು ಬಹುಪಾಲು ಪುರಾಣಗಳಲ್ಲಿ ನೀಡಲಾಗಿದೆ.
- ಸದರಿ ಪುರಾಣಕಥೆಯನ್ನು ಹೇಳಿದ ನಂತರ ಪದ್ಮ ಪುರಾಣ ವು ಹೀಗೆ ಹೇಳುತ್ತದೆ: "ಶ್ರೀ ಚಿತ್ರಗುಪ್ತನಿಗೆ ಧರ್ಮರಾಜನ ಸಮೀಪದಲ್ಲಿ ಸ್ಥಾನಕಲ್ಪಿಸಿಕೊಡಲಾಯಿತು ಮತ್ತು ಎಲ್ಲಾ ಚೇತನಾತ್ಮಕ ಜೀವಿಗಳ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ದಾಖಲಿಸಿಟ್ಟುಕೊಳ್ಳುವ ಹೊಣೆಹೊರಿಸಲಾಯಿತು. ಅವನಿಗೆ ಅಲೌಕಿಕ ಜ್ಞಾನವನ್ನು ಪ್ರದಾನಮಾಡಲಾಯಿತು ಮತ್ತು ದೇವರುಗಳು ಹಾಗೂ ಅಗ್ನಿಗೆ ನೀಡಲಾಗುತ್ತಿದ್ದ ಆಹುತಿಗಳ ಭಾಗವನ್ನು ಸ್ವೀಕರಿಸುವ ಅರ್ಹತೆಯನ್ನು ಆತ ಪಡೆದುಕೊಂಡ. ಈ ಕಾರಣಕ್ಕಾಗಿಯೇ ಎರಡು ಬಾರಿ-ಹುಟ್ಟಿದವರು, ಅಂದರೆ, ದ್ವಿಜರು ತಮ್ಮ ಆಹಾರದಿಂದ ಅವನಿಗೆ ಎರಡು ಬಾರಿ ನೈವೇದ್ಯ ಅಥವಾ ಬಲಿಯನ್ನು ಯಾವಾಗಲೂ ಸಮರ್ಪಿಸುತ್ತಾರೆ.
ಬ್ರಹ್ಮದೇವನ ಕಾಯದಿಂದ ಅವನು ಉದ್ಭವಿಸಿದ್ದರಿಂದಾಗಿ, ಅವನನ್ನು ಭೂಮಿಯ ಮುಖದ ಮೇಲಿನ ಹಲವಾರು ಗೋತ್ರಗಳ ಕಾಯಸ್ಥನೆಂದು ಕರೆಯಲಾಯಿತು."
- ಸೃಷ್ಟಿ ಕಾಂಡ ದಲ್ಲಿನ ಇದೇ ಪುರಾಣವು ಹೇಳುವ ಪ್ರಕಾರ, ಕಾಯಸ್ಥರ ಯಜ್ಞದ ಧಾರ್ಮಿಕ ವಿಧಿಗಳು ಹಾಗೂ ಅಧ್ಯಯನವು, ವೇದಗಳು ಹಾಗೂ ಅದಕ್ಕೆ ಪೂರಕವಾಗಿರುವ ಧರ್ಮಗ್ರಂಥಗಳ ಮತ್ತು ಬರಹಗಾರಿಕೆಗೆ ಸಂಬಂಧಿಸಿದ ಅವರ ವೃತ್ತಿಯದ್ದಾಗಿರಬೇಕು.
- ಭವಿಷ್ಯ ಪುರಾಣ ವು ಹೇಳುವ ಪ್ರಕಾರ, ಸೃಷ್ಟಿಕರ್ತನಾದ ದೇವರು ಚಿತ್ರಗುಪ್ತನ ಹೆಸರು ಮತ್ತು ಕರ್ತವ್ಯಗಳನ್ನು ಈ ಕೆಳಕಂಡಂತೆ ನೀಡಿದ:
ನೀನು ನನ್ನ ದೇಹದಿಂದ ಉದ್ಭವಿಸಿರುವೆಯಾದ್ದರಿಂದ ನಿನ್ನನ್ನು ಕಾಯಸ್ಥ ಎಂದು ಕರೆಯಲಾಗುತ್ತದೆ ಮತ್ತು ಪ್ರಪಂಚದಲ್ಲಿ ನೀನು ಚಿತ್ರಗುಪ್ತ ಎಂಬ ಹೆಸರಿನಿಂದ ಪ್ರಸಿದ್ಧನಾಗುತ್ತೀಯ. ಓ ನನ್ನ ಮಗನೇ, ಮನುಷ್ಯರ ಗುಣ ಮತ್ತು ಅವಗುಣಗಳನ್ನು ನಿಷ್ಕರ್ಷಿಸುವ ಉದ್ದೇಶಕ್ಕಾಗಿರುವ ನ್ಯಾಯದ ದೇವರ ಪ್ರದೇಶದಲ್ಲಿ ನಿನ್ನ ಆವಾಸಸ್ಥಾನವು ಯಾವಾಗಲೂ ಇರಲಿ.
- ವಿಜ್ಞಾನ ತಂತ್ರ ವೂ ಇದೇ ವಿಷಯವನ್ನು ಹೇಳುತ್ತದೆ.
- ಬೃಹತ್ ಬ್ರಹ್ಮ ಕಾಂಡ ದ ಅನುಸಾರ, ಶ್ರೀ ಚಿತ್ರಗುಪ್ತನಿಗೆ ಬ್ರಹ್ಮದೇವನು ಇದೇ ರೀತಿಯಲ್ಲಿ ಕಾರ್ಯವನ್ನು ವಿಧಿಸುತ್ತಾನೆ. ಬ್ರಹ್ಮದೇವನ ದೇಹದಿಂದ (ಕಾಯ) ಅವನು ಉದ್ಭವಿಸಿದ್ದರಿಂದಾಗಿ ಅವನನ್ನು ಕಾಯಸ್ಥ ಎಂದು ಹೆಸರಿಸಲಾಯಿತು. ಎಲ್ಲಾ ಸಂಸ್ಕಾರಗಳನ್ನೂ ಕೈಗೊಳ್ಳುವಂತೆ ಮತ್ತು ಬರಹಗಾರಿಕೆಯನ್ನು ತನ್ನ ವೃತ್ತಿಯನ್ನಾಗಿ ಹೊಂದುವಂತೆ ಅವನಿಗೆ ನಿರ್ದೇಶನವನ್ನು ನೀಡಲಾಯಿತು.
- ಯಮಪುರಿಯಲ್ಲಿನ ಅತ್ಯಂತ ವೈಭವದ ಸಿಂಹಾಸನವನ್ನು ಅಲಂಕರಿಸಿರುವ ಶ್ರೀ ಚಿತ್ರಗುಪ್ತನು ತನ್ನ ಆಸ್ಥಾನದ ನಡೆವಳಿಗಳನ್ನು ನಡೆಸುತ್ತಿರುವುದನ್ನು ಮತ್ತು ಮನುಷ್ಯರ ಕರ್ಮಗಳ ಅನುಸಾರ ಅವರಿಗೆ ನ್ಯಾಯವನ್ನು ಒದಗಿಸುತ್ತಿರುವುದನ್ನು ಹಾಗೂ ಅವರ ದಾಖಲೆಯನ್ನು ನಿರ್ವಹಿಸುತ್ತಿರುವುದನ್ನು ಗರುಡ ಪುರಾಣ ವು ಈ ಕೆಳಕಂಡ ಪದಗಳಲ್ಲಿ ವಿವರಿಸುತ್ತದೆ:
(ಮನುಷ್ಯರ ದೇಹಗಳಲ್ಲಿ ಗುಟ್ಟಾಗಿರಿಸಲ್ಪಟ್ಟಿರುವ ಎಲ್ಲಾ ಪಾಪಗಳು ಮತ್ತು ಸದ್ಗುಣಗಳನ್ನು ಅಲ್ಲಿ ಧರ್ಮರಾಜ, ಚಿತ್ರಗುಪ್ತ, ಶ್ರವಣ ಮತ್ತು ಇತರರು ನೋಡುತ್ತಾರೆ).
- ಇದೇ ರೀತಿಯಲ್ಲಿ, ವೇದದ ಆಪಸ್ತಂಭ ಶಾಖೆ ಯು ಶಬ್ದ-ಕಲ್ಪದ್ರುಮದ ೨ನೇ ಭಾಗದ, ೨೨೮ನೇ ಪುಟದ ೨೦ನೇ ಶಬ್ದದಲ್ಲಿ ಉಲ್ಲೇಖಿಸಿರುವ,
ಕ್ಷತ್ರಿಯ ಎಂಬ ಪದದಡಿಯಲ್ಲಿ, ಕಾಯಸ್ಥರು ಕ್ಷತ್ರಿಯರು ಎಂದು ಹೇಳುತ್ತದೆ. ಚಿತ್ರಗುಪ್ತ ಸ್ವರ್ಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಮತ್ತು ಅವನ ಕುಟುಂಬದ ಬೆಳಕಾಗಿದ್ದ ಅವನ ಮಗ ಚಿತ್ರರಥನು ಸಮರ್ಥನಾಗಿದ್ದ ಮತ್ತು ಹೆಸರುವಾಸಿಯಾದ ಸಾಹಸಕಾರ್ಯಗಳನ್ನು ಮಾಡಿದವನಾಗಿದ್ದ. ಆತ ಅಲಹಾಬಾದ್ ಸಮೀಪದಲ್ಲಿದ್ದ ಚಿತ್ರಕೂಟದ ರಾಜನಾಗಿ ಸುದೀರ್ಘ ಕಾಲದವರೆಗೆ ಭೂಮಿಯ ಮೇಲೆ ರಾಜ್ಯಭಾರ ನಡೆಸಿದ. ಶಬ್ದ-ಕಲ್ಪದ್ರುಮದಲ್ಲಿ ’ಕ್ಷತ್ರಿಯ’ ಎಂಬ ಪದದಡಿಯಲ್ಲಿ ಮೇರು ತಂತ್ರ ವು ನಮೂದಿಸಿರುವ ವಿವರಣೆಯೂ ಇದೇ ಅಭಿಪ್ರಾಯವನ್ನು ಬೆಂಬಲಿಸುತ್ತದೆ.
- ಮಹಾಭಾರತವು (ಅನುಶಾಸನ ಪರ್ವ, ಅಧ್ಯಾಯ ೧೩೦) ಶ್ರೀ ಚಿತ್ರಗುಪ್ತನ ಬೋಧನೆಯನ್ನು ಪಠಿಸುತ್ತದೆ. ಮನುಷ್ಯರು ಮಾಡಬೇಕಾದ ಪುಣ್ಯಕರ ಮತ್ತು ಧರ್ಮಾರ್ಥದ ಕಾರ್ಯಗಳು ಮತ್ತು ಯಜ್ಞವನ್ನು ನೆರವೇರಿಸುವ ಕುರಿತು ಅದು ಹೇಳುತ್ತಾ, ಮನುಷ್ಯರು ತಾವು ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಗಾಗಿ ಉತ್ತಮ ಪ್ರತಿಫಲವನ್ನು ಅಥವಾ ಶಿಕ್ಷೆಯನ್ನು ಪಡೆಯುತ್ತಾರೆ ಎಂದು ತಿಳಿಸುತ್ತದೆ.
- ಸ್ಮೃತಿಗಳ ಕಡೆಗೆ ತಿರುಗಿದಾಗ, ವಿಷ್ಣುವು VIIನೇ ಅಧ್ಯಾಯದ ೩ನೇ ಶ್ಲೋಕದಲ್ಲಿ ಹೀಗೆ ಹೇಳುತ್ತಾನೆ: ರಾಜನಿಂದ ಪ್ರಮಾಣೀಕರಿಸಲ್ಪಟ್ಟ ಒಂದು ದಸ್ತಾವೇಜು ಪತ್ರವು ಓರ್ವ ಕಾಯಸ್ಥನಿಂದ ಬರೆಯಲ್ಪಟ್ಟ ಅಥವಾ ಸಿದ್ಧಪಡಿಸಲ್ಪಟ್ಟ ಪತ್ರವಾಗಿರುತ್ತದೆ ಮತ್ತು ಅದಕ್ಕೆ ವಿಭಾಗದ ಮುಖ್ಯಸ್ಥನ ಬೆರಳ ಮುದ್ರೆಗಳು ಒತ್ತಲ್ಪಟ್ಟಿರುತ್ತವೆ.
- ವಿರಿಹತ ಪರಾಶರನಿಂದ Xನೇ ಅಧ್ಯಾಯದ, ಶ್ಲೋಕ ೧೦ರಲ್ಲಿ ಹೇಳಲ್ಪಟ್ಟಿರುವ ಮಾತುಗಳ ಪ್ರಕಾರ, ಕಾಯಸ್ಥರು ಬರಹಗಾರಿಕೆಯಲ್ಲಿ ಪರಿಣಿತರಾಗಿರುವುದರಿಂದ ಅವರನ್ನು ಬರಹಗಾರರನ್ನಾಗಿ ನೇಮಿಸಿಕೊಳ್ಳಬೇಕು.
- ಮತ್ತೊಮ್ಮೆ ಅಧ್ಯಾಯ Iರ, ೨೩೫ನೇ ಶ್ಲೋಕದಲ್ಲಿ ಅವನು ಹೀಗೆ ಹೇಳುತ್ತಾನೆ:
ನ್ಯಾಯಾಲಯದ ದಂಡಾಧಿಕಾರಿಗಳು ಮತ್ತು ನ್ಯಾಯಾಧೀಶರಾಗಿರುವ ದಂಡ-ಧೃತರು ಧರ್ಮಜ್ಞರಾಗಿರಬೇಕು, ಕಾನೂನು ಮತ್ತು ಉತ್ತಮ ಆಡಳಿತದಲ್ಲಿ ಪರಿಣತಿಯನ್ನು ಪಡೆದಿರುವ ವ್ಯಕ್ತಿಗಳಾಗಿರಬೇಕು, ಅವರು ಬರಹಗಾರಿಕೆಯ ಕಲೆಯಲ್ಲಿ ಪರಿಣತಿ ಪಡೆದಿರುವ ಕಾಯಸ್ಥರಾಗಿರಬೇಕು.
- ವ್ಯಾಸರು ಹೇಳುವ ಪ್ರಕಾರ, ಯಾಜ್ಞವಲ್ಕ್ಯದ IIನೇ ಅಧ್ಯಾಯದ ೨ನೇ ಶ್ಲೋಕದ ಮೇಲೆ ವ್ಯಾಖ್ಯಾನಮಾಡುವ ಸಮಯದಲ್ಲಿ ಮಿತಾಕ್ಷರದಿಂದ ವಿವರಿಸಲ್ಪಟ್ಟಿರುವಂತೆ, ಬರಹಗಾರರು ಮತ್ತು ಲೆಕ್ಕಿಗರು ಮೀಮಾಂಸೆ (ಶೃತಿಗಳು) ಮತ್ತು ವೇದಗಳಲ್ಲಿ (ಅಧ್ಯಯನ) ನುರಿತವರಾಗಿರಬೇಕು. IIನೇ ಅಧ್ಯಾಯದ ೨ನೇ ಶ್ಲೋಕವು ಹೀಗೆ ಹೇಳುತ್ತದೆ: ರಾಜನ ಮಂತ್ರಾಲೋಚನ ಸಭೆಯ ಸದಸ್ಯರು ಮೀಮಾಂಸೆ ಮತ್ತು ವೇದಗಳ ಪವಿತ್ರ ಪುಸ್ತಕಗಳಲ್ಲಿ ನುರಿತವರಾಗಿರಬೇಕು, ಕಾನೂನಿನಲ್ಲಿ ಪರಿಣತಿಯನ್ನು ಪಡೆದಿರಬೇಕು, ಸತ್ಯವಂತರಾಗಿರಬೇಕು ಮತ್ತು ಪಕ್ಷಾತೀತನಾರಾಗಿರಬೇಕು.
- ಅದೇ ರೀತಿಯಲ್ಲಿ, ಶುಕ್ರಾಯಿತಿಯು XXXIIನೇ ಅಧ್ಯಾಯದ ೪೨೦ನೇ ಶ್ಲೋಕದಲ್ಲಿ, ಕಾಯಸ್ಥರನ್ನು ಲೇಖಕರೆಂದು ವರ್ಣಿಸುತ್ತದೆ, ಮತ್ತು IIನೇ ಅಧ್ಯಾಯದ, ೧೭೮ನೇ ಸಾಲಿನಲ್ಲಿ, ಲೆಕ್ಕಿಗರು ಮತ್ತು ಲೇಖಕರು ವೇದಗಳು, ಸ್ಮೃತಿಗಳು ಮತ್ತು ಪುರಾಣಗಳನ್ನು ಅರಿತಿದ್ದರು ಎಂದು ಹೇಳುತ್ತದೆ.
- ರಾಜನ ಫರ್ಮಾನುಗಳನ್ನು ಹೇಗೆ ಬರೆಯಬೇಕು, ಮೊಹರುಮಾಡಬೇಕು ಮತ್ತು ಪ್ರಸಾರಮಾಡಬೇಕು ಎಂಬುದನ್ನು ೩೧೭ರಿಂದ ೩೨೦ರವರೆಗಿನ ಶ್ಲೋಕಗಳಲ್ಲಿ ಯಾಜ್ಞವಲ್ಕ್ಯವು ವಿವರಿಸುತ್ತದೆ. ವ್ಯಾಸರಿಂದ ಬರೆಯಲ್ಪಟ್ಟಿರುವ ಈ ಶ್ಲೋಕಗಳ ಮೇಲಿನ ತನ್ನ ವ್ಯಾಖ್ಯಾನದಲ್ಲಿ ಅಪರಾರ್ಕನು, ಯುದ್ಧ ಮತ್ತು ಶಾಂತಿಯ ಮಂತ್ರಿಗಳಾದ (ಸಂಧಿ ವಿಗ್ರಹಕಾರಿ) ಲೇಖಕರಿಂದ ಈ ಫರ್ಮಾನುಗಳು ಬರೆಯಲ್ಪಡಬೇಕು ಎಂದು ತೋರಿಸುತ್ತಾನೆ, ಮತ್ತು ಇವುಗಳನ್ನು ಕುಲೀನವರ್ಗದವರು ಮತ್ತು ಅಧಿಕಾರಿಗಳಿಗೆ ಪ್ರಸಾರಮಾಡಬೇಕು ಎಂದು ಅವನು ತಿಳಿಸಿದ್ದು, ಅವರ ಪೈಕಿ ಕಾಯಸ್ಥರು ನಮೂದಿಸಲ್ಪಟ್ಟಿದ್ದಾರೆ.
- ಅದೇ ರೀತಿಯಲ್ಲಿ, ಈ ಶ್ಲೋಕಗಳ ಮೇಲೆ ತನ್ನ ಮಿತಾಕ್ಷರದಲ್ಲಿ ವ್ಯಾಖ್ಯಾನಮಾಡುವಾಗ ವಿಜ್ಞಾನೇಶ್ವರನು ಹೀಗೆ ಹೇಳುತ್ತಾನೆ:
ಇದು ತನ್ನ ಅಧಿಕಾರಿಯಿಂದ ದಾಖಲಿಸಲ್ಪಡುವಂತೆ ಅವನು (ರಾಜ) ಕ್ರಮತೆಗೆದುಕೊಳ್ಳಬೇಕು; ಆ ಅಧಿಕಾರಿಯು ಯುದ್ಧ ಮತ್ತು ಶಾಂತಿಯ ಹೊಣೆ ಹೊತ್ತವನಾಗಿರಬೇಕೇ (ಅಂದರೆ ಓರ್ವ ಕಾಯಸ್ಥನಾಗಿರಬೇಕು) ಹೊರತು ಮತ್ತಾರೂ ಆಗಿರಬಾರದು.
- ಶೃತಿಯೊಂದು ಹೀಗೆ ಹೇಳುತ್ತದೆ: ಓರ್ವ ಸಂಧಿ ವಿಗ್ರಹಕಾರಿ ಅಥವಾ ಯುದ್ಧ ಮತ್ತು ಶಾಂತಿಯ ಹೊಣೆಹೊತ್ತ ಅಧಿಕಾರಿಯಾಗಿರುವ ಅವನ ಅಧಿಕಾರಿಯು ಇದರ ಬರಹಗಾರ (ಲೇಖಕ) ಆಗಿರಬೇಕು.
- ಯಾಜ್ಞವಲ್ಕ್ಯವು Iನೇ ಅಧ್ಯಾಯದ ೩೩೫-೩೩೬ನೇ ಶ್ಲೋಕಗಳಲ್ಲಿ "ಕಾಯಸ್ಥ" ಎಂಬ ಪದವನ್ನು ಬಳಸುತ್ತದೆ. ಮಿತಾಕ್ಷರವು ಇದರ ಮೇಲೆ ವ್ಯಾಖ್ಯಾನ ಮಾಡುತ್ತಾ, ಕಾಯಸ್ಥರು ಲೆಕ್ಕಿಗರು ಮತ್ತು ಬರಹಗಾರರಾಗಿದ್ದಾರೆ ಎಂದು ಹೇಳುತ್ತದೆ. "ಕಾಯಸ್ಥರು ಎಂಬ ಪದವನ್ನು ಲೆಕ್ಕಿಗರು ಮತ್ತು ಬರಹಗಾರರೊಂದಿಗೆ ಸಮಾನಾರ್ಥಕ ಪದವಾಗಿ ಅವನು ಬಳಸುತ್ತಾನೆ. ಅದೇ ರೀತಿಯಲ್ಲಿ, ಕಾಯಸ್ಥರು ಕಂದಾಯ-ಸಂಗ್ರಹಕಾರರಾಗಿದ್ದರು (ಕರ−ಅಧಿ−ಕೃತ) ಎಂದು ಅಪರಾರ್ಕನು ಹೇಳುತ್ತಾನೆ.
- ನ್ಯಾಯಸ್ಥಾನದ ಕಾರ್ಯಕಲಾಪವೊಂದರ ಹತ್ತು ಭಾಗಗಳ ಪೈಕಿ ಲೆಕ್ಕಿಗರು ಮತ್ತು ಬರಹಗಾರರು ಒಂದು ಭಾಗವಾಗಿರುತ್ತಿದ್ದರು.
- ಪ್ರಸಾರ ಮಾಧವ, ವ್ಯವಹಾರ ಕಾಂಡದಲ್ಲಿ ಉಲ್ಲೇಖಿಸಲಾಗಿರುವಂತೆ ಬೃಹಸ್ಪತಿಯೂ ಇದನ್ನೇ ಹೇಳುತ್ತಾನೆ.
- ಸ್ಮೃತಿಗಳ ಅನುಸಾರ, ಸಾಮ್ರಾಜ್ಯದ ಅಧಿಕಾರಿಗಳು ಅಂದರೆ ಯುದ್ಧ ಮತ್ತು ಶಾಂತಿಯ ಹೊಣೆಹೊತ್ತ ಮಂತ್ರಿಗಳು, ನಾಯಕಸಾನಿಯರು ಮತ್ತು ಮಂತ್ರಾಲೋಚನ ಸಭೆಯ ಸದಸ್ಯರು, ಹಳ್ಳಿಗಳ ಪ್ರಾಂತಾಧಿಕಾರಿಗಳು ಮತ್ತು ಮುಖ್ಯಸ್ಥರು ಶಾಸ್ತ್ರಗಳಲ್ಲಿ ನುರಿತವರಾಗಿರಬೇಕು. ಅವರು ಪರಾಕ್ರಮಿಗಳಾಗಿದ್ದು, ಕಲೀನ ಮನೆತನದಲ್ಲಿ ಹುಟ್ಟಿರಬೇಕು, ಪರಿಶುದ್ಧರಾಗಿರಬೇಕು, ಬುದ್ಧಿವಂತರಾಗಿರಬೇಕು, ಹೇರಳವಾದ ಸಂಪತ್ತನ್ನು ಹೊಂದಿರಬೇಕು ಮತ್ತು ಪ್ರಮಾಣಿತ ಸದ್ಗುಣ ಹಾಗೂ ಬರವಣಿಗೆಯ ಗ್ರಹಣಶಕ್ತಿಯನ್ನು ಉಳ್ಳವರಾಗಿರಬೇಕು: ಮನು, ಅಧ್ಯಾಯ VII, ಶ್ಲೋಕಗಳು ೫೪ರಿಂದ ೧೨೧ರವರೆಗೆ ಯಾಜ್ಞವಲ್ಕ್ಯ, ಅಧ್ಯಾಯ I, ಶ್ಲೋಕ ೩೧೨.
ವಿಧಗಳು
ಬದಲಾಯಿಸಿಕಾಯಸ್ಥರು (ಹುಟ್ಟಿನಿಂದ) ಮೂರು ಬಗೆಗಳಲ್ಲಿದ್ದಾರೆ ಮತ್ತು ಒಟ್ಟಾರೆಯಾಗಿ ನಾಲ್ಕು ಬಗೆಗಳ ಕಾಯಸ್ಥರು ಅಸ್ಥಿತ್ವದಲ್ಲಿದ್ದಾರೆ:
೧. ಚಿತ್ರಗುಪ್ತ ಕಾಯಸ್ಥರು (ಬ್ರಹ್ಮ ಕಾಯಸ್ಥ ಅಥವಾ ಕಾಯಸ್ಥ ಬ್ರಾಹ್ಮಣ).[೮] ಜಾತಿ-ಸ್ಥಾನಮಾನ:ಬ್ರಾಹ್ಮಣ; ಬಹುತೇಕ ಪ್ರಾಚೀನ ವೈದಿಕ ಸಾಹಿತ್ಯದಲ್ಲಿ 'ಕಾಯಸ್ಥ' ಎಂಬ ಪದವು ಸಾಮಾನ್ಯವಾಗಿ ಈ ಒಳಪಂಗಡಕ್ಕೆ ಉಲ್ಲೇಖಿಸುತ್ತದೆ. ಅನ್ಯಥಾ ಉಲ್ಲೇಖಿಸದ ಹೊರತು ಈ ಲೇಖನದಲ್ಲಿ ಇನ್ನು ಮುಂದೆ 'ಕಾಯಸ್ಥ' ಎಂಬುದು ಚಿತ್ರಗುಪ್ತ ಕಾಯಸ್ಥರಿಗೆ ಸಂಬಂಧಪಟ್ಟಿರುತ್ತದೆ.[೨][೩]
- vedah.net ವತಿಯಿಂದ ಬರೆಯಲ್ಪಟ್ಟಿರುವ BRAHMINS ಎಂಬ ಲೇಖನದಲ್ಲಿ ಬ್ರಾಹ್ಮಣರೆಂದರೆ ಯಾರು ಮತ್ತು ಬ್ರಾಹ್ಮಣರ ವಿವಿಧ ಒಳ-ಗುಂಪುಗಳು ಯಾವುವು ಎಂಬುದರ ವಿವರಗಳನ್ನು ನೀಡಲಾಗಿದೆ. ಕ್ರಮ ಸಂಖ್ಯೆ ೧೫ರಲ್ಲಿ (ವರ್ಣಮಾಲೆಯ ಅನುಕ್ರಮದ ಕಾರಣದಿಂದಾಗಿ) ಕಾಯಸ್ಥ ಬ್ರಾಹ್ಮಣರ ಕುರಿತು ಉಲ್ಲೇಖಿಸಲಾಗಿದೆ.
- ದಿ ಬ್ರಾಹ್ಮಿನ್ಸ್: ಎ ಲಿಸ್ಟ್ ಆಫ್ ಬ್ರಾಹ್ಮಿನ್ ಕಮ್ಯುನಿಟೀಸ್ ಎಂಬುದು Kamat.com ವತಿಯಿಂದ ತಯಾರಿಸಲ್ಪಟ್ಟಿರುವ, ಭಾರತದಲ್ಲಿನ ಎಲ್ಲಾ ಬ್ರಾಹ್ಮಣ ಸಮುದಾಯಗಳ ಒಂದು ವ್ಯಾಪಕವಾದ ಪಟ್ಟಿಯಾಗಿದೆ. ಇಲ್ಲಿ (ವರ್ಣಮಾಲೆಯ ಅನುಕ್ರಮದಲ್ಲಿ) ಕಾಯಸ್ಥ ಬ್ರಾಹ್ಮಣರು ಉಲ್ಲೇಖಿಸಲ್ಪಟ್ಟಿದ್ದಾರೆ.
- Hindunet.org ನಲ್ಲಿರುವ ಸಂಸ್ಕೃತ ನಿಘಂಟು ಕಾಯಸ್ಥ ರನ್ನು ಈ ಕೆಳಕಂಡಂತೆ ವ್ಯಾಖ್ಯಾನಿಸುತ್ತದೆ:
-
-
- ಕಾ_ಯಸ್ಥ, ಕಾ_ಯತ ಎಂದರೆ ಬರಹಗಾರ-ಜಾತಿಗೆ ಸೇರಿರುವ ಓರ್ವ ಮನುಷ್ಯ; ಬರಹಗಾರಿಕೆಯೇ ಒಂದು ಉದ್ಯೋಗವಾಗಿರುವ ಬ್ರಾಹ್ಮಣರ ಒಂದು ಬಣ (ಕಾ.)(ಕಾ.ಲೆಕ್ಸ್.)[೯]
-
೨. ಚಂದ್ರಸೇನೀಯ ಕಾಯಸ್ಥ ಪ್ರಭು (ಹೈಯಾಯ ಕುಟುಂಬದಿಂದ ಬಂದಿರುವ- ರಾಜನ್ಯ ಕ್ಷತ್ರಿಯ ಕಾಯಸ್ಥರು) ಜಾತಿ-ಸ್ಥಾನಮಾನ:ಕ್ಷತ್ರಿಯ,
೩. ಸಮ್ಮಿಶ್ರ ಸಂಬಂಧದ ಕಾಯಸ್ಥರು. ಜಾತಿ-ಸ್ಥಾನಮಾನ:ಕ್ಷತ್ರಿಯ ಅಥವಾ ಹಿಂದೂ ಶಾಸ್ತ್ರಗಳ ಕಾನೂನಿನ ಅನುಸಾರವಾಗಿರುವ ಇತರರು ಮತ್ತು
೪. ಹೆಸರು ಅಥವಾ ವೃತ್ತಿಯ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಕಾಯಸ್ಥರು (ಹುಟ್ಟಿನಿಂದಲ್ಲ). ಜಾತಿ-ಸ್ಥಾನಮಾನ: ಆ ಗುಂಪಿನ ಇತಿಹಾಸದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಪ್ರದೇಶಗಳೊಂದಿಗೆ ಇದು ಬದಲಾಗಬಹುದು
ಮೂಲ
ಬದಲಾಯಿಸಿಕಾಯಸ್ಥರು ತಮ್ಮ ವಂಶಾನ್ವೇಷಣೆಯನ್ನು ಪ್ರಭು ಚಿತ್ರಗುಪ್ತನಿಂದ ಜಾಡುಹಿಡಿದು ಪತ್ತೆಮಾಡುತ್ತಾರೆ. ಬ್ರಹ್ಮದೇವನು ನಾಲ್ಕು ವರ್ಣಗಳನ್ನು (ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಮತ್ತು ಶೂದ್ರರು) ಸೃಷ್ಟಿಸಿದ ನಂತರ, ಯಮನು (ಧರ್ಮರಾಜ) ಬ್ರಹ್ಮದೇವನ ಮುಂದೆ ಕೋರಿಕೆಯೊಂದನ್ನು ಸಲ್ಲಿಸಿ, ಮನುಷ್ಯರ ಒಳ್ಳೆಯ ಮತ್ತು ಕೆಟ್ಟ ಕೆಲಸಗಳೆರಡನ್ನೂ ದಾಖಲಿಸುವಲ್ಲಿ ಮತ್ತು ನ್ಯಾಯವನ್ನು ಅನುಷ್ಠಾನಕ್ಕೆ ತರುವಲ್ಲಿ ತನಗೆ ನೆರವಾಗಬೇಕೆಂದು ಕೇಳಿಕೊಂಡ.
ಧರ್ಮಗ್ರಂಥಗಳ ಅನುಸಾರ, ಬ್ರಹ್ಮದೇವನು ೧೧,೦೦೦ ವರ್ಷಗಳವರೆಗೆ ಧ್ಯಾನಸ್ಥನಾದ ಮತ್ತು ತನ್ನ ಕಣ್ಣುಗಳನ್ನು ಅವನು ತೆರೆದಾಗ, ಒಂದು ಲೇಖನಿ ಹಾಗೂ ಶಾಯಿ-ಕುಡಿಕೆಯನ್ನು ಹಿಡಿದುಕೊಂಡಿರುವ, ಮತ್ತು ತನ್ನ ಸೊಂಟಕ್ಕೆ ಸುತ್ತುವರಿದ ಒಂದು ಕತ್ತಿಯನ್ನು ಹೊಂದಿರುವ ವ್ಯಕ್ತಿಯನ್ನು ನೋಡಿದ. ಅವನನ್ನು ಕುರಿತು ಬ್ರಹ್ಮದೇವನು ಹೀಗೆಂದ: "ನೀನು ನನ್ನ ದೇಹದಿಂದ (ಕಾಯ) ಸೃಷ್ಟಿಸಲ್ಪಟ್ಟಿರುವೆ; ಆದ್ದರಿಂದ ನಿನ್ನ ವಂಶಸ್ಥರು ಕಾಯಸ್ಥರೆಂದೇ ಹೆಸರನ್ನು ಪಡೆಯಲಿ. ನೀನು ನನ್ನ ಮನಸ್ಸಿನಲ್ಲಿ (ಚಿತ್ರ) ಮತ್ತು ರಹಸ್ಯವಾಗಿ (ಗುಪ್ತ) ಸೃಷ್ಟಿಸಲ್ಪಟ್ಟಿರುವೆ; ಆದ್ದರಿಂದ ಚಿತ್ರಗುಪ್ತ ಎಂಬ ಹೆಸರಿನಿಂದಲೂ ನೀನು ಕರೆಯಲ್ಪಡುವಂತಾಗಲಿ .ಬ್ರಹ್ಮನು ನಂತರದಲ್ಲಿ ಅವನಿಗೆ ನ್ಯಾಯವನ್ನು ಒದಗಿಸುವ ಮತ್ತು ಧರ್ಮವನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ನೀಡುವ ಅಧಿಕಾರವನ್ನು ವಹಿಸಿದ. ಈ ರೀತಿಯಾಗಿ, ಕಾಯಸ್ಥರಿಗೆ ಬ್ರಾಹ್ಮಣ/ಕ್ಷತ್ರಿಯ ಎಂಬ ಒಂದು ಇಬ್ಬಗೆಯ ಜಾತಿಯನ್ನು ಪ್ರದಾನ ಮಾಡಲಾಯಿತು.
ಚಿತ್ರಗುಪ್ತನ ಪುರಾಣಕಥೆಗಳಲ್ಲಷ್ಟೇ ಅಲ್ಲದೇ ವೇದಗಳಲ್ಲಿಯೂ ಸಹ ಅವನು ಮಹೋನ್ನತ ರಾಜನೆಂದೇ ಉಲ್ಲೇಖಿಸಲ್ಪಟ್ಟಿದ್ದರೆ, ಉಳಿದವರು "ರಾಜಕರು" ಅಥವಾ ಸಣ್ಣ ರಾಜರೆಂದು ಕರೆಸಿಕೊಂಡಿದ್ದಾರೆ.
चित्र इद राजा राजका इदन्यके यके सरस्वतीमनु ।
पर्जन्य इव ततनद धि वर्ष्ट्या सहस्रमयुता ददत ॥ [೧೦]
ಗರುಡ ಪುರಾಣದಲ್ಲಿ ಚಿತ್ರಗುಪ್ತನನ್ನು ಹಸ್ತಾಕ್ಷರವನ್ನು ನೀಡುವ ಮೊದಲ ಮನುಷ್ಯ ಎಂದೇ ಸಂಬೋಧಿಸಲಾಗುತ್ತದೆ.
"ಚಿತ್ರಗುಪ್ತ ನಮಸ್ತುಭ್ಯಂ ವೇದಾಕ್ಷರದಾತ್ರೆ" (ಅಕ್ಷರಗಳನ್ನು ನೀಡುವ ಚಿತ್ರಗುಪ್ತನಿಗೆ ಪ್ರಣಾಮ)
ಬಲಿಹರಣ ಅಥವಾ ನೈವೇದ್ಯವನ್ನು ಅರ್ಪಿಸುವುದಕ್ಕೆ ಮುಂಚಿತವಾಗಿ ಚಿತ್ರಗುಪ್ತನನ್ನು ಪ್ರಾರ್ಥನೆ ಅಥವಾ ಆವಾಹನೆ ಮಾಡಬೇಕೆಂದು ಋಗ್ವೇದವು ಸೂಚಿಸುತ್ತದೆ.
ಶ್ರಾದ್ಧ ಅಥವಾ ಇತರ ಆಚರಣೆಗಳನ್ನು ನೆರವೇರಿಸುವಾಗ ಧರ್ಮರಾಜನ ಸ್ವರೂಪದಲ್ಲಿ (ನ್ಯಾಯದ ಪ್ರಭು) ಚಿತ್ರಗುಪ್ತನಿಗೆ ಮಾಡಬೇಕಾದ ಒಂದು ವಿಶೇಷ ಪ್ರಾರ್ಥನೆ ಅಥವಾ ಆವಾಹನೆಯೂ ಇದೆ.
"ಓಂ ತತ್ ಪುರುಷಾಯ ವಿದ್ಮಹೇ ಚಿತ್ರಗುಪ್ತ ಧೀಮಹಿ ತೇನ ಲೇಖ ಪ್ರಚೋದಯಾತ್."
ಪುರೋಹಿತರು ಶ್ರೀ ಚಿತ್ರಗುಪ್ತನಿಗೆ ಪ್ರಣಾಮವನ್ನೂ ಸಲ್ಲಿಸುತ್ತಾರೆ:
"ಯಮಮ್ ಧರ್ಮರಾಜ್ಯ ಚಿತ್ರಗುಪ್ತಾಯ ವೈ ನಮಃ."
ನವಗ್ರಹಗಳಲ್ಲಿ ಒಂದಾದ ಕೇತುವಿಗೆ ಪ್ರಭು ಚಿತ್ರಗುಪ್ತನು ಅಧಿದೇವತೆಯಾಗಿದ್ದಾನೆ, ಮತ್ತು ಚಿತ್ರಗುಪ್ತನನ್ನು ಯಾರು ಪೂಜಿಸುತ್ತಾರೋ ಅವರು ಏಳಿಗೆಯನ್ನು ಹೊಂದುತ್ತಾರೆ. ಅಷ್ಟೇ ಅಲ್ಲ, ಕೇತುವಿನ ಹಾದುಹೋಗುವ ಅವಧಿ ಅಥವಾ ಸಂಕ್ರಮಣ ಕಾಲದಲ್ಲಿ ಕಂಡುಬರುವ ಕೆಟ್ಟ ಪ್ರಭಾವಗಳೂ ಸಹ ಚಿತ್ರಗುಪ್ತನ ಪೂಜೆಯಿಂದ ಶಮನಗೊಳ್ಳುತ್ತವೆ. ಯಮಾದ್ವಿತೀಯದಂದು ಶ್ರೀ ಚಿತ್ರಗುಪ್ತಜಿಯವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ಇದೇ ದಿನದಂದು ಚಿತ್ರಗುಪ್ತಜಯಂತಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಯಮರಾಜ ಮತ್ತು ಚಿತ್ರಗುಪ್ತಜಿಯವರಿಗೆ ಸಂಬಂಧಿಸಿದ ಧಾರ್ಮಿಕ ಆಚರಣೆಗಳನ್ನು ನೆರವೇರಿಸುವ ವಿಶೇಷಹಕ್ಕುಗಳು ಕಾಯಸ್ಥರಿಂದ ಕಾದಿರಿಸಲ್ಪಟ್ಟಿವೆ. ಇವುಗಳ ಪೈಕಿ, ಚಿತ್ರಗುಪ್ತಜಯಂತಿ ಪೂಜೆಯು ಅತ್ಯಂತ ಮುಖ್ಯವಾದ ಪೂಜೆಗಳಲ್ಲಿ ಒಂದೆನಿಸಿಕೊಂಡಿದೆ. ಈ ಯಜ್ಞದ ಹಿರಿಮೆಯೇನೆಂದರೆ, ಇದನ್ನು ಯಾರು ನೆರವೇರಿಸುತ್ತಾರೋ ಅವರು ತಮ್ಮ ಕರ್ಮಗಳ ದಾಖಲೆಯಲ್ಲಿ ಏನನ್ನೇ ಹೊಂದಿರಲಿ, ಅವರಿಗೆ ನರಕದ ಶಿಕ್ಷೆಗಳನ್ನು ನೀಡದೆ ಬಿಟ್ಟುಬಿಡಲಾಗುತ್ತದೆ.
ಇದಕ್ಕೆ ಸಂಬಂಧಿಸಿದ ಪ್ರಾಚೀನ ಕಥೆ/ಕಥಾ ಈಗ ಹೇಳಲ್ಪಡುತ್ತದೆ[೧೧]. ಬಹಳ ಕಾಲದ ಹಿಂದೆ ಓರ್ವ ಶಕ್ತಿವಂತ ರಾಜನಿದ್ದ. ರಾಜರುಗಳ ಪರಮೋಚ್ಚ ರಾಜನಾಗುವ ತನ್ನ ಮಹತ್ವಾಕಾಂಕ್ಷೆಯಿಂದಾಗಿ ಅವನು ಇಡೀ ಪ್ರಪಂಚವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದ. ಅವನ ಕ್ರೂರ ಕಾರ್ಯಗಳ ಕಥೆಗಳು ಪ್ರಪಂಚದ ಮೂಲೆಮೂಲೆಗಳಲ್ಲೂ ಹಬ್ಬಿದ್ದವು. ಅವನ ಕಾರ್ಯಗಳು ನಿಕೃಷ್ಟವಾದವು ಮತ್ತು ಅತಿರೇಕದ್ದು ಎಂದು ಪ್ರತಿಯೊಬ್ಬರಿಗೂ ಗೊತ್ತಿದ್ದರಿಂದಾಗಿ, ಅವನ ಕುರಿತಾಗಿ ಹೃದಯದಲ್ಲಿದ್ದ ಅತೀವವಾದ ಭಯ-ಭಕ್ತಿಗಳೊಂದಿಗೆ ಜನರು ಅವನ ಹೆಸರನ್ನು ಉಚ್ಚರಿಸುತ್ತಿದ್ದರು. ಸೌರಾಷ್ಟ್ರದ ರಾಜನಾಗಿದ್ದ ಅವನ ಹೆಸರು ಸುದಾಸ್. ತನ್ನ ರಾಜಧಾನಿಯಾದ ಸೌರಾಷ್ಟ್ರದಿಂದ ಆತ ತನ್ನ ಬೃಹತ್ ಸಾಮ್ರಾಜ್ಯವನ್ನು ಒಂದು ವಜ್ರಮುಷ್ಟಿಯ ಹಿಡಿತದೊಂದಿಗೆ ಆಳುತ್ತಿದ್ದ. ಆತನು ಅತ್ಯಂತ 'ಅಧರ್ಮೀಯರ' (ಸನಿಹದ ಅರ್ಥ: 'ಧರ್ಮವಿರೋಧಿ ಮತ್ತು ಧರ್ಮದ ಹೊಸ್ತಿಲನ್ನು ದಾಟುವವ') ಪೈಕಿ ಒಬ್ಬನೆನಿಸಿಕೊಂಡಿದ್ದ ಹಾಗೂ 'ಪಾಪ'ವನ್ನು (ಸನಿಹದ ಅರ್ಥ: 'ಪಾತಕಗಳು') ಎಸಗುವ ದುಷ್ಕರ್ಮಿಯಾಗಿದ್ದ. ತಮ್ಮ ರಾಜನು ಪಾಪಗಳಿಂದ ತುಂಬಿದ ತನ್ನ ಜೀವನದಲ್ಲಿ ಒಂದೇ ಒಂದು 'ಪುಣ್ಯ'ದ ಕಾರ್ಯವನ್ನೂ ಮಾಡಿಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿದ್ದ ಅವನ ರಾಜ್ಯದ ತುಂಬೆಲ್ಲಾ ಹಬ್ಬಿತ್ತು. ಈ ರಾಜನಿಗೆ ಬೇಟೆಯಾಡುವುದೆಂದರೆ ಅಚ್ಚುಮೆಚ್ಚಿನ ವಿಷಯವಾಗಿತ್ತು. ಒಮ್ಮೆ ಹೀಗೆಯೇ ಬೇಟೆಯ ವಿಹಾರಕ್ಕೆ ಅವನು ತೆರಳಿದ್ದಾಗ, ಕಾಡಿನೊಳಗೆ ಅವನು ಕಳೆದುಹೋದ. ಅಲ್ಲಿಂದ ಹೊರಗೆಬರುವ ದಾರಿಗಾಣದೆ ಆತ ದಿಕ್ಕುತಪ್ಪಿದ, ಮತ್ತು ಯಾವುದೇ ಬಗೆಯ ಭಯದ ಕುರಿತು ಅರಿವಿರದ ಆತ, ತನ್ನ ಕಾಡುಗಳು ಹೇಗಿರಬಹುದೆಂದು ನೋಡಲು ನಿರ್ಧರಿಸಿದ. ಕಾಡುಗಳನ್ನು ಆಳವಾಗಿ ಒಳಹೊಕ್ಕು ಪರಿಶೋಧಿಸುತ್ತಿರುವಾಗ ಉತ್ತರದ ದಿಕ್ಕಿನಿಂದ ನಿಶ್ಚಿತವಾದ 'ಮಂತ್ರಗಳ' ಶಬ್ದಗಳು ಬರುತ್ತಿರುವುದನ್ನು ಅವನು ಕೇಳಿಸಿಕೊಂಡ. ಮಂತ್ರಗಳು ಯಾವ ಸ್ಥಳದಲ್ಲಿ ಜಪಿಸಲ್ಪಡುತ್ತಿದ್ದವೋ ಆ ಸ್ಥಳದೆಡೆಗೆ ಅವನು ತನ್ನ ಪ್ರಯಾಣವನ್ನು ಮುಂದುವರಿಸಿದ. ಅಲ್ಲಿ ಒಂದಷ್ಟು ಬ್ರಾಹ್ಮಣರು ಯಜ್ಞಕಾರ್ಯವನ್ನು ನೆರವೇರಿಸುತ್ತಿರುವುದು ಅವನ ಕಣ್ಣಿಗೆ ಬಿತ್ತು. ಇದಕ್ಕೆ ಸಾಕ್ಷಿಯೆನ್ನುವಂತೆ ಒಂದಷ್ಟು ಜನಸಾಮಾನ್ಯರು ಕುಳಿತುಕೊಂಡು ಅದನ್ನು ನೋಡುತ್ತಿದ್ದರು. ತನ್ನ ಒಪ್ಪಿಗೆಯಿಲ್ಲದೆಯೇ ಪೂಜೆಯೊಂದು ಆಚರಿಸಲ್ಪಡುತ್ತಿರುವುದನ್ನು ಕಂಡು ರಾಜ ತನ್ನ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡ. ತನ್ನ ಗುಡುಗಿನಂಥ ಧ್ವನಿಯಲ್ಲಿ ಅವನು ಹೀಗೆ ಹೇಳಿದ:
“ನಾನು ಸುದಾಸ್ ರಾಜ, ರಾಜರ ರಾಜ. ಮೂರ್ಖ ಜನರೇ ನನಗೆ ನಮಸ್ಕಾರ ಮಾಡಿ. ನೀವೆಲ್ಲಾ ಯಾರು ಮತ್ತು ನೀವೆಲ್ಲಾ ಇಲ್ಲಿ ಏನು ಮಾಡುತ್ತಿದ್ದೀರಿ? ನನಗೆ ನಿಮ್ಮಿಂದ ಉತ್ತರ ಬೇಕು."
ಪುರೋಹಿತರ ಗುಂಪು ತನ್ನಪಾಡಿಗೆ ತಾನು ಮಂತ್ರಗಳನ್ನು ಜಪಿಸುತ್ತಲೇ ಇತ್ತು ಮತ್ತು ಕೋಪಗೊಂಡಿದ್ದ ರಾಜನ ಕಡೆಗೆ ಯಾವುದೇ ಗಮನವನ್ನು ನೀಡಲಿಲ್ಲ. ಇವೆಲ್ಲಾ ನಡೆಯುತ್ತಿರುವಾಗ ಸ್ವಲ್ಪ ದೂರದಲ್ಲಿ ಕುಳಿತು ನೆರವೇರಿಸಲ್ಪಡುತ್ತಿದ್ದ ಯಜ್ಞಕ್ಕೆ ಸಾಕ್ಷಿಯಾಗಿದ್ದ ಜನರು ರಾಜನ ಭಯದಿಂದಾಗಿ ಬಾಯಿಮುಚ್ಚಿಕೊಂಡಿದ್ದರು. ಪುರೋಹಿತರಿಂದ ತೀರಾ ಕಡೆಗಣಿಸಲ್ಪಟ್ಟಿದ್ದಕ್ಕೆ ತನ್ನ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡ ರಾಜ, ಪುರೋಹಿತನ ತಲೆಗೆ ಹೊಡೆಯಲು ಕತ್ತಿಯನ್ನು ಹೊರಗೆಳೆದ. ಇದನ್ನು ನೋಡಿದ ಅವರ ಪೈಕಿಯ ಅತ್ಯಂತ ಕಿರಿಯ ಪುರೋಹಿತ ಎದ್ದುನಿಂತು ಹೀಗೆ ಹೇಳಿದ:
“ನಿಲ್ಲು! ಸುದಾಸ್ ರಾಜ, ನಿಲ್ಲು! ಈ ಅವಕಾಶವನ್ನು ಒಂದು ದುರ್ಘಟನೆಯಾಗಿ ತಿರುಗಿಸಬೇಡ. ನೀನು ಖಂಡನೆಗೆ ಒಳಗಾಗುವುದರ ಬದಲು ಉಳಿಸಲ್ಪಡಬೇಕು ಎಂದೇ ನಿನ್ನನ್ನು ಇಲ್ಲಿಗೆ ಕಳಿಸಲಾಗಿದೆ."
ಈ ಮಾತುಗಳನ್ನು ಕೇಳುತ್ತಿದ್ದಂತೆ ರಾಜನಲ್ಲಿ ಆಸಕ್ತಿಯುಂಟಾಗಿ, ಅವನು ಹೀಗೆ ಹೇಳಿದ: "ಏಯ್ ಚಿಕ್ಕ ಹುಡುಗಾ, ನೀನು ವಯಸ್ಸಿಗೆ ಮೀರಿದ ಮಹಾನ್ ಧೈರ್ಯ ಹಾಗೂ ಜ್ಞಾನವನ್ನು ಹೊಂದಿರುವೆ. ನೀನು ಈಗಷ್ಟೇ ಹೇಳಿದ್ದನ್ನು ಸ್ವಲ್ಪ ವಿವರಿಸಿ ಹೇಳುತ್ತೀಯಾ?”
ಆ ಕಿರಿಯ ಪುರೋಹಿತ ರಾಜನನ್ನು ಕುರಿತು ಹೀಗೆ ಹೇಳಿದ, “ಓ ಸುದಾಸ್, ನಿನ್ನನ್ನು ನೀನು ರಾಜರ ರಾಜನೆಂದು ಕರೆದುಕೊಳ್ಳುತ್ತೀಯ: ನಿನ್ನದು ಎಂಥಾ ತಪ್ಪುಗ್ರಹಿಕೆಯಪ್ಪಾ! ನೀನು ಸತ್ತಾಗ ನಿನ್ನನ್ನು ಎಂಥಾ ಶಿಕ್ಷೆಗೆ ಗುರಿಮಾಡಲಾಗುತ್ತದೆಯೆಂದರೆ, ನಿನ್ನ ಅಹಂಕಾರವೆಲ್ಲಾ ತೆಳುವಾದ ಗಾಳಿಯಲ್ಲಿ ಕಣ್ಮರೆಯಾಗಿಹೋಗುತ್ತದೆ. ಈ ಜನರೆಲ್ಲಾ ಯಾರು, ಅವರೆಲ್ಲಾ ಏನನ್ನು ಮಾಡುತ್ತಿದ್ದಾರೆ, ನನ್ನ ಈ ಮಾತುಗಳ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳುವ ಬಯಕೆ ನಿನಗಿದ್ದರೆ, ನನ್ನ ಮಾತನ್ನು ಕೇಳು:
ನಾವು ಚಿತ್ರಗುಪ್ತ ಪ್ರಭುವಿನ ಮಕ್ಕಳು. ಅವನನ್ನು ಮಹಾನ್ ಋಗ್ವೇದವು ನಿಜವಾದ ರಾಜರ ರಾಜನೆಂದು ಕರೆಯುತ್ತದೆ, ಮತ್ತು ಅವನಿಗೆ ಸಿಕ್ಕಿರುವ ಆ ಬಿರುದನ್ನು ಕದಿಯುವಷ್ಟು ಯೋಗ್ಯತೆ ನಿನಗಿಲ್ಲ. ನಾವು ಕಾಯಸ್ಥರು. ನಮ್ಮ ಪ್ರಭುವಾದ ಯಮರಾಜ ಹಾಗೂ ನಮ್ಮ ಮೂಲಜನಕನಾದ ಚಿತ್ರಗುಪ್ತ ಮಹಾರಾಜನಿಗಾಗಿ ಈ ಯಮಾದ್ವಿತೀಯದ ಮಹಾನ್ ದಿನದಂದು ನಾವು ಯಜ್ಞವನ್ನು ಮಾಡುತ್ತಿದ್ದೇವೆ. ಓ ಸುದಾಸ್ ರಾಜನೇ, ಯಾರು ಈ ಪೂಜೆಯನ್ನು ಮಾಡುತ್ತಾರೋ, ಅವರನ್ನು ನರಕದ ಶಿಕ್ಷೆಗಳಿಂದ ಬಿಟ್ಟುಬಿಡಲಾಗುತ್ತದೆ.
ನಿನ್ನ ನಿಕೃಷ್ಟವಾದ ಜೀವಮಾನದಲ್ಲಿ ನೀನು ಮಾಡಿರುವ ಎಲ್ಲಾ ಪಾಪಗಳ ದಾಖಲೆಯನ್ನೂ ಚಿತ್ರಗುಪ್ತಜಿ ಹೊಂದಿದ್ದಾರೆ! ನೀನು ಯಮರಾಜ ಹಾಗೂ ಚಿತ್ರಗುಪ್ತಜಿಯವರಿಗೆ ಶರಣಾಗತನಾದರೆ, ನೀನು ನರಕದಿಂದ ವಿಮುಕ್ತಿಯನ್ನು ಪಡೆಯಬಲ್ಲೆ. ಈ ಪ್ರಪಂಚದಲ್ಲಿರುವ ಯಾವುದನ್ನೂ ಕೂಡ ಅವನಿಂದ ಮುಚ್ಚಿಡಲು ಸಾಧ್ಯವಿಲ್ಲ. ಅವನೊಬ್ಬನೇ ನಿನ್ನನ್ನು ಉಳಿಸಬಲ್ಲ. ಒಂದು ಕೈನಲ್ಲಿ ವಿಮೋಚನೆಯಿದೆ ಹಾಗೂ ಮತ್ತೊಂದು ಕೈನಲ್ಲಿ ನರಕವಿದೆ. ಬಾ, ನಮ್ಮೊಂದಿಗೆ ಸೇರಿಕೋ, ಇಲ್ಲವೇ ನಮ್ಮೆಲ್ಲರನ್ನೂ ಕೊಲ್ಲು.”
ರಾಜ ದಿಗ್ಭ್ರಮೆಗೊಂಡ ಮತ್ತು ಒಂದು ವಶೀಕರಣ ಸ್ಥಿತಿಯಲ್ಲಿರುವವನಂತೆ ಆ ಕಿರಿಯ ಪುರೋಹಿತನನ್ನು ಹಿಂಬಾಲಿಸಿದ. ನಂತರ ಆತ ಸಂಪೂರ್ಣ ಭಕ್ತಿ ಹಾಗೂ ಕರಾರುವಾಕ್ಕಾದ ಪೂಜಾವಿಧಾನದೊಂದಿಗೆ ಪೂಜೆಯನ್ನು ಕೈಗೊಂಡ. ಅದಾದ ನಂತರ ಅವನು 'ಪ್ರಸಾದ'ವನ್ನು ಸ್ವೀಕರಿಸಿದ ಮತ್ತು ಇತರ ಜನರೊಂದಿಗೆ ತನ್ನ ರಾಜ್ಯಕ್ಕೆ ಮರಳಿದ.
ಕಾಲವು ಸರಿಯುತ್ತಿದ್ದಂತೆ ಯಮದೂತರು ಅವನನ್ನು ತಮ್ಮೊಂದಿಗೆ ಯಮಲೋಕಕ್ಕೆ ಕರೆದುಕೊಂಡುಹೋಗುವ ದಿನವು ಬಂದೇಬಿಟ್ಟಿತು. ಯಮದೂತರು ರಾಜನ ಆತ್ಮವನ್ನು ಸರಪಳಿಗಳಲ್ಲಿ ಕಟ್ಟಿಕೊಂಡು ಯಮರಾಜನ ಆಸ್ಥಾನಕ್ಕೆ ಎಳೆದುಕೊಂಡುಹೋದರು. ರಕ್ತಸುರಿಸುತ್ತಿದ್ದ ಮತ್ತು ಜೀರ್ಣಾವಸ್ಥೆಯಲ್ಲಿದ್ದ ರಾಜನು ಯಮರಾಜನ ಆಸ್ಥಾನವನ್ನು ತಲುಪಿದಾಗ, ಚಿತ್ರಗುಪ್ತ ಪ್ರಭುವು ಅವನು ಮಾಡಿದ ಕರ್ಮಗಳ ಪುಸ್ತಕವನ್ನು ತೆರೆದು ಯಮರಾಜನಿಗೆ ಈ ರೀತಿಯಲ್ಲಿ ಹೇಳಿದ: "ಓ ಮಹಾನ್ ಯಮರಾಜನೇ, ಇವನ ಪ್ರಕರಣದಲ್ಲಿ ನಾನು ಇವನ ಜೀವನದ ತುಂಬೆಲ್ಲಾ ಪಾಪಕರ್ಮಗಳನ್ನೇ ಮಾಡಿದ್ದಾನೆ; ಇಷ್ಟಾಗಿಯೂ ಈ ರಾಜ ತನ್ನ ಜೀವಿತಕಾಲದಲ್ಲಿ ನಮ್ಮ ಯಜ್ಞವನ್ನು ಮಾಡಿದ್ದಾನೆ? ಕಾರ್ತೀಕ ಶುಕ್ಲ ದ್ವಿತೀಯದಂದು ಇವನು ಸಂಪೂರ್ಣ ಶ್ರದ್ಧಾಭಕ್ತಿಗಳೊಂದಿಗೆ ಮತ್ತು ಸೂಕ್ತವಾದ ವಿಧಾನದಲ್ಲಿ ಪೂಜೆಯನ್ನು ಮಾಡಿದ್ದಾನೆ. ಆ ದಿನದಂದು ಇವನು ನಮ್ಮ ಹಾಗೂ ನಿಮ್ಮ 'ವ್ರತ'ವನ್ನು ನೆರವೇರಿಸಿದ್ದಾನೆ. ಅಲ್ಲಿಂದೀಚೆಗೆ ಅವನ ಎಲ್ಲಾ 'ಪಾಪಗಳೂ' ತೊಡೆದುಹಾಕಲ್ಪಟ್ಟಿವೆ ಮತ್ತು ಧರ್ಮದ ನಿಯಮಗಳ ಪ್ರಕಾರ, ಅವನನ್ನು ನರಕಕ್ಕೆ ಕಳುಹಿಸಲಾಗುವುದಿಲ್ಲ." ಈ ರೀತಿಯಲ್ಲಿ ರಾಜನು ನರಕಕ್ಕೆ ಹೋಗದಂತೆ ಉಳಿದುಕೊಂಡ ಮತ್ತು ಇಂದಿನವರೆಗೂ ಚಿತ್ರಗುಪ್ತ ಜಯಂತಿ ಪೂಜೆಯನ್ನು ಯಾರೇ ನೆರವೇರಿಸಿದರೂ ನರಕದ ಶಿಕ್ಷೆಗಳಿಂದ ಅವರು ಬಿಡುಗಡೆಯನ್ನು ಹೊಂದುತ್ತಾರೆ.
ದೇವಾಲಯಗಳು
ಬದಲಾಯಿಸಿಚಿತ್ರಗುಪ್ತ ಪ್ರಭುವನ್ನು ಪ್ರತಿಷ್ಠಾಪಿಸಿರುವ ಹಲವಾರು ದೇವಾಲಯಗಳು ಭಾರತದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ದಕ್ಷಿಣ ಭಾರತದಲ್ಲಿ ಇವೆ. ಅವುಗಳ ಪೈಕಿ ಅತ್ಯಂತ ಪ್ರಸಿದ್ಧವಾಗಿರುವ ದೇವಾಲಯವು ಭಾರತದ ತಮಿಳುನಾಡು ರಾಜ್ಯದ ಕಾಂಚೀಪುರಂನಲ್ಲಿ [೨] Archived 2003-06-27 ವೇಬ್ಯಾಕ್ ಮೆಷಿನ್ ನಲ್ಲಿ. ನೆಲೆಗೊಂಡಿದೆ.
ಚಿತ್ರಗುಪ್ತಜಿಯವರ ಪ್ರಾಚೀನ ದೇವಾಲಯಗಳ ಪೈಕಿ ಒಂದು ಖಜುರಾಹೋದಲ್ಲಿ ಸ್ಥಾಪಿಸಲ್ಪಟ್ಟಿದೆ. ಈ ದೇವಾಲಯದ ಚಿತ್ರಗಳನ್ನು http://chitraguptvanshi.wetpaint.comನಲ್ಲಿ[ಶಾಶ್ವತವಾಗಿ ಮಡಿದ ಕೊಂಡಿ] ಕಾಣಬಹುದು.
ವಂಶವೃಕ್ಷ
ಬದಲಾಯಿಸಿಶ್ರೀ ಚಿತ್ರಗುಪ್ತಜಿಯವರು ದೇವಿ ನಂದನಿ ಮತ್ತು ದೇವಿ ಶೋಭಾವತಿ ಎಂಬಿಬ್ಬರನ್ನು ಮದುವೆಯಾಗಿ, ದಿವ್ಯವಾಗಿರುವ ಹನ್ನೆರಡು ಗಂಡುಮಕ್ಕಳನ್ನು ಪಡೆದರು. ಈ ೧೨ ಗಂಡುಮಕ್ಕಳು ಬ್ರಹ್ಮ ಕಾಯಸ್ಥರ ೧೨ ಪ್ರಮುಖ ಶಾಖೆಗಳನ್ನು ಪ್ರಾರಂಭಿಸಿದರು.
ಬ್ರಹ್ಮ ಕಾಯಸ್ಥರ ೧೨ ವಂಶಸ್ಥರೆಂದರೆ:
- ಮಾಥುರ್
- ಗೌರ್/ಗೋರ್
- ಭಟ್ನಾಗರ್
- ಸಕ್ಸೇನಾ
- ಅಂಬಷ್ಠ
- ನಿಗಮ್
- ಕರ್ಣ
- ಕುಲಶ್ರೇಷ್ಠ
- ಸ್ರೀವಾಸ್ತವ ಅಥವಾ ಶ್ರೀವಾಸ್ತವ
- ಸುರಧ್ವಜ
- ವಾಲ್ಮೀಕಿ
- ಅಷ್ಠಣ
- ಖಾರೆ
ದೇವಿ ಶೋಭಾವತಿ/ಇರಾವತಿಯರ ಗಂಡುಮಕ್ಕಳು
ಬದಲಾಯಿಸಿ- ಚಾರು (ಮಾಥುರ್): ಅವನು ಮಥುರೆ ಋಷಿಯ ಓರ್ವ ಅನುಯಾಯಿಯಾಗಿದ್ದ, ದುರಂಧರ ಎಂಬುದು ಅವನ ರಾಶಿ ನಾಮ; ಈತ ದೇವಿ ಪಂಕಜಾಕ್ಷಿಯನ್ನು ಮದುವೆಯಾದ. ಈತ ಪೂಜಿಸಿದ್ದು ದೇವಿ ದುರ್ಗಾ ಮಾಥುರ್ ಈಶ್ವರಿಯನ್ನು. ಮಥಾರ ಪ್ರದೇಶದಲ್ಲಿ (ಒಡಿಶಾದಲ್ಲಿನ ಮಹಾನದಿ ಹಾಗೂ ಕೃಷ್ಣಾ ನದಿಯ ನಡುವಿನ ಪ್ರದೇಶ) ಒಂದು ರಾಜ್ಯವನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಚಾರುವನ್ನು ಕಳಿಸಿದರು. ಅವನ ವಂಶಸ್ಥರು ಮಾಥುರ್‌ಗಳೆಂದು ಕರೆಯಲ್ಪಟ್ಟರು. ವೈದಿಕ ಬಣದ ವಿರೋಧಿಗಳಿಗೆ 'ದುಷ್ಟಶಕ್ತಿಗಳು' ಎಂಬ ಪದವನ್ನು ನಿಯತವಾಗಿ ಬಳಸಲಾಗುತ್ತಿತ್ತು. ಇಂಥ ದುಷ್ಟಶಕ್ತಿಗಳನ್ನು ಸೋಲಿಸಿದ ನಂತರ, ಅವರು ಮಥಾರ ರಾಜ್ಯವನ್ನು ಸ್ಥಾಪಿಸಿದರು. ಇದಾದ ನಂತರ, ಅವರು ಆರ್ಯಾವರ್ತದ ಇತರ ಭಾಗಕ್ಕೂ ಹಬ್ಬಿದರು. ಈ ಮಧ್ಯೆ ಅವರು ೩ ಉಪ-ವಿಭಾಗಗಳಾಗಿ ವಿಭಜಿಸಲ್ಪಟ್ಟರು ೧.ಮಥಾರದ ಮಾಥುರ್‌ಗಳು, ೨.ಪಾಂಚಾಲ ರಾಜ್ಯದ ಪಂಚೋಲಿ ಅಥವಾ ಪಾಂಚಾಲಿ; ಈ ರಾಜ್ಯದ ಮಥಾರ ಪಟ್ಟಣದಲ್ಲಿ ಗರ್‌ವಾಲ್ ಬೆಟ್ಟಗಳಿವೆ, ೩.ಗುಜರಾತ್‌ನ ಕಚ್ಛಿ. ಮಾಥುರ್‌ಗಳು ಅನೇಕ ರಾಜ್ಯಗಳನ್ನಾಳುವ ಒಂದು ಸುದೀರ್ಘ ಇತಿಹಾಸವನ್ನು ಅನುಭವಿಸಿದಂತೆ ತೋರಿತು. ಅಯೋಧ್ಯಾ ರಾಜ್ಯವು ಅವುಗಳಲ್ಲಿ ಅತ್ಯಂತ ಪ್ರಮುಖವಾದುದೆನಿಸಿತು. ಈ ರಾಜ್ಯವನ್ನು ಅವರು ರಘುವಂಶಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಮುಂಚೆಯೇ ಆಳಿದರು. ಅವು ೮೪ ಅಲ್‌ಗಳಾಗಿ ವಿಭಜಿಸಲ್ಪಟ್ಟಿವೆ. ಮದುರೈ, ತ್ರಿನಿವೆಲ್ಲಿ ಇತ್ಯಾದಿಗಳನ್ನು ಆವರಿಸಿಕೊಳ್ಳುವ ಪಾಂಡ್ಯ ರಾಜ್ಯವನ್ನು ಅವರು ಸಂಸ್ಥಾಪಿಸಿದರು.[೧೨] ರೋಮನ್ ಸಾಮ್ರಾಟ ಅಗಸ್ಟಸ್ ಸೀಸರ್ ಬಳಿಗೆ ಓರ್ವ ಗುಪ್ತದೂತನನ್ನು ಅವರು ಕಳಿಸಿದರು.
- ಸುಚಾರು (ಗೌರ್) गौड़: ಈತ ವಸಿಷ್ಠ ಋಷಿಯ ಓರ್ವ ಅನುಯಾಯಿಯಾಗಿದ್ದ, ಧರ್ಮದತ್ತ ಎಂಬುದು ಅವನ ರಾಶಿನಾಮವಾಗಿತ್ತು ಮತ್ತು ಅವನು ಶಾಕಂಬರಿ ದೇವಿಯನ್ನು ಪೂಜಿಸಿದ. ಗೌಡ್ ಪ್ರದೇಶದಲ್ಲಿ ಒಂದು ರಾಜ್ಯವನ್ನು ಸಂಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಸುಚಾರುವನ್ನು ಕಳಿಸಿದರು. ಶ್ರೀ ಸುಚಾರುವು ನಾಗರಾಜ ವಾಸುಕಿಯ ಮಗಳಾದ ದೇವಿ ಮಾಂಧಿಯಾ ಎಂಬಾಕೆಯನ್ನು ಮದುವೆಯಾದ. ಗೌರ್‌ಗಳು ಐದು ವಿಭಾಗಗಳಾಗಿ ವಿಭಜಿಸಲ್ಪಟ್ಟಿದ್ದಾರೆ: ೧.ಖಾರೆ, ೨.ದೂಸ್ರೆ, ೩.ಬೆಂಗಾಲಿ, ೪.ದೆಹ್ಲಾವಿ, ೫.ವಾದನ್ಯೂನಿ. ಗೌರ್ ಕಾಯಸ್ಥರು ಅಲ್‌ಗಳಲ್ಲಿ ಮರುವಿಂಗಡಿಸಲ್ಪಟ್ಟಿದ್ದಾರೆ. ಮಹಾಭಾರತದ ಭಗದತ್ತ ಮತ್ತು ಕಳಿಂಗದ ರುದ್ರದತ್ತ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು.
- ಚಿತ್ರಾಕ್ಷ (ಭಟ್ನಾಗರ್): ಇವನು ಭಟ್ ಋಷಿಯ ಓರ್ವ ಅನುಯಾಯಿಯಾಗಿದ್ದ, ದೇವಿ ಭದ್ರಕಾಳಿನಿ ಎಂಬಾಕೆಯನ್ನು ಇವನು ಮದುವೆಯಾದ ಮತ್ತು ದೇವಿ ಜಯಂತಿಯನ್ನು ಪೂಜಿಸಿದ. ಭಟ್ಟದೇಶ ಮತ್ತು ಮಾಳ್ವದಲ್ಲಿನ ಭಟ್ ನದಿಯ ಪ್ರದೇಶದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಚಿತ್ರಾಕ್ಷನನ್ನು ಕಳಿಸಿದರು.ಅವನು ಚಿತ್ತೂರು ಮತ್ತು ಚಿತ್ರಕೂಟವನ್ನು ಸ್ಥಾಪಿಸಿ, ಅಲ್ಲಿಯೇ ನೆಲೆಗೊಂಡ ಮತ್ತು ಅವನ ವಂಶಸ್ಥರು ಭಟ್ನಾಗರ್‌ಗಳೆಂದು ಹೆಸರು ಪಡೆದರು. ಅವರು ೮೪ ಅಲ್‌ಗಳಾಗಿ ವಿಭಜಿಸಲ್ಪಟ್ಟಿದ್ದಾರೆ.
- ಮತಿಮಾನ್ (ಸಕ್ಸೇನಾ): ಇವನು ದೇವಿ ಕೋಕಲೇಶ್ ಎಂಬಾಕೆಯನ್ನು ಮದುವೆಯಾದ ಮತ್ತು ಶಾಕಂಬರಿ ದೇವಿಯನ್ನು ಪೂಜಿಸಿದ. ಶಾಕ ಪ್ರದೇಶದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಮತಿಮಾನ್‌ನ್ನು ಕಳಿಸಿದರು. ಶ್ರೀ ಮತಿಮಾನ್‌ನ ಮಗ ಓರ್ವ ಮಹಾನ್ ಯೋಧನಾಗಿದ್ದ ಮತ್ತು ಈಗ ಕಾಬೂಲ್-ಕಂದಹಾರ್ ಮತ್ತು ಯುರೇಷಿಯಾ ಎಂದು ಕರೆಯಲ್ಪಡುತ್ತಿರುವ ಪ್ರದೇಶದಲ್ಲಿ ತನ್ನ ರಾಜ್ಯವನ್ನು ಅವನು ಸ್ಥಾಪಿಸಿದ, ಮತ್ತು ಅವರು ಸಖರಾದುದರಿಂದ (ಸೇನಾದ ಸ್ನೇಹಿತರು), ಅವರ ವಂಶಸ್ಥರು ಶಕ್‌ಸೇನಾ ಅಥವಾ ಸಕ್ಸೇನಾ ಎಂದು ಕರೆಯಲ್ಪಟ್ಟರು. ಆಧುನಿಕ ಇರಾನ್‌ನ ಒಂದು ಭಾಗವು ಅವರ ಆಳ್ವಿಕೆಯಡಿಯಲ್ಲಿತ್ತು. ಇಂದು ಅವರು ಕನ್ನೌಜ್, ಪಿಲಿಭಿಟ್, ಬರೇಲಿ, ಷಹಜಹಾನ್‌ಪುರ, ಬದಾಯು, ಫರೂಕಾಬಾದ್, ಎಟ್ಟಾ, ಮೈನ್‌ಪುರಿ, ಆಲಿಘರ್ ಮೊದಲಾದ ಪ್ರದೇಶಗಳಲ್ಲಿ ಹೇರಳವಾಗಿ ಕಂಡುಬರುತ್ತಾರೆ. ಅವರು ಖಾರೆ ಮತ್ತು ದೂಸರೆಗಳಾಗಿ ವಿಭಜಿಸಲ್ಪಟ್ಟಿದ್ದಾರೆ ಮತ್ತು ಪ್ರಸ್ತುತ ಅವರು ೧೦೬ ಮುಖ್ಯ ಅಲ್‌ಗಳನ್ನು ಹೊಂದಿದ್ದಾರೆ. RC ಮಜುಂದಾರ್ ಪ್ರಕಾರ, ಅವರು ಶಾಕರ ಶೇನ ರಾಜರಾಗಿದ್ದರು. ಆದ್ದರಿಂದ ಶಾಕಶೇನ ಎಂಬ ಹೆಸರು ಬಂದು, ಅದು ಸಕ್ಸೇನಾ ಆಗಿ ಆಂಗ್ಲೀಕೃತಗೊಳಿಸಲ್ಪಟ್ಟಿತು.
- ಹಿಮವಾನ್ (ಅಂಬಷ್ಠ): ಸರಂಧರ ಎಂಬುದು ಇವನ ರಾಶಿನಾಮವಾಗಿತ್ತು, ಈತ ದೇವಿ ಭುಜಂಗಾಕ್ಷಿಯನ್ನು ಮದುವೆಯಾದ ಮತ್ತು ಅಂಬಾ-ಮಾತಾ ದೇವಿಯನ್ನು ಪೂಜಿಸಿದ. ಅಂಬಾ-ಸ್ಥಾನ ಎಂದು ಕರೆಯಲ್ಪಡುವ ಗಿರ್‌ನಾರ್ ಮತ್ತು ಕಥಿಯಾವಾಡ ಪ್ರದೇಶದಲ್ಲಿ ನೆಲೆಸಿದ್ದರಿಂದ ಅವನಿಗೆ ಈ ಹೆಸರು ಬಂತು. ದಿವ್ಯರಾದ ಐದು ಗಂಡುಮಕ್ಕಳನ್ನು ಶ್ರೀ ಹಿಮವಾನ್ ಪಡೆದಿದ್ದ. ಅವರೆಂದರೆ, ಶ್ರೀ ನಾಗಸೇನ, ಶ್ರೀ ಗಯಾಸೇನ, ಶ್ರೀ ಗಯಾದತ್ತ, ಶ್ರೀ ರತನ್‌ಮೂಲ ಮತ್ತು ಶ್ರೀ ದೇವಧರ. ಅವರು ಗಂಧರ್ವ ಕನ್ಯೆಯರನ್ನು ಮದುವೆಯಾದರು. ಈ ಐದು ಗಂಡುಮಕ್ಕಳು ಐದು ವಿಭಿನ್ನ ತಾಣಗಳಲ್ಲಿ ನೆಲೆಗೊಂಡರು ಮತ್ತು ಅದಕ್ಕನುಸಾರವಾಗಿ ಅವರ ವಂಶಾವಳಿಯು ಅವರ ಆಳ್ವಿಕೆಯನ್ನು ಈ ಪ್ರದೇಶಗಳ ಮೇಲೆ ಹರಡಿತು. ಇವರು ಮತ್ತೆ ವಿಭಜನೆಗೊಂಡರು. ಅದರ ವಿವರ ಹೀಗಿದೆ- ನಾಗಸೇನ: ೨೪ ಅಲ್‌ಗಳು, ಗಯಾಸೇನ: ೩೫ ಅಲ್‌ಗಳು, ಗಯಾದತ್ತ: ೮೫ ಅಲ್‌ಗಳು, ರತನ್‌ಮೂಲ: ೨೫ ಅಲ್‌ಗಳು, ದೇವಧರ: ೨೧ ಅಲ್‌ಗಳು. ಅಲೆಕ್ಸಾಂಡರ್‌ನ ಸೇನಾಧಿಪತಿಯಿಂದ ಮತ್ತು ಆಮೇಲೆ ಚಂದ್ರಗುಪ್ತ ಮೌರ್ಯನಿಂದ ಅವರು ಸೋಲಿಗೊಳಗಾದ ನಂತರ ಪಂಜಾಬ್‌ನಲ್ಲಿ ಅವರು ನೆಲೆಗೊಂಡರು.
- ಚಿತ್ರಚಾರು (ನಿಗಮ್): ಸುಮಂತ ಎಂಬುದು ಇವನ ರಾಶಿನಾಮವಾಗಿತ್ತು, ಇವನು ದೇವಿ ಅಶ್ಗಂಧಮತಿಯನ್ನು ಮದುವೆಯಾದ ಮತ್ತು ದುರ್ಗಾ ದೇವಿಯನ್ನು ಪೂಜಿಸಿದ. ಮಹಾಕೋಶಲ ಮತ್ತು ನಿಗಮ್ ಪ್ರದೇಶಗಳಲ್ಲಿ (ಸರಯು ನದಿಯ ದಂಡೆಯ ಮೇಲಿರುವುದು) ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಚಿತ್ರಚಾರುವನ್ನು ಕಳಿಸಿಕೊಟ್ಟರು. ಅವನ ವಂಶಸ್ಥರು ವೇದಗಳು ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ನಿಯಮಗಳಲ್ಲಿ ಅತ್ಯಂತ ಪ್ರವೀಣರಾಗಿದ್ದರು. ಆದ್ದರಿಂದ ಅವರಿಗೆ ನಿಗಮ್ ಎಂಬ ಹೆಸರು ಬಂತು. ಇಂದು ಅವರು ಕಾನ್‌ಪುರ, ಫತೇಹ್‌ಪುರ, ಹಮೀರ್‌ಪುರ, ಬಂಡಾ, ಜಾಲನ್, ಮಹೋಬಾ ಮೊದಲಾದ ಕಡೆಗಳಲ್ಲಿ ವಾಸಿಸುತ್ತಿದ್ದಾರೆ. ಅವರು ೪೩ ಪ್ರಮುಖ ಅಲ್‌ಗಳಾಗಿ ವಿಭಜಿಸಲ್ಪಟ್ಟಿದ್ದಾರೆ.
- ಅರುಣ ಚಾರು (ಕರ್ಣ): ದಾಮೋದರ ಎಂಬುದು ಇವನ ರಾಶಿನಾಮವಾಗಿತ್ತು, ಇವನು ದೇವಿ ಕಾಮಕಲಾಳನ್ನು ಮದುವೆಯಾದ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿದ. ಅವರು ವೈಷ್ಣವರಾಗಿದ್ದರು. ಕರ್ಣ ಪ್ರದೇಶದಲ್ಲಿ (ಇಂದಿನ ಕರ್ನಾಟಕ) ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಅರುಣ ಚಾರುವನ್ನು ಕಳಿಸಿದರು. ಅವನ ವಂಶಸ್ಥರು ನಿಧಾನವಾಗಿ ಉತ್ತರದ ರಾಜ್ಯಗಳಿಗೆ ವಲಸೆ ಹೋದರು ಮತ್ತು ಇಂದಿನ ನೇಪಾಳ, ಒಡಿಶಾ ಮತ್ತು ಬಿಹಾರ ಮೊದಲಾದ ಪ್ರದೇಶಗಳಲ್ಲಿ ಈಗ ಅವರ ಸಂಖ್ಯೆ ಹೇರಳವಾಗಿದೆ. ಬಿಹಾರ ಶಾಖೆಯು ಮತ್ತೆ ಎರಡು ಕವಲುಗಳಾಗಿ ಒಡೆಯಿತು; 'ಗಯಾವಾಲ ಕರ್ಣ' ಎಂಬ ಹೆಸರಿನ ಗುಂಪು ಗಯಾದಲ್ಲಿ ನೆಲೆಗೊಂಡರೆ, 'ಮೈಥಿಲ-ಕರ್ಣ' ಎಂಬ ಗುಂಪು ಮಿಥಿಲಾ ಪ್ರದೇಶದಲ್ಲಿ ನೆಲೆಗೊಂಡಿತು.ನಂತರ ಅವರು ಬೌದ್ಧಧರ್ಮವನ್ನು ಸ್ವೀಕರಿಸಿದರು. ಅವರು ಒಂದು ದಿಗ್ಭ್ರಮೆಯುಂಟುಮಾಡುವ ೩೬೦ ಅಲ್‌ಗಳಾಗಿ ವಿಭಜಿಸಲ್ಪಟ್ಟರು; ದಕ್ಷಿಣ ಭಾಗದಿಂದ ವಿವಿಧ ಹಂತಗಳಲ್ಲಿ ವಲಸೆ ಬಂದ ಕುಟುಂಬಗಳೇ ಈ ಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿವೆ. ಈ ಬಣಕ್ಕೂ ಮಹಾಭಾರತದ ಕರ್ಣನಿಗೂ ಯಾವುದೇ ಸಂಬಂಧವಿಲ್ಲ.
- ಜಿತೇಂದ್ರ (ಕುಲಶ್ರೇಷ್ಠ): ಸದಾನಂದ ಎಂಬುದು ಇವನ ರಾಶಿನಾಮವಾಗಿದೆ, ಈತ ದೇವಿ ಮಂಜುಭಾಷಿಣಿಯನ್ನು ಮದುವೆಯಾದ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿದ. ಕನ್ನೌಜ್ ಪ್ರದೇಶದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಅತಿಯೇಂದ್ರೀಯನನ್ನು (ಜಿತೇಂದ್ರ ಎಂಬ ಹೆಸರಿನಿಂದಲೂ ಇವನು ಚಿರಪರಿಚಿತನಾಗಿದ್ದ) ಕಳಿಸಿಕೊಟ್ಟರು. ಹನ್ನೆರಡು ಗಂಡುಮಕ್ಕಳ ಪೈಕಿಯ ಅತ್ಯಂತ ಧಾರ್ಮಿಕ ಮನೋಭಾವದ ಮತ್ತು ಶ್ರದ್ಧಾಭಕ್ತಿಯುಳ್ಳ ತಪಸ್ವಿಗಳ ಪೈಕಿ ಶ್ರೀ ಅತಿಯೇಂದ್ರೀಯನು ಒಬ್ಬನಾಗಿದ್ದ. ಆತ 'ಧರ್ಮಾತ್ಮ' ಮತ್ತು 'ಪಂಡಿತ' ಎಂದು ಚಿರಪರಿಚಿತನಾಗಿದ್ದ ಮತ್ತು ತೀವ್ರಾಸಕ್ತಿಗಳನ್ನು ಹಿಡಿತದಲ್ಲಿಟ್ಟುಕೊಂಡವನಾಗಿದ್ದ; ಅವನ ವಂಶಸ್ಥರು ಕುಲಶ್ರೇಷ್ಠ ಎಂಬ ಹೆಸರಿನಿಂದ ಕರೆಸಿಕೊಂಡರು. ಇಂದು ಕುಲಶ್ರೇಷ್ಠರು ಮಥುರಾ, ಆಗ್ರಾ, ಫಾರೂಖಾಬಾದ್, ಇಟಾಹ್, ಇಟಾವಾ ಮತ್ತು ಮೈನ್‌ಪುರಿ ಮೊದಲಾದ ಪ್ರದೇಶಗಳಲ್ಲಿ ಹೇರಳವಾಗಿದ್ದಾರೆ.ಕೆಲವು ಸಂಖ್ಯೆಯ ಜನ ಬಂಗಾಳದ ನಂದಿಗಾಂವ್‌ನಲ್ಲಿದ್ದಾರೆ. ಶ್ರೀ ಶೇಖರ ಕುಲಶ್ರೇಷ್ಠನಂತೆ[೧೩] ಸುಗಮ್ ಕುಲಶ್ರೇಷ್ಠ ಜಲೇಸರ್‌ನಲ್ಲಿದ್ದ (ಇಟಾಹ್). ಇಬ್ಬರೂ ಸಹ ಸುಪ್ರಸಿದ್ಧ ಬರಹಗಾರನಾಗಿದ್ದ.
ದೇವಿ ನಂದನಿ/ಸುದಾಖಿನಾರ ಗಂಡುಮಕ್ಕಳು
ಬದಲಾಯಿಸಿ- ಶ್ರೀಭಾನು (ಸ್ರೀವಾಸ್ತವ): ಧರ್ಮಧ್ವಜ ಎಂಬುದು ಇವನ ರಾಶಿನಾಮವಾಗಿತ್ತು. ಕಾಶ್ಮೀರದಲ್ಲಿನ ಶ್ರೀನಿವಾಸ (ಶ್ರೀನಗರ) ಪ್ರದೇಶ ಮತ್ತು ಕಂದಹಾರದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಶ್ರೀಭಾನುವನ್ನು ಕಳಿಸಿಕೊಟ್ಟರು. ನಾಗರಾಜ ವಾಸುಕಿಯ ಮಗಳಾದ ದೇವಿ ಪದ್ಮಿನಿಯನ್ನು ಇವನು ಮದುವೆಯಾದ ಮತ್ತು ಶ್ರೀ ದೇವದತ್ತ ಹಾಗೂ ಶ್ರೀ ಘನಶ್ಯಾಮ್ ಎಂಬ ದಿವ್ಯವಾದ ಇಬ್ಬರು ಗಂಡುಮಕ್ಕಳನ್ನು ಅವರು ಪಡೆದರು. ಶ್ರೀ ದೇವದತ್ತನು ಕಾಶ್ಮೀರದ ಮೇಲಿನ ಪ್ರಭುತ್ವವನ್ನು ಪಡೆದರೆ, ಸಿಂಧೂ ನದಿಯ ದಂಡೆಗಳ ಮೇಲಿನ ಪ್ರದೇಶದ ಪ್ರಭುತ್ವವನ್ನು ಶ್ರೀ ಘನಶ್ಯಾಮ್ ಪಡೆದ. ಎರಡನೇ ಹೆಂಡತಿಯಾದ ಖೇರಿಯಿಂದ ಅವರು ಜನಿಸಿದ್ದರಿಂದಾಗಿ ಸ್ರೀವಾಸ್ತವ 'ಖಾರೆ' ಎಂದು ಅವರು ಕರೆಯಲ್ಪಟ್ಟರು.ಶ್ರೀ ಧನ್ವಂತರಿ ಮತ್ತು ಶ್ರೀ ಸರ್ವಗ್ಯ ಎಂಬ ಹೆಸರಿನ ದಿವ್ಯವಾದ ಇಬ್ಬರು ಗಂಡುಮಕ್ಕಳು ಹುಟ್ಟಿದ್ದರು. ಅವರು ಸ್ರೀವಾಸ್ತವ 'ದೂಸ್ರೆ' ಎಂದು ಕರೆಯಲ್ಪಟ್ಟರು.ಸ್ರೀವಾಸ್ತವರು ೬೫ ಮುಖ್ಯ ಅಲ್‌ಗಳಾಗಿ ವಿಭಜಿಸಲ್ಪಟ್ಟಿದ್ದಾರೆ.
- ವಿಭಾನು (ಸೂರ್ಯಧ್ವಜ): ಶ್ಯಾಮಸುಂದರ ಎಂಬುದು ಇವನ ರಾಶಿನಾಮವಾಗಿತ್ತು, ಈತ ದೇವಿ ಮಾಲತಿಯನ್ನು ಮದುವೆಯಾದ. ಕಾಶ್ಮೀರ ಪ್ರದೇಶದ ಉತ್ತರದ ಭಾಗಗಳಲ್ಲಿ ರಾಜ್ಯವನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿ ಶ್ರೀ ವಿಭಾನುವನ್ನು ಕಳಿಸಿಕೊಟ್ಟರು. ತಾಯಿ ದಕ್ಷಿಣಾ ಸೂರ್ಯದೇವನ ಮಗಳಾಗಿದ್ದರಿಂದಾಗಿ, ಶ್ರೀ ವಿಭಾನುವಿನ ವಂಶಸ್ಥರು ಸೂರ್ಯದೇವರ ಲಾಂಛನವನ್ನು ತಮ್ಮ ಧ್ವಜಗಳಲ್ಲಿ ಸೇರಿಸಿಕೊಂಡರು ಮತ್ತು ಸೂರ್ಯಧ್ವಜರೆಂದು ಕರೆಯಲ್ಪಟ್ಟರು.ಮಹಾಭಾರತದ ಜರಾಸಂಧ ಹಾಗೂ ತಕ್ಷಿಲಾದ ಜಮ್ನಾಯಾ ಅತ್ಯಂತ ಚಿರಪರಿಚಿತರಾಗಿದ್ದರು.ನಂತರದಲ್ಲಿ ಅವರು ಮಗಧದಲ್ಲಿ ನೆಲೆಗೊಂಡರು.
- ವಿಶ್ವಬಂಧು (ವಾಲ್ಮೀಕಿ): ದೀನದಯಾಳು ಎಂಬುದು ಇವನ ರಾಶಿನಾಮವಾಗಿತ್ತು ಮತ್ತು ಈತ ಶಾಕಂಬರಿ ದೇವಿಯನ್ನು ಪೂಜಿಸಿದ. ಚಿತ್ರಕೂಟ ಮತ್ತು ನರ್ಮದಾಗಳ ಸಮೀಪದಲ್ಲಿದ್ದ ವಾಲ್ಮೀಕಿ ಪ್ರದೇಶದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿ ಶ್ರೀ ವಿಶ್ವಬಂಧುವನ್ನು ಕಳಿಸಿಕೊಟ್ಟರು. ಶ್ರೀ ವಿಶ್ವಬಂಧುವು ನಾಗಕನ್ಯಾ ದೇವಿ ಬಿಂಬಾವತಿಯನ್ನು ಮದುವೆಯಾದ. ನರ್ಮದಾ ನದಿಯ ದಂಡೆಗಳ ಮೇಲೆ ತೀವ್ರಸ್ವರೂಪದಲ್ಲಿ ಧ್ಯಾನವನ್ನು (ತಪಸ್ಯ) ಆಚರಿಸುವ ಮೂಲಕ ಈತ ತನ್ನ ಜೀವಿತದ ಬಹುಭಾಗವನ್ನು ಕಳೆದ ಮತ್ತು ಈ ಸಂದರ್ಭದಲ್ಲಿ ವಾಲ್ಮೀಕಿ ಎಂಬ ಬಳ್ಳಿಯ ಎಲೆಗಳಿಂದ ಅವನು ಮಚ್ಚಲ್ಪಟ್ಟ ಎಂದು ತಿಳಿದುಬಂದಿದೆ.ಇವನ ವಂಶಸ್ಥರು ವಾಲ್ಮೀಕಿ ಎಂದು ಕರೆಸಿಕೊಂಡರು.ಅವರು ವಲ್ಲಭಪಂಥಿಗಳಾದರು. ಅವನ ಮಗ ಶ್ರೀ ಚಂದ್ರಕಾಂತ ಗುಜರಾತ್‌ನಲ್ಲಿ ನೆಲೆಗೊಂಡರೆ, ಇತರ ಗಂಡುಮಕ್ಕಳು ತಮ್ಮ ಕುಟುಂಬಗಳೊಂದಿಗೆ ಉತ್ತರ ದಿಕ್ಕಿಗೆ, ಗಂಗಾನದಿ ಹಾಗೂ ಹಿಮಾಲಯ ಪರ್ವತಶ್ರೇಣಿಯ ಸಮೀಪದ ಪ್ರದೇಶಗಳಿಗೆ ವಲಸೆಹೋದರು. ಇಂದು ಅವರು ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ಗುಜರಾತ್‌ನಲ್ಲಿ ಅವರು 'ವಲ್ಲಭಿ ಕಾಯಸ್ಥ' ಎಂದೂ ಹೆಸರಾಗಿದ್ದಾರೆ.
- ವೀರ್ಯಭಾನು (ಅಷ್ಠಣ): ಮಾಧವರಾವ್ ಎಂಬುದು ಇವನ ರಾಶಿನಾಮವಾಗಿತ್ತು, ಇವನು ದೇವಿ ಸಿಂಘಧ್ವನಿಯನ್ನು ಮದುವೆಯಾದ. ಅಧಿಷ್ಠಾನದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿ ಶ್ರೀ ವೀರ್ಯಭಾನುವನ್ನು ಕಳಿಸಿಕೊಟ್ಟರು. ಇವನ ವಂಶಸ್ಥರಿಗೆ ರಾಮನಗರ-ವಾರಣಾಸಿಯ ರಾಜನು ಎಂಟು ರತ್ನಗಳನ್ನು ಕೊಟ್ಟು ಸತ್ಕರಿಸಿದ್ದರಿಂದಾಗಿ ಅವರು ಅಷ್ಠಣ ಎಂಬ ಹೆಸರಿನಿಂದ ಪ್ರಸಿದ್ಧರಾದರು.ಕೆಲವೊಬ್ಬರು ಹೇಳುವ ಪ್ರಕಾರ ಅವರಿಗೆ ನಿಶ್ಚಿತವಾದ ಸ್ಥಾನವಿರಲಿಲ್ಲವಾದ್ದರಿಂದ ಅವರಿಗೆ ಆ ಹೆಸರು ಬಂತು. ಇಂದು ಅಷ್ಠಣರು U.P.ಯ ಹಲವಾರು ಜಿಲ್ಲೆಗಳಲ್ಲಿ ಹೇರಳವಾಗಿ ಕಂಡುಬರುತ್ತಾರೆ. ಬಿಹಾರದಲ್ಲಿ ಅವರು ಸರನ್, ಸಿವಾನ್, ಚಂಪಾರಣ್, ಮುಜಫರ್‌ಪುರ್, ಸೀತಾಮಧಿ, ದರ್ಭಾಂಗ, ಭಾಗಲ್ಪುರ ಪ್ರದೇಶಗಳಲ್ಲಿ ವಾಸಿಸುತ್ತಾರೆ. U.P.ಯ ನೆರೆಯ ರಾಜ್ಯವಾದ M.P.ಯಲ್ಲೂ ಅವರ ಸಂಖ್ಯೆ ಗಮನಾರ್ಹವಾಗಿದೆ. ಅವರು ೫ ಮುಖ್ಯ ಅಲ್‌ಗಳಾಗಿ ವಿಭಜಿಸಲ್ಪಟ್ಟಿದ್ದಾರೆ.
ಅಲ್‌ಗಳು
ಬದಲಾಯಿಸಿಈ ಹನ್ನೆರಡು ಉಪ-ಜಾತಿಗಳು ಮತ್ತೆ ಅಲ್ ಗಳಾಗಿ ವಿಭಜಿಸಲ್ಪಟ್ಟಿವೆ. ವಂಶ ವೊಂದು ಒಬ್ಬ ರಾಜ , ಒಬ್ಬ ಋಷಿ ಅಥವಾ ಓರ್ವ ದೇವತೆ ಯಿಂದ ಹುಟ್ಟಿಕೊಳ್ಳುತ್ತದೆ ಮತ್ತು ಅದು ಬೆಳೆದಂತೆ ಸ್ವತಃ ಹಲವಾರು ಶಾಖೆಗಳಾಗಿ ಅದು ವಿಭಜಿಸಲ್ಪಡುತ್ತದೆ. ತಾವು ಭೇಟಿಯಾದ ಪ್ರದೇಶಗಳು ಹಾಗೂ ಸನ್ನಿವೇಶಗಳನ್ನು ಅವಲಂಬಿಸಿ ಈ ಸಂತತಿಯವರು ತಮ್ಮದೇ ಸ್ವಂತದ ಉಪ-ವಂಶವನ್ನು ಕಟ್ಟಲು ಶುರುಮಾಡಿದರು. ಅದೇ ವೇಳೆಗೆ ಮೂಲ (ಮುಖ್ಯ)ವಂಶಕ್ಕೆ ಅಧೀನವಾಗಿರುವುದನ್ನು ಅವರು ಅಂಗೀಕರಿಸಿದರು. ಈ ಉಪ-ವಂಶಗಳು ತಮ್ಮ ಹೆಸರುಗಳಿಗೆ ನಿರ್ದಿಷ್ಟವಾದ ನಾಮಪದಗಳನ್ನು ಸೇರಿಸುತ್ತವೆ, ಹಾಗೂ ಚಿತ್ರಗುಪ್ತ ವಂಶಕ್ಕೆ (ಚಿತ್ರಾಂಶಿ) ಸಂಬಂಧಿಸಿ ಹೇಳುವುದಾದರೆ ಅವನ್ನು ಅಲ್ ಗಳು ಎಂದು ಕರೆಯಲಾಗುತ್ತದೆ (ಸೂಚನೆ: ೧೨ ಮುಖ್ಯ ಉಪ-ಜಾತಿಗಳು ಅಂಗೀಕರಿಸಲ್ಪಟ್ಟ ವಿಭಾಗಗಳಾಗಿದ್ದು, ೧೨ ಗಂಡುಮಕ್ಕಳ ಕುಟುಂಬದ ಮೇಲೆ ಅವು ಆಧರಿಸಿವೆ, ಅವುಗಳನ್ನು ಅಲ್ ಗಳು ಎಂದು ಕರೆಯಲಾಗುವುದಿಲ್ಲ, ಅವುಗಳ ಮುಂದುವರಿದ ವಿಭಾಗಗಳೇ ಅಲ್ ಗಳು ಆಗಿವೆ).
ಅಲ್ ಎಂಬುದನ್ನು ಗೋತ್ರ ಎಂಬುದಾಗಿ ತಪ್ಪಾಗಿ ಗ್ರಹಿಸಬಾರದು ಅಥವಾ ಗೊಂದಲಪಟ್ಟುಕೊಳ್ಳಬಾರದು. ಗೋತ್ರ ಎಂಬುದು ಓರ್ವ ವೈದಿಕ ಋಷಿಯ ಹೆಸರಿನಲ್ಲಿ ಇರುತ್ತದೆ. ಈತನು ಓರ್ವ ಗುರು, ರಾಜಗುರು ಅಥವಾ ಆ ವಂಶದ ಮೂಲಜನಕನಾಗಿರಬಹುದು. ಒಂದು ವಂಶಕ್ಕೆ ಸಂಬಂಧಿಸಿದ ಗೋತ್ರವು ಎಲ್ಲ ಸಮಯದಲ್ಲೂ ಒಂದೇ ಆಗಿರುತ್ತದೆ. ಕಾಯಸ್ಥ ರಿಗೆ ಸಂಬಂಧಿಸಿ ಹೇಳುವುದಾದರೆ ಅವರದು ಕಾಶ್ಯಪ ಗೋತ್ರವಾಗಿದೆ. ಈ ರೀತಿಯಾಗಿ, ಓರ್ವ ವಂಶಜನು ಅವನ ಗೋತ್ರದಿಂದ ಮತ್ತು ಅಲ್‌ನಿಂದ ಗುರುತಿಸಲ್ಪಡಬಹುದು ಅಥವಾ ಪರಿಚಿತನಾಗಬಹುದು (ಕುಲ ಎಂಬ ಪದವನ್ನು ಅಲ್ ಎಂಬ ಪದದ ಜಾಗದಲ್ಲಿ ಹಲವುಬಾರಿ ಬಳಸಲಾಗುತ್ತದೆಯಾದರೂ, ಕುಲ ಎಂಬುದು ಹೆಚ್ಚು ವಿಸ್ತೃತವಾದ ಅರ್ಥವನ್ನು ಹೊಂದಿದೆ).ಅಲ್ ಗಳು ಸಾವಿರಾರು ಸಂಖ್ಯೆಯಲ್ಲಿ ಇರಬಹುದು ಮತ್ತು ೧೨ ಮುಖ್ಯ ಉಪ-ಜಾತಿಗಳ ಪೈಕಿ ಒಂದರೊಂದಿಗೆ ಕೂಡಿಸಿ ಹೆಸರಿಗೆ ಅದನ್ನು ಸೇರಿಸಬೇಕಾಗುತ್ತದೆ. ಈ ನಿಯಮದ ಅರಿವಿನ ಕೊರತೆಯಿದೆಯಾದ್ದರಿಂದ ಬಹುಪಾಲು ಜನರು ೧೨ ಮುಖ್ಯ ಉಪ-ಜಾತಿಗಳಲ್ಲಿ ತಮ್ಮ ವಂಶನಾಮಗಳು ನಮೂದಿಸಿರುವುದನ್ನು ಕಾಣದ ಸನ್ನಿವೇಶ ನಿರ್ಮಾಣವಾಗಿದೆ.
ಸಾಂಸ್ಕೃತಿಕ ಮಗ್ಗುಲುಗಳು
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(July 2008) |
ಮದುವೆ ಆಚರಣೆಗಳು
ಬದಲಾಯಿಸಿನಿರ್ದಿಷ್ಟವಾದ ಉಪ-ಜಾತಿಗಳೊಳಗೇ ವಿವಾಹವಾಗುವುದಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ, ಕಾಯಸ್ಥರು ಕುಟುಂಬದ ಅನ್ಯಗೋತ್ರ ವಿವಾಹ ಮತ್ತು ಜಾತಿ ಸಗೋತ್ರ ವಿವಾಹವನ್ನು ಆಚರಿಸುತ್ತಾರೆ. ಒಂದೇ ಆಲ್‌ಗೆ ಸೇರಿದ ವ್ಯಕ್ತಿಗಳು AL (ಅಲ್ ಎಂಬುದರ ಕುರಿತು ಮೇಲೆ ನೀಡಿರುವ ಒಂದು ವ್ಯಾಖ್ಯಾನವನ್ನು ನೋಡಿ) ಅಂತರವಿವಾಹ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ, ಅದೇ ವೇಳೆಗೆ ಅದೇ ಜಾತಿಯ ಮತ್ತು ಭಿನ್ನಭಿನ್ನ ಅಲ್‌ಗಳ ವ್ಯಕ್ತಿಗಳು ಮಾಡಿಕೊಳ್ಳಬಹುದು. ಇದಕ್ಕೊಂದು ನಿದರ್ಶನವನ್ನು ನೀಡಬೇಕೆಂದರೆ, ಸ್ರೀವಾಸ್ತವ ಉಪ-ಜಾತಿಗೆ ಮತ್ತು ಪಾಂಡೆ ಅಲ್‌ಗೆ ಸೇರಿದ ವ್ಯಕ್ತಿಗಳು ಸ್ರೀವಾಸ್ತವ ಉಪ-ಜಾತಿಯ ಮತ್ತೋರ್ವ ಪಾಂಡೆಯನ್ನು ಮದುವೆಯಾಗುವುದಿಲ್ಲ. ಆದರೆ, ಸ್ರೀವಾಸ್ತವ ಉಪ-ಜಾತಿಯ ಮತ್ತೊಂದು ಅಲ್‌ಗೆ ಸೇರಿರುವ ವ್ಯಕ್ತಿಗಳನ್ನು ಮದುವೆಯಾಗಬಹುದು.
ವಿಶೇಷ ಲಕ್ಷಣದ ಪೂಜೆ
ಬದಲಾಯಿಸಿಓರ್ವ ಪೂರ್ವಜನಾದ ಶ್ರೀ ಚಿತ್ರಗುಪ್ತಜಿಯನ್ನು ಪೂಜಿಸುವುದು ಮತ್ತು ಲೇಖನಿಗಳು, ಕಾಗದಗಳು ಹಾಗೂ ಪುಸ್ತಕಗಳನ್ನು ಪೂಜಿಸುವ ಒಂದು ಕ್ರಿಯಾವಿಧಿ ಶಾಸ್ತ್ರವಾದ ಕಲಮ್-ದವಾತ್ ಪೂಜೆ ಯ ಆಚರಣೆಯಿಂದಾಗಿ ಕಾಯಸ್ಥರು ಇತರ ಹಿಂದೂ ಜಾತಿಗಳಿಂದ ಅನನ್ಯವಾಗಿ ಕಂಡುಬರುತ್ತಾರೆ. ಈ ಎರಡೂ ಆಚರಣೆಗಳನ್ನು ಯಮ ದ್ವಿತೀಯದಂದು ಆಚರಿಸಲಾಗುತ್ತದೆ. ಇದು ಬ್ರಹ್ಮ ಪ್ರಭುವಿನಿಂದ ಶ್ರೀ ಚಿತ್ರಗುಪ್ತಜಿ ಸೃಷ್ಟಿಸಲ್ಪಟ್ಟ ದಿನವಾಗಿದೆ. ಅಷ್ಟೇ ಅಲ್ಲ, ಇದು ಯಮರಾಜನು ತನ್ನ ಕರ್ತವ್ಯಗಳಿಂದ ಬಿಡುಗಡೆಗೊಂಡ ಹಾಗೂ ಈ ವಿರಾಮದ ಅವಧಿಯನ್ನು ತನ್ನ ಸೋದರಿ ದೇವಿ ಯಮುನಾಳನ್ನು ಭೇಟಿಮಾಡಲು ಬಳಸಿದ ದಿನವಾಗಿದೆ; ಆದ್ದರಿಂದ ಈ ದಿನದಂದು ಇಡೀ ವಿಶ್ವವು ಭೈಯ್ಯಾ ದೂಜ್ ಎಂದು ಆಚರಿಸುತ್ತದೆ ಮತ್ತು ಕಾಯಸ್ಥರು ಈ ದಿನವನ್ನು ಶ್ರೀಚಿತ್ರಗುಪ್ತಜಯಂತಿ, ಅಂದರೆ, ತಮ್ಮ ಮೂಲಜನಕನ 'ಹುಟ್ಟುಹಬ್ಬ'ವಾಗಿ ಆಚರಿಸುತ್ತಾರೆ. ಕಾಯಸ್ಥರು "ಪೂರ್ವಜನನ್ನು-ಪೂಜಿಸುವ" ಹಿಂದೂಧರ್ಮದ ಏಕೈಕ ಒಳಪಂಗಡ ಎನಿಸಿಕೊಳ್ಳುವ ಏಕಮಾತ್ರ ವಿಶಿಷ್ಟತೆಯನ್ನು ಹೊಂದಿದ್ದಾರೆ.
ಸಾಮಾಜಿಕ ಸ್ಥಾನಮಾನ
ಬದಲಾಯಿಸಿಭಾರತದಲ್ಲಿನ ಇತರ ಎಲ್ಲಾ ಜಾತಿಗಳ ಪೈಕಿ, ಕಾಯಸ್ಥರು ಇತರ ಜಾತಿಗಳೊಂದಿಗೆ ಸುಲಭವಾಗಿ ಬೆರೆಯುವ ಜಾತಿ ಎನಿಸಿಕೊಂಡಿದ್ದಾರೆ. ಮುಸ್ಲಿಮರು ಭಾರತಕ್ಕೆ ಬಂದಾಗ ಅವರು ಮಾಡಿದ್ದು ಇದನ್ನೇ. ಇದೇ ರೀತಿಯ ಆಧುನಿಕ ಉದಾಹರಣೆಗಳನ್ನು ನೀಡಬೇಕೆಂದರೆ, ಭಾರತದಿಂದ ಆಚೆಯಿರುವ ಕಾಯಸ್ಥರು ತಮ್ಮ ತಮ್ಮಲ್ಲೇ ಬೆರೆಯುವುದಕ್ಕಿಂತ ಹೆಚ್ಚಾಗಿ ಇತರ ಜಾತಿಗಳೊಂದಿಗೆ ಬೆರೆಯುತ್ತಾರೆ. ಈ ವಿಶ್ವಮಾನವ ದೃಷ್ಟಿಕೋನವು ಈ ಜಾತಿಯ ಸದಸ್ಯರನ್ನು ಪ್ರತ್ಯೇಕವಾಗಿರಿಸುತ್ತದೆ, ಮತ್ತು ಶಿಕ್ಷಣಕ್ಕೆ ನೀಡಲಾದ ಅಪ್ರತಿಮ ಮಹತ್ವದ ಜೊತೆಗೆ, ಬದಲಾಗುತ್ತಿರುವ ಕಾಲದಲ್ಲಿನ ಅವರ ಯಶಸ್ಸಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಹಾಸ್ಯಪ್ರಜ್ಞೆ
ಬದಲಾಯಿಸಿಕಾಯಸ್ಥರು ತಮ್ಮ ಹಾಸ್ಯಪ್ರಜ್ಞೆ ಮತ್ತು ಬುದ್ಧಿ-ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಕಾರಣವೇನೇ ಇರಲಿ, ಒಂದು ಉತ್ತಮ ಅಭಿರುಚಿಯ ನಗುವಿಲ್ಲದೆ ಕಾಯಸ್ಥರು ಹಾಗೇ ಸುಮ್ಮನೇ ಇರಲಾರರು. ತಮಾಷೆಯ ಸ್ವಭಾವದ ಅನೇಕ ಜನರು ಹಾಗೂ ವಿದೂಷಕರನ್ನು ತೀರಾ ಹತ್ತಿರದಿಂದ ಅವಲೋಕಿಸಿದಾಗ, ಹೆಚ್ಚಿನ ಸಂದರ್ಭಗಳಲ್ಲಿ ಅವರು ಕಾಯಸ್ಥರಾಗಿರುವುದು ಕಂಡುಬರುತ್ತದೆ. ಇತರರು ಅವರನ್ನು ತಮ್ಮ ದ್ವೇಷದ ವಸ್ತುವಾಗಿ ಕಾಣುತ್ತಾರೆ. UP ಮತ್ತು ಬಿಹಾರದಲ್ಲಿ 'ಲಾಲಾಜಿ ನಗೆಹನಿಗಳು' ಎಂದೇ ಚಿರಪರಿಚಿತವಾಗಿರುವ ನಗೆಹನಿಗಳ ಒಂದು ಸರಣಿಗೆ ಕಾಯಸ್ಥರು ವಸ್ತು-ವಿಷಯವಾಗಿದ್ದಾರೆ. ಪಂಜಾಬ್ ಮತ್ತು NCRಗಿಂತ ಭಿನ್ನವಾಗಿ, "ಲಾಲಾಜಿ" ಎಂಬ ಪದವು UP ಹಾಗೂ ಬಿಹಾರದಲ್ಲಿರುವ ಕಾಯಸ್ಥರಿಗಾಗಿ ಪ್ರತ್ಯೇಕವಾಗಿ ಬಳಸಲ್ಪಡುತ್ತದೆ. ತೀಕ್ಷ್ಣವಾದ ಬುದ್ಧಿ-ಚಾತುರ್ಯ, ಗಮನಸೆಳೆಯುವಲ್ಲಿನ ಎಂದಿಗೂ ಹಸಿದಿರುವ ಬಯಕೆ ಮತ್ತು ಹಿಂಸೆಯಿಂದ ಸಂಪೂರ್ಣವಾಗಿ ದೂರವುಳಿದಿರುವುದು ಇವುಗಳಿಂದ ಲಾಲಾಜಿಯ ಪಾತ್ರವು ನಿರೂಪಿಸಲ್ಪಟ್ಟಿದೆ. ಗುಪ್ತ, ಪಾಂಡೆ, ಗಜೋಧರ್‌ನಂಥ ಇತರ ಪಾತ್ರಗಳನ್ನೂ ಸಹ ಲಾಲಾಜಿಯ ನಗೆಹನಿಗಳು ಸಾಮಾನ್ಯವಾಗಿ ಒಳಗೊಂಡಿರುತ್ತವೆ. ಕಾರಣಗಳೇನೇ ಇರಲಿ, ಕಾಗೆಯು ಹಲವು ವೇಳೆ ಇಂಥ ನಗೆಹನಿಗಳಲ್ಲಿ ಸೇರಿಕೊಂಡಿರುತ್ತದೆ.
ಉದಾಹರಣೆಗೆ:
ಲಾಲಾಜಿಯು ಒಂದು ಹಳ್ಳದೊಳಗೆ ಬೀಳುತ್ತಾನೆ. ಪಕ್ಕದಲ್ಲೇ ಹಾದುಹೋಗುತ್ತಿದ್ದ ಗುಪ್ತ ಲಾಲಾಜಿಯನ್ನು ಕಂಡು ಕೇಳುತ್ತಾನೆ: "ಲಾಲಾಜಿ ಹಾತ್ ದೀಜಿಯೇ"(ನನಗೆ ನಿಮ್ಮ ಕೈಯನ್ನು ನೀಡಿ). ಲಾಲಾಜಿಯು ಸುಮ್ಮನೇ ನಿಲ್ಲುತ್ತಾನೆ.
ಆಗ ಅಲ್ಲಿಗೆ ಬರುವ ಪಾಂಡೆ ಹೇಳುತ್ತಾನೆ: "ಅರೇ ಗುಪ್ತ, ಹಾತ್ ದೀಜಿಯೇ ನಹೀ ಹಾತ್ ಲೀಜಿಯೇ ಬೋಲೋ"(ತನ್ನ ಕೈಯನ್ನು ನೀಡುವಂತೆ ಅವನನ್ನು ಕೇಳಬೇಡ, ನಿನ್ನ ಕೈಯನ್ನು ತೆಗೆದುಕೊಳ್ಳಲುಬ ಅವನಿಗೆ ಹೇಳು).
ಮತ್ತೊಂದು:
ಕಾಯಸ್ಥನೊಬ್ಬ ಒಂದು ಕಾಗೆಯನ್ನು ಹಿಡಿದ ಮತ್ತು ಅದರ ಕುತ್ತಿಗೆಯನ್ನು ಕಚ್ಚುವವನಿದ್ದ. 'ನಿನ್ನ ಜಾತಿ ಯಾವುದು' ಎಂದು ಕಾಗೆಯು ಅವನನ್ನು ಕೇಳಿತು. ತುಂಬಾ ಹೊತ್ತು ಯೋಚಿಸಿದ ಕಾಗೆಯು, "ಕಾ_ಯಸ್ಥ್" ಎಂದು ಹೇಳಲು ಇವನು ತನ್ನ ಬಾಯನ್ನು ತೆರೆಯಬೇಕಾಗುತ್ತದೆ ಎಂದು ಭಾವಿಸಿತ್ತು. ಆದರೆ ಕಾಯಸ್ಥ ಹೇಳಿದ: 'ಲಾಲಾ'.
ಇತಿಹಾಸ
ಬದಲಾಯಿಸಿಪ್ರಾಚೀನ ಭಾರತ
ಬದಲಾಯಿಸಿಕಾಯಸ್ಥ ಮಂತ್ರಿಗಳು ಹಿಂದೂ ಪುರಾಣದಲ್ಲಿ ನಮೂದಿಸಲ್ಪಟ್ಟಿದ್ದಾರೆ. ರಘುವಂಶಿಗಳಿಗಿಂತ ಮುಂಚಿತವಾಗಿ, ಅಯೋಧ್ಯಾ ರಾಜ್ಯವು ಚಿತ್ರಗುಪ್ತನ ವಂಶಸ್ಥರಾದ ಮಾಥುರ್ ಆಡಳಿತಗಾರರಿಂದ ಆಳಲ್ಪಡುತ್ತಿತ್ತು.
"ಕಾಯಥ್" ಅಥವಾ ವರ್ತಮಾನ ಕಾಲದ ಬರಹಗಾರರ ಆನುವಂಶಿಕ ಜಾತಿಯಿಂದ ಪ್ರತಿನಿಧಿಸಲ್ಪಟ್ಟಿರುವ ಕಾಯಸ್ಥರು ಮೂಲತಃ ಒಂದು ಉಪ-ಸೇನಾವರ್ಗವನ್ನು ರೂಪಿಸಿದರು.[13] ಭಾರತದ ಮಾನವಚರಿತ್ರೆಯ ಸಮೀಕ್ಷಾ ಇಲಾಖೆಯು ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಕೈಗೊಂಡ ಒಂದು ಸಮೀಕ್ಷೆಯು ತೀರ್ಮಾನಕ್ಕೆ ಬಂದ ಪ್ರಕಾರ, ಮೌರ್ಯರ ಅವಧಿಯಲ್ಲಿ ಕಾಯಸ್ಥ ಸಮುದಾಯದ ಜನರು ಆಡಳಿತಗಾರರಾಗಿಯೂ ಕೂಡ ಪ್ರಭಾವಿಗಳಾಗಿದ್ದರು. ಅಷ್ಟೇ ಅಲ್ಲ, ಹಿಂದೂ ರಾಜರು ಕಾಯಸ್ಥರಿಗೆ ಜಮೀನುಗಳನ್ನು ಮಂಜೂರುಮಾಡುತ್ತಿದ್ದರು ಎಂಬುದಕ್ಕೆ ಅನೇಕ ಪುರಾವೆಗಳು ಕಂಡುಬಂದಿವೆ. ಇದು ಕೇವಲ ಒಂದು ನಿರ್ದಿಷ್ಟ ಜಾತಿಯಿಂದ ಅನುಭವಿಸಲ್ಪಡುತ್ತಿದ್ದ ಆಚರಣಾ ವ್ಯವಸ್ಥೆಯಾಗಿತ್ತು. ಮೇಲಾಗಿ, ಹಿಂದೂ ರಾಜರ ಆಳ್ವಿಕೆಯಡಿಯಲ್ಲಿ ಸಂಸ್ಕೃತವು ಸಂಸ್ಥಾನದ ಭಾಷೆಯಾಗಿದ್ದಾಗ ಕಾಯಸ್ಥರಿಗೆ ಈ ಬಗೆಯ ಸ್ಥಾನಮಾನ ದೊರೆತಿದ್ದು ತಾರ್ಕಿಕವಾಗಿಯೇ ಕಾಣುತ್ತದೆ.
ಸುಮಾರು ೭ನೇ ಶತಮಾನದಲ್ಲಿ [೧೪] ಕಾಶ್ಮೀರಿ ರಾಜಕೀಯ ವಲಯದಲ್ಲಿ ಕಾಯಸ್ಥರು ಅತ್ಯಂತ ಪ್ರಭಾವಿ ಜಾತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದರು (ಉಲ್ಲೇಖ: ರಾಜತರಂಗಿಣಿ).ಕಾಯಸ್ಥರು ರಾಜರಾಗಿ, ವಿತ್ತಪರಿಣಿತರಾಗಿ ಮತ್ತು ಸಲಹೆಗಾರರಾಗಿದ್ದರೆಂದು ವಿವರಿಸಲ್ಪಟ್ಟಿರುವುದನ್ನು ಈ ಸಾಹಿತ್ಯ ಮತ್ತು ಸಮಕಾಲೀನ ಸಂಸ್ಕೃತ ಸಾಹಿತ್ಯದಲ್ಲಿ ನಾವು ಕಾಣಬಹುದು. ಕಾಶ್ಮೀರದ ಕಾಯಸ್ಥ ರಾಜವಂಶದ ಪೈಕಿ ಲಲಿತಾದಿತ್ಯ ಮುಕ್ತಪೀಡಾ ಎಂಬಾತ ಓರ್ವ ವೈಭವಪೂರ್ಣ ರಾಜನಾಗಿದ್ದ.
ಪ್ರಾಚೀನ ಅವಧಿಯ ಬಹುಭಾಗದ ಅವಧಿಯಲ್ಲಿ ಕಾಯಸ್ಥರಿಂದ ಬಳಸಲ್ಪಟ್ಟಿರುವ ಹಲವಾರು ಹಸ್ತಾಕ್ಷರಗಳಿಗೆ ಸಂಬಂಧಿಸಿದಂತೆ ಕೇವಲ ಪಾಠವನ್ನು ಊಹಿಸಬಹುದು. ಆದರೆ ಬ್ರಾಹ್ಮಿ ಲಿಪಿಯು ನಿಸ್ಸಂಶಯವಾಗಿ ವ್ಯಾಪಕವಾಗಿ ಬಳಕೆಯಲ್ಲಿತ್ತು ಮತ್ತು ಸ್ವತಃ ಭಗವಾನ್ ಚಿತ್ರಗುಪ್ತನಿಂದ ನೀಡಲ್ಪಟ್ಟಿರುವಂತೆ ಈ ಲಿಪಿಯು ವೇದಗಳ ಲಿಪಿಯಾಗಿಯೂ ಅನೇಕಬಾರಿ ಮೆಚ್ಚುಗೆಗೆ ಒಳಗಾಗಿತ್ತು.
ಇಸ್ಲಾಮಿಕ್ ಮತ್ತು ಸ್ವಾತಂತ್ರ್ಯಪೂರ್ವ ಭಾರತ
ಬದಲಾಯಿಸಿಕಲಿಯುವಿಕೆ ಮತ್ತು ಸಮಾಜೋ-ಆರ್ಥಿಕ ಸ್ಥಾನಮಾನ ಈ ಎರಡಕ್ಕೂ ಸಂಬಂಧಿಸಿದಂತೆ ಕಾಯಸ್ಥ ಜಾತಿಯು ಹೊಂದಿದ್ದ ಆಕರ್ಷಣೆ ಅಥವಾ ಒಲವು, ಭಾರತದಲ್ಲಿ ಭಿನ್ನಭಿನ್ನವಾದ ಸಾಮ್ರಾಜ್ಯಗಳು ಸ್ಥಾಪನೆಯಾಗಿದ್ದರಿಂದ ಕಂಡುಬಂದ ಬದಲಾಗುತ್ತಿದ್ದ ಆಡಳಿತಾತ್ಮಕ ಕಾರ್ಯನೀತಿಗಳು ಹಾಗೂ ಅಧಿಕೃತ ಭಾಷೆಗಳಲ್ಲಿ ಸದರಿ ಸಮುದಾಯವು ಪರಿಣತಿಯನ್ನು ಬೆಳೆಸಿಕೊಳ್ಳುವಲ್ಲಿ ಅವಕಾಶ ಮಾಡಿಕೊಟ್ಟಿತು ಮತ್ತು ನಿರ್ದೇಶಿಸಿತು. ಪರ್ಷಿಯನ್, ಟರ್ಕಿಷ್, ಅರೇಬಿಕ್ ಮತ್ತು ನಂತರದಲ್ಲಿ ಇಸ್ಲಾಮಿಕ್ ಭಾರತದಲ್ಲಿನ ಉರ್ದುವಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳನ್ನು ಈ ಸಮುದಾಯವು ಕಲಿತುಕೊಂಡಿತು ಮತ್ತು ರೂಪಿಸಿತು. ಮುಖ್ಯವಾಗಿ, ಈ ಸಮುದಾಯವು ಹಣಕಾಸು ನೀತಿ, ನ್ಯಾಯಶಾಸ್ತ್ರ ಹಾಗೂ ತೆರಿಗೆ ವಿಧಿಸುವಿಕೆಯ ವಿಷಯಗಳಲ್ಲಿ ಸಾಮ್ರಾಜ್ಯ-ವ್ಯಾಪಿ ಆಡಳಿತಾತ್ಮಕ ಪರಿಪಾಠಗಳನ್ನು ಸೃಷ್ಟಿಸಿತು, ನಿರ್ವಹಿಸಿತು ಮತ್ತು ಅಭಿವೃದ್ಧಿಪಡಿಸಿತು.
ಪರ್ಸೋ-ಅರೇಬಿಕ್ ಲಿಪಿಯು ಈ ಅವಧಿಯ ಸಮಯದಲ್ಲಿ ಪ್ರಮುಖವಾಗಿ ಬಳಸಲ್ಪಟ್ಟ ಲಿಪಿಯಾಗಿತ್ತು.
ಗಮನಾರ್ಹವಾದ ಉದಾಹರಣೆಗಳಲ್ಲಿ ರಾಜಾ ತೋದರರ ಮಲ್[೧೫] ಸೇರಿದ್ದಾನೆ. ಈತ 'ಭಾಗವತ ಪುರಾಣ'ವನ್ನು ಪರ್ಷಿಯಾ ಭಾಷೆಗೆ[೧೬] ಅನುವಾದಿಸಿದ. ಮುಘಲ್ ಸಾಮ್ರಾಜ್ಯದ[೧೭] ಅವಧಿಯಲ್ಲಿ 'ಕಂದಾಯ ಪದ್ಧತಿ'ಯನ್ನು ಸಂಸ್ಥಾಪಿಸಿ ಅದಕ್ಕೊಂದು ಸೂಕ್ತವಾದ ಆಕಾರವನ್ನು ಕೊಟ್ಟ ಅಕ್ಬರ್ ಸಾಮ್ರಾಟನ ಆಸ್ಥಾನದಲ್ಲಿದ್ದ 'ನವರತ್ನಗಳ' ಪೈಕಿ ರಾಜಾ ತೋದರಮಲ್ ಒಬ್ಬನಾಗಿದ್ದ.
ಈ ಬಗೆಯ ಪಾತ್ರನಿರ್ವಹಣೆಗಳು ಇಷ್ಟಕ್ಕೇ ನಿಲ್ಲದೇ ವಸಾಹತು ಯುಗಕ್ಕೂ ಮುಂದುವರಿಯಿತು. ಈ ಅವಧಿಯಲ್ಲಿ ಅನೇಕ ಕಾಯಸ್ಥರು ಇಂಗ್ಲಿಷ್ ಭಾಷೆಯನ್ನು ಕಲಿಯುವಲ್ಲಿ ಮೊದಲಿಗರೆನಿಸಿಕೊಂಡಿದ್ದೇ ಅಲ್ಲದೇ, ನಾಗರಿಕ ನೌಕರರು, ತೆರಿಗೆ ಅಧಿಕಾರಿಗಳು, ಕಿರಿಯ ಆಡಳಿತಾಧಿಕಾರಿಗಳು, ಶಿಕ್ಷಕರು, ಕಾನೂನು ಸಹಾಯಕರು ಮತ್ತು ನ್ಯಾಯವಾದಿಗಳಾಗುವಲ್ಲಿಯೂ ಮೊದಲಿಗರೆನಿಸಿಕೊಂಡರು. ಈ ಕಾಲದ ಅವಧಿಯಲ್ಲಿ, ಕಾಯಸ್ಥ ಸಮುದಾಯದ ಸದಸ್ಯರು (ಇತರ ಸಮುದಾಯಗಳಿಗಿಂತ ಹೆಚ್ಚಾಗಿ) ಇಂಗ್ಲಂಡ್‌ನಲ್ಲಿ ಶೈಕ್ಷಣಿಕ ತರಬೇತಿಯನ್ನು ಪಡೆಯಲು ಮುಂದಾದರು ಮತ್ತು ಬ್ರಿಟಿಷ್ ಭಾರತದಲ್ಲಿನ ಸ್ಥಳೀಕರಿಗೆ ತಲುಪಲು ಸಾಧ್ಯವಾಗಿದ್ದ ಉನ್ನತಮಟ್ಟದ ಸ್ಥಾನಮಾನಗಳಿಗೆ ಅನೇಕ ಸಂದರ್ಭಗಳಲ್ಲಿ ಏರಿದರು. ವಿದೇಶಗಳಲ್ಲಿದ್ದ ಭಾರತೀಯ ವಿದ್ಯಾರ್ಥಿಗಳ ಪೈಕಿ ಅವರ ಪಾಲು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಇದ್ದುದರ ಪರಿಣಾಮವಾಗಿ, ಮತ್ತು ಜನಾಂಗದ ಸ್ಥಾನಮಾನದ ಕಾರಣದಿಂದಾಗಿ ಅನೇಕರು ಮುನ್ನಡೆಯ ತುತ್ತತುದಿಯನ್ನು ಏರಿದ್ದರಿಂದಾಗಿ, ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆಯನ್ನು ಪ್ರಶ್ನಿಸಿದ ಆರಂಭಿಕ ರಾಜಕೀಯ ಗುಂಪುಗಳಲ್ಲಿ ಸಮುದಾಯದ ಸದಸ್ಯರು ನಿರ್ಣಾಯಕ ಪಾತ್ರಗಳನ್ನು ವಹಿಸಿದರು.
ಈ ಕಾಲದ ಅವಧಿಯಲ್ಲಿ ಕೈಥಿ ಲಿಪಿಯನ್ನು ಬಳಸಲಾಯಿತು. ಸ್ವತಃ ಈ ಲಿಪಿಯ ಹೆಸರೇ ಅದರ ಸೃಷ್ಟಿಕರ್ತರಾದ ಕಾಯಸ್ಥರ ಕುರಿತು ಒಂದು ಅತ್ಯಂತ ಸ್ಪಷ್ಟವಾದ ಉಲ್ಲೇಖವನ್ನು ನೀಡುತ್ತದೆ. ಇದರಿಂದಾಗಿ ಕಾಯಸ್ಥರು ಮಧ್ಯಯುಗದ ಅವಧಿಯಲ್ಲಿ ಅನೇಕ ವೇಳೆ "ಕಾಯಥ್" ಎಂದು ಉಲ್ಲೇಖಿಸಲ್ಪಡುತ್ತಿದ್ದರು. ತಮ್ಮ ಹೆಸರಿನೊಂದಿಗೆ ಸಂಬಂಧವಿರುವ 'ಕೈಥಿ' ಎಂಬ ಲಿಪಿಯನ್ನು ಹೊಂದುವುದರ ಒಂದು ಅನನ್ಯ ವೈಲಕ್ಷಣ್ಯವನ್ನು ಕಾಯಸ್ಥರು ಹೊಂದಿದ್ದಾರೆ. ಕೈಥಿಯು (ಮುಂಚಿತವಾಗಿ ಇದು ಕಾಯತಿ, ಕಾಯಥಿ ಅಥವಾ ಕಾಯಸ್ಥಿ ಎಂದೂ ಪರಿಚಿತವಾಗಿತ್ತು) ದೇವನಾಗರಿಯನ್ನು ಹೋಲುವಂತಿದ್ದು, ಉತ್ತರ ಭಾರತದಲ್ಲಿನ ಕಾಯಸ್ಥರಿಂದ ಮುಖ್ಯವಾಗಿ ಬಳಸಲ್ಪಟ್ಟಿತು. ಈಗ ಇದು ತನ್ನದೇ ಆದ ಯೂನಿಕೋಡ್‌ನ್ನು ಹೊಂದಿದೆ. ಅಷ್ಟೇ ಅಲ್ಲ, ರಾಷ್ಟ್ರೀಯ ಲಿಪಿಯಾಗುವಲ್ಲಿನ ಸ್ಪರ್ಧೆಯಲ್ಲಿ ಈ ಲಿಪಿಯು ಪ್ರಮುಖ ಸ್ಪರ್ಧಿಯಾಗಿತ್ತು, ಆದರೆ ಜನಸಮುದಾಯಕ್ಕೆ ಗೊತ್ತಿಲ್ಲ ಎಂಬ ಕಾರಣಕ್ಕಾಗಿ ಹಿಂದುಳಿಯಬೇಕಾಯಿತು.
ಆಧುನಿಕ ಭಾರತ
ಬದಲಾಯಿಸಿಸ್ವಾತಂತ್ರ್ಯಾನಂತರದ ಭಾರತಕ್ಕೆ ತಮ್ಮನ್ನು ಹೊಂದಿಸಿಕೊಳ್ಳುವಲ್ಲಿ ಅನೇಕ ಕಾಯಸ್ಥರು ಯಶಸ್ಸನ್ನು ಕಂಡರು. ನಾಗರಿಕ ನೌಕರರು, ಅಧಿಕಾರಿಶಾಹಿ ವ್ಯವಸ್ಥೆಯಲ್ಲಿನ ಅಧಿಕಾರಿಗಳು ಮತ್ತು ವಕೀಲರಾಗಿ ಮಾರ್ಪಡುವಲ್ಲಿನ ಅವರ ಸಾಧನೆಯು ಇದಕ್ಕೆ ಸಾಕ್ಷಿಯಾಗಿತ್ತು. ಉನ್ನತ ಶಿಕ್ಷಣದ ವಲಯದೊಂದಿಗೆ ಈ ಸಮುದಾಯವು ಹೊಂದಿದ್ದ ಸಾಂಪ್ರದಾಯಿಕ ಸಂಬಂಧವೂ ಸಹ ೧೯೭೦ರ ಮತ್ತು ೧೯೮೦ರ ದಶಕಗಳಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಸಮುದಾಯವು ದೊಡ್ಡ ಪ್ರಮಾಣದಲ್ಲಿ ವಲಸೆಹೋಗಲು ಕಾರಣವಾಯಿತು. ಸಮುದಾಯದ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಅವಕಾಶಗಳನ್ನು ಅರಸಿಹೊರಟಿದ್ದು ಇದಕ್ಕೆ ಕಾರಣವಾಯಿತು. ಗಮನಾರ್ಹವಾದ ಉದಾಹರಣೆಗಳಲ್ಲಿ ಇವರು ಸೇರಿದ್ದಾರೆ: ಮೊಟ್ಟಮೊದಲ ಭಾರತದ ರಾಷ್ಟ್ರಪತಿಯಾದ Dr. ರಾಜೇಂದ್ರ ಪ್ರಸಾದ್, ಮೂರನೇ ಪ್ರಧಾನ ಮಂತ್ರಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ, ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರಾದ ಸ್ವಾಮಿ ವಿವೇಕಾನಂದ, ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಷ್ ಚಂದ್ರ ಬೋಸ್ ಮತ್ತು ಚಲನಚಿತ್ರ-ತಾರೆ ಅಮಿತಾಬ್ ಬಚ್ಚನ್.
ಪ್ರಖ್ಯಾತ ವ್ಯಕ್ತಿಗಳು
ಬದಲಾಯಿಸಿಡಾ. ರಾಜೇಂದ್ರ ಪ್ರಸಾದ್ ಭಾರತ ಗಣರಾಜ್ಯದ ಮೊಟ್ಟಮೊದಲ ರಾಷ್ಟ್ರಪತಿ ಎನಿಸಿಕೊಂಡರು.ಡಾ. ಗಣೇಶ್ ಪ್ರಸಾದ್ [೧೮] (U.P.ಯ ಬಲ್ಲಿಯಾ ಎಂಬಲ್ಲಿ ೧೮೭೬ರ ನವೆಂಬರ್ ೧೫ರಂದು ಜನನ) ಒಂದು ಅನುಕೂಲಸ್ಥ ಕಾಯಸ್ಥ್ ಕುಟುಂಬಕ್ಕೆ ಸೇರಿದವರಾಗಿದ್ದರು. ಡಾ. ಸಂಪೂರ್ಣಾನಂದ ಎಂಬುವವರು ಒಂದು ಸಾಹಿತ್ಯಿಕ ವ್ಯಕ್ತಿಯಾಗಿರುವುದರ ಜೊತೆಗೆ, U.P.ಯ ಮೊದಲ ಮುಖ್ಯಮಂತ್ರಿ ಮತ್ತು ರಾಜಾಸ್ತಾನದ ರಾಜ್ಯಪಾಲರಾಗಿದ್ದರು. ಜಯಪ್ರಕಾಶ್ ನಾರಾಯಣ್‌ರವರು ಇಂದಿರಾಗಾಂಧಿಯವರನ್ನು ಕೆಳಗಿಳಿಸಿದರು, ಸುಭಾಸ್ ಚಂದ್ರ ಬೋಸ್‌ರವರು ಸೈನ್ಯಯೋಗ್ಯ ರೀತಿಯಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದರು. ಶಾಂತಿ ಸ್ವರೂಪ್ ಭಟ್ನಾಗರ್, ಸತ್ಯೇಂದ್ರ ನಾಥ್ ಬೋಸ್ ಮತ್ತು ಜಗದೀಶ್ ಚಂದ್ರ ಬೋಸ್ ಮೊದಲಾದವರು ಪ್ರಸಿದ್ಧ ವಿಜ್ಞಾನಿಗಳಾಗಿದ್ದರು. ಮುನ್ಷಿ ಪ್ರೇಮ್ ಚಂದ್, ಹರಿವಂಶ್ ರಾಯ್ ಬಚ್ಚನ್, ಓರ್ವ ಸ್ವಾತಂತ್ರ್ಯ ಹೋರಾಟಗಾರರಾದ ಸತ್ಯೇಂದ್ರ ಚಂದ್ರ ಮಿತ್ರ, ರಘುಪತಿ ಸಹಾಯ್ "ಫಿರಾಕಿ" ಗೋರಖ್‌ಪುರಿ, ಡಾ. ವೃಂದಾವನ್ ಲಾಲ್ ವರ್ಮಾ, ಡಾ. ರಾಮ್ ಕುಮಾರ್ ವರ್ಮಾ, ಮಹಾದೇವಿ ವರ್ಮಾ, ಕಮಲಾ ಚೌಧರಿ, ಡಾ. ಧರಮ್ ವೀರ್ ಭಾರತಿ ಮತ್ತು ಭಗವತಿ ಚರಣ್ ವರ್ಮಾ ಇವರೇ ಮೊದಲಾದವರು ಪ್ರಖ್ಯಾತ ಸಾಹಿತಿಗಳಾಗಿದ್ದರು. ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಮಹೇಶ್ ಯೋಗಿಯವರು ದಾರ್ಶನಿಕರಾಗಿದ್ದರು. ಅಲಕ್ ಕುಮಾರ್ ಸಿನ್ಹಾ ಭಾರತದ ಮೊಟ್ಟಮೊದಲ ಆರಕ್ಷಕ ಪ್ರಧಾನ-ಇನ್ಸ್‌ಪೆಕ್ಟರ್ ಆಗಿದ್ದರು.[೧೯]S.K. ಸಿನ್ಹಾ, PVSM, ನೇಪಾಳಕ್ಕೆ ಭಾರತದ ರಾಯಭಾರಿಯಾಗಿ, ಅಸ್ಸಾಂನ ರಾಜ್ಯಪಾಲರಾಗಿ ಹಾಗೂ ಜಮ್ಮು & ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.[೨೦] ಅಮಿತಾಬ್ ಬಚ್ಚನ್ ಹಾಗೂ ಶತ್ರುಘನ್ ಸಿನ್ಹಾರಂಥ ಕಲಾವಿದರು ಚಲನಚಿತ್ರ ಪ್ರಪಂಚದಲ್ಲಿ ಉತ್ಕೃಷ್ಟತೆಯನ್ನು ಮೆರೆದಿದ್ದಾರೆ; ರಾಜು ಶ್ರೀವಾಸ್ತವ ಹಾಸ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ; ಮುಕೇಶ್, ಸೋನು ನಿಗಮ್ ಸಂಗೀತ ಪ್ರಪಂಚದಲ್ಲಿ ಪ್ರಸಿದ್ಧರಾಗಿದ್ದಾರೆ. ನಿರ್ಮಲ ಶ್ರೀವಾಸ್ತವ (ಈಕೆ ಶ್ರೀ ಮಾತಾಜಿ ನಿರ್ಮಲಾ ದೇವಿ ಎಂದು ಪ್ರಸಿದ್ಧರು) ಒಂದು ಹೊಸ ಧಾರ್ಮಿಕ ಆಂದೋಲನವಾದ ಸಹಜ ಯೋಗದ ಸಂಸ್ಥಾಪಕಿಯಾಗಿದ್ದಾರೆ. ಅಂಬರೀಶ್ ಶ್ರೀವಾಸ್ತವ[೨೧] ಓರ್ವ ಪ್ರಖ್ಯಾತ ವಾಸ್ತುಶಿಲ್ಪೀಯ ಎಂಜಿನಿಯರ್ ಅಷ್ಟೇ ಅಲ್ಲದೇ ಓರ್ವ ಪ್ರಖ್ಯಾತ ಕವಿಯಾಗಿದ್ದಾರೆ[೨೨]; Q&A (ಈ ಕೃತಿಯನ್ನು ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರವಾದ "ಸ್ಲಂಡಾಗ್ ಮಿಲಿಯನೇರ್" ಆಗಿ ರೂಪಾಂತರಿಸಲಾಯಿತು) ಹಾಗೂ ಸಿಕ್ಸ್ ಸಸ್ಪೆಕ್ಟ್ಸ್‌ನ ಲೇಖಕರಾದ ವಿಕಾಸ್ ಸ್ವರೂಪ್ ವೃತ್ತಿಪರ ಭಾರತೀಯ ರಾಜತಾಂತ್ರಿಕರಾಗಿದ್ದು, ಅಲಹಾಬಾದ್‌ನ ಒಂದು ಪ್ರಖ್ಯಾತ ಕಾಯಸ್ಥ ಕುಟುಂಬದಿಂದ ಬಂದವರಾಗಿದ್ದಾರೆ. ೨೦ನೇ ಶತಮಾನದ ಕೆಲವೊಂದು ಪ್ರಭಾವೀ ಹಾಗೂ ಉದಾರವಾದಿ ಕಾಯಸ್ಥ ದೇವ-ಮಾನವರಲ್ಲಿ, ಸ್ವಾಮಿ ಪ್ರಭುಪಾದ(ಹರೇ ಕೃಷ್ಣ ಆಂದೋಲನ-ISKCON), ಮಹರ್ಷಿ ಮಹೇಶ್ ಯೋಗಿ(ಅತೀಂದ್ರಿಯ ಧ್ಯಾನ), ಶ್ರೀ ಅರಬಿಂದೋ(ಸಮಗ್ರ ಯೋಗ), ಪರಮಹಂಸ ಯೋಗಾನಂದ('ಆಟೋಬಯಾಗ್ರಫಿ ಆಫ್ ಎ ಯೋಗಿ' ಖ್ಯಾತಿ ಮತ್ತು ಕ್ರಿಯಾ ಯೋಗ) ಮತ್ತು ಸ್ವಾಮಿ ವಿವೇಕಾನಂದ(ವೇದಾಂತ) ಮೊದಲಾದವರು ಸೇರಿದ್ದಾರೆ.
ಆಕರಗಳು
ಬದಲಾಯಿಸಿ- ↑ "ಕಸ್ಟಮ್ಸ್ ಆಫ್ ದಿ ಕಾಯಸ್ಥ: ಶ್ರೀ ಚಿತ್ರಗುಪ್ತ ಪೂಜಾ ಅಂಡ್ ರಿಲೇಟೆಡ್ ಲೆಜೆಂಡ್". Archived from the original on 2010-07-10. Retrieved 2010-05-25.
- ↑ ೨.೦ ೨.೧ ೨.೨ Vepachedu, Sreenivasarao. "Brahmins". vedah.net. Retrieved 2009-07-18.
- ↑ ೩.೦ ೩.೧ ೩.೨ Kamat, Vikas (April 01,2003). "A List of Brahmin Communities". kamat.com. Retrieved 2009-07-18.
{{cite web}}
: Check date values in:|date=
(help) - ↑ ೪.೦ ೪.೧ Hindunet.orgನಲ್ಲಿರುವ ಸಂಸ್ಕೃತ ನಿಘಂಟು
- ↑ [೧] ಎಥ್ನೋಗ್ರಾಫಿಕಲ್ ನೋಟ್ಸ್ ಆನ್ ಚಂದ್ರಸೇನೀಯ ಕಾಯಸ್ಥ ಪ್ರಭು], ಚಂದ್ರಸೇನೀಯ ಕಾಯಸ್ಥ ಪ್ರಭು ಸೋಷಿಯಲ್ ಕ್ಲಬ್, ಪೂನಾ. ೧೯೦೪.
- ↑ M.A. ಸ್ಟೀನ್ ಬರೆದಿರುವ, ಕಲೋನಿಯಲ್ ಟ್ರಾನ್ಸ್‌ಲೇಷನ್ ಆಫ್ ಕಲ್ಹಣಾ'ಸ್ ರಾಜತರಂಗಿಣಿ: ಎ ಕ್ರಾನಿಕಲ್ ಆಫ್ ದಿ ಕಿಂಗ್ಸ್ ಆಫ್ ಕಾಶ್ಮೀರ್. ವಾರ್ನಿಂಗ್: ಹೈಲೀ ನೆಗಟಿವ್ ಟ್ರೀಟ್‌ಮೆಂಟ್ ಆಫ್ ದಿ ಕ್ಯಾರೆಕ್ಟರ್ ಆಫ್ ಕಾಯಸ್ಥಾಸ್.
- ↑ "ದಿ ಗ್ರೇಟ್ ಡಿವೈಡ್: ಬಿಟ್ವೀನ್ ದಿ ಕಾಯಸ್ಥಾಸ್ ಅಂಡ್ ದಿ ಕಾಶ್ಮೀರಿ ಪಂಡಿತ್ಸ್". Archived from the original on 2010-02-19. Retrieved 2010-05-25.
- ↑ ಕಾಯಸ್ಥ ಸಂಶೋಧನಾ ವಿಭಾಗದಿಂದ ಮಾಡಲಾದ ವ್ಯಾಪಕ ಅಧ್ಯಯನ http://chitraguptvanshi.wetpaint.com Archived 2010-07-11 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Sanskrit Dictionary at Hindunet.org". Hindunet.org. Retrieved 2009-07-18.
- ↑ ಋಗ್ವೇದ ಪುಸ್ತಕ ೮/ ಸ್ತೋತ್ರ ೨೧/ ಶ್ಲೋಕ ೧೮
- ↑ "ಹಿಂದಿಯಲ್ಲಿರುವ ಭಗವಾನ್ ಚಿತ್ರಗುಪ್ತ ವ್ರತಕಥೆಯ ಐತಿಹ್ಯ". Archived from the original on 2010-07-12. Retrieved 2010-05-25.
- ↑ ಇಟಾವಾದ ಮದನ್‌ಲಾಲ್ ತಿವಾರಿ ಬರೆದಿರುವ ಮದನ್ ಕೋಶ್ , ಪುಟ ೨೨೦
- ↑ ಶೇಖರ ಕುಲಶ್ರೇಷ್ಠ
- ↑ ಕಲ್ಹಣನ ರಾಜತರಂಗಿಣಿಯ ನೆಲಸುನಾಡಿನ ಅನುವಾದ
- ↑ "Kayastha". Archived from the original on 30 ನವೆಂಬರ್ 2009. Retrieved 26 February 2010.
- ↑ "Encyclopaedia of Historiography By M.M. Rahman". Archived from the original on 4 ಜನವರಿ 2014. Retrieved 26 February 2010.
- ↑ "Kayasth charitable trust". Archived from the original on 10 ಜುಲೈ 2010. Retrieved 26 February 2010.
- ↑ "ಆರ್ಕೈವ್ ನಕಲು". Archived from the original on 2018-10-25. Retrieved 2010-05-25.
- ↑ "www.a2a.org.uk/search/records.asp?cat=059-msseur_11&cid=11-8-23".[ಶಾಶ್ವತವಾಗಿ ಮಡಿದ ಕೊಂಡಿ]
- ↑ "Jammu & Kashmir government website". Archived from the original on 2010-07-25. Retrieved 2010-05-25.
- ↑ "Ambarish Indira Gamdhi Priyadarshini Award se Sammanit". Dainik Jagran (in Hindi). Lucknow. 2007-12-07. p. 04.
{{cite news}}
: Unknown parameter|trans_title=
ignored (help)CS1 maint: unrecognized language (link) - ↑ . India: Pankhee prakashan Delhi 110032. 2010. p. 18. ISBN 978-81-908347-3-5.
{{cite book}}
: Cite has empty unknown parameter:|Rashtreey Kavi Sangam Nirdeshika 2010=
(help); Missing or empty|title=
(help); Unknown parameter|line=
ignored (help)
- ಋಗ್ವೇದ
- ವ್ಯೋಮ ಸಂಹಿತ
- ಯಮ ಸಂಹಿತ
- ಪದ್ಮ ಪುರಾಣ
- ಭವಿಷ್ಯ ಪುರಾಣ
- ಗರುಡ ಪುರಾಣ
- ವಿಜ್ಞಾನ ತಂತ್ರ
- ಬೃಹತ್ ಬ್ರಹ್ಮ ಕಾಂಡ
- ಆಪಸ್ತಂಭ
- ಮೇರು ತಂತ್ರ
- ಮಹಾಭಾರತ
- ಶೃತಿ
- ಸ್ಮೃತಿ
- ಚಿತ್ರಗುಪ್ತವಂಶಿ ಕಾಯಸ್ಥ ಮತ್ತು ಅವರ ಚಂದ್ರಸೇನೀಯ ಪ್ರಭು ಸೋದರರು
- vedah.net vedah.net
- Kamat.com Kamat.com
- Hindunet.orgನಲ್ಲಿರುವ ಸಂಸ್ಕೃತ ನಿಘಂಟು Hindunet.orgನಲ್ಲಿರುವ ಸಂಸ್ಕೃತ ನಿಘಂಟು
- ಬಿನೋದ್ ಬಿಹಾರಿ ವರ್ಮರವರ ಮೈಥಿಲಿ ಕರಣ ಕಾಯಸ್ಥಕ ಪಾಂಜಿಕ ಸರ್ವೇಕ್ಷಣ, ಮೈಥಿಲಿ ಕರಣ ಕಾಯಸ್ಥರ ಪಾಂಜಿಗಳ ಒಂದು ಸಮೀಕ್ಷೆ.
- R V ರಸ್ಸೆಲ್ (ಜನಾಂಗ ವಿವರಣಾ ವಿಭಾಗದ ಅಧೀಕ್ಷಕ) ಮತ್ತು ರಾಯ್ ಬಹಾದೂರ್ ಹೀರಾಲಾಲ್ ಬರೆದಿರುವ, "ದಿ ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ ಆಫ್ ದಿ ಸೆಂಟ್ರಲ್ ಪ್ರಾವಿನ್ಸಸ್ ಆಫ್ ಇಂಡಿಯಾ: ಸಂಪುಟ III", ಪ್ರಕಾಶಕರು: ಮ್ಯಾಕ್ಮಿಲನ್ ಅಂಡ್ ಕೊ. ಲಿಮಿಟೆಡ್, ಲಂಡನ್, ಪುಟಗಳು ೪೦೪-೪೨೨, ೧೯೧೬ [೩].
- A. ಮಿತ್ರ (ಭಾರತೀಯ ನಾಗರಿಕ ಸೇವೆ, ಜನಗಣತಿ ಕಾರ್ಯಾಚರಣೆಗಳ ಅಧೀಕ್ಷಕ) ಬರೆದಿರುವ, "ದಿ ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ ಆಫ್ ವೆಸ್ಟ್ ಬೆಂಗಾಲ್", ಪ್ರಕಾಶಕರು: ಪಶ್ಚಿಮ ಬಂಗಾಳ ಸರ್ಕಾರಿ ಮುದ್ರಣಾಲಯ, ೧೯೫೪ [೪].
- ಲೂಸಿ ಕರೋಲ್., ಕಲೋನಿಯಲ್ ಪರ್ಸೆಪ್ಷನ್ಸ್ ಆಫ್ ಇಂಡಿಯನ್ ಸೊಸೈಟಿ ಅಂಡ್ ದಿ ಎಮರ್ಜೆನ್ಸ್ ಆಫ್ ಕ್ಯಾಸ್ಟ್ಸ್ ಅಸೋಸಿಯೇಷನ್ಸ್, ದಿ ಜರ್ನಲ್ ಆಫ್ ಏಷ್ಯನ್ ಸ್ಟಡೀಸ್, ಸಂಪುಟ ೩೭, ಸಂಖ್ಯೆ ೨ (ಫೆಬ್ರುವರಿ ೧೯೭೮), ಪುಟಗಳು ೨೩೩–೨೫೦.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಎಲ್ಲಾ ಕಾಯಸ್ಥರಿಗೂ ಮೀಸಲಾದ ಒಂದು ತಂಗುದಾಣ Archived 2016-10-23 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾಯಸ್ಥ ಸಮುದಾಯದ ವಧುಗಳು ಮತ್ತು ವರರನ್ನು ಕುರಿತಾದ ಅತ್ಯಂತ ವ್ಯಾಪಕವಾದ ವೆಬ್ಸೈಟ್ Archived 2010-06-19 ವೇಬ್ಯಾಕ್ ಮೆಷಿನ್ ನಲ್ಲಿ.
- ಉಚಿತ ವೈವಾಹಿಕ ಸೇವೆಗಳಿಗಾಗಿರುವ ಕಾಯಸ್ಥ ಸಮುದಾಯಕ್ಕೆ ಮೀಸಲಾದ ಪ್ರವೇಶದ್ವಾರ
- ಕಾಯಸ್ಥ ಸಮುದಾಯದ ಕುರಿತಾದ ಅತ್ಯಂತ ವ್ಯಾಪಕವಾದ ವೆಬ್ಸೈಟ್
- ಕಾಯಸ್ಥ ಸಮುದಾಯದ ವೈವಾಹಿಕ ಅಗತ್ಯವನ್ನು ಕುರಿತಾದ ಅತ್ಯಂತ ವ್ಯಾಪಕವಾದ ವೆಬ್ಸೈಟ್ Archived 2010-05-12 ವೇಬ್ಯಾಕ್ ಮೆಷಿನ್ ನಲ್ಲಿ.
- ಚಿತ್ರಗುಪ್ತ ಸಮಾಜ, ಯುನೈಟೆಡ್ ಕಿಂಗ್ಡಂ
- Kayastha.India.com Archived 2011-08-02 ವೇಬ್ಯಾಕ್ ಮೆಷಿನ್ ನಲ್ಲಿ.
- vedah.net
- Kamat.com
- Hindunet.orgನಲ್ಲಿರುವ ಸಂಸ್ಕೃತ ನಿಘಂಟು
- Kayastha.in
- ವಿಶ್ವದೆಲ್ಲೆಡೆಯಿಂದ ಸಂಗ್ರಹಿಸಲಾದ ಕಾಯಸ್ಥರ ಮದುವೆಯ ಸಂಕ್ಷಿಪ್ತ ವಿವರ 09350546867(ದೆಹಲಿ, ಭಾರತ)
- ಕಾಯಸ್ಥ ವೈವಾಹಿಕರು ಮತ್ತು ಮದುವೆ Archived 2019-06-13 ವೇಬ್ಯಾಕ್ ಮೆಷಿನ್ ನಲ್ಲಿ.