ಜಾತಿ
ಜಾತಿ ಎಂದರೆ ಸಾಮಾಜಿಕ ವರ್ಗೀಕರಣದ ಒಂದು ರೂಪ, ಒಂದು ರೋಗದ ವಿಷಕಾರಿ ಜಂತದ ಅಸ್ತ್ರವಾಗಿ ತಾಂಡವಾಡುತ್ತಿದೆ.ಅಂತರ್ವಿವಾಹ, ಹಲವುವೇಳೆ ವೃತ್ತಿ, ಶ್ರೇಣಿವ್ಯವಸ್ಥೆಯಲ್ಲಿ ಸ್ಥಾನ, ರೂಢಿಗತ ಪರಸ್ಪರ ಸಾಮಾಜಿಕ ಸಂವಹನ, ಮತ್ತು ಬಹಿಷ್ಕಾರವು ಸೇರಿರುವ ಜೀವನಶೈಲಿಯ ಆನುವಂಶಿಕ ವರ್ಗಾವಣೆ ಇದರ ಲಕ್ಷಣಗಳಾಗಿವೆ. ಜಾತಿಯು ಕಾನೂನಾತ್ಮಕವಾಗಿ ನೆಲೆಗೊಂಡಿರುವ ಸಾಮಾಜಿಕ ವರ್ಗಗಳ ವ್ಯವಸ್ಥೆಯ ಅತಿಯಾದ ವಿಕಸನವಾಗಿದೆ. ಜಾತಿ ವ್ಯವಸ್ಥೆಗಳು ವಿವಿಧ ಪ್ರದೇಶಗಳಲ್ಲಿ ಇವೆಯಾದರೂ, ಕಟ್ಟುನಿಟ್ಟಾದ ಸಾಮಾಜಿಕ ಗುಂಪುಗಳಾಗಿ ಭಾರತೀಯ ಸಮಾಜದ ವಿಭಜನೆಯು ಇದರ ಮಾದರಿ ಜನಾಂಗೀಯ ಉದಾಹರಣೆಯಾಗಿದೆ. ಇದರ ಮೂಲಗಳು ಭಾರತದ ಪ್ರಾಚೀನ ಇತಿಹಾಸದಲ್ಲಿವೆ ಮತ್ತು ಇಂದಿನವರೆಗೂ ಇದೆ. ಕೆಲವೊಮ್ಮೆ ಇದನ್ನು ಭಾರತದ ಹೊರಗಿರುವ ಜಾತಿಯಂತಹ ಸಾಮಾಜಿಕ ವರ್ಗೀಕರಣಗಳ ಅಧ್ಯಯನಕ್ಕಾಗಿ ಸಾದೃಶ್ಯವಾಚಿ ಆಧಾರವಾಗಿ ಬಳಸಲಾಗುತ್ತದೆ. ಆಧುನಿಕ ಭಾರತದ ಜಾತಿ ವ್ಯವಸ್ಥೆಯು ನೈಸರ್ಗಿಕ ಸಾಮಾಜಿಕ ಗುಂಪುಗಳ ಮೇಲೆ ವರ್ಣ ಎಂದು ಕರೆಯಲ್ಪಡುವ ಚತುರ್ಗುಣ ಸೈದ್ಧಾಂತಿಕ ವರ್ಗೀಕರಣದ ಕೃತಕ ಅಧ್ಯಾರೋಪಣವನ್ನು ಆಧರಿಸಿದೆ.
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ವಿಕಿಪೀಡಿಯಾದ ಗುಣಮಟ್ಟದ ಮಾನದಂಡಗಳ ಪ್ರಕಾರ ಈ ಲೇಖನವಿಲ್ಲ. |