ಕಲಾಂಚೋಯಿ ಇದನ್ನು ಕಲಾಂಚೋ ಎಂದೂ ಕರೆಯಲಾಗುತ್ತದೆ. ಇದು ಮಡಗಾಸ್ಕರ್ ಮತ್ತು ಆಫ್ರಿಕಾದ ಸ್ಥಳೀಯ ಕ್ರಾಸ್ಸುಲೇಸಿಯ ಕುಟುಂಬಕ್ಕೆ ಸೇರಿದ ಸುಮಾರು ೧೨೫ ಜಾತಿಯ ಉಷ್ಣವಲಯದ, ರಸಭರಿತ ಸಸ್ಯಗಳ ಒಂದು ಕುಲವಾಗಿದೆ. ಕಲಾಂಚೋಯಿ ಜಾತಿಯು ಬಾಹ್ಯಾಕಾಶಕ್ಕೆ ಕಳುಹಿಸಲಾದ ಮೊದಲ ಸಸ್ಯಗಳಲ್ಲಿ ಒಂದಾಗಿದೆ. ಇದನ್ನು ೧೯೭೯ ರಲ್ಲಿ, ಸೋವಿಯತ್ ಸಲ್ಯೂಟ್ ೧ ಬಾಹ್ಯಾಕಾಶ ನಿಲ್ದಾಣಕ್ಕೆ ಮರುಪೂರೈಕೆಗಾಗಿ ಕಳುಹಿಸಿತ್ತು. ಬಹುಪಾಲು ಕಲಾಂಚೋಯಿ ಸಸ್ಯಗಳಿಗೆ ದಿನಕ್ಕೆ ಸುಮಾರು ೬-೮ ಗಂಟೆಗಳ ಸೂರ್ಯನ ಬೆಳಕು ಬೇಕಾಗುತ್ತದೆ. ಕೆಳವೊಂದು ಸಸ್ಯಗಳು ಪ್ರಕಾಶಮಾನವಾದ ಸೂರ್ಯನ ಬೆಳಕಿನಿಂದ ಬೆಳೆಯುತ್ತವೆ.[]

ಕಲಾಂಚೋಯಿ
ಕಲಾಂಚೋಯಿ ಬ್ಲೋಸ್ಫೆಲ್ಡಿಯಾನಾ
Scientific classification e
Unrecognized taxon (fix): ಕಲಾಂಚೋಯಿ
ಉಪಕುಲ[]
  • ಕಲಾಂಚೋಯಿ
  • ಬ್ರಯೋಫಿಲಮ್ (ಸಾಲಿಸ್ಬ್.) ಕೋಡರ್ಸ್
  • ಕಿಟ್ಚಿಂಗಿಯಾ (ಬೇಕರ್) ಗಿಡಿಯೋನ್, ಎಫ್.ಎಸ್‌ಎಮ್. & ಫಿಗುಯೆರೆಡೊ;
Synonyms

ಬ್ರಯೋಫಿಲಮ್

ವಿವರಣೆ

ಬದಲಾಯಿಸಿ

ಇದರಲ್ಲಿ ಹೆಚ್ಚಿನವು ಪೊದೆಗಳು ಅಥವಾ ದೀರ್ಘಕಾಲಿಕ ಗಿಡಮೂಲಿಕೆ ಸಸ್ಯಗಳಾಗಿವೆ. ಆದರೆ, ಕೆಲವು ವಾರ್ಷಿಕ ಅಥವಾ ದ್ವೈವಾರ್ಷಿಕವಾಗಿವೆ. ಮಡಗಾಸ್ಕರ್‌ನ ಅತ್ಯಂತ ದೊಡ್ಡದಾದ ಕಲಾಂಚೋಯಿ ಬೆಹರೆನ್ಸಿಸ್ ೬ ಮೀ. (೨೦ ಅಡಿ) ಎತ್ತರವನ್ನು ತಲುಪಬಹುದು. ಆದರೆ, ಹೆಚ್ಚಿನ ಜಾತಿಗಳು ೧ ಮೀ. (೩ ಅಡಿ) ಗಿಂತ ಕಡಿಮೆ ಎತ್ತರವನ್ನು1 m (3 ft) ಹೊಂದಿರುತ್ತವೆ.

ಕಲಾಂಚೋಯಿಗಳು ಸಸ್ಯಗಳು ದಳಗಳ ಒಳಗಿನ ಮೇಲ್ಮೈಯಲ್ಲಿ ಹೊಸ ಕೋಶಗಳನ್ನು ಬೆಳೆಸುವ ಮೂಲಕ ಹೂವುಗಳನ್ನು ಹೊರಬಿಡಲು ಮತ್ತು ದಳಗಳ ಹೊರಭಾಗದಲ್ಲಿ ಅವುಗಳನ್ನು ಮುಚ್ಚಲು ಬಳಸುತ್ತದೆ. ಕಲಾಂಚೋಯಿ ಹೂವುಗಳನ್ನು ೮ ಕೇಸರಗಳೊಂದಿಗೆ ೪ ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ದಳಗಳು ಒಂದು ಕೊಳವೆಯೊಳಗೆ ಬೆಳೆಯಲಾಗುತ್ತದೆ. ಇದು ಕೋಟಿಲ್ಡನ್‌ನಂತಹ ಸಂಬಂಧಿತ ಸಸ್ಯಗಳ ಕುಲಕ್ಕೆ ಹೋಲುತ್ತದೆ.[]

ವರ್ಗೀಕರಣ ಶಾಸ್ತ್ರ

ಬದಲಾಯಿಸಿ

೧೭೬೩ ರಲ್ಲಿ, ಫ್ರೆಂಚ್ ಸಸ್ಯಶಾಸ್ತ್ರಜ್ಞರಾದ ಮೈಕೆಲ್ ಅಡಾನ್ಸನ್‌ರವರು ಕಲಾಂಚೋಯಿ ಕುಲವನ್ನು ಮೊದಲು ವಿವರಿಸಿದನು.[]

೧೮೦೬ ರಲ್ಲಿ, ಬ್ರಯೋಫಿಲಮ್ ಕುಲವನ್ನು ಸ್ಯಾಲಿಸ್ಬರಿ‌ಯವರು ವಿವರಿಸಿದರು ಮತ್ತು ೧೮೮೧ ರಲ್ಲಿ, ಕಿಚಿಂಗಿಯಾ ಕುಲವನ್ನು ಬೇಕರ್‌ರವರು ರಚಿಸಿದರು. ಕಿಚಿಂಗಿಯಾ ಸಸ್ಯದ ಕುಲವನ್ನು ಈಗ ಕಲಾಂಚೋಯಿಗೆ ಸಮಾನಾರ್ಥಕವೆಂದು ಪರಿಗಣಿಸಲಾಗಿದೆ. ಆದರೆ, ಬ್ರಯೋಫಿಲಮ್ ಅನ್ನು ಪ್ರತ್ಯೇಕ ಕುಲವಾಗಿಯೂ ಪರಿಗಣಿಸಲಾಗಿದೆ. ಬ್ರಯೋಫಿಲ್ಲಮ್ ಪ್ರಭೇದಗಳು ಕಲಾಂಚೋಯಿನಲ್ಲಿ ಆಣ್ವಿಕ ಫೈಲೋಜೆನೆಟಿಕ್ ವಿಶ್ಲೇಷಣೆಯಲ್ಲಿ ಹೊಂದಿಕೊಳ್ಳುವಂತೆ ಕಂಡುಬರುವುದರಿಂದ, ಬ್ರಯೋಫಿಲಮ್ ಅನ್ನು ಹಿಂದಿನ ವಿಭಾಗವೆಂದು ಪರಿಗಣಿಸಲಾಗುತ್ತದೆ. ಈ ಕುಲವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ: ಕಿಚಿಂಗಿಯಾ, ಬ್ರಯೋಫಿಲ್ಲಮ್ ಮತ್ತು ಯುಕಲಾಂಚೋಯಿ. ಇವುಗಳನ್ನು ಸ್ಮಿತ್ ಮತ್ತು ಫಿಗ್ಯುರೆಡೊ (೨೦೧೮) ಇವರಿಬ್ಬರು ಉಪಕುಲಗಳಾಗಿ ಔಪಚಾರಿಕಗೊಳಿಸಿದ್ದಾರೆ.[][][]

ವ್ಯುತ್ಪತ್ತಿಶಾಸ್ತ್ರ

ಬದಲಾಯಿಸಿ

ಅಡಾನ್ಸನ್ ಅವರು ಜಾರ್ಜ್ ಜೋಸೆಫ್ ಕಮೆಲ್ (ಕ್ಯಾಮೆಲಸ್) ಎಂಬ ಹೆಸರನ್ನು ತಮ್ಮ ಮೂಲವೆಂದು ಉಲ್ಲೇಖಿಸಿದ್ದಾರೆ.[][] ಈ ಹೆಸರು ಕ್ಯಾಂಟೋನೀಸ್ ಹೆಸರಿನಿಂದ ಬಂದಿದೆ 伽藍菜 (ಜ್ಯುಟ್ಪಿಂಗ್: ಗಾ೧ ಲಾಮ್೪ ಕೋಯಿ೩).[೧೦][೧೧]

ಕಲಾಂಚೋಯಿ ಸೆರಾಟೊಫಿಲ್ಲಾ ಮತ್ತು ಕಲಾಂಚೋಯಿ ಲ್ಯಾಸಿನಿಯಾಟಾ ಎರಡನ್ನೂ ಚೀನಾದಲ್ಲಿ 伽蓝菜 (ಸ್ಪಷ್ಟವಾಗಿ "ಬೌದ್ಧ ಮಠ ಸಂಘಾರಾಮ ಮೂಲಿಕೆ") ಎಂದು ಕರೆಯಲಾಗುತ್ತದೆ.[೧೨]

ಆಯ್ಕೆಮಾಡಿದ ಪ್ರಭೇದಗಳ ಪಟ್ಟಿ

ಬದಲಾಯಿಸಿ

ಹೈಬ್ರಿಡ್‌ಗಳ ಪಟ್ಟಿ

ಬದಲಾಯಿಸಿ

ಕಲಾಂಚೋಯಿದಲ್ಲಿನ ಹಲವಾರು ಮಿಶ್ರತಳಿಗಳು:

ವಿತರಣೆ ಮತ್ತು ಪರಿಸರ ವಿಜ್ಞಾನ

ಬದಲಾಯಿಸಿ

ಕಲಾಂಚೋಯಿ ಸಸ್ಯದ ಕುಲವು ಪ್ರಧಾನವಾಗಿ ಹಳೆಯ ಜಗತ್ತಿಗೆ ಸ್ಥಳೀಯವಾಗಿದೆ. ಈ ಸಸ್ಯದ ಕೇವಲ ಒಂದು ಪ್ರಭೇದ ಮಾತ್ರ ಅಮೆರಿಕದಿಂದ ಹುಟ್ಟಿಕೊಂಡಿದೆ. ಇದರ ೫೬ ಪ್ರಭೇದಗಳು ದಕ್ಷಿಣ ಮತ್ತು ಪೂರ್ವ ಆಫ್ರಿಕಾದಲ್ಲಿ ಮತ್ತು ೬೦ ಜಾತಿಗಳು ಮಡಗಾಸ್ಕರ್ ದ್ವೀಪದಲ್ಲಿವೆ ಹಾಗೂ ಆಗ್ನೇಯ ಏಷ್ಯಾ ಮತ್ತು ಚೀನಾದಲ್ಲಿಯೂ ಕಂಡುಬರುತ್ತದೆ.[೧೪]

ಈ ಸಸ್ಯಗಳು ಕೆಂಪು ಪಿಯರ್ರೊಟ್ ಚಿಟ್ಟೆಯ ಮರಿಹುಳುಗಳಿಗೆ ಆಹಾರ ಸಸ್ಯಗಳಾಗಿವೆ. ಚಿಟ್ಟೆ ತನ್ನ ಮೊಟ್ಟೆಗಳನ್ನು ಸಸ್ಯದ ಎಲೆಗಳ ಮೇಲೆ ಇಡುತ್ತದೆ. ಮೊಟ್ಟೆಯೊಡೆದ ನಂತರ, ಮರಿಹುಳುಗಳು ಎಲೆಗಳನ್ನು ಕೊರೆಯುತ್ತವೆ ಮತ್ತು ಅವುಗಳ ಒಳಗಿನ ಜೀವಕೋಶಗಳನ್ನು ತಿನ್ನುತ್ತವೆ.

ಕೃಷಿ ಮತ್ತು ಉಪಯೋಗಗಳು

ಬದಲಾಯಿಸಿ
 
ಗಾಳಿ ಸಸ್ಯದ ಎಲೆಯ ಅಂಚಿನಲ್ಲಿ ಕಲಂಚೋ ಪಿನ್ನಾಟಾ ಎಂಬ ಹೊಸ ಸಸ್ಯಗಳ ಬೆಳವಣಿಗೆಯ ದೃಶ್ಯ. ಮುಂಭಾಗದಲ್ಲಿರುವ ಸಣ್ಣ ಸಸ್ಯವು ಸುಮಾರು ೧ ಸೆಂ.ಮೀ ಎತ್ತರವಿದೆ.

ಈ ಸಸ್ಯಗಳನ್ನು ಅಲಂಕಾರಿಕ ಮನೆಯ ಗಿಡಗಳು, ಕಲ್ಲು ಅಥವಾ ರಸವತ್ತಾದ ಉದ್ಯಾನ ಸಸ್ಯಗಳಾಗಿ ಬೆಳೆಸಲಾಗುತ್ತದೆ. ಅವುಗಳ ಪ್ರಸರಣದ ಸುಲಭತೆ, ಕಡಿಮೆ ನೀರಿನ ಅವಶ್ಯಕತೆಗಳು ಮತ್ತು ವಿವಿಧ ರೀತಿಯ ಹೂವಿನ ಬಣ್ಣಗಳು, ಸಾಮಾನ್ಯವಾಗಿ ಎಲೆಗಳ ಮೇಲಿರುವ ಗೊಂಚಲುಗಳಿಂದಾಗಿ ಇವು ಪ್ರಚಲಿತಗೊಂಡಿವೆ. ಬ್ರಯೋಫಿಲಮ್ ವಿಭಾಗವು ಹಿಂದೆ ಸ್ವತಂತ್ರ ಸಸ್ಯ ಕುಲವಾಗಿತ್ತು. ಇವು "ಗಾಳಿ-ಸಸ್ಯ" ಕಲಾಂಚೋಯಿ ಪಿನ್ನಾಟಾದಂತಹ ವಿವಿಧ ಜಾತಿಗಳನ್ನು ಒಳಗೊಂಡಿದೆ. ಈ ಸಸ್ಯಗಳಲ್ಲಿ, ಹೊಸ ಸಸ್ಯದ ಎಲೆಯ ಅಂಚುಗಳ ಇಂಡೆಂಟೇಶನ್‌ಗಳಲ್ಲಿ ಬಲ್ಬಿಲ್‌ಗಳು ಅಥವಾ ಜೆಮ್ಮೆ ಎಂದೂ ಕರೆಯಲ್ಪಡುವ ಸಸ್ಯಕಗಳಾದ ಸಸ್ಯೀಯವಾಗಿ ಅಭಿವೃದ್ಧಿ ಹೊಂದುತ್ತದೆ. ಈ ಎಳೆಯ ಸಸ್ಯಗಳು ಅಂತಿಮವಾಗಿ ಬೀಳುತ್ತವೆ ಮತ್ತು ಬೇರು ತೆಗೆದುಕೊಳ್ಳುತ್ತವೆ. ಹೂವು ಬಿಡುವ ಮತ್ತು ಬೀಜಗಳನ್ನು ಉತ್ಪಾದಿಸುವ ಸಸ್ಯಗಳಲ್ಲಿ ಯಾವುದೇ ಗಂಡು ಸಸ್ಯಗಳು ಕಂಡುಬಂದಿಲ್ಲ ಮತ್ತು ಇದನ್ನು ಸಾಮಾನ್ಯವಾಗಿ ಸಾವಿರಾರು ಸಸ್ಯಗಳ ತಾಯಿ ಎಂದು ಕರೆಯಲಾಗುತ್ತದೆ. ಕಲಾಂಚೋಯಿ ಡೈಗ್ರೆಮೊಂಟಿಯಾನಾ ಅಲೈಂಗಿಕ ಸಂತಾನೋತ್ಪತ್ತಿಗೆ ಒಂದು ಉದಾಹರಣೆಯಾಗಿದೆ.[೧೫]

'ಟೆಸ್ಸಾ'[೧೬] ಮತ್ತು 'ವೆಂಡಿ' ತಳಿಗಳು ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿಯ ಗಾರ್ಡನ್ ಮೆರಿಟ್ ಪ್ರಶಸ್ತಿಯನ್ನು ಗಳಿಸಿವೆ.[೧೭][೧೮]

ಸಾಂಪ್ರದಾಯಿಕ ಔಷಧ

ಬದಲಾಯಿಸಿ

ಸಾಂಪ್ರದಾಯಿಕ ಔಷಧದಲ್ಲಿ ಸೋಂಕುಗಳು, ಸಂಧಿವಾತ ಮತ್ತು ಉರಿಯೂತದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಕಳಂಚೋಯಿ ಸಸ್ಯಗಳನ್ನು ಬಳಸಲಾಗುತ್ತದೆ. ಕಲಾಂಚೋಯಿ ಸಸ್ಯಗಳು ರೋಗನಿರೋಧಕ ಶಕ್ತಿಯನ್ನು ಸಹ ಹೊಂದಿವೆ. ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಕಲಾಂಚೋಯಿ ಪಿನ್ನಾಟಾವನ್ನು ಅಧಿಕ ರಕ್ತದೊತ್ತಡಕ್ಕೆ ಸಾಂಪ್ರದಾಯಿಕ ಚಿಕಿತ್ಸೆಯಾಗಿ ಬಳಸಲಾಗುತ್ತದೆ ಎಂದು ದಾಖಲಿಸಲಾಗಿದೆ.[೧೯]

ವಿವಿಧ ಕಲಾಂಚೋಯಿ ಸಸ್ಯಗಳಿಂದ ವಿವಿಧ ರೀತಿಯ ಬುಫಾಡಿನೋಲೈಡ್ ಸಂಯುಕ್ತಗಳನ್ನು ಪ್ರತ್ಯೇಕಿಸಲಾಗಿದೆ ಹಾಗೂ ಕಲಾಂಚೋಯಿ ಡೈಗ್ರೆಮೊಂಟಿಯಾನಾದಿಂದ ಐದು ವಿಭಿನ್ನ ಬುಫಾಡಿನೊಲೈಡ್‌ಗಳನ್ನು ಪ್ರತ್ಯೇಕಿಸಲಾಗಿದೆ.[೨೦][೨೧] ಇವುಗಳಲ್ಲಿ ಎರಡು, ಡೈಗ್ರೆಮೊಂಟಿಯಾನಿನ್ ಮತ್ತು ಬೆರ್ಸಾಲ್ಡೆಜೆನಿನ್ ೧,೩,೫-ಆರ್ಥೊಅಸೆಟೇಟ್, ನಿದ್ರಾಜನಕ ಪರಿಣಾಮವನ್ನು ಹೊಂದಿವೆ ಎಂದು ತೋರಿಸಲಾಗಿದೆ. ಅವು ಹೃದಯದ ಗ್ಲೈಕೋಸೈಡ್‌ಗಳಿಗೆ ಸಂಬಂಧಿಸಿದ ಬಲವಾದ ಸಕಾರಾತ್ಮಕ ಇನೋಟ್ರೋಪಿಕ್ ಶಕ್ತಿಯನ್ನು ಸಹ ಹೊಂದಿವೆ ಮತ್ತು ಹೆಚ್ಚಿನ ಪ್ರಮಾಣಗಳೊಂದಿಗೆ ಕೇಂದ್ರ ನರಮಂಡಲದ ಮೇಲೆ ಹೆಚ್ಚುತ್ತಿರುವ ಪರಿಣಾಮವನ್ನು ಹೊಂದಿವೆ.

ಕಲಾಂಚೋಯಿ ಪಿನ್ನಾಟಾದಿಂದ ಬೇರ್ಪಡಿಸಿದ ಬುಫಾಡಿನೊಲೈಡ್ ಸಂಯುಕ್ತಗಳಲ್ಲಿ ಬಲವಾದ ಗೆಡ್ಡೆ ವಿರೋಧಿ ಉತ್ತೇಜಕ ಚಟುವಟಿಕೆಯನ್ನು ತೋರಿಸಿದ ಬ್ರಯೋಫಿಲಿನ್ ಎ ಮತ್ತು ಕಡಿಮೆ ಸಕ್ರಿಯವಾಗಿರುವ ಬೆರ್ಸಾಲ್ಡೆಜೆನಿನ್ -೩-ಅಸಿಟೇಟ್ ಮತ್ತು ಬ್ರಯೋಫಿಲಿನ್ ಸಿ ಸೇರಿವೆ.[೨೨] ಬ್ರಯೋಫಿಲಿನ್ ಸಿ ಕೂಡ ಕೀಟನಾಶಕ ಗುಣಗಳನ್ನು ಹೊಂದಿದೆ.[೨೩]

ಉಲ್ಲೇಖಗಳು

ಬದಲಾಯಿಸಿ
  1. Smith & Figueiredo 2018.
  2. "Growing Pains". Air and Space Magazine. September 2003.
  3. "Characteristics of Genus Kalanchoe". www.crassulaceae.ch. Retrieved 29 March 2023.
  4. Baldwin Jr., J. T. (October 1938). "Kalanchoe: The Genus and its Chromosomes". American Journal of Botany. 25 (8): 572–579. doi:10.2307/2436516. JSTOR 2436516.
  5. ೫.೦ ೫.೧ POTWO 2019.
  6. Mort et al 2009.
  7. Eggli 2003.
  8. Adanson, Michel (29 March 1763). Familles des plantes. Vol. 1. Vincent. Retrieved 29 March 2023.
  9. Camel, J.G. Herbarum aliarumque stirpium in Insulâ Luzone Philippinarum Primariâ Nascentium In: Ray, J. (1704): Historia plantarum Book 3, Appendix p.6, item 18
  10. Adanson, Michel (29 March 1763). Familles des plantes. Vol. 1. Vincent. Retrieved 29 March 2023.
  11. Camel, J.G. Herbarum aliarumque stirpium in Insulâ Luzone Philippinarum Primariâ Nascentium In: Ray, J. (1704): Historia plantarum Book 3, Appendix p.6, item 18
  12. Kalanchoe, Chinese Plant Names, www.eFloras.org.
  13. "Kalanchoe dineshii (Crassulaceae), a new species from southern Western Ghats, India". Retrieved 29 March 2023.
  14. "ird.fr: Allorge-Boiteau, L., 1996. Madagascar Centre de Spéciation et d'Origine du Genre Kalanchoe (Crassulaceae). Biogéographie de Madagascar, 1996 : 137-145" (PDF). Retrieved 29 March 2023.
  15. Reproductive Strategies: Plants. (1999). In Encyclopedia of Paleontology. Retrieved from http://www.credoreference.com/entry/routpaleont/reproductive_strategies_plants .
  16. "RHS Plantfinder - Kalanchoe 'Tessa'". Retrieved 14 March 2018.
  17. "RHS Plantfinder - Kalanchoe 'Wendy'". Retrieved 14 March 2018.
  18. "AGM Plants - Ornamental" (PDF). Royal Horticultural Society. July 2017. p. 56. Retrieved 14 March 2018.
  19. Lans, CA (2006-10-13). "Ethnomedicines used in Trinidad and Tobago for urinary problems and diabetes mellitus". Journal of Ethnobiology and Ethnomedicine. 2: 45. doi:10.1186/1746-4269-2-45. PMC 1624823. PMID 17040567.
  20. Wagner, H; Fischer M; Lotter H (April 1985). "Isolation and Structure Determination of Daigremontianin, a Novel Bufadienolide from Kalanchoe daigremontiana". Planta Medica. 51 (2): 169–70. doi:10.1055/s-2007-969441. PMID 3839925.
  21. Supratman, U; Fujita T; Akiyama K; Hayashi H (September 2001). "Insecticidal compounds from Kalanchoe daigremontiana x tubiflora". Phytochemistry. 58 (2): 311–4. doi:10.1016/S0031-9422(01)00199-6. PMID 11551556.
  22. Supratman, U; Fujita T; Akiyama K; Hayashi H; Murakami A; Sakai H; Koshimizu K; Ohigashi H (April 2001). "Anti-tumor promoting activity of bufadienolides from Kalanchoe pinnata and K. daigremontiana x tubiflora". Bioscience, Biotechnology, and Biochemistry. 65 (4): 947–9. doi:10.1271/bbb.65.947. PMID 11388478. S2CID 45486312.
  23. Supratman, U; Fujita T; Akiyama K; Hayashi H (June 2000). "New insecticidal bufadienolide, bryophyllin C, from Kalanchoe pinnata". Bioscience, Biotechnology, and Biochemistry. 64 (6): 1310–2. doi:10.1271/bbb.64.1310. PMID 10923811. S2CID 25083265.


ಗ್ರಂಥಸೂಚಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ