ಮರಹುಳು
ಮರಹುಳು (ಕುಟ್ಟೆಹುಳು, ಕುಟ್ಟೆ) ಜೀರುಂಡೆಗಳ ಅನೇಕ ಪ್ರಜಾತಿಗಳ ಮರವನ್ನು ತಿನ್ನುವ ಮರಿಹುಳ. ಮರಹುಳುವಿನ ಚಿಹ್ನೆಗಳು ಸಾಮಾನ್ಯವಾಗಿ ಕಟ್ಟಿಗೆಯ ವಸ್ತುವಿನಲ್ಲಿ ರಂಧ್ರಗಳನ್ನು ಒಳಗೊಂಡಿರುತ್ತವೆ, ಮತ್ತು ಜೀವಂತ ಆವರಿಸಿರುವಿಕೆಗಳು ರಂಧ್ರಗಳ ಸುತ್ತ ಫ಼್ರ್ಯಾಸ್ ಎಂದು ಕರೆಯಲ್ಪಡುವ ಪುಡಿಯನ್ನು (ಮಲ) ತೋರಿಸುತ್ತವೆ. ರಂಧ್ರಗಳ ಗಾತ್ರವು ಬದಲಾಗುತ್ತದೆ, ಆದರೆ ಬಹುತೇಕ ಸಾಮಾನ್ಯ ಮನೆ ಪ್ರಜಾತಿಗಳು ಸಾಮಾನ್ಯವಾಗಿ ೧ ರಿಂದ ೧.೫ ಮಿ.ಮಿ ವ್ಯಾಸವನ್ನು ಹೊಂದಿರುತ್ತವೆ. ಕಟ್ಟಿಗೆಯಿಂದ ಹೊರಬಂದ ವಯಸ್ಕ ಜೀರುಂಡೆಗಳು ಬೇಸಿಗೆಯ ತಿಂಗಳುಗಳಲ್ಲಿಯೂ ಕಂಡುಬರಬಹುದು. ಸಾಮಾನ್ಯವಾಗಿ ವಯಸ್ಕ ಜೀರುಂಡೆಗಳು ಕಟ್ಟಿಗೆಯ ವಸ್ತುವಿನ ಮೇಲೆ ಅಥವಾ ಮೇಲ್ಮೈಯ ಸ್ವಲ್ಮ ಕೆಳಗೆ ಮೊಟ್ಟೆಗಳನ್ನು ಇಡುತ್ತವೆ. ಉತ್ಪತ್ತಿಯಾಗುವ ಮರಿಹುಳುಗಳು ನಂತರ ಕಟ್ಟಿಗೆಯ ವಸ್ತುವನ್ನು ಆಹಾರವಾಗಿ ತಿನ್ನುತ್ತವೆ ಮತ್ತು ರಚನಾತ್ಮಕ ಹಾಗೂ ಬಾಹ್ಯ ಹಾನಿಯನ್ನು ಉಂಟುಮಾಡುತ್ತವೆ. ನಂತರ ಇವು ಪೊರೆಹುಳುಗಳಾಗಿ, ಜೀರುಂಡೆಗಳಾಗಿ ಹೊರಬರುತ್ತವೆ. ನಂತರ ಈ ಜಿರುಂಡೆಗಳು ಮೊಟ್ಟೆ ಇಟ್ಟು ಪ್ರಕ್ರಿಯೆಯನ್ನು ಪುನರಾವರ್ತಿಸಿ ಮತ್ತಷ್ಟು ಹಾನಿಯನ್ನು ಉಂಟುಮಾಡುತ್ತವೆ.