ಸಸ್ಯಶಾಸ್ತ್ರ
ಸಸ್ಯಶಾಸ್ತ್ರವು ಸಸ್ಯಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಾಗುವ ಜೀವಶಾಸ್ತ್ರದ ಭಾಗ. ಸಸ್ಯಶಾಸ್ತ್ರ ಪದವು ಗ್ರೀಕ್ ಭಾಷೆಯ ಮೂಲಪದಗಳಾದ "ಬೊಟಾನೆ(ಸಸ್ಯ)ಮತ್ತು ಲಜಿ(ಶಾಸ್ತ್ರ) " ಎಂಬ ಪದಗಳಿಂದಾಗಿದೆ. ಸಸ್ಯಶಾಸ್ತ್ರವು ಆಂಗ್ಲಭಾಷೆಯಲ್ಲಿ ಗ್ರೀಕ್ ಬಾಟನಿ/ಫೈಟಾಲಜಿ ಎಂದೂ ಕರೆಯಲ್ಪಡುತ್ತದೆ.
ಸಸ್ಯಶಾಸ್ತ್ರದ ವಿಭಾಗಗಳು
ಬದಲಾಯಿಸಿಸಸ್ಯಶಾಸ್ತ್ರದಲ್ಲಿ ಹಲವು ವಿಭಾಗಗಳಿವೆ:
- ಸಸ್ಯ ಹಂಚಿಕೆಯರಿಮೆ (ಆಂಗ್ಲದಲ್ಲಿ Taxonomy): ಸಸ್ಯಗಳ ವಿವಿಧ ಗುಂಪುಗಳ ವರ್ಗೀಕರಣ
- ಸಸ್ಯ ಉಸಿರಿಯರಿಮೆ (ಆಂಗ್ಲದಲ್ಲಿ Physiology): ಸಸ್ಯಗಳ ಆಂತರಿಕ ಪ್ರಕ್ರಿಯೆಗಳ ವ್ಯಾಸಂಗ
- ಸಸ್ಯ ಜೀವರಾಸಾಯನಿಕ ಶಾಸ್ತ್ರ (Plant Biochemistry): ಅಣುಸಂಭಂಧಿಕ (molecular) ಮಟ್ಟದಲ್ಲಿ ಸಸ್ಯಗಳ ಆಂತರಿಕ ಪ್ರಕ್ರಿಯೆಗಳ ವ್ಯಾಸಂಗ
- ಸಸ್ಯ ತಳಿಶಾಸ್ತ್ರ (Plant Genetics): ಸಸ್ಯದ ಸ್ವಭಾವಗಳ ಪಿತ್ರಾರ್ಜಿತದ (inheritance) ವ್ಯಾಸಂಗ
- ಸಸ್ಯ ರೋಗ ಶಾಸ್ತ್ರ (Plant Pathology): ಸಸ್ಯಗಳು ಅನುಭವಿಸುವ ಕಾಯಿಲೆಗಳ ವ್ಯಾಸಂಗ.
ಹಂಚಿಕೆಯರಿಮೆ/ Taxonomy
ಬದಲಾಯಿಸಿಹಂಚಿಕೆಯರಿಮೆಯು ವಿವಿಧ ಸಸ್ಯಗಳ ವಿವರಣೆಯನ್ನು ಸಂಭಂಡಿಸುವ ಶಾಸ್ತ್ರ[೧].
ಈ ಶಾಸ್ತ್ರದಲ್ಲಿ2 ಭಾಗಗಳಿವೆ:
- ಸಸ್ಯ ಗುರುತಿಸುವುದು: ಅಜ್ಞಾತ ಸಸ್ಯಗಳನ್ನು ಗುರುತಿಸಿ, ಅದರ ನಾಮಕರಣ ಮಾಡಿ, ಅದರ ಗುಣಗಳನ್ನು ತಿಳಿದುಕೊಳ್ಳುವುದು
- ವಾರ್ಗೀಕರಣ: ಸಮಾನ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ವಿವಿಧ ಗುಂಪುಗಳಲ್ಲಿ ವರ್ಗಾಯಿಸುವ ಶಾಸ್ತ್ರವನ್ನು ಸಸ್ಯ ವರ್ಗೀಕರಣ ಎಂದು ಹೇಳಲಾಗುತ್ತದೆ.
ಸಸ್ಯಗಳನ್ನು ವಿವಿಧ ಮಟ್ಟದಲ್ಲಿ ವರ್ಗೀಕರಣ ಮಾಡಲಾಗುತ್ತದೆ. ಉದಾಹರಣೆಗೆ, ಮಾವಿನ ಗಿಡವನ್ನು ಹೀಗೆ ವರ್ಗಾಯಿಸಲಿದೆ:
Kingdom: Plantae
Subkingdom: Tracheobionta
Superdivision: Spermatophyta
Division: Magnoliophyta
Class: Magnoliopsida
Subclass: Rosidae
Order: Sapinales
Family: Anacardiaceae
Genus: Mangifera
Species: Mangifera indica [೨]
ಸಸ್ಯದ ವೈಜ್ಞಾನಿಕ ಹೆಸರನ್ನು ಲ್ಯಾಟಿನ್ ಭಾಷೆಯಲ್ಲಿಯೇ ಬರೆಯಲಾಗುತ್ತದೆ. ಸಸ್ಯಶಾಸ್ತ್ರಿಗಳು ತಮ್ಮಲ್ಲಿ ಮಾತನಾಡುವಾಗ ಸಸ್ಯಗಳ ದೇಸೀಯ ಭಾಷೆಯ ಹೆಸರಲ್ಲದೆ, ವೈಜ್ಞಾನಿಕ ಹೆಸರನ್ನೇ ಬಲಿಸುತ್ತಾರೆ.
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Rouhan G, Gaudeul M (2014). Plant taxonomy: a historical perspective, current challenges, and perspectives. Methods Mol. Biol.1115:1-37. doi: 10.1007/978-1-62703-767-9_1.
- ↑ Classification for Kingdom Plantae Down to Species Mangifera indica L. https://plants.usda.gov/java/ClassificationServlet?source=display&classid=MAIN3