ಎಬಿ ಡೀ ವಿಲಿಯರ್ಸ್

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ
(ಎ.ಬಿ.ಡಿವಿಲಿರ್ಯಸ್ ಇಂದ ಪುನರ್ನಿರ್ದೇಶಿತ)

ಅಬ್ರಹಮ್ ಬೆಂಜಮಿನ್ ಡಿ ವಿಲಿಯರ್ಸ್ (ಜನನ: ಫೆಬ್ರವರಿ ೧೭, ೧೯೮೪ ಪ್ರೆಟೋರಿಯಾ, ದಕ್ಷಿಣ ಆಫ್ರಿಕಾದಲ್ಲಿ) ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ . ಎಬಿ ಡೀ ವಿಲಿಯರ್ಸ್ ಏಕದಿನ ಹಾಗೂ ಟ್ವೆಂಟಿ೨೦ ಪಂದ್ಯಗಳಿಗೆ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕನಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರವಾಗಿ ಆಡಿದ್ದರು ಆದರೆ ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಈತ ಬಲಗೈ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದು ಕೆಲವೊಮ್ಮೆ ಅಗ್ರಕ್ರಮಾಂಕದಲ್ಲೂ ಆಡುತ್ತಾರೆ. ಮೊದಮೊದಲು ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಈತ ಕೆಲವೊಮ್ಮೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ. ಈತ ವಿಶ್ವದ ಅತ್ತ್ಯುತ್ತಮ ಕ್ಷೇತ್ರ ರಕ್ಷಕರಲ್ಲಿ ಒಬ್ಬರು.

ಎಬಿ ಡಿ ವಿಲಿಯರ್ಸ್
de Villiers in 2006
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಅಬ್ರಹಮ್ ಬೆಂಜಮಿನ್ ಡಿವಿಲಿಯರ್ಸ್
ಹುಟ್ಟು (1984-02-17) ೧೭ ಫೆಬ್ರವರಿ ೧೯೮೪ (ವಯಸ್ಸು ೪೦)
Warmbad, Transvaal Province, ದಕ್ಷಿಣ ಆಫ್ರಿಕಾ
ಅಡ್ಡಹೆಸರುಮಿ. ೩೬೦, ಎಬಿಡಿ, ಎಲಿಯನ್, Superman[]
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಮಧ್ಯಮ ವೇಗಿ
ಪಾತ್ರಗೂಟರಕ್ಷಕ ಮತ್ತು ದಾಂಡಿಗ
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೨೯೬)೧೭ ಡಿಸೆಂಬರ್ ೨೦೦೪ v ಇಂಗ್ಲೆಂಡ್
ಕೊನೆಯ ಟೆಸ್ಟ್೩೦ ಮಾರ್ಚ್ ೨೦೧೮ v ಆಸ್ಟ್ರೇಲಿಯಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೭೮)೫ ಫೆಬ್ರುವರಿ ೨೦೦೫ v ಇಂಗ್ಲೆಂಡ್
ಕೊನೆಯ ಅಂ. ಏಕದಿನ​೧೬ ಫೆಬ್ರುವರಿ ೨೦೧೮ v ಭಾರತ
ಅಂ. ಏಕದಿನ​ ಅಂಗಿ ನಂ.೧೭
ಟಿ೨೦ಐ ಚೊಚ್ಚಲ (ಕ್ಯಾಪ್ ೨೦)೨೪ ಫೆಬ್ರುವರಿ ೨೦೦೬ v ಆಸ್ಟ್ರೇಲಿಯಾ
ಕೊನೆಯ ಟಿ೨೦ಐ೨೯ ಅಕ್ಟೋಬರ್ ೨೦೧೭ v ಬಾಂಗ್ಲಾದೇಶ
ಟಿ೨೦ಐ ಅಂಗಿ ನಂ.೧೭
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೦೩-೦೪ನಾರ್ತರ್ನ್ ಕ್ರಿಕೆಟ್ ತಂಡ
೨೦೦೪-೦೫ ಮತ್ತು ೨೦೧೭-೧೮ಟೈಟನ್ಸ್ ಕ್ರಿಕೆಟ್ ತಂಡ
೨೦೦೮-೧೦ಡೆಲ್ಲಿ ಡೆರ್‌ಡೆವಿಲ್ಸ್ (squad no. ೧೭)
೨೦೧೧-೨೧ರಾಯಲ್ ಚಾಲೆಂಜರ್ಸ್ (squad no. ೧೭)
೨೦೧೬ಬಾರ್ಬಡೊಸ್ ಟ್ರೈಡೆಂಟ್ಸ್ (squad no. ೧೭)
೨೦೧೮ಶ್ವಾನೆ ಸ್ಪಾರ್ಟನ್ಸ್ (squad no. ೧೭)
೨೦೧೯ರಂಗಪುರ್ ರೈಡರ್ಸ್ (squad no. ೧೭)
೨೦೧೯ಲಾಹೋರ್ ಕಲಂದರ್ಸ್ (squad no. ೧೭)
೨೦೧೯ಮಿಡಲ್‌ಸೆಕ್ಸ್ ಕೌಂಟಿ ಕ್ಲಬ್ (squad no. ೧೭)
೨೦೧೯-೨೦ಬ್ರಿಸ್ಬೆನ್ ಹೀಟ್ (squad no. ೧೭)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ಒಡಿಐ ಟಿ೨೦ ಪ್ರ.ದ. ಕ್ರಿ
ಪಂದ್ಯಗಳು ೧೧೪ ೨೨೮ ೭೮ ೧೪೧
ಗಳಿಸಿದ ರನ್ಗಳು ೮೭೬೫ ೯೫೭೭ ೧೬೭೨ ೧೦೬೮೯
ಬ್ಯಾಟಿಂಗ್ ಸರಾಸರಿ ೫೦.೬೬ ೫೩.೫೦ ೨೬.೧೨ ೪೯.೭೧
೧೦೦/೫೦ ೨೨/೪೬ ೨೫/೫೩ ೦/೧೦ ೨೫/೬೦
ಉನ್ನತ ಸ್ಕೋರ್ ೨೭೮* ೧೭೬ ೭೯* ೨೭೮*
ಎಸೆತಗಳು ೨೦೪ ೧೯೨ ೨೩೪
ವಿಕೆಟ್‌ಗಳು
ಬೌಲಿಂಗ್ ಸರಾಸರಿ ೫೨.೦೦ ೨೮.೮೫ ೬೯.೦೦
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೨/೪೯ ೨/೧೫ ೨/೪೯
ಹಿಡಿತಗಳು/ ಸ್ಟಂಪಿಂಗ್‌ ೨೨೨/೫ ೧೭೬/೫ ೬೫/೭ ೨೭೫/೬
ಮೂಲ: ESPNcricinfo, 8 December 2023

ವೈಯಕ್ತಿಕ ಮಾಹಿತಿ

ಬದಲಾಯಿಸಿ

ಪೂರ್ಣ ಹೆಸರು - ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಅಡ್ಡಹೆಸರು - ಎಬಿಡಿ ಜನನ - ೧೭ ಫೆಬ್ರವರಿ ೧೯೮೪ ( ವಯಸ್ಸು ೨೯) ಸ್ಥಳ - ಪ್ರಿಟೋರಿಯಾ , ಟ್ರಾನ್ಸ್ವಾಲ್ ಪ್ರಾಂತ್ಯ , ದಕ್ಷಿಣ ಆಫ್ರಿಕಾ ಎತ್ತರ - ೧.೭೮ ಮೀ (೫ ಅಡಿ ೧೦ ) ಪಾತ್ರ - ಬ್ಯಾಟ್ಸ್ಮನ್ , ವಿಕೆಟ್ ಕೀಪರ್ ಬ್ಯಾಟಿಂಗ್ ಶೈಲಿ- ಬಲಗೈ ಬ್ಯಾಟ್ಸ್ಮನ್

ಅಂತರರಾಷ್ಟ್ರೀಯ ಮಾಹಿತಿ

ಬದಲಾಯಿಸಿ

ರಾಷ್ಟ್ರ - ದಕ್ಷಿಣ ಆಫ್ರಿಕಾ ಚೊಚ್ಚಲ ಟೆಸ್ಟ್ ಪಂದ್ಯ ( ಕ್ಯಾಪ್ ೨೯೬ ) - ೧೭ ಡಿಸೆಂಬರ್ ೨00೪ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ -೨೬ ಡಿಸೆಂಬರ್ ೨೦೧೩ ಭಾರತ ವಿರುದ್ಧ ಚೊಚ್ಚಲ ಏಕದಿನ (ODI) ( ಕ್ಯಾಪ್ ೭೮ ) -೨ ಫೆಬ್ರವರಿ ೨೦೦೫ ಇಂಗ್ಲೆಂಡ್ ವಿರುದ್ಧ ಕೊನೆಯ ಏಕದಿನ (ODI) -೫ ಡಿಸೆಂಬರ್ ೨೦೧೩ ಭಾರತ ವಿರುದ್ಧ ಚೊಚ್ಚಲ ಟಿ೨೦(T20I) -೨೪ ಫೆಬ್ರವರಿ ೨೦೦೬ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ೨೦ T20I -೨೨ ನವೆಂಬರ್ ೨೦೧೩ ಪಾಕಿಸ್ತಾನ ವಿರುದ್ಧ

ದೇಶೀಯ ತಂಡದ ಮಾಹಿತಿ

ಬದಲಾಯಿಸಿ

ವರ್ಷ ತಂಡ ೨೦೦೩-೨೦೦೪ - Northerns (ಉತ್ತರ ಭಾಗ) ೨೦೦೪– ಇಂದಿನವರೆಗೆ - ಟೈಟಾನ್ಸ್ ತಂಡ (ಸಂಖ್ಯೆ -೧೭) ೨೦೦೮–೨೦೧೦ - ಡೆಲ್ಲಿ ಡೇರ್ಡೆವಿಲ್ಸ್ ೨೦೧೧– ಇಂದಿನವರೆಗೆ - ರಾಯಲ್ ಚಾಲೆಂಜರ್ಸ್ ಬೆಂಗಳೂರು

ವೃತ್ತಿಜೀವನದ ಅಂಕಿಅಂಶಗಳು

ಬದಲಾಯಿಸಿ

ಸ್ಪರ್ಧೆ ಟೆಸ್ಟ್ ಏಕದಿನ ಎಫ್ಸಿ T20I ಪಂದ್ಯಗಳು ೮೯ ೧೫೯ ೧೧೫ ೫೧ ರನ್ಗಳು ೬೮೨೭ ೬೩೩೧ ೮೭೧ ೮೬೭ ಬ್ಯಾಟಿಂಗ್ ಸರಾಸರಿ ೫೧.೭೧ ೪೯.೪೬ ೫0.೬೬ ೨೧.೬೭ ೧೦೦s/೫೦s ೧೮/೩೪ ೧೬/೩೬ ೨೧/೪೭ 0/೪ ಟಾಪ್ ಸ್ಕೋರ್ ೨೭೮* ೧೪೬ ೨೭೮* ೭೯* ಎಸೆತ ೨೦೪ ೧೨ ೨೩೪ - ವಿಕೆಟ್ ೨ 0 ೨ - ಬೌಲಿಂಗ್ ೫೨.೦೦ – ೬೯.00 - ೫ ವಿಕೆಟ್ ಗೊಂಚಲು 0 – – – ೧0 ವಿಕೆಟ್ ಗೊಂಚಲು 0 – – – ಅತ್ಯುತ್ತಮ ಬೌಲಿಂಗ್ ೨/೪೯ 0/೨೨ ೨/೪೯ - ಕ್ಯಾಚುಗಳು - ಸ್ಟಂಪಿಂಗ್ಗಳು ೧೬೧/೩ ೧೩೪/೩ ೨೧೨/೪ ೪೭/೬ ಅಬ್ರಹಮ್ ಬೆಂಜಮಿನ್ ಡಿ ವಿಲಿಯರ್ಸ್ (ಜನನ: ಫೆಬ್ರವರಿ ೧೭, ೧೯೮೪ ಪ್ರೆಟೋರಿಯಾ, ದಕ್ಷಿಣ ಆಫ್ರಿಕಾದಲ್ಲಿ) ದಕ್ಷಿಣ ಆಫ್ರಿಕಾದ ಆಟಗಾರ. ಎಬಿ ಡಿ ವಿಲಿಯರ್ಸ್ ಅವರ ತಂದೆ ಡಾ|| ಅಬ್ರಹಮ್ ಪಿ ಡಿ ವಿಲಿಯರ್ಸ್. ಇವರು ಆಫ್ರಿಕಾಂಸೆ ಹೊಎರ್ ಸಯುನ್ಸ್ಕೂಲ್ ನಲ್ಲಿ ತಮ್ಮ ಶಾಲಾ ವಿದ್ಯಾಬ್ಯಾಸವನ್ನು ಮಾಡಿದರು. ಈ ಶಾಲೆಯು ದಕ್ಷಿಣ ಆಫ್ರಿಕಾದ, ಪ್ರಿಟೋರಿಯಾದಲ್ಲಿದೆ. ಎಬಿ ಡಿ ವಿಲಿಯರ್ಸ್ ಅವರು ಅತ್ಯಂತ ಕಡಿಮೆ ಅವದಿಯಲ್ಲಿ, ಕ್ರಿಕೆಟ್ ಜಗತಿನಲ್ಲಿ ಅನೇಕ ಮೈಲುಗಲ್ಲು ಸಾದಿಸಿಇರುವರು. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ೧೬ ಶತಕ ಮತ್ತು ೩೨ ಅರ್ಧಶತಕವನ್ನು ಗಳಿಸಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ಅನೇಕ ಬಾರಿ ಶೂನ್ಯ ಸಂಪಾದನೆ ಮಾಡದೇ ಇನ್ನಿಂಗ್ಸ್ಸಾ ಕಟ್ಟಿದ್ದಾರೆ ಅಂದರೆ ೭೮ ಬಾರಿ ಹೀಗೆ ಮಾಡಿದ್ದಾರೆ ಆದುದರಿಂದ ಇವರಿಗೆ ಈ ದಾಖಲೆ ಸಲ್ಲುತದೆ. ಇವರಿಗೆ ಇರುವ ಇನ್ನೊದು ದಾಖಲೆ ಎಂದರೆ, ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್ಗಳು ಗಳಿಸಿರುವ ವೈಯಕ್ತಿಕ ಗರಿಷ್ಟ ಮೊತ್ತದ ಸಾಲಿನಲ್ಲಿ ಇವರ ಮೊತ್ತ ಎರಡನೆಯದಾಗಿದೆ. ಇವರು ಇನ್ನಿಂಗ್ಸ್ ನಲ್ಲಿ 27೮* ಗಳಿಸಿರುವುದೇ ಇವರ ಶ್ರೇಷ್ಟ ಸಾದನೆಯಾಗಿದೆ.ಮೊದಮೊದಲು ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಈತ ಕೆಲವೊಮ್ಮೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ. ಇವರು ೨೦೧೨ರ ತನಕ ಸಾಂದರ್ಭಿಕ ವಿಕೆಟ್ ಕೀಪರ್ ಆಗಿ ಆಡುತಿದ್ದರು, ನಂತರದಲ್ಲಿ ಮಾರ್ಕ್ ಬೌಚರ್ ಅವರ ನಿವೃತಿಯ ನಂತರ ದಕ್ಷಿಣ ಆಫ್ರಿಕಾ ತಂಡದ ಕಾಯಂ ಕೀಪರ್ ಆಗಿ ನೇಮಕ ಗೊಂಡಿದ್ದಾರೆ. ಇವರು ತಮ್ಮ ಮಿಂಚಿನ ಕ್ಷೇತ್ರ ರಕ್ಷಣೆಗೆ ಪ್ರಸಿದ್ದರಾಗಿದ್ದರೆ. ಈತ ವಿಶ್ವದ ಅತ್ತ್ಯುತ್ತಮ ಕ್ಷೇತ್ರ ರಕ್ಷಕರಲ್ಲಿ ಒಬ್ಬ. ಜಾಂಟಿ ರೋಡ್ಸ್ ನಂತರ ಇವರು ಅವರ ಸ್ಥಾನವನ್ನು ತುಂಬಿದ್ದಾರೆ. ಎಬಿ ಡಿ ವಿಲಿಯರ್ಸ್ ಬಲಗೈ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದು ಕೆಲವೊಮ್ಮೆ ಅಗ್ರಕ್ರಮಾಂಕದಲ್ಲೂ ಆಡುತ್ತಾರೆ. ಎಬಿ ಡೀ ವಿಲಿಯರ್ಸ್ ರವರು ವಿಶ್ವದಲ್ಲಿಯೇ ೭ನೇ ಅತಿ ವೇಗದ ಶತಕವನ್ನು ದಾಖಲಿಸಿದ್ದಾರೆ. ಈ ದಾಖಲೆಯನ್ನು ಅವರು ಭಾರತದ ವಿರುದ್ದ ಗಳಿಸಿದ್ದಾರೆ, ೫೮ ಎಸೆತದಲ್ಲಿ ಇವರು ಈ ಶ್ರೇಯವನ್ನು ದಾಟಿದ್ದಾರೆ. ಇವರು ಈ ಪಂದ್ಯದಲ್ಲಿ ೫೯ ಎಸೆತದಲ್ಲಿ ೧೦೨ ರನ್ನು ಗಳ್ಳನು ಗಳಿಸಿದ್ದಾರೆ. ಇವರು ಡಿಸೆಂಬರ್ ೨೦೧೩ರಲ್ಲಿ ಕ್ರಿಕೆಟ್ ನ ಎರಡು ಮಾದರಿಯಾದಂತ ಟೆಸ್ಟ್ ಮತ್ತು ಏಕದಿನ, ಈ ಎರಡರಲ್ಲೂ ಐಸಿಸಿ ರಾಂಕಿಂಗ್‍ನ ನಿಯಮದಂತೆ ಪ್ರಥಮ ಸ್ತಾನ ಗಳಿಸುವುದರೊಂದಿಗೆ ಜಗತಿನಲ್ಲಿ ಈ ಸಾದನೆ ಮಾಡಿದಂಥ ೯ನೇ ಬ್ಯಾಟ್ಸ್ಮೆನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಎಬಿ ಡಿ ವಿಲಿಯರ್ಸ್ ರವರು ೧೬ ಡಿಸೆಂಬರ್ ೨೦೦೪ರಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇವರು ಗ್ರೆಮ್ ಪೊಲಾಕ್ ನಂತರ ಅತಿ ವೇಗವಾಗಿ ಸಾವಿರ ರನ್ ಗಡಿ ದಾಟಿದರು. ಈ ರೀತಿ ಮಾಡಿದ ದಕ್ಷಿಣ ಆಫ್ರಿಕಾದ ಎರಡನೆಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು . ಹೀಗೆ ಅವರ ಕ್ರಿಕೆಟ್ ಪಯಣ ಪ್ರಾರಂಬವಾಯಿತು . ನಂತರದಲ್ಲಿ ಅವರು ಅನೇಕ ಪಂದ್ಯವನ್ನಾಡಿ ಆ ದೇಶಕ್ಕೆ ಒಬ್ಬ ಒಳ್ಳೇಯ ಪ್ರತಿಭೆಯಾಗಿ ಗುರುತಿಸಿಕೊಂಡರು. ಅಷ್ಟೇ ಅಲ್ಲದೆ ಇವರಿಗೆ ಏಕದಿನ ಹಾಗೂ ಟ್ವೆಂಟಿ೨೦ ಪಂದ್ಯಗಳಿಗೆ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕ ಪಟ್ಟ ದೊರೆತಿದೆ. ಇವರು ನಾಯಕನಾಗಿಯು ಯಶಸ್ಸು ಕಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಇವರ ನಾಯಕತ್ವದಲ್ಲಿ ಯಶಸ್ಸು ಸಾಧಿಸದೆ. ಇವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾವು ಅನೇಕ ಪಂದ್ಯದಲ್ಲಿ ಜಯಸಿದೆ.

ಕ್ರಿಕೆಟ್ ಹೊರತುಪಡಿಸಿ

ಬದಲಾಯಿಸಿ

ಗಾಲ್ಫ್, ರಗ್ಬಿ, ಮತ್ತು ಟೆನ್ನಿಸ್ ಆಟಗಳಲ್ಲಿಯು ಅವರಿಗೆ ಅಸಕ್ತಿ ಇದ್ದು ಅನೇಕ ಪಂದ್ಯಗಳನ್ನು ಆಡಿದ್ದರು.ಎಬಿ ಮತ್ತು ಅವನ ಸ್ನೇಹಿತ,ಒಂದ ಹಾಡನ್ನು ರಚಿಸುತ್ತಾರೆ, ಈ ಹಾಡು ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಜಯ ದೊರೆತಾಗ ಗೀತೆಯಾಯಿತು.

ಇಂಡಿಯನ್ ಪ್ರೀಮಿಯರ್ ಲೀಗ್

ಬದಲಾಯಿಸಿ

ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರವಾಗಿ ಆಡಿದ್ದರು ಆದರೆ ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಇಂಡಿಯನ್ ಪ್ರೀಮಿಯರ್ ಲೀಗ್ ನಾಲ್ಕನೇ ಋತುವಿನಲ್ಲಿ ಅವರು ೧.೧ ದಶಲಕ್ಷಕ್ಕೆ (ಅಮೆರಿಕನ್ ಡಾಲರ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು . ಅವರು ಹಿಂದಿನ ಋತುಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಆಡಿದರು . ಅವರು ಪ್ರಸಕ್ತ ರುತುವಿನಲ್ಲು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿಯೇ ಆಡಲಿದ್ದಾರೆ. ಇವರು ಒಬ್ಬ ಪರಿಪೂರ್ಣ ಆಟಗಾರ. ಎಬಿ ಡಿವಿಲಿಯರ್ಸ್ ಅತ್ಯಂತ ಪ್ರತಿಭಾಶಾಲಿ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರೆ . ಸೀಮಿತ ಒವರ್ಗಳ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾದ ನಾಯಕರಾಗಿರುವ, ಇವರು ಸಮಯಕ್ಕೆ ತಕ್ಕಂತೆ ಆಡುತ್ತಾರೆ. ಕಲಾತ್ಮಕವಾಗಿ ಬ್ಯಾಟ್ಟಿಂಗ್ ಮಾಡುವುದಲ್ಲದೆ ಶಾಸ್ತ್ರೀಯ ರೀತಿಯಲ್ಲಿ ಸಹ ಬ್ಯಾಟಿಂಗ್ ಬದಲಿಸುತ್ತಾರೆ. ಡಿ ವಿಲಿಯರ್ಸ್ ಅವರು ೨೦೦೬-೦೭ರಲ್ಲಿ ತಮ್ಮ ಆಟದಲ್ಲಿನ ಸ್ಥಿರತೆಯನ್ನು ಕಳೆದುಕೊಂಡಿದ್ದರು, ನಂತರದಲ್ಲಿ ಅವರು ಅದನ್ನು ಯಶಸ್ವಿಯಾಗಿ ಮೆಟ್ಟಿ ನಿಂತರು.

ಉಲ್ಲೇಖಗಳು

ಬದಲಾಯಿಸಿ
  1. "AB de Villiers retires: What made Mr. 360 a modern-day great". India Today (in ಇಂಗ್ಲಿಷ್). Retrieved 22 June 2019.