ಕ್ರಿಕೆಟ್ ಆಟದಲ್ಲಿ ವಿಕೆಟ್-ಕೀಪರ್ (ವಿಕೆಟ್ ಕೀಪರ್ ಎಂದೂ ಉಚ್ಚರಿಸಲಾಗುತ್ತದೆ, ಹಾಗು ಸಾಮಾನ್ಯವಾಗಿ(ಕ್ಷೇತ್ರ ರಕ್ಷಕ) ಕೀಪರ್ ಎಂದು ಮಾತ್ರ ಹೇಳಲಾಗುತ್ತದೆ.)ಫೀಲ್ಡಿಂಗ್ ತಂಡದ ಆಟಗಾರನಾಗಿರುವ ಈತ, ಚೆಂಡನ್ನು ಎದುರಿಸುವ ಬ್ಯಾಟ್ಸ್‌ಮನ್ ನ ಬ್ಯಾಟಿನ ಕಾಪುನೆಲೆಯನ್ನು(ಗಾರ್ಡ್) ಪಡೆದ ವಿಕೆಟ್ ನ ಅಥವಾ ಸ್ಟಂಪ್ ಗಳ(ವಿಕೆಟ್ ನ ಮೂರು ಕೋಲುಗಳು) ಹಿಂದೆ ನಿಂತಿರುತ್ತಾನೆ. ಫೀಲ್ಡಿಂಗ್ ಮಾಡುವ ತಂಡದಲ್ಲಿ ವಿಕೆಟ್-ಕೀಪರ್ ಗೆ ಮಾತ್ರ ಕೈಗವಸು ಹಾಗು ಕಾಲಿಗೆ ಬಾಹ್ಯ ರಕ್ಷಾಕವಚ ಧರಿಸಲು ಅನುಮತಿ ನೀಡಲಾಗಿರುತ್ತದೆ.[೧]

ವಿಶಿಷ್ಟವಾದ ಸ್ಥಾನದಲ್ಲಿ ಒಬ್ಬ ವಿಕೆಟ್-ಕೀಪರ್, ಈತ ಎಸೆತವನ್ನು ತಡೆಹಿಡಿಯಲು ತಯಾರಾಗಿದ್ದಾನೆ.ಈ ಕೀಪರ್, ಒಬ್ಬ ನಿಧಾನ ಗತಿಯ ಬೌಲರ್ ಅಥವಾ ಸ್ಪಿನ್ ಬೌಲರ್ ನ ಎಸೆತಕ್ಕಾಗಿ ವಿಕೆಟ್ ಗೆ ತೀರ ಸಮೀಪದಲ್ಲಿ "ಎದ್ದು ನಿಂತಿದ್ದಾನೆ"
ಒಂದು ಜೋಡಿ ವಿಕೆಟ್-ಕೀಪಿಂಗ್ ಕೈಗವಸುಗಳುಗಟ್ಟಿಪಟ್ಟಿಯು, ಚೆಂಡನ್ನು ಹಿಡಿಯಲು ಕೀಪರ್ ಗೆ ಸಹಾಯ ಮಾಡುತ್ತದೆ, ಇದು ಹೆಬ್ಬೆರಳು ಹಾಗು ತೋರು ಬೆರಳುಗಳ ನಡುವೆ ಕಂಡುಬರುತ್ತದೆ.
ಚಿತ್ರ:Stumping edited.jpg
ಭಾರತದ ಮಹೇಂದ್ರ ಸಿಂಗ್ ಧೋನಿ, 2008ರಲ್ಲಿ ಚೆನ್ನೈ ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾದ ಬ್ಯಾಟ್ಸ್‌ಮನ್ ನನ್ನು ಯಶಸ್ವಿಯಾಗಿ ಔಟ್ ಮಾಡುತ್ತಿರುವುದು.
2005ರಲ್ಲಿ ಶೇನ್ ವಾರ್ನ್ ಎಸೆತಕ್ಕೆ ಎದ್ದು ನಿಂತಿರುವ ಆಡಮ್ ಗಿಲ್ಕ್ರಿಸ್ಟ್.ಬ್ಯಾಟ್‌ ಮಾಡುತ್ತಿರುವುದು ಆಂಡ್ರ್ಯೂ ಸ್ಟ್ರಾಸ್‌.

ಇದು ಮೂಲತಃ ಒಂದು ವಿಶೇಷ ಪರಿಣತಿಯ(ಪಾತ್ರ) ಕಾರ್ಯವಾಗಿದ್ದರೂ ಸಾಂದರ್ಭಿಕವಾಗಿ ಇವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಫೀಲ್ಡಿಂಗ್ ಮಾಡುವ ತಂಡದ ಮತ್ತೊಬ್ಬ ಸದಸ್ಯನು ತಾತ್ಕಾಲಿಕವಾಗಿ ವಿಕೆಟ್ ಕೀಪಿಂಗ್ ಮಾಡುತ್ತಾನೆ. ಕೀಪರ್ ನ ಪಾತ್ರವನ್ನು ಲಾಜ್ ಆಫ್ ಕ್ರಿಕೆಟ್ ನ ಲಾ 40 ರಲ್ಲಿ ವ್ಯಾಖ್ಯಾನಿಸಲಾಗಿದೆ.[೧]

ಉದ್ದೇಶಗಳು

ಬದಲಾಯಿಸಿ

ಕೀಪರ್ ನ ಪ್ರಮುಖ ಕೆಲಸವೆಂದರೆ ಬ್ಯಾಟ್ಸ್‌ಮನ್ ಮೂಲಕ ಹಾದುಹೋಗುವ ಚೆಂಡಿನ ಎಸೆತಗಳನ್ನು ತಡೆಯುವುದು.(ರನ್ ಗಳನ್ನು ಗಳಿಸದಂತೆ ತಡೆಹಿಡಿಯುವುದು), ಆದರೆ ಈತ ಹಲವಾರು ವಿಧಗಳಲ್ಲಿ ಬ್ಯಾಟ್ಸ್‌ಮನ್ ನನ್ನು ಔಟು ಮಾಡುವ ಪ್ರಯತ್ನವನ್ನೂ ಸಹ ಮಾಡಬಹುದು:

 • ಔಟು ಮಾಡಲು ಕೀಪರ್ ಗೆ ಸಿಗುವ ಅತ್ಯಂತ ಸಾಮಾನ್ಯ ಅವಕಾಶವೆಂದರೆ ಬ್ಯಾಟ್ಸ್‌ಮನ್ ನ ಬ್ಯಾಟ್ ಗೆ ತಗುಲಿ ಹಾದು ಹೋಗುವ ಚೆಂಡನ್ನು ಅದು ಬೌನ್ಸ್(ಪುಟಿಯುವ) ಆಗುವ ಮುಂಚೆ ಕ್ಯಾಚ್ ಹಿಡಿಯುವುದು; ಇದನ್ನು ಎಜ್ (ಚೆಂಡನ್ನು ಬ್ಯಾಟಿನ ಅಂಚಿನ ಹೊಡೆತ) ಎಂದು ಕರೆಯಲಾಗುತ್ತದೆ. ಕೆಲವೊಂದು ಬಾರಿ ಕೀಪರ್, ಬಹಳ ಎತ್ತರಕ್ಕೆ ಹೊಡೆಯಲಾದ ಚೆಂಡನ್ನು ಕ್ಯಾಚ್ ಹಿಡಿಯಲೆಂದೇ ಸೂಕ್ತ,ನಿರ್ದಿಷ್ಟ ಸ್ಥಾನದಲ್ಲಿ ನಿಂತಿರುತ್ತಾನೆ. ಫೀಲ್ಡಿಂಗ್ ಸ್ಥಾನದಲ್ಲಿರುವ ಇತರ ಯಾವುದೇ ಆಟಗಾರನಿಗಿಂತ ವಿಕೆಟ್-ಕೀಪರ್ ಗಳು ಹೆಚ್ಚು ಕ್ಯಾಚ್ ಗಳನ್ನು ಪಡೆಯುತ್ತಾರೆ.
 • ಎಸೆತದ ಸಮಯದಲ್ಲಿ ಬ್ಯಾಟ್ಸ್‌ಮನ್ ತನ್ನ ಕ್ರೀಸ್(ಗಡಿರೇಖೆ) ನಿಂದ ಆಚೆಗೆ ಬಂದಿದ್ದರೆ, ಅಂತಹ ಸಮಯದಲ್ಲಿ ಕೀಪರ್, ಚೆಂಡನ್ನು ಬಳಸಿಕೊಂಡು ಸ್ಟಂಪ್ ಗಳ ಮೇಲಿನ ಬೇಲುಗಳನ್ನು ಉರುಳಿಸಿ ಬ್ಯಾಟ್ಸ್‌ಮನ್ ನನ್ನು ಔಟು ಮಾಡಬಹುದು.
 • ಚೆಂಡನ್ನು ಹೊರಮೈದಾನಕ್ಕೆ ಬೀಸಿದಾಗ, ಕೀಪರ್, ಫೀಲ್ಡರ್ ಮರಳಿ ಎಸೆಯುವ ಚೆಂಡನ್ನು ಕ್ಯಾಚ್ ಹಿಡಿದು, ಸಾಧ್ಯವಾದರೆ ಬ್ಯಾಟ್ಸ್‌ಮನ್ ನನ್ನು ರನ್ ಔಟ್ ಮಾಡಲು ಸ್ಟಂಪ್ ಗಳಿಗೆ ತೀರ ಹತ್ತಿರದಲ್ಲಿಯೇ ನಿಂತಿರುತ್ತಾನೆ.

ಕೀಪರ್ ನ ಸ್ಥಾನವು ಬೌಲರ್ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ: ವೇಗದ ಬೌಲಿಂಗ್ ಗಾಗಿ ಆತ ಸ್ಟಂಪ್ ಗಳ ಸ್ವಲ್ಪ ಅಂತರದಲ್ಲಿ ಬಾಗಿ ನಿಲ್ಲುತ್ತಾನೆ. ಇದರಿಂದಾಗಿ ಬ್ಯಾಟ್ಸ್‌ಮನ್ ನಿಂದ ಬೀಸಲ್ಪಡುವ ಎಜ್ ಗಳಿಗೆ ಪ್ರತಿಕ್ರಿಯಿಸಲು ಸಮಯಾವಕಾಶ ದೊರೆಯುತ್ತದೆ. ನಿಧಾನ ಗತಿಯ ಬೌಲಿಂಗ್ ಗಾಗಿ, ಆತ ಸ್ಟಂಪ್ ಗಳ ತೀರ ಸಮೀಪಕ್ಕೆ ಬರುತ್ತಾನೆ.(ಇದು "ಸ್ಟ್ಯಾಂಡಿಂಗ್ ಅಪ್(ಎದ್ದು ನಿಲ್ಲುವುದು) ಎಂದು ಪರಿಚಿತವಾಗಿದೆ), ಇದು ಬ್ಯಾಟ್ಸ್‌ಮನ್ ಗೆ ಕ್ರೀಸ್ ನೊಳಗೆ ಉಳಿಯುವಂತೆ ಒತ್ತಡ ಹಾಕುತ್ತದೆ ಅಥವಾ ಔಟ್ ಆಗಬಹುದಾದ ಅಪಾಯ ಹೆಚ್ಚಿಸುತ್ತದೆ. ವೇಗದ ಬೌಲಿಂಗ್ ನಲ್ಲಿ "ಎದ್ದು ನಿಲ್ಲುವ" ಸಾಮರ್ಥ್ಯವು, ಕೀಪರ್ ನ ಅನುಭವವನ್ನು ಅವಲಂಬಿಸಿರುತ್ತದೆ, ಉದಾಹರಣೆಗೆ ಗಾಡ್ಫ್ರೇ ಇವಾನ್ಸ್,ಅವರು, ಅಲೆಕ್ ಬೆಡ್ಸರ್ ರ ಬೌಲಿಂಗ್ ನಲ್ಲಿ ಯಾವಾಗಲೂ ಎದ್ದು ನಿಲ್ಲುತ್ತಿದ್ದರು. [೧]

ವಿಕೆಟ್-ಕೀಪಿಂಗ್ ಒಂದು ವಿಶಿಷ್ಟ ವಿಭಾಗವಾಗಿದ್ದು, ಒಬ್ಬ ನುರಿತ ಬ್ಯಾಟ್ಸ್‌ಮನ್ ಅಥವಾ ಬೌಲರ್ ನಿಂದ ನಿರೀಕ್ಷಿಸಲಾಗುವ ಮಟ್ಟಕ್ಕೆ ಸರಿಸಮನಾಗಿ ತರಬೇತಿ ಪಡೆದಿರುವ ಅಗತ್ಯವಿರುತ್ತದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಕೀಪರ್, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನೈಪುಣ್ಯ ಹೊಂದಿರಬೇಕೆಂದು ನಿರೀಕ್ಷಿಸಲಾಗುತ್ತದೆ. ಅಂದರೆ ಆತ ಕಡೇಪಕ್ಷ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅರ್ಹನಾಗಿರಬೇಕು. ಅಗ್ರ-ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಮರ್ಥರಾಗಿರುವ ವಿಕೆಟ್-ಕೀಪರ್ ಗಳನ್ನು ಅನೌಪಚಾರಿಕವಾಗಿ ಕೀಪರ್/ಬ್ಯಾಟ್ಸ್‌ಮನ್ ಎಂದು ಕರೆಯಲಾಗುತ್ತದೆ.

ಒಂದು ತಂಡದಲ್ಲಿ ಒಬ್ಬ ಕೀಪರ್ ಗೆ ಮಾತ್ರ ಅವಕಾಶವಿರುವ ಕಾರಣ, ಆಯ್ಕೆ ಮಂಡಳಿಯವರು(ವಿಶೇಷವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ) ಸಾಮಾನ್ಯವಾಗಿ ಇಬ್ಬರು ಅಥವಾ ಹೆಚ್ಚು ನುರಿತ ಕೀಪರ್ ಗಳ ನಡುವೆ ಆಯ್ಕೆ ಮಾಡುವಲ್ಲಿ ಗೊಂದಲಕ್ಕೆ ಸಿಲುಕುತ್ತಾರೆ. ಸಾಮಾನ್ಯವಾಗಿ, ಇಬ್ಬರು ಕೀಪರ್ ಗಳಲ್ಲಿ ಒಬ್ಬ ಅತ್ಯುತ್ತಮ ಕೀಪರ್, ಆದರೆ ಸರಾಸರಿ ಬ್ಯಾಟ್ಸ್‌ಮನ್ ಆಗಿದ್ದು, ಇನ್ನೊಬ್ಬ ಕೀಪರ್/ಬ್ಯಾಟ್ಸ್‌ಮನ್, ಸ್ಪಷ್ಟವಾಗಿ ಬ್ಯಾಟಿಂಗ್ ನಲ್ಲಿ ಉತ್ತಮವಾಗಿದ್ದು, ತನ್ನ ಎದುರಾಳಿ ತಂಡದ ಕೀಪರ್ ಗಿಂತ ಅಷ್ಟೇನೂ ಉತ್ತಮವಾಗಿ ಕೀಪಿಂಗ್ ಮಾಡದಿರಬಹುದು. ಇಂತಹದೇ ಒಂದು ಆಯ್ಕೆ ಗೊಂದಲವನ್ನು, ಇಂಗ್ಲೆಂಡ್ ನ ಆಯ್ಕೆ ಮಂಡಳಿಯು 1990ರಲ್ಲಿ ಜ್ಯಾಕ್ ರಸ್ಸಲ್(ಸಂಪೂರ್ಣ,ಕೇವಲ ಕೀಪರ್) ಹಾಗು ಅಲೆಕ್ ಸ್ಟಿವರ್ಟ್(ಕೀಪರ್/ಬ್ಯಾಟ್ಸ್‌ಮನ್)ರ ನಡುವೆ ಆಯ್ಕೆ ಮಾಡುವಾಗ ಎದುರಿಸಿತ್ತು. ಹೀಗಾಗಿ 1998ರವರೆಗೂ ಅಂದರೆ ರಸ್ಸಲ್ ನಿವೃತ್ತರಾಗುವವರೆಗೂ ಆಯ್ಕೆ ಮಂಡಳಿಯು ದೃಢವಾಗಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ: ಅದಕ್ಕೂ ಮುಂಚೆ ಇವರಿಬ್ಬರ ಕ್ರಮಾಂಕದ ಪಾತ್ರವನ್ನು ಅದಲುಬದಲು ಮಾಡಲಾಗುತ್ತಿತ್ತು. ಸಾಮಾನ್ಯವಾಗಿ ಸ್ಟಿವರ್ಟ್, ವಿಕೆಟ್ ಕೀಪಿಂಗ್ ಇಲ್ಲದಿರುವಾಗ ಬ್ಯಾಟನ್ನು ಹಿಡಿಯುತ್ತಾರೆ, ಇದಕ್ಕೆ ಅವರ ದಕ್ಷ ಬ್ಯಾಟಿಂಗ್ ಕಾರಣವಿರಬಹುದು. ಮತ್ತೊಂದು ಪ್ರಮುಖ ಉದಾಹರಣೆಯಿಂದರೆ ಪಾಕಿಸ್ತಾನಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್, ಯಾವಾಗಲೂ ಸುಲಭವಾಗಿ ದಕ್ಕುವ ಕ್ಯಾಚ್ ಗಳನ್ನು ಬಿಟ್ಟುಕೊಟ್ಟು ಒಬ್ಬ ಕಳಪೆ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಆದರೆ ಇವರ ಬ್ಯಾಟಿಂಗ್ ಶೈಲಿಯು ಗಮನಾರ್ಹವಾಗಿ ಆಟದ ಇತರ ಉತ್ತಮ ಪರ್ಯಾಯಗಳಿಗೆ ಹೋಲಿಸಿದರೆ ಹೆಚ್ಚು ಉತ್ತಮವಾಗಿರುವ ಕಾರಣಕ್ಕೆ ಕಳೆದ ದಶಕದಿಂದಲೂ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಕ್ರಿಕೆಟ್ ನಲ್ಲಿ ಇಂದು ಮಹೇಂದ್ರ ಸಿಂಗ್ ಧೋನಿ, ಕುಮಾರ ಸಂಗಕ್ಕಾರ, ಬ್ರೆಂಡನ್ ಮ್ಯಾಕ್ಕಲಂ ಹಾಗು ಮಾರ್ಕ್ ಬೌಚರ್ ಅಗ್ರ ಕೀಪರ್/ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಕೀಪರ್ ತಂಡದ ನಾಯಕನಾಗಿಯೂ ಸಹ ತನ್ನ ಪಾತ್ರ ನಿರ್ವಹಿಸಬಹುದು. ಅಸಾಧಾರಣ ರೀತಿಯಲ್ಲಿ, ಅವರುಗಳು ಸಾಮಾನ್ಯವಾಗಿ ಒಂದು ಇನ್ನಿಂಗ್ಸ್ ನ ಪ್ರತಿ ಎಸೆತವನ್ನೂ ಭಾಗಿಯಾಗಿ ವೀಕ್ಷಿಸಿರುತ್ತಾರೆ, ಹಾಗು ನಾಯಕನಿಗೆ ಕಾಣದ ಆಟದ ಸ್ಥಿತಿಗತಿಯನ್ನು ವಿವರಿಸುವ ಸಾಮರ್ಥ್ಯವನ್ನೂ ಹೊಂದಿರುತ್ತಾರೆ. ಅವರುಗಳು ಸಾಧಾರಣವಾಗಿ ಬೌಲರ್ ಗೆ ಉತ್ತೇಜಿಸುವುದು ಕಾಣಬರುತ್ತದೆ. ಅಲ್ಲದೇ ಅಗತ್ಯ ನಿಪುಣತೆ, ಪ್ರದರ್ಶನ ಅಥವಾ ವೈಯಕ್ತಿಕ ವೈಖರಿ ಬಗ್ಗೆ ನಿರ್ದಿಷ್ಟ ಸಮಯದಲ್ಲಿ ಬ್ಯಾಟ್ಸ್‌ಮನ್ ನನ್ನು ಮೆಲುದನಿಯಲ್ಲೇ ಟೀಕಿಸುವ ಮೂಲಕ ಅವರ "ಕಾಲೆಳೆ"ಯಬಹುದು.ಅದಲ್ಲದೇ ಅವರ ಕೌಶಲ್ಯದ ಬಗ್ಗೆಯೂ ಅವರಲ್ಲಿ ಪ್ರಶಂಸೆ ಇರುತ್ತದೆ.ಹೀಗೆ ಈ ಉತ್ತೇಜನಾ ಹೊಡೆತದ ಪ್ರಕ್ರಿಯೆ ನಿರಂತರ ಸಾಗಿರುತ್ತದೆ.

ಚೆಂಡನ್ನು ರಕ್ಷಣಾ ಸಾಧನದೊಂದಿಗೆ ಸ್ಪರ್ಶಿಸಲು ಅವಕಾಶವಿರುವ ಏಕೈಕ ಫೀಲ್ಡರ್ ಎಂದರೆ ಕೀಪರ್. ಈತ ಮಾದರಿಯಾಗಿ ತೋರು ಬೆರಳು ಹಾಗು ಹೆಬ್ಬೆರಳ ನಡುವೆ ಗಟ್ಟಿಪಟ್ಟಿಯನ್ನು ಹೊಂದಿರುವ ದೊಡ್ಡ ಪ್ಯಾಡ್ ಉಳ್ಳ ಕೈಗವಸು ಧರಿಸುತ್ತಾರೆ; ಆದರೆ ಇತರ ಯಾವುದೇ ಬೆರಳುಗಳಿಗೆ ಗಟ್ಟಿಪಟ್ಟಿ ಇರುವುದಿಲ್ಲ. ಸಾಕಷ್ಟು ರಕ್ಷಣೆಯನ್ನು ಈ ಕೈಗವಸುಗಳು, ಯಾವಾಗಲೂ ಒದಗಿಸಲು ಸಾಕಾಗುವುದಿಲ್ಲ. ಇಂಗ್ಲೆಂಡ್ ಕೀಪರ್ ಅಲನ್ ನಾಟ್ ಕೆಲವೊಂದು ಬಾರಿ ತಮ್ಮ ಕೈಗವಸುಗಳ ಒಳಗೆ ಹೆಚ್ಚುವರಿ ಮೆತ್ತೆಯ ಆಸರೆಗಾಗಿ ಪ್ರಾಣಿಗಳ ಮಾಂಸಲ ದಪ್ಪ ಕವಚದ ತುಂಡನ್ನು ಬಳಸುತ್ತಿದ್ದರು. ವಿಕೆಟ್-ಕೀಪರ್ ಗಳು ಕಾಲುಗಳಿಗೆ ರಕ್ಷಣಾ ಕವಚ ಹಾಗು ತೊಡೆಸಂದಿನ ಭಾಗವನ್ನು ರಕ್ಷಿಸಿಕೊಳ್ಳಲು ಮಡಿಕೆಯ ಬಿಗಿ ರಕ್ಷಾ ಕವಚ ಧರಿಸಿರುತ್ತಾರೆ.

ವಿಕೆಟ್-ಕೀಪರ್ ಗಳು ತಮ್ಮ ಪ್ಯಾಡ್ ಗಳನ್ನು ಕಳಚಿಟ್ಟು ಬೌಲ್ ಮಾಡಲು ಅವಕಾಶವಿರುತ್ತದೆ. ಯಾವಾಗ ಪಂದ್ಯವು ಡ್ರಾ ಹಂತಕ್ಕೆ ತಲುಪಿ ಅಥವಾ ಬೌಲಿಂಗ್ ತಂಡವು ವಿಕೆಟ್ ಕಬಳಿಸುವ ಪ್ರಯತ್ನ ನಡೆಸುತ್ತದೆಯೋ ಆಗ ಕೀಪರ್ ಗಳು ಈ ರೀತಿ ಮಾಡುವುದು ಸಹಜವಾಗಿರುತ್ತದೆ. ಇಬ್ಬರು ಕೀಪರ್ ಗಳು ತಮ್ಮ ಪ್ಯಾಡ್ ಗಳನ್ನು ಕಳಚಿಟ್ಟು ಮೊದಲ-ದರ್ಜೆ ಕ್ರಿಕೆಟ್ ನಲ್ಲಿ ಮೂರು-ವಿಕೆಟ್ ಗಳನ್ನು ಪಡೆದು ವಿಕ್ರಮ ಸಾಧಿಸಿದ್ದಾರೆ: 1954-55ರಲ್ಲಿ ಕಟಕ್ ನಲ್ಲಿ ನಡೆದ ಒಡಿಶಾ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್ ಪರ ಆಟಗಾರ ಪ್ರೋಬಿರ್ ಸೇನ್ ಹಾಗು A.C. ( (ಅಲನ್) ಸ್ಮಿತ್, 1965ರಲ್ಲಿ ಕ್ಲಾಕ್ಟೊನ್ ನಲ್ಲಿ ನಡೆದ ಎಸ್ಸೆಕ್ಸ್ ವಿರುದ್ಧದ ಪಂದ್ಯದಲ್ಲಿ ವಾರ್ವಿಕ್ಶೈರ್ ಪರ ವಿಕೆಟ್ ಗಳಿಸಿದ್ದರು; ಆ ಪಂದ್ಯದ ಮೂಲಕ ಸ್ಮಿತ್ ಒಬ್ಬ ಅಸಾಧಾರಣ ಆಟಗಾರನೆನಿಸಿದರು. ಅವರು ಮೂಲತಃ ಒಬ್ಬ ವಿಕೆಟ್-ಕೀಪರ್ ಆಗಿದ್ದರೂ ಸಹ ಕೆಲವೊಂದು ಬಾರಿ ಬೌಲಿಂಗ್ ಗೂ ಆಯ್ಕೆಯಾಗುತ್ತಿದ್ದರು.

ಬದಲಿ ಆಟಗಾರರು:

ಬದಲಾಯಿಸಿ

ಲಾಜ್ ಆಫ್ ಕ್ರಿಕೆಟ್ ನ ಎರಡನೇ ನಿಯಮದ ಪ್ರಕಾರ, ಒಬ್ಬ ಬದಲಿ ಆಟಗಾರನು(ಒಬ್ಬ ಅನ್ಯಾರೋಗ್ಯದಿಂದ ಬಳಲುತ್ತಿರುವ ಅಥವಾ ಗಾಯಗೊಂಡ ಆಟಗಾರನ ಬದಲಿಗೆ) ವಿಕೆಟ್-ಕೀಪಿಂಗ್ ಮಾಡುವಂತಿಲ್ಲ.[೨] Archived 2010-02-21 ವೇಬ್ಯಾಕ್ ಮೆಷಿನ್ ನಲ್ಲಿ.

ಈ ನಿಯಮವು ಬ್ಯಾಟಿಂಗ್ ಮಾಡುವ ತಂಡದ ನಾಯಕನೊಂದಿಗಿನ ಒಪ್ಪಂದದ ಮೂಲಕ ಕೆಲವೊಂದು ಬಾರಿ ತಾತ್ಕಾಲಿಕವಾಗಿ ರದ್ದುಗೊಳ್ಳುತ್ತದೆ. ಆದಾಗ್ಯೂ ಎರಡನೇ ನಿಯಮವು ಇಂತಹ ಒಪ್ಪಂದ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ಉದಾಹರಣೆಗೆ, 1986ರಲ್ಲಿ ಲಾರ್ಡ್ಸ್ ನಲ್ಲಿ ನಡೆದ ಇಂಗ್ಲೆಂಡ್-ನ್ಯೂಜಿಲೆಂಡ್ ಟೆಸ್ಟ್ ಪಂದ್ಯಾವಳಿಯ ಸಮಯ, ಇಂಗ್ಲೆಂಡ್ ನ ನುರಿತ ಕೀಪರ್, ಬ್ರೂಸ್ ಫ್ರೆಂಚ್ ಇಂಗ್ಲೆಂಡ್ ನ ಮೊದಲ ಇನ್ನಿಂಗ್ಸ್ ಸಮಯದಲ್ಲಿ ಗಾಯಗೊಂಡಿದ್ದರು. ನಂತರ ಇಂಗ್ಲೆಂಡ್ ನ್ಯೂಜಿಲೆಂಡ್ ನ ಮೊದಲ ಇನ್ನಿಂಗ್ಸ್ ನಲ್ಲಿ ನಾಲ್ಕು ಮಂದಿ ಕೀಪರ್ ಗಳಿಗೆ ಅವಕಾಶ ನೀಡಿತು: ಮೊದಲ ಎರಡು ಓವರ್ ಗಳಿಗೆ ಬಿಲ್ ಅತ್ಹೆಯ್ ಕೀಪಿಂಗ್ ಮಾಡಿದರೆ; ಪ್ರಾಯೋಜಕರ ಟೆಂಟ್ ನಲ್ಲಿ ಕುಳಿತಿದ್ದ 45 ವರ್ಷ ವಯಸ್ಸಿನ ಅನುಭವಿ ಬಾಬ್ ಟೈಲರ್ ರನ್ನು ಕೀಪಿಂಗ್ ಮಾಡಲು ಸೂಚಿಸಲಾಯಿತು. ಅವರು 3 ರಿಂದ 76ನೇ ಓವರ್ ವರೆಗೂ ಕೀಪಿಂಗ್ ಮಾಡಿದರು, ನಂತರ ಹ್ಯಾಂಪ್ಶೈರ್ ನ ಕೀಪರ್ ಬಾಬಿ ಪಾರ್ಕ್ಸ್ 77 ರಿಂದ 140ನೇ ಓವರ್ ವರೆಗೂ ಕೀಪಿಂಗ್ ಮಾಡಿದರು; ಹಾಗು ಇನ್ನಿಂಗ್ಸ್ ನ ಅಂತಿಮ ಎಸೆತಗಳಿಗಾಗಿ ಬ್ರೂಸ್ ಫ್ರೆಂಚ್ ವಿಕೆಟ್-ಕೀಪಿಂಗ್ ಮಾಡಿದರು.

ಟೆಸ್ಟ್ ಪಂದ್ಯಾವಳಿಯ ಮುಂಚೂಣಿ ವಿಕೆಟ್-ಕೀಪರ್ ಗಳು

ಬದಲಾಯಿಸಿ

ಟೆಸ್ಟ್ ಪಂದ್ಯಾವಳಿಯಲ್ಲಿ ಈ ಕೆಳಕಂಡ ವಿಕೆಟ್-ಕೀಪರ್ ಗಳು 200 ಅಥವಾ ಅದಕ್ಕೂ ಅಧಿಕ ವಿಕೆಟ್ ಗಳನ್ನು ಗಳಿಸಿದ್ದಾರೆ.[೨]

ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಪಂದ್ಯಾವಳಿಯಲ್ಲಿ ಅಗ್ರ ಸ್ಥಾನ ಗಳಿಸಿದ ವಿಕೆಟ್-ಕೀಪರ್ ಗಳು1
ಸಂಖ್ಯೆ ಹೆಸರು ರಾಷ್ಟ್ರ ಪಂದ್ಯಗಳು ಕ್ಯಾಚ್ ಹಿಡಿದಿದ್ದು ಸ್ಟಂಪ್ಡ್ ಮಾಡಿದ್ದು‌ ಒಟ್ಟಾರೆ ವಿಕೆಟ್ ಕಬಳಿಕೆ
ಮಾರ್ಕ್ ಬೌಷರ್2* ದಕ್ಷಿಣ ಆಫ್ರಿಕಾ‌ 131 472 22 494
ಆಡಮ್ ಗಿಲ್ಕ್ರಿಸ್ಟ್ ಆಸ್ಟ್ರೇಲಿಯಾ 96 379 37 416
ಇಯಾನ್ ಹೀಲಿ ಆಸ್ಟ್ರೇಲಿಯಾ 119 366 29 395
ರಾಡ್ ಮಾರ್ಷ್ ಆಸ್ಟ್ರೇಲಿಯಾ 96 343 12 355
ಜೆಫ್ಫ್ರಿ ಡುಜೋನ್ ವೆಸ್ಟ್‌ ಇಂಡೀಸ್‌ 81 267 5 272
ಅಲನ್ ನಾಟ್ ಇಂಗ್ಲೆಂಡ್ 95 250 19 269
ಅಲೆಕ್ ಸ್ಟಿವರ್ಟ್ ಇಂಗ್ಲೆಂಡ್ 82 227 14 241
ವಾಸಿಂ ಬಾರಿ ಪಾಕಿಸ್ತಾನ‌ 81 201 27 228
ರಿಡ್ಲೆ ಜೇಕಬ್ಸ್ ವೆಸ್ಟ್‌ ಇಂಡೀಸ್‌ 65 207 12 219
೧೦ ಗಾಡ್ಫ್ರೇ ಇವಾನ್ಸ್ ಇಂಗ್ಲೆಂಡ್ 91 173 46 219
೧೧ ಆಡಮ್ ಪರೋರೆ ನ್ಯೂಜಿಲೆಂಡ್‌‌ 78 197 7 204

ಕೋಷ್ಟಕದಲ್ಲಿನ ಟಿಪ್ಪಣಿಗಳು

 1. 6 ಏಪ್ರಿಲ್ 2010ರವರೆಗೂ ಈ ಅಂಕಿಅಂಶಗಳು ಸರಿಯಾಗಿವೆ
 2. ಹಾಲಿ ಆಟಗಾರರನ್ನು ಸೂಚಿಸುತ್ತದೆ

ಏಕದಿನ ಪಂದ್ಯಾವಳಿಯ ಮುಂಚೂಣಿ ವಿಕೆಟ್-ಕೀಪರ್ ಗಳು

ಬದಲಾಯಿಸಿ

ಏಕದಿನ ಪಂದ್ಯಾವಳಿಯಲ್ಲಿ ಈ ಕೆಳಕಂಡ ವಿಕೆಟ್-ಕೀಪರ್ ಗಳು 200 ಅಥವಾ ಅದಕ್ಕೂ ಅಧಿಕ ವಿಕೆಟ್ ಗಳನ್ನು ಗಳಿಸಿದ್ದಾರೆ.[೩]

ವಿಕೆಟ್ ಕಬಳಿಸುವ ಮೂಲಕ ಏಕದಿನ ಪಂದ್ಯಾವಳಿಯಲ್ಲಿ ಅಗ್ರ ಸ್ಥಾನ ಗಳಿಸಿದ ವಿಕೆಟ್-ಕೀಪರ್ ಗಳು1
ಕ್ರಮಸಂಖ್ಯೆ ಹೆಸರು ರಾಷ್ಟ್ರ ಪಂದ್ಯಗಳು ಕ್ಯಾಚ್ ಗಳು ಸ್ಟಂಪ್ ಮಾಡಿದ್ದು ಒಟ್ಟಾರೆ ಔಟ್ ಮಾಡಿದ್ದು
1 ಆಡಮ್ ಗಿಲ್ಕ್ರಿಸ್ಟ್ ಆಸ್ಟ್ರೇಲಿಯಾ 287 417 55 472
2 ಮಾರ್ಕ್ ಬೌಷರ್2* ದಕ್ಷಿಣ ಆಫ್ರಿಕಾ‌ 291 399 22 421
3 ಕುಮಾರ ಸಂಗಕ್ಕಾರ2* ಶ್ರೀಲಂಕಾ 267 235 66 301
4 ಮೊಯಿನ್ ಖಾನ್ ಪಾಕಿಸ್ತಾನ‌ 219 214 73 287
5 ಇಯಾನ್ ಹೀಲಿ ಆಸ್ಟ್ರೇಲಿಯಾ 168 194 39 233
6 ರಶೀದ್ ಲತೀಫ್ ಪಾಕಿಸ್ತಾನ‌ 166 182 38 220
7 ರೋಮೇಶ್ ಕಾಲುವಿತರಣ ಶ್ರೀಲಂಕಾ 189 131 75 206
8 ಎಂ.ಎಸ್ ಧೋನಿ* ಭಾರತ 162 154 52 206
9 ಜೆಫ್ಫ್ರಿ ಡುಜಾನ್ ವೆಸ್ಟ್‌ ಇಂಡೀಸ್‌ 169 183* 21 204

ಕೋಷ್ಟಕದಲ್ಲಿನ ಟಿಪ್ಪಣಿಗಳು

 1. 6 ಏಪ್ರಿಲ್ ಮೇ 2010ರವರೆಗೂ ಈ ಅಂಕಿಅಂಶಗಳು ಸರಿಯಾಗಿವೆ
 2. ಹಾಲಿ ಆಟಗಾರರನ್ನು ಸೂಚಿಸುತ್ತದೆ

ಇವನ್ನೂ ಗಮನಿಸಿ‌

ಬದಲಾಯಿಸಿ
 • ಆಲ್-ರೌಂಡರ್
 • ಬ್ಯಾಟ್ಸ್‌ಮನ್
 • ಬೌಲರ್
 • ನಾಯಕ
 • ಕ್ಯಾಚರ್
 • ಕ್ರಿಕೆಟ್‌ ಪಾರಿಭಾಷಿಕ ಶಬ್ದಗಳು
 • ಫೀಲ್ಡರ್
 • ಬಾಗಿ ನಿಲ್ಲುವ ಸ್ಥಾನ

ಉಲ್ಲೇಖಗಳು‌

ಬದಲಾಯಿಸಿ
 1. ೧.೦ ೧.೧ "Law 40 The Wicket Keeper". Lords Home of Cricket. Archived from the original on 2010-02-21. Retrieved 2011-03-07.
 2. "Wicketkeeping Records most Test Match dismissals in a career". Cricinfo. 2010-04-07.
 3. "Wicketkeeping Records most ODI dismissals in a career". Cricinfo. 2010-04-07.