ಎಂ.ಎಫ್. ಹುಸೇನ್
ಮಕ್ಬೂಲ್ ಫಿದಾ ಹುಸೇನ್ , (ಸೆಪ್ಟೆಂಬರ್ ೧೭, ೧೯೧೫ - ಜೂನ್ ೯, ೨೦೧೧) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಭಾರತದ, ಮುಂಬಯಿ ಪ್ರಾಂತದ ಪಂಢರಪುರದಲ್ಲಿ ಜನಿಸಿದರುಎಂ.ಎಫ್ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಇವರು, ಭಾರತೀಯ ಮೂಲದ ಕಲಾವಿದರಾಗಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ, ಇವರನ್ನು ಭಾರತದ "ಪಾಬ್ಲೊ ಪಿಕಾಸೋ ಎಂದು ಕರೆಯಲಾಗುತ್ತದೆ".[೨] ೧೯೭೦ ರ ಹೊತ್ತಿನಲ್ಲಿ ರಚಿಸಲಾದ ವರ್ಣಚಿತ್ರಗಳ ಮೇಲೆ ೧೯೯೬ ರಲ್ಲಿ ವಿವಾದವು ಹುಟ್ಟಿಕೊಂಡಿತು. ಈ ಚಿತ್ರಗಳನ್ನು ಹಿಂದು ಧರ್ಮದ ವಿರುದ್ಧವಾಗಿ ಚಿತ್ರಿಸಲಾಗಿದೆ ಎಂದು ಅರ್ಥೈಸಲಾಯಿತು. ಅವರ ತಾಯ್ನಾಡಿನಲ್ಲಿ ಹೂಡಲಾದ ಕಾನೂನು ಮೊಕದ್ದಮೆಗಳು ಮತ್ತು ಜೀವ ಬೆದರಿಕೆಗಳ ನಂತರ, ಅವರು ೨೦೦೬ ರಿಂದ ತಮಗೆ ತಾವೇ ವಿಧಿಸಿಕೊಂಡ ವನವಾಸದಲ್ಲಿದ್ದಾರೆ. ೨೦೧೦ ರ ಜನವರಿ ತಿಂಗಳಿನಲ್ಲಿ ಅವರಿಗೆ ಕತಾರ್ ನ ಪೌರತ್ವವನ್ನು ನೀಡಲಾಯಿತಲ್ಲದೆ, ಅವರು ಅದನ್ನು ಸ್ವೀಕರಿಸಿದರು. ಮರುವರ್ಷದಲ್ಲಿಯೇ ಲಂಡನ್ನಿನಲ್ಲಿ ಕೊನೆಯುಸಿರೆಳೆದರು.
ಎಂ.ಎಫ್. ಹುಸೇನ್ | |
MF Husain (right) at Museum of Islamic Art, Doha | |
ಹೆಸರು | Maqbool Fida Husain |
ಹುಟ್ಟು | |
ರಾಷ್ಟ್ರೀಯತೆ | India; Qatar[೧] |
ಕ್ಷೇತ್ರ | Painting, Drawing |
ತರಬೇತಿ | Sir J. J. School of Art |
ವೃತ್ತಿಜೀವನ
ಬದಲಾಯಿಸಿ೧೯೪೦-೧೯೬೫
ಬದಲಾಯಿಸಿಹುಸೇನ್ ರವರು ೧೯೪೦ ರ ಹೊತ್ತಿನಲ್ಲಿ ಮೊದಲು ಕಲಾವಿದರಾಗಿ ಪ್ರಸಿದ್ಧರಾದರು. ಫ್ರಾನ್ಸಿಸ್ ನ್ಯೂಟನ್ ಸೋಜ ರವರು ಸ್ಥಾಪಿಸಿದ, ಪ್ರೋಗ್ರೆಸಿವ್ ಆರ್ಟಿಸ್ಟ್ ಗ್ರೂಪ್ಅನ್ನು ೧೯೪೭ ರಲ್ಲಿ ಸೇರಿಕೊಂಡರು. ಇದು, ಬೆಂಗಾಲ್ ಸ್ಕೂಲ್ ಆಫ್ ಆರ್ಟ್ ಸ್ಥಾಪಿಸಿದಂತಹ ರಾಷ್ಟ್ರೀಯತಾವಾದಿ ಸಂಪ್ರದಾಯಗಳನ್ನು ಮುರಿಯಲು ಇಚ್ಛಿಸುವ, ಹಾಗು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವ ಮೂಲಕ, ಭಾರತದ ನವ್ಯ ಪ್ರಯೋಗಿಗೆ ಪ್ರೋತ್ಸಾಹಿಸಬೇಕೆಂದು ಬಯುಸುವ ಯುವಕಲಾವಿದರ ಸಂಘವಾಗಿದೆ. ೧೯೫೨ ರಲ್ಲಿ ಇವರ ಮೊದಲ ಸೋಲೋ(ಅವರು ರಚಿಸಿದ ಚಿತ್ರಗಳು ಮಾತ್ರ) ವರ್ಣಚಿತ್ರ ಪ್ರದರ್ಶನವನ್ನು ಜೂರಿಚ್ ನಲ್ಲಿ ನಡೆಸಲಾಯಿತು. ಇದಾದ ಕೆಲವೇ ವರ್ಷಗಳ ನಂತರ ಇವರ ವರ್ಣಚಿತ್ರಕಲಾಕೃತಿಗಳನ್ನು ಯುರೋಪ್ ಮತ್ತು U.S. ನಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ೧೯೫೫ ರಲ್ಲಿ ಭಾರತ ಸರ್ಕಾರವು ಇವರಿಗೆ ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.[೩]
೧೯೬೫-೧೯೯೦
ಬದಲಾಯಿಸಿ೧೯೬೭ ರಲ್ಲಿ ಅವರ ಮೊದಲನೆಯ ಚಲನಚಿತ್ರವಾದ ತ್ರೂ ದಿ ಐಸ್ ಆಫ್ ದಿ ಪೇಂಟರ್ ಅನ್ನು ನಿರ್ಮಿಸಿದರು. ಇದನ್ನು ಬರ್ಲಿನ್ ಫಿಲ್ಮ್ ಫೆಸ್ಟಿವಲ್(ಬರ್ಲಿನ್ ಚಲನಚಿತ್ರೋತ್ಸವ) ನಲ್ಲಿ ಪ್ರದರ್ಶಿಸಲಾಯಿತಲ್ಲದೆ, ಅಲ್ಲಿ ಇದು ಗೋಲ್ಡನ್ ಬೇರ್ ಅನ್ನು ಕೂಡ ಗೆದ್ದುಕೊಂಡಿತು.[೪][೫] ಎಂ.ಎಫ್. ಹುಸೇನ್ ರವರು ೧೯೭೧ ರಲ್ಲಿ ಸಾ ಪೌಲೋ ಬೈನಿಯಲ್ಗೆ, ಪಬ್ಲೋ ಪಿಕಾಸೋ ರವರೊಂದಿಗೆ ಅಹ್ವಾನಿಸಲಾಗಿದ್ದ ವಿಶೇಷ ಅತಿಥಿಯಾಗಿದ್ದರು.[೫] ೧೯೭೩ ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಲ್ಲದೇ ೧೯೮೬ ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು.[೫] ೧೯೯೧ ರಲ್ಲಿ ಇವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರಿಗೆ ೧೯೮೭-೮೮ನೆಯ ಸಾಲಿನ ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಯಿತು.
೧೯೯೦ ರಿಂದ–ಇಲ್ಲಿಯವರೆಗೆ
ಬದಲಾಯಿಸಿಹುಸೇನ್ ರವರು ಭಾರತದಲ್ಲೆ ಅತ್ಯಂತ ಹೆಚ್ಚು ಹಣಪಡೆಯುವ ವರ್ಣಚಿತ್ರಕಾರರಾದರು. ಇವರ ಒಂದು ಕ್ಯಾನ್ವಸ್(ವರ್ಣಚಿತ್ರ ಬರೆಯಲು ಬಳಸುವ ಬಟ್ಟೆ) ಇತ್ತೀಚಿನ ಕ್ರಿಸ್ಟಿ ಹರಾಜಿನಲ್ಲಿ ಸುಮಾರು $೨ ಮಿಲಿಯನ್ ಗಳ ವರೆಗು ಗಳಿಸಿತು.[೬] ಇವರು ಗಜ ಗಾಮಿನಿ (ಈ ಚಲನಚಿತ್ರದಲ್ಲಿ ಇವರ ಸ್ಫೂರ್ತಿ ದೇವತೆಯಾದ ಮಾಧುರಿ ದೀಕ್ಷಿತ್ ರವರೊಂದಿಗೆ ಕೆಲಸಮಾಡಿದ್ದಾರೆ. ಇವರು ಹುಸೇನ್ ರವರ ವರ್ಣಚಿತ್ರಗಳ ವಸ್ತುವಾಗಿದ್ದು, ಈ ಚಿತ್ರಗಳ ಮೇಲೆ ಅವರು ಫಿದಾ ಎಂದು ಹಸ್ತಾಕ್ಷರ ಹಾಕಿದ್ದಾರೆ)ಯನ್ನು ಒಳಗೊಂಡಂತೆ ಕೆಲವು ಚಲನಚಿತ್ರಗಳ ಮೇಲೂ ಕಾರ್ಯನಿರ್ವಹಿಸಿದ್ದಾರೆ(ನಿರ್ಮಿಸಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ). ಈ ಚಲನಚಿತ್ರವನ್ನು ಶ್ರೀಮತಿ. ದೀಕ್ಷಿತ್ ರವರಿಗೆಂದೇ ನಿರ್ಮಿಸಲಾಗಿತ್ತು.[೭] ಈ ಚಲನಚಿತ್ರದಲ್ಲಿ ಅವರು ಅನೇಕ ರೂಪಗಳನ್ನು ಕಣ್ಣಿಗೆ ಕಟ್ಟುವಹಾಗೆ ವರ್ಣಿಸುತ್ತಿರುವಂತೆ ಹಾಗು ಕಾಳಿದಾಸ ನ ಸ್ಫೂರ್ತಿದೇವತೆ, ಮೋನ ಲೀಸ, ಬಂಡಾಯಗಾರ್ತಿ, ಸಂಗೀತ ಸುಖಭ್ರಾಂತಿಯಲ್ಲಿರುವ ಪಾತ್ರಗಳನ್ನು ಒಳಗೊಂಡಂತೆ ಹೆಣ್ತನವನ್ನು ಅಭಿವ್ಯಕ್ತಿಸುತ್ತಿರುವ ಮಹಿಳೆಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅನಂತರ ಅವರು Meenaxi: A Tale of Three Cities ಅನ್ನು (ತಬುವಿನ ಜೊತೆಯಲ್ಲಿ)ನಿರ್ಮಿಸಲು ಮುಂದಾದರು. ಇವರ ಆತ್ಮಚರಿತ್ರೆಯನ್ನು ಚಲನಚಿತ್ರವಾಗಿಸಿ, ತಾತ್ಕಾಲಿಕವಾಗಿ ದಿ ಮೇಕಿಂಗ್ ಆಫ್ ದಿ ಪೇಂಟರ್ ಎಂಬ ಶೀರ್ಷಿಕೆಯನ್ನಿಡಲಾಯಿತು. ಈ ಚಲನಚಿತ್ರದಲ್ಲಿ ಶ್ರೆಯಸ್ ತಲ್ಪಡೆ ಯವರು ಯುವ ಹುಸೇನ್ ರವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[೮] ಪೀಬಾಡಿ ಎಸೆಕ್ಸ್ ಮ್ಯೂಸಿಯಂ (PEM) (USA ಯ ಮ್ಯಾಸಚುಸೆಟ್ಸ್ ನಲ್ಲಿದೆ) ೨೦೦೬ ರ ನವೆಂಬರ್ ೪ ರಿಂದ ೨೦೦೭ ರ ಜೂನ್ ೩ ರ ವರೆಗೆ ಸೋಲೋ ಪ್ರದರ್ಶನವನ್ನು ಪ್ರದರ್ಶಿಸಿತು. ಇದು, ಹಿಂದೂ ಮಹಾಕಾವ್ಯ ಮಹಾಭಾರತ ದಿಂದ ಸ್ಫೂರ್ತಿಗೊಂಡ ಹುಸೇನ್ ರವರ ವರ್ಣಚಿತ್ರಗಳನ್ನು ಪ್ರದರ್ಶಿಸಿತು. ಕೇರಳ ಸರ್ಕಾರವು ಹುಸೇನ್ ರವರಿಗೆ ೯೨ ನೇ ವಯಸ್ಸಿನಲ್ಲಿ, ರಾಜಾ ರವಿ ವರ್ಮ ಎಂಬ ಅತ್ಯಂತ ಗೌರವಾನ್ವಿತ ಪ್ರಶಸ್ತಿಯನ್ನು ನೀಡಿ ಗೌರವಿಸಿತು.[೯] ಈ ಪ್ರಕಟಣೆಯು ಕೇರಳದಲ್ಲಿ ವಿವಾದಕ್ಕೆ ಕಾರಣವಾಯಿತು. ಅಲ್ಲದೇ ಕೆಲವು ಸಾಂಸ್ಕೃತಿಕ ಸಂಸ್ಥೆಗಳು ಪ್ರಶಸ್ತಿಯನ್ನು ನೀಡಬಾರದೆಂದು ಹೋರಾಟ ನಡೆಸಿದವು ಮತ್ತು ಕೇರಳದ ನ್ಯಾಯಾಲಯಗಳಿಗೆ ಅರ್ಜಿಸಲ್ಲಿಸಿದವು. ಶಬರಿಮಲೆಯ ವಕ್ತಾರರಾದ ರಾಹುಲ್ ಈಶ್ವರ್ ರವರು, ಕೇರಳದ ಉಚ್ಚ ನ್ಯಾಯಾಲಯದಿಂದ ಅಹವಾಲನ್ನು ಇತ್ಯರ್ಥಗೊಳಿಸುವ ವರೆಗು, ಪ್ರಶಸ್ತಿಯನ್ನು ನೀಡದಂತೆ ತಾತ್ಕಾಲಿಕ ತಡೆಯಾಜ್ಞೆ ತಂದರು.[೧೦] ೨೦೦೮ ರ ಪೂರ್ವಾರ್ಧದಲ್ಲಿ, ಹುಸೇನ್ ರವರ ಅತ್ಯಂತ ದೊಡ್ಡ ದ್ವಿಪುಟ ಚಿತ್ರಫಲಕವಾದ ಬ್ಯಾಟಲ್ ಆಫ್ ಗಂಗಾ ಅಂಡ್ ಜಮುನ: ಮಹಾಭಾರತ ೧೨ , $೧.೬ ಮಿಲಿಯನ್ ಗಳಿಸುವು ಮೂಲಕ ಕ್ರಿಸ್ಟಿಯ ಸೌತ್ ಏಷನ್ ಮಾಡ್ರನ್ ಅಂಡ್ ಕಂಟೆಂಪರರಿ ಆರ್ಟ್ಸ್ ಸೇಲ್ ಹರಾಜಿನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿತು.[೧೧]
ಮರಣ
ಬದಲಾಯಿಸಿಎಂ.ಎಫ್.ಹುಸೇನ್ ತೊಂಭತ್ತೈದನೆಯ ವಯಸ್ಸಿನಲ್ಲಿ ೯ ಜೂನ್ ೨೦೧೧ರಲ್ಲಿ ಹೃದಯಾಘಾತದಿಂದ ನಿಧನರಾದರು.[೧೨] ಮೃತರಾಗುವ ಮುಂಚಿನ ಕೆಲವು ತಿಂಗಳುಗಳ ಕಾಲ ಅನಾರೋಗ್ಯ ಪೀಡಿತರಾಗಿದ್ದರು.[೧೩] ಲಂಡನ್ನಿನ ರಾಯಲ್ ಬ್ರಾಮ್ಟನ್ ಆಸ್ಪತ್ರೆಯಲ್ಲಿ ನಿಧನರಾದ ಹುಸೇನರ ಅಂತ್ಯಕ್ರಿಯೆಯನ್ನು ೧೦ ಜೂನ್ ೨೦೧೧ರಲ್ಲಿ ಲಂಡನ್ ನಗರದಲ್ಲಿ ನಡೆಸಲಾಯ್ತು. ಭಾರತದ ಪ್ರಧಾನಿ, ಮನಮೋಹನ್ ಸಿಂಗ್ ಈತನ ಸಾವನ್ನು “ರಾಷ್ಟ್ರೀಯ ನಷ್ಟ” ಎಂದು ಕರೆದರು, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಈತನ ಸಾವು “ಕಲಾ ಜಗತ್ತಿನಲ್ಲಿ ದೊಡ್ಡ ಶೂನ್ಯ ಸೃಷ್ಟಿಸಿತು” ಎಂದರು.[೧೪] ನಟಿ ಶಬಾನ ಆಜ್ಮಿ ಈತನನ್ನು “ಮೂರ್ತಿ ಭಂಜಕ ಚಿತ್ರಕಾರ, ಒಬ್ಬ ಅದ್ಭುತ ಮನುಷ್ಯ ಮತ್ತು ತುಂಬ ಒಳ್ಳೆಯ ಗೆಳೆಯ” ಎಂದು ನೆನೆದರು.[೧೫][೧೬][೧೭] ಈತನ ಸ್ವಯಂ ಪ್ರೇರಿತ ಅಜ್ಞಾತವಾಸ ಮತ್ತು ಭಾರತದ ಹೊರಗಿನ ಸಾವನ್ನು ಕುರಿತು ಚಿತ್ರಕಾರ ಅಕ್ಬರ್ ಪದಂಸೀ ಹೀಗೆಂದರು: “ಕಿಡಿಗೇಡಿಗಳ ಒಂದು ಗುಂಪಿನಿಂದಾಗಿ ಹುಸೇನ್‌ರಂತಹ ಮುಖ್ಯ ಕಲಾವಿದ ತನ್ನ ದೇಶದಿಂದ ಹೊರಗೆ ಸಾಯಬೇಕಾದ ಪರಿಸ್ಥಿತಿ ಸೃಷ್ಟಿಯಾದದ್ದು ಶೋಚನೀಯ.”[೧೮]
ವಿವಾದಗಳು
ಬದಲಾಯಿಸಿ೧೯೯೦ ರ ಹೊತ್ತಿನಲ್ಲಿ ಹುಸೇನ್ ರವರ ವರ್ಣಚಿತ್ರಗಳು ವಿವಾದಕ್ಕೆ ಒಳಪಟ್ಟವು. ಏಕೆಂದರೆ ಈ ಚಿತ್ರಗಳಲ್ಲಿ ಹಿಂದೂ ದೇವತೆಗಳನ್ನು ನಗ್ನವಾಗಿ ಅಥವಾ ಅಶ್ಲೀಲವಾಗಿ ಚಿತ್ರಿಸಲಾಗಿತ್ತು.[೧೯] ಈ ವರ್ಣಚಿತ್ರಗಳನ್ನು ೧೯೭೦ ರಲ್ಲಿ ರಚಿಸಲಾಗಿತ್ತು. ಆದರೆ ೧೯೯೬ ರಲ್ಲಿ ಇವುಗಳನ್ನು ವಿಚಾರ್ ಮೀಮಾಂಸೆ ಎಂಬ ಹಿಂದಿ ಮಾಸಿಕ ನಿಯತಕಾಲಿಕೆ, "ಎಂ.ಎಫ್. ಹುಸೇನ್: ಅ ಪೇಂಟರ್ ಆರ್ ಬುಚರ್" ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸುವ ವರೆಗು ಇದು ವಿವಾದಾಸ್ಪದ ವಿಷಯವಾಗಿರಲಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ, ಹುಸೇನ್ ರವರ ವಿರುದ್ಧ ಎಂಟು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಯಿತು. ೨೦೦೪ ರಲ್ಲಿ ದೆಹಲಿಯ ಉಚ್ಚ ನ್ಯಾಯಾಲಯವು, " ಹಿಂದೂ ದೇವತೆಗಳಾದ ದುರ್ಗ ಮತ್ತು ಸರಸ್ವತಿಯನ್ನು ಅನುದಾರವಾದ ರೀತಿಯಲ್ಲಿ ಚಿತ್ರಿಸುವ ಮೂಲಕ ಹಿಂದೂಗಳಿಗೆ ನೋವುಂಟು ಮಾಡಲಾಗಿದೆ ಮತ್ತು ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಹುಟ್ಟುಹಾಕಲಾಗಿದೆ" ಎಂದು ಹೂಡಲಾಗಿದ್ದ ಈ ಮೊಕದ್ದಮೆಗಳನ್ನು ವಜಾಮಾಡಿತು.[೨೦][೨೧][೨೨] ೧೯೯೮ ರಲ್ಲಿ ಬಜರಂಗ ದಳದಂತಹ ಹಿಂದೂ ಗುಂಪುಗಳು ಹುಸೇನ್ ರವರ ಮನೆಯ ಮೇಲೆ ದಾಳಿ ಮಾಡಿದವು, ಹಾಗು ಅವರು ಕಲಾಕೃತಿಗಳನ್ನು ನಾಶ ಮಾಡಿದವು. ಶಿವಸೇನೆಯ ನಾಯಕತ್ವವು ದಾಳಿಯನ್ನು ಸಮರ್ಥಿಸಿಕೊಂಡಿತು. ಬಜರಂಗದಳದ ಇಪ್ಪತ್ತಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.[೨೩] ಹುಸೇನ್ ರವರ ವಿರುದ್ಧ ಮಾಡಲಾದ ಪ್ರತಿಭಟನೆಗಳಿಂದಾಗಿ ಇಂಗ್ಲೆಂಡ್ ನ ಲಂಡನ್ ನಲ್ಲಿ ಪ್ರದರ್ಶನವಾಗುತ್ತಿದ್ದ ಅವರ ವರ್ಣಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕಾಯಿತು. ೨೦೦೬ ರ ಫೆಬ್ರವರಿಯಲ್ಲಿ, ಹಿಂದೂ ದೇವರು ಮತ್ತು ದೇವತೆಗಳನ್ನು ನಗ್ನವಾಗಿ ಚಿತ್ರಿಸಿ ಜನರ ಭಾವನೆಗಳಿಗೆ ದಕ್ಕೆಯುಂಟುಮಾಡಿದ್ದಕ್ಕಾಗಿ ಹುಸೇನ್ ರವರನ್ನು ಮೇಲ್ವಿಚಾರಣೆಗೆ ಒಳಪಡಿಸಲಾಯಿತು.[೨೪] ಮೊಕದ್ದಮೆಗಳ ಸರಣಿಗಳನ್ನೆ ಅವರ ವಿರುದ್ಧ ದಾಖಲಿಸಲಾಯಿತು. ಅಲ್ಲದೇ ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಕ್ಕಾಗಿ ಹೂಡಲಾದ ಮೊಕದ್ದಮೆಗೆ ಸಂಬಂಧಿಸಿದಂತೆ, ಹುಸೇನ್ ರವರು ಸಮನ್ (ನ್ಯಾಯಾಲಯದ ಆದೇಶ)ಗಳಿಗೆ ಪ್ರತಿಕ್ರಿಯೆ ನೀಡಲು ವಿಫಲವಾದಾಗ, ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಜಾರಿಮಾಡಿತು. ವರದಿಯಾಗಿರುವಂತೆ ಅವರಿಗೆ ಜೀವ ಬೆದರಿಕೆಯನ್ನು ಕೂಡ ಹಾಕಲಾಗಿತ್ತು.[೨೫][೨೬] ಇದಕ್ಕೆ ಸಂಬಂಧಿಸಿದಂತೆ ಅವರು, "ಸಂಗತಿಗಳು ಕಾನೂನುಬದ್ಧವಾಗಿ ಜಟಿಲಗೊಂಡಿರುವುದರಿಂದ ತಾಯ್ನಾಡಿಗೆ ಮರಳಬಾರದೆಂದು ನನಗೆ ಮುನ್ಸೂಚಿಸಲಾಗಿದೆ" ಎಂದು ಹೇಳೆ ದೇಶದಿಂದ ಹೊರನಡೆದರು.[೨೭] ಈಗ ಅವರು ದುಬೈ ಮತ್ತು ಲಂಡನಲ್ಲಿ ವಾಸವಾಗಿದ್ದು, ಭಾರತದಿಂದ ದೂರವಿರುವುದನ್ನು ಮುಂದುವರೆಸಿದ್ದಾರೆ. ಆದರೆ ಈ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಬಹುದೆಂಬ ಭಯದ ಹೊರತಾಗಿಯು,ಅವರು ತಾಯ್ನಾಡಿಗೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.[೨೮] ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ಆದೇಶವು, ಹುಸೇನ್ ರವರ ಮೇಲಿದ್ದ ಅರೆಸ್ಟ್ ವಾರೆಂಟ್ ಅನ್ನು ಸ್ವಲ್ಪಕಾಲದವರೆಗೆ ತಡೆಹಿಡಿದಿದೆ.[೨೬] ಕಾನೂನು ಮಂತ್ರಿಮಂಡಲವು ಹುಸೇನ್ ರವರ ಅರ್ಧ ಡಜನ್ ವರ್ಣಚಿತ್ರಗಳನ್ನು ಪರಿಶೀಲಿಸಿ, ಹುಸೇನ್ ರವರು ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ದಕ್ಕೆಯುಂಟುಮಾಡಿದ್ದಾರೆ, ಎಂದು ಫಿರ್ಯಾದಿಗಳೇನಾದರು ಅವರ ವಿರುದ್ಧ ಮೊಕ್ಕದಮ್ಮೆಯನ್ನು ಹೂಡಿದಲ್ಲಿ ಮೊಕದ್ದಮೆಗೆ ಹೆಚ್ಚು ಬಲಬರುತ್ತದೆ ಎಂದು ಸರ್ಕಾರಕ್ಕೆ ತಿಳಿಸಿತು.
ಇಂಡಿಯಾ ಈಸ್ ಅವರ್ ಮದರ್(ಭಾರತವು ನಮ್ಮ ತಾಯಿ)
ಬದಲಾಯಿಸಿ೨೦೦೬ ರ ಫೆಬ್ರವರಿ ೬ ರಂದಿನ ವಿವಾದಲ್ಲಿ, ಇಂಡಿಯ ಟುಡೆ ಎಂಬ , ವಾರಕೊಮ್ಮೆ ಪ್ರಕಟಿಸಲಾಗುವ ಇಂಗ್ಲೀಷ್ ಭಾಷೆಯ ರಾಷ್ಟ್ರೀಯ ಸುದ್ದಿಸಮಾಚರ ನಿಯತಕಾಲಿಕೆಯು, "ಆರ್ಟ್ ಫಾರ್ ಮಿಷನ್ ಕಾಶ್ಮೀರ್" ಎಂಬ ಶೀರ್ಷಿಕೆಯಡಿಯಲ್ಲಿ ಜಾಹೀರಾತನ್ನು ಪ್ರಕಟಿಸಿತು. ಈ ಜಾಹೀರಾತು ಭಾರತದ ಭೂಪಟದಲ್ಲಿ ನಗ್ನವಾಗಿ ನಿಂತಿರುವ ಮತ್ತು ದೇಹದ ಅನೇಕ ಭಾಗಗಳಲ್ಲಿ ಭಾರತೀಯ ರಾಜ್ಯಗಳ ಹೆಸರನ್ನು ಹೊಂದಿರುವ ಭಾರತ ಮಾತೆ (ಭಾರತ ಮಾತೆ)ಯ ಚಿತ್ರವನ್ನು ಒಳಗೊಂಡಿತ್ತು. ಆಕ್ಷನ್ ಇಂಡಿಯಾದ(NGO) ನಫೀಸಾ ಅಲಿ ಮತ್ತು ಆಪಾರೊ ಆರ್ಟ್ ಗ್ಯಾಲರಿ ಈ ಪ್ರದರ್ಶನವನ್ನು ಏರ್ಪಡಿಸಿತ್ತು.[೨೯] ಹಿಂದೂ ಜಾಗೃತಿ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ (VHP) ನಂತಹ ಸಂಸ್ಥೆಗಳು ವರ್ಣಚಿತ್ರಗಳನ್ನು ವೆಬ್ ಸೈಟ್ ಗಳಲ್ಲಿ ಮತ್ತು ಉತ್ತರ ಯುರೋಪ್ ನ ಪ್ರದರ್ಶನಗಳಲ್ಲಿ ಪ್ರದರ್ಶಿಸುವ ಮೂಲಕ ಹುಸೇನ್ ರವರ ವಿರುದ್ಧ ಸತತವಾಗಿ ಪ್ರತಿಭಟಿಸಿದವು. ಇದಕ್ಕೆ ಪ್ರತಿಕ್ರಿಯಿಸುವಂತೆ ೨೦೦೬ ರ ಫೆಬ್ರವರಿ ೭ ರಂದು ಹುಸೇನ್ ರವರು ಕ್ಷಮೆಯಾಚಿಸಿದರು ಮತ್ತು ಹರಾಜಿನಿಂದ ವರ್ಣಚಿತ್ರವನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.[೩೦][೩೧] ಈ ವರ್ಣಚಿತ್ರವು ಅನಂತರ ಹುಸೇನ್ ರವರ ಅಧಿಕೃತ್ ವೈಬ್ ಸೈಟ್ ನಲ್ಲಿ ಕಾಣಿಸಿಕೊಂಡಿತು.
ಮೀನಾಕ್ಷಿ: ಅ ಟೇಲ್ ಆಫ್ ತ್ರೀ ಸಿಟೀಸ್
ಬದಲಾಯಿಸಿಹುಸೇನ್ ರವರ Meenaxi: A Tale of Three Cities [೩೨] ಎಂಬ ಚಲನಚಿತ್ರದಲ್ಲಿರುವ ಒಂದು ಹಾಡಿನ ಬಗ್ಗೆ, ಕೆಲವು ಮುಸ್ಲಿಂ ಸಂಸ್ಥೆಗಳು ಆಕ್ಷೇಪಣೆ ಮಾಡಿದ ಮಾರನೆಯ ದಿನವೆ ಈ ಚಲನಚಿತ್ರವು ಚಲನಚಿತ್ರಮಂದಿರದಿಂದ ನಿರ್ಗಮಿಸಿತು.[೩೩] ಆಲ್ ಇಂಡಿಯಾ ಉಲೆಮ್ ಸಮಿತಿಯು, ಈ ಚಿತ್ರದ ನೂರ್-ಅನ್-ಅಲಾ-ನೂರ್ ಎಂಬ ಕವಾಲಿ ಹಾಡು ದೈವ ನಿಂದನೆಯನ್ನು ಮಾಡುವಂತಿದೆ ಎಂದು ದೂರುನೀಡಿತು. ಈ ಹಾಡು ಒಳಗೊಂಡಿರುವಂತಹ ಪದಗಳನ್ನು ನೇರವಾಗಿ ಖುರಾನ್ ನಿಂದ ತೆಗೆದುಕೊಳ್ಳಲಾಗಿದೆ ಎಂದು ಸಮಿತಿ ವಾದಿಸಿತು. ಕೆಳಕಂಡ ಸಮಿತಿಗಳು ಈ ಸಮಿತಿಗೆ ಬೆಂಬಲ ನೀಡಿದವು: ಮಿಲಿ ಸಮಿತಿ, ಆಲ್- ಇಂಡಿಯಾ ಮುಸ್ಲಿಂ ಸಮಿತಿ, ರಾಜಾ ಅಕ್ಯಾಡಮಿ, ಜಮೈತ್-ಉಲ್-ಉಲೆಮ-ಇ-ಹಿಂದ್ ಮತ್ತು ಜಮತ್-ಇ-ಇಸ್ಲಾಮಿ. ಇದಕ್ಕೆ ಪ್ರತಿಕ್ರಿಯಿಸುವಂತೆ ಹುಸೇನ್ ರವರ ಪುತ್ರ, ಈ ಸಾಲುಗಳಲ್ಲಿ ಬಳಸಲಾಗಿರುವ ಪದಗಳು ದೈವೀ ಸೌಂದರ್ಯವನ್ನು ಸೂಚಿಸುತ್ತವೆ.ಆದ್ದರಿಂದ ಇದನ್ನು ಪ್ರಮುಖ ಪಾತ್ರಧಾರಿ ತಬೂ ರವರು ಹಾಡಿದ್ದಾರೆ ಎಂದು ತಿಳಿಸಿದರು. ಇದರಲ್ಲಿ ಮನಸ್ಸುನೋಯಿಸುವಂತಹ ಯಾವುದೇ ಉದ್ದೇಶವಿರಲಿಲ್ಲ ವೆಂದು ಅವರು ಹೇಳಿದರು. ಪ್ರತಿಭಟನೆಯಿಂದ ಕೋಪಗೊಂಡ ಇವರು ಚಲನಚಿತ್ರ ಮಂದಿರಗಳಿಂದ ಅವರ ಚಲನಚಿತ್ರವನ್ನು ತೆಗೆದುಹಾಕಿಸಿದರು. ಅದೇನೇ ಆದರೂ, ಈ ಚಲನಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ ದೊರೆಯಿತಲ್ಲದೆ, ಇದು ಅನೇಕ ಪ್ರಶಸ್ತಿಗಳನ್ನು ಕೂಡ ಗೆದ್ದುಕೊಂಡಿತು.
ಬೆಂಬಲಿಗರು ಮತ್ತು ವಿಮರ್ಶಕರು
ಬದಲಾಯಿಸಿಕಲಾತ್ಮಕ ಸಮುದಾಯವು ಪ್ರೋತ್ಸಾಹಕವಾಗಿತು[೩೪] ಮತ್ತು ವಿಮರ್ಶಕವಾಗಿಯು ಇತ್ತು. ಹುಸೇನ್ ರವರ ಸಮಕಾಲೀನರಲ್ಲಿ ಒಬ್ಬರಾದ ಕೃಷ್ಣ ಕನ್ನರವರು, " ಕೇವಲ ಹುಸೇನ್ ರವರದಷ್ಟೇ ಅಲ್ಲದೇ, ಸಂಪೂರ್ಣ ಕಲಾ ಸಮುದಾಯದ ಜೀವನ ಅಪಾಯದಲ್ಲಿದೆ. ಈಗ ಯಾರುಬೇಕಾದರು ಅಥವಾ ಎಲ್ಲರು ನಮ್ಮ ಮೇಲೆ ಮೊಕದ್ದಮೆಯನ್ನು ಹೂಡಬಹುದಾಗಿದೆ. ಯಾರುಬೇಕಾದರು ನಮ್ಮ ಜೀವನದ ಮೇಲೆ ಅತಿಕ್ರಮಿಸಬಹುದಾಗಿದೆ" ಎಂದು ಹೇಳಿದ್ದಾರೆ. ಹುಸೇನ್ ರವರ ವಿರುದ್ಧ ಮಾಡಲಾದ "ತೀವ್ರವಾದ ಪ್ರತಿಭಟನೆಗೆ" ಕೋಪವನ್ನು ವ್ಯಕ್ತಪಡಿಸಿದವರಲ್ಲಿ, ಚಿತ್ರನಿರ್ಮಾಣಕಾರ ಸಾಯಿದ್ ಮಿರ್ಜ, ಸಮಾಜಿಕ ಕಾರ್ಯಕರ್ತೆ ನಫೀಸಾ ಅಲಿ, ರಂಗಕರ್ಮಿಯಾದ ಎಂ.ಕೆ. ರೈನಾ ಮತ್ತು ಇತರ ಕಲಾವಿದರು, ಕಲಾ ವಿಮರ್ಶಕರು ಮತ್ತು ಆರ್ಟ್ ಗ್ಯಾಲರಿ ಮಾಲೀಕರನ್ನು ನೋಡಬಹುದಾಗಿದೆ. ಇಂಟರ್ ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್, ನಲ್ಲಿ ಸಲೀಲ್ ತ್ರಿಪಾಠಿಯವರು ಬರೆದಂತಹ ಬರಹವು, ಹಿಂದೂ ಕಲಾವಿದರು ಸತತವಾಗಿ ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ್ದಾರೆ ಎಂಬುದನ್ನು ಎತ್ತಿತೋರಿಸಿದೆ. ಎಂಬುದನ್ನು ತ್ರಿಪಾಠಿಯವರು ಸಮರ್ಥಿಸುತ್ತಾರೆ,[೩೫]
“ | It is hypocritical to place curbs on Husain's artistic freedom. What's more shameful is that a government that claims to be the secular alternative to Hindu nationalists is threatening to prosecute Husain. This does not do India proud; it adds to India's disgrace. | ” |
ಭಾರತದ ಇತರ ಕಲಾವಿದರು ಟೀಕೆಯನ್ನು ವ್ಯಕ್ತಪಡಿಸಿದರು . ಸತೀಶ್ ಗುಜ್ರಾಲ್ರವರು ಪತ್ರಿಕಾಗೋಷ್ಠಿಯಲ್ಲಿ , ಹುಸೇನ್ ರವರು ಇಸ್ಲಾಂ ನ ಪ್ರತಿಮೆಗಳನ್ನು ಕೂಡ ಈ ರೀತಿಯಾಗಿಯೇ ನಡೆಸಿಕೊಳ್ಳಬಲ್ಲರೆ ಎಂದು ಪ್ರಶ್ನಿಸಿದರು.[೩೬] ಆದರೂ, ಹುಸೇನ್ ರವರನ್ನು ನಡೆಸಿಕೊಂಡ ರೀತಿಗಾಗಿ ಮತ್ತು ದೇಶದಿಂದ ಹೊರನಡೆಯಲು ಅವರನ್ನು ಒತ್ತಾಯಿಸಿದ್ದಕ್ಕಾಗಿ ಗುಜರಾಲ್ ರವರು ವಿಷಾದವನ್ನು ವ್ಯಕ್ತಪಡಿಸಿದರು. ಅಲ್ಲದೇ ಇದನ್ನು "ಆಕ್ರಮಣ ಸಂಸ್ಕೃತಿ" ಎಂದು ಕರೆದರು.[೩೭] ಹಿರಿಯ ಹಿಂದೂ ಕಲಾವಿದರು ಮತ್ತು ಬಾಂಬೆ ಆರ್ಟ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ಗೋಪಾಲ್ ಅಡಿವ್ರೆಕರ್ ರವರ ಪ್ರಕಾರ,[೩೮]
“ | Nothing is bad in being creative but the artists should not go for such artwork, which may hurt the sentiments of a segment of the society. | ” |
ದಿ ಪಯೋನಿಯರ್ ನಲ್ಲಿ ಚಂದನ್ ಮಿತ್ರರವರು ಬರೆದಿದ್ದಾರೆ,[೩೮][೩೯]
“ | As long as such a law exists in the statutes, nobody can be faulted for approaching the courts against Hussain's objectionable paintings, nor can the judiciary be pilloried for ordering action against the artist for his persistent and deliberate refusal to appear before the court. | ” |
ಈ ವಿವಾದಕ್ಕೆ ಪ್ರತಿಕ್ರಿಯಿಸುವಂತೆ, ಹುಸೇನ್ ರವರ ಅಭಿಮಾನಿಗಳು ಹುಸೇನ್ ರವರಿಗೆ ಭಾರತದ ಅತ್ಯಂತ ಗೌರವಾನ್ವಿತ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಬೇಕೆಂದು ಅಹವಾಲು ಸಲ್ಲಿಸಿದರು. ಈ ಅಹವಾಲಿಗೆ ಬೆಂಬಲ ನೀಡಿದಂತಹ ಶಶಿ ತರೂರ್ ರವರ ಪ್ರಕಾರ, ಇದು ಹುಸೇನ್ ರವರನ್ನು ಪ್ರಶಂಸಿಸುತ್ತದೆ. ಏಕೆಂದರೆ ಅವರ "ಜೀವನ ಮತ್ತು ಕಲಾಕೃತಿಗಳು ಆಧುನಿಕ ಭಾರತದ ಜಾತ್ಯಾತೀತ ಬದಲಾದ ವಿಧಾನಗಳಿಗೆ ಹಾಗು ರಾಷ್ಟ್ರದ ವೃತ್ತಾಂತ ನಿರೂಪಣೆಯ ಸವಾಲುಗಳಿಗೆ ಅನ್ಯೋಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅವರ ಪ್ರೀತಿಯ ರಾಷ್ಟ್ರಕ್ಕಾಗಿ ಅವರು ಸಲ್ಲಿಸಿರುವ ಸಮರ್ಪಣೆಗೆ ಮತ್ತು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಅವರನ್ನು ಗೌರವಿಸಲು ಇದು ಸಮಯೋಚಿತವಾಗಿದೆ ಹಾಗು ಸರಿಯಾದ ಸಮಯವಾಗಿದೆ."[೪೦] ಹುಸೇನ್ ರವರು ಈ ಕುರಿತು, ಹಿಂದೂ ನಾಯಕರು ಅವರ ವರ್ಣಚಿತ್ರಗಳ ವಿರುದ್ಧ ಒಂದು ಮಾತನ್ನು ಆಡಲಿಲ್ಲ, ಆದರೆ ಇದಕ್ಕೆ ಮೊದಲು ಅವರು ಪ್ರತಿಕ್ರಿಯಿಸಬೇಕಿತ್ತು ಎಂದು ಹೇಳಿದರು.[೪೧]
ಉಲ್ಲೇಖಗಳು
ಬದಲಾಯಿಸಿ- ↑ "M F Husain given Qatar nationality". CNN-IBN. Archived from the original on 27 ಫೆಬ್ರವರಿ 2010. Retrieved 25 February 2010.
- ↑ ದಿ ಪಿಕಾಸೋ ಆಫ್ ಇಂಡಿಯಾ. Archived 2009-05-01 ವೇಬ್ಯಾಕ್ ಮೆಷಿನ್ ನಲ್ಲಿ.ದಿ 2006 ಕಲೆಕ್ಟರ್ಸ್ ಗೈಡ್ . Archived 2009-05-01 ವೇಬ್ಯಾಕ್ ಮೆಷಿನ್ ನಲ್ಲಿ.ಫೋರ್ಬ್ಸ್ ಮ್ಯಾಗಜೀನ್. Archived 2009-05-01 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಪ್ಯಾಲಿಟ್ ಆರ್ಟ್ ಗ್ಯಾಲರಿ : ಬಯೋಗ್ರಫಿ ಆಫ್ ಹುಸೇನ್". Archived from the original on 2012-03-12. Retrieved 2011-01-06.
- ↑ ಪ್ರೊಫೈಲ್ ಆಫ್ ಎಂ.ಎಫ್. ಹುಸೇನ್ ಅಟ್ 20th ಸೆಂಚ್ಯೂರಿ ಮ್ಯೂಸಿಯಂ ಆಫ್ ಕಂಟೆಂಪರರಿ ಇಂಡಿಯನ್ ಆರ್ಟ್ ವೆಬ್ ಸೈಟ್ Archived 2017-05-23 ವೇಬ್ಯಾಕ್ ಮೆಷಿನ್ ನಲ್ಲಿ. - URL ೨೦೦೬ ಅಗಸ್ಟ್ ೨೬ ರಂದು ಪುನಃ ಸಂಪಾದಿಸಲಾಗಿದೆ.
- ↑ ೫.೦ ೫.೧ ೫.೨ "ಎಂ.ಎಫ್. ಹುಸೇನ್: ಎಂ.ಎಫ್. ಹುಸೇನ್ ಪೇಂಟಿಂಗ್ಸ್, ಆರ್ಟ್ ವರ್ಕ್ ಅಟ್ ಪ್ಯಾಲೆಟ್ ಆರ್ಟ್ ಗ್ಯಾಲರಿ , ಇಂಡಿಯ". Archived from the original on 2012-03-12. Retrieved 2011-01-06.
- ↑ [೧]
- ↑ "santabanta.com". The work of the muse. Archived from the original on 13 October 2007. Retrieved 12 December 2006.
- ↑ ಇಂಡಿಯ FM ನ್ಯೂಸ್ ಬ್ಯೂರೋ, 2006 ಆಗಸ್ಟ್ 22- 09:00 IST; ಕೌಂಟರ್ ಫೀಟ್ ಆರ್ಟಿಸ್ಟ್ Archived 2006-11-11 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "MF ಹುಸೇನ್ ಸೆಲೆಕ್ಟೆಡ್ ಫಾರ್ ರಾಜಾ ರವಿ ವರ್ಮ ಅವಾರ್ಡ್". Archived from the original on 2009-01-07. Retrieved 2021-08-09.
- ↑ "ದಿ ಹಿಂದೂ , "ಹೈ ಕೋರ್ಟ್ ರಿಸ್ಟ್ರೇಂಟ್ ಆನ್ ಅವಾರ್ಡ್ ಫಾರ್ ಎಂ.ಎಫ್. ಹುಸೇನ್"". Archived from the original on 2008-09-20. Retrieved 2011-01-06.
- ↑ "ibnಲೈವ್, ಮಾಸ್ಟರ್ ಸ್ಟ್ರೋಕ್-ಹುಸೇನ್-ಪೇಂಟಿಂಗ್-ಫೆಚಸ್-16-mn". Archived from the original on 2008-12-02. Retrieved 2011-01-06.
- ↑ "India's most highly prized artist MF Husain dies aged 95". BBC. 9 June 2011. Retrieved 9 June 2011.
- ↑ "MF Husain dies – lauded in exile by India’s artistic fraternity"[ಶಾಶ್ವತವಾಗಿ ಮಡಿದ ಕೊಂಡಿ]. The Independent. UK. 9 June 2011. Retrieved 9 June 2011.
- ↑ "Artist and legend MF Husain dies in London". Archived 2011-06-12 ವೇಬ್ಯಾಕ್ ಮೆಷಿನ್ ನಲ್ಲಿ. NDTV. 9 June 2011. Retrieved 9 June 2011.
- ↑ "Prominent Indian artist MF Hussain dies". Al Jazeera. 9 June 2011. Retrieved 9 June 2011.
- ↑ India’s most prominent painter, M.F. Hussain, dies, By MUNEEZA NAQVI, Associated Press, 3:56 a.m., Thursday, June 9, 201
- ↑ India's most prominent painter, M.F. Hussain, dies, By MUNEEZA NAQVI , 06.09.11, 03:56 AM EDT, Forbes.com
- ↑ "M F Husain, The Great Indian Artist, dies in exile". India Express. 9 June 2011. Retrieved 9 June 2011.
- ↑ "ಪ್ರೊಟೆಸ್ಟ್ ಅಗೇನ್ ಸ್ಟ್ ಎಂ.ಎಫ್. ಹುಸೇನ್'ಸ್ ಡಿರಾಗಟರಿ ಪೇಂಟಿಂಗ್ಸ್". Archived from the original on 2009-04-26. Retrieved 2011-01-06.
- ↑ "ಆರ್ಕೈವ್ ನಕಲು". Archived from the original on 2010-06-19. Retrieved 2011-01-06.
- ↑ ದಿ ಹಿಂದೂ ಆನ್ ಲೈನ್ ಎಡಿಷನ್: ಡೆಲ್ಲಿ ಹೈಕೋರ್ಟ್ ಡಿಸ್ ಮಿಸಸ್ ಕಂಪ್ಲೇಂಟ್ ಅಗ್ಯೇನ್ ಸ್ಟ್ ಎಂ.ಎಫ್. ಹುಸೇನ್ Archived 2007-02-23 ವೇಬ್ಯಾಕ್ ಮೆಷಿನ್ ನಲ್ಲಿ. - URL ೨೦೦೬ ಆಗಸ್ಟ್ ೬ ರಂದು ಮರುಸಂಪಾದಿಸಲಾಯಿತು.
- ↑ ಫುಲ್ ಟೆಕ್ಸ್ಟ್ ಆಫ್ ದಿ ಡೆಲ್ಲಿ ಹೈಕೋರ್ಟ್ ವರ್ಡಿಕ್ಟ್ ಇನ್ ಹುಸೇನ್ಸ್ ಕೇಸ್ , 1996 - URL ೨೦೦೭ ರ ಮಾರ್ಚ್ ೫ ರಂದು ಮರುಸಂಪಾದಿಸಲಾಯಿತು.
- ↑ "ಫ್ರಂಟ್ ಲೈನ್ , Vol. 15 :: No. 10 :: ಮೇ 9 - 22, 1998". Archived from the original on 2007-08-10. Retrieved 2011-01-06.
- ↑ ರೆಡಿಫ್ ಇಂಡಿಯ ಅಬ್ರಾಡ್: ಎಂ.ಎಫ್. ಹುಸೇನ್ ಬುಕ್ಡ್ ಫಾರ್ ಹಿಸ್ ಪೇಂಟಿಂಗ್ಸ್ ಆಫ್ ನ್ಯೂಡ್ ಗಾಡ್ಸ್ - URL ೨೦೦೬ ಆಗಸ್ಟ್ ೨೨ ರಂದು ಮರುಸಂಪಾದಿಸಲಾಯಿತು.
- ↑ "ಫಂಡಮೆಂಟಲಿಸ್ಟ್ ಸ್ಟ್ರೈಕ್ ಆಗ್ಯೇನ್ ಸ್ಟ್ ಆನ್ ಇಂಡಿಯನ್ ಕಂಟೆಂಪ್ರರಿ ಆರ್ಟ್ಸ್". Archived from the original on 2007-05-23. Retrieved 2011-01-06.
- ↑ ೨೬.೦ ೨೬.೧ ಇಂಡಿಯಾಸ್ ಸುಪ್ರೀಂ ಕೋರ್ಟ್ ವಾರೆಂಟ್ ಫಾರ್ ಆರ್ಟಿಸ್ಟ್ ಎಂ.ಎಫ್. ಹುಸೇನ್
- ↑ ಹುಸೇನ್ಸ್ ಪ್ರಾಪರ್ಟಿ: SC ಇಷ್ಯೂಸ್ ಸ್ಟೇ ಆರ್ಡರ್
- ↑ ಪೋಲೀಸ್ ಅಟ್ಯಾಚ್ ಎಂ.ಎಫ್. ಹುಸೇನ್'ಸ್ ಪ್ರಾಪರ್ಟಿ ಇನ್ ಮುಂಬಯಿ
- ↑ ನೆಕೆಡ್ ಮದರ್ ಇಂಡಿಯ ಪೇಂಟಿಂಗ್ Archived 2009-04-13 ವೇಬ್ಯಾಕ್ ಮೆಷಿನ್ ನಲ್ಲಿ. - URL ೨೦೦೭ ರ ಮಾರ್ಚ್ ೫ ರಂದು ಪ್ರವೇಶಿಸಲಾಯಿತು.
- ↑ com/articleshow/1405262.cms MF Hussain apologises for obscene paintings Archived 2013-08-13 ವೇಬ್ಯಾಕ್ ಮೆಷಿನ್ ನಲ್ಲಿ. - ಟೈಮ್ಸ್ ಆಫ್ ಇಂಡಿಯ ಸ್ಟೋರಿ- ೨೦೦೬ ರ ಮಾರ್ಚ್ ೫ ರಂದು ಪ್ರವೇಶಿಸಲಾಯಿತು .
- ↑ HJS ಲಾಡ್ಜಸ್ FIR ಅಗ್ಯೇನ್ ಸ್ಟ್ ನಫೀಸಾ ಅಲಿ ಫಾರ್ ಸೆಲ್ಲಿಂಗ್ ಹುಸೇನ್ಸ್ ಆರ್ಟ್ - ಔಟ್ ಲುಕ್ ಸ್ಟೋರಿ, ೨೦೦೭ ರ ಮಾರ್ಚ್ ೫ ರಂದು ಪ್ರವೇಶಿಸಲಾಗಿದೆ.
- ↑ ಎಂ.ಎಫ್. ಹುಸೇನ್ ಐ ಎಮ್ ಡಿ ಬಿನಲ್ಲಿ
- ↑ ಹುಸೇನ್ ಪುಲ್ಸ್ ಮೀನಾಕ್ಷಿ ಔಟ್ ಆಫ್ ಥಿಯೇಟರ್ - ದಿ ಟ್ರಿಬ್ಯೂನ್
- ↑ "ಆರ್ಟಿಸ್ಟ್ ರಾಲಿ ಬಿಹೈಂಡ್ ಬಿಲಿಗೇರ್ಡ್ ಹುಸೇನ್". Archived from the original on 2007-09-26. Retrieved 2011-01-06.
- ↑ ಸಲೀಲ್ ತ್ರಿಪಾಠಿ, ಮೀನ್ ವೈಲ್: ದಿ ರೈಟ್ ಟು ಬಿ ಅಫೆಂಡೆಡ್, ಇಂಟರ್ ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ , ೨೦೦೯ ರ ಮೇ ೩೧]
- ↑ ಅ ಬ್ರುಶ್ ವಿತ್ ಜೀನಿಯಸ್ Archived 2009-01-07 ವೇಬ್ಯಾಕ್ ಮೆಷಿನ್ ನಲ್ಲಿ., ಹಿಂದುಸ್ಥಾನ್ ಟೈಮ್ಸ್
- ↑ ದಿ ಇಂಡಿಯನ್ ಎಕ್ಸ್ ಪ್ರೆಸ್ [ಶಾಶ್ವತವಾಗಿ ಮಡಿದ ಕೊಂಡಿ]
- ↑ ೩೮.೦ ೩೮.೧ "ಹುಸೇನ್'ಸ್ ಪೇಂಟಿಂಗ್, ಕಾಂಟ್ರವರ್ಸಿ ರೆಫ್ಯೂಸ್ ಟು ಡೈ". Archived from the original on 2007-09-27. Retrieved 2011-01-06.
- ↑ ಆರ್ಟ್ ಫಾರ್ ಗಾಡ್ 'ಸ್ ಸೇಕ್
- ↑ ದಿ ಶಶಿ ತರೂರ್ ಕಾಲಮ್, ದಿ ಹಿಂದೂ , 2006 ನವೆಂಬರ್ 26 Archived 2006-12-03 ವೇಬ್ಯಾಕ್ ಮೆಷಿನ್ ನಲ್ಲಿ.- URL ೨೦೦೬ ನವೆಂಬರ್ ೨೬ ರಂದು ಮರುಸಂಪಾದಿಸಲಾಯಿತು.
- ↑ ನ್ಯೂಸ್ ಆರ್ಟಿಕಲ್, ಗಲ್ಫ್ ಟೈಮ್ಸ್ ,2010 ರ ಜೂನ್ 2