ಅಂತರರಾಷ್ಟ್ರೀಯ ಬ್ಯಾಂಕ್‌ ಖಾತೆ ಸಂಖ್ಯೆ

ಅಂತಾರಾಷ್ಟ್ರೀಯ ಬ್ಯಾಂಕ್‌ ಖಾತೆ ಸಂಖ್ಯೆ (ಐಬಿಎಎನ್‌) ಎಂಬುದು ದೇಶಗಳ ಗಡಿಗಳಾಚೆ ಇರುವ ಬ್ಯಾಂಕ್‌ ಖಾತೆ ಗಳನ್ನು ಕನಿಷ್ಠ (ನಕಲಿನ) ಪ್ರತಿಲಿಪಿ ಲೋಪ-ದೋಷಗಳನ್ನು ಪತ್ತೆಹಚ್ಚಿ,ಗುರುತಿಸುವ ಅಂತಾರಾಷ್ಟ್ರೀಯ ಪ್ರಮಾಣವಾಗಿದೆ. ಇದನ್ನು ಮೂಲತಃ ಯುರೋಪಿಯನ್‌ ಬ್ಯಾಂಕಿಂಗ್‌ ಪ್ರಮಾಣಕ ಸಮಿತಿ ಆಯ್ದುಕೊಂಡಿತ್ತು. ಆನಂತರ ಇದನ್ನು ಐಎಸ್‌ಒ 13616:1997 ಅಡಿ ಅಂತಾರಾಷ್ಟ್ರೀಯ ಪ್ರಮಾಣಕವಾಗಿ ಹಾಗೂ ಇಂದು ಐಎಸ್‌ಒ 13616-1:2007 ಅಡಿ ಪ್ರಮಾಣಕವಾಗಿ ಆಯ್ದುಕೊಳ್ಳಲಾಗಿದೆ.[] ISO 13616-2:2007[] ಅಡಿ ಸ್ವಿಫ್ಟ್‌ (SWIFT) ಎಂಬುದು ಅಧಿಕೃತ ಐಬಿಎಎನ್‌ ದಾಖಲಾತಿ ಪ್ರಾಧಿಕಾರವಾಗಿದೆ.[] ಐಬಿಎಎನ್‌ನ್ನು ಮೂಲತಃ ಯುರೋಪಿಯನ್‌ ಒಕ್ಕೂಟದ ಸರಹದ್ದಿನೊಳಗೆ ಹಣದ ಸುಲಭ ಪಾವತಿಗಾಗಿ ಅಭಿವೃದ್ಧಿಗೊಳಿಸಲಾಯಿತು. ಆದರೆ, ಈ ವ್ಯವಸ್ಥೆಯು ವಿಶ್ವದಾದ್ಯಂತ ಬಳಸುವಷ್ಟು ಹೊಂದಿಕೊಳ್ಳುವಂತಹ ವ್ಯವಸ್ಥೆಯಾಗಿದೆ. ಐಬಿಎಎನ್‌ನಲ್ಲಿ ಐಎಸ್‌ಒ 3166-1 ಆಲ್ಫಾ-2 ದೇಶದ ಸಂಕೇತ, ನಂತರ ಎರಡು ಪರಿಶೀಲನಾ ಅಂಕಿಗಳು (ಇವನ್ನು mod-97 ತಂತ್ರದ ಮೂಲಕ ಗಣಿಸಿ ನಿರ್ಣಯಿಸಲಾಗುವುದು.) ಅಲ್ಲದೇ ಮೂಲಭೂತ ಬ್ಯಾಂಕ್‌ ಖಾತೆ ಸಂಖ್ಯೆ (ಬಿಬಿಎಎನ್‌) ಇದರಲ್ಲಿ ಗರಿಷ್ಠ ಮೂವತ್ತು ಅಕ್ಷರ-ಅಂಕಿಗಳ ಮಿಶ್ರಿತ-ಸಂಕೇತವಾಗಿದೆ.[] ಬಿಬಿಎಎನ್‌ನಲ್ಲಿ ದೇಶೀಯ ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಸಂಬಂಧಿತ ಮಾಹಿತಿಯನ್ನು ಹೊಂದಿರುವುದು. ತಮ್ಮ-ತಮ್ಮ ದೇಶಗಳಲ್ಲಿ ಎಲ್ಲಾ ಬಿಬಿಎಎನ್‌ ಸಂಖ್ಯೆಗಳು ಎಷ್ಟು ಅಂಕಿಗಳನ್ನು ಹೊಂದಿರಬೇಕೆಂಬ ಬಗ್ಗೆ, ರಾಷ್ಟ್ರೀಯ ಬ್ಯಾಂಕಿಂಗ್‌ ಸಮುದಾಯಗಳು ತಾವೇ ಪ್ರತ್ಯೇಕವಾಗಿ ನಿರ್ಣಯಿಸುವವು.

ಖಾತೆ ಯ ಐಬಿಎಎನ್‌ ಸ್ಥಳವನ್ನು ಸೂಚಿಸುತ್ತಿರುವ ಬ್ರಿಟಿಷ್‌ ಬ್ಯಾಂಕ್‌ ವಿವರಗಳ ಶಿರಬರಹ

ಹಿನ್ನೆಲೆ

ಬದಲಾಯಿಸಿ

ಐಬಿಎಎನ್‌ ವ್ಯವಸ್ಥೆ ಜಾರಿಗೆ ಬರುವ ಮುಂಚೆ, ಬ್ಯಾಂಕ್‌, ಬ್ಯಾಂಕ್‌ ಶಾಖೆ, ಹಣ ರವಾನಾ ಸಂಕೇತಗಳು (routing codes) ಹಾಗೂ ಖಾತೆ ಸಂಖ್ಯೆ ವಿಚಾರಗಳಲ್ಲಿ ವ್ಯತ್ಯಾಸಗೊಳ್ಳುತ್ತಿರುವ ರಾಷ್ಟ್ರೀಯ ನಿಯಮಗಳ ಕುರಿತು, ಗ್ರಾಹಕರು, ಅದರಲ್ಲೂ ವಿಶಿಷ್ಟವಾಗಿ ವ್ಯಕ್ತಿಗಳು ಮತ್ತು ಸಣ್ಣ ಪ್ರಮಾಣ ಉದ್ದಿಮೆದಾರರು (ಎಸ್‌ಎಂಇಗಳು) ಬಹಳ ಗೊಂದಲಕ್ಕೊಳಗಾಗುತ್ತಿದ್ದರು. ಇದರಿಂದಾಗಿ, ಪಾವತಿಗಳಿಗೆ ಸಂಬಂಧಿತ ಎಲ್ಲಾ ಅಗತ್ಯ ಹಣ ರವಾನಾ ಮಾಹಿತಿಗಳು ಕಾಣೆಯಾಗುವ ಸಮಸ್ಯೆಗಳುಂಟಾದವು. ಇನ್ನೂ ಹೆಚ್ಚಿಗೆ, ಐಎಸ್‌ಒ 9362 ಸೂಚಿಸಿರುವಂತೆ, ಹಣ ರವಾನಾ ಮಾಹಿತಿಯು ಪರಿಶೀಲನಾ ಅಂಕಿಗಳನ್ನು (ಪರಿಶೀಲನಾ ಅಂಕಿಗಳು) ಹೊಂದಿರುತ್ತಿರಲಿಲ್ಲ. ಇದರಿಂದಾಗಿ ಪ್ರತಿಲಿಪಿ ದೋಷಗಳು ಪತ್ತೆಯಾಗುತ್ತಿರಲಿಲ್ಲ. ಹಣ ಕಳುಹಿಸುತ್ತಿರುವ ಬ್ಯಾಂಕ್‌ ತಾನು ಪಾವತಿ ಮಾಡುವ ಮುಂಚೆ ಹಣ ರವಾನಾ ಮಾಹಿತಿಯನ್ನು ಊರ್ಜಿತಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಹಣ ರವಾನಾ ದೋಷಗಳು ಪದೇ-ಪದೇ ಸಂಭವಿಸುತ್ತಿದ್ದ ಕಾರಣ, ಪಾವತಿಗಳು ವಿಳಂಬವಾದವು. ಹಣ ಕಳುಹಿಸುವ ಮತ್ತು ಸ್ವೀಕರಿಸುವ ಬ್ಯಾಂಕ್‌ಗಳಿಗೆ, ಹಾಗೂ ಕೆಲವೊಮ್ಮೆ ಹಣ ರವಾನೆಯ ಕಾರ್ಯದಲ್ಲಿ ತೊಡಗಿರುವ ಮಧ್ಯವರ್ತಿ ಬ್ಯಾಂಕ್‌ಗಳಿಗೂ ಸಹ ಹೆಚ್ಚುವರಿ ವೆಚ್ಚ ತಗಲುತ್ತಿತ್ತು. ಖಾತೆ ಗುರುತಿಸಲು ಸೂಕ್ತವಾಗಿರುವಂತಹ ಕಾಯಂ, ಆದರೂ ಹೊಂದಿಕೊಳ್ಳುವ ವ್ಯವಸ್ಥೆಯನ್ನು ಐಬಿಎಎನ್‌ ಜಾರಿಗೊಳಿಸುವುದು. ಈ ವ್ಯವಸ್ಥೆಯಲ್ಲಿ ಪ್ರತಿಲಿಪಿ (ನಕಲು) ದೋಷಗಳನ್ನು ತಡೆಗಟ್ಟಲು ಅಗತ್ಯವಾದ ಊರ್ಜಿತಗೊಳಿಸುವಿಕೆಯ ಮಾಹಿತಿ ಹೊಂದಿರುತ್ತದೆ. ಈಗ ಎಲ್ಲಾದರೂ ಸರಿ, ಒಂದು ಬ್ಯಾಂಕ್‌ನಿಂದ ಇನ್ನೊಂದಕ್ಕೆ ಹಣ ರವಾನಿಸಲು ಅಗತ್ಯವಾದ ಎಲ್ಲಾ ರವಾನಾ ಮಾಹಿತಿಯನ್ನು ಪ್ರಮಾಣಿತ ಮಟ್ಟದ ಐಬಿಎಎನ್‌ ಹೊಂದಿರುತ್ತದೆ. ಐಬಿಎಎನ್‌ ಪರಿಶೀಲನಾ ಅಂಕಿಗಳನ್ನು ಹೊಂದಿರುತ್ತದೆ. ಈ ಪರಿಶೀಲನಾ ಅಂಕಿಗಳನ್ನು ಏಕೈಕ ಪ್ರಮಾಣಿತ ವಿಧಾನದ ಪ್ರಕಾರ ಯಾವುದೇ ದೇಶದಲ್ಲಿ ಊರ್ಜಿತಗೊಳಿಸಬಹುದಾಗಿದೆ. ಇದರಲ್ಲಿ ಬ್ಯಾಂಕ್‌ ಗುರುತಿನ ಸಂಖ್ಯೆಗಳು, ಬ್ಯಾಂಕ್‌ ಶಾಖಾ ಸಂಖ್ಯೆಗಳು (ಇವನ್ನು ಯುನೈಟೆಡ್ ಕಿಂಗ್ಡಮ್‌ ಮತ್ತು ಐರ್ಲೆಂಡ್‌ ದೇಶಗಳಲ್ಲಿ ವಿಂಗಡಣಾ ಸಂಕೇತ (short code) (ಸಂಕ್ಷಿಪ್ತ ಅಂಕಿಗಳು)ಎನ್ನಲಾಗಿದೆ) ಹಾಗೂ ಖಾತೆ ಸಂಖ್ಯೆ ಸೇರಿದಂತೆ, ಬ್ಯಾಂಕ್‌ ಖಾತೆಯ ಬಗೆಗಿನ ಎಲ್ಲಾ ಪ್ರಮುಖ ಮಾಹಿತಿ ಹೊಂದಿರುತ್ತದೆ. ಇದನ್ನು ಬಳಸಿದೆಲ್ಲೆಡೆ, ಐಬಿಎಎನ್‌ಗಳು ಒಟ್ಟು ಅಂತಾರಾಷ್ಟ್ರೀಯ ಹಣ ರವಾನೆಗಳಲ್ಲಿ ದೋಷಗಳನ್ನು 0.1%ಕ್ಕಿಂತಲೂ ಕಡಿಮೆಗೊಳಿಸಿದೆ. ಹಣ ಕಳುಹಿಸುತ್ತಿರುವ ಬ್ಯಾಂಕ್‌ ಅಥವಾ ಅದರ ಗ್ರಾಹಕರು ರವಾನೆಯಾಗಬೇಕಾಗಿರುವ ಖಾತೆಯ ಊರ್ಜಿತಗೊಳಿಸುವಿಕೆಯ ಹಾಗೂ ಖಾತೆ ಸಂಖ್ಯೆಯ ಮಾಹಿತಿಯನ್ನು ಕಂಪ್ಯೂಟರ್‌ಗೆ ಸೇರಿಸುವಾಗಲೇ ಪರಿಶೀಲಿಸಿಸಬಹುದು. ಇದರಿಂದಾಗಿ, ಹಣ ರವಾನೆ ಮತ್ತು ಖಾತೆ ಸಂಖ್ಯೆ ದೋಷಗಳನ್ನು ಬಹುತೇಕ ಸಂಪೂರ್ಣವಾಗಿ ತಡೆಗಟ್ಟಬಹುದು. ವಿದ್ಯುನ್ಮಾನ ರೀತ್ಯಾ ರವಾನಿಸುವಾಗ ಐಬಿಎಎನ್‌ ತನ್ನ ಅಂಕಿಅಂಶಗಳ ನಡುವೆ ಯಾವುದೇ ಖಾಲಿ ಸ್ಥಳವಿರಬಾರದು. ಆದರೂ, ಕಾಗದದಲ್ಲಿ ಮುದ್ರಿಸಿದಾಗ, ಐಬಿಎಎನ್‌ನ್ನು ನಾಲ್ಕು ಅಕ್ಷರಗಳ ಗುಂಪುಗಳಲ್ಲಿದ್ದು, ಮಧ್ಯದಲ್ಲಿ ಒಂದು ಅಕ್ಷರದಷ್ಟು ಅಂತರ ಹೊಂದಿರುತ್ತವೆ. ಇದರಲ್ಲಿ ಕೊನೆಯ ಗುಂಪು ವ್ಯತ್ಯಾಸವಾಗಬಲ್ಲ ಅಂಕಿಗಳ ಸಂಖ್ಯೆ ಹೊಂದಿರುತ್ತದೆ. ಇದರ ಉದಾಹರಣೆಯನ್ನು ಕೆಳಗೆ ನೀಡಲಾಗಿದೆ.

ರಾಷ್ಟ್ರ ಐಬಿಎಎನ್‌ ನಮೂದಿಸುವ ಉದಾಹರಣೆ
ಗ್ರೀಸ್‌ GR16 0110 1050 0000 1054 7023 795
ಗ್ರೇಟ್ ಬ್ರಿಟನ್‌ GB35 MIDL 4025 3432 1446 70
ಸೌದಿ ಅರೇಬಿಯಾ SA80 8000 0375 6080 1019 0160
ಸ್ವಿಜರ್ಲೆಂಡ್‌ CH51 0868 6001 2565 1500 1
ಇಸ್ರೇಲ್‌ IL30 0113 0300 0009 6339 234

ಐಬಿಎಎನ್‌ನಲ್ಲಿ ಬಳಸಬಹುದಾದ ಅಂಕಿಗಳು ಹಿಂದೂ-ಆರಬಿಕ್‌ ಅಂಕಿಗಳು ‘0’ಯಿಂದ ‘9’ ವರೆಗೆ ಹಾಗೂ ಲ್ಯಾಟೀನ್‌ ಅಕ್ಷರಗಳಾದ A ಇಂದ Z ವರೆಗಿನ ದೊಡ್ಡ ಅಕ್ಷರಗಳಾಗಿವೆ. ತಮ್ಮ ರಾಷ್ಟ್ರೀಯ ಭಾಷೆಗಳಲ್ಲಿ ಇಂತಹ ಅಕ್ಷರಗಳು-ಅಂಕಿಗಳನ್ನು ಬಳಸದಿರುವ ಗ್ರೀಸ್‌, ಸೌದಿ ಅರಬಿಯಾ ಮತ್ತು ಇಸ್ರೇಲ್‌ನಂತಹ ದೇಶಗಳಲ್ಲೂ ಇದು ಅನ್ವಯಿಸುತ್ತದೆ.

ಭೌಗೋಳಿಕ ಬಳಕೆ

ಬದಲಾಯಿಸಿ

ರಷ್ಯಾ, ಬೆಲರೂಸ್‌, ಉಕ್ರೇನ್‌, ಅರ್ಮೇನಿಯಾ ಮತ್ತು ಅಜರ್ಬೇಜಾನ್ ಹೊರತುಪಡಿಸಿ ಯುರೋಪ್‌ನ ಎಲ್ಲಾ ಬ್ಯಾಂಕ್‌ಗಳು ತಮ್ಮ ಖಾತೆಗಳಿಗಾಗಿ ಐಬಿಎಎನ್‌ ಗುರುತಿಸುವ ಸಾಧನ ಹಾಗೂ ರಾಷ್ಟ್ರೀಯವಾಗಿ ಅಂಕಿ-ಅಂಶಗಳ ಪತ್ತೆ ಮಾಡುವ ಸಾಧನವನ್ನೂ ಒದಗಿಸುತ್ತವೆ. ಈ ವ್ಯವಸ್ಥೆಯು ಯುರೋಪಿಯನ್‌ ಆರ್ಥಿಕ ವಲಯದಲ್ಲಿ ಕಡ್ಡಾಯವಾಗಿದೆ.[] ಜೊತೆಗೆ, ಇಸ್ರೇಲ್‌, ಕಝಕ್‌ಸ್ಥಾನ್‌, ಲೆಬನಾನ್‌, ಮೌರಿಟಾನಿಯಾ, ಮಾರಿಷಸ್‌, ಸೌದಿ ಅರಬಿಯಾ, ಟುನಿಷಿಯಾ ಹಾಗೂ ತುರ್ಕಿ ರಾಷ್ಟ್ರಗಳಲ್ಲಿಯೂ ಸಹ ಐಬಿಎಎನ್‌ ವ್ಯವಸ್ಥೆಯ ಖಾತೆ ಗುರುತಿಸುವ ಸಾಧನ ಒದಗಿಸುತ್ತವೆ.

 

ಜಿಬ್ರಾಲ್ಟಾರ್‌ ಮತ್ತು ರಾಜಪ್ರಭುತ್ವದ ಆಳ್ವಿಕೆಯಲ್ಲಿರುವ ರಾಷ್ಟ್ರಗಳ ಹೊರತುಪಡಿಸಿ, ಉಳಿದ ಬ್ರಿಟಿಷ್‌ ಆಳ್ವಿಕೆಗೆ ಸೇರಿದ ರಾಷ್ಟ್ರಗಳ ಬ್ಯಾಂಕ್‌ಗಳಲ್ಲಿ ಐಬಿಎಎನ್‌ ವ್ಯವಸ್ಥೆಯನ್ನು ಬಳಸಲಾಗುವುದಿಲ್ಲ. ಡಚ್‌ ಆಳ್ವಿಕೆಯ ವೆಸ್ಟ್‌ ಇಂಡೀಸ್‌ ವಲಯದಲ್ಲಿರುವ ಬ್ಯಾಂಕ್‌ಗಳೂ ಸಹ ಐಬಿಎಎನ್‌ ವ್ಯವಸ್ಥೆಯನ್ನು ಬಳಸುವುದಿಲ್ಲ. ಯುರೋಪ್‌ ಖಂಡದ ಆಚೆಯಿರುವ ಕೆಲವು ಬ್ಯಾಂಕ್‌ಗಳು ಐಬಿಎಎನ್‌ಗೆ ಮಾನ್ಯತೆ ನೀಡಲಾರವು, ಆದರೂ ಕಾಲಾನಂತರದಲ್ಲಿ ಮಾನ್ಯತೆ ನೀಡುವ ಸಾಧ್ಯತೆಗಳೂ ಉಂಟು. ಅವು ವಿದೇಶಿ ಬ್ಯಾಂಕ್‌ ಖಾತೆ ಸಂಖ್ಯೆಗಳಂತೆಯೇ ಐಬಿಎಎನ್‌ಗಳನ್ನು ಪರಿಗಣಿಸದಿರಬಹುದು. ಆದರೂ, ಯುರೋಪ್‌ ಗಡಿಯಾಚೆಗಿನ ಬ್ಯಾಂಕ್‌ಗಳು ಯುರೋಪ್‌ನಲ್ಲಿರುವ ಖಾತೆಗಳಿಗೆ ಐಬಿಎಎನ್‌ಗಳನ್ನು ಖಾತೆ ಸಂಖ್ಯೆಗಳ ರೂಪದಲ್ಲಿ ಸ್ವೀಕರಿಸುವವು. ವಿಶಿಷ್ಟವಾಗಿ ಅವು ಹಣ ಪಾವತಿ ಸೂಚನೆ ನೀಡುವ ಮುಂಚೆ ಐಬಿಎಎನ್‌ ಸಿಂಧುವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದಿರಬಹುದು. ಐಬಿಎಎನ್‌ ಅನುಪಸ್ಥಿತಿಯಲ್ಲಿ, ಸದ್ಯದ ಐಎಸ್‌ಒ 9362 ಬ್ಯಾಂಕ್‌ ಗುರುತಿಸುವ ಸಾಧನಾ ಸಂಕೇತ ವ್ಯವಸ್ಥೆಯನ್ನು ಬಳಸುವುದು ಅಗತ್ಯವಾಗಿದೆ. (ಬಿಐಸಿ ಅಥವಾ ಸ್ವಿಫ್ಟ್‌ ಸಂಕೇತ) ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಬ್ಯಾಂಕ್‌ಗಳು ಐಬಿಎಎನ್‌ ವ್ಯವಸ್ಥೆಯ ಖಾತೆ ಸಂಖ್ಯೆಗಳನ್ನು ಒದಗಿಸುವುದಿಲ್ಲ. ಈ ದೇಶದ ಬ್ಯಾಂಕ್‌ಗಳು ಐಬಿಎಎನ್‌ ಪ್ರಮಾಣಗಳ ಯಾವುದೇ ಆಯ್ಕೆಯನ್ನು ಎಎನ್‌ಎಸ್‌ಐ ಎಎಸ್‌ಸಿ ಎಕ್ಸ್‌9 ಎನ್ನಲಾದ ಅಮೆರಿಕಾ ಸಂಯುಕ್ತ ಸಂಸ್ಥಾನದ ಹಣಕಾಸು ಸೇವಾ ಪ್ರಮಾಣ ಅಭಿವೃದ್ಧಿ ಸಂಘಟಣೆ ಚಾಲಿತಗೊಳಿಸಬೇಕಾಗುವುದು. ಆದರೆ ಇದುವರೆಗೂ ಮಾಡಿಲ್ಲ. ಆದ್ದರಿಂದ, ಅಮೆರಿಕಾ ಸಂಯುಕ್ತ ಸಂಸ್ಥಾನದ ಗಡಿಯಾಚೆಯಿಂದ ದೇಶಲ್ಲಿರುವ ಬ್ಯಾಂಕ್‌ ಖಾತೆಗಳಿಗೆ ಪಾವತಿಸಲಾದ ಹಣವು ಹಣ ಪಾವತಿಯಲ್ಲಿನ ದೋಷಗಳಾಗುವ ಸಮಸ್ಯೆ ಎದುರಿಸುವವು. ಕೆನಡಾ ದೇಶದ ಆರ್ಥಿಕ ಸಂಸ್ಥೆಗಳು ಐಬಿಎಎನ್‌ನ್ನು ಆಯ್ದುಕೊಂಡಿಲ್ಲ. ಬದಲಿಗೆ, ಕೆನಡಾ ದೇಶದೊಳಗೆ ಹಣ ವರ್ಗಾವಣೆಗಾಗಿ, ಕೆನಡಿಯನ್‌ ಪಾವತಿಗಳ ಸಂಘಟನೆ ನೀಡುವ ಬ್ಯಾಂಕ್‌ ವ್ಯವಹಾರ ಸಂಖ್ಯೆಗಳನ್ನು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಣ ವರ್ಗಾವಣೆಗಾಗಿ ಸ್ವಿಫ್ಟ್‌ ವಿಧಾನ ಬಳಸುತ್ತವೆ. ಪ್ರಮುಖ ಬ್ಯಾಂಕ್‌ಗಳು ಐಬಿಎಎನ್‌ ಬಳಸಲು ಕೆನಡಾದಲ್ಲಿ ಯಾವುದೇ ವಿಧ್ಯುಕ್ತ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದ ನಿಯಂತ್ರಣಾ ಷರತ್ತುಗಳಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜೀಲೆಂಡ್‌ ದೇಶಗಳ ಬ್ಯಾಂಕ್‌ಗಳೂ ಐಬಿಎಎನ್‌ ಅಳವಡಿಸಿಕೊಂಡಿಲ್ಲ. ಅವು ದೇಶೀಯ ಹಣ ವರ್ಗಾವಣೆಗಾಗಿ ಬ್ಯಾಂಕ್ ರಾಜ್ಯ ಶಾಖೆ ಸಂಖ್ಯೆ ಸಂಕೇತ ಹಾಗೂ ಅಂತಾರಾಷ್ಟ್ರೀಯ ಹಣ ವರ್ಗಾವಣೆಗಾಗಿ ಸ್ವಿಫ್ಟ್‌ನ್ನು ಬಳಸುತ್ತವೆ.

ಐಬಿಎಎನ್‌ ಊರ್ಜಿತಗೊಳಿಸುವಿಕೆಯ ಲಕ್ಷಣಗಳು

ಬದಲಾಯಿಸಿ

ದತ್ತಾಂಶವನ್ನು ಕಂಪ್ಯುಟರ್‌ಗೆ ಸೇರಿಸುವ ಸಮಯದಲ್ಲೇ, ಊರ್ಜಿತಗೊಳಿಸುವಿಕೆ ಕ್ರಮವನ್ನು ಆದಷ್ಟು ಸಕ್ರಿಯಗೊಳಿಸುವುದು. ಐಬಿಎಎನ್‌ನ ವಿನ್ಯಾಸ ಉದ್ದೇಶಗಳ ಪೈಕಿ ಒಂದೆನ್ನಲಾಗಿದೆ. ವಿಶಿಷ್ಟವಾಗಿ, ಐಬಿಎಎನ್‌ ಮಾಹಿತಿ ಸ್ವೀಕರಿಸುವ ಕಂಪ್ಯೂಟರ್‌ ತಂತ್ರಾಂಶವು ಇದನ್ನು ಊರ್ಜಿತಗೊಳಿಸಲು ಸಾಧ್ಯ:

  • ದೇಶದ ನಿಯಮಾವಳಿಯು ಈ ಸಂಕೇತಕ್ಕೆ ಸಿಂಧುವಾಗಿದೆಯೇ?
  • ಐಬಿಎಎನ್‌ನಲ್ಲಿರುವ ಸಂಕೇತಗಳು ಈ ದೇಶ ಕ್ಕೆ ಸೂಚಿಸಲಾದ ಸಂಖ್ಯೆಯೊಂದಿಗೆ ಹೊಂದಿಕೊಳ್ಳುತ್ತಿವೆಯೇ?(ಕೋಡ್ ಎಂದರೆ ಬ್ಯಾಂಕ್ ರಚಿಸಿದ ನಿಯಮಾವಳಿಗಳ ಸಂಕೇತ ರಚಿಸುವಿಕೆ)
  • ಬಿಬಿಎಎನ್‌ ವ್ಯವಸ್ಥೆಯು ಈ ದೇಶ ಕ್ಕೆ ಸೂಚಿಸಲಾದ ನಿರ್ದಿಷ್ಟ ವ್ಯವಸ್ಥೆಯನ್ನು ಅನುಸರಿಸುತ್ತದೆಯೇ?
  • ಖಾತೆ ಸಂಖ್ಯೆ, ಬ್ಯಾಂಕ್‌ (ನಿಯಮಾವಳಿಯ ಒಟ್ಟಾರ್ಥ) ಸಂಕೇತ ಮತ್ತು ದೇಶದ ಸಂಕೇತ ಸಂಯುಕ್ತವು ಪರಿಶೀಲನಾ ಅಂಕಿಗಳೊಂದಿಗೆ ಹೊಂದಿಕೊಳ್ಳುತ್ತದೆಯೇ?

ಐಎಸ್‌ಒ/ಐಇಸಿ 7064:2002 [] (ಈ ಲೇಖನದಲ್ಲಿ ಎಂಒಡಿ-97 ಎಂದು ಹ್ರಸ್ವಗೊಳಿಸಲಾಗಿದೆ) ಪ್ರಮಾಣಗಳ ಪ್ರಕಾರ ಪರಿಶೀಲನಾ ಅಂಕಿಗಳನ್ನು ಗಣಿಸಲಾಗುವುದು. ಬಳಕೆದಾರರು ಮಾಹಿತಿಯನ್ನು ಕೀಲಿಮಣೆ ಮೂಲಕ ನಮೂದಿಸುವಾಗ ಅಥವಾ ನಕಲು ಮಾಡುವಾಗ ಸಂಭವಿಸಬಹುದಾದ ದೋಷಗಳಿಂದ ಇದು ಅಕ್ಷರ-ಅಂಶಗಳ ಜೋಡಣಾ ಸರಣಿಯನ್ನು ರಕ್ಷಿಸಲು ಪರಿಶೀಲನಾ ಅಕ್ಷರ ವ್ಯವಸ್ಥೆಯನ್ನು ಸೂಚಿಸುತ್ತದೆ. ವಿಶೇಷವಾಗಿ, ಈ ಪ್ರಮಾಣಕವು ಕೆಳಕಂಡವುಗಳನ್ನು ಪತ್ತೆ ಮಾಡಬಹುದೆಂದು ಹೇಳುತ್ತದೆ:

  • "ಎಲ್ಲಾ ಏಕೈಕ ಬದಲೀ ದೋಷಗಳು (ಒಂದು ಅಕ್ಷರ-ಅಂಕಿಯ ಬದಲು ಇನ್ನೊಂದು, ಉದಾರಣೆಗೆ 1234 ಬದಲಿಗೆ 4234);"
  • "ಎಲ್ಲಾ, ಅಥವಾ ಬಹುಶಃ ಎಲ್ಲಾ ಏಕ (ಸ್ಥಳೀಯ) ವರ್ಗಾವಣಾ ದೋಷಗಳು (ಎರಡು ಅಕ್ಕಪಕ್ಕದ ಅಥವಾ ಪರ್ಯಾಯ ಅಂಕಿಗಳ ಅದಲು-ಬದಲು;ಉದಾಹರಣೆಗೆ 12345 ಬದಲಿಗೆ 12354 ಅಥವಾ 12543);" ಏಕೆಂದರೆ ಐಬಿಎಎನ್‌ ದೋಷ ಪತ್ತೆಹಚ್ಚುವಿಕೆಯು ಸಾಮಾನ್ಯವಾಗಿ ಈ ವ್ಯವಸ್ಥೆಯು ಎಂಒಡಿ 97 ಬಳಸುವ ಕಾರಣ ಈ ತರಹದ ಎಲ್ಲಾ ದೋಷಗಳನ್ನು ಪತ್ತೆ ಮಾಡುತ್ತದೆ.
  • ಎಲ್ಲಾ ಅಥವಾ ಬಹುತೇಕ ಸ್ಥಳಾಂತರಣಾ ದೋಷಗಳು (ಇಡೀ ಅಕ್ಷರ ಸರಣಿಯ ಎಡಕ್ಕೆ ಅಥವಾ ಬಲಕ್ಕೆ ಸ್ಥಳಾಂತರಣ);" ಸರಿಯಾದ ರಚನೆಯಿಲ್ಲದ ವ್ಯವಸ್ಥೆಯಲ್ಲಿ ಉಂಟಾಗುವ ಈ ದೋಷಗಳನ್ನು ಕಂಪ್ಯೂಟರ್‌ ತಂತ್ರಾಂಶ ಪತ್ತೆ ಮಾಡುತ್ತದೆ.
  • "ಬಹಳಷ್ಟು ಪ್ರಮಾಣದಲ್ಲಿ ದುಪ್ಪಟ್ಟು ಅದಲು-ಬದಲು (ಪರ್ಯಾಯ)ದೋಷಗಳು (ಒಂದೇ ಅಕ್ಷರ-ಅಂಕಿ ಸರಣಿಯಲ್ಲಿ ಎರಡು ಪ್ರತ್ಯೇಕ ಅದಲು-ಬದಲು ದೋಷಗಳು, ಉದಾಹರಣೆಗೆ 1234567 ಬದಲು 7234587);"
  • "ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುವ ಇತರೆ ಎಲ್ಲಾ ರೀತಿಯ ದೋಷಗಳು."

ಆನ್ಲೈನ್‌ (ಗಣಕಯಂತ್ರದ ಮೂಲಕ ಪರಿಶೀಲಿಸಬಲ್ಲ) ನೇರ ಸಾಧನಗಳು

ಬದಲಾಯಿಸಿ

ಭದ್ರತೆ ಮತ್ತು ಗೌಪ್ಯತೆ

ಬದಲಾಯಿಸಿ

ಐಬಿಎಎನ್‌ ಎಂಬುದು ಬ್ಯಾಂಕ್‌ ಖಾತೆ ವರ್ಧಿತ ಸಂಖ್ಯೆಯಲ್ಲದೆ ಹೆಚ್ಚಿಗೇನೂ ಅಲ್ಲದ ಕಾರಣ, ಖಾತೆದಾರರು ಇತರೆ ಮಾಮೂಲಿ ಬ್ಯಾಂಕ್‌ ಖಾತೆ ಸಂಖ್ಯೆಗಳನ್ನು ನಿರ್ವಹಿಸುವಾಗ, ಭದ್ರತೆ-ಗೌಪ್ಯತೆಗಳ ಬಗ್ಗೆ ವಹಿಸುವ ಎಚ್ಚರಿಕೆಯನ್ನು ಇಲ್ಲೂ ವಹಿಸಬೇಕು. ಹಲವು ಉದ್ದಿಮೆಗಳು ತಮ್ಮ ಮಧ್ಯಂತರ ಖಾತೆ ಗಳ ಐಬಿಎಎನ್‌ಗಳನ್ನು ಪ್ರಕಟಿಸುತ್ತವೆ. ಭದ್ರತೆ ಕಾಪಾಡಲು, ಈ ಪಾವತಿಗಳನ್ನು ಆಗಾಗ್ಗೆ ಸಂಪೂರ್ಣವಾಗಿ ಖಾಲಿ ಮಾಡಿ ಉದ್ದಿಮೆಯ ಆಂತರಿಕ ಸಾಂಸ್ಥಿಕ ಖಾತೆಗೆ ಸ್ಥಳಾಂತರಿಸಲಾಗುವುದು.

ಆನ್ಲೈನ್ ಐಬಿಎಎನ್‌ ನ ಹೊಸ ಪೀಳಿಗೆಗಾಗಿ ನಡೆಸಿದ ಆವಿಷ್ಕಾರ,ಸೃಷ್ಟಿಸುವಿಕೆ

ಬದಲಾಯಿಸಿ

ಐಬಿಎನ್‌ಗಾಗಿ ಚಾಲ್ತಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ಖಾತೆ ನಿರ್ವಹಿಸುವ ಹಣಕಾಸು ಸಂಸ್ಥೆ ಮಾತ್ರ ಐಬಿಎಎನ್‌ ಪರವಾಗಿ ವಿತರಿಸುವ ಹಕ್ಕು ಪಡೆದಿದೆ. ಪರಿಶೀಲನಾ ಅಂಕಿಗಳು ಅಥವಾ ಸೃಷ್ಟಿಸಲಾದ ಐಬಿಎನ್‌ ವಿಚಾರದಲ್ಲಿ ಪರಿಶೀಲನಾ ಅಂಕಗಳು ಅಥವಾ ರವಾನಾ ಸಂಕೇತದಲ್ಲಿ ಕೆಲವು ನ್ಯೂನತೆಗಳಿರಬಹುದು ಎಂಬುದು ಹಲವು ಕಾರಣಗಳಲ್ಲಿ ಒಂದು. ಕೆಲವು ನಿದರ್ಶನಗಳಲ್ಲಿ, ಸಂಬಂಧಿತ ಸಂಸ್ಥೆಯು ತಮ್ಮ ಮಾಹಿತಿ ಪ್ರಕಟಿಸಲು ಅಂತರಜಾಲವನ್ನು ಬಳಸುವ ಸಾಧ್ಯತೆಯೂ ಉಂಟು. ಆನ್ಲೈನ್‌ ಐಬಿಎಎನ್ ಸೃಷ್ಟಿಸುವ ಸಾಧನವು ಸಂಬಂಧಿತ ಸಂಸ್ಥೆಯಿಂದ ಚಾಲಿತವಾಗಿರದಿದ್ದಲ್ಲಿ, ಬಳಕೆದಾರರು ಈ ಆನ್ಲೈನ್‌ ಸೃಷ್ಟಿಸುವ ಸಾಧನಗಳನ್ನು ವಿಶ್ವಸನೀಯ ಎನ್ನುವಂತಿಲ್ಲ.

ಆನ್ಲೈನ್‌ ಮೂಲಕ ಐಬಿಎಎನ್‌ ಊರ್ಜಿತಗೊಳಿಸುವಿಕೆ

ಬದಲಾಯಿಸಿ

ಅಂತರಜಾಲದಲ್ಲಿ ಬಹಳಷ್ಟು ಐಬಿಎಎನ್‌ ಊರ್ಜಿತಗೊಳಿಸುವ ಸಾಧನಗಳಿವೆ. ಕೆಲವು ಸಾಧನಗಳು ಒಂದೊಂದು ದೇಶಕ್ಕೆ ವಿಶಿಷ್ಟವಾಗಿವೆ. ಇನ್ನು ಕೆಲವು ನಿರ್ಧಿಷ್ಟ ಬ್ಯಾಂಕ್‌ಗೆ ಸಂಬಂಧಿಸಿವೆ. ಈ ಕೆಲವು ಸಂಸ್ಥೆಗಳಿಗೆ ಕೊಂಡಿಗಳನ್ನು ವಿಕಿಪೀಡಿಯಾದ ಪ್ರತ್ಯೇಕ ಲೇಖನಗಳಲ್ಲಿ ಸಂಬಂಧಿತ ಭಾಷೆಗಳಲ್ಲಿ ಲಭ್ಯ. ಎಲ್ಲಾ ಸಾಮಾನ್ಯ ಉದ್ದೇಶದ ಸಾಧನಗಳು ಮೇಲೆ ವಿವರಿಸಿದ ಊರ್ಜಿತಗೊಳಿಸುವ ಕಾರ್ಯ ಮಾಡುವವು. ಆದರೂ ಕೆಲವು ಇಂತಹ ದೇಶಕ್ಕೆ ಸಂಬಂಧಿತ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸುವುದುಂಟು - ಉದಾಹರಣೆಗೆ, ಐಬಿಎಎನ್ ಬ್ಯಾಂಕ್‌ ಸಂಕೇತ ಮತ್ತು ವಿಂಗಡಣಾ ಸಂಕೇತವು ಸುಸಂಗತವಾಗಿದೆಯೇ ಎಂಬುದನ್ನು ಪರಿಶೀಲಿಸುವುದು. ಐಬಿಎಎನ್‌ ವ್ಯವಸ್ಥೆಯನ್ನು ಆಯ್ದು ಜಾರಿಗೊಳಿಸಿದ ಎಲ್ಲಾ 50 ದೇಶಗಳಿಗಾಗಿ ಯುಎನ್‌ ಸಿಇಎಫ್‌ಎಸಿಟಿ ಟಿಬಿಜಿ5 ಉಚಿತ ಐಬಿಎಎನ್‌ ಊರ್ಜಿತಗೊಳಿಸುವಿಕೆಯ ಸಲಹಾ ಕೈಪಿಡಿ ಯನ್ನು 31 ಭಾಷೆಗಳಲ್ಲಿ ಪ್ರಕಟಿಸಿ ಹೊರತಂದಿದೆ. ಪರಿಶೀಲನಾ ಗಣನೆಯ ಜಾವಾಸ್ಕ್ರಿಪ್ಟ್‌ ಮೂಲ ಸಂಕೇತ (Javascript source code) Archived 3 December 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಸರಣಿಯನ್ನೂ ಸಹ ಪ್ರಕಟಿಸಿದೆ. ಇದೇ ರೀತಿ, ಇಸಿಬಿಎಸ್‌ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಲಭ್ಯವಿರುವ ಇಂಗ್ಲಿಷ್‌ ಭಾಷಾ ಐಬಿಎಎನ್‌ ಪರಿಶೀಲಿಸುವ ಸಾಧನವು ಅವುಗಳ ಅಂತರಜಾಲತಾಣ Archived 22 August 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ದಲ್ಲಿ ಲಭ್ಯ. ಯಾವುದೋ(ನಕಲಿ) ಕೃತಕ ಬ್ರಿಟಿಷ್‌ ಐಬಿಎನ್‌ ಸಂಖ್ಯೆ GB82 WEST 1234 5698 7654 32 ನಮೂದಿಸಿದಾಗ, ಇವೆರಡೂ ಐಬಿಎಎನ್‌ ಪರಿಶೀಲನಾ ಸಾಧನಗಳು 'ಈ ಐಬಿಎಎನ್‌ ಸರಿಯಿದೆ ಎಂದು ಭಾಸವಾಗಿದೆ; (ಇದು ಸರಿಯೇ ಎಂದು, ಈ ತೆರನಾಗಿ ಇಂಗ್ಲಿಷ್ ನಲ್ಲಿ ಸಂದೇಶ ರವಾನೆಯಾಗುತ್ತದೆ)(This ಐಬಿಎಎನ್‌ appears to be correct) ' ಎಂಬ ಸಂದೇಶವನ್ನು ಕಾಣಿಸುತ್ತದೆ (ಮೇಲೆ ತಿಳಿಸಲಾದ ಮಾಹಿತಿ ನೋಡಿ). ಏಕೆಂದರೆ ಇದರಲ್ಲಿ ರಾಷ್ಟ್ರದ ಸಂಕೇತವು ಸಿಂಧುವಾಗಿತ್ತು. ರಾಷ್ಟ್ರದ ಸಂಕೇತದೊಡನೆ ಇರಬೇಕಾದ ವಿನ್ಯಾಸದೊಂದಿಗೆ ಇದು ಸುಸಂಗತವಾಗಿತ್ತು. ಪರಿಶೀಲನಾ ಅಂಕಗಳು ಐಬಿಎನ್‌ನ ಉಳಿದ ಭಾಗಗಳೊಂದಿಗೆ ಸುಸಂಗತವಾಗಿದ್ದವು.

ಆನ್ಲೈನ್‌ ಐಬಿಎಎನ್‌ ಊರ್ಜಿತಗೊಳಿಸುವಿಕೆಯು ಸುರಕ್ಷಿತವಾಗಿದೆಯೇ?

ಬದಲಾಯಿಸಿ

ಅಪ್ಪಟ ಐಬಿಎಎನ್‌ ಊರ್ಜಿತಗೊಳಿಸುವಿಕೆಯ ಸಾಧನಗಳಿಗೆ ಅಂತರಜಾಲ ಕೊಂಡಿಗಳನ್ನು ಅಳಿಸಿ ಅನ್ಯ ಕೊಂಡಿಗಳನ್ನು ಸೇರಿಸುವುದರಿಂದ, ಅಪರಾಧಿಗಳು ನೈಜ ಐಬಿಎನ್‌ಗಳ ಕಳ್ಳತನ ಕೃತ್ಯ (ದುರ್ಬಳಕೆ)ಎಸಗುವುದು ಸುಲಭವಾಗುವುದು ಎಂದು ವಿಮರ್ಶಾ ತಜ್ಞರು ಎಚ್ಚರಿಸಿದ್ದಾರೆ. [ಸೂಕ್ತ ಉಲ್ಲೇಖನ ಬೇಕು]

ವಿವಿಧ ದೇಶಗಳಲ್ಲಿ ಸಿಂಧುವಾಗಿರುವ ಐಬಿಎಎನ್‌ಗಳ ಪಟ್ಟಿ

ಬದಲಾಯಿಸಿ

ಈ ಪಟ್ಟಿಯು ವಿವಿಧ ದೇಶಗಳ ಐಬಿಎಎನ್‌ ವ್ಯವಸ್ಥೆಗಳ ಸಂಕ್ಷಿಪ್ತ ವಿವರಗಳನ್ನು ನೀಡುತ್ತದೆ. ಅನ್ಯಥಾ ತಿಳಿಸದಿದ್ದಲ್ಲಿ, ಐಬಿಎಎನ್‌ ದಾಖಲೆಗಳ ಆಗಸ್ಟ್‌ 2010 ಆವೃತ್ತಿಯಿಂದ ಈ ಮಾಹಿತಿಯನ್ನು ಆಯ್ದುಕೊಳ್ಳಲಾಗಿದೆ.[]

  • ಎರಡು ಅಕ್ಷರಗಳ ಐಎಸ್‌ಒ ದೇಶದ ಸಂಕೇತದ ನಂತರ ಬರುವ kk ಎಂಬುದನ್ನು ಉಳಿದ ಐಬಿಎಎನ್‌ ಅಕ್ಷರಗಳಿಂದ ಗಣಿಸಲಾದ ಪರಿಶೀಲನಾ ಅಂಕಗಳನ್ನು ನಿರೂಪಿಸುತ್ತದೆ. ಸಂಭಂದಿತ ದೇಶದೊಂದಿಗೆ ಇದು ಸ್ಥಿರ ಮೌಲ್ಯವಾಗಿದ್ದಲ್ಲಿ, ಇದನ್ನು ಟಿಪ್ಪಣಿಗಳ ಅಂಕಣದಲ್ಲಿ ನಮೂದಿಸಲಾಗುವುದು. ಬಿಬಿಎಎನ್‌ ತನ್ನದೇ ಪರಿಶೀಲನಾ ಅಂಕಗಳನ್ನು ಹೊಂದಿದ್ದು, ಐಬಿಎಎನ್‌ ಪರಿಶೀಲನಾ ಅಂಕಗಳ ತರಹ ಅದೇ ಗಣನಾ ವಿಧಾನವನ್ನು ಬಳಸಿದಲ್ಲಿ, ಇದು ಸಂಭವಿಸುತ್ತದೆ.
  • ಬಿಬಿಎಎನ್‌ ವ್ಯವಸ್ಥೆಯ ಅಂಕಣವು ಐಬಿಎಎನ್‌ನ ಬಿಬಿಎಎನ್‌ ಭಾಗದ ವ್ಯವಸ್ಥೆಯನ್ನು ಇಂಗ್ಲಿಷ್‌ ದೊಡ್ಡಕ್ಷರಗಳು (A-Z), ಸಂಖ್ಯೆಗಳು (0-9) ಹಾಗೂ ಮಿಶ್ರಿತ ಅಕ್ಷರಗಳು (a-z, A-Z, 0-9) ರೂಪದಲ್ಲಿ ಪ್ರದರ್ಶಿಸುತ್ತವೆ. ಉದಾಹರಣೆಗೆ, ಬಲ್ಗೇರಿಯಾ ದೇಶದ ಬಿಬಿಎಎನ್ (4a,6n,8c) ನಲ್ಲಿ ನಾಲ್ಕು ಆಲ್ಫಾ ಅಕ್ಷರಗಳು, ನಂತರ ಆರು ಅಂಕಿಗಳು, ನಂತರ ಎಂಟು ಮಿಶ್ರಿತ ಅಕ್ಷರ-ಅಂಕಿಗಳ ಸಂಯುಕ್ತ ಮಾಹಿತಿ ಹೊಂದಿರುತ್ತವೆ.
  • ಆವರಣಗಳಲ್ಲಿ ದೇಶ-ವಿಶಿಷ್ಟ ಹೆಸರುಗಳೊಂದಿಗೆ ಟಿಪ್ಪಣಿಗಳು ಅಂಕಣದಲ್ಲಿ ವಿವರಣೆ ನೀಡಲಾಗಿದೆ. ವಿವಿಧ ಪಂಕ್ತಿಗಳಲ್ಲಿನ ವ್ಯವಸ್ಥೆಗಳನ್ನು ಬಿಬಿಎಎನ್‌ ಪಂಕ್ತಿಯಿಂದ ನಿರ್ಣಯಿಸಬಹುದಾಗಿದೆ.
ರಾಷ್ಟ್ರ ಅಕ್ಷರ-ಅಂಕಿಗಳ ಸಂಖ್ಯೆ ಬಿಬಿಎಎನ್‌ ವ್ಯವಸ್ಥೆ ಐಬಿಎಎನ್‌ ಕ್ಷೇತ್ರದಲ್ಲಿ ಟಿಪ್ಪಣಿ
ಅಲ್ಬಾನಿಯಾ 28 8n, 16c ALkk BBBS SSSK CCCC CCCC CCCC CCCC B = ರಾಷ್ಟ್ರ ಮಟ್ಟದ ಬ್ಯಾಂಕ್‌ ಸಂಕೇತ
S = ಬ್ಯಾಂಕ್‌‌ ಶಾಖೆ ಸೂಚಕ
K = ಪರಿಶೀಲನಾ ಅಂಕಿ C = ಖಾತೆ ಸಂಖ್ಯೆ.
ಅಂಡೊರಾ 24 8n,12c ADkk BBBB SSSS CCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ
C = ಖಾತೆ ಸಂಖ್ಯೆ
ಆಸ್ಟ್ರಿಯಾ 20 16n ATkk BBBB BCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಕ್ಯೆ
ಬೆಲ್ಜಿಯಂ 16 12n BEkk BBBC CCCC CCKK B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
K = ಪರಿಶೀಲನಾ ಅಂಕಗಳು
ಬೋಸ್ನಿಯ ಮತ್ತು ಹರ್ಝೆಗೊವಿನ 20 16n BAkk BBBS SSCC CCCC CoKK k = ಐಬಿಎಎನ್‌ ಪರಿಶೀಲನಾ ಅಂಕಿಗಳು (ಎಂದಿಗೂ 39)
B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ
C = ಖಾತೆ ಸಂಖ್ಯೆ
K = ಪರಿಶೀಲನಾ ಅಂಕಗಳು
ಬಲ್ಗೇರಿಯ 22 4a,6n,8c BGkk BBBB SSSS DDCC CCCC CC B = ಬಿಐಸಿ ಬ್ಯಾಂಕ್‌ ಸಂಕೇತ
S = ಶಾಖೆ (ಬಿಎಇ) ಸಂಖ್ಯೆ
D = ಖಾತೆ ವಿಧಾನ
C = ಖಾತೆ ಸಂಖ್ಯೆ
ಕ್ರೊಯೇಷಿಯಾ 21 17n HRkk BBBB BBBC CCCC CCCC C B = ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಸೈಪ್ರಸ್‌ 28 8n,16c CYkk BBBS SSSS CCCC CCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ
C = ಖಾತೆ ಸಂಖ್ಯೆ
ಜೆಕ್‌ ಗಣರಾಜ್ಯ 24 20n CZkk BBBB SSSS SSCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ
C = ಖಾತೆ ಸಂಖ್ಯೆ
ಡೆನ್ಮಾರ್ಕ್‌ 18 14n DKkk BBBB CCCC CCCC CC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಈಸ್ಟಾನಿಯ 20 16n EEkk BBSS CCCC CCCC CCCK B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ
C = ಖಾತೆ ಸಂಖ್ಯೆ
K = ಪರಿಶೀಲನಾ ಅಂಕಿ
ಫರೋ ಐಲೆಂಡ್ಸ್‌[Note ೧] 18 14n FOkk CCCC CCCC CCCC CC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಫಿನ್‌ಲ್ಯಾಂಡ್ 18 14n FIkk BBBB BBCC CCCC CK B = ಬ್ಯಾಂಕ್‌ ಹಾಗೂ ಶಾಖೆ ಗುರುತಿಸುವ ಸಾಧನ
C = ಖಾತೆ ಸಂಖ್ಯೆ
K = ರಾಷ್ಟ್ರೀಯ ಪರಿಶೀಲನಾ ಅಂಕಿ
ಫ್ರಾನ್ಸ್ [Note ೨] 27 10n,11c,2n FRkk BBBB BGGG GGCC CCCC CCCC CKK B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
G = ಶಾಖೆ ಸಂಕೇತ (fr:code guichet)
C = ಖಾತೆ ಸಂಖ್ಯೆ
K = ರಾಷ್ಟ್ರೀಯ ಪರಿಶೀಲನಾ ಅಂಕಿಗಳು (fr:clé RIB).
ಜಾರ್ಜಿಯಾ 22 2c,16n GEkk BBCC CCCC CCCC CCCC CC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಜರ್ಮನಿ 22 18n DEkk BBBB BBBB CCCC CCCC CC B = ಬ್ಯಾಂಕ್‌ ಹಾಗೂ ಶಾಖೆ ಗುರುತಿಸುವ ಸಾಧನ (de:Bankleitzahl ಅಥವಾ ಬಿಎಲ್‌ಝಡ್‌)
C = ಖಾತೆ ಸಂಖ್ಯೆ
ಜಿಬ್ರಾಲ್ಟಾರ್ 23 4a,15c GIkk BBBB CCCC CCCC CCCC CCC B = ಬಿಐಸಿ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಗ್ರೀಸ್‌ 27 7n,16c GRkk BBBS SSSC CCCC CCCC CCCC CCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ
C = ಖಾತೆ ಸಂಖ್ಯೆ
ಗ್ರೀನ್ಲೆಂಡ್‌[Note ೧] 18 14n GLkk BBBB CCCC CCCC CC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಹಂಗೇರಿ 28 24n HUkk BBBS SSSS CCCC CCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಗುರುತಿಸುವ ಸಾಧನ
C = ಖಾತೆ ಸಂಖ್ಯೆ
ಐಸ್‌ಲೆಂಡ್ 26 22n ISkk BBBB SSCC CCCC XXXX XXXX XX B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ
C = ಖಾತೆ ಸಂಖ್ಯೆ
X = ಖಾತೆ ಹೊಂದಿದವರ ರಾಷ್ಟ್ರೀಯ ಗುರುತಿನ ಸಂಖ್ಯೆ.
ಐರ್ಲ್ಯಾಂಡ್ 22 4c,14n IEkk AAAA BBBB BBCC CCCC CC A = ಬಿಐಸಿ ಬ್ಯಾಂಕ್‌ ಸಂಕೇತ
B = ಬ್ಯಾಂಕ್‌/ಶಾಖೆ ಖಾತೆ ಸಂಖ್ಯೆ (ವಿಂಗಡಣ ಸಂಕೇತ)
C = ಖಾತೆ ಸಂಖ್ಯೆ
ಇಸ್ರೇಲ್‌ 23 19n ILkk BBBN NNCC CCCC CCCC CCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
N = ಶಾಖೆ ಸಂಖ್ಯೆ
C = ಖಾತೆ ಸಂಖ್ಯೆ 13 ಅಂಕಿಗಳು (ಸೊನ್ನೆಗಳೊಂದಿಗೆ ಪೂರ್ವಪ್ರತ್ಯಯ).
ಇಟಲಿ 27 1a,10n,12c ITkk KAAA AABB BBBC CCCC CCCC CCC K = ಪರಿಶೀಲನಾ ಅಕ್ಷರ (ಸಿಐಎನ್‌)
A = ರಾಷ್ಟ್ರೀಯ ಬ್ಯಾಂಕ್‌ ಸಂಕೇತ (it:Associazione bancaria italiana ಅಥವಾ ಕೊಡಿಸ್‌ ಎಬಿಐ )
B = ಶಾಖೆ ಸಂಖ್ಯೆ (it:Coordinate bancarie ಅಥವಾ ಸಿಎಬಿ - Codice d'Avviamento Bancario )
C = ಖಾತೆ ID
ಕಝಾಕ್‌ಸ್ಥಾನ್‌[] 20 3n,3c,10n[] KZkk BBBC CCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
2010ರ ನೂನ್‌ 11ರಂದು ಆರಂಭ[]
ಲಾಟ್ವಿಯ 21 4a,13c LVkk BBBB CCCC CCCC CCCC C B = ಬಿಐಸಿ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಲೆಬೆನಾನ್ 28 4n,20c LBkk BBBB AAAA AAAA AAAA AAAA AAAA B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
A = ಖಾತೆ ಸಂಖ್ಯೆ.
ಲೀಚ್‌ಟೆನ್‌ಸ್ಟೀನ್‌ 21 5n,12c LIkk BBBB BCCC CCCC CCCC C B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಲಿಥುವೇನಿಯಾ 20 16n LTkk BBBB BCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಲಕ್ಸೆಂಬರ್ಗ್ 20 3n,13c LUkk BBBC CCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಮೆಸಿಡೋನಿಯಾ 19 3n,10c,2n MKkk BBBC CCCC CCCC CKK k = ಐಬಿಎಎನ್‌ ಪರಿಶೀಲನಾ ಅಂಕಿಗಳು (ಎಂದಿಗೂ = "07")
B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
K = ರಾಷ್ಟ್ರೀಯ ಪರಿಶೀಲನಾ ಅಂಕಿಗಳು
ಮಾಲ್ಟಾ 31 4a,5n,18c MTkk BBBB SSSS SCCC CCCC CCCC CCCC CCC B = ಬಿಐಸಿ ಬ್ಯಾಂಕ್‌ ಸಂಕೇತ
S = ಶಾಖೆ ಗುರುತಿಸುವ ಸಾಧನ
C = ಖಾತೆ ಸಂಖ್ಯೆ
ಮೌರಿಟಾನಿಯಾ 27 23n MRkk BBBB BSSS SSCC CCCC CCC CKK B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
G = ಶಾಖೆ ಸಂಕೇತ (fr:code guichet)
C = ಖಾತೆ ಸಂಖ್ಯೆ
K = ರಾಷ್ಟ್ರೀಯ ಪರಿಶೀಲನಾ ಅಂಕಿಗಳು (fr:clé RIB)
2012ರ ಜನವರಿ 1ರಿಂದ ಆರಂಭಿಸುವ ಯೋಜನೆ.
ಮಾರಿಷಸ್ 30 4a,19n,3a MUkk BBBB BBSS CCCC CCCC CCCC CCCC CC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಗುರುತಿಸುವ ಸಾಧನ
C = ಖಾತೆ ಸಂಖ್ಯೆ
ಮೊನಾಕೊ 27 10n,11c,2n MCkk BBBB BGGG GGCC CCCC CCCC CKK B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
G = ಶಾಖೆ ಸಂಕೇತ (fr:code guichet)
C = ಖಾತೆ ಸಂಖ್ಯೆ
K = ರಾಷ್ಟ್ರೀಯ ಪರಿಶೀಲನಾ ಅಂಕಿಗಳು (fr:clé RIB).
ಮಾಂಟೆನಿಗ್ರೊ 22 18n MEkk BBBC CCCC CCCC CCCC KK k = ಐಬಿಎಎನ್‌ ಪರಿಶೀಲನಾ ಅಂಕಿ (ಎಂದಿಗೂ = "25")
B = ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
K = ಪರಿಶೀಲನಾ ಅಂಕಿ.
ನೆದರ್ಲೆಂಡ್ಸ್‌[Note ೩] 18 4a,10n NLkk BBBB CCCC CCCC CC B = ಬಿಐಸಿ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ನಾರ್ವೆ 15 11n NOkk BBBB CCCC CCK B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
K = modulo-11 ಪರಿಶೀಲನಾ ಅಂಕಿ
ಪೋಲೆಂಡ್ 28 24n PLkk BBBS SSSK CCCC CCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ
K = ರಾಷ್ಟ್ರೀಯ ಪರಿಶೀಲನಾ ಅಂಕಿಗಳು
C = ಖಾತೆ ಸಂಖ್ಯೆ,
ಪೊರ್ಚುಗಲ್ 25 21n PTkk BBBB SSSS CCCC CCCC CCCK K k = ಐಬಿಎಎನ್‌ ಪರಿಶೀಲನಾ ಅಂಕಿಗಳು (ಎಂದಿಗೂ = "50")
B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ, C = ಖಾತೆ ಸಂಖ್ಯೆ
K = ಬಿಬಿಎಎನ್‌ ಪರಿಶೀಲನಾ ಅಂಕಿಗಳು.
ರೊಮಾನಿಯ 24 4a,16c ROkk BBBB CCCC CCCC CCCC CCCC B = ಬಿಐಸಿ ಬ್ಯಾಂಕ್‌ ಸಂಕೇತ
C = ಶಾಖೆ ಸಂಕೇತ ಹಾಗೂ ಖಾತೆ ಸಂಖ್ಯೆ (ಬ್ಯಾಂಕ್‌ಗೆ ವಿಶಿಷ್ಠ ವಿಧಾನ)
ಸ್ಯಾನ್‌ ಮೆರಿನೊ 27 1a,10n,12c SMkk KAAA AABB BBBC CCCC CCCC CCC K = ಪರಿಶೀಲನಾ ಅಕ್ಷರ (it:CIN)
A = ರಾಷ್ಟ್ರೀಯ ಬ್ಯಾಂಕ್‌ ಸಂಕೇತ (it:Associazione bancaria italiana ಅಥವಾ ಕೊಡಸ್‌ ಎಬಿಐ )
B = ಶಾಖೆ ಸಂಖ್ಯೆ (it:Coordinate bancarie ಅಥವಾ ಸಿಎಬಿ - Codice d'Avviamento Bancario )
C = ಖಾತೆ ಗುರುತು
ಸೌದಿ ಅರಬಿಯಾ 24 2n,18c SAkk BBCC CCCC CCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ, ಅಗತ್ಯವಿದ್ದಲ್ಲಿ ಸೊನ್ನೆಗಳೊಂದಿಗೆ ಪೂರ್ವಪ್ರತ್ಯಯ ಮಾಡಬಹುದು.
ಸರ್ಬಿಯಾ 22 18n RSkk BBBC CCCC CCCC CCCC KK B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
K = ಖಾತೆ ಪರಿಶೀಲನಾ ಅಂಕಿಗಳು
ಸ್ಲೊವಾಕಿಯಾ 24 20n SKkk BBBB SSSS SSCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ವಿಂಗಡಣ ಸಂಕೇತ
C = ಖಾತೆ ಸಂಖ್ಯೆ
ಸ್ಲೊವೇನಿಯಾ 19 15n SIkk BBSS SCCC CCCC CKK k = ಐಬಿಎಎನ್‌ ಪರಿಶೀಲನಾ ಅಂಕಿಗಳು (ಎಂದಿಗೂ = "56")
B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ
C = ಖಾತೆ ಸಂಖ್ಯೆ
K = ರಾಷ್ಟ್ರೀಯ ಪರಿಶೀಲನಾ ಮೊತ್ತ
ಸ್ಪೇನ್‌ 24 20n ESkk BBBB GGGG KKCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
G=ಶಾಖೆ/ಕಾರ್ಯಾಲಯ ಸಂಖ್ಯೆ
K=ಪರಿಶೀಲನಾ ಅಂಕಿಗಳು
C = ಖಾತೆ ಸಂಖ್ಯೆ
ಸ್ವೀಡನ್‌‌ 24 20n SEkk BBBB CCCC CCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಸ್ವಿಟಜರ್ಲೆಂಡ್‌ 21 5n,12c CHkk BBBB BCCC CCCC CCCC C B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
C = ಖಾತೆ ಸಂಖ್ಯೆ
ಟುನಿಷಿಯಾ 24 20n TNkk BBSS SCCC CCCC CCCC CCCC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
S = ಶಾಖೆ ಸಂಕೇತ
C = ಖಾತೆ ಸಂಖ್ಯೆ
ತುರ್ಕಿ 26 5n,17c TRkk BBBB BRCC CCCC CCCC CCCC CC B = ರಾಷ್ಟ್ರೀಯ ಬ್ಯಾಂಕ್‌ ಸಂಕೇತ
R = ಮುಂದೆ ಬಳಕೆಗಾಗಿ ಕಾದಿರಿಸಲಾಗಿದೆ (ಸದ್ಯಕ್ಕೆ "0")
C = ಖಾತೆ ಸಂಖ್ಯೆ
ಯುನೈಟೆಡ್ ಕಿಂಗ್ಡಮ್‌ [Note ೪] 22 4a,14n GBkk BBBB SSSS SSCC CCCC CC B = ಬಿಐಸಿ ಬ್ಯಾಂಕ್‌ ಸಂಕೇತ
S = ಬ್ಯಾಂಕ್‌ ಹಾಗೂ ಶಾಖೆ ಸಂಕೇತ (ವಿಂಗಡಣ ಸಂಕೇತ)
C = ಖಾತೆ ಸಂಖ್ಯೆ

ಟಿಪ್ಪಣಿಗಳು

ಬದಲಾಯಿಸಿ
  1. ೧.೦ ೧.೧ ಡೆನ್ಮಾರ್ಕ್‌ನ ಅಂಗವಾಗಿ ಸ್ವಿಫ್ಟ್‌ನಲ್ಲಿ ನೋಂದಾಯಿಸಿಕೊಂಡಿದ್ದರೂ, ತನ್ನದೇ ಆದ ದೇಶದ ಸಂಕೇತ ಹೊಂದಿತ್ತು.
  2. ಫ್ರೆಂಚ್‌ ಗಯಾನಾ, ಗ್ವಾಡಿಲೂಪ್‌, ಮಾರ್ಟಿನಿಕ್‌ ಮತ್ತು ರಿಯುನಿಯನ್‌ ತಮ್ಮದೇ ಐಎಸ್‌ಒ ದೇಶದ ಸಂಕೇತ ಹೊಂದಿವೆ, ಆದರೆ ಐಬಿಎನ್‌ ವಿಚಾರಗಳಲ್ಲಿ ಇವುಗಳಿಗೆ 'FR' ಸಂಕೇತದಡಿ ನಮೂದಿಸಲಾಗಿವೆ. ಫ್ರೆಂಚ್ ಪಾಲಿನೆಷಿಯಾ (PF), ಫ್ರೆಂಚ್‌ ಸದರ್ನ್‌ ಟೆರಿಟರೀಸ್ (TF)‌, ಮೆಯೊಟ್‌ (YT), ನ್ಯೂ ಕ್ಯಲೆಡೊನಿಯಾ (NC), ಸೇಂಟ್‌ ಪಿಯರ್‌ ಎಟ್‌ ಮಿಕ್ವಿಲಾನ್‌ (PM) ಹಾಗೂ ವ್ಯಾಲಿಸ್‌ ಅಂಡ್‌ ಫ್ಯುಚುನಾ ಐಲೆಂಡ್ಸ್‌ (WF) ತಮ್ಮದೇ ಆದ ಐಎಸ್‌ಒ ದೇಶದ ಸಂಕೇತ ಹೊಂದಿವೆ. ಆದರೆ ಐಬಿಎಎನ್‌ ಸಂಬಂಧಿತವಾಗಿ, ಅವು FR ಅಥವಾ ವಿಶಿಷ್ಟ ದೇಶದ ಸಂಖ್ಯೆ ಹೊಂದಿರುತ್ತವೆ.
  3. ಇದು ನೆದರ್ಲೆಂಡ್ಸ್‌ ಆಂಟಿಲ್ಸ್‌ ಅಥವಾ ಅರುಬಾಗೆ ಇದು ಅನ್ವಯಿಸುವುದಿಲ್ಲ.
  4. ಗ್ರೇಟ್‌ ಬ್ರಿಟನ್‌, ಐಲ್ ಆಫ್‌ ಮ್ಯಾನ್‌, ಉತ್ತರ ಐರ್ಲೆಂಡ್‌ ಹಾಗು(ದ್ವೀಪ ಕ್ಷೇತ್ರದ) ಬೇಲಿವಿಕ್ಸ್‌ ಆಫ್‌ ಗುರ್ನಸಿ ಹಾಗೂ ಜರ್ಸಿ ಈ ವ್ಯವಸ್ಥೆಯನ್ನು ಬಳಸುತ್ತವೆ. ಸಾಗರದಾಚೆಗಿನ ಬ್ರಿಟಿಷ್‌ ಪ್ರಾಂತ್ಯಗಳಲ್ಲಿ (ಬ್ರಿಟಿಷ್‌ ಒವರ್ಸೀಸ್‌ ಟೆರಿಟರೀಸ್) ತಮ್ಮದೇ ಆದ ವ್ಯವಸ್ಥೆಗಳಿವೆ.

ಗಣನೆಗಳು

ಬದಲಾಯಿಸಿ

ಐಬಿಎಎನ್‌ ಊರ್ಜಿತಗೊಳಿಸುವಿಕೆ

ಬದಲಾಯಿಸಿ

ಐಬಿಎಎನ್‌ ಊರ್ಜಿತಗೊಳಿಸುವಿಕೆಯ ಆಧಾರವೇನೆಂದರೆ, ಐಬಿಎಎನ್‌ನ್ನು ಸಂಖ್ಯೆಯಾಗಿ ಪರಿವರ್ತಿಸಿ, ನಂತರ ಐಎಸ್‌ಒ-7064ರಲ್ಲಿ ವಿವರಿಸಿದಂತೆ ಮೂಲಭೂತ ಎಮ್‌ಒಡಿ-97 ಗಣನೆ ಮಾಡುವುದು. ಐಬಿಎನ್‌ ಸಿಂಧುವಾಗಿದ್ದಲ್ಲಿ, ದೊರೆತ ಬಾಕಿ ಸಂಖ್ಯೆ 1ಕ್ಕೆ ಸಮನಾಗಿರುತ್ತದೆ. ಐಬಿಎಎನ್‌ ಊರ್ಜಿತಗೊಳಿಸುವಿಕೆಯ ವಿಧಾನ ಹೀಗಿದೆ:

  1. ಆ ದೇಶದ ನಿಯಮಗಳಂತೆ, ಐಬಿಎಎನ್‌ನ ಒಟ್ಟು‌ ಅಂಕಿಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದಲ್ಲಿ, ಐಬಿಎಎನ್‌ ಅಸಿಂಧುವಾಗಿರುವುದು.
  2. ಮೊದಲ ನಾಲ್ಕು ಅಕ್ಷರ-ಅಂಕಿಗಳನ್ನು ಆ ಸರಣಿಯ ಕೊನೆಗೆ ಸರಿಸಿ.
  3. ಸರಣಿಯ ಪ್ರತಿಯೊಂದು ಅಕ್ಷರದ ಸ್ಥಳದಲ್ಲಿ ಎರಡು ಅಂಕಿಗಳನ್ನು ಸೇರಿಸಿ, ಸರಣಿಯನ್ನು ಹಿಗ್ಗಿಸಿ. ಉದಾಹರಣೆಗೆ, A=10, B=11, ..., Z=35.
  4. ಈ ಸರಣಿಯನ್ನು ದಶಮಾಂಶದ ಸಂಖ್ಯೆ ಎಂದು ವ್ಯಾಖ್ಯಾನಿಸಿ, 97ರಿಂದ ಆ ಸಂಖ್ಯೆಯನ್ನು ಭಾಗಿಸಿದಾಗ ದೊರೆತ ಬಾಕಿಯನ್ನು ಗಣಿಸಿ.

ಬಾಕಿಯು 1 ಆಗಿದ್ದಲ್ಲಿ, ಪರಿಶೀಲನಾ ಅಂಕಿಗಳ ಪರೀಕ್ಷೆಯು ಸಫಲವಾಗಿ, ಐಬಿಎಎನ್‌ ಸಂಖ್ಯೆಯು ಸಿಂಧುವಾಗಿದೆ ಎನ್ನಬಹುದು. ಉದಾಹರಣೆಗೆ, (ಯುನೈಟೆಡ್‌ ಕಿಂಗ್ಡಮ್‌ನಲ್ಲಿರುವ ಯಾವುದೋ ಒಂದು ಕಾಲ್ಪನಿಕ ಬ್ಯಾಂಕ್‌, ವಿಂಗಡಣ ಸಂಕೇತ 12-34-56, ಖಾತೆ 98765432):

ಐಬಿಎಎನ್‌: GB82 WEST 1234 5698 7654 32
ಪುನಃ ಜೋಡಿಸಿದಾಗ:  W E S T12345698765432 G B82
ಮಾಡ್ಯುಲಸ್‌: 3214282912345698765432161182 mod 97 = 1

ಐಬಿಎಎನ್‌ ಪರಿಶೀಲನಾ ಅಂಕಿಗಳನ್ನು ಸೃಷ್ಟಿಸುವ ವಿಧಾನ

ಬದಲಾಯಿಸಿ

ಯುರೋಪಿಯನ್‌ ಬ್ಯಾಂಕಿಂಗ್‌ ಪ್ರಮಾಣಕ ಸಮಿತಿಯ (ಇಸಿಬಿಎಸ್‌) ಪ್ರಕಾರ, 'ಐಬಿಎನ್‌ ಸಂಖ್ಯೆ ಸೃಷ್ಟಿಯು ಈ ಖಾತೆಯ ಸೇವೆ ಒದಗಿಸುವ ಬ್ಯಾಂಕ್‌ ಮತ್ತು ಅದರ ಶಾಖೆಯ ವಿಶಿಷ್ಟ ಹೊಣೆಯಾಗಿದೆ.' [] 02ರಿಂದ 98ರ ತನಕದ ಶ್ರೇಣಿಯಲ್ಲಿ ಪರಿಶೀಲನಾ ಅಂಕಗಳನ್ನು ಸೃಷ್ಟಿಸಲು ಇಸಿಬಿಎಸ್‌ ಒಂದು ವಿಧಾನ ಒದಗಿಸುತ್ತದೆ. ಸೈದ್ಧಾಂತಿಕವಾಗಿ, 00ಯಿಂದ 96, 01ರಿಂದ 97 ಹಾಗೂ 03ರಿಂದ 99ರ ತನಕ ಪರಿಶೀಲನಾ ಅಂಕಗಳನ್ನು ಸೃಷ್ಟಿಸುವುದು ಸುಲಭ. ಆದರೆ ಈ ಶ್ರೇಣಿಗಳನ್ನು ಬಳಸಲು ಅನುಮತಿಯಿದೆಯೇ ಎಂಬುದರ ಕುರಿತು ಪ್ರಮಾಣಕಗಳು/ನಿಯಮಾವಳಿಗಳು ಏನನ್ನು ಸ್ಪಷ್ಟಗೊಳಿಸಿಲ್ಲ. ರೂಢಿಯಲ್ಲಿರುವ ಗಣನೆಯು ಹೀಗಿದೆ:

  1. ಆಯಾ ದೇಶದ ಪ್ರಕಾರ, ಐಬಿಎಎನ್‌ನ ಅಕ್ಷರ-ಅಂಕಿಗಳ ಒಟ್ಟು ಸಂಖ್ಯೆಗಳು ಸರಿಯಿದೆಯೇ ಪರಿಶೀಲಿಸಿ. ಸರಿಯಿಲ್ಲದಿದ್ದಲ್ಲಿ, ಐಬಿಎಎನ್‌ ಅಸಿಂಧುವಾಗಿರುವುದು.
  2. ಎರಡೂ ಪರಿಶೀಲನಾ ಅಂಕಗಳ ಸ್ಥಳದಲ್ಲಿ 00 ಸೇರಿಸಿ. (ಉದಾಹರಣೆಗೆ, ಯುಕೆಗಾಗಿ GB00).
  3. ಮೊದಲ ನಾಲ್ಕು ಅಕ್ಷರಗಳನ್ನು ಸರಣಿಯ ಅಂತ್ಯಕ್ಕೆ ಸರಿಸಿ.
  4. ಸರಣಿಯಲ್ಲಿರುವ ಅಕ್ಷರಗಳ ಸ್ಥಳದಲ್ಲಿ ಅಂಕಿಗಳನ್ನು ನಮೂದಿಸಿ. ಅಗತ್ಯವಿದ್ದಲ್ಲಿ, A ಅಥವಾ a=10, B ಅಥವಾ b=11 and Z ಅಥವಾ z=35 ಎಂದಾಗುವಂತೆ ಸರಣಿಯನ್ನು ಹಿಗ್ಗಿಸಬಹುದಾಗಿದೆ. ಇದೇ ರೀತಿಯಲ್ಲಿ ಪ್ರತಿಯೊಂದು ಅಕ್ಷರದ ಸ್ಥಳದಲ್ಲಿ ಎರಡು ಅಂಕಿಗಳನ್ನು ಸೇರಿಸಬಹುದು.
  5. ಪೂರ್ವಪ್ರತ್ಯಯದ ಸೊನ್ನೆಗಳನ್ನು ಕಡೆಗಣಿಸಿ, ಸರಣಿಯನ್ನು ಅಂಕಿರೂಪಕ್ಕೆ ಬದಲಿಸಿ.
  6. ಈ ಹೊಸ ಸಂಖ್ಯೆಯ Mod-97 ಗಣಿಸಿ.
  7. ಇದರಲ್ಲಿ ದೊರೆಯುವ ಶೇಷವನ್ನು 98ರಿಂದ ಕಳೆಯಿರಿ. ಅಗತ್ಯವಿದ್ದಲ್ಲಿ, ಈ ಸಂಖ್ಯೆಗೆ '0'ಯನ್ನು ಪೂರ್ವಪ್ರತ್ಯಯದ ರೂಪದಲ್ಲಿ ಸೇರಿಸಿ.

ದೊಡ್ಡ ಸಂಖ್ಯೆಯ(ಪರಿಮಾಣ) ಮಾಡ್ಯುಲಸ್‌ ಗಣಿಸುವ ವಿಧಾನ:

ಬದಲಾಯಿಸಿ

ಇಂತಹ ಗಣನೆಗಳನ್ನು ಆಧುನಿಕ ಪಿಸಿಯಲ್ಲಿ(ವೈಯಕ್ತಿಕ ಕಂಪ್ಯುಟರ್ ನಲ್ಲಿ) ನೇರವಾಗಿ ಮಾಡುವುದು ಅಪ್ರಾಯೋಗಿಕ ಎಂದು ಹೇಳಲಾಗಿದೆ. ಆದ್ದರಿಂದ, ಯುಎನ್‌ ಸಿಇಎಫ್‌ಎಸಿಟಿ ಟಿಬಿಜಿ5 ಪ್ರಕಟಿಸಿದ ಜಾವಾಸ್ಕ್ರಿಪ್ಟ್‌ ತಂತ್ರಾಂಶ Archived 3 December 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ವು ಹಂತ-ಹಂತದ ಯತ್ನದ ಮೂಲಕ ಗಣನೆ ಮಾಡುತ್ತವೆ. ಮಾಡ್ಯುಲರ್‌ ಅಂಕಗಣಿತ ಅನನ್ಯತೆಯ ಗುರುತುಗಳ ಬಳಸುವ ಮೂಲಕ ಇವನ್ನು ಗಣಿಸುತ್ತವೆ.

 
ಹಾಗೂ
 

ಐಬಿಎಎನ್‌ನಂತಹ ದೊಡ್ಡ ಸಂಖ್ಯೆ   ಯ ಮೇಲೆ ಮಾಡ್ಯುಲಸ್‌ ಗಣನೆಯನ್ನು ಈ ರೀತಿ ಪುನಃ ಗಣಿಸಬಹುದಾಗಿದೆ.

 ,

ಇದರಲ್ಲಿ   ಎಂಬುದು  ನ ಅಂಕಿಗಳಾಗಿವೆ (ಅಂದರೆ, 0 ಮತ್ತು 9ರ ನಡುವಿನ ಅಂಕಿ ಮೌಲ್ಯಗಳು)

 ,

ಹಾಗೂ   ಎಂಬುದು D ಗೆ ಯಾವುದೇ ಅವಲಂಬನೆಯಿಲ್ಲದ ಅಂಕಿಗಳ ನಿಶ್ಚಿತ ಸರಣಿಯಾಗಿದೆ.

 .

ಪುನರಾವೃತ್ತಿಯ ಸಂಬಂಧವನ್ನು ಬಳಸುವ ಮೂಲಕ   ಸರಣಿಯನ್ನು ಸುಲಭವಾಗಿ ಸೃಷ್ಟಿಸಬಹುದು.

 .

ಈ ವಿಧಾನವನ್ನು ಅನುಸರಿಸಿದಲ್ಲಿ ಈ ಗಣನೆಯು ಬಹು ಉಪಯುಕ್ತವಾಗುವುದು: ದೊಡ್ಡ ಸಂಖ್ಯೆ   ಯನ್ನು ಎಎಸ್‌ಸಿಐಐ ಸರಣಿಯ ರೂಪದಲ್ಲಿ ನಮೂದಿಸಿ, ದ್ವಿಮಾನ ಸಂಖ್ಯೆಯ ಬದಲಿಗೆ   ರೂಪದಲ್ಲಿ ಅಂಶಗಳನ್ನು ಹೊರಸೆಳೆಯಬಹುದು. ಪ್ರಾಯೋಗಿಕವಾಗಿ, ಸ್ವತಃ   30 ಅಂಕಿಗಳಿಗಿಂತಲೂ ಹೆಚ್ಚು ಉದ್ದವಿದ್ದಲ್ಲಿ, ಈ ಗಣನೆಯನ್ನು 16-ಬಿಟ್‌ ಅಂಕಿ ಅಂಕಗಣಿತವನ್ನು ಬಳಸಿ ನಡೆಸಬಹುದಾಗಿದೆ.

ಮಾಡ್ಯುಲಸ್‌ ಗಣನೆಯ ಉದಾಹರಣೆಗಳು

ಬದಲಾಯಿಸಿ

ಈ ಉದಾಹರಣೆಯಲ್ಲಿ, ಮಾಡ್ಯುಲರ್ ಅಂಕಗಣಿತ ಬಳಸಿ (3214282912345698765432161182 mod 97 ) ಗಣನೆಯನ್ನು ವಿಸ್ತೃತವಾಗಿ ವಿವರಿಸಲಾಗಿದೆ. ಈ ಗಣನೆಯ ಲಬ್ಧವು 1 ಆಗಿದ್ದಲ್ಲಿ, ಐಬಿಎಎನ್‌ ಪರಿಶೀಲನಾ ಅಂಕಿ ಪರೀಕ್ಷೆ ಸಫಲವಾದಂತೆ. ಸ್ಪಷ್ಟನೆಗಾಗಿ, ಐಬಿಎಎನ್‌ ಅಂಕಿಗಳನ್ನು ಮೇಲೆ ಬಣ್ಣದ ಅಕ್ಷರದಲ್ಲಿ ಸೂಚಿಸಲಾಗಿದೆ. ಕೆಳಗಿನ ಪಟ್ಟಿಯಲ್ಲಿ

  • i ಅಂಕಣದಲ್ಲಿರುವುದು ಬಲದಿಂದ ಎಡಕ್ಕೆ ಎಣಿಸಲಾದ ಅಂಕಿಗಳು.
  • di ಅಂಕಣದಲ್ಲಿರುವುದು ಈ ಅಂಕಿಗಳ ಮೌಲ್ಯಗಳು.
  • ai ಅಂಕಣದಲ್ಲಿರುವುದು ಹಂತಹಂತವಾದ ಮೌಲ್ಯಗಳು. ಇವನ್ನು ai = (10 x ai-1 ) mod 97 ಇದರಂತೆ ಗಣಿಸಲಾಗಿದೆ. ಇದರಲ್ಲಿ a1 = 1.
  • ಅಂಕಣ di × ai ಅದೇ ವಿವರಿಸುವಂತಿದೆ.
  • ai ವ್ಯಾಖ್ಯಾನ ಹಾಗೂ ai ಗಣನೆ ಇವರಡೂ ಅಂಕಣಗಳು ai ಹೇಗೆ ಗಣಿಸಲಾಗುತ್ತದೆ ಎಂಬುದನ್ನು ವಿವರಿಸುತ್ತವೆ.

ai ಮೌಲ್ಯಗಳು ಪರಿಶೀಲಿಸಲಾದ ಐಬಿಎಎನ್‌ನ್ನು ಅವಲಂಬಿಸಿರುವುದಿಲ್ಲ, ಅರ್ಥಾತ್‌ ಅವು ನಿರ್ದಿಷ್ಟ ಉದ್ದನೆಯ ಐಬಿಎನ್‌ಗಳ ಮೇಲೆ ನಡೆಸಲಾದ ಪರಿಶೀಲನಾ ಅಂಕಿ ಪರೀಕ್ಷೆಗಳಿಗಾಗಿ ಸರಣಿ ರಚಿಸುತ್ತವೆ. ಒಂದು ಪಂಕ್ತಿಯಿಂದ ಇನ್ನೊಂದಕ್ಕೆ ai ರ ಮೌಲ್ಯಗಳು ವರ್ಧಿಸುವುದನ್ನು ತೋರಿಸಲು 27 ಮೌಲ್ಯವನ್ನು ಎದ್ದುಕಾಣುವಂತೆ ಸೂಚಿಸಲಾಗಿದೆ.

i di ai di × ai aiರ ವ್ಯಾಖ್ಯಾನ aiರ ಗಣನೆ
1 2 1 2 a1 = 1 (ವ್ಯಾಖ್ಯಾನದ ಪ್ರಕಾರ) a1 = 1
2 8 10 80 a2 = 10 mod 97 a2 = (1×10) mod 97
3 1 3 3 a3 = 100 mod 97 a3 = (10×10) mod 97
4 1 30 30 a4 = 1000 mod 97 a4 = (3×10) mod 97
5 6 9 54 a5 = 10,000 mod 97 a5 = (30 ×10) mod 97
6 1 90 90 a6 = 100,000 mod 97 a6 = (9×10) mod 97
7 2 27 54 a7 = 1,000,000 mod 97 a7 = (90×10) mod 97
8 3 76 228 a8 = 10,000,000 mod 97 a8 = (27 ×10) mod 97
... ಪಂಕ್ತಿಗಳನ್ನು ಕೈಬಿಡಲಾಗಿದೆ ...
27 2 31 62 a27 = 1026 mod 97 a27 = (71×10) mod 97
28 3 19 57 a28 = 1027 mod 97 a28 = (31×10) mod 97
ಮೊತ್ತ (di × ai) 4560 colspan="2"
4560 mod 97 = 1 ಮೌಲ್ಯ 1 ಲಭ್ಯವಾದಲ್ಲಿ ಈ ಐಬಿಎಎನ್‌ ಸಿಂಧುವಾಗಿದೆಯೆಂದರ್ಥ.

di × ai ಅಂಕಣದಲ್ಲಿರುವ ಮೌಲ್ಯಗಳ ಮೊತ್ತದ Mod-97 ಮೊತ್ತವು 1 ಆಗಿದೆಯೆಂದು ಪರಿಶೀಲಿಸುವುದರೊಂದಿಗೆ ಕೊನೆಯ ಎರಡು ಪಂಕ್ತಿಗಳು ಗಣನೆಯನ್ನು ಸಂಪೂರ್ಣಗೊಳಿಸುತ್ತವೆ. ಈ ಗಣನೆಯಲ್ಲಿ 4560 ಅತಿದೊಡ್ಡ ಸಂಖ್ಯೆಯಾಗಿದ್ದು, 16-ಬಿಟ್‌ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳಬಹುದು ಎಂಬುದನ್ನು ಗಮನಿಸಿ.

ಟಿಪ್ಪಣಿಗಳು ಮತ್ತು ಆಕರಗಳು

ಬದಲಾಯಿಸಿ
  1. "ISO 13616-1:2007 Financial services — International bank account number (IBAN) — Part 1: Structure of the IBAN". International Organization for Standardization. Retrieved 31 ಜನವರಿ 2010.
  2. "ISO 13616-2:2007 Financial services - International bank account number (IBAN) -- Part 2: Role and responsibilities of the Registration Authority". International Organization for Standardization. Retrieved 31 ಜನವರಿ 2010.
  3. "ISO13616 IBAN Registry". SWIFT. Archived from the original on 31 ಡಿಸೆಂಬರ್ 2010. Retrieved 18 ಜನವರಿ 2010.
  4. ೪.೦ ೪.೧ "IBAN: International Bank Account Number" (PDF). EBS204 V3.2. European Committee for Banking Standards. ಆಗಸ್ಟ್ 2003. Archived from the original (PDF) on 15 ಡಿಸೆಂಬರ್ 2017. Retrieved 1 ಆಗಸ್ಟ್ 2010.
  5. EU Regulation 924/2009 "REGULATION (EC) No 924/2009 OF THE EUROPEAN PARLIAMENT AND OF THE COUNCIL of 16 September 2009 on cross-border payments in the Community and repealing Regulation (EC) No 2560/2001". Commission of the European Union. Retrieved 18 ಜನವರಿ 2010. {{cite web}}: Check |url= value (help)
  6. "ISO/IEC 7064:2003 - Information technology - Security techniques - Check character systems". International Organization for Standardization. Retrieved 31 ಜನವರಿ 2010.
  7. "IBAN registry - This registry provides detailed information about all ISO 13616-compliant national IBAN formats - Release 19, August 2010" (PDF). SWIFT. Archived from the original (PDF) on 2 ಜನವರಿ 2010. Retrieved 9 ಆಗಸ್ಟ್ 2010.
  8. "IBAN - International Bank Account Number". The National Bank of Kazakhstan. 2009. Archived from the original on 12 ಜುಲೈ 2014. Retrieved 18 ಮಾರ್ಚ್ 2010.
  9. ೯.೦ ೯.೧ "News and Press Releases". VTB Bank. 11 ಜನವರಿ 2010. Retrieved 18 ಮಾರ್ಚ್ 2010.


ಇವನ್ನೂ ಗಮನಿಸಿ

ಬದಲಾಯಿಸಿ
  • ಬ್ಯಾಂಕ್‌ ಖಾತೆ
  • ಬ್ಯಾಂಕ್ ಕಾರ್ಡ್ ಸಂಖ್ಯೆ
  • ಬ್ಯಾಂಕ್‌ ನಿಯಂತ್ರಣ
  • ISO 9000
  • ಏಕೈಕ ಯುರೋ ಪಾವತಿ ಪ್ರದೇಶ

ಬಾಹ್ಯ ಕೊಂಡಿಗಳು

ಬದಲಾಯಿಸಿ