ಹೂವಿನಹಿಪ್ಪರಗಿ
ಹೂವಿನ ಹಿಪ್ಪರಗಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ. ಗ್ರಾಮವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 55 ಕಿ. ಮಿ. ದೂರ ಇದೆ.
ಹೂವಿನಹಿಪ್ಪರಗಿ
ಹೂವಿನ ಹಿಪ್ಪರಗಿ | |
---|---|
village | |
Population (೨೦೧೨) | |
• Total | ೧೫೦೦೦ |
ಚರಿತ್ರೆ
ಬದಲಾಯಿಸಿಗ್ರಾಮದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಸಿಂಡಿಕೇಟ್ ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.
ಹೂವಿನ ಹಿಪ್ಪರಗಿಯು ಜಿಲ್ಲಾ ಕೇಂದ್ರದಿಂದ ೫೪ ಕಿ.ಮೀ. ದೂರದಲ್ಲಿದೆ. ಹಿಂದೆ ಇದು ರಾಷ್ಟ್ರಕೂಟರ ಕಾಲದ ಅಗ್ರಹಾರವಾಗಿತ್ತು. ರಾಷ್ಟ್ರಕೂಟರ ಅಮೋಘವರ್ಷನ ಕ್ರಿ.ಶ. ೮೬೨ರ ಶಾಸನದಲ್ಲಿ ಈ ಊರಿನ ಉಲ್ಲೇಖವಿದೆ.
ಊರಿನ ಅಗಸಿಯ ಹತ್ತಿರವಿರುವ ಕಲ್ಮೇಶ್ವರ ದೇವಾಲಯವು ಎತ್ತರವಾದ ಅಧಿಷ್ಠಾನ ಹೊಂದಿದ್ದು, ಗರ್ಭಗೃಹ, ನವರಂಗ ಹಾಗೂ ವೃತ್ತಾಕಾರದ ಕಿರುಸ್ತಂಭಗಳಿರುವ ಕಿರಿದಾದ ಮುಖಮಂಟಪಗಳಿವೆ. ಸುಂದರ ವೈಷ್ಣವ ದ್ವಾರಪಾಲಕರಿರುವ ಬಾಗಿಲುವಾಡದಲ್ಲಿ ಗಜಲಕ್ಷ್ಮೀ ಲಲಾಟ ಬಿಂಬವಿದೆ.
ಭೌಗೋಳಿಕ
ಬದಲಾಯಿಸಿಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನ
ಬದಲಾಯಿಸಿ- ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆ - ೩೫°C-೪೨°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
ಜನಸಂಖ್ಯೆ
ಬದಲಾಯಿಸಿಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 6,631 ಇದೆ. ಅದರಲ್ಲಿ 3431 ಪುರುಷರು ಮತ್ತು 3200 ಮಹಿಳೆಯರು ಇದ್ದಾರೆ.
ಧರ್ಮಗಳು
ಬದಲಾಯಿಸಿಭಾಷೆಗಳು
ಬದಲಾಯಿಸಿಗ್ರಾಮದ ಪ್ರಮುಖ ಭಾಷೆ ಕನ್ನಡ. ಕನ್ನಡ ಭಾಷೆ ಒಂದನ್ನೇ ಮಾತನಾಡುತ್ತಾರೆ .
ದೇವಾಲಯಗಳು
ಬದಲಾಯಿಸಿಶ್ರೀ ಗುರು ಪರಮಾನಂದ ದೇವಸ್ಥಾನ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಹೂವಿನ ಹಿಪ್ಪರಗಿಯು ಜಿಲ್ಲಾ ಕೇಂದ್ರದಿಂದ ೫೪ ಕಿ.ಮೀ. ದೂರದಲ್ಲಿದೆ. ಹಿಂದೆ ಇದು ರಾಷ್ಟ್ರಕೂಟರ ಕಾಲದ ಅಗ್ರಹಾರವಾಗಿತ್ತು. ರಾಷ್ಟ್ರಕೂಟರ ಅಮೋಘವರ್ಷನ ಕ್ರಿ.ಶ. ೮೬೨ರ ಶಾಸನದಲ್ಲಿ ಈ ಊರಿನ ಉಲ್ಲೇಖವಿದೆ.
ಊರಿನ ಅಗಸಿಯ ಹತ್ತಿರವಿರುವ ಕಲ್ಮೇಶ್ವರ ದೇವಾಲಯವು ಎತ್ತರವಾದ ಅಧಿಷ್ಠಾನ ಹೊಂದಿದ್ದು, ಗರ್ಭಗೃಹ, ನವರಂಗ ಹಾಗೂ ವೃತ್ತಾಕಾರದ ಕಿರುಸ್ತಂಭಗಳಿರುವ ಕಿರಿದಾದ ಮುಖಮಂಟಪಗಳಿವೆ. ಸುಂದರ ವೈಷ್ಣವ ದ್ವಾರಪಾಲಕರಿರುವ ಬಾಗಿಲುವಾಡದಲ್ಲಿ ಗಜಲಕ್ಷ್ಮೀ ಲಲಾಟ ಬಿಂಬವಿದೆ.
ಸಾಂಸ್ಕೃತಿಕ
ಬದಲಾಯಿಸಿಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿ
ಬದಲಾಯಿಸಿಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಮಸೀದಿಗಳು
ಬದಲಾಯಿಸಿಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
ಬದಲಾಯಿಸಿಗ್ರಾಮದ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಹಬ್ಬಗಳು
ಬದಲಾಯಿಸಿಪ್ರತಿವರ್ಷ ಶ್ರೀ ಪರಮಾನಂದ ಜಾತ್ರಾ ಮಹೋತ್ಸ ವ, ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಉದ್ಯೋಗ
ಬದಲಾಯಿಸಿಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆಗಳು
ಬದಲಾಯಿಸಿಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಾಕ್ಷರತೆ
ಬದಲಾಯಿಸಿಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
ಜನಪ್ರತಿನಿಧಿಗಳ ವಿವರ
ಬದಲಾಯಿಸಿವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತ | ಪಕ್ಷ | ಮತಗಳು | ಉಪಾಂತ ವಿಜೇತ | ಪಕ್ಷ | ಮತಗಳು |
ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2018 | ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಸೋಮನಗೌಡ ಪಾಟೀಲ | ಬಿ.ಜೆ.ಪಿ | 48245 | ರಾಜುಗೌಡ ಪಾಟೀಲ | ಜೆ.ಡಿ.ಎಸ್. | 44892 |
2013 | ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಎ.ಎಸ್.ಪಾಟೀಲ(ನಡಹಳ್ಳಿ) | ಕಾಂಗ್ರೇಸ್ | 36231 | ಸೋಮನಗೌಡ ಪಾಟೀಲ | ಬಿ.ಜೆ.ಪಿ | 28135 |
2008 | ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಎ.ಎಸ್.ಪಾಟೀಲ(ನಡಹಳ್ಳಿ) | ಕಾಂಗ್ರೇಸ್ | 54879 | ಬಸನಗೌಡ ಪಾಟೀಲ(ಯತ್ನಾಳ) | ಬಿ.ಜೆ.ಪಿ | 23986 |
2004 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಶಿವಪುತ್ರಪ್ಪ ದೇಸಾಯಿ | ಬಿ.ಜೆ.ಪಿ | 39224 | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 32927 |
1999 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 46088 | ಶಿವಪುತ್ರಪ್ಪ ದೇಸಾಯಿ | ಜೆ.ಡಿ.ಯು | 28492 |
1994 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಶಿವಪುತ್ರಪ್ಪ ದೇಸಾಯಿ | ಜೆ.ಡಿ. | 35849 | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 23422 |
1989 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 36588 | ಶಿವಪುತ್ರಪ್ಪ ದೇಸಾಯಿ | ಜೆ.ಡಿ. | 21193 |
1985 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಶಿವಪುತ್ರಪ್ಪ ದೇಸಾಯಿ | ಜೆ.ಎನ್.ಪಿ | 31748 | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 27949 |
1983 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಸಾಸನೂರ) | ಕಾಂಗ್ರೇಸ್ | 30320 | ಬಸನಗೌಡ ಲಿಂಗನಗೌಡ ಪಾಟೀಲ | ಜೆ.ಎನ್.ಪಿ | 17872 |
1978 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಸಾಸನೂರ) | ಜೆ.ಎನ್.ಪಿ | 26814 | ಕುಮಾರಗೌಡ ಪಾಟೀಲ | ಕಾಂಗ್ರೇಸ್(ಐ) | 22531 |
ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಕೆ.ಡಿ.ಪಾಟೀಲ(ಉಕ್ಕಲಿ) | ಎನ್.ಸಿ.ಓ. | 18331 | ಎಲ್.ಆರ್.ನಾಯಕ | ಕಾಂಗ್ರೇಸ್ | 12855 |
1967 | ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಗದಿಗೆಪ್ಪಗೌಡ ಪಾಟೀಲ | ಕಾಂಗ್ರೇಸ್ | 15189 | ಹೆಚ್.ಕೆ.ಮಾರ್ತಂಡಪ್ಪ | ಎಸ್.ಡಬ್ಲೂ.ಎ | 7050 |
1962 | ತಾಳಿಕೋಟ ವಿಧಾನಸಭಾ ಕ್ಷೇತ್ರ | ಜಿ.ಎನ್.ಪಾಟೀಲ | ಕಾಂಗ್ರೇಸ್ | ಅವಿರೋದ ಆಯ್ಕೆ | |||
1957 | ತಾಳಿಕೋಟ ವಿಧಾನಸಭಾ ಕ್ಷೇತ್ರ | ಕುಮಾರಗೌಡ ಪಾಟೀಲ | ಪಕ್ಷೇತರ | 15200 | ಶರಣಯ್ಯ ವಸ್ತದ | ಕಾಂಗ್ರೇಸ್ | 12804 |
ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಬಾಂಬೆ ರಾಜ್ಯ | ||||||
1951 | ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಶಂಕರಗೌಡ ಪಾಟೀಲ | ಕಾಂಗ್ರೇಸ್ | 17752 | ಸಾವಳಗೆಪ್ಪ ನಂದಿ | ಕೆ.ಎಂ.ಪಿ.ಪಿ | 5507 |
ರಾಜ್ಯ ಹೆದ್ದಾರಿ
ಬದಲಾಯಿಸಿರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ.
ರಾಜ್ಯ ಹೆದ್ದಾರಿ - 61 => ಮನಗೊಳಿ - ಬಸವನ ಬಾಗೇವಾಡಿ - ಹೂವಿನ ಹಿಪ್ಪರಗಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ - ನೀರಮಾನ್ವಿ - ಬಾಚಿಹಾಳ
ಸರಕಾರಿ ವಾಹನ ನಿಲ್ದಾಣ
ಬದಲಾಯಿಸಿಗ್ರಾಮದಲ್ಲಿ ಸರಕಾರಿ ವಾಹನ ನಿಲ್ದಾಣವಿದೆ.