ಬಿನ್ನಿ ಬನ್ಸಾಲ್

(ಸದಸ್ಯ:Boss yathin/ನನ್ನ ಪ್ರಯೋಗಪುಟ ಇಂದ ಪುನರ್ನಿರ್ದೇಶಿತ)
ಬಿನ್ನಿ ಬನ್ಸಾಲ್
ರಾಷ್ಟ್ರೀಯತೆಇಂಡಿಯನ್
ಶಿಕ್ಷಣ ಸಂಸ್ಥೆಐಐಟಿ ಡೆಲ್ಹಿ
ವೃತ್ತಿ(ಗಳು)ಮಾಜಿ ಚೇರಂ ಮತ್ತು ಸಿಇಒ, ಫ್ಲಿಪ್ಕಾರ್ಟ್
ಗಮನಾರ್ಹ ಕೆಲಸಗಳುಫ್ಲಿಪ್‌ಕಾರ್ಟ್‌ನ ಸಹ-ಸ್ಥಾಪಕ []
ಸಂಗಾತಿತ್ರಿಶಾ ಬನ್ಸಾಲ್
ಜಾಲತಾಣFlipkart.com

ಬಿನ್ನಿ ಬನ್ಸಾಲ್ (ಜನನ ೧೯೮೨/೧೯೮೩) ಒಬ್ಬ ಭಾರತೀಯ ಬಿಲಿಯನೇರ್ ಇಂಟರ್ನೆಟ್ ಉದ್ಯಮಿ.[] ೨೦೦೭ ರಲ್ಲಿ ಅವರು ಸಚಿನ್ ಬನ್ಸಾಲ್‍ರೊಂದಿಗೆ ಇ-ಕಾಮರ್ಸ್ ವೇದಿಕೆ ಫ್ಲಿಪ್ಕಾರ್ಟ್‌ ಅನ್ನು ಸಹ-ಸ್ಥಾಪಿಸಿದರು ಮತ್ತು ೨೦೧೬ ರ ಜನವರಿ ೧೧ ರವರೆಗೆ ಚೀಫ್ ಆಪರೇಟಿಂಗ್ ಆಫೀಸರ್ (ಸಿಇಒ) ಆಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.[][][] ಜನವರಿ ೨೦೧೭ರಲ್ಲಿ ಅವರು ಗ್ರೂಪ್ ಸಿಇಓ ಆಗಿ ಬಡ್ತಿ ಪಡೆದರು ಮತ್ತು ಫ್ಲಿಪ್ಕಾರ್ಟ್‍ನ ವೈಯಕ್ತಿಕ ದುರುದ್ದೇಶದ ಆರೋಪಗಳಿಂದ ನವೆಂಬರ್ ೨೦೧೮ರಲ್ಲಿ ರಾಜೀನಾಮೆ ನೀಡಿದರು. ಬಿನ್ನಿ ಚಂಡೀಗಢದಿಂದ ಬಂದವರು ಮತ್ತು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದೆಹಲಿಯಿಂದ ಕಂಪ್ಯೂಟರ್ ಸೈನ್ಸ್‌ ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದರು.[][]

ಆರಂಭಿಕ ಜೀವನ

ಬದಲಾಯಿಸಿ

ಬಿನ್ನಿ ಬನ್ಸಾಲ್ ಮೂಲತಃ ಪಂಜಾಬ್ ಮತ್ತು ಹರಿಯಾಣದ ರಾಜಧಾನಿಯಾದ ಚಂಡೀಗಢದಿಂದ ಬಂದಿದ್ದಾರೆ. ಅವರು ಚಂಡೀಗಢದ ಸೇಂಟ್ ಆನ್ಸ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆದರು.[] ಅವರ ಉದ್ಯಮಿ, ಸಚಿನ್ ಬನ್ಸಾಲ್ ಸಹ ಚಂಡೀಘಡದವರಾಗಿದ್ದಾರೆ. ಅವರು ಒಂದೇ ಕೊನೆಯ ಹೆಸರನ್ನು ಹಂಚಿಕೊಂಡರೂ, ಅವರ ನಡುವೆ ಸಂಬಂಧವಿಲ್ಲ.[೧೦] ಇಬ್ಬರೂ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾಗಿದ್ದರು.

ಬನ್ಸಾಲ್ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರ ತಂದೆಯು ಬ್ಯಾಂಕಿನಲ್ಲಿ ನಿವೃತ್ತ ಮುಖ್ಯ ವ್ಯವಸ್ಥಾಪಕರಾಗಿದ್ದು, ತಾಯಿ ಸರ್ಕಾರದ ವಲಯದಲ್ಲಿದ್ದಾರೆ. ಇವರು ಯಾವುದೇ ಒಡಹುಟ್ಟಿದವರನ್ನು ಹೊಂದಿಲ್ಲ ಮತ್ತು ಇವರ ಪತ್ನಿ ತ್ರಿಶಾ ಬನ್ಸಾಲ್ ಗೃಹಿಣಿಯಾಗಿದ್ದಾಳೆ.[೧೧] ಅವರಿಗೆ ಅವಳಿ ಮಕ್ಕಳಿದ್ದಾರೆ.[೧೨]

ವೃತ್ತಿಜೀವನ

ಬದಲಾಯಿಸಿ

ಫ್ಲಿಪ್‌ಕಾರ್ಟ್ ಅನ್ನು ಸಹ-ಸ್ಥಾಪಿಸುವ ಮೊದಲು, ಬಿನ್ನಿ ಒಂಬತ್ತು ತಿಂಗಳ ಕಾಲ ಅಮೆಜಾನ್‌ನಲ್ಲಿ ಉದ್ಯೋಗದಲ್ಲಿದ್ದರು ಮತ್ತು ಅದಕ್ಕೂ ಮೊದಲು ಅವರನ್ನು ಎರಡು ಬಾರಿ ಗೂಗಲ್ ತಿರಸ್ಕರಿಸಿತ್ತು.[೧೩] ಬಿನ್ನಿ ಬನ್ಸಾಲ್ ಮತ್ತು ಅವರ ವ್ಯಾಪಾರ ಪಾಲುದಾರ ಸಚಿನ್ ಬನ್ಸಾಲ್ ಆರಂಭದಲ್ಲಿ ಹೋಲಿಕೆ ಹುಡುಕಾಟ ಎಂಜಿನ್ ಅನ್ನು ಪ್ರಾರಂಭಿಸಲು ಯೋಚಿಸಿದರು, ಆದರೆ ಭಾರತದಲ್ಲಿ ಇ-ಕಾಮರ್ಸ್‌ನ ಮಾರುಕಟ್ಟೆ ತುಂಬಾ ಚಿಕ್ಕದಾಗಿದೆ ಎಂದು ಅರಿತುಕೊಂಡರು. ಆದ್ದರಿಂದ, ೨೦೦೭ ರಲ್ಲಿ ಅಮೆಜಾನ್ ತೊರೆದ ನಂತರ, ಅವರು ಇ-ಕಾಮರ್ಸ್ ಕಂಪನಿಯಾಗಿ ಫ್ಲಿಪ್‌ಕಾರ್ಟ್ ಅನ್ನು ಸ್ಥಾಪಿಸಿದರು. ಅಮೆಜಾನ್‌ಗೆ ಸೇರುವ ಮೊದಲು, ಬಿನ್ನಿ ಸರ್ನಾಫ್ ಕಾರ್ಪೊರೇಷನ್‌ನೊಂದಿಗೆ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದರು.[೧೪] ಅಲ್ಲಿ ಅವರು ಕಾರುಗಳಿಗಾಗಿ ಲೇನ್ ಸೆನ್ಸಾರ್ ಸಾಧನವನ್ನು ಅಭಿವೃದ್ಧಿಪಡಿಸಿದರು. (ಅದು ಸಿಗ್ನಲ್ ನೀಡದೆ ಲೇನ್ ಬದಲಾಯಿಸಿದರೆ ಸ್ವಯಂಚಾಲಿತವಾಗಿ ಬೀಪ್ ಆಗುತ್ತದೆ ಮತ್ತು ಎಚ್ಚರಿಕೆ ನೀಡುತ್ತದೆ.)

ಸಾಧನೆಗಳು

ಬದಲಾಯಿಸಿ

೨೦೧೬ ರಲ್ಲಿ, ಬನ್ಸಾಲ್ ಫ್ಲಿಪ್ಕಾರ್ಟ್‍ನ ಸಿಇಒ ಆಗಿದ್ದರು, ಅಲ್ಲಿ ಅವರು ಕಾರ್ಯತಂತ್ರದ ಅಭಿವೃದ್ಧಿ, ನಿರ್ದೇಶನ ಮತ್ತು ವ್ಯವಹಾರ ನಿರ್ವಹಣೆಗಯ ಕೆಲಸ ಮಾಡಿದರು.[೧೫] ೨೦೧೭ ರಲ್ಲಿ ಅವರು ಫ್ಲಿಪ್ಕಾರ್ಟ್ ಗ್ರೂಪ್‍ನ ಸಿಇಒ ಪಾತ್ರವನ್ನು ವಹಿಸಿಕೊಂಡರು ಮತ್ತು ಅವರ ಹಿಂದಿನ ಸ್ಥಾನವನ್ನು ಕಲ್ಯಾಣ್ ಕೃಷ್ಣಮೂರ್ತಿಯವರಿಗೆ ವಹಿಸಲಾಯಿತು.[೧೬]

೨೦೧೮ ರಲ್ಲಿ, ಫ್ಲಿಪ್ಕಾರ್ಟ್ ಗುಂಪಿನಲ್ಲಿ ವಾಲ್ಮಾರ್ಟ್ ೭೭% ಪಾಲನ್ನು ಸ್ವಾಧೀನಪಡಿಸಿಕೊಂಡಿತು. ಸ್ವಾಧೀನದ ನಂತರ, ಬನ್ಸಾಲ್ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಂಡರು ಮತ್ತು ಗ್ರೂಪ್ ಸಿಇಒ ಆಗಿ ಮುಂದುವರೆದರು.[೧೭] ಸ್ವಾಧೀನದ ನಂತರ ಫ್ಲಿಪ್ಕಾರ್ಟ್‍ನಲ್ಲಿ ಅವರ ೫.೫% ಪಾಲನ್ನು $ ೧ ಶತಕೋಟಿ ಮೌಲ್ಯದಲ್ಲಿ ಮೌಲ್ಯಮಾಪನ ಮಾಡಲಾಯಿತು.[೧೮][೧೯] ಅವರು ೨೦೧೮ ರ ನವೆಂಬರ್‌ನಲ್ಲಿ ಫ್ಲಿಪ್ಕಾರ್ಟ್‌ನಿಂದ ವೈಯಕ್ತಿಕ ದುಷ್ಕೃತ್ಯದ ಆರೋಪದ ಮೇಲೆ ರಾಜೀನಾಮೆ ನೀಡಿದ್ದಾರೆ.[೨೦]

ಪ್ರಶಸ್ತಿಗಳು ಮತ್ತು ಮಾನ್ಯತೆ

ಬದಲಾಯಿಸಿ
  • ಸೆಪ್ಟೆಂಬರ್ ೨೦೧೫ ರಲ್ಲಿ, ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್‍ರವರು ಫೋರ್ಬ್ಸ್ ಇಂಡಿಯಾ ರಿಚ್ ಲಿಸ್ಟ್ನಿಂದ $೧.೩ ಶತಕೋಟಿ ನಷ್ಟು ಮೌಲ್ಯದೊಂದಿಗೆ ಭಾರತದ ೮೬ ನೇ ಶ್ರೀಮಂತ ವ್ಯಕ್ತಿ ಎಂದು ಹೆಸರಿಸಿದ್ದಾರೆ.[೨೧]
  • ಇಂಡಿಯಾ ಟುಡೆ ೨೦೧೭ ನೆಯ ಪಟ್ಟಿಯಲ್ಲಿ ಭಾರತದ ೫೦ ಅತ್ಯಂತ ಶಕ್ತಿಯುತ ಜನರಲ್ಲಿ ಸಚಿನ್ ಬನ್ಸಾಲ್ ಅವರೊಂದಿಗೆ ಬಿನ್ನಿ ಬನ್ಸಾಲ್‌ರವರು ೨೬ ನೇ ಸ್ಥಾನವನ್ನು ಪಡೆದಿದ್ದಾರೆ.[೨೨]

ಉಲ್ಲೇಖಗಳು

ಬದಲಾಯಿಸಿ
  1. "Flipkart's other Bansal comes to the fore". LiveMint. 13 January 2016.
  2. "Forbes profile: Binny Bansal (Resigned)". Forbes. Retrieved 29 August 2018.
  3. Srikar Muthyala (29 September 2015). "The List Great Entrepreneurs of India in 2015". MyBTechLife. Archived from the original on 14 January 2016.
  4. Punj, Deepshikha (September 17, 2011). "Sachin Bansal and Binny Bansal proudly owns flipkart.com, the biggest online bookstore in India". India Today.
  5. "Flipkart sales hit whopping $1 bn, Sachin and Binny Bansal 'run rate' stupendous". The Financial Express. 9 March 2014.
  6. "Kalyan Krishnamurthy to take over as Flipkart CEO, Binny Bansal Group CEO - FactorDaily". factordaily.com. 9 January 2017. Archived from the original on 10 ಜನವರಿ 2017. Retrieved 9 January 2017.
  7. "Flipkart success story revealed! Meet Sachin Bansal and Binny Bansal". dailybhaskar. 9 December 2013.
  8. "What Flipkart's Funds Mean for its Rivals". Forbes India. Retrieved 30 March 2014.
  9. "St. AnneS CONVENT SCHOOL,". sacschd.in. Archived from the original on 2023-08-05. Retrieved 2023-08-17.
  10. "Binny Bansal". Archived from the original on 17 November 2015. Retrieved 13 November 2015.
  11. Mookerji, Nivedita (5 August 2014). "flipkart ceo wanted to be a gamer snapdeal chief a food and film critic". Business Standard India. Retrieved 25 November 2015.
  12. Karmali, Naazneen. "E-Commerce Entrepreneur Seeks To Mentor And Invest In Startups From Singapore". Forbes (in ಇಂಗ್ಲಿಷ್). Retrieved 2023-01-06.
  13. "Before I got into Amazon, Google rejected me twice. But that did not stop me from starting Flipkart: Binny Bansal". Retrieved 5 August 2014.
  14. "Flipkart success story revealed! Meet Sachin Bansal and Binny Bansal". Retrieved 20 November 2015.
  15. "Flipkart flips CEO post, Binny Bansal replaces Sachin Bansal". Livemint. 12 January 2016.
  16. "Flipkart appoints Kalyan Krishnamurthy as new CEO". The Hindu. 9 January 2017.
  17. "Walmart acquires Flipkart for $16 billion in world's largest ecommerce deal". Economic Times. 10 May 2018.
  18. "Is Binny Bansal saying bye to Flipkart in the Walmart sellout?". Factor Daily. 26 April 2018. Archived from the original on 17 ಆಗಸ್ಟ್ 2023. Retrieved 17 ಆಗಸ್ಟ್ 2023.
  19. "Sachin Bansal and Binny Bansal's Flipkart journey: From Kart to Mart". The New Indian Express. 10 May 2018.
  20. "Flipkart and Walmart statement on Binny Bansal". news.walmart.com (in ಇಂಗ್ಲಿಷ್). Archived from the original on 2018-11-16. Retrieved 2018-11-16.
  21. "Forbes India rich list: Mukesh Ambani tops for 9th year, Flipkart's Bansals debut at 86th slot". Firstpost. 24 September 2015. Retrieved 24 September 2015.
  22. "India's 50 powerful people". India Today. 14 April 2017.