ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದೆಹಲಿ

ದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದೆಹಲಿ ಒಂದು ಪ್ರಮುಖ ಎಂಜಿನಿಯರಿಂಗ್ ಕಾಲೇಜ್ ಆಗಿದೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದೆಹಲಿ (ಹಿಂದಿ:भारतीय प्रौद्योगिकी संस्थान िदल्ली) (ಹಾಝ್ ಖಾಸ್ಎಂಬ ಸ್ಥಳದಲ್ಲಿದೆ)(ಹಿಂದೆ, ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ, ದೆಹಲಿ ಎಂಬ ಹೆಸರಿತ್ತು), ಸಾಮಾನ್ಯವಾಗಿಐಐಟಿ ದೆಹಲಿ ಅಥವಾ ಐಐಟಿಡಿ ಎಂದು ಕರೆಯಲಾಗುತ್ತದೆ ಹಾಗೂ ಭಾರತದ ಹೆಹಲಿಯಲ್ಲಿನ ಒಂದು ಪ್ರಮುಖ ಎಂಜಿನಿಯರಿಂಗ್ ಕಾಲೇಜ್ ಆಗಿದೆ. ಅದು ಭಾರತದಲ್ಲಿನ ಇತರೆ ಐಐಟಿಗಳ ಜೊತೆ ಒಂದು ಪ್ರಮುಖ ಭಾಗವಾಗಿ ತನ್ನದೇ ಒಂದು ಸ್ಥಾನವನ್ನು ಪಡೆದಿದೆ: ಭಾರತೀಯ ತಂತ್ರಜ್ಞಾನ ಸಂಸ್ಥೆ, ಬಾಂಬೆ, ಗೌಹಟಿ, ಕಾನ್ಪುರ್, ಖರಗ್ ಪುರ್, ಮದ್ರಾಸ್, ಮತ್ತು ರೂರ್ಕೀ.

Indian Institute of Technology
Delhi
IIT Delhi Logo
ಪ್ರಕಾರEducation and Research Institution
ಸ್ಥಾಪನೆ1961[ಸೂಕ್ತ ಉಲ್ಲೇಖನ ಬೇಕು]
ಡೈರೆಕ್ಟರ್Dr. Surendra Prasad[ಸೂಕ್ತ ಉಲ್ಲೇಖನ ಬೇಕು]
ಪದವಿ ಶಿಕ್ಷಣ2300[ಸೂಕ್ತ ಉಲ್ಲೇಖನ ಬೇಕು]
ಸ್ನಾತಕೋತ್ತರ ಶಿಕ್ಷಣ2500[ಸೂಕ್ತ ಉಲ್ಲೇಖನ ಬೇಕು]
ಸ್ಥಳನವ ದೆಹಲಿ, Delhi, India
ಆವರಣUrban, Area 320 acres (1.3 km2)[ಸೂಕ್ತ ಉಲ್ಲೇಖನ ಬೇಕು]
AcronymIITD
ಜಾಲತಾಣwww.iitd.ac.in

ಇತಿಹಾಸಸಂಪಾದಿಸಿ

ಈ ಸಂಸ್ಥೆಯು ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ, ದೆಹಲಿ ಎಂಬ ಹೆಸರಿನಲ್ಲಿ on ಆಗಸ್ಟ್ 21, 1961ರಂದು ಸ್ಥಾಪನೆಗೊಂಡಿತು[ಸೂಕ್ತ ಉಲ್ಲೇಖನ ಬೇಕು]. ಇದರ ಶಂಖುಸ್ಥಾಪನೆಯನ್ನು HRH ರಾಜಕುಮಾರ ಫಿಲಿಪ್, ಎಡಿನ್ಬರ್ಗ್ ನ ದೊರೆಮಾಡಿದರು, ಮತ್ತು ಉದ್ಠಾಟನೆಯನ್ನು ಆಗಿನ ವೈಜ್ಞಾನಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ವಿಷಯಗಳ ಕೇಂದ್ರ ಸಚಿವರಾದ ಪ್ರೊಫೆಸರ್.ಹುಮಾಯೂನ್ ಕಬೀರ್ ನೆರವೇರಿಸಿದರು[ಸೂಕ್ತ ಉಲ್ಲೇಖನ ಬೇಕು]. ನಂತರ ಕೇವಲ ತನ್ನ ಎರಡು ವರ್ಷಗಳಿಗೂ ಕಡಿಮೆ ಅವಧಿಯ ಅಸ್ತಿತ್ವದ ಮೇಲೆ, ಭಾರತೀಯ ಶಾಸನಸಭೆಯು ಇಂಸ್ಟಿಟ್ಯೂಟ್ಸ್ ಆಫ್ ಟೆಕ್ನಾಲಜಿ ಕಾಯ್ದೆಗೆ ಬದಲಾವಣೆಗಳನ್ನು ತಂದಿತು ಹಾಗೂ ಈ ಸಂಸ್ಥೆಯನ್ನು ಇಂಡಿಯನ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ ಎಂದು ಮೇಲ್ದರ್ಜೆಗೇರಿಸಿತು. ಮಾರ್ಚ್ 2, 1968 ರಂದು, ಅಂದಿನ ಭಾರತದ ರಾಷ್ಟ್ರಪತಿಗಳಾದಡಾ. ಜಕೀರ್ ಹುಸ್ಸೇಯ್ನ್ಅವರು ಐಐಟಿ ದೆಹಲಿಯ ಮುಖ್ಯ ಕಟ್ಟಡವನ್ನು ಸಾಂಧರ್ಭಿಕವಾಗಿ ಉಧ್ಗಾಟಿಸಿದರು[ಸೂಕ್ತ ಉಲ್ಲೇಖನ ಬೇಕು].

 
ಐಐಟಿ ದೆಹಲಿ

ವಿದ್ಯಾಸಂಸ್ಥೆಯ ಆವರಣಸಂಪಾದಿಸಿ

ಐಐಟಿ ದೆಹಲಿಯು ದಕ್ಷಿಣ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ಸ್ಥಾಪಿತವಾಗಿದೆ. 320 acres (1.3 km2)[೧] ದೆಹಲಿಯ ಐಐಟಿ ಮಹಾವಿದ್ಯಾಲಯದ ಉದ್ದದ ಆವರಣವು ಕುತುಬ್ ಮಿನಾರ್ ಮತ್ತು ಲೋಟಸ್ ದೇವಸ್ಥಾನದಂತಹ ಸುಂದರವಾದ ಹೌಜ್ ಖಾಸ್ ಪ್ರದೇಶ ಹಾಗೂ ಸ್ಮಾರಕ ಚಿನ್ಹೆಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಸಂಸ್ಥೆಯ ಆವರಣವು ಇತರೆ ಪ್ರಖ್ಯಾತ ವಿದ್ಯಾ ಸಂಸಂಸ್ಥೆಗಳಾದ ಜವಾಹರ್ ಲಾಲ್ ನೆಹರೂ ವಿಶ್ಯವಿದ್ಯಾಲಯಮತ್ತು ಇಂಡಿಯನ್ ಸ್ಟಾಟೆಸ್ಟಿಕಲ್ ಇನಸ್ಟಿಟ್ಯೂಟ್ ಗಳಿಗೆ ಹತ್ತಿರದಲ್ಲೇ ಇದೆ. ಈ ವಿದ್ಯಾ ಸಂಸ್ಥೆಯ ಒಳಗಿನ ಆವರಣವು ಒಂದು ಉತ್ತಮವಾಗಿ ರಚಿಸಿ ನಿರ್ಮಿಸಲ್ಪಟ್ಟ ನಗರದಂತೆ ಹೂತೋಟಗಳು, ಹುಲ್ಲು ಹಾಸುಗಳು, ವಾಸಯೋಗ್ಯ ಕಟ್ಟಡಗಳು ಮತ್ತು ಅಗಲವಾದ ಶುಭ್ರ ರಸ್ತೆಗಳಿಂದ ಕೂಡಿದೆ. ಈ ಸಂಸ್ಥೆಯ ಆವರಣವು ತನ್ನದೇ ಆದ ನೀರಿನ ಸರಬರಾಜು ವ್ಯವಸ್ಥೆ ಮತ್ತು ವಿದ್ಯುಚ್ಛಕ್ತಿಯನ್ನು ಉತ್ಪಾದನೆ ಮಾಡಿ ಸರಬರಾಜು ಮಾಡುವ ವ್ಯವಸ್ಥೆ ಮತ್ತು ಇದರ ಜೊತೆ ಅಲ್ಲಿನ ನಿವಾಸಿಗಳ ದಿನ ನಿತ್ಯದ ಅಗತ್ಯತೆಗಳನ್ನು ಪುರೈಸಲು ವಾಣಿಜ್ಯ ಮಳಿಗೆಗಳನ್ನೂ ಸಹ ಹೊಂದಿದೆ.

ಚಿತ್ರ:Road side.jpg
ಐಐಟಿ ದೆಹಲಿಯಲ್ಲಿ ಒಂದು ಉದ್ಯಾನವನ

ಸಂಪೂರ್ಣ ಐಐಟಿ-ಡಿ ಆವರಣವನ್ನು ನಾಲ್ಕು ಮುಖ್ಯ ವಲಯಗಳನ್ನಾಗಿ ವಿಭಾಗಿಸಲಾಗಿದೆ[ಸೂಕ್ತ ಉಲ್ಲೇಖನ ಬೇಕು]:

 • ವಿದ್ಯಾರ್ಥಿಗಳು ವಾಸಿಸುವ ವಲಯ
 • ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ವಾಸಿಸುವ ವಲಯ
 • ವಿದ್ಯಾರ್ಥಿಗಳ ಮನೋರಂಜನಾ ಪ್ರದೇಶಗಳು, ಅದರಲ್ಲಿ ಇವನ್ನೂ ಒಳಗೊಂಡಿವೆ ದಿ ಮಸ್ಟೂಡೆಂಟ್ ಆಕ್ಟಿವಿಟಿ ಸೆಂಟರ್ (SAC) ಫುಟ್ ಬಾಲ್ ಕ್ರೀಡಾಂಗಣ, ಕ್ರಿಕೆಟ್ ಮೈದಾನ, ಬ್ಯಾಸ್ಕೆಟ್ ಬಾಲ್ ಕೋರ್ಟು ಗಳು, ಹಾಕಿ ಮೈದಾನ, ಲಾನ್ ಟೆನ್ನಿಸ್ ಕೋರ್ಟು ಗಳು.
 • ಪಠ್ಯಕ್ರಮ ವಲಯ ಅದರಲ್ಲಿ ವಿಭಾಗಗಳ ಕಛೇರಿಗಳು, ಪ್ರವವಚನ ಮಂದಿರಗಳು, ವಾಚನಾಲಯಗಳು ಮತ್ತು ಕಾರ್ಯಸ್ಥಾನಗಳು ಒಳಗೊಂಡಿವೆ.

ವಿದ್ಯಾರ್ಥಿಗಳು ವಾಸಿಸುವ ವಲಯಗಳನ್ನು ಎರಡು ಮುಖ್ಯ ಭಾಗಗಳನ್ನಾಗಿ ವಿಭಾಗಿಸಲಾಗಿದೆ - ಒಂದು ಪುರುಷರ ವಸತಿ ನಿಲಯಗಳಿಗಾಗಿ ಹಾಗೂ ಮತ್ತೊಂದು ಮಹಿಳೆಯರಿಗಾಗಿ ಒಂದು ವಸತಿ ನಿಲಯಗಳಿಗಾಗಿ.

ವಸತಿ ನಿಲಯಗಳುಸಂಪಾದಿಸಿ

ಅಲ್ಲಿ ಎಲ್ಲಾ ಸೇರಿ ಒಟ್ಟು 13 ವಸತಿ ನಿಲಯಗಳಿವೆ (10 ವಸತಿ ನಿಲಯಗಳು ಪುರುಷರಿಗಾಗಿ ಹಾಗೂ 3 ಮಹಿಳಾ ವಸತಿ ನಿಲಯಗಳು)[ಸೂಕ್ತ ಉಲ್ಲೇಖನ ಬೇಕು]. ಇತ್ತೀಚೆಗೆ, ಕೇವಲ ಹೆಣ್ಣು ಮಕ್ಕಳಿಗೆಂದೇ (ಹೊಸ ಹಿಮಾದ್ರಿ) ಹಿಮಾದ್ರಿ ಮನೆಯ ಹತ್ತಿರ ಮುಖ್ಯದ್ವಾರದ ಮುಂದೆ ಎಂಟು ಮಹಡಿಯ ವಿದ್ಯಾರ್ಥಿ ನಿಲಯವೊಂದನ್ನು ಕಟ್ಟಲ್ಪಟ್ಟಿದೆ ಹಾಗೂ ಲಿಫ್ಟ್ ಸೌಕರ್ಯ ಹೊಂದಿರುವ ವಿದ್ಯಾರ್ಥಿ ನಿಲಯ ಇದೊಂದೇ ಆಗಿದೆ.ದಿನಗಳೆದಂತೆ ಪ್ರವೇಶಗಳು ಮುಮ್ಮಡಿ ಜಿಗಿತವನ್ನು ಕಂಡಿವೆ, ಆದ್ದರಿಂದ ಅನೇಕ ಹೊಸದಾದುವುಗಳನ್ನು ನಿರೀಕ್ಷಿಸಲಾಗಿದೆ ಸಾತ್ಪುರ ವಿದ್ಯಾರ್ಥಿ ನಿಲಯದ ಹಿಂದೆ ಮತ್ತೊಂದು ವಿದ್ಯಾರ್ಥಿ ನಿಲಯವನ್ನು ಕಟ್ಟಲಾಗುತ್ತಿದೆ, ಅದನ್ನು ಗಿರ್ನಾರ್ ಹೌಸ್ ಎಂದು ಹೆಸರಿಸಲಾಗಿದೆ. ಅಲ್ಲಿ ವಿವಾಹಿತ ವಿದ್ಯಾರ್ಥಿಗಳಿಗೆಂದು ಬಹು ಮಹಡಿ ಕಟ್ಟಡಗಳೂ ಸಹ ಇವೆ. ಎಲ್ಲಾ ವಿದ್ಯಾರ್ಥಿ ನಿಲಯಗಳೂ (ಹೌಸ್ಗಳೆಂದು ಕರೆಯಲಾಗುತ್ತದೆ) ಬಾರತದಲ್ಲಿನ ಅನೇಕ ಪರ್ವತ ಶ್ರೇಣಿಗಳ ಮೇಲೆ ಹೆಸರಿಸಲಾಗಿದೆ - ಶಿವಾಲಿಕ್, ಅರಾವಲಿ, ಹಿಮಾದ್ರಿ, ಜ್ವಾಲಾಮುಖಿ, ಕಾರಕೋರಂ, ಕೈಲಾಶ್, ಕುಮೊನ್, ನೀಲಗಿರಿ, ಸಾತ್ಪುರ, ಗಿರ್ನಾರ್ (ಹೊಸದಾಗಿ ನಿರ್ಮಿಸಲಾಗಿದೆ, 2010), ವಿಂಧ್ಯಾಚಲ್ ಮತ್ತು ಜನಸ್ಕಾರ್. ವಸತಿ ಯೋಗ್ಯ ಅಪಾರ್ಟಮೆಂಟ್ ಗಳನ್ನು ಭಾರತದಲ್ಲಿನ ಪ್ರಾಚೀನ ಮತ್ತು ಪ್ರಖ್ಯಾತ ವಿಶ್ವವಿದ್ಯಾಲಯಗಳ ಹೆರಿನಲ್ಲಿ ಟ್ಯಾಕ್ಸಿಲಾ ಮತ್ತು ನಲಂದಾ ಎಂದು ಹೆರಿಸಲಾಗಿದೆ.

 
ಐಐಟಿ ದೆಹಲಿಯಲ್ಲಿನ ಬಾಲಕರ ಹಾಸ್ಟೆಲ್

ವಿದ್ಯಾರ್ಥಿಗಳ ಚಟುವಟಿಕಾ ಕೇಂದ್ರಸಂಪಾದಿಸಿ

ಐಐಟಿ ದೆಹಲಿಯಲ್ಲಿ ವಿದ್ಯಾರ್ಥಿ ಚಟುವಟಿಕಾ ಕೇಂದ್ರ ಅಥವಾ SAC ವಿದ್ಯಾರ್ಥಿಗಳ ಮನೋರಂಜನಾ ವಲಯದ ಒಂದು ಭಾಗವಾಗಿದೆ. SAC ಪ್ರಮುಖವಾಗಿ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೋಸ್ಕರ ಮೀಸಲಾಗಿದೆ. SAC ಇವುಗಳನ್ನು ಒಳಗೊಂಡಿದೆ ವ್ಯಾಯಾಮಶಾಲೆ, ಈಜು ಕೊಳ, ಒಂದು ಪೂಲ್ ಕೊಠಡಿ, ಮೂರು ಸ್ಕಾಶ್ ಕೋರ್ಟ್ಸ್, ಎರಡು ಟೇಬಲ್ ಟೆನ್ನಿಸ್ ಕೊಠಡಿಗಳು, ಒಂದು ಸಂಗೀತದ ಕೊಠಡಿ, ಒಂದು ಲಲಿತ ಕಲೆಗಳ ಕೊಠಡಿ, ಒಂದು ರೊಬೋಟಿಕ್ಸ್ ಕೊಠಡಿ ಹಾಗು ಒಂದು ಎಲ್ಲರೂ ಸೇರುವ ಒಂದು ಕೊಠಡಿ, ಅದನ್ನು ಸಾಮಾನ್ಯವಾಗಿ ಕ್ವಿಜ್ ಮತ್ತು ಚರ್ಚಾ ಸ್ಪರ್ಧೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಉಪಯೋಗಿಸಲಾಗುತ್ತದೆ. SAC ಒಂದು ತೆರೆದ ಬಯಲು ರಂಗಮಂದಿರವನ್ನೂ ಸಹ ಹೊಂದಿದೆ, ಅದರಲ್ಲಿ ವಿವಿಧ ರೀತಿಯ ಸಂಗೀತ ಕಛೇರಿಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳು SAC ಯಲ್ಲಿನ ರೇಡಿಯೊ ಪ್ರಸಾರದ ಸೌಲಭ್ಯವನ್ನು ಸಹ ಉಪಯೋಗಿಸಬಹುದು ಆದರೆ ಕಳೆದ ಕೆಲವು ವರ್ಷಗಳಿಂದ ಅದರ ುಪಯೋಗವು ಕ್ಷೀಣವಾಗುತ್ತಿದೆ.

ಇಲಾಖೆಗಳು ಮತ್ತು ಕೇಂದ್ರಗಳುಸಂಪಾದಿಸಿ

ಐಐಟಿ ದೆಹಲಿಯು 13 ಇಲಾಖೆಗಳನ್ನು ಹೊಂದಿದೆ, 11 ವಿವಿಧ-ಇಲಾಖೆಗಳ ಕೇಂದ್ರಗಳು, ಹಾಗೂ 2 ಉತ್ಕೃಷ್ಟತೆಯ ಶಾಲೆ ಎಲ್ಲಾ ಸೇರಿ ಅವುಗಳು ಸರಿಸುಮಾರು 700 ವಿವಿಧ ಶ್ರೀಣಿಗಳನ್ನು ಪ್ರತಿ ಸೆಮಿಸ್ಟರ್ ನಲ್ಲಿ ಸಮರ್ಪಿಸಲಾಗುತ್ತದೆ.[೨]

ವಿಭಾಗಗಳುಸಂಪಾದಿಸಿ

ಐಐಟಿ ದೆಹಲಿಯು 13 ಇಲಾಖೆಗಳನ್ನು ಹೊಂದಿದೆ[ಸೂಕ್ತ ಉಲ್ಲೇಖನ ಬೇಕು]. ಒಂದು ಇಲಾಖೆಯು ಸಾಮಾನ್ಯವಾಗಿ ಒಂದು ಪ್ರಮುಖ ಯಂತ್ರಶಿಲ್ಪಶಾಸ್ತ್ರ ಅಥವಾ ವಿಜ್ಞಾನದ ವಿಭಾಗದ ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುತ್ತದೆ. ಪ್ರತಿ ಇಲಾಖೆಯು ತನ್ನದೇ ಆದ ಆಡಳಿತಾತ್ಮಕ ಕ್ರಮವನ್ನು ಹೊಂದೆವೆ ಜೊತೆಗೆ ಇಲಾಖಾ ಮುಖ್ಯಸ್ಥರು (HoD) ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ. HoD ಯವರು ತಮ್ಮ ಇಲಾಖೆಯನ್ನು ಮೂರು ವರ್ಷಗಳ ಅವಧಿಗೆ ಅಧಿಕಾರವನ್ನು ಇಟ್ಟುಕೊಂಡಿರುತ್ತಾರೆ ಆನಂತರ ಒಬ್ಬ ಹೊಸ ಇಲಾಖಾ ಮುಖ್ಯಸ್ಥೆರನ್ನು ನೇಮಿಸಲಾಗುತ್ತದೆ. ಪ್ರತಿ ಇಲಾಖೆಯು ಒಂದು ವಿಷಯದಲ್ಲಿ ಕಾರ್ಯಕ್ರಮವನ್ನು ನೀಡುತ್ತದೆ (ಪದವಿ ಪೂರ್ವ ವಿಭಾಗದಲ್ಲಿ ಅಥವಾ ಸ್ನಾತಕೋತ್ತರ ಹಂತದಲ್ಲಿ), ಯಂತ್ರ ತಾಂತ್ರಿಕ ವಿಜ್ಞಾನದಂತಹ ಕೆಲವು ಇಲಾಖೆಗಳು ಎರಡು ಅಥವಾ ಅದಕ್ಕೂ ಹೆಚ್ಚು ಪದವಿ ಪೂರ್ವ ಕಾರ್ಯಕ್ರಮಗಳನ್ನು ನೀಡುತ್ತವೆ ಹಾಗೂ ಕೆಲವು ಇಲಾಖೆಗಳು ಇತರೆ ಇಲಾಖೆಗಳ ಜೊತೆ ಜಂಟಿಯಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನೀಡುತ್ತವೆ. ತದನಂತರದ ಉದಾಹರಣೆಯಾಗಿ ಆಪ್ಟಿಕಲ್ ಕಮ್ಯುನಿಕೇಶನ್ ಕಾರ್ಯಕ್ರಮದ ಎಮ್.ಟೆಕ್ ಅನ್ನು ಜಂಟಿಯಾಗಿ ಭೌತ ವಿಜ್ಞಾನದ ಇಲಾಖೆ ಮತ್ತು ವಿದ್ಯುತ್ ಯಂತ್ರಶಿಲ್ಪಶಾಸ್ತ್ರದ ಇಲಾಖೆಗಳಿಂದ ನೀಡಲಾಗುತ್ತದೆ. ಆಡಳಿತ ನಿರ್ವಹಣಾ ಅಧ್ಯಯನಗಳ ಇಲಾಖೆ DMS, ಐಐಟಿ ದೆಹಲಿಯು 1993 ರರಲ್ಲಿ IIT(D) ನ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಸ್ಥಾಪಿಸಲ್ಪಟ್ಟಿತು[ಸೂಕ್ತ ಉಲ್ಲೇಖನ ಬೇಕು]. ಈ ಇಲಾಖೆಯು ಎರಡು ವರ್ಷದ ಪೂರ್ಣಾವಧಿಯ MBA ಕಾರ್ಯಕ್ರಮವನ್ನು ನೀಡುತ್ತದೆ ಜೊತೆಗೆ ಕಾರ್ಯನಿರ್ವಹಣಾ ವ್ಯವಸ್ಥೆಯ ಮೇಲೆ ಸಂಪೂರ್ಣ ಕೇಂದ್ರೀಕರಿಸುತ್ತದೆ, ಒಂದು ಎರಡು ವರ್ಷದ ಪೂರ್ಣಾವಧಿಯ MBA ಕಾರ್ಯಕ್ರಮ ಇದರಲ್ಲಿ ದೂರಸಂಪರ್ಕ ಕಾರ್ಯನಿರ್ವಹಣಾ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸುತ್ತದೆ, ಹಾಗೂ ಮೂರು ವರ್ಷದ ಅರೆಕಾಲಿಕ MBA ಕಾರ್ಯಕ್ರಮ ಇದರಲ್ಲಿ ತಂತ್ರಜ್ಞಾನ ಕಾರ್ಯನಿರ್ವಹಣೆಯ ಮೇಲೆ ಕೇಂದ್ರೀಕರಿಸಲಾಗುತ್ತದೆ. ಐಐಟಿ ದೆಹಲಿಯಲ್ಲಿನ ಪಠ್ಯಕ್ರಮದ ವಿಭಾಗಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

 1. ಆನ್ವಯಿಕ ಯಂತ್ರವಿಜ್ಞಾನ
 2. ಜೈವಿಕರಸಾಯನಿಕ ಯಂತ್ರಶಿಲ್ಪಶಾಸ್ತ್ರ & ಜೈನಿಕ ತಂತ್ರಜ್ಞಾನ
 3. ರಾಸಾಯನಿಕ ತಾಂತ್ರಿಕ ವಿಜ್ಞಾನ
 4. ರಸಾಯನಶಾಸ್ತ್ರ
 5. ಕಟ್ಟಡ ನಿರ್ಮಾಣ ತಾಂತ್ರಿಕ ವಿಜ್ಞಾನ
 6. ಗಣಕಯಂತ್ರ ವಿಜ್ಞಾನ & ಯಂತ್ರಶಿಲ್ಪಶಾಸ್ತ್ರ
 7. ವಿದ್ಯುತ್‌ ತಾಂತ್ರಿಕ ವಿಜ್ಞಾನ
 8. ಇಲಾಖೆ ಮಾನವೀಯತೆ & ಸಮಾಜ ವಿಜ್ಞಾನ
 9. ವ್ಯವಸ್ಥಾಪನಾ ಅಧ್ಯಯನ
 10. ಗಣಿತಶಾಸ್ತ್ರ
 11. ಯಂತ್ರ ತಾಂತ್ರಿಕ ವಿಜ್ಞಾನ
 12. ಭೌತಶಾಸ್ತ್ರ
 13. ವಸ್ತ್ರ ತಾಂತ್ರಿಕ ವಿಜ್ಞಾನ

ಅಂತರ-ವಿಭಾಗಗಳ ಕೇಂದ್ರಗಳುಸಂಪಾದಿಸಿ

ಅಂತರ-ವಿಭಾಗಗಳ ಕೇಂದ್ರಗಳು ಬೇರೆ ಇಲಾಖೆಗಳಿಂದ ವಿರುದ್ಧವಾಗಿರುತ್ತವೆ ಅಂದರೆ ಅವುಗಳು ಎರಡಕ್ಕಿಂತ ಹೆಚ್ಚು ಬೇರೆ ಬೇರೆ ಯಂತ್ರಶಿಲ್ಪ ತಂತ್ರಜ್ಞಾನ ಅಥವಾ ವಿಜ್ಞಾನದ ವಿಭಾಗಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತವೆ. ಕೇಂದ್ರವು ಬೇರೆ ಇಲಾಖೆಗಳಂತೆಯೇ ಕಾರ್ಯಕ್ರಮಗಳನ್ನು ಸಹ ನೀಡುತ್ತವೆ ಆದರೆ ಅವುಗಳು ಈ ಕಾರ್ಯಕ್ರಮಗಳನ್ನು ಪ್ರಮುಖವಾಗಿ ಸ್ನಾತಕೋತ್ತರ ಹಂತದಲ್ಲಿ ನೀಡುತ್ತವೆ. ಈ ಕೆಳಗಿನ ವಿವಿಧ ಅಂತರ-ವಿಭಾಗಗಳ ಕೇಂದ್ರಗಳು ಐಐಟಿ ದೆಹಲಿಯಲ್ಲಿ ಸ್ಥಾಪಿತವಾಗಿದೆ[ಸೂಕ್ತ ಉಲ್ಲೇಖನ ಬೇಕು]:

 1. ಸೆಂಟರ್ ಫಾರ್ ಅಪ್ಲೈಡ್ ರಿಸರ್ಚ್ ಇನ್ ಎಲೆಕ್ಟ್ರಾನಿಕ್ಸ್ (CARE)
 2. ವಾಯುಮಂಡಲದ ವಿಜ್ಞಾನಗಳ ಕೇಂದ್ರ (CAS)
 3. ಜೈವಿಕವೈದ್ಯಕೀಯದ ಯಂತ್ರಶಿಲ್ಪಶಾಸ್ತ್ರದ ಕೇಂದ್ರ (CBME)
 4. ಗಣಕಯಂತ್ರದ ಸೇವೆಗಳ ಕೇಂದ್ರ (CSC)
 5. ಶಕ್ತಿ ಅಧ್ಯಯನಗಳ ಕೇಂದ್ರ (CES)
 6. ಶೈಕ್ಷಣಿಕ ತಂತ್ರಜ್ಞಾನದ ಸೇವಾ ಕೇಂದ್ರ (ETSC)
 7. ಕೈಗಾರಿಕಾ ಘರ್ಷಣಾ ತಂತ್ರಜ್ಞಾನ, ಯಂತ್ರದ ಚಲನಶಾಸ್ತ್ರ, ಸಂರಕ್ಷಣಾ ಯಂತ್ರಶಿಲ್ಪಶಾಸ್ತ್ರ (ITMMEC)
 8. ಉಪಕರಣಗಳ ವಿನ್ಯಾಸ ವಿಕಾಸನದ ಕೇಂದ್ರ (IDDC)
 9. ಪಾಲಿಮರ್ ವಿಜ್ಞಾನ & ಯಂತ್ರಶಿಲ್ಪಶಾಸ್ತ್ರ (CPSC)
 10. ಗ್ರಾಮೀಣಾಭಿವೃದ್ಧಿ & ತಂತ್ರಜ್ಞಾನದ ಕೇಂದ್ರ (CRDT)
 11. ಮೌಲ್ಯಾಧಾರಿತ ಶಿಕ್ಷಣದ ಯಂತ್ರಶಿಲ್ಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NRCVEE)

ಉತ್ಕೃಷ್ಟತೆಯ ಶಾಲೆಗಳುಸಂಪಾದಿಸಿ

ಒಂದು ಉತ್ಕೃಷ್ಟತೆಯ ಶಾಲೆಯು ಬಾಹ್ಯ ಸ್ಥಿರನಿಧಿಯಿಂದ (ಹಳೆಯ ವಿದ್ಯಾರ್ಥಿಗಳು ಅಥವಾ ಒಂದು ಸಂಸ್ಥೆಯಿಂದ) ಸಂಘದ ಒಂದು ಭಾಗವಾಗಿ ಕೆಲಸ ನಿರ್ವಹಿಸುತ್ತಿರುವ ಶಾಲೆಯಾಗಿದೆ. ಈ ಕೆಳಕಂಡಂತಹ ದೆಹಲಿ ಐಐಟಿ ನಲ್ಲಿ ಅಂತಹ ಮೂರು[ಸೂಕ್ತ ಉಲ್ಲೇಖನ ಬೇಕು] ಶಾಲೆಗಳಿವೆ:

 1. ದೂರಸಂಪರ್ಕ ತಂತ್ರಜ್ಞಾನ ಹಾಗೂ ಕಾರ್ಯನಿರ್ವಹಣೆಯ ಭಾರತಿ ಶಾಲೆ.
 2. ಮಾಹಿತಿ ತಂತ್ರಜ್ಞಾನದ ಻ಮರ್ ನಾಥ್ ಹಾಗೂ ಶಶಿ ಖೋಸ್ಲಾ ಶಾಲೆ.
 3. ಪ್ರಾಣಿಶಾಸ್ತ್ರ ವಿಜ್ಞಾನಗಳ ಶಾಲೆ.

ಪಠ್ಯಕ್ರಮದ ಕಾರ್ಯಕ್ರಮಗಳುಸಂಪಾದಿಸಿ

ಐಐಟಿ ದೆಹಲಿಯು, ಬೇರೆ ಎಲ್ಲಾ ಭಾರತೀಯ ತಂತ್ರಜ್ಞಾನದ ಸಂಸ್ಥೆಗಳಂತೆ, ಪ್ರಮುಖವಾಗಿ ತನ್ನ ಪದವಿ ಕಾರ್ಯಕ್ರಮಕ್ಕೆ ಹೆಚ್ಚು ಪ್ರಸಿದ್ಧವಾಗಿದೆ, ಇದರಲ್ಲಿ ತಂತ್ರಜ್ಞಾನದ ಪದವಿ ಕಾರ್ಯಕ್ರಮ ಒಳಗೊಂಡಿದೆ, ಎರಡು ಪ0ದವಿಗಳನ್ನು ಪಡೆಯುವ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮವಾದ ತಂತ್ರಜ್ಞಾನದಲ್ಲಿ ಮಾಸ್ಟರ್ಸ್ ಕಾರ್ಯಕ್ರಮ ಹಾಗೂ ಸಂಯೋಜಿಸಿದ ತಂತ್ರಜ್ಞಾನದ ಮಾಸ್ಟರ್ಸ್ ಕಾರ್ಯಕ್ರಮವೂ ಸೇರಿದೆ. ಅದು ಕೆಲವು ಸ್ನಾತಕೋತ್ತರ ಹಂತದ ಕಾರ್ಯಕ್ರಮಗಳನ್ನೂ ಸಹ ನೀಡುತ್ತದೆ, ತಂತ್ರಜ್ಞಾನದಲ್ಲಿ ಮಾಸ್ಟರ್ಸ್, ವಿಜ್ಞಾನದಲ್ಲಿ ಮಾಸ್ಟರ್ಸ್, ವಿಜ್ಞಾನದಲ್ಲಿ ಮಾಸ್ಟರ್ಸ್ (ಸಂಶೋಧನೆ), ವ್ಯವಹಾರದ ಆಡಳಿತದ ಮಾಸ್ಟರ್ಸ್, ರಚನಾ ಮಾಸ್ಟರ್ಸ್ (ಕೈಗಾರಿಕಾ ವಿನ್ಯಾಸ). ಕೊನೆಯದಾಗಿ ಅದು Ph.D. ಕಾರ್ಯಕ್ರಮವನ್ನೂ ಸಹ ನೀಡುತ್ತದೆ. ಪ್ರಾರಂಭಿಕ ಹಂತದಲ್ಲಿ ಪ್ರವೇಶದ ಮಾನದಂಡಗಳು ಈ ಎಲ್ಲಾ ಕಾರ್ಯಕ್ರಮಗಳಿಗೆ ಬೇರೆ ಬೇರೆಯಾಗಿರುತ್ತವೆ.

ಪದವಿಪೂರ್ವ ಕಾರ್ಯಕ್ರಮಗಳುಸಂಪಾದಿಸಿ

ಐಐಟಿ ದೆಹಲಿಯು ತಂತ್ರಜ್ಞಾನದಲ್ಲಿ ಪದವಿ ಹಂತದ ಕಾರ್ಯಕ್ರಮಗಳನ್ನು 9 ವಿವಿಧ ವಿಭಾಗಗಳಲ್ಲಿ ನೀಡುತ್ತದೆ, ಅದರಲ್ಲಿ ರಸಾಯನಿಕ ಯಂತ್ರಶಿಲ್ಪಶಾಸ್ತ್ರ, ಕಟ್ಟಡ ಯಂತ್ರಶಿಲ್ಪಶಾಸ್ತ್ರ, ಗಣಕಯಂತ್ರ ವಿಜ್ಞಾನ ಹಾಗೂ ಯಂತ್ರಶಿಲ್ಪಶಾಸ್ತ್ರ, ವಿದ್ಯುತ್ ಯಂತ್ರಶಿಲ್ಪಶಾಸ್ತ್ರ, ವಿದ್ಯುತ್ ಯಂತ್ರಶಿಲ್ಪಶಾಸ್ತ್ರ (ಶಕ್ತಿ), ಭೌತಶಾಸ್ತ್ರದ ಯಂತ್ರಶಿಲ್ಪಶಾಸ್ತ್ರ, ಉತ್ಪಾದನಾ ಹಾಗೂ ಕೈಗಾರಿಕಾ ಯಂತ್ರಶಿಲ್ಪಶಾಸ್ತ್ರ, ಯಂತ್ರದ ಯಂತ್ರಶಿಲ್ಪಶಾಸ್ತ್ರ, ಹಾಗೂ ಟೆಕ್ಸ್ಟೈಲ್ ತಂತ್ರಜ್ಞಾನಗಳು ಒಳಗೊಂಡಿವೆ. ಎರಡು ವಿವಿಧ ಪದವಿ ಕಾರ್ಯಕ್ರಮವಾದ ಬಿ-ಟೆಕ್ ಹಾಗೂ ಎಮ್-ಟೆಕ್ ಕಾರ್ಯಕ್ರಮಗಳನ್ನು ಜೈವಿಕರಸಾಯನಿಕ ಹಾಗೂ ಜೈವಿಕ-ತಂತ್ರಜ್ಞಾನ, ರಸಾಯನಿಕ ಯಂತ್ರಶಿಲ್ಪಶಾಸ್ತ್ರ, ಗಣಕಯಂತ್ರ ವಿಜ್ಞಾನ ಹಾಗೂ ಯಂತ್ರಶಿಲ್ಪಶಾಸ್ತ್ರ ಮತ್ತು ವಿದ್ಯುತ್ ಯಂತ್ರಶಿಲ್ಪಶಾಸ್ತ್ರ ಗಳಲ್ಲಿ ನೀಡಲಾಗುತ್ತದೆ. ಸಂಯೋಜಿತ ಎಮ್-ಟೆಕ್ ಕಾರ್ಯಕ್ರಮವನ್ನು ಕೇವಲ ಗಣಿತ ಹಾಗೂ ಗಣಕದಲ್ಲಿ ನೀಡಲಾಗುತ್ತದೆ. ಈ ಕಾರ್ಯಕ್ರಮಗಳಿಗೆ ಪ್ರವೇಶವು ಜಂಟಿಯಾಗಿ ನಡೆಸುವ ಪ್ರವೇಶ ಪರೀಕ್ಷೆಗಳ ಆಧಾರದ ಮೇಲೆ (JEE) ಕೊಡಲಾಗುತ್ತದೆ, ಅದನ್ನು ಎಲ್ಲಾ ಏಳು ಭಾರತೀಯ ತಂತ್ರಜ್ಞಾನದ ಸಂಸ್ಥೆಗಳು ಸೇರಿ ಜಂಟಿಯಾಗಿ ನಡೆಸುತ್ತವೆ.

ಸ್ನಾತಕೋತ್ತರ ಕಾರ್ಯಕ್ರಮಗಳುಸಂಪಾದಿಸಿ

ಈ ಸಂಸ್ಥೆಯು ಸ್ನಾತಕೋತ್ತರ ಹಂತದ ಕಾರ್ಯಕ್ರಮಗಳನ್ನು ಪ್ರತಿಯೊಂದು ವಿವಿಧ ಯಂತ್ರಶಿಲ್ಪಶಾಸ್ತ್ರ ಈ ಸಂಸ್ಥಯಲ್ಲಿರುವ ಇಲಾಖೆಗಳಿಂದ ನೀಡಲಾಗುತ್ತದೆ ಹಾಗೂ ವಿವಿಧ ವಿಭಾಗಗಳಲ್ಲಿನ ವಿಷೇತೆಗಳಲ್ಲಿನ ಕಾರ್ಯಕ್ಷೇತ್ರದಲ್ಲಿ ನೀಡಲಾಗುತ್ತದೆ. ಇದರಲ್ಲಿ ಅನೇಕ ಅಂತರ-ವಿಭಾಗಗಳ ಕಾರ್ಯಕ್ರಮಗಳು ಸಹ ಒದಗಿಸಲಾಗುತ್ತದೆ. ಈ ಪಟ್ಟಿಯು ಎಷ್ಟು ದೊಡ್ಡದಾಗಿದೆಯೆಂದರೆ ಅವೆಲ್ಲವನ್ನೂ ಇಲ್ಲಿ ಹೆಸರಿಸುವುದು ಮೂರ್ಖತನವಾಗುತ್ತದೆ. ಸ್ನಾತಕೋತ್ತರ ಈ ಕಾರ್ಯಕ್ರಮಗಳಿಗೆ ಪ್ರವೇಶದ ಮಾನದಂಡಗಳು ಒಂದು ಕಾರ್ಯಕ್ರಮದಿಂದ ಮತ್ತೊಂದು ಕಾರ್ಯಕ್ರಮಕ್ಕೆ ಬದಲಾಗುತ್ತವೆ ಹಾಗೂ ತಮ್ಮದೇ ಆದ ಸಂಬಂಧಿಸಿದ ಇಲಾಖೆಗಳ ಯೋಜನೆಗೆ ಬಿಟ್ಟ ವಿಷಯಗಳು.

ಪ್ರವೇಶ ಪರೀಕ್ಷೆಗಳುಸಂಪಾದಿಸಿ

 1. JEE (ಜಂಟಿ ಪ್ರವೇಶ ಪರೀಕ್ಷೆಗಳು) - ಪದವಿ ಪೂರ್ವ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು (ಬಿ-ಟೆಕ್), MSc ಸಂಯೋಜಿತ ಕಾರ್ಯಕ್ರಮ, MTech ಸಂಯೋಜಿತ ಕಾರ್ಯಕ್ರಮ ಹಾಗೂ ಎರಡು ಪದವಿಗಳ MTech ಕಾರ್ಯಕ್ರಮ
 2. GATE (ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನೀರಿಂಗ್) - ಯಂತ್ರಶಿಲ್ಪಶಾತ್ರದಲ್ಲಿನ, ತಂತ್ರಜ್ಞಾನದಲ್ಲಿನ, ವಾಸ್ತುಶಿಲ್ಪಶಾಸ್ತ್ರದಲ್ಲಿನ, ವಿಜ್ಞಾನದಲ್ಲಿನ ಹಾಗೂ ಫಾರ್ಮಸಿಯಲ್ಲಿನ ಸ್ನಾತಕೋತ್ತರ ಕಾರ್ಯಕ್ರಮಗಳಿಗೋಸ್ಕರ ಪ್ರವೇಶಕ್ಕಾಗಿ.
 3. JMET (ಜಾಯಿಂಟ್ ಮ್ಯಾನೇಜ್ಮೆಂಟ್ ಎಂಟ್ರೆಂನ್ಸ್ ಟೆಸ್ಟ್) - ಕಾರ್ಯನಿರ್ವಹಣೆಯಲ್ಲಿನ ಸ್ನಾತಕೋತ್ತರ ಪದವಿ ಕಾರ್ಯಕ್ರಮಕ್ಕೋಸ್ಕರ PG ಪ್ರವೇಶ ಪರೀಕ್ಷೆ (MBA).
 4. JAM (ಜಾಯಿಂಟ್ ಅಡ್ಮಿಶನ್ ಟೆಸ್ಟ್)MSC ಗೆ ಹಾಗು BSc ನಂತರದ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆ.
 5. CEED (ಕಾಮನ್ ಎಂಟ್ರೆಂನ್ಸ್ ಎಕ್ಸಾಮಿನೇಶನ್ ಫಾರ್ ಡಿಸೈನ್) - ಮಾಸ್ಟರ್ಸ್ ಆಫ್ ಡಿಸೈನ್ (MDes) ಕಾರ್ಯಕ್ರಮಗಳಿಗೋಸ್ಕರ ಪ್ರವೇಶಕ್ಕಾಗಿ ಪರೀಕ್ಷೆಗಳು.

ಸಾಮಾಜಿಕ ಜೀವನದ ಸೇವೆಸಂಪಾದಿಸಿ

ರಾಷ್ಟ್ರೀಯ ಸೇವಾ ಯೋಜನೆಸಂಪಾದಿಸಿ

 • ಐಐಟಿ ದೆಹಲಿಯು [೩] ಐಐಟಿ ದೆಹಲಿ ವಿದ್ಯಾರ್ಥಿಗಳಿಂದ ಒಂದು ನೇತೃತ್ವದಲ್ಲಿ ಮಾನವತೆಯ ಸೇವೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ. ನಾವುಗಳು ಒಂದು ಸುಂದರವಾದ ಪ್ರಪಂಚವನ್ನು ಕಟ್ಟಲು ಕೆಲಸವನ್ನು ಮಾಡುತ್ತೇವೆ. ನಾವುಗಳು ಕೆಳವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಸ್ವಯಂ ಸೇವಾ ರಕ್ತದಾನದಲ್ಲಿ, ಮರಗಳನ್ನು ನೆಡುವ ಕಾರ್ಯಕ್ರಮದಲ್ಲಿ ಹಾಗೂ ವಿವಿಧ ರೀತಿಯ ಸಾಮಾಜಿಕ ಮತ್ತು ಪರಿಸರದ ಕಾರ್ಯಕ್ರಮಗಳಿಗೋಸ್ಕರ ಕೆಲಸ ಮಾಡುತ್ತೇವೆ.

ತಂತ್ರಜ್ಞಾನದ ಸಂಸ್ಥೆಗಳುಸಂಪಾದಿಸಿ

ACM ವಿದ್ಯಾರ್ಥಿ ಪರಿಚ್ಛೇಧ, ಐಐಟಿ ದೆಹಲಿಸಂಪಾದಿಸಿ

ಅಸೋಸಿಯೇಷನ್ ಫಾರ್ ಕಂಪ್ಯೂಟಿಂಗ್ ಮೆಶಿನರಿ ಒಂದು ವಿದ್ಯಾಭ್ಯಾಸದ ಹಾಗೂ ವೈಜ್ಞಾನಿಕ ಸಮಾಜ, ಅದು ಈ ಘೋಷಣೆಯೊಂದಿಗೆ ಕೆಲಸ ಮಾಡುತ್ತದೆ "ಅಭಿವೃದ್ಧಿ ಹೊಂದಿದ ಕಂಪ್ಯೂಟಿಂಗ್ ಒಂದು ವಿಜ್ಞಾನ ಹಾಗೂ ಉದ್ಯೋಗ". ACM ದ ಐಐಟಿ ದೆಹಲಿಯ ವಿದ್ಯಾರ್ಥಿ ಛಾಪ್ಟರ್[೪] 2002 ರಲ್ಲಿ ಸ್ಥಾಪಿಸಲ್ಪಟ್ಟಿತು, ಅದು ಐಐಟಿ ದೆಹಲಿಯ ಕಂಪ್ಯೂಟಿಂಗ್ ಕಮ್ಯುನಿಟಿಯ ಅಗತ್ಯತೆಗಳನ್ನು ಪೂರೈಸಲು ಸ್ಥಾಪಿಸಲ್ಪಟ್ಟಿತು. ಐಐಟಿ ದೆಹಲಿಯ ಛಾಪ್ಟರ್ ACM ವಿದ್ಯಾರ್ಥಿ ಛಾಪ್ಟರ್ ನ ಉತ್ಕೃಷ್ಟತೆಯ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಏಕೆಂದರೆ ಅದರ 2009-2010 ದಲ್ಲಿನ ಪ್ರಸಿದ್ಧ ಚಟುವಟಿಕೆಗಳಿಗೋಸ್ಕರ ಗೆದ್ದುಕೊಂಡಿತು.

ಐಐಟಿಯ ಪ್ರಮುಖ ಹಳೆಯ-ವಿದ್ಯಾರ್ಥಿಗಳುಸಂಪಾದಿಸಿ

ಉದ್ಯಮಸಂಪಾದಿಸಿ

ತೋಶಿತ್ ಭರಾರಾ, ITC ಲಿಮಿಟೆಡ್

ಇವನ್ನೂ ನೋಡಿಸಂಪಾದಿಸಿ

 • ಭಾರತದಲ್ಲಿನ ವಿಶ್ವವಿದ್ಯಾಲಯಗಳ ಪಟ್ಟಿ
 • IIT ಹಳೆಯ ವಿದ್ಯಾರ್ಥಿಗಳಿಂದ ಅಭಿವೃದ್ಧಿಗೊಳಿಸಲ್ಪಟ್ಟ ತಂತ್ರಾಂಶ
 • ಭಾರತದಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು
 • ಭಾರತದಲ್ಲಿನ ಶಿಕ್ಷಣ
 • ದೂರ ಶಿಕ್ಷಣ ಪರಿಷತ್ತು
 • ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಭಾರತ)
 • ಭಾರತಿ ಪ್ರತಿಷ್ಠಾನ

ಉಲ್ಲೇಖಗಳುಸಂಪಾದಿಸಿ

 1. ದೆಹಲಿಯಲ್ಲಿನ ಭಾರತೀಯ ತಂತ್ರಜ್ಞಾನದ ಸಂಸ್ಥೆಯ ಮಹಾವಿದ್ಯಾಲಯದ ಆವರಣ ಹಾಗೂ ಕಾರ್ಯಸ್ಥಳ
 2. ದೆಹಲಿಯಲ್ಲಿನ ಭಾರತೀಯ ತಂತ್ರಜ್ಞಾನದ ಸಂಸ್ಥೆಯ ಪಠ್ಯಕ್ರಮ
 3. [೧]
 4. "ACM ವಿದ್ಯಾರ್ಥಿ ಪರಿಚ್ಛೇದ, IIT ದೆಹಲಿ". Archived from the original on 2010-09-28. Retrieved 2010-10-26.

ಬಾಹ್ಯ ಕೊಂಡಿಗಳುಸಂಪಾದಿಸಿ

 1. REDIRECT Template:Indian Institutes of Technology