ಎಂಜಿನಿಯರಿಂಗ್ ಕ್ಷೇತ್ರವು ಇಚ್ಛಿತ ಉದ್ದೇಶ ಅಥವಾ ಸಂಶೋಧನೆಗಳ ಸುರಕ್ಷಿತ ನೆರವೇರಿಕೆಗೆ ಸಾಮಗ್ರಿಗಳು, ರಚನೆಗಳು, ಯಂತ್ರಗಳು, ಉಪಕರಣಗಳು, ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳ ವಿನ್ಯಾಸ ಮತ್ತು ಅನುಷ್ಠಾನಕ್ಕೆ ತಾಂತ್ರಿಕ, ವೈಜ್ಞಾನಿಕ ಮತ್ತು ಗಣಿತದ ಜ್ಞಾನವನ್ನು ಸಂಪಾದಿಸುವ ಮತ್ತು ಅಳವಡಿಸುವ ಶಿಕ್ಷಣ, ಕಲೆ ಮತ್ತು ವೃತ್ತಿಯಾಗಿದೆ. ವೃತ್ತಿಪರ ಅಭಿವೃದ್ಧಿ ಕುರಿತ ಅಮೆರಿಕನ್ ಎಂಜಿನಿಯರ್ಸ್ ಮಂಡಳಿಯು(ECPD, ABETಗಿಂತ ಪೂರ್ವದಲ್ಲಿದ್ದ ಮಂಡಳಿ)ಎಂಜಿನಿಯರಿಂಗ್ ಶಬ್ದವನ್ನು ಕೆಳಗಿನಂತೆ ವ್ಯಾಖ್ಯಾನಿಸಿದೆ:

ವಾಟ್ ಉಗಿ ಎಂಜಿನ್,ಕೈಗಾರಿಕಾ ಕ್ರಾಂತಿಯ ಪ್ರಮುಖ ಚಾಲನಾ ಶಕ್ತಿ ಆಧುನಿಕ ಇತಿಹಾಸದಲ್ಲಿ ಎಂಜಿನಿಯರಿಂಗ್ ಪ್ರಾಮುಖ್ಯತೆ ಬಗ್ಗೆ ಗಮನಸೆಳೆದಿದೆ.ಸ್ಪೇನ್, ಮ್ಯಾಡ್ರಿಡ್‌ನ ETSIIM ಮುಖ್ಯ ಕಟ್ಟಡದಲ್ಲಿ ಈ ಮಾದರಿಯನ್ನು ಪ್ರದರ್ಶನಕ್ಕಿಡಲಾಗಿದೆ.

ರಚನೆಗಳು, ಯಂತ್ರಗಳು,ಉಪಕರಣ ಅಥವಾ ಉತ್ಪಾದನೆ ಕಾರ್ಯವಿಧಾನಗಳು ಅಥವಾ ಕೆಲಸಗಳ ವಿನ್ಯಾಸ ಅಥವಾ ಅಭಿವೃದ್ಧಿಗೆ ವೈಜ್ಞಾನಿಕ ತತ್ವಗಳ ಸೃಜನಾತ್ಮಕ ಅಳವಡಿಕೆಯಿಂದ ಅವುಗಳನ್ನು ಪ್ರತ್ಯೇಕವಾಗಿ ಅಥವಾ ಸಾಮೂಹಿಕವಾಗಿ ಬಳಸಿಕೊಳ್ಳುವುದು. ಅಥವಾ ಅವುಗಳ ವಿನ್ಯಾಸದ ಪೂರ್ಣ ಅರಿವಿನೊಂದಿಗೆ ಅದರ ನಿರ್ಮಾಣ ಅಥವಾ ನಿರ್ವಹಣೆ; ಅಥವಾ ನಿರ್ದಿಷ್ಟ ನಿರ್ವಹಣಾ ಪರಿಸ್ಥಿತಿಗಳ ಅಡಿಯಲ್ಲಿ ಅದರ ನಡವಳಿಕೆಯನ್ನು ಮುಂಗಾಣುವುದು;ಎಲ್ಲವೂ ಇಚ್ಛಿತ ನಿರ್ವಹಣೆ, ಕಾರ್ಯಾಚರಣೆಯ ಆರ್ಥಿಕತೆ ಮತ್ತು ಜೀವ ಮತ್ತು ಆಸ್ತಿಪಾಸ್ತಿಯ ಸುರಕ್ಷತೆಗೆ ಸಂಬಂಧಿಸಿದೆ.[][][]

ಎಂಜಿನಿಯರಿಂಗ್ ಅಭ್ಯಸಿಸುವ ವ್ಯಕ್ತಿಯನ್ನು ಎಂಜಿನಿಯರ್ ಎಂದು ಕರೆಯುತ್ತಾರೆ.ಅದಕ್ಕೆ ಪರವಾನಗಿ ಪಡೆದಿರುವವರು ವೃತ್ತಿಪರ ಎಂಜಿನಿಯರ್,ಚಾರ್ಟರ್ಡ್ ಎಂಜಿನಿಯರ್, ಇನ್‌ಕಾರ್ಪೋರೇಟೆಡ್ ಎಂಜಿನಿಯರ್ ಅಥವಾ ಯುರೋಪಿಯನ್ ಎಂಜಿನಿಯರ್ ಮುಂತಾದ ಔಪಚಾರಿಕ ಹೆಚ್ಚಿನ ಹುದ್ದೆಗಳನ್ನು ಹೊಂದಿರುತ್ತಾರೆ. ಎಂಜಿನಿಯರಿಂಗ್ ವಿಶಾಲ ವಿಭಾಗವು ಹೆಚ್ಚು ವ್ಯಾಪ್ತಿಯ ವಿಶೇಷ ಉಪವಿಭಾಗಗಳನ್ನು ಒಳಗೊಂಡಿದೆ, ಪ್ರತಿಯೊಂದು ಕೆಲವು ಅಳವಡಿಕೆಯ ಕ್ಷೇತ್ರಗಳಿಗೆ ಮತ್ತು ತಂತ್ರಜ್ಞಾನದ ನಿರ್ದಿಷ್ಟ ಕ್ಷೇತ್ರಗಳಿಗೆ ಹೆಚ್ಚು ಮಹತ್ವ ನೀಡುವುದಾಗಿದೆ.

ಇತಿಹಾಸ

ಬದಲಾಯಿಸಿ
 
ಆಫ್‌ಶೋರ್ ಗಾಳಿ ಟರ್ಬೈನ್‌ಗಳು ಆಧುನಿಕ ಬಹು ವಿಭಾಗಗಳ ಎಂಜಿನಿಯರಿಂಗ್ ಸಮಸ್ಯೆಯನ್ನು ಪ್ರತಿನಿಧಿಸುತ್ತದೆ.

ಪ್ರಾಚೀನ ಕಾಲದಿಂದಲೇ ಎಂಜಿನಿಯರಿಂಗ್ ಪರಿಕಲ್ಪನೆ ಅಸ್ತಿತ್ವದಲ್ಲಿದ್ದು, ಮಾನವರು ರಾಟೆ,ಸನ್ನೆಕೋಲು ಮತ್ತು ಚಕ್ರ ಮುಂತಾದ ಮ‌ೂಲಭೂತ ಸಂಶೋಧನೆಗಳನ್ನು ರೂಪಿಸಿದ್ದರು. ಎಂಜಿನಿಯರಿಂಗ್ ಆಧುನಿಕ ವ್ಯಾಖ್ಯಾನದೊಂದಿಗೆ ಪ್ರತಿಯೊಂದು ಸಂಶೋಧನೆಯು ಹೊಂದಿಕೆಯಾಗಿದ್ದು,ಉಪಯುಕ್ತ ಸಾಧನಗಳು ಮತ್ತು ವಸ್ತುಗಳ ಅಭಿವೃದ್ಧಿಗೆ ಮ‌ೂಲಭೂತ ಯಾಂತ್ರಿಕ ತತ್ವಗಳನ್ನು ಬಳಸಿಕೊಳ್ಳುವುದಾಗಿದೆ. ಎಂಜಿನಿಯರಿಂಗ್ ಪದವು ಸ್ವಯಂ ವ್ಯುತ್ಪತ್ತಿಗೊಂಡಿದ್ದು,ಎಂಜಿನಿಯರ್ ಪದದಿಂದ ಹುಟ್ಟಿಕೊಂಡಿದೆ. ಅದು ಸ್ವತಃ 1325ರ ಹಿಂದಿನ ದಿನಾಂಕದ್ದಾಗಿದೆ. ' ಆ ಕಾಲದಲ್ಲಿ ಎಂಜಿನಿಯರ್(ವಾಚ್ಯಾರ್ಥದಲ್ಲಿ,ಯಂತ್ರ ದ ಕಾರ್ಯನಿರ್ಹವಣೆ ಮಾಡುವವರು)ಮೊದಲಿಗೆ "ಮಿಲಿಟರಿ ಯಂತ್ರಗಳ ನಿರ್ಮಾಣಕಾರ"ರಿಗೆ ಉಲ್ಲೇಖಿಸಲಾಗುತ್ತಿತ್ತು.[] ಈಗ ಅಪ್ರಚಲಿತವಾಗಿರುವ ಈ ಅರ್ಥದಲ್ಲಿ ಮಿಲಿಟರಿ ಯಂತ್ರವನ್ನು ಉಲ್ಲೇಖಿಸಲಾಗುತ್ತದೆ. i.e., ಯುದ್ಧದಲ್ಲಿ ಬಳಸಿದ ಯಾಂತ್ರಿಕ ಸಾಧನವಾಗಿದೆ.(ಉದಾಹರಣೆಗೆ,ಕವಣೆ ಯಂತ್ರ) "ಯಂತ್ರ" ಪದವು ಸ್ವತಃ ಹಳೆಯ ಮ‌ೂಲದಾಗಿದ್ದು, ಕಡೆಯದಾಗಿ ಲ್ಯಾಟಿನ್ ಇಂಗೇನಿಯಂ (c. 1250)ನಿಂದ ಹುಟ್ಟಿಕೊಂಡಿದೆ. ಅದರ ಅರ್ಥ "ಸ್ವಾಭಾವಿಕ ಗುಣ,ವಿಶೇಷವಾಗಿ ಮಾನಸಿಕ ಶಕ್ತಿ, ಆದ್ದರಿಂದ ಬುದ್ಧಿವಂತಿಕೆಯ ಸಂಶೋಧನೆ".[] ನಂತರ,ನಾಗರಿಕ ಉಪಯೋಗಿ ರಚನೆಗಳಾದ ಸೇತುವೆಗಳು ಮತ್ತು ಕಟ್ಟಡಗಳ ವಿನ್ಯಾಸವು ತಾಂತ್ರಿಕ ವಿಭಾಗವಾಗಿ ಪಕ್ವತೆ ಪಡೆಯುತ್ತಿದ್ದಂತೆ,ಮಿಲಿಟರಿಯೇತರ ಯೋಜನೆಗಳು ಮುಂತಾದವುಗಳ ನಿರ್ಮಾಣದಲ್ಲಿ ವಿಶೇಷ ತಜ್ಞರು ಮತ್ತು ಮಿಲಿಟರಿ ಎಂಜಿನಿಯರಿಂಗ್ ಹಳೆಯ ವಿಭಾಗದಲ್ಲಿ ಒಳಗೊಂಡವರ ನಡುವೆ ವ್ಯತ್ಯಾಸ ಕಲ್ಪಿಸುವ ಮಾರ್ಗವಾಗಿ ಸಿವಿಲ್ ಎಂಜಿನಿಯರಿಂಗ್ ಪದ ಶಬ್ದಭಂಡಾರವನ್ನು ಪ್ರವೇಶಿಸಿತು.[] (ಎಂಜಿನಿಯರಿಂಗ್ ಮ‌ೂಲ ಅರ್ಥವು ಈಗ ಹೆಚ್ಚಾಗಿ ಅಪ್ರಚಲಿತವಾಗಿದ್ದು,ಪ್ರಸಕ್ತ ದಿನದಲ್ಲೂ ಉಳಿದಿರುವ ಮಿಲಿಟರಿ ಎಂಜಿನಿಯರಿಂಗ್ ಕಾರ್ಪ್ಸ್ ಉದಾ,U.S.ಎಂಜಿನಿಯರುಗಳ ಸೇನಾ ತುಕಡಿ ಮುಂತಾದವು ಗಮನಿಸತಕ್ಕ ಅಪವಾದಗಳು).'

ಪ್ರಾಚೀನ ಯುಗ

ಬದಲಾಯಿಸಿ

ಫರೋಸ್ ಆಫ್ ಅಲೆಕ್ಸಾಂಡ್ರಿಯ, ಈಜಿಪ್ಟ್ ಪಿರಮಿಡ್‌ಗಳು, ಬೇಬಿಲೋನ್ ತೂಗುವ ಉದ್ಯಾನವನಗಳು,ಗ್ರೀಸ್‌ಆಕ್ರೋಪೊಲೀಸ್(ದುರ್ಗ) ಮತ್ತು ಪಾರ್ಥೆನಾನ್(ಗ್ರೀಕ್ ದೇವತೆ ಅಥೆನಾ ಮಂದಿರ), ರೋಮನ್ ಅಕ್ವೆಡಕ್ಟ್‌ಗಳು(ಸೇತುವೆಗಳು ಅಥವಾ ಕಾಲುವೆಗಳು),ವಿಯ ಆಪ್ಪಿಯ(ರೋಮ್ ರಸ್ತೆಗಳು)ಮತ್ತು ಕೊಲೋಸಿಯಂ(ರಂಗಮಂದಿರ),ಟಿಯೋಟಿಹುಕಾನ್(ಪಿರಮಿಡ್ ರಚನೆಗಳಿರುವ ಸ್ಥಳ)ಮಾಯಾನ್ ನಗರಗಳು ಮತ್ತು ಪಿರಮಿಡ್‌ಗಳು, ಇಂಕಾ ಮತ್ತು ಆಜ್ಟೆಕ್ ಸಾಮ್ರಾಜ್ಯಗಳು, ಚೀನದ ಮಹಾಗೋಡೆ,ಶ್ರೀಲಂಕಾಜೇಟವನರಮಯ ಮತ್ತು ಯೋಡಾ ಕಾಲುವೆಗಳು ಇನ್ನೂ ಅನೇಕ ವಿನ್ಯಾಸಗಳ ನಡುವೆ ಪ್ರಾಚೀನ ಸಿವಿಲ್ ಮತ್ತು ಮಿಲಿಟರಿ ಎಂಜಿನಿಯರುಗಳ ದಕ್ಷತೆ ಮತ್ತು ಪರಿಣತಿಗೆ ಸಾಕ್ಷಿಯಾಗಿ ನಿಂತಿವೆ. ಅತ್ಯಂತ ಪೂರ್ವಕಾಲದ ಸಿವಿಲ್ ಎಂಜಿನಿಯರ್ ಇಮ್‌ಹಾಟೆಪ್ ಎಂದು ಹೆಸರಾಗಿದ್ದರು.[] ಡಿಜೋಸರ್ ಫರೊ(ಈಜಿಪ್ಟ್ ದೊರೆ)ನ ಅಧಿಕಾರಿಗಳಲ್ಲಿ ಒಬ್ಬರಾದ ಅವರು,ಈಜಿಪ್ಟ್‌ಸಕ್ಕಾರಾದಲ್ಲಿ 2630-2611 BCಯ ಆಸುಪಾಸಿನಲ್ಲಿ ಡಿಜೋಸರ್ ಪಿರಮಿಡ್(ಮೆಟ್ಟಿಲು ಪಿರಮಿಡ್)ನಿರ್ಮಾಣದ ವಿನ್ಯಾಸ ಮತ್ತು ಮೇಲುಸ್ತುವಾರಿಯನ್ನು ಬಹುಶಃ ವಹಿಸಿದ್ದಿರಬಹುದು.[] ವಾಸ್ತುವಿನ್ಯಾಸದಲ್ಲಿ ಮೊದಲಿಗೆ ಹೆಸರುವಾಸಿಯಾದ ಆಧಾರಸ್ತಂಭದ ಬಳಕೆಗೆ ಅವರು ಜವಾಬ್ದಾರರಾಗಿರಬಹುದು.[ಸೂಕ್ತ ಉಲ್ಲೇಖನ ಬೇಕು] ಪ್ರಾಚೀನ ಗ್ರೀಸ್ ನಾಗರಿಕ ಮತ್ತು ಮಿಲಿಟರಿ ವ್ಯಾಪ್ತಿ ಎರಡರಲ್ಲೂ ಯಂತ್ರಗಳನ್ನು ಅಭಿವೃದ್ಧಿಪಡಿಸಿತು. ಇತಿಹಾಸದಲ್ಲಿ ಯಾಂತ್ರಿಕ ಕಂಪ್ಯೂಟರ್‌ನ ಮುಂಚಿನ ಗೊತ್ತಾದ ಮಾದರಿ ಆಂಟಿಕಿತೀರ ಯಂತ್ರವಿನ್ಯಾಸ[] ಮತ್ತು ಆರ್ಕಿಮಿಡೀಸ್ ಯಾಂತ್ರಿಕ ಸಂಶೋಧನೆಗಳು ಮುಂಚಿನ ಯಾಂತ್ರಿಕ ಎಂಜಿನಿಯರಿಂಗ್‌‌ಗೆ ಉದಾಹರಣೆಗಳು. ಆರ್ಕಿಮಿಡೀಸ್ ಕೆಲವು ಸಂಶೋಧನೆಗಳು ಮತ್ತು ಅಂಟಿಕಿತೀರಾ ಯಂತ್ರ ವಿನ್ಯಾಸಕ್ಕೆ ವ್ಯತ್ಯಾಸದ ಗೇರಿಂಗ್ ಮತ್ತು ಅಧಿಚಕ್ರೀಯ ಗೇರಿಂಗ್‌ನ ಅತ್ಯಾಧುನಿಕ ಜ್ಞಾನ ಅಗತ್ಯವಿತ್ತು.ಇವರೆಡು ಯಂತ್ರ ಸಿದ್ಧಾಂತದಲ್ಲಿ ಮುಖ್ಯ ತತ್ವಗಳಾಗಿದ್ದು ಕೈಗಾರಿಕೆ ಕ್ರಾಂತಿಯ ಗೇರ್ ರೈಲು ವಿನ್ಯಾಸಕ್ಕೆ ನೆರವಾಯಿತು ಮತ್ತು ರೋಬೊಟಿಕ್ಸ್ ಮತ್ತು ವಾಹನೋದ್ಯಮ ಎಂಜಿನಿಯರಿಂಗ್‌ನ ವೈವಿಧ್ಯಮಯ ಕ್ಷೇತ್ರಗಳಲ್ಲಿ ಈಗಲೂ ವ್ಯಾಪಕವಾಗಿ ಬಳಸಲಾಗಿದೆ.[] ಚೀನ, ಗ್ರೀಕ್ ಮತ್ತು ರೋಮನ್ ಸೇನೆಗಳು ಫಿರಂಗಿ ಮುಂತಾದ ಜಟಿಲ ಮಿಲಿಟರಿ ಯಂತ್ರಗಳು ಮತ್ತು ಸಂಶೋಧನೆಗಳನ್ನು ಬಳಸಿಕೊಂಡಿತು. 4ನೇ ಶತಮಾನದ B.C.ಯಲ್ಲಿ ಗ್ರೀಕರು ಅವುಗಳನ್ನು ಅಭಿವೃದ್ಧಿಪಡಿಸಿದರು,ಟ್ರೈರೇಮ್ (ಯುದ್ಧನೌಕೆ),ಬ್ಯಾಲಿಸ್ಟಾ (ಯುದ್ಧಾಸ್ತ್ರ) ಮತ್ತು ಕವಣೆ ಯಂತ್ರ.[] ಮಧ್ಯಕಾಲೀನ ಯುಗದಲ್ಲಿ,ಟ್ರೆಬ್ಯುಚೆಟ್ ಅಭಿವೃದ್ಧಿಪಡಿಸಲಾಯಿತು.

ಪುನರುಜ್ಜೀವನ ಯುಗ

ಬದಲಾಯಿಸಿ

ಪ್ರಥಮ ಎಲೆಕ್ಟ್ರಿಕಲ್ ಎಂಜಿನಿಯರ್ ವಿಲಿಯಂ ಗಿಲ್ಬರ್ಟ್ ಡಿ ಮ್ಯಾಗ್ನೆಟೆನ 1600 ಪ್ರಕಟಣೆಯೊಂದಿಗೆವಿದ್ಯುತ್ ಪದದ ಪ್ರವರ್ತಕರಾಗಿದ್ದಾರೆ.[೧೦] ಪ್ರಥಮ ಉಗಿ ಯಂತ್ರವನ್ನು 1698ರಲ್ಲಿ ,ಯಾಂತ್ರಿಕ ಎಂಜಿನಿಯರ್ ಥಾಮಸ್ ಸವೇರಿ ನಿರ್ಮಿಸಿದರು.[೧೧] ಈ ಉಪಕರಣದ ಅಭಿವೃದ್ಧಿಯಿಂದ ಮುಂದಿನ ದಶಕಗಳ ಕೈಗಾರಿಕೆ ಕ್ರಾಂತಿಗೆ ದಾರಿಕಲ್ಪಿಸಿತು ಮತ್ತು ಸಮೂಹ ಉತ್ಪಾದನೆಯ ಆರಂಭಕ್ಕೆ ಅವಕಾಶವಾಯಿತು. ಎಂಜಿನಿಯರಿಂಗ್ ಹದಿನೆಂಟನೆ ಶತಮಾನದಲ್ಲಿ ಒಂದು ವೃತ್ತಿಯಾಗಿ ಬೆಳೆಯುವುದರೊಂದಿಗೆ,ಇದು ಹೆಚ್ಚು ಸೂಕ್ಷ್ಮವಾಗಿ ಗಣಿತ ಮತ್ತು ವಿಜ್ಞಾನವನ್ನು ಒಳಗೊಂಡ ಕ್ಷೇತ್ರಗಳನ್ನು ಅಳವಡಿಸಿಕೊಂಡಿತು. ಇದೇರೀತಿ ಮಿಲಿಟರಿ ಮತ್ತು ಸಿವಿಲ್(ಕಟ್ಟಡ ನಿರ್ಮಾಣ) ಎಂಜಿನಿಯರಿಂಗ್ ಜತೆ ಯಾಂತ್ರಿಕ ಕಲೆಗಳು ಎಂದು ಆಗ ಹೆಸರಾಗಿದ್ದ ಕ್ಷೇತ್ರಗಳನ್ನು ಕೂಡ ಎಂಜಿನಿಯರಿಂಗ್‌ನಲ್ಲಿ ಸಂಯೋಜಿಸಲಾಯಿತು.

ಆಧುನಿಕ ಯುಗ

ಬದಲಾಯಿಸಿ

1800ರ ದಶಕದಲ್ಲಿ ಅಲೆಸಾಂಡ್ರೊ ವೋಲ್ಟಾ ಪ್ರಯೋಗಗಳಲ್ಲಿ,ಮೈಕೇಲ್ ಫ್ಯಾರೆಡೆ,ಜಾರ್ಜ್ ಓಹಮ್ ಮತ್ತಿತರರ ಪ್ರಯೋಗಗಳು ಮತ್ತು 1872ರಲ್ಲಿ ವಿದ್ಯುತ್ ಮೋಟರ್ ಸಂಶೋಧನೆಯಲ್ಲಿ ವಿದ್ಯುತ್ ಎಂಜಿನಿಯರಿಂಗ್ ಮ‌ೂಲಗಳನ್ನು ಪತ್ತೆಮಾಡಬಹುದು. ಜೇಮ್ಸ್ ಮ್ಯಾಕ್ಸ್‌ವೆಲ್ ಮತ್ತು ಹೆನ್ರಿಕ್ ಹರ್ಟ್ಜ್ ಅವರ 19ನೇ ಶತಮಾನದ ಕೆಲಸಗಳು ವಿದ್ಯುನ್ಮಾನ ಕ್ಷೇತ್ರದ ಬೆಳವಣಿಗೆಗೆ ಕಾರಣವಾಯಿತು. ನಿರ್ವಾತ ಟ್ಯೂಬ್ ಮತ್ತು ಟ್ರಾನ್ಸಿಸ್ಟರ್ ಸಂಶೋಧನೆಗಳಿಂದ ವಿದ್ಯುನ್ಮಾನ ಶಾಸ್ತ್ರದ ಬೆಳವಣಿಗೆಯು ವೇಗದ ಗತಿಯನ್ನು ಯಾವ ಮಟ್ಟಕ್ಕೆ ಪಡೆಯಿತೆಂದರೆ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್‌ಗಳು ಪ್ರಸಕ್ತ ಯಾವುದೇ ಇತರ ಎಂಜಿನಿಯರಿಂಗ್ ವಿಭಾಗದ ಸಹೋದ್ಯೋಗಿಗಳಿಗಿಂತ ಸಂಖ್ಯೆಯಲ್ಲಿ ಮಿಗಿಲಾಗಿದ್ದಾರೆ.[] ಥಾಮಸ್ ಸವೇರಿ ಮತ್ತು ಸ್ಕಾಟಿಷ್ ಎಂಜಿನಿಯರ್ ಜೇಮ್ಸ್ ವಾಟ್ ಸಂಶೋಧನೆಗಳಿಂದ ಆಧುನಿಕ ಯಾಂತ್ರಿಕ ಎಂಜಿನಿಯರಿಂಗ್‌ ಬೆಳವಣಿಗೆಗೆ ಕಾರಣವಾಯಿತು. ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ವಿಶೇಷ ಯಂತ್ರಗಳು ಮತ್ತು ಅವುಗಳ ಸಾಧನಗಳ ನಿರ್ವಹಣೆ ಅಭಿವೃದ್ಧಿಯಿಂದ ಯಾಂತ್ರಿಕ ವಿಜ್ಞಾನವು ತನ್ನ ಹುಟ್ಟುಸ್ಥಳವಾದ ಬ್ರಿಟನ್ ಮತ್ತು ವಿದೇಶಗಳಲ್ಲಿ ಎರಡೂ ಕಡೆ ತ್ವರಿತಗತಿಯ ಬೆಳವಣಿಗೆಗೆ ದಾರಿ ಕಲ್ಪಿಸಿತು.[] ತನ್ನ ಪ್ರತಿರೂಪವಾದ ಯಾಂತ್ರಿಕ ಎಂಜಿನಿಯರಿಂಗ್ ರೀತಿಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಕೂಡ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿ ಅಭಿವೃದ್ಧಿಗೊಂಡಿತು.[] ಕೈಗಾರಿಕಾ ಉತ್ಪಾದನೆಗೆ ಹೊಸ ಉಪಕರಣಗಳು ಮತ್ತು ಹೊಸ ಕಾರ್ಯವಿಧಾನಗಳಿಗೆ ಬೇಡಿಕೆ ಉಂಟಾಯಿತು ಮತ್ತು 1880ರಲ್ಲಿ ರಾಸಾಯನಿಕಗಳ ದೊಡ್ಡ ಪ್ರಮಾಣದ ಉತ್ಪಾದನೆಯ ಅಗತ್ಯ ಕಂಡುಬಂದು, ಹೊಸ ಕೈಗಾರಿಕೆ ಘಟಕಗಳ ಅಭಿವೃದ್ಧಿ ಮತ್ತು ದೊಡ್ಡ ಪ್ರಮಾಣದಲ್ಲಿ ರಾಸಾಯನಿಕಗಳ ಉತ್ಪಾದನೆಗೆ ಹೊಸ ಕೈಗಾರಿಕೆಯನ್ನು ಸೃಷ್ಟಿಸಿ ಮುಡುಪಾಗಿಡಲಾಯಿತು.[] ಈ ರಾಸಾಯನಿಕ ಘಟಕಗಳ ಮತ್ತು ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸುವುದು ರಾಸಾಯನಿಕ ಎಂಜಿನಿಯರ್ ಪಾತ್ರವಾಗಿತ್ತು.[] ವೈಮಾನಿಕ ಎಂಜಿನಿಯರಿಂಗ್ ವಿಮಾನದ ವಿನ್ಯಾಸಕ್ಕೆ ಸಂಬಂಧಿಸಿದ ವಿಭಾಗವಾಗಿದ್ದು, ಬಾಹ್ಯಾಕಾಶ ಎಂಜಿನಿಯರಿಂಗ್ ಹೆಚ್ಚು ಅತ್ಯಾಧುನಿಕ ಪದವಾಗಿದ್ದು, ಬಾಹ್ಯಾಕಾಶ ನೌಕೆಯ ವಿನ್ಯಾಸವನ್ನು ಸೇರಿಸಿಕೊಂಡು ಈ ವಿಭಾಗವು ವಿಸ್ತರಣೆಗೊಂಡಿದೆ.[೧೨] ಇದರ ಮ‌ೂಲಗಳನ್ನು 19ನೇ ಶತಮಾನದಿಂದ 20ನೇ ಶತಮಾನದ ತಿರುವಿನಲ್ಲಿ ವೈಮಾನಿಕ ಪ್ರವರ್ತಕರಲ್ಲಿ ಪತ್ತೆಮಾಡಬಹುದು. ಆದರೂ ಸರ್ ಜಾರ್ಜ್ ಕೇಲೆಯ ಕಾರ್ಯದ ದಿನಾಂಕವನ್ನು 18ನೇ ಶತಮಾನದ ಕೊನೆಯ ದಶಕದ್ದೆಂದು ಗುರುತಿಸಲಾಗಿದೆ.

ವೈಮಾನಿಕ ಎಂಜಿನಿಯರಿಂಗ್ ಪೂರ್ವ ಜ್ಞಾನವು ಬಹುತೇಕ ಪ್ರಾಯೋಗಿಕವಾಗಿದ್ದು, ಇತರ ಎಂಜಿನಿಯರಿಂಗ್ ವಿಭಾಗಗಳಿಂದ ಕೆಲವು ಪರಿಕಲ್ಪನೆಗಳನ್ನು ಮತ್ತು ಪರಿಣತಿಗಳನ್ನು ಆಮದುಮಾಡಿಕೊಳ್ಳಲಾಯಿತು.[೧೩]

ರೈಟ್ ಸಹೋದರರ ಯಶಸ್ವಿ ವೈಮಾನಿಕ ಹಾರಾಟಗಳ ಒಂದು ದಶಕದ ಬಳಿಕವೇ,1920ರ ದಶಕಗಳಲ್ಲಿ ವಿಶ್ವಯುದ್ಧ I ಮಿಲಿಟರಿ ವಿಮಾನದ ಅಭಿವೃದ್ಧಿಯೊಂದಿಗೆ ವೈಮಾನಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವ್ಯಾಪಕ ಬೆಳವಣಿಗೆ ಕಂಡುಬಂತು. ಏತನ್ಮಧ್ಯೆ, ಸೈದ್ದಾಂತಿಕ ಬೌತಶಾಸ್ತ್ರವನ್ನು ಪ್ರಯೋಗಗಳೊಂದಿಗೆ ಸಂಯೋಜಿಸುವ ಮ‌ೂಲಕ ಮ‌ೂಲಭೂತ ತಳಹದಿಯ ವಿಜ್ಞಾನಕ್ಕೆ ಸಂಶೋಧನೆ ಮುಂದುವರಿಸಲಾಯಿತು. ಎಂಜಿನಿಯರಿಂಗ್‌ನಲ್ಲಿ ಪ್ರಥಮ PhD(ತಾಂತ್ರಿಕವಾಗಿ ಅನ್ವಯಿಕ ವಿಜ್ಞಾನ ಮತ್ತು ಎಂಜಿನಿಯರಿಂಗ್ )ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೀಡಲಾಗಿದ್ದು, 1863ರಲ್ಲಿ ಯೇಲೆ ವಿಶ್ವವಿದ್ಯಾನಿಲಯವಿಲಿಯರ್ಡ್ ಗಿಬ್ಸ್ ಅವರಿಗೆ ವಿತರಿಸಲಾಯಿತು; ಇದು U.S.ನಲ್ಲಿ ವಿಜ್ಞಾನದಲ್ಲಿ ನೀಡಿದ ಎರಡನೇ PhD ಕೂಡ ಆಗಿದೆ.[೧೪] ಕಂಪ್ಯೂಟರ್ ತಂತ್ರಜ್ಞಾನವು 1990ರಲ್ಲಿ ಬೆಳವಣಿಗೆ ಸಾಧಿಸಿದ್ದರಿಂದ, ಕಂಪ್ಯೂಟರ್ ಎಂಜಿನಿಯರ್ ಅಲನ್ ಎಂಟಾಗೆ ಪ್ರಥಮ ಶೋಧ ಯಂತ್ರವನ್ನು ನಿರ್ಮಿಸಿದರು.

ಎಂಜಿನಿಯರಿಂಗ್ ಮುಖ್ಯ ಶಾಖೆಗಳು

ಬದಲಾಯಿಸಿ

ಎಂಜಿನಿಯರಿಂಗ್ ವಿಜ್ಞಾನದ ರೀತಿಯಲ್ಲಿ ವಿಶಾಲವಾದ ವಿಭಾಗವಾಗಿದ್ದು,ಅನೇಕ ಉಪ-ವಿಭಾಗಗಳಾಗಿ ಒಡೆದಿವೆ. ಈ ವಿಭಾಗಗಳು ಎಂಜಿನಿಯರಿಂಗ್ ಕಾರ್ಯದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿವೆ. ಆರಂಭದಲ್ಲಿ ಎಂಜಿನಿಯರ್ ನಿರ್ದಿಷ್ಟ ವಿಭಾಗದಲ್ಲಿ ತರಬೇತಿ ಪಡೆದರೂ,ಎಂಜಿನಿಯರ್ ವೃತ್ತಿಜೀವನದುದ್ದಕ್ಕೂ ಅನೇಕ ರೂಪರೇಖೆಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಬಳಿಕ ಅವರು ಬಹುವಿಭಾಗಗಳ ಪರಿಣತಿ ಗಳಿಸಬಹುದು. ಐತಿಹಾಸಿಕವಾಗಿ ಎಂಜಿನಿಯರಿಂಗ್ ಮುಖ್ಯ ವಿಭಾಗಗಳನ್ನು ಕೆಳಗಿನಂತೆ ವಿಭಜಿಸಲಾಗಿದೆ:[೧೨][೧೫]

ತಂತ್ರಜ್ಞಾನದ ವೇಗದ ಮುನ್ನಡೆಯಿಂದ ಅನೇಕ ಹೊಸ ಕ್ಷೇತ್ರಗಳು ಪ್ರಾಮುಖ್ಯತೆ ಗಳಿಸುತ್ತಿವೆ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್, ಸಾಫ್ಟ್‌ವೇರ್ ಎಂಜಿನಿಯರಿಂಗ್, ನ್ಯಾನೊಟೆಕ್ನಾಲಜಿ,ಘರ್ಷಣ ವಿಜ್ಞಾನ, ಅಣ್ವಿಕ ವಿಜ್ಞಾನ,ಮೆಕಾಟ್ರಾನಿಕ್ಸ್ ಮುಂತಾದ ಶಾಖೆಗಳು ಬೆಳವಣಿಗೆ ಸಾಧಿಸುತ್ತಿದೆ. ಈ ಹೊಸ ವಿಭಾಗಗಳು ಕೆಲವು ಭಾರಿ ಸಾಂಪ್ರದಾಯಿಕ ಕ್ಷೇತ್ರಗಳ ಜತೆ ಸೇರಿ ಯಾಂತ್ರಿಕ ಎಂಜಿನಿಯರಿಂಗ್ ಮತ್ತು ಮೆಕಾಟ್ರಾನಿಕ್ಸ್ ಹಾಗೂ ವಿದ್ಯುತ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಮುಂತಾದ ಹೊಸ ಶಾಖೆಗಳನ್ನು ರಚಿಸಿಕೊಳ್ಳುತ್ತವೆ. ಹೊಸ ಅಥವಾ ಹೊರಹೊಮ್ಮುವ ಕ್ಷೇತ್ರದ ಅಳವಡಿಕೆಯನ್ನು ತಾತ್ಕಾಲಿಕವಾಗಿ ಪ್ರಸಕ್ತ ವಿಭಾಗಗಳಲ್ಲಿ ಕ್ರಮವ್ಯತ್ಯಾಸ ಅಥವಾ ಉಪ-ವರ್ಗದಂತೆ ವ್ಯಾಖ್ಯಾನಿಸಲಾಯಿತು; ಹೊಸ "ಶಾಖೆ"ಯಾಗಿ ವರ್ಗೀಕರಣಗೊಳ್ಳಲು ಉಪ-ಕ್ಷೇತ್ರ ದೊಡ್ಡದಾಗಿ ಸಾಕಷ್ಟು ಪ್ರಾಮುಖ್ಯತೆ ಪಡೆಯುವ ತನಕ ಅಸ್ಪಷ್ಟ ಮಧ್ಯವರ್ತಿ ಕ್ಷೇತ್ರವಾಗಿ ಉಳಿಯುತ್ತದೆ. ವಿಭಾಗಗಳು ಮತ್ತು ಕಾರ್ಯಕ್ರಮಗಳನ್ನು ಹೊಸ ಕ್ಷೇತ್ರದಲ್ಲಿ ಸ್ಥಾಪಿಸಲು ಪ್ರಮುಖ ವಿಶ್ವವಿದ್ಯಾಲಯಗಳು ಆರಂಭಿಸಿದಾಗ,ಇಂತಹ ಹೊಮ್ಮುವಿಕೆಗೆ ಮುಖ್ಯ ಸೂಚಕವಾಯಿತು. ಪ್ರತಿಯೊಂದು ಕ್ಷೇತ್ರ ಗಣನೀಯ ಸಂಯೋಜನೆಯಿಂದ ಕೂಡಿದ್ದು,ವಿಶೇಷವಾಗಿ ಬೌತವಿಜ್ಞಾನ,ರಾಸಾಯನಿಕ ವಿಜ್ಞಾನ ಮತ್ತು ಲೆಕ್ಕಶಾಸ್ತ್ರ ವಿಷಯಗಳಲ್ಲಿ ಈ ವಿಜ್ಞಾನಗಳನ್ನು ಅಳವಡಿಕೆ ಮಾಡುವ ಕ್ಷೇತ್ರಗಳಲ್ಲಿ ಗಣನೀಯ ಸಂಯೋಜನೆ ಕಂಡುಬಂತು.

ಕಾರ್ಯವಿಧಾನ

ಬದಲಾಯಿಸಿ
 
ಟರ್ಬೈನ್ ವಿನ್ಯಾಸಕ್ಕೆ ಅನೇಕ ಕ್ಷೇತ್ರಗಳ ಎಂಜಿನಿಯರುಗಳ ಸಹಯೋಗ ಅಗತ್ಯವಾಗಿತ್ತು.

ಎಂಜಿನಿಯರುಗಳು ಬೌತಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ವಿಜ್ಞಾನಗಳನ್ನು ಸಮಸ್ಯೆಗಳಿಗೆ ಸೂಕ್ತ ಉತ್ತರಗಳನ್ನು ಹುಡುಕಲು ಅಥವಾ ಯಥಾಸ್ಥಿತಿಗೆ ಸುಧಾರಣೆಗಳನ್ನು ಮಾಡಲು ಅಳವಡಿಸುತ್ತಾರೆ. ಇದಿಷ್ಟೇ ಅಲ್ಲದೇ, ಎಂಜಿನಿಯರ್‌ಗಳಿಗೆ ತಮ್ಮ ವಿನ್ಯಾಸ ಯೋಜನೆಗಳಿಗೆ ಪ್ರಸ್ತುತ ವಿಜ್ಞಾನಗಳ ಬಗ್ಗೆ ಜ್ಞಾನ ಅಗತ್ಯವಾದ್ದರಿಂದ,ಅದರ ಫಲವಾಗಿ ತಮ್ಮ ವೃತ್ತಿಯುದ್ದಕ್ಕೂ ಹೊಸ ವಸ್ತುವಿನ ಕಲಿಯುವಿಕೆ ಮುಂದುವರಿಸಿದರು. ಬಹು ಆಯ್ಕೆಗಳ ಅವಕಾಶವಿದ್ದರೆ, ಎಂಜಿನಿಯರ್‌ಗಳು ತಮ್ಮ ಅರ್ಹತೆಗಳಿಗೆ ಅನುಸಾರವಾಗಿ ವಿವಿಧ ವಿನ್ಯಾಸದ ಆಯ್ಕೆಗಳನ್ನು ತುಲನೆ ಮಾಡಿ ಅವರ ಅಗತ್ಯಗಳಿಗೆ ಹೊಂದಿಕೆಯಾಗುವ ಉತ್ತಮ ಪರಿಹಾರವನ್ನು ಆಯ್ಕೆ ಮಾಡುತ್ತಾರೆ. ಎಂಜಿನಿಯರ್‌ನ ನಿರ್ಣಾಯಕ ಮತ್ತು ವಿಶಿಷ್ಠ ಕಾರ್ಯವು ವಿನ್ಯಾಸದ ತೊಂದರೆಗಳನ್ನು ಗುರುತಿಸಿ, ಅರ್ಥಮಾಡಿಕೊಂಡು ವ್ಯಾಖ್ಯಾನಿಸುವ ಮ‌ೂಲಕ ಯಶಸ್ವಿ ಫಲಿತಾಂಶವನ್ನು ನೀಡುವುದಾಗಿದೆ. ತಾಂತ್ರಿಕವಾಗಿ ಯಶಸ್ಸಿನ ಉತ್ಪನ್ನವನ್ನು ಸ್ಥಾಪಿಸುವುದು ಮಾತ್ರ ಸಾಮಾನ್ಯವಾಗಿ ಸಾಕಾಗುವುದಿಲ್ಲ; ಇದು ಮತ್ತಷ್ಟು ಅಗತ್ಯಗಳನ್ನು ಪೂರೈಸಬೇಕು. ಅಗತ್ಯ ಸಂಪನ್ಮೂಲಗಳು,ಭೌತಿಕ, ಕಾಲ್ಪನಿಕ ಅಥವಾ ತಾಂತ್ರಿಕ ಮಿತಿಗಳು,ಭವಿಷ್ಯದ ಬದಲಾವಣೆಗಳಿಗೆ ಮತ್ತು ಸೇರ್ಪಡೆಗಳಿಗೆ ಹೊಂದಿಕೊಳ್ಳುವಲ್ಲಿ ತೊಂದರೆಗಳು ಸೇರಿರಬಹುದು. ವೆಚ್ಚ,ಸುರಕ್ಷತೆ,ಮಾರುಕಟ್ಟೆ,ಉತ್ಪಾದಕತೆ ಮತ್ತು ಸೇವೆ ಮುಂತಾದ ಅಗತ್ಯಗಳು ಇತರ ಅಂಶಗಳು. ತೊಂದರೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಎಂಜಿನಿಯರುಗಳು ಮಿತಿಗಳಿಗೆ ತಾಂತ್ರಿಕ ಗುಣಮಟ್ಟಗಳನ್ನು ನೀಡಿ,ಕಾರ್ಯಸಾಧ್ಯ ಉಪಕರಣ ಅಥವಾ ವ್ಯವಸ್ಥೆಯನ್ನು ಉತ್ಪಾದಿಸಿ ನಿರ್ವಹಿಸುತ್ತಾರೆ.

ಸಮಸ್ಯೆ ಪರಿಹಾರ

ಬದಲಾಯಿಸಿ

ಎಂಜಿನಿಯರುಗಳು ಸಮಸ್ಯೆಗೆ ಸೂಕ್ತ ಪರಿಹಾರಗಳನ್ನು ಹುಡುಕಲು ವಿಜ್ಞಾನ ಮತ್ತು ಗಣಿತಶಾಸ್ತ್ರದ ಜ್ಞಾನ ಮತ್ತು ಸೂಕ್ತ ಅನುಭವವನ್ನು ಬಳಸಿಕೊಳ್ಳುತ್ತಾರೆ. ಎಂಜಿನಿಯರಿಂಗ್ ಅನ್ವಯಿಕ ಗಣಿತಶಾಸ್ತ್ರ ಮತ್ತು ವಿಜ್ಞಾನದ ಶಾಖೆಯೆಂದು ಪರಿಗಣಿತವಾಗಿದೆ. ಸಮಸ್ಯೆಗೆ ಸೂಕ್ತ ಗಣಿತ ಮಾದರಿಯನ್ನು ಸೃಷ್ಟಿಸುವುದರಿಂದ ಅದರ ವಿಶ್ಲೇಷಣೆಗೆ (ಕೆಲವು ಭಾರಿ ನಿರ್ಧಾರಕವಾಗಿ)ಮತ್ತು ಸಮರ್ಥ ಪರಿಹಾರಗಳನ್ನು ಪರೀಕ್ಷಿಸಲು ಅವರಿಗೆ ಅವಕಾಶ ಒದಗಿಸುತ್ತದೆ. ಸಾಮಾನ್ಯವಾಗಿ ಬಹು ತರ್ಕಬದ್ಧ ಪರಿಹಾರಗಳು ಅಸ್ತಿತ್ವದಲ್ಲಿರುತ್ತವೆ, ಎಂಜಿನಿಯರುಗಳು ವಿವಿಧ ವಿನ್ಯಾಸದ ಆಯ್ಕೆಗಳನ್ನು ತಮ್ಮ ಅರ್ಹತೆಯ ಮೇಲೆ ಮೌಲ್ಯಮಾಪನ ಮಾಡಿ ಅವರ ಅಗತ್ಯಗಳನ್ನು ಪೂರೈಸುವ ಪರಿಹಾರವನ್ನು ಆಯ್ಕೆ ಮಾಡುತ್ತಾರೆ. ಜೆನ್‌ರಿಕ್ ಆಲ್ಟ್‌ಶಲ್ಲರ್, ಅಧಿಕ ಸಂಖ್ಯೆಯ ಹಕ್ಕುಸ್ವಾಮ್ಯಗಳ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸಿದ ನಂತರ,ಕೆಳಮಟ್ಟದ ಎಂಜಿನಿಯರಿಂಗ್ ವಿನ್ಯಾಸಗಳ ಹೃದಯಭಾಗದಲ್ಲಿ ಹೊಂದಾಣಿಕೆಗಳು ಇರುತ್ತವೆಂದು ಸಲಹೆ ಮಾಡಿದರು.ಮೇಲ್ಮಟ್ಟದಲ್ಲಿ ಸಮಸ್ಯೆಯನ್ನು ಉಂಟುಮಾಡುವ ಮುಖ್ಯ ವೈರುದ್ಧ್ಯವನ್ನು ನಿವಾರಿಸಿಕೊಳ್ಳುವ ವಿನ್ಯಾಸವು ಉತ್ತಮ ವಿನ್ಯಾಸವೆನಿಸಿಕೊಳ್ಳುತ್ತದೆ. ಪೂರ್ಣ ಮಟ್ಟದ ಉತ್ಪಾದನೆಗೆ ಮುಂಚಿತವಾಗಿ ತಮ್ಮ ತಾಂತ್ರಿಕ ಗುಣಮಟ್ಟಕ್ಕೆ ಅನುಸಾರವಾಗಿ ವಿನ್ಯಾಸಗಳು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆಂದು ಎಂಜಿನಿಯರುಗಳು ಸಾಂಕೇತಿಕವಾಗಿ ಮುಂಗಾಣಲು ಪ್ರಯತ್ನಿಸುತ್ತಾರೆ. ಇತರ ವಸ್ತುಗಳ ನಡುವೆ ಅವರು ಪ್ರತಿರೂಪಗಳು,ಸ್ಕೇಲ್ ಮಾದರಿಗಳು,ಅನುಕರಣೆಗಳು,ಹಾನಿಕರ ಪರೀಕ್ಷೆಗಳು, ಹಾನಿಕರವಲ್ಲದ ಪರೀಕ್ಷೆಗಳು ಮತ್ತು ಒತ್ತಡಪರೀಕ್ಷೆಗಳು ಉತ್ಪನ್ನವು ನಿರೀಕ್ಷಿಸಿದಂತೆ ಕಾರ್ಯನಿರ್ವಹಿಸುವುದನ್ನು ಪರೀಕ್ಷೆ ಖಾತರಿಪಡಿಸುತ್ತವೆ. ಎಂಜಿನಿಯರುಗಳು ವೃತ್ತಿಪರರಾಗಿ ನಿರೀಕ್ಷಿಸಿದಂತೆ ಕಾರ್ಯನಿರ್ವಹಿಸುವ ವಿನ್ಯಾಸಗಳನ್ನು ರಚಿಸುವುದರಲ್ಲಿನ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಸಾರ್ವಜನಿಕರಿಗೆ ಇಚ್ಛಿತವಲ್ಲದ ಹಾನಿ ಉಂಟುಮಾಡುವುದಿಲ್ಲ. ಅನಿರೀಕ್ಷಿತ ವೈಫಲ್ಯದ ಅಪಾಯ ತಗ್ಗಿಸಲು ತಮ್ಮ ವಿನ್ಯಾಸಗಳಲ್ಲಿ ಸುರಕ್ಷತೆಯ ಅಂಶವನ್ನು ಎಂಜಿನಿಯರುಗಳು ಸಾಂಕೇತಿಕವಾಗಿ ಸೇರ್ಪಡೆ ಮಾಡುತ್ತಾರೆ. ಆದಾಗ್ಯೂ,ಸುರಕ್ಷತೆಯ ಅಂಶ ಹೆಚ್ಚಾಗಿದ್ದಷ್ಟೂ,ವಿನ್ಯಾಸದ ದಕ್ಷತೆಯ ಮಟ್ಟ ಕಡಿಮೆಯಾಗಬಹುದು. ವಿಫಲಗೊಂಡ ಉತ್ಪನ್ನಗಳ ಅಭ್ಯಾಸ ವಿಧಿವಿಜ್ಞಾನ ಎಂಜಿನಿಯರಿಂಗ್ ಎಂದು ಹೆಸರಾಗಿದ್ದು, ವಾಸ್ತವ ಪರಿಸ್ಥಿತಿಗಳ ದೃಷ್ಟಿಯಿಂದ ಉತ್ಪನ್ನ ವಿನ್ಯಾಸಕಾರನಿಗೆ ಅವನ ಅಥವಾ ಅವಳ ಉತ್ಪನ್ನದ ಮೌಲ್ಯಮಾಪನ ಮಾಡಲು ನೆರವಾಗುತ್ತದೆ. ಸೇತುವೆ ಕುಸಿತ ಮುಂತಾದ ವಿನಾಶಗಳ ನಂತರ ವೈಫಲ್ಯಕ್ಕೆ ಕಾರಣ ಅಥವಾ ಕಾರಣಗಳ ಬಗ್ಗೆ ಎಚ್ಚರಿಕೆಯ ವಿಶ್ಲೇಷಣೆ ಅಗತ್ಯವಾಗಿದ್ದರಿಂದ ಈ ವಿಭಾಗವು ಅತೀ ಹೆಚ್ಚು ಮೌಲ್ಯಯುತವಾಯಿತು.

ಕಂಪ್ಯೂಟರ್ ಬಳಕೆ

ಬದಲಾಯಿಸಿ
 
ಭೂಮಿಗೆ ಪುನರ್‌-ಪ್ರವೇಶದ ಸಂದರ್ಭದಲ್ಲಿ ಬಾಹ್ಯಾಕಾಶ ನೌಕೆಯ ಸುತ್ತ ತೀವ್ರವೇಗದ ಗಾಳಿ ಬೀಸುವುದರ ಕಂಪ್ಯೂಟರ್ ಅನುಕರಣೆ.

ಎಲ್ಲ ಆಧುನಿಕ ಮತ್ತು ತಾಂತ್ರಿಕ ಪ್ರಯತ್ನಗಳಂತೆ, ಕಂಪ್ಯೂಟರ್‌ಗಳು ಮತ್ತು ಸಾಫ್ಟ್‌ವೇರ್ ಹೆಚ್ಚೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ವಿಶಿಷ್ಠ ವ್ಯವಹಾರ ಕಾರ್ಯಕ್ರಮ ಸಾಫ್ಟ್‌ವೇರ್ ಅಲ್ಲದೇ ನಿರ್ದಿಷ್ಟವಾಗಿ ಎಂಜಿನಿಯರಿಂಗ್‌ಗೆ ಅನೇಕ ಕಂಪ್ಯೂಟರ್ ನೆರವಿನ ಕಾರ್ಯಕ್ರಮಗಳು (CAx) ಇರುತ್ತದೆ. ಮ‌ೂಲಭೂತ ಭೌತಿಕ ಪ್ರಕ್ರಿಯೆಗಳ ಮಾದರಿಗಳನ್ನು ಸೃಷ್ಟಿಸಲು ಕಂಪ್ಯೂಟರ್‌ಗಳನ್ನು ಬಳಸಬಹುದು. ಅವನ್ನು ಸಂಖ್ಯಾತ್ಮಕ ವಿಧಾನಗಳ ಮ‌ೂಲಕ ಪರಿಹರಿಸಬಹುದು.

ಈ ವೃತ್ತಿಯಲ್ಲಿ ವ್ಯಾಪಕವಾಗಿ ಬಳಕೆಯಾಗುವ ಸಾಧನಗಳು ಕಂಪ್ಯೂಟರ್ ನೆರವಿನ ವಿನ್ಯಾಸ(CAD)ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ 3D ಮಾದರಿಗಳನ್ನು,2D ಚಿತ್ರಗಳನ್ನು ಮತ್ತು ಅವರ ವಿನ್ಯಾಸಗಳ ರೂಪರೇಷೆಯನ್ನು ನೀಡಲು ಅನುಕೂಲವಾಗುತ್ತದೆ. CAD ಡಿಜಿಟಲ್ ಮೋಕಪ್(DMU)ಜತೆಯಲ್ಲಿ ಪರಿಮಿತ ಅಂಶ ವಿಧಾನ ವಿಶ್ಲೇಷಣೆ ಅಥವಾ ವಿಶ್ಲೇಷಣಾತ್ಮಕ ಅಂಶ ವಿಧಾನ ಮುಂತಾದ CAE ಸಾಫ್ಟ್‌ವೇರ್‌ನಿಂದ ದುಬಾರಿ ಮತ್ತು ಸಮಯಹಿಡಿಯುವ ಭೌತಿಕ ಪ್ರತಿರೂಪಗಳ ನಿರ್ಮಾಣವಿಲ್ಲದೇ ವಿಶ್ಲೇಷಣೆ ಮಾಡಲು ಸಾಧ್ಯವಾದ ವಿನ್ಯಾಸಗಳ ಮಾದರಿ ಸೃಷ್ಟಿಗೆ ಎಂಜಿನಿಯರುಗಳಿಗೆ ಅವಕಾಶ ಒದಗಿಸುತ್ತದೆ. ಇವುಗಳಿಂದ ಉತ್ಪನ್ನಗಳು ಮತ್ತು ಬಿಡಿಭಾಗಗಳ ದೋಷ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸುತ್ತದೆ; ಹೊಂದಿಕೆ ಮತ್ತು ಜೋಡಣೆಯನ್ನು ಅಂದಾಜು ಮಾಡುತ್ತದೆ;ದಕ್ಷತೆಯನ್ನು ಅಭ್ಯಾಸಮಾಡುತ್ತದೆ; ಒತ್ತಡಗಳು,ಉಷ್ಣಾಂಶಗಳು,ವಿದ್ಯುತ್ಕಾಂತೀಯ ಶಕ್ತಿ ಹೊಮ್ಮುವಿಕೆಗಳು, ವಿದ್ಯುತ್ ಕರೆಂಟ್‌ಗಳು ಮತ್ತು ವೋಲ್ಟೇಜ್‌ಗಳು,ಡಿಜಿಟಲ್ ತಾರ್ಕಿಕ ಮಟ್ಟಗಳು,ದ್ರವ ಹರಿಯುವಿಕೆ ಮತ್ತು ಗತಿವಿಜ್ಞಾನ ಮುಂತಾದ ಸ್ಥಾಯಿ ಮತ್ತು ಚಲನಶೀಲ ಗುಣಗಳ ವಿಶ್ಲೇಷಣೆ ಮಾಡಲು ನೆರವಾಗುತ್ತದೆ. ಇವೆಲ್ಲ ಮಾಹಿತಿಯ ಅವಕಾಶ ಮತ್ತು ವಿತರಣೆಯನ್ನು ಸಾಮಾನ್ಯವಾಗಿ ಉತ್ಪನ್ನ ದತ್ತಾಂಶ ನಿರ್ವಹಣೆ ಸಾಫ್ಟ್‌ವೇರ್‌ನಿಂದ ಆಯೋಜಿಸಲಾಗುತ್ತದೆ.[೧೬] ನಿರ್ದಿಷ್ಟ ಎಂಜಿನಿಯರಿಂಗ್ ಕಾರ್ಯಗಳನ್ನು ಬೆಂಬಲಿಸುವ ಅನೇಕ ಸಾಧನಗಳು ಕೂಡ ಇವೆ.CNC ಯಾಂತ್ರಿಕ ಸಲಹೆಗಳನ್ನು ಸೃಷ್ಟಿಸುವ ಕಂಪ್ಯೂಟರ್ ನೆರವಿನ ಉತ್ಪಾದನೆ ಸಾಫ್ಟ್‌ವೇರ್(CAM);ಉತ್ಪಾದನೆ ಎಂಜಿನಿಯರಿಂಗ್‌ಗೆ ಉತ್ಪಾದನೆ ಪ್ರಕ್ರಿಯೆ ನಿರ್ವಹಣೆ ಸಾಫ್ಟ್‌ವೇರ್; ಮುದ್ರಿತ ಸರ್ಕ್ಯೂಟ್ ಬೋರ್ಡ್‌(PCB)ಗೆ EDA,(ವಿದ್ಯುನ್ಮಾನ ವಿನ್ಯಾಸ ಸಾಧನಗಳು) ಮತ್ತು ವಿದ್ಯುನ್ಮಾನ ಎಂಜಿನಿಯರ್‌ಗಳಿಗೆ ಸರ್ಕ್ಯೂಟ್ ಸ್ಥೂಲರೇಖೆ; ನಿರ್ವಹಣೆ ವ್ಯವಸ್ಥಾಪನೆಗೆ MRO(ನಿರ್ವಹಣೆ, ದುರಸ್ತಿ, ಕಾರ್ಯಾಚರಣೆ) ಕಾರ್ಯಕ್ರಮಗಳು ; ಮತ್ತು ಲೋಕೋಪಯೋಗಿ ಎಂಜಿನಿಯರಿಂಗ್‌ಗೆ AEC ಸಾಫ್ಟ್‌ವೇರ್ ಮುಂತಾದವು. ವಸ್ತುಗಳ ಅಭಿವೃದ್ಧಿಗೆ ನೆರವಾಗಲು ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಸಾಫ್ಟ್‌ವೇರ್ ಬಳಕೆಯು ಒಟ್ಟಾರೆಯಾಗಿ ಉತ್ಪನ್ನ ಜೀವನಚಕ್ರ ನಿರ್ವಹಣೆಯೆಂದು ಹೆಸರಾಯಿತು.[೧೭]

ಸಾಮಾಜಿಕ ದೃಷ್ಟಿಯಲ್ಲಿ ಎಂಜಿನಿಯರಿಂಗ್

ಬದಲಾಯಿಸಿ

ಎಂಜಿನಿಯರಿಂಗ್ ದೊಡ್ಡ ಸಹಯೋಗಗಳಿಂದ ಹಿಡಿದು ಸಣ್ಣ ವೈಯಕ್ತಿಕ ಯೋಜನೆಗಳವರೆಗೆ ವ್ಯಾಪಿಸಿದ ವಿಷಯ. ಬಹುತೇಕ ಎಲ್ಲ ಎಂಜಿನಿಯರಿಂಗ್ ಯೋಜನೆಗಳು ಒಂದು ರೀತಿಯ ಹಣಕಾಸು ಏಜೆನ್ಸಿ:ಕಂಪೆನಿ,ಹೂಡಿಕೆದಾರರ ಸಮ‌ೂಹ ಅಥವಾ ಸರ್ಕಾರಕ್ಕೆ ಋಣಿ. ಕೆಲವು ವಿಧಗಳ ಎಂಜಿನಿಯರಿಂಗ್ ಇಂತಹ ವಿಷಯಗಳಿಂದ ಕನಿಷ್ಠ ನಿರ್ಬಂಧಿತ.ಪ್ರೊ ಬೊನೊ(ಸಾರ್ವಜನಿಕ ಉಪಯುಕ್ತ)ಎಂಜಿನಿಯರಿಂಗ್ ಮತ್ತು ಮುಕ್ತ ವಿನ್ಯಾಸ ಎಂಜಿನಿಯರಿಂಗ್ ಮುಂತಾದವು. ಸ್ವಭಾವ ಸಹಜ ಎಂಜಿನಿಯರಿಂಗ್ ಸಮಾಜ ಮತ್ತು ಮಾನವ ನಡವಳಿಕೆಯ ಎಲ್ಲೆಯೊಳಗೆ ಇರುತ್ತದೆ. ಆಧುನಿಕ ಸಮಾಜ ಬಳಸುವ ಪ್ರತಿಯೊಂದು ಉತ್ಪನ್ನ ಅಥವಾ ನಿರ್ಮಾಣ ಎಂಜಿನಿಯರಿಂಗ್ ವಿನ್ಯಾಸದಿಂದ ಪ್ರಭಾವಹೊಂದಿರುತ್ತದೆ. ಎಂಜಿನಿಯರಿಂಗ್ ವಿನ್ಯಾಸವು ಪರಿಸರ, ಸಮಾಜ ಮತ್ತು ಆರ್ಥಿಕತೆಗಳಲ್ಲಿ ಬದಲಾವಣೆಗೆ ಶಕ್ತಿಶಾಲಿ ಸಾಧನ,ಅದರ ಅಳವಡಿಕೆ ಹೆಚ್ಚು ಜವಾಬ್ದಾರಿ ನಿರ್ವಹಿಸುತ್ತದೆ. ಅನೇಕ ಎಂಜಿನಿಯರಿಂಗ್ ಸಂಸ್ಥೆಗಳು ಅಭ್ಯಾಸದ ಸಂಹಿತೆಗಳು ಮತ್ತು ನೀತಿಗಳ ಸಂಹಿತೆಗಳನ್ನು ಸ್ಥಾಪಿಸಿ ಸದಸ್ಯರಿಗೆ ಮಾರ್ಗದರ್ಶನ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿವೆ. ಎಂಜಿನಿಯರಿಂಗ್ ಉತ್ಪನ್ನಗಳು ವಿವಾದಗಳ ವಸ್ತುವಾಗುವ ಸಾಧ್ಯತೆಗಳಿವೆ. ಇದಕ್ಕೆ ವಿವಿಧ ಎಂಜಿನಿಯರಿಂಗ್ ವಿಭಾಗಗಳಿಂದ ಉದಾಹರಣೆಗಳು ಅಣ್ವಸ್ತ್ರಗಳ ಅಭಿವೃದ್ಧಿ, ತ್ರೀ ಜಾರ್ಜಸ್ ಅಣೆಕಟ್ಟು, ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳು ಮತ್ತು ತೈಲ ತೆಗೆಯುವುದು ಸೇರಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ,ಕೆಲವು ಪಾಶ್ಚಿಮಾತ್ಯ ಎಂಜಿನಿಯರಿಂಗ್ ಕಂಪೆನಿಗಳು ಗಂಭೀರ ಕಾರ್ಪೊರೇಟ್ ಮತ್ತು ಸಾಮಾಜಿಕ ಜವಾಬ್ದಾರಿಯ ನೀತಿಗಳನ್ನು ರೂಪಿಸಿದವು. ಎಂಜಿನಿಯರಿಂಗ್ ಮಾನವ ಅಭಿವೃದ್ಧಿಯ ಮುಖ್ಯ ಚಾಲನಾಶಕ್ತಿಯಾಗಿದೆ. ವಿಶೇಷವಾಗಿ ಸಬ್ ಸಹರಾ ಆಫ್ರಿಕ ತೀರಾ ಸಣ್ಣ ಎಂಜಿನಿಯರಿಂಗ್ ಸಾಮರ್ಥ್ಯ ಹೊಂದಿರುವ ಫಲವಾಗಿ ಅನೇಕ ಆಫ್ರಿಕನ್ ರಾಷ್ಟ್ರಗಳು ಬಾಹ್ಯ ನೆರವಿಲ್ಲದೇ ನಿರ್ಣಾಯಕ ಮ‌ೂಲಸೌಲಭ್ಯಗಳ ಅಭಿವೃದ್ಧಿ ಮಾಡಲು ಅಸಮರ್ಥವಾಗಿವೆ. ಸಹಸ್ರಮಾನ ಅಭಿವೃದ್ಧಿ ಗುರಿಗಳ ನೆರವೇರಿಕೆಗೆ ಮ‌ೂಲಸೌಲಭ್ಯ ಮತ್ತು ಸುಸ್ಥಿರ ತಾಂತ್ರಿಕ ಬೆಳವಣಿಗೆ ಅಭಿವೃದ್ಧಿಪಡಿಸುವ ಸಾಕಷ್ಟು ಎಂಜಿನಿಯರಿಂಗ್ ಸಾಮರ್ಥ್ಯದ ಸಾಧನೆ ಅಗತ್ಯವೆನಿಸಿದೆ.[೧೮] ಹಾನಿ ಮತ್ತು ಅಭಿವೃದ್ಧಿ ಸನ್ನಿವೇಶಗಳಲ್ಲಿ ಎಲ್ಲ ಸಾಗರೋತ್ತರ ಅಭಿವೃದ್ಧಿ ಮತ್ತು ಪರಿಹಾರ NGOಗಳು ಪರಿಹಾರಗಳನ್ನು ಅಳವಡಿಸಲು ಎಂಜಿನಿಯರುಗಳ ಗಣನೀಯ ಬಳಕೆ ಮಾಡುತ್ತಾರೆ. ಮಾನವಪೀಳಿಗೆಯ ಒಳಿತಿಗಾಗಿ ಅನೇಕ ಧರ್ಮದತ್ತಿ ಸಂಸ್ಥೆಗಳು ಎಂಜಿನಿಯರಿಂಗ್ ನೇರ ಬಳಕೆಯ ಗುರಿ ಹೊಂದಿವೆ.

ಸಾಂಸ್ಕೃತಿಕ ಉಪಸ್ಥಿತಿ

ಬದಲಾಯಿಸಿ

ಎಂಜಿನಿಯರಿಂಗ್ ಬಹು ಗೌರವಾನ್ವಿತ ವೃತ್ತಿ. ಉದಾಹರಣೆಗೆ,ಕೆನಡಾದಲ್ಲಿ ಸಾರ್ವಜನಿಕರ ಬಹು ನಂಬಿಕಸ್ಥ ವೃತ್ತಿಗಳಲ್ಲಿ ಒಂದೆಂದು ಸ್ಥಾನ ಪಡೆದಿದೆ.[೧೯] ಕೆಲವು ಬಾರಿ ಎಂಜಿನಿಯರಿಂಗ್ ಜನಪ್ರಿಯ ಸಂಸ್ಕೃತಿಯಲ್ಲಿ ಒಂದು ರೀತಿಯ ಒಣ, ಆಸಕ್ತಿರಹಿತ ಕ್ಷೇತ್ರವೆಂದು ಕಾಣಲಾಗಿದೆ ಮತ್ತು ನೀರಸ ವ್ಯಕ್ತಿಗಳ ಕ್ಷೇತ್ರವೆಂದು ಕೂಡ ಅದನ್ನು ಭಾವಿಸಲಾಗಿತ್ತು. ಉದಾಹರಣೆಗೆ,ವ್ಯಂಗ್ಯಚಿತ್ರಗಳ ಪಾತ್ರಧಾರಿ ಡಿಲ್ಬರ್ಟ್ ಒಬ್ಬ ಎಂಜಿನಿಯರ್. ಈ ವೃತ್ತಿಯ ಬಗ್ಗೆ ಸಾರ್ವಜನಿಕ ಜಾಗೃತಿ ಹೆಚ್ಚಿಸುವಲ್ಲಿ ಇದ್ದ ಒಂದು ಕಷ್ಟವೆಂದರೆ,ಜನಸಾಮಾನ್ಯರು ದಿನನಿತ್ಯದ ಜೀವನದಲ್ಲಿ ಎಂಜಿನಿಯರುಗಳ ಕೆಲಸದಿಂದ ಪ್ರತಿದಿನ ಅನುಕೂಲ ಪಡೆದರೂ ಅವರ ಜತೆ ಯಾವುದೇ ವೈಯಕ್ತಿಕ ವ್ಯವಹಾರಗಳು ಇರಲಿಲ್ಲ. ಇದಕ್ಕೆ ವಿರುದ್ಧವಾಗಿ,ವರ್ಷಕ್ಕೊಮ್ಮೆಯಾದರೂ ವೈದ್ಯರನ್ನು ಭೇಟಿ ಮಾಡುವುದು ,ತೆರಿಗೆ ಪಾವತಿ ಸಂದರ್ಭದಲ್ಲಿ ಲೆಕ್ಕಪರಿಶೋಧಕರ ಭೇಟಿ ಮತ್ತು ಆಗಾಗ್ಗೆ ವಕೀಲರ ಭೇಟಿ ಸಾಮಾನ್ಯ ಸಂಗತಿಯಾಗಿತ್ತು. ಆದರೆ ಇದು ಸದಾ ಹಾಗೆ ಇರಲಿಲ್ಲ-ಬಹುತೇಕ ಬ್ರಿಟಿಷ್ ಶಾಲಾ ಮಕ್ಕಳು 1950ರ ದಶಕದಲ್ಲಿ ವಿಕ್ಟೋರಿಯನ್ ಎಂಜಿನಿಯರುಗಳ ಸ್ಫೂರ್ತಿದಾಯಕ ಕಥೆಗಳೊಂದಿಗೆ ಬೆಳೆದರು.ಅವರಲ್ಲಿ ಮುಖ್ಯವಾದವರು ಬ್ರುನೆಲ್ಸ್,ಸ್ಟೀಫನ್‌ಸನ್ಸ್, ಟೆಲ್‌ಫೋರ್ಡ್ ಮತ್ತವರ ಸಮಕಾಲೀನರು. ವಿಜ್ಞಾನದ ಕಾದಂಬರಿಗಳಲ್ಲಿ ಎಂಜಿನಿಯರ್‌‌ಗಳನ್ನು ಸಾಮಾನ್ಯವಾಗಿ ಭವಿಷ್ಯದ ಅಗಾಧ ತಂತ್ರಜ್ಞಾನಗಳ ತಿಳಿವಳಿಕೆಯುಳ್ಳ ಅತ್ಯಂತ ಜ್ಞಾನಿ ಮತ್ತು ಗೌರವಾನ್ವಿತ ವ್ಯಕ್ತಿಗಳಾಗಿ ಬಿಂಬಿಸಲಾಗಿದೆ ಮತ್ತು ಆಗಾಗ್ಗೆ ಚಿತ್ರಕಲೆಗಳಲ್ಲಿ ಕೂಡ ಬಿಂಬಿಸಲಾಗಿದೆ. ಸ್ಟಾರ್ ಟ್ರೆಕ್ ಪಾತ್ರಗಳಾದ ಮಾಂಟ್ಗೊಮೆರಿ ಸ್ಕಾಟ್, ಜಾರ್ಜ್‌ಡಿ ಲಾ ಪೋರ್ಜ್,ಮೈಲ್ಸ್ ಓ ಬ್ರೈನ್, ಬಿಎಲ್ಲಾನಾ ಟೊರೇಸ್ ಮತ್ತು ಚಾರ್ಲೆಸ್ ಟಕರ್ III ಪ್ರಖ್ಯಾತ ಉದಾಹರಣೆಗಳು. ಸಾಮಾನ್ಯವಾಗಿ,ಎಂಜಿನಿಯರ್‌ಗಳನ್ನು ಪ್ರಧಾನ ಕೈಯ ಕಿರುಬೆರಳಿನಲ್ಲಿ ಧರಿಸುತ್ತಿದ್ದ "ಕಬ್ಬಿಣದ ಉಂಗುರ"- ಕ್ರೋಮಿಯಂ ಮಿಶ್ರಿತ ಉಕ್ಕು ಅಥವಾ ಕಬ್ಬಿಣದ ಉಂಗುರದಿಂದ ಗುರುತಿಸಬಹುದಾಗಿತ್ತು. ಈ ಸಂಪ್ರದಾಯವು ಕೆನಡಾದಲ್ಲಿ ಗೌರವ ಸಂಕೇತವಾಗಿ ಮತ್ತು ಎಂಜಿನಿಯರಿಂಗ್ ವೃತ್ತಿಯ ಗೌರವಾನ್ವಿತ ಹೊಣೆಯಿಂದಾಗಿ ಎಂಜಿನಿಯರ್‌ ಎಂದು ಕರೆಯುವ ಧಾರ್ಮಿಕ ಪದ್ಧತಿಯಾಗಿ ಆರಂಭವಾಯಿತು.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೆಲವು ವರ್ಷಗಳ ನಂತರ 1972ರಲ್ಲಿ ಈ ಆಚರಣೆಯನ್ನು ಅನೇಕ ಕಾಲೇಜುಗಳಲ್ಲಿ ಅಳವಡಿಸಲಾಯಿತು. US ಸದಸ್ಯರಿಂದ ಕೂಡಿದ ಎಂಜಿನಿಯರ್ ಸಂಘ ಎಂಜಿನಿಯರಿಂಗ್ ಗೌರವಾನ್ವಿತ ಇತಿಹಾಸವನ್ನು ಎತ್ತಿಹಿಡಿಯುವ ಪ್ರತಿಜ್ಞೆಯೊಂದಿಗೆ ಈ ಉಂಗುರವನ್ನು ಸ್ವೀಕರಿಸುತ್ತಿದ್ದರು.

ವೃತ್ತಿಪರ ಎಂಜಿನಿಯರ್ ಹೆಸರಿನ ಹಿಂದೆಯೇ PE ಅಥವಾ P.Eng ಎಂಬ ನಂತರದ ಬಿರುದಿನ ಅಕ್ಷರಗಳನ್ನು ಉತ್ತರ ಅಮೆರಿಕದಲ್ಲಿ ಇಡಲಾಗುತ್ತಿತ್ತು. ಯುರೋಪ್ ಬಹುಭಾಗ ವೃತ್ತಿಪರ ಎಂಜಿನಿಯರ್ ಅವರನ್ನು IR ಎಂಬ ಅಕ್ಷರಗಳಿಂದ ಗುರುತಿಸಲಾಗುತ್ತಿತ್ತು, UK ಮತ್ತು ಕಾಮನ್‌ವೆಲ್ತ್ ಬಹುಭಾಗ ಚಾರ್ಟರ್ಡ್ ಎಂಜಿನಿಯರ್ ಪದ ಅನ್ವಯಿಸಲಾಗಿತ್ತು ಮತ್ತು CEng ಅಕ್ಷರಗಳಿಂದ ಗುರುತಿಸಲಾಗುತ್ತಿತ್ತು.

ಪರವಾನಗಿ ಮತ್ತು ಪ್ರಮಾಣೀಕರಣ

ಬದಲಾಯಿಸಿ

ಬಹುತೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸೇತುವೆಗಳ ವಿನ್ಯಾಸ,ವಿದ್ಯುಚ್ಛಕ್ತಿಯ ಘಟಕಗಳು ಮತ್ತು ರಾಸಾಯನಿಕ ಘಟಕಗಳು ಮುಂತಾದ ಎಂಜಿನಿಯರಿಂಗ್ ಕಾರ್ಯಗಳು ಪರವಾನಗಿ ಪಡೆದ ವೃತ್ತಿಪರ ಎಂಜಿನಿಯರ್ ಅಥವಾ ಚಾರ್ಟರ್ಡ್ ಎಂಜಿನಿಯರ್ ಅಥವಾ ಇನ್‌ಕಾರ್ಪೊರೇಟೆಡ್ ಎಂಜಿನಿಯರ್ ಒಬ್ಬರಿಂದ ಅನುಮೋದನೆ ಪಡೆಯಬೇಕು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡುವ,"ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ"ಯನ್ನು ಸೂಚಿಸುವ(ಇದು ಸಾಂಕೇತಿಕವಾಗಿ ಸಿವಿಲ್ ಎಂಜಿನಿಯರ್‌ಗಳು ಮತ್ತು ಸರ್ಕಾರಿ ಗುತ್ತಿಗೆದಾರರನ್ನು ಒಳಗೊಂಡಿದೆ) ಯೋಜನೆಗಳಲ್ಲಿ ನೇರವಾಗಿ ಕೆಲಸ ಮಾಡದ ಬಹುತೇಕ ಮಂದಿಗೆ ಎಂಜಿನಿಯರಿಂಗ್ ಪರವಾನಗಿ ನೀಡಿಕೆ ಐಚ್ಛಿಕವಾಗಿತ್ತು. ಇದು "ಕೈಗಾರಿಕೆ ವಿನಾಯಿತಿ" ಎಂದು ಹೆಸರುವಾಸಿಯಾಗಿದೆ. ಇಂತಹ ಸಾರ್ವಜನಿಕ-ಸುರಕ್ಷತೆಯ ಯೋಜನೆಗಳಿಗೆ ಕೂಡ,ಮೇಲ್ವಿಚಾರಣೆಯ ಎಂಜಿನಿಯರ್ ಪರವಾನಗಿ ಪಡೆಯುವುದು ಸಾಕಾಗಿತ್ತು. ತರುವಾಯ,ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಎಂಜಿನಿಯರ್‌ಗಳು ವಾಸ್ತವವಾಗಿ ಪರವಾನಗಿ ಪಡೆದಿದ್ದರು; ಇದು ಕೆಲವು ಎಂಜಿನಿಯರಿಂಗ್ ಸಂಸ್ಥೆಗಳ ಕಳವಳ ಹೆಚ್ಚಲು ಕಾರಣವಾಗಿತ್ತು. ಎಂಜಿನಿಯರಿಂಗ್ ವೈದ್ಯಕೀಯ ಮತ್ತು ಕಾನೂನಿನ ರೀತಿಯಲ್ಲಿ ಗಣ್ಯ ಮತ್ತು ಪಾಂಡಿತ್ಯಪೂರ್ಣ ವೃತ್ತಿಯಾಗಿ ಎಂಜಿನಿಯರಿಂಗ್ ಸ್ಥಾನಮಾನ ಕಾಯ್ದುಕೊಳ್ಳುವುದು ಮುಖ್ಯವೆಂದು ಅವರು ನಂಬಿದ್ದರು. ಆದಾಗ್ಯೂ,ನೊಂದಾಯಿತ "ವೃತ್ತಿಪರ ಎಂಜಿನಿಯರ್" ಅಥವಾ "P.E." ವಾಸ್ತವವಾಗಿ ನಿರ್ದಿಷ್ಟ ಉದ್ಯೋಗಕ್ಕೆ ಅಗತ್ಯವಿಲ್ಲದಿದ್ದರೂ ಪ್ರತಿಷ್ಠೆಗಾಗಿ ನೀಡುವ ವೃತ್ತಿಪರ ಆಧಾರವಾಗಿತ್ತು. ಅನೇಕ ರಾಜ್ಯಗಳಲ್ಲಿ ಪರವಾನಗಿಯನ್ನು ಶಿಕ್ಷಣದ ಸಂಯೋಗದಿಂದ, ಪೂರ್ವ-ಪರೀಕ್ಷೆ(ಎಂಜಿನಿಯರಿಂಗ್ ಪರೀಕ್ಷೆ ಮೂಲತತ್ವಗಳು), ಪರೀಕ್ಷೆ(ವೃತ್ತಿಪರ ಎಂಜಿನಿಯರಿಂಗ್ ಪರೀಕ್ಷೆ)ಮತ್ತು ಎಂಜಿನಿಯರಿಂಗ್ ಅನುಭವ(ಸಾಂಕೇತಿಕವಾಗಿ 5+ ವರ್ಷಗಳ ಕ್ಷೇತ್ರ). ಯುನೈಟೆಡ್ ಸ್ಟೇಟ್ಸ್‌ನಲ್ಲಿ,ಪ್ರತಿಯೊಂದು ರಾಜ್ಯ ವೃತ್ತಿಪರ ಎಂಜಿನಿಯರ್‌ಗಳ ಪರೀಕ್ಷೆಗಳನ್ನು ನಡೆಸಿ ಪರವಾನಗಿಗಳನ್ನು ನೀಡುತ್ತದೆ. ಪ್ರಸಕ್ತ ಬಹುತೇಕ ರಾಜ್ಯಗಳು ನಿರ್ದಿಷ್ಟ ಎಂಜಿನಿಯರಿಂಗ್ ವಿಭಾಗಕ್ಕೆ ಪರವಾನಗಿ ನೀಡುವುದಿಲ್ಲ, ಆದರೆ ಸಾಮಾನ್ಯ ಪರವಾನಗಿ ಒದಗಿಸುತ್ತದೆ, ಎಂಜಿನಿಯರ್‌ಗಳ ವೈಯಕ್ತಿಕ ಸಾಮರ್ಥ್ಯಗಳಿಗೆ ಸಂಬಂಧಪಟ್ಟಂತೆ ವೃತ್ತಿಪರ ನಿರ್ಣಯ ಬಳಸುವುದರಲ್ಲಿ ಎಂಜಿನಿಯರ್‌ಗಳ ಮೇಲೆ ನಂಬಿಕೆ ಇರಿಸುತ್ತಿದ್ದವು; ಇವು ವೃತ್ತಿಪರ ಸಮಾಜಗಳ ನಂಬಿಗಸ್ಥ ನಡೆಯಾಗಿತ್ತು.

ಹೀಗಿದ್ದರೂ ಕೂಡ,ಕನಿಷ್ಠ ಒಂದು ಪರೀಕ್ಷೆಯು ನಿರ್ದಿಷ್ಟ ವಿಭಾಗದ ಮೇಲೆ ವಾಸ್ತವವಾಗಿ ಗಮನಹರಿಸುತ್ತದೆ; ಪರವಾನಗಿ ಪಡೆಯುವ ಅಭ್ಯರ್ಥಿ ಅವರ ಕ್ಷೇತ್ರದ ಪರಿಣತಿಗೆ ಹತ್ತಿರವಾದ ಪರೀಕ್ಷೆಯ ವಿಭಾಗವನ್ನು ಆಯ್ಕೆ ಮಾಡುತ್ತಾರೆ.

ಯುರೋಪ್ ಬಹುಭಾಗ ಮತ್ತು ಕಾಮನ್‌ವೆಲ್ತ್‌ನಲ್ಲಿ UKಯ ಸಿವಿಲ್ ಎಂಜಿನಿಯರ್‌ಗಳ ಶಿಕ್ಷಣಸಂಸ್ಥೆ ಮುಂತಾದ ಎಂಜಿನಿಯರಿಂಗ್ ಶಿಕ್ಷಣಸಂಸ್ಥೆಗಳು ವೃತ್ತಿಪರ ಮಾನ್ಯತೆಯನ್ನು ನೀಡುತ್ತವೆ. UKಯ ಎಂಜಿನಿಯರಿಂಗ್ ಸಂಸ್ಥೆಗಳು ವಿಶ್ವದಲ್ಲೇ ಅತ್ಯಂತ ಹಳೆಯದಾಗಿದ್ದು, ವಿಶ್ವಾದ್ಯಂತ ಅನೇಕ ಎಂಜಿನಿಯರುಗಳಿಗೆ ಮಾನ್ಯತೆ ನೀಡುತ್ತದೆ. UKಯಲ್ಲಿ "ಎಂಜಿನಿಯರ್" ಪದವನ್ನು ಡಿಗ್ರಿರಹಿತ ವೃತ್ತಿಗಳಾದ ನಕ್ಷೆಗಾರ,ಯಂತ್ರಶಿಲ್ಪಿ,ಮೆಕಾನಿಕ್‌ಗಳು ಮತ್ತು ತಂತ್ರಜ್ಞರಿಗೂ ಅನ್ವಯಿಸಬಹುದಾಗಿತ್ತು.

USನಲ್ಲಿ ಪ್ರಾಯೋಗಿಕ ಎಂಜಿನಿಯರ್ ಪದ ಕೆಲವು ಬಾರಿ ವಿವರವಾದ ಕಾರ್ಯಕ್ರಮಗಳಿಗೆ ನಿರ್ದಿಷ್ಟ ಅನುಭವ ಮತ್ತು ತರಬೇತಿಯ ಮಹತ್ವವಿದ್ದ ತಂತ್ರಜ್ಞರಿಗೂ ಅನ್ವಯಿಸುತ್ತಿತ್ತು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎಂಜಿನಿಯರ್ ಎಂದು ಪರಿಗಣಿಸಿ ಅಭ್ಯಾಸ ಮಾಡಲು ಎಂಜಿನಿಯರಿಂಗ್ ವಿಭಾಗದಲ್ಲಿ ಅಥವಾ ಸಂಬಂಧಿತ ಅನ್ವಯಿಕ ವಿಜ್ಞಾನದಲ್ಲಿ ಕನಿಷ್ಠ ವಿಜ್ಞಾನ ಪದವಿಯ ಡಿಗ್ರಿಯನ್ನು ಹೊಂದುವುದು ಸಾಮಾನ್ಯ ಅಗತ್ಯವಾಗಿತ್ತು.

ಕೆನಡಾದಲ್ಲಿ ಈ ವೃತ್ತಿಯು ಪ್ರತಿಯೊಂದು ಪ್ರಾಂತ್ಯದಲ್ಲಿ ಸ್ವಯಂ ಎಂಜಿನಿಯರಿಂಗ್ ಸಂಘದ ಆಡಳಿತಕ್ಕೆ ಒಳಪಟ್ಟಿತ್ತು. ಉದಾಹರಣೆಗೆ,ಬ್ರಿಟಿಷ್ ಕೊಲಂಬಿಯ ಪ್ರಾಂತ್ಯದಲ್ಲಿ,ಎಂಜಿನಿಯರಿಂಗ್ ಸಂಬಂಧಿತ ಕ್ಷೇತ್ರದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಅನುಭವವಿರುವ ಎಂಜಿನಿಯರಿಂಗ್ ಪದವೀಧರ ವೃತ್ತಿಪರ ಎಂಜಿನಿಯರುಗಳು ಮತ್ತು ಭೂವಿಜ್ಞಾನಿಗಳ(APEGBC) ಸಂಘದಿಂದ ನೋಂದಣಿ ಮಾಡುವ ಅಗತ್ಯವಿತ್ತು. ವೃತ್ತಿಪರ ಎಂಜಿನಿಯರ್ ಆಗಲು ಮತ್ತು P.Eng ವೃತ್ತಿಪರ ಗೌರವ ನೀಡಲು ಇದು ಅಗತ್ಯವಿತ್ತು.[೨೦] ಫೆಡರಲ್ US ಸರ್ಕಾರವು ಆದಾಗ್ಯೂ,ಸಾರಿಗೆ ಮತ್ತು ಫೆಡರಲ್ ವೈಮಾನಿಕ ಆಡಳಿತ ನಿರ್ದೇಶಿಸುವ ಫೆಡರಲ್ ವೈಮಾನಿಕ ನಿಯಂತ್ರಣಗಳ ಮ‌ೂಲಕ ವಾಯುಯಾನದ ಮೇಲ್ವಿಚಾರಣೆ ವಹಿಸಿದೆ. ನಿಯೋಜಿತ ಎಂಜಿನಿಯರಿಂಗ್ ಪ್ರತಿನಿಧಿಗಳು ವಿಮಾನದ ವಿನ್ಯಾಸ ಮತ್ತು ದುರಸ್ತಿಗಳ ದತ್ತಾಂಶವನ್ನು ಫೆಡರಲ್ ವೈಮಾನಿಕ ಆಡಳಿತದ ಪರವಾಗಿ ಅನುಮೋದಿಸುತ್ತಾರೆ. ಕಠಿಣ ಪರೀಕ್ಷೆ ಮತ್ತು ಪರವಾನಿಗಳ ನಡುವೆಯೂ ಎಂಜಿನಿಯರಿಂಗ್ ದುರಂತಗಳು ಸಂಭವಿಸುತ್ತವೆ. ಆದ್ದರಿಂದ ವೃತ್ತಿಪರ ಎಂಜಿನಿಯರ್, ಚಾರ್ಟರ್ಡ್ ಎಂಜಿನಿಯರ್ ಅಥವಾ ಇನ್‌ಕಾರ್ಪೋರೇಟೆಡ್ ಎಂಜಿನಿಯರ್ ನೀತಿಗಳ ಕಠಿಣ ಸಂಹಿತೆಗೆ ಬದ್ಧವಾಗಿದೆ. ಪ್ರತಿಯೊಂದು ಎಂಜಿನಿಯರಿಂಗ್ ವಿಭಾಗ ಮತ್ತು ವೃತ್ತಿಪರ ಸಮಾಜವು ನೀತಿಗಳ ಸಂಹಿತೆಯನ್ನು ಕಾಯ್ದುಕೊಂಡು,ಸದಸ್ಯರು ಅವುಗಳನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡುತ್ತಾರೆ. ವೃತ್ತಿಪರ ಎಂಜಿನಿಯರಿಂಗ್ ಡಿಗ್ರಿಗಳ ಅಂತಾರಾಷ್ಟ್ರೀಯ ಮಾನ್ಯತೆ ವಿವರಗಳಿಗೆ ವಾಷಿಂಗ್ಟನ್ ಒಪ್ಪಂದವನ್ನು ಕೂಡ ಉಲ್ಲೇಖಿಸಲಾಗುತ್ತದೆ.

ಇತರೆ ವಿಭಾಗಗಳ ಜತೆ ಸಂಬಂಧಗಳು

ಬದಲಾಯಿಸಿ

ವಿಜ್ಞಾನ

ಬದಲಾಯಿಸಿ

Scientists study the world as it is; engineers create the world that has never been.

ಚಿತ್ರ:Nrc-bri-bioprocess-lr.jpg
ಪ್ರೋಟೀನುಗಳನ್ನು ಉತ್ಪಾದಿಸುವ ಜೈವಿಕಸ್ಥಾವರಗಳು,NRC ಜೈವಿಕತಂತ್ರಜ್ಞಾನ ಸಂಶೋಧನಾ ಸಂಸ್ಥೆ,ಮಾಂಟ್ರಿಯಲ್, ಕೆನಡಾ

ವಿಜ್ಞಾನಗಳು ಮತ್ತು ಎಂಜಿನಿಯರಿಂಗ್ ಅಭ್ಯಾಸವು ಒಂದರ ಮೇಲೊಂದು ಸಂಯೋಜಿತವಾಗಿದೆ; ಎಂಜಿನಿಯರಿಂಗ್‌‌ನಲ್ಲಿ ವಿಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತದೆ.

ಎರಡೂ ಪ್ರಯತ್ನಗಳ ಕ್ಷೇತ್ರಗಳು ಸಾಮಗ್ರಿಗಳು ಮತ್ತು ವಿನ್ಯಾಸಗಳ ನಿಖರ ಅವಲೋಕನದ ಮೇಲೆ ಅವಲಂಬಿತವಾಗಿದೆ.
ಎರಡೂ ಕ್ಷೇತ್ರಗಳು ವಿಶ್ಲೇಷಣೆ ಮತ್ತು ಅವಲೋಕನಗಳನ್ನು ಮುಟ್ಟಿಸಲು ಗಣಿತ ಮತ್ತು ವರ್ಗೀಕರಣ ಮಾನದಂಡವನ್ನು ಬಳಸುತ್ತದೆ.

ವಿಜ್ಞಾನಿಗಳು ತಮ್ಮ ಅವಲೋಕಗಳನ್ನು ವ್ಯಾಖ್ಯಾನಿಸಿ ಆ ವ್ಯಾಖ್ಯಾನಗಳ ಆಧಾರದ ಮೇಲೆ ಪ್ರಾಯೋಗಿಕ ಕ್ರಿಯೆಗೆ ತಜ್ಞ ಶಿಫಾರಸುಗಳನ್ನು ಮಾಡುವುದನ್ನು ನಿರೀಕ್ಷಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ವಿಜ್ಞಾನಿಗಳು ಪ್ರಾಯೋಗಿತ ಉಪಕರಣ ಅಥವಾ ಕಟ್ಟಡಗಳ ಪ್ರತಿರೂಪದ ವಿನ್ಯಾಸ ಮುಂತಾದ ಎಂಜಿನಿಯರಿಂಗ್ ಕೆಲಸಗಳನ್ನು ಮುಗಿಸಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ, ತಂತ್ರಜ್ಞಾನದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಎಂಜಿನಿಯರುಗಳು ಹೊಸ ವಿದ್ಯಮಾನವನ್ನು ಕೆಲವುಬಾರಿ ಸ್ವಯಂ ಶೋಧನೆ ಮಾಡುವುದರಿಂದ ಆ ಕ್ಷಣದಲ್ಲಿ ವಿಜ್ಞಾನಿಗಳೆನಿಸುತ್ತಾರೆ. ವಾಟ್ ಎಂಜಿನಿಯರ್ಸ್ ನೊ ಎಂಡ್ ಹೌ ದೆ ನೊ ಇಟ್ ಎಂಬ ಪುಸ್ತಕದಲ್ಲಿ,ಎಂಜಿನಿಯರಿಂಗ್ ಸಂಶೋಧನೆಯು ವೈಜ್ಞಾನಿಕ ಸಂಶೋಧನೆಗಿಂತ ಭಿನ್ನವಾದ ಗುಣವನ್ನು ಹೊಂದಿರುವುದಾಗಿ ವಾಲ್ಟರ್ ವಿನ್ಸೆಂಟಿ ಪ್ರತಿಪಾದಿಸಿದ್ದಾರೆ.[೨೧] ಮೊದಲಿಗೆ,ಇದು ಸಾಮಾನ್ಯವಾಗಿ ಮ‌ೂಲ ಭೌತಶಾಸ್ತ್ರ ಮತ್ತು/ರಸಾಯನಶಾಸ್ತ್ರದ ಕ್ಷೇತ್ರಗಳಲ್ಲಿ ವ್ಯವಹರಿಸುತ್ತದೆನ್ನುವುದು ಚೆನ್ನಾಗಿ ತಿಳಿದ ಸಂಗತಿ. ಆದರೆ ಸಮಸ್ಯೆಗಳನ್ನು ಸ್ವತಃ ನಿಖರ ರೀತಿಯಲ್ಲಿ ಬಿಡಿಸಲು ತೀರಾ ಜಟಿಲವಾಗಿರುತ್ತದೆ. ಉದಾಹರಣೆಗಳು ವಿಮಾನದ ಮೇಲೆ ವಾಯುಚಲನೆ ಹರಿವನ್ನು ವರ್ಣಿಸುವ ನೇವಿಯರ್-ಸ್ಟೋಕ್ಸ್ ಸಮೀಕರಣಗಳಿಗೆ ಸಂಖ್ಯಾತ್ಮಕ ಅಂದಾಜುಗಳನ್ನು ಬಳಸುವುದು ಅಥವಾ ವಸ್ತುವಿನ ಹಾನಿಯನ್ನು ಲೆಕ್ಕ ಮಾಡುವ ಮೈನರ್ಸ್ ನಿಯಮ. ಎರಡನೆಯದಾಗಿ ಎಂಜಿನಿಯರಿಂಗ್ ಸಂಶೋಧನೆಯು ಶುದ್ಧ ವೈಜ್ಞಾನಿಕ ಸಂಶೋಧನೆಗೆ ಪರಕೀಯವಾದ ಅನೇಕ ಅರೆ-ಪ್ರಾಯೋಗಿಕ ವಿಧಾನಗಳನ್ನು ಅಳವಡಿಸುತ್ತದೆ. ಒಂದು ಉದಾಹರಣೆ ಪ್ರಮಿತಿ ವ್ಯತ್ಯಾಸದ ವಿಧಾನ ಫಂಗ್ ಎಲ್ ಅಲ್.ಉತ್ಕ್ರಷ್ಟ ಎಂಜಿನಿಯರಿಂಗ್ ಪಠ್ಯ ಫೌಂಡೇಶನ್ಸ್ ಆಫ್ ಸಾಲಿಡ್ ಮೆಕಾನಿಕ್ಸ್‌ನ ಪರಿಷ್ಕೃತ ಮುದ್ರಣದಲ್ಲಿ ವಿವರಿಸಲಾಗಿದೆ:

"

ಎಂಜನಿಯರಿಂಗ್ ವಿಜ್ಞಾನಕ್ಕಿಂತ ಸ್ವಲ್ಪ ಭಿನ್ನವಾಗಿದೆ. ವಿಜ್ಞಾನಿಗಳು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ನಿಸರ್ಗ. ಎಂಜಿನಿಯರುಗಳು ನಿಸರ್ಗದಲ್ಲಿ ಅಸ್ತಿತ್ವದಲ್ಲಿಲ್ಲದ ವಸ್ತುಗಳ ನಿರ್ಮಾಣಕ್ಕೆ ಪ್ರಯತ್ನಿಸುತ್ತಾರೆ. ಎಂಜಿನಿಯರ್‌ಗಳು ಸಂಶೋಧನೆಗೆ ಒತ್ತುನೀಡುತ್ತಾರೆ. ಸಂಶೋಧನೆಗೆ ರೂಪುಕೊಡಲು ಎಂಜಿನಿಯರ್ ತಮ್ಮ ಕಲ್ಪನೆಯನ್ನು ದೃಢ ಪದಗಳಲ್ಲಿ ಇಡಬೇಕು,ಮತ್ತು ಜನರು ಬಳಕೆ ಮಾಡುವ ವಸ್ತುವನ್ನು ವಿನ್ಯಾಸಗೊಳಿಸಬೇಕು. ಆ ವಸ್ತು ಉಪಕರಣ,ಯಂತ್ರೋಪಕರಣ,ಸಾಮಗ್ರಿ, ವಿಧಾನ,ಕಂಪ್ಯೂಟಿಂಗ್ ಕಾರ್ಯಕ್ರಮ ಹೊಸ ಪ್ರಯೋಗ, ಸಮಸ್ಯೆಯೊಂದಕ್ಕೆ ಒಂದು ಹೊಸ ಪರಿಹಾರ,ಅಥವಾ ಒಂದು ಸುಧಾರಣೆ ಅಸ್ತಿತ್ವದಲ್ಲಿರುವ ವಸ್ತುವಿಗೆ ಆಗಿರಬಹುದು. ವಿನ್ಯಾಸ ದೃಢವಾಗಿರಬೇಕಿದ್ದರಿಂದ ಅದು ಜ್ಯಾಮಿತಿಯನ್ನು ಹೊಂದಿರಬೇಕು, ಅಳತೆಗಳು ಮತ್ತು ವಿಶಿಷ್ಠ ಅಂಕಿಗಳಿರಬೇಕು. ಬಹುತೇಕ ಎಲ್ಲ ಎಂಜಿನಿಯರುಗಳು ಕೆಲಸಮಾಡುವ ಹೊಸ ವಿನ್ಯಾಸಗಳು ಎಲ್ಲ ಅಗತ್ಯ ಮಾಹಿತಿಗಳಿಲ್ಲ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಅನೇಕ ಬಾರಿ,ಸಾಕಷ್ಟಿರದ ವೈಜ್ಞಾನಿಕ ಜ್ಞಾನಕ್ಕೆ ಅವರು ಸೀಮಿತಗೊಂಡಿರುತ್ತಾರೆ. ಹೀಗೆ ಅವರು ಅಧ್ಯಯನವನ್ನು ಗಣಿತ, ಭೌತಶಾಸ್ತ್ರ ರಸಾಯನಶಾಸ್ತ್ರ,ಜೀವಶಾಸ್ತ್ರ ಮತ್ತು ಯಂತ್ರವಿಜ್ಞಾನದಲ್ಲಿ ಕೈಗೊಳ್ಳುತ್ತಾರೆ. ಆಗಾಗ್ಗೆ ಅವರು, ತಮ್ಮ ವೃತ್ತಿಗೆ ಸಂಬಂಧಿಸಿದ ವಿಜ್ಞಾನಗಳನ್ನು ಸೇರಿಸಬೇಕಾಗುತ್ತದೆ. ಹೀಗೆ ಎಂಜಿನಿಯರಿಂಗ್ ವಿಜ್ಞಾನ

ಹುಟ್ಟಿಕೊಂಡಿತು."[೨೨]

ವೈದ್ಯಕೀಯ ಮತ್ತು ಜೀವಶಾಸ್ತ್ರ

ಬದಲಾಯಿಸಿ
 
ಸ್ವಯಂ ಭಾವಚಿತ್ರದಲ್ಲಿ ಕಾಣುವ ಲಿಯೋನಾರ್ಡೊ ಡಾ ವಿನ್ಸಿ,ಕಲಾವಿದ/ಎಂಜಿನಿಯರ್ ಸಾಕಾರರೂಪ ಎಂದು ವರ್ಣಿತನಾಗಿದ್ದಾನೆ.<ಉಲ್ಲೇಖ ಹೆಸರು "ಜರ್ಕಲಿ, ಡೇವಿಡ್"/> ಮಾನವ ಅಂಗರಚನಾ ಶಾಸ್ತ್ರ ಮತ್ತು ಬಾಹ್ಯರೂಪದ ಶಾಸ್ತ್ರದ ಅಧ್ಯಯನಗಳಲ್ಲಿ ಹೆಸರುವಾಸಿಯಾಗಿದ್ದನು.

ವಿವಿಧ ದಿಕ್ಕುಗಳಿಂದ ಮತ್ತು ವಿವಿಧ ಉದ್ದೇಶಗಳಿಗೆ ಮಾನವ ದೇಹದ ಅಧ್ಯಯನ ಕೂಡ ವೈದ್ಯಕೀಯ ಮತ್ತು ಕೆಲವು ಎಂಜಿನಿಯರಿಂಗ್ ವಿಭಾಗಗಳ ನಡುವೆ ಮುಖ್ಯ ಸಮಾನ ಕೊಂಡಿಯನ್ನು ಕಲ್ಪಿಸಿದೆ. ವೈದ್ಯಕೀಯವು ಮಾನವ ದೇಹದ ಕಾರ್ಯವಿಧಾನಗಳನ್ನು ಅಗತ್ಯಬಿದ್ದರೆ ತಂತ್ರಜ್ಞಾನದ ಬಳಕೆಯಿಂದ ಸುಸ್ಥಿರ,ವರ್ಧಿಸುವ ಮತ್ತು ಬದಲಿಸುವ ಗುರಿಯನ್ನು ಕೂಡ ಹೊಂದಿದೆ. ಆಧುನಿಕ ವೈದ್ಯಕೀಯವು ಕೃತಕ ಅವಯವಗಳ ಬಳಕೆ ಮೂಲಕ ದೇಹದ ಅನೇಕ ಕಾರ್ಯವಿಧಾನಗಳನ್ನು ಬದಲಿಸಬಲ್ಲದು ಮತ್ತು ಮಾನವ ದೇಹದ ಕಾರ್ಯವಿಧಾನಗಳನ್ನು ಕೃತಕ ಉಪಕರಣಗಳ ಮ‌ೂಲಕ ಉದಾಹರಣೆಗೆ ಮೆದುಳು ಕಸಿ ಮತ್ತು ಪೇಸ್‌ಮೇಕರ್ ಮ‌ೂಲಕ ಬದಲಿಸಬಲ್ಲದು.[೨೩][೨೪] ಜೈವಿಕಯಂತ್ರ ವಿಜ್ಞಾನ ಮತ್ತು ವೈದ್ಯಕೀಯ ಜೈವಿಕಯಂತ್ರ ವಿಜ್ಞಾನ ಕ್ಷೇತ್ರಗಳು ನೈಸರ್ಗಿಕ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಕೃತಕ ಕಸಿ ವಿಧಾನವನ್ನು ಅಭ್ಯಸಿಸುವುದಕ್ಕೆ ಮುಡುಪಾಗಿದೆ. ಇದಕ್ಕೆ ವಿರುದ್ಧವಾಗಿ ಕೆಲವು ಎಂಜಿನಿಯರಿಂಗ್ ವಿಭಾಗಗಳು ಮಾನವ ದೇಹವನ್ನು ಅಭ್ಯಾಸಕ್ಕೆ ಯೋಗ್ಯವಾದ ಜೈವಿಕ ಯಂತ್ರವಾಗಿ ಕಾಣುತ್ತಾರೆ ಮತ್ತು ಜೀವಶಾಸ್ತ್ರವನ್ನು ತಂತ್ರಜ್ಞಾನದಿಂದ ಬದಲಿಸುವ ಮ‌ೂಲಕ ಅದರ ಅನೇಕ ಕಾರ್ಯವಿಧಾನಗಳ ಅನುಕರಣೆಗೆ ಮುಡುಪಾಗಿಟ್ಟಿದ್ದಾರೆ. ಇವುಗಳು ಕೃತಕ ಬುದ್ಧಿಮತ್ತೆ, ನರಗಳ ಜಾಲ,ಫಜಿ ತರ್ಕ ಮತ್ತು ರೊಬೊಟಿಕ್ಸ್ ಕ್ಷೇತ್ರಗಳಿಗೆ ದಾರಿಕಲ್ಪಿಸಿದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ನಡುವೆ ಗಣನೀಯ ಅಂತರವಿಭಾಗೀಯ ಪರಸ್ಪರ ಕ್ರಿಯೆ ಕೂಡ ಇರುತ್ತದೆ.[೨೫][೨೬] ಜಗತ್ತಿನ ನಿಜವಾದ ಸಮಸ್ಯೆಗಳಿಗೆ ಎರಡೂ ಕ್ಷೇತ್ರಗಳು ಪರಿಹಾರ ಒದಗಿಸುತ್ತವೆ. ಇದು ವಿದ್ಯಮಾನವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮುನ್ನವೇ ಕಠಿಣ ವೈಜ್ಞಾನಿಕ ಜ್ಞಾನದಿಂದ ಮುನ್ನಡಿ ಇಡುವ ಅಗತ್ಯವಿರುತ್ತದೆ ಮತ್ತು ಆದ್ದರಿಂದ ಪ್ರಯೋಗ ಮತ್ತು ಪ್ರಾಯೋಗಿಕ ಜ್ಞಾನವು ಎರಡರ ಅವಿಭಾಜ್ಯ ಅಂಗವಾಗಿದೆ. ವೈದ್ಯಕೀಯವು ಮಾನವ ದೇಹದ ಕಾರ್ಯವಿಧಾನವನ್ನು ಅಭ್ಯಸಿಸುತ್ತದೆ. ಜೈವಿಕ ಯಂತ್ರವಾಗಿ ಮಾನವದೇಹವು ಅನೇಕ ಕಾರ್ಯವಿಧಾನಗಳನ್ನು ಹೊಂದಿದ್ದು, ಎಂಜಿನಿಯರಿಂಗ್ ವಿಧಾನಗಳ ಮೂಲಕ ಈ ಕಾರ್ಯವಿಧಾನಗಳಿಗೆ ಮಾದರಿಯಾಗಿಸಬಹುದು.[೨೭] ಉದಾಹರಣೆಗೆ ಹೃದಯವು ಪಂಪ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ,[೨೮] ಅಸ್ಥಿಪಂಜರವು ಸನ್ನೆಕೋಲಿನ ರೀತಿಯಲ್ಲಿ ಕೊಂಡಿಗಳಿಂದ ಕೂಡಿದ ರಚನೆಯಾಗಿದೆ,[೨೯] ಮೆದುಳು ವಿದ್ಯುತ್ ಸಂಕೇತಗಳನ್ನು ಉತ್ಪಾದಿಸುತ್ತದೆ,ಇತರೆ.[೩೦] ಈ ಹೋಲಿಕೆಗಳು ಮತ್ತು ವೈದ್ಯಕೀಯದಲ್ಲಿ ಎಂಜಿನಿಯರಿಂಗ್ ತತ್ವಗಳ ಅಳವಡಿಕೆ ಬಗ್ಗೆ ಹೆಚ್ಚುತ್ತಿರುವ ಪ್ರಾಮುಖ್ಯತೆಯಿಂದ ಎರಡೂ ವಿಭಾಗಗಳಲ್ಲಿ ಅಭಿವೃದ್ಧಿಪಡಿಸಿದ ಪರಿಕಲ್ಪನೆಗಳನ್ನು ಬಳಸಿಕೊಂಡು ಜೀವವೈದ್ಯಕೀಯ ಎಂಜಿನಿಯರಿಂಗ್ ಕ್ಷೇತ್ರದ ಅಭಿವೃದ್ಧಿಗೆ ದಾರಿ ಕಲ್ಪಿಸಿತು. ಹೊಸದಾಗಿ ಹೊಮ್ಮುತ್ತಿರುವ ವಿಜ್ಞಾನದ ಶಾಖೆಗಳಾದ ಸಿಸ್ಟಮ್ಸ್ ಜೀವಶಾಸ್ತ್ರ ಮುಂತಾದವು ಎಂಜಿನಿಯರಿಂಗ್‌ಗೆ ಸಾಂಪ್ರದಾಯಿಕವಾಗಿ ಬಳಸುವ ವಿಶ್ಲೇಷಣಾತ್ಮಕ ಸಾಧನಗಳನ್ನು ಅಳವಡಿಸುತ್ತಿದೆ. ಜೈವಿಕ ವ್ಯವಸ್ಥೆಗಳ ವಿವರಣೆಗೆ ಸಿಸ್ಟಮ್ಸ್ ಮಾಡೆಲಿಂಗ್ ಮತ್ತು ಕಂಪ್ಯೂಟೇಷನಲ್ ವಿಶ್ಲೇಷಣೆ ಮುಂತಾದವು.[೨೭]

ಎಂಜಿನಿಯರಿಂಗ್ ಮತ್ತು ಕಲೆ ನಡುವೆ ಸಂಬಂಧಗಳಿವೆ;[೩೧] ಅವು ಕೆಲವು ಕ್ಷೇತ್ರಗಳಲ್ಲಿ ನೇರ ಸಂಪರ್ಕ ಹೊಂದಿವೆ.ಉದಾಹರಣೆಗೆ,ಕಟ್ಟಡವಿನ್ಯಾಸ,ಭೂಪ್ರದೇಶ ವಿನ್ಯಾಸ,ಕೈಗಾರಿಕೆ ವಿನ್ಯಾಸ(ಈ ವಿಭಾಗಗಳನ್ನು ಕೆಲವು ಬಾರಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಬೋಧನಾವಿಭಾಗದಲ್ಲಿ ಅಳವಡಿಸಿರಬಹುದು); ಉಳಿದವುಗಳಲ್ಲಿ ಪರೋಕ್ಷವಾಗಿ.[೩೧][೩೨][೩೩][೩೪] ಉದಾಹರಣೆಗೆ ಆರ್ಟ್ ಇನ್ಸ್ಟಿಟ್ಯೂಟ್ ಆಫ್ ಚಿಕಾಗೊ ನಾಸಾ ಬಾಹ್ಯಾಕಾಶ ವಿನ್ಯಾಸದ ಕಲೆ ಬಗ್ಗೆ ಪ್ರದರ್ಶನವೊಂದನ್ನು ಆಯೋಜಿಸಿತ್ತು.[೩೫] ರಾಬರ್ಟ್ ಮೈಲಾರ್ಟ್ ಅವರ ಸೇತುವೆ ವಿನ್ಯಾಸವನ್ನು ಉದ್ದೇಶಪೂರ್ವಕವಾಗಿ ಕಲಾತ್ಮಕ ಎಂದು ಕೆಲವರು ಗ್ರಹಿಸಿದರು.[೩೬] ಯುನಿವರ್ಸಿಟಿ ಆಫ್ ಸೌತ್ ಫ್ಲೋರಿಡಾದಲ್ಲಿ ಎಂಜಿನಿಯರಿಂಗ್ ಪ್ರಾಧ್ಯಾಪಕರೊಬ್ಬರು ನ್ಯಾಷನಲ್ ಸೈನ್ಸ್ ಫೌಂಡೇಶನ್ ಅನುದಾನದ ಮ‌ೂಲಕ ಕಲೆ ಮತ್ತು ಎಂಜಿನಿಯರಿಂಗ್ ಸಂಪರ್ಕ ಕಲ್ಪಿಸುವ ಕೋರ್ಸ್ ಅಭಿವೃದ್ಧಿಪಡಿಸಿದರು.[೩೨][೩೭] ಪ್ರಖ್ಯಾತ ಐತಿಹಾಸಿಕ ವ್ಯಕ್ತಿಗಳ ಪೈಕಿ ಲಿಯೋನಾರ್ಡೊ ಡಾ ವಿನ್ಸಿ ಪ್ರಖ್ಯಾತ ನವೋದಯ ಕಲಾವಿದ ಮತ್ತು ಎಂಜಿನಿಯರ್ ಮತ್ತು ಕಲೆ ಎಂಜಿನಿಯರಿಂಗ್ ನಡುವೆ ಸಖ್ಯಕ್ಕೆ ಮುಖ್ಯ ಉದಾಹರಣೆಯಾಗಿದ್ದಾರೆ.[೩೮][೩೯]

ಇತರ ಕ್ಷೇತ್ರಗಳು

ಬದಲಾಯಿಸಿ

ರಾಜಕೀಯ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಪದವನ್ನು ಸಾಮಾಜಿಕ ಎಂಜಿನಿಯರಿಂಗ್ ಮತ್ತು ರಾಜಕೀಯ ಎಂಜಿನಿಯರಿಂಗ್ ವಿಷಯಗಳ ಅಭ್ಯಾಸಕ್ಕೆ ಎರವಲು ಪಡೆಯಲಾಗಿದೆ.ಇವು ಎಂಜಿನಿಯರಿಂಗ್ ಕಾರ್ಯವಿಧಾನದ ಜತೆ ರಾಜಕೀಯ ವಿಜ್ಞಾನದ ತತ್ವಗಳನ್ನು ಬಳಸಿಕೊಂಡು ರಾಜಕೀಯ ಮತ್ತು ಸಾಮಾಜಿಕ ರಚನೆಯನ್ನು ರೂಪಿಸುವುದಕ್ಕೆ ಸಂಬಂಧಿಸಿದೆ.

ಇದನ್ನೂ ಗಮನಿಸಿ

ಬದಲಾಯಿಸಿ
ಪಟ್ಟಿಗಳು

ಟೆಂಪ್ಲೇಟು:Portal

ಸಂಬಂಧಿತ ವಿಷಯಗಳು

ಆಕರಗಳು

ಬದಲಾಯಿಸಿ
  1. ಸೈನ್ಸ್, ವಾಲ್ಯೂಮ್ 94, ಇಷ್ಯೂ 2446, pp. 456: ಎಂಜಿನಿಯರ್ಸ್ ಕೌನ್ಸಿಲ್ ಫಾರ್ ಪ್ರೊಫೆಷನಲ್ ಡೆವಲಪ್‌ಮೆಂಟ್'
  2. ಎಂಜಿನಿಯರ್ಸ್' ಕೌನ್ಸಿಲ್ ಫಾರ್ ಫ್ರೊಫೆಷನಲ್ ಡೆವಲಪ್‌ಮೆಂಟ್. Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.(1947). Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.ಕ್ಯಾನನ್ಸ್ ಆಫ್ ಎಥಿಕ್ಸ್ ಫಾರ್ ಎಂಜಿನಿಯರ್ಸ್ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ ಎಂಜಿನಿಯರ್ಸ್' ಕೌನ್ಸಿಲ್ ಫಾರ್ ಪ್ರೊಫೆಷನಲ್ ಡೆವಲಪ್‌ಮೆಂಟ್ ಡೆಫಿನೇಷನ್ ಆನ್ ಎನ್‌ಸೈಕ್ಲೋಪೀಡಿಯ ಬ್ರಿಟಾನಿಕಾ (ಎಂಜಿನಿಯರಿಂಗ್ ಕುರಿತು ಬ್ರಿಟಾನಿಕಾ ಲೇಖನ ಸೇರಿದೆ)
  4. ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿ
  5. ಮೂಲ: 1250–1300; ME ಎಂಜಿನ್ < AF, OF < L ಇಂಗೇನಿಯಂ ಸ್ವಭಾವ, ಸಹಜ ಗುಣಮಟ್ಟ , esp. ಮಾನಸಿಕ ಶಕ್ತಿ, ಈ ಕಾರಣದಿಂದ ಬುದ್ಧಿವಂತ ಸಂಶೋಧನೆ, ಸಮಾನ. to in- + -genium, ಸಮಾನ. to gen- begetting; ಮ‌ೂಲ: ರಾಂಡಮ್ ಹೌಸ್ ಅನ್‌ಬ್ರಿಡ್ಜ್‌ಡ್ ಡಿಕ್ಷನರಿ, © ರಾಂಡಮ್ ಹೌಸ್, ಇಂಕ್. 2006.
  6. ಬ್ಯಾರಿ J. ಕೆಂಪ್, ಏನ್‌ಸೀಂಟ್ ಈಜಿಪ್ಟ್ , ರೌಟ್‌ಲೆಡ್ಜ್ 2005, p. 159
  7. ವಿಲ್‌ಪೋರ್ಡ್, ಜಾನ್. ಜುಲೈ 31, 2008. ಡಿಸ್ಕವರಿಂಗ್ ಹೌ ಗ್ರೀಕ್ಸ್ ಕಂಪ್ಯೂಟೆಡ್ ಇನ್ 100 B.C.. ನ್ಯೂ ಯಾರ್ಕ್‌ ಟೈಮ್ಸ್
  8. Wright, M T. (2005). "Epicyclic Gearing and the Antikythera Mechanism, part 2". Antiquarian Horology. 29 (1 (September 2005)): 54–60.
  9. ಬ್ರಿಟಾನಿಕಾ ಆನ್ ಗ್ರೀಕ್ ಸಿವಿಲೈಸೇಷನ್ ಇನ್ ದಿ 5 ಸೆಂಚುರಿ ಮಿಲಿಟರಿ ಟೆಕ್ನಾಲಜಿ ಉಲ್ಲೇಖ: "7ನೇ ಶತಮಾನಕ್ಕೆ ಹೋಲಿಸಿದರೆ ತ್ವರಿತಗತಿಯ ಸಂಶೋಧನೆಗಳಿಗೆ ಸಾಕ್ಷಿಯಾಯಿತು,ಹಾಪ್‌ಲೈಟ್ ಮತ್ತು ಟ್ರೈರೇಮ್ ಮುಂತಾದವು 5ನೇ ಶತಮಾನದಲ್ಲಿ ಯುದ್ಧದ ಮ‌ೂಲ ಉಪರಕರಣಗಳಾಗಿತ್ತು". ಮತ್ತು "ಆದರೆ ಫಿರಂಗಿ ಅಭಿವೃದ್ಧಿ ಹೊಸ ಯುಗಕ್ಕೆ ನಾಂದಿ ಹಾಡಿತು ಮತ್ತು ಈ ಸಂಶೋಧನೆಯು 4ನೇ ಶತಮಾನದ ಪೂರ್ವದಲ್ಲಿ ಉಂಟಾಗಿಲ್ಲ. ಡಯಾನಿಸಿಯಸ್ I ಆಫ್ ಸಿರಾಕ್ಯೂಸ್ ಕಾಲದಲ್ಲಿ ಕಾರ್ತೇಜ್ ವಿರುದ್ಧ ಸಿಸಿಲಿಯನ್ ಯುದ್ಧದ ಸಂದರ್ಭದಲ್ಲಿ ಇದು ಮೊದಲಿಗೆ ಕೇಳಿಬಂತು."
  10. ಮೆರಿಯಮ್-ವೆಬ್‌ಸ್ಟರ್ ಕೊಲೇಜಿಯಟ್ ಪದಕೋಶ, 2000, CD-ROM, ಆವೃತ್ತಿ 2.5.
  11. Jenkins, Rhys (1936). Links in the History of Engineering and Technology from Tudor Times. Ayer Publishing. p. 66. ISBN 0836921674. {{cite book}}: Cite has empty unknown parameter: |coauthors= (help)
  12. ೧೨.೦ ೧೨.೧ ಇಂಪೀರಿಯಲ್ ಕಾಲೇಜ್ Archived 2011-06-17 ವೇಬ್ಯಾಕ್ ಮೆಷಿನ್ ನಲ್ಲಿ.: ಇಂಪೀರಿಲ್‌ನಲ್ಲಿ ಎಂಜಿನಿಯರಿಂಗ್ ಅಧ್ಯಯನ: ಎಂಜಿನಿಯರಿಂಗ್‌ನ ಐದು ಮುಖ್ಯ ಶಾಖೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳ ಅಧ್ಯಯನ ಅವಕಾಶ: ಏರೋನಾಟಿಕಲ್, ಕೆಮಿಕಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್. ಕಂಪ್ಯೂಟಿಂಗ್ ವಿಜ್ಞಾನ,ಸಾಫ್ಟ್‌ವೇರ್ ಎಂಜಿನಿಯರಿಂಗ್,ಮಾಹಿತಿ ಸಿಸ್ಟಮ್ಸ್ ಎಂಜಿನಿಯರಿಂಗ್, ಮೇಟೀರಿಯಲ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಗಣಿಗಾರಿಕೆ ಎಂಜಿನಿಯರಿಂಗ್ ಮತ್ತು ಪೆಟ್ರೋಲಿಯಂ ಎಂಜಿನಿಯರಿಂಗ್‌ನಲ್ಲಿ ಕೂಡ ಕೋರ್ಸ್‌ಗಳಿವೆ.
  13. Van Every, Kermit E. (1986). "Aeronautical engineering". Encyclopedia Americana. Vol. 1. Grolier Incorporated. p. 226.
  14. Wheeler, Lynde, Phelps (1951). Josiah Willard Gibbs - the History of a Great Mind. Ox Bow Press. ISBN 1-881987-11-6.{{cite book}}: CS1 maint: multiple names: authors list (link)
  15. ಯೂನಿವರ್ಸಿಟಿ ಆಫ್ ಎಡಿನ್‌ಬರ್ಗ್ Archived 2007-10-23 ವೇಬ್ಯಾಕ್ ಮೆಷಿನ್ ನಲ್ಲಿ. ರಾಸಾಯನಿಕ ಎಂಜಿನಿಯರಿಂಗ್‌ಗೆ ಸ್ವಾಗತ, ಈ ಶೈಕ್ಷಣಿಕ ವರ್ಷದಲ್ಲಿ 50 ವರ್ಷಗಳನ್ನು ಆಚರಿಸುತ್ತಿದೆ, ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಎಲೆಕ್ರ್ಟಾನಿಕ್ಸ್ ಭಾಗವಾಗಿದೆ (SEE), ಇತರೆ ಮೂರು ಮುಖ್ಯ ಎಂಜಿನಿಯರಿಂಗ್ ವಿಭಾಗಗಳಾದ ವಿದ್ಯುತ್ ಮತ್ತು ವಿದ್ಯುನ್ಮಾನ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್ ಮತ್ತು ಯಂತ್ರವಿಜ್ಞಾನ ಎಂಜಿನಿಯರಿಂಗ್ ಕೂಡ ಸೇರಿದೆ
  16. Arbe, Katrina (2001.05.07). "PDM: Not Just for the Big Boys Anymore". ThomasNet. Archived from the original on 2010-08-06. Retrieved 2010-02-04. {{cite web}}: Check date values in: |date= (help)
  17. Arbe, Katrina (2003.05.22). "The Latest Chapter in CAD Software Evaluation". ThomasNet. Archived from the original on 2010-08-06. Retrieved 2010-02-04. {{cite web}}: Check date values in: |date= (help)
  18. "MDG ಇನ್ಫೊ ಪಿಡಿಎಫ್" (PDF). Archived from the original (PDF) on 2006-10-06. Retrieved 2021-08-09.
  19. Leger Marketing (2006). "Sponsorship effect seen in survey of most-trusted professions: pollster". Archived from the original on 2009-07-25. Retrieved 2010-02-04. {{cite journal}}: Cite journal requires |journal= (help), pg. 2, ಕೆನಡಿಯನ್ನರು ಹೆಚ್ಚು-ವಿಶ್ವಾಸ ಇರಿಸಿದ ಕೆಲಸಗಳು, ಲೆಗಾರ್ ಮಾರ್ಕೆಟಿಂಗ್ ಸಮೀಕ್ಷೆ ಪ್ರಕಾರ... ಎಂಜಿನಿಯರಿಂಗ್ 88 ಶೇಕಡ ಪ್ರತಿವಾದಿಗಳು...
  20. APEGBC - ಪ್ರೊಫೆಷನಲ್ ಎಂಜಿನಿಯರ್ಸ್ ಅಂಡ್ ಜಿಯೋಸೈಂಟಿಸ್ಟ್ಸ್ ಆಫ್ BC
  21. Vincenti, Walter G. (1993). What Engineers Know and How They Know It: Analytical Studies from Aeronautical History. Johns Hopkins University Press.
  22. Classical and Computational Solid Mechanics, YC Fung and P. Tong. World Scientific. 2001.
  23. ಎಥಿಕಲ್ ಅಸೆಸ್‌ಮೆಂಟ್ ಆಪ್ ಇಮ್ಲಾಂಟೇಬಲ್ ಬ್ರೈನ್ ಚಿಪ್ಸ್ ಎಲೆನ್ M. ಮೆಗೀ ಅಂಡ್ G. Q. ಮ್ಯಾಗ್ವೈರ್, Jr. ಫ್ರಂ ಬೋಸ್ಟನ್ ಯೂನಿವರ್ಸಿಟಿ
  24. IEEE ಟೆಕ್ನಿಕಲ್ ಪೇಪರ್: ಫಾರೀನ್ ಪಾರ್ಟ್ಸ್ (ಎಲೆಕ್ಟ್ರಾನಿಕ್ ಬಾಡಿ ಇಂಪ್ಲಾಂಟ್ಸ್).ಬೈ ಇವಾನ್ಸ್-ಪುಗೆ, C. ಕ್ವೋಟ್ ಫ್ರಂ ಸಮ್ಮರಿ:ಫೀಲಿಂಗ್ ತ್ರೀಟಂಡ್ ಬೈ ಸೈಬಾರ್ಗ್ಸ್?
  25. "ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನ್ ಅಂಡ್ ಎಂಜಿನಿಯರಿಂಗ್: ಮಿಷನ್ ಸ್ಟೇಟ್‌ಮೆಂಟ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಸಿನ್ ಅಂಡ್ ಎಂಜಿನಿಯರಿಂಗ್ (IME)ಗುರಿಯು ಬಯೋಮೆಡಿಸಿನ್ ಮತ್ತು ಎಂಜಿನಿಯರಿಂಗ್/ಫಿಸಿಕಲ್/ಕಂಪ್ಯೂಟೇಷನಲ್ ಸೈನ್ಸಸ್ ಸಂಪರ್ಕದಿಂದ ಮ‌ೂಲಭೂತ ಸಂಶೋಧನೆಗೆ ಉತ್ತೇಜಿಸುವುದು. ಇದು ಬಯೋಮೆಡಿಕಲ್ ಸಂಶೋಧನೆ ಮತ್ತು ಕ್ಲಿನಿಕಲ್ ಅಭ್ಯಾಸದಲ್ಲಿ ಹೊಸ ಕಾರ್ಯಕ್ರಮಗಳಿಗೆ ದಾರಿ ಕಲ್ಪಿಸುತ್ತದೆ..." Archived from the original on 2007-03-17. Retrieved 2010-02-04.
  26. IEEE ಎಂಜಿನಿಯರಿಂಗ್ ಇನ್ ಮೆಡಿಸನ್ ಅಂಡ್ ಬಯಲಜಿ: ಎರಡೂ ಬಯೋಮೆಡಿಕಲ್ ಮತ್ತು ಕ್ಲಿನಿಕಲ್ ಎಂಜಿನಿಯರಿಂಗ್‌ನಲ್ಲಿ ಬಳಸಿದ ಪ್ರಸಕ್ತ ತಂತ್ರಜ್ಞಾನಗಳು ಮತ್ತು ವಿಧಾನಗಳನ್ನು ಕುರಿತ ಸಾಮಾನ್ಯ ಮತ್ತು ತಾಂತ್ರಿಕ ಲೇಖನಗಳು...
  27. ೨೭.೦ ೨೭.೧ "ರಾಯಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ ಅಂಡ್ ದಿ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್: ಸಿಸ್ಟಮ್ಸ್ ಬಯಲಜಿ : ಎಂಜಿನಿಯರಿಂಗ್ ಮತ್ತು ವೈದ್ಯಕೀಯದ ಮುನ್ನೋಟ pdfನಲ್ಲಿ: ಉಲ್ಲೇಖ 1: ಸಿಸ್ಟಮ್ಸ್ ಜೀವಶಾಸ್ತ್ರವು ಹೊರಹೊಮ್ಮುತ್ತಿರುವ ಕಾರ್ಯವಿಧಾನವಾಗಿದ್ದು,ಅದು ಇನ್ನೂ ವ್ಯಾಖ್ಯಾನಗೊಳ್ಳಬೇಕಿದೆ. ಉಲ್ಲೇಖ 2: ಕಂಪ್ಯೂಟೇಷನಲ್ ಮತ್ತು/ಅಥವಾ ಗಣಿತಶಾಸ್ತ್ರ ಮಾದರಿ ಮತ್ತು ಪ್ರಯೋಗದ ನಡುವೆ ಪುನರಾವರ್ತನೆ ಮೂಲಕ ಜಟಿಲ ಜೈವಿಕ ವ್ಯವಸ್ಥೆಗಳ ಅಧ್ಯಯನಕ್ಕೆ ಸಿಸ್ಟಮ್ ಎಂಜಿನಿಯರಿಂಗ್ ಪರಿಕಲ್ಪನೆಗಳ ಅಳವಡಿಕೆ " (PDF). Archived from the original (PDF) on 2007-04-10. Retrieved 2010-02-04.
  28. ಸೈನ್ಸ್ ಮ‌್ಯೂಸಿಯಂ ಆಫ್ ಮಿನ್ನೆಸೋಟಾ: ಆನ್‌ಲೈನ್ ಲೆಸನ್ 5ಎ; ದಿ ಹಾರ್ಟ್ ಆಸ್ ಎ ಪಂಪ್
  29. "ಮಿನ್ನೆಸೋಟಾ ಸ್ಟೇಟ್ ಯೂನಿವರ್ಸಿಟಿ ಮ್ಯೂಸಿಯಂ: ಸನ್ನೆಕೋಲಿನ ರೀತಿಯಲ್ಲಿ ಮೂಳೆಗಳ ಕಾರ್ಯನಿರ್ವಹಣೆ". Archived from the original on 2010-06-03. Retrieved 2010-02-04.
  30. UC ಬರ್ಕಲಿ ನ್ಯೂಸ್: UC ಸಂಶೋಧಕರು ಮೂರ್ಚೆ ರೋಗದ ಸಂದರ್ಭದಲ್ಲಿ ಮೆದುಳಿನ ವಿದ್ಯುತ್ ಅಲೆಯ ಮಾದರಿ ಸೃಷ್ಟಿ
  31. ೩೧.೦ ೩೧.೧ ಲೆಹಿಗ್ ಯೂನಿವರ್ಸಿಟಿ ಪ್ರಾಜೆಕ್ಟ್: ಕಲೆ ಮತ್ತು ಕಟ್ಟಡವಿನ್ಯಾಸ ಹಾಗೂ ಎಂಜಿನಿಯರಿಂಗ್ ನಡುವೆ ಸಂಬಂಧವನ್ನು ನಿರೂಪಿಸಲು ನಾವು ಈ ಯೋಜನೆ ಬಳಕೆಗೆ ಇಚ್ಛಿಸಿದ್ದೆವು
  32. ೩೨.೦ ೩೨.೧ ನ್ಯಾಷನಲ್ ಸೈನ್ಸ್ ಫೌಂಡೇಷನ್ :ದಿ ಆರ್ಟ್ ಆಫ್ ಎಂಜಿನಿಯರಿಂಗ್: ವಿದ್ಯಾರ್ಥಿಗಳ ಎಂಜಿನಿಯರಿಂಗ್ ದೃಷ್ಟಿಕೋನಗಳನ್ನು ವಿಶಾಲಗೊಳಿಸಲು ಪ್ರಾಧ್ಯಾಪಕರಿಂದ ಲಲಿತಕಲೆ ಬಳಕೆ
  33. "MIT ವರ್ಲ್ಡ್ : ದಿ ಆರ್ಟ್ ಆಫ್ ಎಂಜಿನಿಯರಿಂಗ್: ಇನ್ವೆಂಟರ್ ಜೇಮ್ಸ್ ಡೈಸನ್ ಆನ್ ದಿ ಆರ್ಟ್ ಆಫ್ ಎಂಜಿನಿಯರಿಂಗ್: ಉಲ್ಲೇಖ: ಬ್ರಿಟಿಷ್ ಡಿಸೈನ್ ಕೌನ್ಸಿಲ್ ಸದಸ್ಯ, ಜೇಮ್ಸ್ ಡೈಸನ್ 1970ರಿಂದ ರಾಯಲ್ ಕಾಲೇಜ್ ಆಫ್ ಆರ್ಟ್‌ನಿಂದ ಪದವಿ ಪಡೆದಾಗಿನಿಂದ ಉತ್ಪನ್ನಗಳ ವಿನ್ಯಾಸ ರೂಪಿಸುತ್ತಿದ್ದಾರೆ". Archived from the original on 2006-07-05. Retrieved 2010-02-04.
  34. ಯೂನಿವರ್ಸಿಟಿ ಆಫ್ ಟೆಕ್ಸಾಸ್ ಅಟ್ ಡೆಲ್ಲಾಸ್:ದಿ ಇನ್‌ಸ್ಟಿಟ್ಯೂಟ್ ಫಾರ್ ಇಂಟರಾಕ್ಟಿವ್ ಆರ್ಟ್ಸ್ ಅಂಡ್ ಎಂಜಿನಿಯರಿಂಗ್
  35. ಏರೋಸ್ಪೇಸ್ ಡಿಸೈನ್: ವೈಮಾನಿಕ ಸಂಶೋಧನೆಯ ಎಂಜಿನಿಯರಿಂಗ್ ಕಲೆ
  36. ಪ್ರಿನ್ಸ್‌ಟೌನ್ U:ರಾಬರ್ಟ್ ಮೈಲಾರ್ಟ್ಸ್ ಬ್ರಿಡ್ಜಸ್:ದಿ ಆರ್ಟ್ ಆಫ್ ಎಂಜಿನಿಯರಿಂಗ್:ಉಲ್ಲೇಖ: ಸೌಂದರ್ಯ ಪರಿಣಾಮಗಳ ಬಗ್ಗೆ ಮೈಲಾರ್ಟ್‌ಗೆ ಪೂರ್ಣ ಅರಿವಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ..
  37. "ಉಲ್ಲೇಖ:..ಕಲಾವಿದರ ಸಾಧನಗಳು ಮತ್ತು ಎಂಜಿನಿಯರ್‌ಗಳ ದೃಷ್ಟಿಕೋನ." Archived from the original on 2007-09-27. Retrieved 2010-02-04.
  38. ಜರ್ಕಲಿ, ಡೇವಿಡ್. “ದಿ ಆರ್ಟ್ ಆಫ್ ರೆನೈಸೆನ್ಸ್ ಎಂಜಿನಿಯರಿಂಗ್.” MIT’s ಟೆಕ್ನಾಲಜಿ ರಿವ್ಯೂ ಜನವರಿ./ಫೆಬ್ರವರಿ.1998: 54-9. ಲೇಖನವು “ಕಲಾವಿದ-ಎಂಜಿನಿಯರ್“, ಪರಿಕಲ್ಪನೆಯನ್ನು ಶೋಧಿಸುತ್ತದೆ,ಎಂಜಿನಿಯರಿಂಗ್‌ನಲ್ಲಿ ತನ್ನ ಕಲಾತ್ಮಕ ಪ್ರತಿಭೆಯನ್ನು ಬಳಸುವ ವ್ಯಕ್ತಿ ಲೇಖನದಿಂದ ಉಲ್ಲೇಖ: “ಕಲಾವಿದ-ಎಂಜಿನಿಯರ್”-ಡಾಮ್ ಪರಾಕಾಷ್ಠೆಯನ್ನು ಡಾ ವಿನ್ಸಿ ಮುಟ್ಟಿದ, ಉಲ್ಲೇಖ 2: “ಕಲಾವಿದ-ಎಂಜಿನಿಯರ್ ಪಾತ್ರದಲ್ಲಿ ಅತೀ ಮಹತ್ವಾಕಾಂಕ್ಷಿ ವಿಸ್ತರಣೆಯನ್ನು ಆರಂಭಿಸಿದವನು ಲಿಯೋನಾರ್ಡೊ ಡಾ ವಿನ್ಸಿ, ಜಾಣ್ಮೆಯ ವೀಕ್ಷಕನಿಂದ ಸಂಶೋಧಕನಾಗಿ,ಸಿದ್ಧಾಂತಿಯಾಗಿ ಪ್ರಗತಿಹೊಂದಿದ .” (ಜರ್ಕಲಿ 58)
  39. "ಡ್ರಿವ್ U: ಯೂಸರ್ ವೆಬ್‌ಸೈಟ್: ಸೈಟ್ಸ್ ಜರ್ಕಲಿ ಪೇಪರ್". Archived from the original on 2007-04-19. Retrieved 2010-02-04.


ಹೆಚ್ಚಿನ ಓದಿಗೆ

ಬದಲಾಯಿಸಿ
  • Dorf, Richard, ed. (2005). The Engineering Handbook (2 ed.). Boca Raton: CRC. ISBN 0849315867. {{cite book}}: Cite has empty unknown parameters: |month= and |chapterurl= (help)
  • Billington, David P. (1996-06-05). The Innovators: The Engineering Pioneers Who Made America Modern. Wiley; New Ed edition. ISBN 0-471-14026-0. {{cite book}}: Cite has empty unknown parameters: |accessyear=, |origmonth=, |accessmonth=, |month=, |chapterurl=, |origdate=, and |coauthors= (help)
  • Petroski, Henry (1992-03-31). To Engineer is Human: The Role of Failure in Successful Design. Vintage. ISBN 0-679-73416-3. {{cite book}}: Cite has empty unknown parameters: |accessyear=, |origmonth=, |accessmonth=, |month=, |chapterurl=, |origdate=, and |coauthors= (help)
  • Petroski, Henry (1994-02-01). The Evolution of Useful Things: How Everyday Artifacts-From Forks and Pins to Paper Clips and Zippers-Came to be as They are. Vintage. ISBN 0-679-74039-2. {{cite book}}: Cite has empty unknown parameters: |accessyear=, |origmonth=, |accessmonth=, |month=, |chapterurl=, |origdate=, and |coauthors= (help)
  • Lord, Charles R. (2000-08-15). Guide to Information Sources in Engineering. Libraries Unlimited. doi:10.1336/1563086999. ISBN 1-563-08699-9. {{cite book}}: Cite has empty unknown parameters: |accessyear=, |origmonth=, |accessmonth=, |month=, |chapterurl=, |origdate=, and |coauthors= (help)
  • Vincenti, Walter G. (1993-02-01). What Engineers Know and How They Know It: Analytical Studies from Aeronautical History. The Johns Hopkins University Press. ISBN 0-80184588-2. {{cite book}}: Cite has empty unknown parameters: |accessyear=, |origmonth=, |accessmonth=, |month=, |chapterurl=, |origdate=, and |coauthors= (help)
  • Hill, Donald R. (1973-12-31) [1206]. The Book of Knowledge of Ingenious Mechanical Devices: Kitáb fí ma'rifat al-hiyal al-handasiyya. Pakistan Hijara Council. ISBN 969-8016-25-2. {{cite book}}: Cite has empty unknown parameters: |accessyear=, |origmonth=, |accessmonth=, |month=, |chapterurl=, |origdate=, and |coauthors= (help)

ಬಾಹ್ಯ ಕೊಂಡಿಗಳು

ಬದಲಾಯಿಸಿ