ನನ್ನ ಬಗ್ಗೆ

ಬದಲಾಯಿಸಿ
 
ಯಾಣ

ನನ್ನ ಹೆಸರು ಭೂಮಿಕಾ ಪ್ರಕಾಶ ಪೂರ್ಣಮಠ. ನಾನು ಹುಟ್ಟಿದ್ದು ಕರ್ನಾಟಕರಾಜಧಾನಿಯಾದ ಬೆಂಗಳೂರಿನಲ್ಲಿ. ಜನ್ಮ ದಿನಾಂಕ ೧೯೯೯ನೇ ಇಸವಿ ಏಪ್ರಿಲ್ ೮. ನನ್ನ ತಾಯಿಯ ಹೆಸರು ಸಾವಿತ್ರಿ ಗಜಾನನ ಹೆಗಡೆ. ತಂದೆಯ ಹೆಸರು ಪ್ರಕಾಶ ಗಣಪತಿ ಪೂರ್ಣಮಠ. ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣ .

ನನ್ನ ಹುಟ್ಟೂರು

ಬದಲಾಯಿಸಿ
 
ಮುರುಡೇಶ್ವರ

ಇದು ನಿಸರ್ಗದ ಮಡಿಲಲ್ಲಿ ಶೋಭಿಸುತ್ತಿರುವುದು. ಇದು ದಕ್ಷಿಣಕಾಶಿಯೆಂದೇ ಪ್ರಸಿದ್ಧವಾಗಿದೆ. ಗೋಕರ್ಣವು ಪಶ್ಚಿಮ ಕರಾವಳಿ ತೀರದಲ್ಲಿದ್ದು ಇದೊಂದು ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಗಣೇಶ ದೇವಸ್ಥಾನ, ಶ್ರೀ ಮಹಾಬಲೇಶ್ವರ ದೇವಸ್ಥಾನ, ಶ್ರೀ ತಾಮ್ರಗೌರಿ ದೇವಸ್ಥಾನ,ಕೋಟಿತೀರ್ಥ ಮತ್ತು ಪ್ರವಾಸಿಗರನ್ನು ವಿಶೇಷವಾಗಿ ವಿದೇಶಿಯರನ್ನು ಮನಸೆಳೆಯುವ ಅರಬ್ಬಿಸಮುದ್ರದ ತೀರವಾದ ಓಂ ಬೀಚ್ ಕೂಡ ಇದೆ. ಇದಲ್ಲದೆ ನನ್ನ ಜಿಲ್ಲೆಯಾದ ಉತ್ತರಕನ್ನಡದಲ್ಲಿ ಪ್ರವಾಸಿಗರನ್ನು ಮನಸೆಳೆಯುವ ಇನ್ನಿತರ ಪ್ರಸಿದ್ಧ ಕ್ಷೇತ್ರಗಳಾದ ಮಾತೋಬಾರ ಇಡಗುಂಜಿ ಮಹಾಗಣಪತಿ, ಯಾಣ, ಬನವಾಸಿ ಮಧುಕೇಶ್ವರ, ಸಿರ್ಸಿಮಾರಿಕಾಂಬಾ ದೇವಸ್ಥಾನ, ಮುರುಡೇ‍ಶ್ವರ ದೇವಸ್ಥಾನ ಹಾಗೂ ಬೆಟ್ಟದ ಮೇಲ್ಭಾಗದಲ್ಲಿ ಕರಿಕಾನ ಪರಮೇಶ್ವರಿ ದೇವಸ್ಥಾನಗಳಿವೆ. ಕರಿಕಾನ ಪರಮೇಶ್ವರಿ ದೇವಸ್ಥಾನವು ನಿಸರ್ಗದ ಮಡಿಲಲ್ಲಿ ಇದ್ದು ಪ್ರವಾಸಿಗರನ್ನು ಮನಸೆಳೆಯುವ ತಾಣವಾಗಿದೆ ಎಂದರೂ ತಪ್ಪಾಗಲಾರದು. ಇದಲ್ಲದೆ, ಕಾರಾವಾರದಲ್ಲಿ ಸೀಬರ್ಡ್ ನೌಕಾನೆಲೆ, ಬಂದರು ಹಾಗೂ ಕೈಗಾ ಅಣುವಿದ್ಯುತ್ ಸ್ಥಾವರ ಇದೆ. ದಾಂಡೇಲಿಯಲ್ಲಿ ಪ್ರಸಿದ್ಧವಾದ ಕಾಗದದ ಕಾ‍ರ್ಖಾನೆ ಇದೆ.

ವಿದ್ಯಾಭ್ಯಾಸ

ಬದಲಾಯಿಸಿ
 
ಮಧುಕೇಶ್ವರ ದೇವಾಲಯ

ನಾನು ಒಂದನೆಯ ತರಗತಿಯಿಂದ ಐದನೆಯ ತರಗತಿಯ ವರೆಗೆ ಬೆಂಗಳೂರಿನ ಶ್ರೀನಿವಾಸನಗರದಲ್ಲಿರುವ ಹೋಲಿಚೈಲ್ಡ್ ಕಾನ್ವೆಂಟ್ ನಲ್ಲಿ ವಿದ್ಯಾಭ್ಯಾಸ ಮಾಡಿರುತ್ತೇನೆ. ತದನಂತರ, ಕೇದ್ರೀಯ ವಿದ್ಯಾಸಂಸ್ಥೆಯಾದ ಬೆಂಗಳೂರು ಗ್ರಾಮಾಂತರದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಆರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುತ್ತೇನೆ. ಪಿ.ಯು.ಸಿ.ಯನ್ನು ಪ್ರಸಿದ್ಧ ವಿದ್ಯಾಸಂಸ್ಥೆಯಾದ ಬೆಂಗಳೂರಿನ ಹನುಮಂತನಗರದಲ್ಲಿರುವ ಪಿ.ಇ.ಎಸ್.ಕಾಲೇಜಿನಲ್ಲಿ ಓದಿರುತ್ತೇನೆ. ಪ್ರಸ್ತುತ ನಾನು ಮತ್ತೊಂದು ಪ್ರಖ್ಯಾತ ವಿದ್ಯಾಸಂಸ್ಥೆಯಾದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ. ಮೊದಲನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.

 
ಮಹಾಬಲೇಶ್ವರ ದೇವಾಲಯ,ಗೋಕರ್ಣ

ಹವ್ಯಾಸ

ಬದಲಾಯಿಸಿ

ನನ್ನ ಹವ್ಯಾಸ ಕಥೆ - ಕಾದಂಬರಿ ಓದುವುದು, ಹೊಸ ರುಚಿ ಅಡಿಗೆ ಮಾಡುವುದು, ಚದುರಂಗ ಮುಂತಾದ ಆಟ ಆಡುವುದು ಇತ್ಯಾದಿಗಳಾಗಿರುತ್ತದೆ.

ಮುಂಬೈ ಪ್ರವಾಸದ ಅನುಭವ

ಬದಲಾಯಿಸಿ

ಹಿಂದಿನ ಬೇಸಿಗೆ ರಜೆಯಲ್ಲಿ ನನ್ನ ದೊಡ್ಡಮ್ಮ ನೆಲೆಸಿರುವ ಮಹಾರಾಷ್ಟ್ರ ಜಿಲ್ಲೆಯ ಮುಂಬೈಗೆ ಪ್ರವಾಸ ಕೈಗೊಂಡಿದ್ದೆ. ಮುಂಬೈ ನಗರವು ಕರ್ನಾಟಕದ ಬೆಂಗಳೂರಿಗಿಂತ ವಿಭಿನ್ನವಾಗಿದೆ. ಮುಂಬೈ ನಗರವನ್ನು ನೋಡಿ ನನ್ನ ಮನಸ್ಸು ಯಾವುದೋ ಲೋಕದಲ್ಲಿ ತೇಲಿದ ಅನುಭವವಾಯಿತು. ಅಲ್ಲಿರುವ ಜನಸಂದಣಿ, ಅವರ ಜೀವನ ಶೈಲಿ ನಮಗಿಂತಲೂ ವಿಭಿನ್ನವಾಗಿದೆ ಎಂದು ಅನಿಸಿತು. ಮುಂಬೈಯಲ್ಲಿ ಗೇಟ್ ವೇ ಆಫ್ ಇಂಡಿಯಾ, ಸಂಜಯಗಾಂಧಿ ನ್ಯಾಶನಲ್ ಉದ್ಯಾನವನ, ಬಾಂದ್ರಾ ವರ್ಲಿ ಸೀಲಿಂಕ್, ಪ್ರಸಿದ್ಧ ಸಿದ್ಧಿವಿನಾಯಕ ಗಣಪತಿ ದೇವಾಲಯ ಮತ್ತು ಮಹಾಲಕ್ಷ್ಮಿ ದೇವಾಲಯಗಳನ್ನು ಸುತ್ತಾಡಿ ನೋಡಿದೆ. ಒಟ್ಟಿನಲ್ಲಿ ಮುಂಬೈ ಪ್ರವಾಸ ನನ್ನ ಮನಸ್ಸಿನಲ್ಲಿ ಇನ್ನೂ ಹಚ್ಚ ಹಸಿರಾಗಿದೆ.