ಕೈಗಾ ಪರಮಾಣು ವಿದ್ಯುತ್‌ ಸ್ಥಾವರ

ಕೈಗಾ ಎಂಬುದು ಭಾರತದ ಕರ್ನಾಟಕ ರಾಜ್ಯದಲ್ಲಿನ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಎಂಬಲ್ಲಿ ನೆಲೆಗೊಂಡಿರುವ ಒಂದು ಪರಮಾಣು ವಿದ್ಯುತ್‌ ಸ್ಥಾವರವಾಗಿದೆ. ಈ ಸ್ಥಾವರವು

Kaiga Atomic Power Station
ಕೈಗಾ ಪರಮಾಣು ವಿದ್ಯುತ್‌ ಸ್ಥಾವರ is located in India
ಕೈಗಾ ಪರಮಾಣು ವಿದ್ಯುತ್‌ ಸ್ಥಾವರ
Location of Kaiga Atomic Power Station
ದೇಶಭಾರತ
ನಿರ್ದೇಶಾಂಕ14°51′55.16″N 74°26′22.71″E / 14.8653222°N 74.4396417°E / 14.8653222; 74.4396417
ನಿರ್ಮಾಣ ದಿನಾಂಕ1989
ಆಯೋಗದ ದಿನಾಂಕNovember 16, 2000
ಆಯೋಜಕ(ರು)Nuclear Power Corporation of India LTD.
Power generation
ಘಟಕಗಳು ಕಾರ್ಯನಿರ್ವಹಿಸುತ್ತವೆ4 x 220 MW
ವಾರ್ಷಿಕ ಪೀಳಿಗೆ2,231
Website
Nuclear Power Corporation of India
2000ನೇ ಇಸವಿಯ ಮಾರ್ಚ್‌ನಿಂದಲೂ ಕಾರ್ಯಾಚರಣೆಯನ್ನು ನಡೆಸುತ್ತಿದೆ ಮತ್ತು ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದೆ.

ಇದು ನಾಲ್ಕು ಘಟಕಗಳನ್ನು ಹೊಂದಿದೆ. 2010ರ ನವೆಂಬರ್ 27ರಂದು ನಾಲ್ಕನೇ ಘಟಕವು ಸಂಕ್ರಮಣ ಹಂತಕ್ಕೆ ತಲುಪಿತು.[] ಸದರಿ ಸ್ಥಾವರದ ತಾಣದ ಪಶ್ಚಿಮಾರ್ಧ ಭಾಗವನ್ನು ಎರಡು ಅತಿಹಳೆಯ ಘಟಕಗಳು ಒಳಗೊಂಡಿವೆ ಮತ್ತು ಎರಡು ಹೊಸದಾದ ಘಟಕಗಳು ತಾಣದ ಪೂರ್ವಭಾಗಕ್ಕೆ ಹೊಂದಿಕೊಂಡಿವೆ. ಈ ಎಲ್ಲಾ ನಾಲ್ಕೂ ಘಟಕಗಳು ಚಿಕ್ಕ-ಗಾತ್ರದ ಕ್ಯಾಂಡು ಸ್ಥಾವರಗಳಾಗಿದ್ದು 220 MWನಷ್ಟು ಸಾಮರ್ಥ್ಯವನ್ನು ಅವು ಹೊಂದಿವೆ.

ವಿವಾದಗಳು

ಬದಲಾಯಿಸಿ

ಕೈಗಾ ಅಣುಸ್ಥಾವರದ ನಿರ್ಮಾಣದ ಸಂದರ್ಭದಲ್ಲಿ, ಪ್ರಮುಖ ಗೋಡೆಗಳ ಪೈಕಿಯ ಒಂದು ಗೋಡೆಯು ಕುಸಿಯಿತು ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಳವಳವೊಂದನ್ನು ಅದು ಹುಟ್ಟುಹಾಕಿತು.

2009ರ ನವೆಂಬರ್‌ನಲ್ಲಿ, ಸ್ಥಾವರದ ಕನಿಷ್ಟಪಕ್ಷ 55 ಉದ್ಯೋಗಿಗಳು ಹೆಚ್ಚಿನ ಮಟ್ಟಗಳಲ್ಲಿದ್ದ[] ವಿಕಿರಣದ ಕಾರಣದಿಂದಾಗಿ ತೊಂದರೆಗೀಡಾದರು. ಉದ್ಯೋಗಿಗಳಿಗಾಗಿ ನೀರನ್ನು ಪೂರೈಸುವುದಕ್ಕಾಗಿ ವ್ಯವಸ್ಥೆಗೊಳಿಸಲಾಗಿದ್ದ ನೀರಿನ ಶೈತ್ಯಕಾರಿಯೊಂದು ಟ್ರಟೀಕರಿಸಲ್ಪಟ್ಟ ನೀರಿನಿಂದಾಗಿ ಮಲಿನಗೊಂಡಿತು. ಇದನ್ನು ಅನುಸರಿಸಿ ಕೈಗೊಳ್ಳಲಾದ ತನಿಖೆಯು, ವಿಧ್ವಂಸಕ ಕೃತ್ಯವೊಂದು ಸೋರಿಕೆಗೆ ಸಂಬಂಧಿಸಿದ ಒಂದು ಸಂಭವನೀಯ ಕಾರಣವಾಗಿರಬಹುದು ಎಂಬ ಅಂಶವನ್ನು ಹೊರಗೆಡಹಿತು. ಸದರಿ ಕಾರಣದ ಹಿಂದಿರುವ ಸಂಗತಿಯನ್ನು ಕಂಡುಹಿಡಿಯುವಲ್ಲಿ ರಾಜಕೀಯವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ.[]. ಪರಮಾಣು ಶಕ್ತಿ-ವಿರೋಧಿ_ಆಂದೋಲನದ ಕ್ರಿಯಾವಾದಿಗಳು ಸಮರ್ಥಿಸುವ ಪ್ರಕಾರ, ಸದರಿ ಘಟನೆಯ[] ದಾರುಣತೆಯ ಪ್ರಾಮುಖ್ಯತೆಯನ್ನು ತಗ್ಗಿಸಲು ಸರ್ಕಾರವು ಪ್ರಯತ್ನಿಸುತ್ತಿದೆ.

ಪರಿಣಾಮಗಳು

ಬದಲಾಯಿಸಿ

೨೦೧೦ ರಿಂದ ೨೦೧೩ರ ವರೆಗೆ ಮುಂಬೈನ ಟಾಟಾ ಮೆಮೂರಿಯಲ್‌ ಕ್ಯಾನ್ಸರ್‌ ಆಸ್ಪತ್ರೆ ಅಧೀನದ ನುರಿತ ಸಿಬ್ಬಂದಿ ಮಾಡಿದ ಸರ್ವೇ ವರದಿ ೨೦೧೮ರ ಮಾರ್ಚ್‌ನಲ್ಲಿ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಪ್ರಕಾರ ಕಾರವಾರ ತಾಲೂಕಿನಲ್ಲೇ ೩೧೬ ಕ್ಯಾನ್ಸರ್‌ ರೋಗಿಗಳು ಇದ್ದಾರೆಂಬ ಅಂಶ ಹೊರ ಬಂದಿದೆ.[]

ಪ್ರಮುಖ ಘಟನೆಗಳು

ಬದಲಾಯಿಸಿ

1994ರ ಮೇ 13ರಂದು, ರಿಯಾಕ್ಟರ್‌ ಘಟಕ-Iರ ಪೂರ್ವಭಾವಿಯಾಗಿ ಯಾಂತ್ರಿಕ ಒತ್ತಡಕ್ಕೆ ಒಳಪಡಿಸಲಾದ ಕಾಂಕ್ರೀಟಿನ ಗುಮ್ಮಟವು ನಿರ್ಮಾಣದ ಅಂತಿಮ ಹಂತದ ಸಂದರ್ಭದಲ್ಲಿ ಕುಸಿಯಿತು. ಸುಮಾರು 75 ಮೀಟರುಗಳಷ್ಟು ಎತ್ತರದಿಂದ 150 ಟನ್ನುಗಳಷ್ಟು ಕಾಂಕ್ರೀಟನ್ನು ಈ ಕುಸಿತವು ಕೆಳಕ್ಕೆ ಹೊತ್ತುತಂದಿತು ಮತ್ತು ತನ್ಮೂಲಕ 14 ವ್ಯಕ್ತಿಗಳನ್ನು ಗಾಯಗೊಳಿಸಿತು. ಮೊದಲ ಎರಡು ಘಟಕಗಳ ಪೂರ್ಣಗೊಳ್ಳುವಿಕೆಯನ್ನು ಈ ಘಟನೆಯು ವಿಳಂಬಗೊಳಿಸಿತು. ಆರಂಭಿಕ ಕಾರ್ಯಸೂಚಿಯ ಅನುಸಾರ, 1996ರ ಜೂನ್‌ ತಿಂಗಳ ವೇಳೆಗೆ ಮೊದಲ ಎರಡು ಘಟಕಗಳು ಸಂಕ್ರಮಣದ ಹಂತವನ್ನು ತಲುಪುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಮೊದಲ ಘಟಕದ ನಿರ್ಮಾಣವನ್ನು 1999ಕ್ಕೂ ಮುಂಚಿತವಾಗಿ ಸಂಪೂರ್ಣಗೊಳಿಸಲಾಗಲಿಲ್ಲ. ಕುಡಿಯುವ ನೀರಿನೊಂದಿಗೆ ಗಡಸು ನೀರು ಮಿಶ್ರಣಗೊಂಡಿದ್ದಕ್ಕೆ ಸಂಬಂಧಿಸಿದ ಮತ್ತೊಂದು ವಿವಾದವು 2010ರಲ್ಲಿ ಮೇಲೆದ್ದಿತು.

ಕೈಗಾ ಪರಮಾಣು ವಿದ್ಯುತ್‌ ಸ್ಥಾವರದ 4ನೇ ಘಟಕ

ಕೈಗಾ ಪರಮಾಣು ವಿದ್ಯುತ್‌ ಸ್ಥಾವರದ 220 MW ಸಾಮರ್ಥ್ಯದ 4ನೇ ಘಟಕವು 2010ರ ನವೆಂಬರ್‌ 27ರಂದು ಕಾರ್ಯಾತ್ಮಕ [] ಹಂತವನ್ನು ಮುಟ್ಟಿತು.

ಹಣಕಾಸಿನ ಸಮಸ್ಯೆಗಳು

ಬದಲಾಯಿಸಿ

ಕೈಗಾ ಅಧಿಕಾರಿ ವರ್ಗದ ಪ್ರಕಾರ, ವಿಳಂಬದ ಕಾರಣದಿಂದಾಗಿ ಉಂಟಾದ ಪ್ರತ್ಯಕ್ಷ ನಷ್ಟದ ಪ್ರಮಾಣವು ಅಗಾಧವಾಗಿತ್ತು. ಸದರಿ ಯೋಜನೆಯ ವೆಚ್ಚವನ್ನು 750 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿತ್ತು. ಆದರೆ ಪರಿಷ್ಕೃತ ವೆಚ್ಚವು 2,275 ಕೋಟಿ ರೂಪಾಯಿಗಳಿಗೆ ಬಂದುಮುಟ್ಟಿತು.

ಇವನ್ನೂ ಗಮನಿಸಿ

ಬದಲಾಯಿಸಿ
  • ಜೈತಾಪುರ ಪರಮಾಣು ವಿದ್ಯುತ್‌ ಯೋಜನೆ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2010-11-30. Retrieved 2010-12-22.
  2. "কাইগা পরমাণু-বিদ্যুৎ কেন্দ্রে দুর্ঘটনা এবং কিছু প্রশ্ন (Kaiga)" (PDF). Radical Socialist. Archived from the original (PDF) on 30 ಜೂನ್ 2024. Retrieved 20 October 2010. {{cite news}}: Italic or bold markup not allowed in: |publisher= (help)
  3. "Radiation leak in Kaiga could be sabotage, probe ordered". Hindustan Times. Archived from the original on 2 ಡಿಸೆಂಬರ್ 2009. Retrieved 29 November 2009. {{cite news}}: Italic or bold markup not allowed in: |publisher= (help)
  4. http://lokayatpune.wordpress.com/2009/12/03/on-the-kaiga-incident-statement-by-naam-maharashtra/
  5. https://www.udayavani.com/kannada/news/state-news/303578/increased-cancer-around-kaiga
  6. "ಕೈಗಾ ಅಟಾಮಿಕ್‌ ಪವರ್‌ ಪ್ಲಾಂಟ್‌ ಯುನಿಟ್‌ 4 ಸ್ಟಾರ್ಟ್ಸ್‌". Archived from the original on 2010-11-30. Retrieved 2010-12-22.


ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Portal box