ಮಹಾಬಲೇಶ್ವರ್
(महावळेश्वर), ಎಂದು ಮರಾಠಿಭಾಷೆಯಲ್ಲಿ ಕರೆಯಲ್ಪಡುವ ಮಹಾಬಲೇಶ್ವರ, ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಇದ್ದು ಕೃಷ್ಣಾ ನದಿಯ ಉಗಮ ಸ್ಥಾನವಾಗಿದೆ. ಇದೊಂದು ಪ್ರೇಕ್ಷಣೀಯ ಗಿರಿಧಾಮವಾಗಿದ್ದು ಪ್ರವಾಸಿಗರ ಸ್ವರ್ಗವೆಂದು ಹೆಸರಾಗಿದೆ.[೧][೨] ಈ ಪ್ರದೇಶವು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿದೆ. ಪಶ್ಚಿಮ ಘಟ್ಟದ ಪರಿಸರದಲ್ಲಿರುವ ಈ ತಂಗುಧಾಮ,ವಿಶ್ವದ ಕೇಲವೇ ನಿತ್ಯಹರಿದ್ವರ್ಣದ ತಾಣಗಳಲ್ಲೊಂದಾಗಿದೆ. ಇಲ್ಲಿ ಹರಿಯುವ ೫ ನದಿಗಳು, ಗಾಯಿತ್ರಿ, ಸಾವಿತ್ರಿ, ಕೊಯ್ನಾ, ವೆನ್ನಾ ಮತ್ತು ಕೃಷ್ಣ, ಮೂಲತಃ ಈಸ್ಥಳದಲ್ಲೇ ಉದಯಿಸಿ ಪ್ರವಹಿಸುವುದರಿಂದ ಈ ತಾಣಕ್ಕೆ '೫ ನದಿಗಳ ಜಮೀನು' ಎಂದು ಕರೆಯಲಾಗುತ್ತದೆ. ವಾಣಿಜ್ಯ ನಗರಿ ಮುಂಬಯಿನಿಂದ ಸುಮಾರು ೨೬೭ ಕಿ.ಮೀ. ಹಾಗೂ ಪುಣೆನಗರದಿಂದ ಸುಮಾರು ೧೧೭ ಕಿ.ಮೀ.ದೂರವಿರುವ ಈ ಪ್ರವಾಸಿಗರ ತಾಣ, ನಗರಜೀವನದಿಂದ ಹೊರಬಂದು ಏಕಾಂತ ಜೀವನವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯ ಹವಾಗುಣವು ತಂಪಾಗಿರುವುದು. ಬೆಟ್ಟದ ತಪ್ಪಲಲ್ಲಿರುವ ಕಾರಣ, 'ಟ್ರಕಿಂಗ್' ಮಾಡಲು ಹೋಗಬಹುದು. ಚಿಕ್ಕ ಗ್ರಾಮ ಹೇರಳ ಮರ ಗಿಡಗಳ ಸಂಪತ್ತನ್ನೂ ಹೊಂದಿದೆ. ಈ ಊರಿನಲ್ಲಿರುವ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಒರತೆಯ ನೀರು ಐದು ಪ್ರತ್ಯೇಕ ಜಾಗಗಳಲ್ಲಿ ಉಗಮವಾಗಿ ಮುಂದೆ ಕೃಷ್ಣಾ ನದಿಯಾಗಿ ಪ್ರವಹಿಸಿ ಅರಬ್ಬಿ ಸಮುದ್ರದಲ್ಲಿ ಸಂಗಮಿಸುವುದು. ಇಲ್ಲಿ ತಂಗಲು ಉತ್ತಮ ಹೋಟೆಲ್/ವಸತಿ ಗೃಹಗಳೂ ಸಹ ಲಭ್ಯವಿದೆ. ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಗೆ ಸಮೀಪವಾಗಿರುವುದರಿಂದ ದಕ್ಷಿಣ ಭಾರತದ ತಿನಿಸುಗಳನ್ನು ಸವಿಯಲು ಅವಕಾಶಗಳಿವೆ. ಮಹಾಬಲೇಶ್ವರದಲ್ಲಿ ಖಾದಿಗ್ರಾಮೋದ್ಯೊಗ ಇಲಾಖೆಯು ಒಂದು ತುಡಿವೆ ಜೇನು ಸಂಶೋಧನಾ ಘಟಕವನ್ನು ಹೊಂದಿತ್ತು, ಈಗ ಅದನ್ನು ಪೂನಾ ಶಹರದಲ್ಲಿರುವ 'ಅಖಿಲ ಭಾರತ ಕೇಂದ್ರೀಯ ಜೇನು ಸಂಶೋಧನಾಲಯ'ದೊಂದಿಗೆ ಮಿಳಿತಗೊಳಿಸಿರುವುದು. ಈ ಊರಿನಲ್ಲಿ 'ಸ್ಟ್ರಾಬೆರಿ ಹಣ್ಣು ಸಂಸ್ಕರಣ ಘಟಕ'ವನ್ನು ಕಾಣಬಹುದು. ಇಲ್ಲಿನ ಉತ್ತಮವಾದ ಜೇನುತುಪ್ಪವು ಹೆಸರುವಾಸಿಯಾಗಿದೆ.
ಮಹಾಶಕ್ತಿಯುಳ್ಳ ಈಶ್ವರ
ಬದಲಾಯಿಸಿ'ಮಹಾರಾಷ್ಟ್ರದ ಹನಿಮೂನ್ ತಾಣ', 'ಮಹಾಬಲೇಶ್ವರ' ಎಂಬ ಪದವನ್ನು ಭಾಷಾಂತರಿಸಿದಾಗ, 'ಮಹಾಶಕ್ತಿಯುಳ್ಳ ಈಶ್ವರ' ಎಂದು ಗೊತ್ತಾಗುತ್ತದೆ. ಅಂದರೆ ಇಲ್ಲಿ ಅಂತಹ ಈಶ್ವರದೇವಾಲಯವಿದೆ. ಪ್ರಾಚೀನ ಕಾಲದ ಈ ದೇವಸ್ಥಾನ ೨ ಕೋಣೆಗಳನ್ನು ಹೊಂದಿದೆ. ಇದನ್ನು ನಿರ್ಮಿಸಿದವರು, 'ರಾಜಸಿಂಘಾನ,' ಎನ್ನುವವರು. ಒಳಗಿನ ಗರ್ಭಗುಡಿಯಲ್ಲಿರುವ ಲಿಂಗವು 'ರುದ್ರಾಕ್ಷಿಯ ಆಕಾರ'ವಾಗಿದೆ. ಹೊರಗೆ ಬೃಹದಾಕಾರದ ನಂದಿಯ ಪ್ರತಿಮೆಯಿದೆ. ದಟ್ಟವಾದ ಕಾನನ, ಕಣಿವೆಗಳು, ಆಳವಾದ ಕಂದಕಗಳು, ಚಿಕ್ಕ-ಚಿಕ್ಕ ನೀರಿನ ಝರಿಗಳು, ಭೋರ್ಗರೆಯುವ ಜಲಪಾತಗಳು, ನದಿಗಳು, ಸರೋವರಗಳು, ಶಿಥಿಲವಾದ ಕೋಟೆಯ ಭಾಗಗಳು, ದೇವಾಲಯ, ಹೀಗೆ ಹಲವಾರು ಸುಂದರ ತಾಣಗಳು ಪರ್ಯಟಕರನ್ನು ಹುಚ್ಚೆಬ್ಬಿಸುತ್ತವೆ.
ಇಲ್ಲಿನ ಜನಪ್ರಿಯ ಆಕರ್ಷಣೆಗಳು
ಬದಲಾಯಿಸಿ- ಆರ್ಥರ್ ಸೀಟ್ ಪಾಯಿಂಟ್
- ಎಲಿಫೆಂಟಾ ಹೆಡ್ ಪಾಯಿಂಟ್
- ೩ ಮಂಕಿ ಪಾಯಿಂಟ್
- ವಿಲ್ಸನ್ ಪಾಯಿಂಟ್
- ಕೇವ್ಸ್ ಪಾಯಿಂಟ್
- ಪ್ರತಾಪ್ ಘಡ್ ಕೋಟೆ
- ವೆನ್ನಾ ಸರೋವರ
- ಪ್ರತಾಪ್ ಸಿಂಗ್ ಉದ್ಯಾನ
- ಲಿಂಗಮೂಲ ಜಲಪಾತ
- ಧೋಬಿ ಮತ್ತು ಚೈನಾಮನ್,
- ಸ್ಟ್ರಾಬೆರ್ರಿ ಗಾರ್ಡನ್ಸ್
ಆರ್ಥರ್ ಸೀಟ್ ಪಾಯಿಂಟ್
ಬದಲಾಯಿಸಿಇಲ್ಲಿ ಮೊದಲ ಬಾರಿಗೆ ಮನೆ ನಿರ್ಮಿಸಿದ, ಶ್ರೇಯಸ್ಸು 'ಆರ್ಥರ್ ಮಲೆಟ್ ಮುಂಬಯಿ ಪ್ರೆಸಿಡೆನ್ಸ್ ಗವರ್ನರ್' ಗೆ ಸೇರುತ್ತದೆ. (೧೮೪೧-೧೮೪೬)ಇದನ್ನು 'ಕ್ವೀನ್ಸ್ ಆಫ್ ಆಲ್ ದ ಪಾಯಿಂಟ್ಸ್', ಇಂದು ಕರೆಯಲಾಗುತ್ತದೆ. ಈ ತಾಣವು ೧೪೭೦ ಮೀ. ಎತ್ತರವಿದ್ದು, ಮಹಾಬಲೇಶ್ವರ ದಿಂದ ೧೦ಕಿ.ಮೀ ದೂರದಲ್ಲಿದೆ. ಸಾವಿತ್ರಿನದಿ ಇದರ ಎಡಭಾಗದಲ್ಲಿ ಹರಿಯುತ್ತದೆ.
ಎಲಿಫೆಂಟ್ ಹೆಡ್ ಪಾಯಿಂಟ್ ಅಥವಾ ನೀಡಲ್ ಹೋಲ್ ಪಾಯಿಂಟ್
ಬದಲಾಯಿಸಿಇದು ಆನೆಯ ತಲೆ, ಮತ್ತು ಸೊಂಡಿಲನ್ನು ಹೋಲುವ ನೈಸರ್ಗಿಕ ಬಂಡೆಯ ರಚನೆಯಿಂದಾಗಿದೆ. ಇದರ ಮಧ್ಯೆ ಇರುವ ರಂಧ್ರವು,ಸೂಜಿಯ ಕಣ್ಣಿನ ರಂಧ್ರದಾಕಾರವಿರುವುದರಿಂದ ಇದನ್ನು ಹಾಗೆ ಕರೆಯುತ್ತಾರೆ.
ಮೂರು ಮಂಕಿ ಪಾಯಿಂಟ್
ಬದಲಾಯಿಸಿಮಹಾತ್ಮಾ ಗಾಂಧಿಯವರ ಮೂರು ತತ್ವಗಳನ್ನು ಪ್ರತಿಪಾದಿಸುವ ಕೋತಿಗಳ ಪ್ರತಿಮೆಯನ್ನು ನೈಸರ್ಗಿಕ ಬಂಡೆಯಿಂದ ನಿರ್ಮಿಸಿದ್ದಾರೆ.
ವಿಲ್ಸನ್ ಪಾಯಿಂಟ್
ಬದಲಾಯಿಸಿಮುಂಬಯಿನ 'ವಿಲ್ಸನ್ ಕಾಲೇಜ್' ನಿರ್ಮಿಸಿದ, 'ಸರ್ ಲೆಸ್ಲಿ ವಿಲ್ಸನ್'(೧೯೨೩-೧೯೨೬) ಮುಂಬಯಿ ಗರ್ವನರ್ ಆಗಿದ್ದರು. ೧೪೩೯ ಮೀ ಎತ್ತರ. ಸೂರ್ಯೋದಯದ ಸಮಯದಲ್ಲಿ ಇಲ್ಲಿನಿಂದ ನೋಡಿದರೆ ಅತ್ಯಂತ ಸುಂದರ ನೋಟ ಸಿಕ್ಕುವುದರಿಂದ ಇದಕ್ಕೆ ಸನ್ ರೈಸ್ ಪಾಯಿಂಟ್ ಎಂದೂ ಕರೆಯಲಾಗಿದೆ. ೧೨೮೯ ಮೀ. ಎತ್ತರದ ಸರ್ ಜಾನ್ ಮಲ್ಕಂ ಎಂಬ ಬ್ರಿಟಿಷ್ ಅಧಿಕಾರಿಯ ಪ್ರೀತಿಯ ಮಗಳು ಕೇಟ್ (ಕ್ಯಾಥರಿನ್)ಇಲ್ಲಿಗೆ ಪ್ರತಿದಿನ ಬಂದು ಪ್ರತಿಧ್ವನಿಯನ್ನು ಆಲಿಸುತ್ತಿದ್ದಳು. ಇಲ್ಲಿಂದ ’ಬಾಲಕ್ ವಾಡಿ’ ಮತ್ತು ’ಧೋಮ್ ಜಲಾಶ’ ಗಳನ್ನು ವೀಕ್ಷಿಸಬಹುದು.
ಮೂರು ಆಕರ್ಷಕ ಜಲಪಾತಗಳು
ಬದಲಾಯಿಸಿ೬ ಕಿ.ಮೀ ದೂರದಲ್ಲಿರುವ, ವೆನ್ನಾ ನದಿಯಿಂದ ರೂಪಗೊಂಡ ಜಲಪಾತ ೫೦೦ ಅಡಿ ಎತ್ತರದಿಂದ ಧುಮುಕುತ್ತದೆ.
ಧೋಬಿ ಜಲಪಾತ
ಬದಲಾಯಿಸಿ೩ ಕಿ.ಮೀ ದೂರದಲ್ಲಿ ಆಳವಾದ ಕೊಯ್ನಾ ಕಣಿವೆಯಲ್ಲಿ ಧುಮುಕಿ ಹರಿದು ಕೊನೆಯ ಕೊಯ್ನಾ ನದಿಗೆ ಸೇರಿಕೊಳ್ಳುತ್ತದೆ.
ಚೈನಾಮನ್ ಜಲಪಾತ
ಬದಲಾಯಿಸಿ೨.೫ ಕಿ.ಮೀ ದೂರದಲ್ಲಿದೆ. ಹತ್ತಿರದ ತೋಟಗಳಲ್ಲಿ ಚೈನೀಯರು ತಮ್ಮ ತೋಟಗಾರಿಕೆಯನ್ನು ಮಾಡುತ್ತಿದ್ದರು.
ಪ್ರತಾಪ್ ಘಡ್ ಕೋಟೆ
ಬದಲಾಯಿಸಿ೨೪ ಕಿಮೀ ದೂರದಲ್ಲಿದೆ. ಆಕರ್ಷಣೆಯ ಕೇಂದ್ರ. ೧೬೫೬ ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕಟ್ಟಿಸಿದರು. ದಾರಿಯಲ್ಲೇ ಭವಾನಿ ಮಂದಿರವಿದೆ. ಕೋಟೆಯಮೇಲೆ ಶಿವಾಜಿ ಮಹಾರಾಜರ ೧೭ ಅಡಿ ಎತ್ತರ ಕಂಚಿನಕುದುರೆ ಸವಾರಿ ಮಾಡುತ್ತಿರುವ ಪ್ರತಿಮೆಯಿದೆ.ಇದನ್ನು ೩೦-೧೧-೧೯೫೭ ರಲ್ಲಿ ಜವಹರ್ ಲಾಲ್ ನೆಹರೂರವರು ಉದ್ಘಾಟಿಸಿದ್ದರು.
ವೆನ್ನಾಸರೋವರ
ಬದಲಾಯಿಸಿಮಕ್ಕಳ ಪ್ರೀತಿಯ ತಾಣವೆಂದು ಹೆಸರುಗಳಿಸಿದವರು ಸತಾರ ಜಿಲ್ಲೆಯ ಮಹಾರಾಜರಾಗಿದ್ದ, 'ಅಪ್ಪಾ ಸಾಹೇಬ್' ಎನ್ನುವವರು ೧೮೪೨ ರಲ್ಲಿ ಕಟ್ಟಿಸಿದರು. ಸರೋವರದ ಸುತ್ತಲೂ 'ಹರಿದ್ವರ್ಣ ಕಾಡಿ'ನಂತೆ ದಟ್ಟವಾದ ಮರಗಳಿವೆ. ಸಂಜೆಯ ವೇಳೆ 'ಬೋಟಿಂಗ್ ವ್ಯವಸ್ಥೆ' ಇದೆ. ಬೋಟಿಂಗ್ ಮಾಡುತ್ತಾ 'ಸೂರ್ಯಾಸ್ತ'ವನ್ನು ನೋಡಲು ಹಾಗೂ ಆ ರಮ್ಯ ಅನುಭವವನ್ನು ಫೋಟೋಗಳಲ್ಲಿ ಸೆರೆ ಹಿಡಿಯಲು ಬಹಳ ಜನ ಪರ್ಯಟಕರು ಕಾದು ಕುಳಿತಿರುತ್ತಾರೆ.
ಪ್ರತಾಪ್ ಸಿಂಗ್ ಉದ್ಯಾನ
ಬದಲಾಯಿಸಿಹತ್ತಿರದಲ್ಲೇ. ಸುಂದರ ಹೂ-ಗಿಡಗಳಿಂದ ಕೂಡಿದ ಈ ಉದ್ಯಾನವನ ಪ್ರಶಾಂತತೆಗೆ, ಭವ್ಯತೆಗೆ ಹೆಸರುವಾಸಿ. ಮಕ್ಕಳಿಗೆ ಆಡಲು ಬಹಳ ಜಾಗವಿದೆ. ಇಲ್ಲಿ ಹಲವು ಬಗೆಯ ಹಲ್ವಾಗಳು, ಸ್ಟ್ರಾಬೆರ್ರಿ ಹಣ್ಣುಗಳು,ಬಿದಿರಿನ ವಸ್ತುಗಳು, ವಿಧವಿಧವಾದ ರುಚಿಯ ಚಿಕ್ಕಿಗಳು, ಮ್ಯಾಪ್ರೊ ಕಂಪೆನಿಯವರಿಂದ ತಯಾರಾದ ಉತ್ಪನ್ನಗಳು :
- ಜ್ಯೂಸ್ ಬಾಟೆಲ್ ಗಳು,
- ಶುದ್ಧ ಜೇನುತುಪ್ಪ,
- ಜಾಮ್ ಹಲ್ವಾಗಳು,
- ಪರ್ಸ್ ಗಳು,
- ವ್ಯಾನಿಟಿ ಬ್ಯಾಗ್ ಗಳು,
- ಮತ್ತಿತರ ಅಲಂಕಾರಿಕ ವಸ್ತುಗಳು, ದೊರೆಯುತ್ತವೆ.
ಶುದ್ಧ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಗಳಿವೆ. ಮಧ್ಯಮವರ್ಗ, ಶ್ರೀಮಂತರಿಗೆ ಅನುಕೂಲವಾಗುವ, 'ರೆಸಾರ್ಟ್ಸ್' ಮತ್ತು 'ಸ್ಟೇ ಹೋಂ' ಗಳು ಲಭ್ಯ.
ಮಹಾಬಲೇಶ್ವರವನ್ನು ತಲುಪಲು
ಬದಲಾಯಿಸಿಮುಂಬಯಿ, ಪುಣೆ ನಗರಗಳಿಂದ ಮಹಾಬಲೇಶ್ವರ್ [೩] ತಲುಪಲು ಪ್ರತಿ ದಿನವೂ ಬಸ್ ಸೇವೆ ಲಭ್ಯವಿದೆ. 'ಟೂರ್ ಪ್ಯಾಕೇಜ್ ಸಹಿತ'. ಹತ್ತಿರ ದ ವತಾರ್ ರೈಲ್ವೆ ನಿಲ್ದಾಣದಿಂದ ಮಹಾಬಲೇಶ್ವರ ತಲುಪಬಹುದು. ಪುಣೆಯ ಬಳಿಯ ’ಲೋಹೆ ಗಾಂವ್ ವಿಮಾನ ನಿಲ್ದಾಣ’ ದಿಂದ ಬಸ್ ನಲ್ಲಿ ಮಹಾಬಲೇಶ್ವರವನ್ನು ಸೇರಬಹುದು.
ಭೌಗೋಳಿಕತೆ
ಬದಲಾಯಿಸಿಮಹಾಬಲೇಶ್ವರ ೧೭.೯೨೩೭ ° N ೭೩.೬೫೮೬ ° E. ನಲ್ಲಿ ಇದೆ.[೪] ಇದು ಸರಾಸರಿ ೧೩೫೩ ಮೀಟರ್ ಎತ್ತರವನ್ನು ಹೊಂದಿದೆ.
ಪುಣೆಯ ನೈರುತ್ಯ ದಿಕ್ಕಿನಲ್ಲಿ ಸುಮಾರು ೧೨೦ ಕಿ.ಮೀ ಮತ್ತು ಮುಂಬೈನಿಂದ ೨೮೫ ಕಿ.ಮೀ ದೂರದಲ್ಲಿರುವ ಮಹಾಬಲೇಶ್ವರವು ೧೫೦ ಕಿಮೀ ೨ ಅಳತೆಯ ವಿಶಾಲವಾದ ಪ್ರಸ್ಥಭೂಮಿಯಾಗಿದ್ದು, ಎಲ್ಲಾ ಕಡೆ ಕಣಿವೆಗಳಿಂದ ಕೂಡಿದೆ. ಇದು ವಿಲ್ಸನ್ / ಸನ್‌ರೈಸ್ ಪಾಯಿಂಟ್ ಎಂದು ಕರೆಯಲ್ಪಡುವ ಸಮುದ್ರ ಮಟ್ಟಕ್ಕಿಂತ ೧,೪೩೯ ಮೀ ಎತ್ತರವನ್ನು ತಲುಪುತ್ತದೆ.
ಮಹಾಬಲೇಶ್ವರ ಮೂರು ಗ್ರಾಮಗಳನ್ನು ಒಳಗೊಂಡಿದೆ: ಮಾಲ್ಕಮ್ ಪೆತ್, ಹಳೆಯ "ಕ್ಷೇತ್ರ" ಮಹಾಬಲೇಶ್ವರ ಮತ್ತು ಶಿಂಡೋಲಾ ಗ್ರಾಮದ ಭಾಗ.
ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಹರಿಯುವ ಕೃಷ್ಣ ನದಿಯ ಮೂಲವೇ ಮಹಾಬಲೇಶ್ವರ. ಹಳೆಯ ಮಹಾಬಲೇಶ್ವರದಲ್ಲಿರುವ ಮಹಾದೇವ್‌ನ ಪ್ರಾಚೀನ ದೇವಾಲಯದಲ್ಲಿರುವ ಹಸುವಿನ ಪ್ರತಿಮೆಯ ಬಾಯಿಯಿಂದ ನದಿಯ ಪೌರಾಣಿಕ ಮೂಲವಾಗಿದೆ. ಸಾವಿತ್ರಿ ಅವರಿಂದ ತ್ರಿಮೂರ್ತಿಗಳ ಮೇಲೆ ಶಾಪ ಉಂಟಾದ ಪರಿಣಾಮವಾಗಿ ಕೃಷ್ಣನು ವಿಷ್ಣು ಎಂದು ಪುರಾಣ ಹೇಳುತ್ತದೆ. ಅಲ್ಲದೆ, ಅದರ ಉಪನದಿಗಳಾದ ವೆನ್ನಾ ಮತ್ತು ಕೊಯ್ನಾ ಸ್ವತಃ ಶಿವ ಮತ್ತು ಬ್ರಹ್ಮ ಎಂದು ಹೇಳಲಾಗುತ್ತದೆ. ಗಮನಿಸಬೇಕಾದ ಒಂದು ಕುತೂಹಲಕಾರಿ ಸಂಗತಿಯೆಂದರೆ, ಕೃಷ್ಣನನ್ನು ಹೊರತುಪಡಿಸಿ ಇನ್ನೂ ೩ ನದಿಗಳು ಹಸುವಿನ ಬಾಯಿಂದ ಹೊರಬರುತ್ತವೆ ಮತ್ತು ಅವರೆಲ್ಲರೂ ಕೃಷ್ಣದಲ್ಲಿ ವಿಲೀನಗೊಳ್ಳುವ ಮೊದಲು ಸ್ವಲ್ಪ ದೂರ ಪ್ರಯಾಣಿಸುತ್ತಾರೆ, ಅದು ಪೂರ್ವಕ್ಕೆ ಬಂಗಾಳಕೊಲ್ಲಿಯ ಕಡೆಗೆ ಹರಿಯುತ್ತದೆ. ಈ ನದಿಗಳು ಕೊಯ್ನಾ, ವೆನ್ನಾ (ವೆನಿ) ಮತ್ತು ಗಾಯತ್ರಿ. ಸಾವಿತ್ರಿ ನದಿ ಪಶ್ಚಿಮಕ್ಕೆ ಮಹಾದ್ ಮೂಲಕ ಅರೇಬಿಯನ್ ಸಮುದ್ರಕ್ಕೆ ಹರಿಯುತ್ತದೆ.
ಪ್ರದೇಶದ ಹವಾಮಾನವು ಸ್ಟ್ರಾಬೆರಿ ಕೃಷಿಗೆ ಸೂಕ್ತವಾಗಿದೆ, ಮಹಾಬಲೇಶ್ವರ ಸ್ಟ್ರಾಬೆರಿ ದೇಶದ ಒಟ್ಟು ಸ್ಟ್ರಾಬೆರಿ ಉತ್ಪಾದನೆಯಲ್ಲಿ ಸುಮಾರು ೮೫ ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. [೫][೬] ಇದು ೨೦೧೦ ರಲ್ಲಿ ಭೌಗೋಳಿಕ ಸೂಚನೆ (ಜಿಐ) ಟ್ಯಾಗ್ ಅನ್ನು ಸಹ ಪಡೆದುಕೊಂಡಿತು.[೭]
ಉಲ್ಲೇಖಗಳು
ಬದಲಾಯಿಸಿ- ↑ ಮಹಾಬಲೇಶ್ವರ್ ನಲ್ಲಿ ತಂಗಲು, ಹೋಟೆಲ್ ಗಳು, ಹಾಗೂ ಪರ್ಯಟನೆ ಮಾಡುವ ಬಗ್ಗೆ ಖಚಿತ ಮಾಹಿತಿಗಳು
- ↑ "Attractive Hill station". Archived from the original on 2007-12-14. Retrieved 2014-06-01.
- ↑ ಮಹಾಬಲೇಶ್ವರ್ ಗಿರಿಧಾಮದ ಬಗ್ಗೆ ಸಂಪೂರ್ಣ ಮಾಹಿತಿ
- ↑ "Maps, Weather, and Airports for Mahabaleshwar, India". www.fallingrain.com. Retrieved 11 January 2020.
- ↑ "Growing demand for strawberries in domestic market". The Financial Express. 18 February 2012. Retrieved 11 January 2020.
- ↑ Kshirsagar, Alka. "Mahabaleshwar set for good strawberry season". @businessline (in ಇಂಗ್ಲಿಷ್). Retrieved 11 January 2020.
- ↑ Joshi, Hrishikesh (14 May 2010). "Mahabaleshwar strawberry gets GI status". Business Standard India. Retrieved 11 January 2020.