ನನ್ನ ಹೆಸರು ಅಮೃತ.ಎ. ನನ್ನ ಜನನ ೨೩-೦೨-೧೯೯೯ ರಾಮನಗರ ಜಿಲ್ಲೆಯ ಕುದೂರು ಎಂಬ ಊರಿನಲ್ಲಿ.

ಕುಟುಂಬ

ಬದಲಾಯಿಸಿ

ನಮ್ಮದು ಒಟ್ಟು ಕುಟುಂಬ. ನನ್ನ ತಂದೆಯ ಹೆಸರು ಕೆ.ವಿ.ಅರವಿಂದ ಮತ್ತು ತಾಯಿ ಎ.ದೀಪ. ನಾವು ಹವಳಿ ಮಕ್ಕಳು, ಅವಳ ಹೆಸರು ಅರ್ಪಿತ. ನನ್ನ ತಂದೆ ಚಿನ್ನದ ವ್ಯಾಪಾರಸ್ತರು. ತಾಯಿ ಗೃಹಿಣಿ. ನನ್ನ ಅಜ್ಜ ಅಜ್ಜಿಯು ನಮ್ಮ ಜೊತೆಯೇ ಇದ್ದಾರೆ. ನಾವು ಚಿಕ್ಕವರಿದ್ದಾಗ ಅವರು ನಮಗೆ ಕಥೆಗಳನ್ನು ಹೇಳುತ್ತಿದ್ದರು ಮತ್ತು ನಮ್ಮ ಜೊತೆ ಆಟಾಡುತ್ತಿದ್ದರು.

 

ವಿಧ್ಯಾಭ್ಯಾಸ

ಬದಲಾಯಿಸಿ

ನನ್ನ ಶಾಲಾ ವಿಧ್ಯಾಭ್ಯಾಸ ವರಿನ್ ಇಂಟರ್ ನಾಷಿನಲ್ ಸ್ಕೊಲ್ ನಲ್ಲಿ ನಡೆಯಿತು. ನಂತರ ಉನ್ನತ ಶಿಕ್ಷಣವನ್ನು (ಪಿ.ಯು.ಸಿ) ಕ್ರೈಸ್ಟ್ ನಲ್ಲಿ ಮುಗಿಯಿತು. ನನ್ನ ಮುಂದಿನದ ಶಿಕ್ಷಣವನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲೇ ಮುಂದುವರೆಸುತ್ತಿದ್ದೇನೆ. ನನ್ನ ಹವಳಿಯು ಸಹ ಇದೇ ಕಾಲೇಜಿನಲ್ಲಿ ಓದುತ್ತಿದ್ದಾಳೆ.

ಹವ್ಯಾಸ

ಬದಲಾಯಿಸಿ

ನನ್ನ ಹವ್ಯಾಸಗಳು ಹಾಡುವುದು, ನೃತ್ಯ ಮಾಡುವುದು, ಪುಸ್ತಕ ಓದುವುದು, ಚದುರಂಗ ಆಡುವುದು ಮುಂತಾದವು.

ಇತರೆ ಅಭ್ಯಾಸಗಳು

ಬದಲಾಯಿಸಿ

ಪ್ರತಿ ವಾರ್ಷಿಕ ಮುಗಿದ ನಂತರ ಬೇಸಿಗೆ ರಜಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೆ. ಆ ವಯಸ್ಸಿನಲ್ಲಿ ಗಾಡಿ ಓಡಿಸುವುದು ನನಗೆ ದೊಡ್ಡ ಹುಚ್ಚು. ಆದ್ದರಿಂದ ಪ್ರತೀ ದಿನ ರಾತ್ರಿ ತಂದೆಯಿಂದ ಕಲಿಸಿಕೊಳ್ಳಲು ಹಟ ಮಾಡುತ್ತಿದ್ದೆ. ತುಂಬಾ ಚೆನ್ನಾಗಿ ಕಲಿತು ಓಡಿಸಿದೆ ತುಂಬಾ ಬೇಗನೆ ಕಲಿತುಕೊಂಡೆ. ನನ್ನ ತಾಯಿಯು ಹೇಳುತ್ತಿದ್ಡರು ಗಾಡಿ ಕಲಿತರೆ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬಹುದು. ನಾವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕೆಂದರೆ ಗಾಡಿ ಇರಲೇಬೇಕು. ನಾನು ಏಳನೆಯ ತರಗತಿಯಿಂದಲೇ ನನ್ನ ತಂದೆಗೆ ಅವರ ಅಂಗಡಿಯ ಕೆಲಸಗಳಲ್ಲಿ ತುಂಬಾ ಸಹಾಯ ಮಾಡುತ್ತಾ ಬಂದಿದ್ದೇನೆ. ಸ್ಕೂಲಿಂದ ಬಂದಮೇಲೆ ಸಂಗೀತ ಅಭ್ಯಾಸಕ್ಕೆ ಹೋಗುತ್ತಿದ್ದೆ ಹಾಗೂ ಕಂಪ್ಯೂಟರ್ ಕ್ಲಾಸ್ ಗೆ ಹೋಗುತ್ತಿದ್ದೆ. ಸ್ವಲ್ಪ ಅಮ್ಮನಿಗೂ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದೆ. ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ತುಂಬಾ ಸಂತೋಶವಾಯಿತು.

ನಾನು ಸ್ಕೂಲಿನಲ್ಲಿ ತುಂಬಾ ಪ್ರಶಸ್ತಿಗಳನ್ನು ಗಳಿಸಿದ್ದೇನೆ ಒಡುವುದರಲ್ಲಿ, ಚಿತ್ರ ಬಿಡುಸುವುದರಲ್ಲಿ, ಶೆಟಲ್ ಮತ್ತು ಮುಂತಾದವುಗಳಲ್ಲಿ. ತುಂಬಾ ಸಂತೋಷದ ವಿಷಯ ಏನೆಂದರೆ ತಾಲ್ಲೂಕ ಲೆವಲ್ ನಲ್ಲಿ ಚಿತ್ರ ಬಿಡುಸುವುದರಲ್ಲಿ ಮೊದಲನೆಯ ಪ್ರಶಸ್ತ ಸಿಕ್ಕಿತು. ಸ್ಕೂಲಿನಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಮತ್ತು ಪರೀಕ್ಷೆಗಳಲ್ಲಿ ಭಾಗವಹಿಸಿ ಉತ್ತೀರ್ಣನಾಗಿ ಮತ್ತು ಬಹುಮಾನಗಳನ್ನು ಪಡೆದಿದ್ದೇನೆ. ಸ್ಕೂಲಿನ ದಿನಗಳಲ್ಲಿ ಕ್ಲಾಸ್ ನಲ್ಲಿ ನಾನೇ ನಾಯಕಿ ಆಗಿದ್ದೆ. ನಾನು ಕ್ಲಾಸ್ ನಲ್ಲಿ ಚೆನ್ನಾಗಿ ಓದುವುದರಿಂದ ಪ್ರೀತಿಯ ವಿದ್ಯಾರ್ಥಿನಿಯಾಗಿದ್ದೆ. ಮತ್ತು ಮುದ್ದಿನ ಹಾಗೂ ಪ್ರೀತಿಯ ಮಗಳು ಮತ್ತು ಮೊಮ್ಮಗಳಾಗಿದ್ದೀನಿ.

ನನ್ನ ತಂದೆ-ತಾಯಿಯೇ ನನ್ನ ಜೀವನಆದರ್ಶ. ಅವರು ಯಾವಾಗಲೂ ನನ್ನ ಎಲ್ಲಾ ಕೆಲಸಗಳಲ್ಲಿ ಪ್ರೋತ್ಸಾಹಿಸುತ್ತಾರೆ. ನಮ್ಮನ್ನು ಗಂಡು ಮಕ್ಕಳಾಗಿ ಬೆಳೆಸಿದ್ದಾರೆ. ಯಾವಾಗಲೂ ನಮ್ಮನ್ನು ಬೇದಭಾವ ಮಾಡಲಿಲ್ಲ. ಅವರು ನನಗೆ ಯಾವಾಗಲೂ ಹೇಳುವುದೇನೆಂದರೆ, 'ಯಾರ ಮೇಳೂ ಅವಲಂಬಿಸಿ ಆಗಬಾರದು, ಎಂದೂ ನಮ್ಮ ಕೆಲಸವನ್ನು ನಾವೇ ಮಾಡಬೇಕು'. ನನ್ನ ತಂದೆ-ತಾಯಿಯರನ್ನು ಪಡೆಯಲು ನಾನು ಭಾಗ್ಯವಂತೆ. ನನ್ನ ತಾಯಿಯು ನನ್ನ ಜೊತೆ ಗೆಳತಿಯಾಗಿ ಇರುತ್ತಾರೆ. ನಾನು ಸಹ ಎಲ್ಲಾ ಕಷ್ಟ-ಸುಖಗಳನ್ನು ಅವರ ಜೊತೆ ಹಂಚಿಕೊಳ್ಳುತ್ತೇನೆ.

ಜೀವನದ ಘಟ್ಟಗಳು

ಬದಲಾಯಿಸಿ

ನನಗೆ ಹವಳಿ ಅಕ್ಕ ಇರುವುದು ತುಂಬಾ ಅದ್ರುಷ್ಠ. ಏಕೆಂದರೆ ನನ್ನ ಜೀವನದ ಪ್ರತಿಯೊಂದು ಪರಿಸ್ತಿಥಿಯಲ್ಲಿಯೂ ನನ್ನ ಜೊತೆ ಬೆನ್ನೆಲುಬಾಗಿ ಇರುತ್ತಾಳೆ. ಜೊತೆಯಲ್ಲೇ ಓದುತ್ತೇವೆ, ಆಡುತ್ತೇವೆ, ಜೊತೆಯಲ್ಲೇ ಎಲ್ಲಾ ಸುಖ-ದುಃಖಗಳನ್ನು ಹಂಚಿಕೊಳ್ಳುತ್ತೇವೆ. ನನ್ನ ಅಕ್ಕ ನನ್ನ ಪ್ರೀತಿಯ ಗೆಳತಿ. ನನಗೆ ಅವಳೆಂದರೆ ತುಂಬಾ ಇಷ್ಟ.

ನಾವು ಕಾಲೇಜಿಗೆ ಸೇರಿದ್ದಾಗ ಬೆಂಗಳೂರಿನಲ್ಲಿ ಪಿ.ಜಿ.ಯೊಂದರಲ್ಲಿ ಸೇರಬೇಕಾಯಿತು. ನನ್ನ ಮನೆಯವರನ್ನು ಬಿಟ್ಟು ಇರಲು ತುಂಬಾ ಕಷ್ಟವಾಯಿತು. ಅಲ್ಲಿಯ ಜಾಗಕ್ಕೆ ಹೊಂದುಕೊಳ್ಳಲು ಆರು ತಿಂಗಳು ಆಯಿತು. ಒಂದು ಒಂದೊಂದು ದಿನ ಒಂದು ಯುಗವಾಗಿ ಕಳಿಯಬೇಕಾಯಿತು. ದಿನ ಅಳುತ್ತಾ ಇದ್ದೆ. ಪಿ.ಜಿ.ಯಲ್ಲಿ ನನಗೆ ಒಳ್ಳೆಯ ಗೆಳತಿಯರಾದರು. ತುಂಬಾ ಸಹಾಯ ಮಾಡಿದರು. ನನ್ನ ಕೆಲಸಗಳನ್ನು ನಾನೇ ಮಾಡಲು ಕಲಿತೆ. ಈಗ ತುಂಬಾ ಸಂತೋಷವಾಗಿದ್ದೇನೆ.

ಇಂತಹ ಒಳ್ಳೆಯ ಜೀವನ ಪಡೆಯಲು ದೇವರಿಗೆ ನನ್ನ ಧನ್ಯವಾದಗಳು. ಇದೇ ನನ್ನ ಸುಂದರ ಜೀವನದ ಪ್ರಯಾಣದ ಒಂದು ಭಾಗ