ಮಗಳು
ಮಗಳು ಪದವನ್ನು ಅವಳ ತಂದೆತಾಯಿಯರ ಸಂಬಂಧದಲ್ಲಿ ಸ್ತ್ರೀ ಸಂತಾನಕ್ಕೆ ಬಳಸಲಾಗುತ್ತದೆ. ಅದು ಪುರುಷ ಸಂತಾನಕ್ಕೆ ಬಳಸಲಾದ ಪದವಾದ ಮಗ ಶಬ್ದದ ಸ್ತ್ರೀಲಿಂಗ ಆವೃತ್ತಿ. ಮಗಳು ಶಬ್ದವು ಅದಕ್ಕೆ ಅಂಟಿಕೊಂಡಿರುವ ಹಲವು ಇತರ ಅನ್ವಯಾರ್ಥಗಳನ್ನು ಹೊಂದಿದೆ. ಇದರಲ್ಲಿ ಒಂದು ಏನೆಂದರೆ ಮಗಳು ಪದವನ್ನು ಸ್ತ್ರೀ ವಂಶಜತೆ ಅಥವಾ ರಕ್ತ ಸಂಬಂಧದ ಸಂದರ್ಭದಲ್ಲಿಯೂ ಬಳಸಬಹುದು. ಅದನ್ನು ಒಬ್ಬ ಹಿರಿಯರಿಂದ ಬಂದ ಪ್ರೀತಿ ತೋರಿಕೆಯ ಪದವಾಗಿಯೂ ಬಳಸಬಹುದು.
ಮಗಳು ಪದವು ಒಬ್ಬ ಹುಡುಗಿ, ಮಹಿಳೆ ಅಥವಾ ಸ್ತ್ರೀ ಪ್ರಾಣಿಯನ್ನು ಸೂಚಿಸಬಹುದು. ಪುತ್ರಿತ್ವ ಯಾರಿಗಾದರೂ ಮಗಳಾಗಿರುವ ಸ್ಥಿತಿ. ಹೋಲಿಕೆಯಿಂದ ಈ ಹೆಸರನ್ನು ಹಲವು ಕ್ಷೇತ್ರಗಳಲ್ಲಿ ಗುಂಪುಗಳು ಅಥವಾ ಘಟಕಗಳ ನಡುವೆ ಸಂಬಂಧಗಳನ್ನು ತೋರಿಸಲು ಬಳಸಲಾಗುತ್ತದೆ.
ಪಿತೃ ಪ್ರಧಾನ ಸಮಾಜಗಳಲ್ಲಿ, ಪುತ್ರಿಯರು ಹಲವುವೇಳೆ ಪುತ್ರರಿಗೆ ಹೋಲಿಸಿದರೆ ಭಿನ್ನ ಅಥವಾ ಕಡಿಮೆ ಕುಟುಂಬ ಹಕ್ಕುಗಳನ್ನು ಹೊಂದಿರುತ್ತಾರೆ. ಒಂದು ಕುಟುಂಬವು ಪುತ್ರಿಯರ ಬದಲು ಪುತ್ರರನ್ನು ಹೊಂದಲು ಇಚ್ಛಿಸಬಹುದು ಏಕೆಂದರೆ ಪುತ್ರಿಯರು ಹೆಣ್ಣು ಶಿಶುಹತ್ಯೆಗೆ ಒಳಗಾಗುತ್ತಾರೆ.[೧] ಕೆಲವು ಸಮಾಜಗಳಲ್ಲಿ ಮಗಳನ್ನು ಅವಳ ಗಂಡನಿಗೆ ಮಾರಾತಮಾಡುವುದು ರೂಢಿ, ಮತ್ತು ಇದಕ್ಕೆ ಹುಡುಗನು ವಧು ದಕ್ಷಿಣೆಯನ್ನು ಕೊಡಬೇಕು. ಈ ರೂಢಿಗೆ ವಿರುದ್ಧವಾದುದು, ಅಂದರೆ ತಂದೆತಾಯಿಯರು ಹೆಣ್ಣಿನ ಆರ್ಥಿಕ ಹೊರೆಯನ್ನು ಸರಿದೂಗಿಸಲು ಗಂಡನಿಗೆ ಹಣದ ಒಂದು ಮೊತ್ತವನ್ನು ಕೊಡುವುದು, ಹೆಂಗಸರು ಮನೆಯ ಹೊರಗೆ ಕೆಲಸ ಮಾಡದ ಸಮಾಜಗಳಲ್ಲಿ ಕಂಡುಬರುತ್ತದೆ, ಮತ್ತು ಇದನ್ನು ವರದಕ್ಷಿಣೆ ಎಂದು ಕರೆಯಲಾಗುತ್ತದೆ.
ಕುಟುಂಬ ಪಾತ್ರದಲ್ಲಿ ಪುತ್ರಿಯರನ್ನು ಹೇಗೆ ಕಾಣಲಾಗುತ್ತದೆ ಎಂದು ನೋಡಿದರೆ, ಬಹುತೇಕರನ್ನು ಉನ್ನತ ನಿರೀಕ್ಷೆಯಿಂದ ಕಾಣಲಾಗುತ್ತದೆ ಏಕೆಂದರೆ ಅವರು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಪುತ್ರಿಯರು ಅಪ್ಪನ ಪುಟ್ಟ ಮಗಳ ಪಾತ್ರ ಹೊಂದಿರುತ್ತಾರೆ, ಇದರರ್ಥ ಅಪ್ಪನು ಮಗಳಿಂದ ಇಟ್ಟುಕೊಂಡ ನಿರೀಕ್ಷೆಯನ್ನು ಈಡೇರಿಸಲು ಏನೆಲ್ಲಾ ಸಾಧ್ಯವೋ ಅದನ್ನು ಮಗಳು ಮಾಡಬೇಕು. ಅವಳ ಲಿಂಗದ ಕಾರಣ ಮಗಳಿಗೆ ಇದು ಹೆಚ್ಚು ಕಷ್ಟ. ಮಹಿಳೆಯಾಗುವುದು ಯಾವುದಕ್ಕಾದರೂ ಕೆಲಸ ಮಾಡಲು ಪುರುಷರಿಗಿಂತ ಹತ್ತು ಪಟ್ಟು ಹೆಚ್ಚು ಸಾಮರ್ಥ್ಯ ಕೊಡುತ್ತದೆ. ವಿಶೇಷವಾಗಿ ಕುಟುಂಬ ಉದ್ಯಮದಲ್ಲಿ, ಹುಡುಗಿಗೆ ಹೆಚ್ಚು ಒತ್ತಡಗಳಿರುತ್ತವೆ. ಉದ್ಯಮದಲ್ಲಿ ಹೆಚ್ಚು ಉನ್ನತ ಅಭಿಪ್ರಾಯವನ್ನು ಹೊಂದಲು ಮಗಳು ಹೆಚ್ಚು ಶ್ರಮ ಹಾಕಬೇಕಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Stein, Dorothy: Burning widows, burning brides: The perils of daughterhood in India. Pacific Affairs, Vol 61, No. 3, p. 465. University of British Columbia.