ಹಾರುವ ಆಕಾಶಬುಟ್ಟಿ (ಹಾಪರ್‌ ಬಲೂನ್‌; ಇದನ್ನು ಸರಳವಾಗಿ ಹಾಪರ್‌‌ ಎಂದು ಕರೆಯಲಾಗುತ್ತದೆ) ಎಂಬುದು ಒಂದು ಸಣ್ಣ ಗಾತ್ರದ, ಏಕ-ವ್ಯಕ್ತಿ ಬಳಕೆಯ ಬಿಸಿ ಗಾಳಿಯ ಆಕಾಶಬುಟ್ಟಿಯಾಗಿದೆ. ಬುಟ್ಟಿಯೊಂದರ ಒಳಗಡೆ ಜನರು ಸವಾರಿಮಾಡುವಂಥ ವ್ಯವಸ್ಥೆಯಿರುವ, ಒಂದು ಸಾಂಪ್ರದಾಯಿಕವಾದ ಬಿಸಿ ಗಾಳಿಯ ಆಕಾಶಬುಟ್ಟಿಗಿಂತ ಭಿನ್ನವಾಗಿರುವ ಈ ಆಕಾಶಬುಟ್ಟಿಯಲ್ಲಿ ಒಂದು ಬುಟ್ಟಿಯಾಕಾರದ ರಚನೆಯು ಕಂಡುಬರುವುದಿಲ್ಲ. ಅದರ ಬದಲಿಗೆ, ಹಾಪರ್‌ ಆಕಾಶಬುಟ್ಟಿಯಲ್ಲಿನ ಚಾಲಕನು ಸಾಮಾನ್ಯವಾಗಿ ಒಂದು ಆಸನದ ಮೇಲೆ ಕುಳಿತುಕೊಳ್ಳುತ್ತಾನೆ ಅಥವಾ ಒಂದು ಧುಮುಕುಕೊಡೆ ಸಲಕರಣೆಯಂಥ ಸಲಕರಣೆಯನ್ನು ಧರಿಸುತ್ತಾನೆ. ಹಾಪರ್‌ ಆಕಾಶಬುಟ್ಟಿಗಳನ್ನು ವಿನೋದ-ವಿಹಾರಕ್ಕಾಗಿ ವಿಶಿಷ್ಟವಾಗಿ ಹಾರಿಸಲಾಗುತ್ತದೆ.

ಹಾರುವ ಆಕಾಶಬುಟ್ಟಿಗಳ ಒಂದು ಜೋಡಿ

ಮೇಘವನ್ನು ಹಾರುವ ಆಕಾಶಬುಟ್ಟಿಗಳುಸಂಪಾದಿಸಿ

 • ಈ ಆಕಾಶಬುಟ್ಟಿಗಳನ್ನು ಕೆಲವೊಮ್ಮೆ "ಮೇಘವನ್ನು ಹಾರುವ ಆಕಾಶಬುಟ್ಟಿಗಳು" ಅಥವಾ "ಮೇಘಲಂಘನ ಬುಟ್ಟಿಗಳು" ಎಂದು ಕರೆಯಲಾಗುತ್ತದೆ. ಆದಾಗ್ಯೂ, ನಿರ್ದಿಷ್ಟ ತಯಾರಕ ಕಂಪನಿಯೊಂದರ ಉತ್ಪನ್ನಗಳಿಗೆ, ಅದರಲ್ಲೂ ನಿಷ್ಕೃಷ್ಟವಾಗಿ ಲಿಂಡ್‌ಸ್ಟ್ರಾಂಡ್‌ ಬಲೂನ್ಸ್‌‌ ಉತ್ಪನ್ನಗಳಿಗೆ ಈ ಪರಿಭಾಷೆಗಳನ್ನು ಔಪಚಾರಿಕವಾಗಿ ಉಲ್ಲೇಖಿಸಲಾಗುತ್ತದೆ.
 • ಅದೇನೇ ಇದ್ದರೂ, "ಮೇಘಲಂಘನ ಬುಟ್ಟಿ" ಎಂಬ ಪರಿಭಾಷೆಯು ಒಂದು ಸಾರ್ವತ್ರೀಕರಿಸಿದ ಸರಕುಮುದ್ರೆಯಾಗಿ ಅನೇಕ ಜನರಿಂದ ಬಳಸಲ್ಪಡುತ್ತದೆ ಮತ್ತು ಇದು ಈ ಸಾರ್ವತ್ರಿಕ ಬಗೆಯ ಎಲ್ಲಾ ಆಕಾಶನೌಕೆಗಳಿಗೆ ಉಲ್ಲೇಖಿಸುತ್ತದೆ ಎಂಬುದು ಗಮನಾರ್ಹ ಸಂಗತಿ. ಹೆಚ್ಚು ಜಾಗರೂಕ ಬಳಕೆಯಲ್ಲಿ, "ಹಾಪರ್‌ ಆಕಾಶಬುಟ್ಟಿಯು" ಸಾರ್ವತ್ರಿಕ ಪರಿಭಾಷೆ ಎನಿಸಿಕೊಂಡಿದೆ.
 • ಬಹುತೇಕ ಹಾರುವ ಆಕಾಶಬುಟ್ಟಿಗಳು ಅನಿಲಕೋಶಗಳನ್ನು ಹೊಂದಿದ್ದು, ಗಾತ್ರದಲ್ಲಿ 14,000 to 35,000 cubic feet (400 to 990 m3)ವರೆಗಿನ ವ್ಯಾಪ್ತಿಯನ್ನು ಹೊಂದಿರುತ್ತವೆ ಹಾಗೂ ೧ರಿಂದ ೧.೫ ಗಂಟೆಗಳಷ್ಟಿರುವ ಹಾರಾಟದ ಒಂದು ಗರಿಷ್ಟ ಅವಧಿಯನ್ನು ಹೊಂದಿರುತ್ತವೆ. ಇಂದು ಹಾರುವ ಆಕಾಶಬುಟ್ಟಿಗಳನ್ನು ಮಾರಾಟಕ್ಕಾಗಿ ನೀಡುತ್ತಿರುವ ಎರಡು ಪ್ರಧಾನ ವಾಣಿಜ್ಯ ಆಕಾಶಬುಟ್ಟಿಯ ತಯಾರಕರಲ್ಲಿ ಕ್ಯಾಮೆರಾನ್‌ ಬಲೂನ್ಸ್‌ ಮತ್ತು ಲಿಂಡ್‌ಸ್ಟ್ರಾಂಡ್‌ ಬಲೂನ್ಸ್‌‌ ಎಂಬ ಕಂಪನಿಗಳು ಸೇರಿವೆ. ಹವ್ಯಾಸಿ ನಿರ್ಮಾತೃಗಳಿಂದ ವಿನ್ಯಾಸಗೊಳಿಸಲ್ಪಟ್ಟಿರುವ ಮತ್ತು ನಿರ್ಮಿಸಲ್ಪ ಟ್ಟಿರುವ ಪ್ರಾಯೋಗಿಕ ಆಕಾಶಬುಟ್ಟಿಗಳು ಇತರ ಬಹುಪಾಲು ಹಾರುವ ಆಕಾಶಬುಟ್ಟಿಗಳಲ್ಲಿ ಸೇರಿವೆ.

ಇತಿಹಾಸಸಂಪಾದಿಸಿ

 • ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ೧೯೨೪ರಷ್ಟು[೧] ಮುಂಚೆಯೇ ಮತ್ತು ಇಂಗ್ಲೆಂಡ್‌ನಲ್ಲಿ ೧೯೨೭ರಷ್ಟು ಮುಂಚೆಯೇ ಆಕಾಶಬುಟ್ಟಿಯ ಜಿಗಿತವು ಒಂದು ಕ್ರೀಡೆಯ ಸ್ವರೂಪದಲ್ಲಿ ಹೊರಹೊಮ್ಮಿತು.[೨] ಅನೇಕ ಉತ್ಸಾಹಿಗಳ ದೃಷ್ಟಿಯಲ್ಲಿ ಆಕಾಶಬುಟ್ಟಿಯ ಜಿಗಿತವೆಂಬುದು ವಾಸ್ತವವಾಗಿ ಜಿಗಿಯುವಿಕೆ ಯಷ್ಟೇ ಆಗಿತ್ತು:
 • ಹಾರಾಟಕ್ಕೆ ಆಸರೆಯಾಗಿರುವುದಕ್ಕೆ ಅಗತ್ಯವಿರುವ ತೇಲುವ ಸಾಮರ್ಥ್ಯವು ಸಾಕಷ್ಟಿರದ ಕಾರಣದಿಂದಾಗಿ, ಆಕಾಶಬುಟ್ಟಿಯ-ನೆರವಿನ ಜಿಗಿತವೊಂದನ್ನು ಆರಂಭಿಸಲು ಆಕಾಶಬುಟ್ಟಿ ಯಾತ್ರಿಯು ತನ್ನ ಸ್ನಾಯುಗಳನ್ನು ವಾಸ್ತವವಾಗಿ ಬಳಸಬೇಕಿತ್ತು.[೧] ಹೀಲಿಯಂ ಅನಿಲವು ಹೊಂದಿರುವ ಬೆಂಕಿ ಸುರಕ್ಷತೆಯ ಲಕ್ಷಣದಿಂದಾಗಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಈ ಅನಿಲವನ್ನು ಆಯ್ಕೆಯ ಮೇಲಕ್ಕೆತ್ತುವ ಅನಿಲವಾಗಿ ಪರಿಗಣಿಸಲಾಗಿತ್ತು ಹಾಗೂ ಇದು ಮೇಲಕ್ಕೇರಿದ[೧] ಸಂದರ್ಭದಲ್ಲಿ ಹೊಗೆಯೆಳೆದುಕೊಳ್ಳಲೂ ಆಕಾಶಬುಟ್ಟಿ ಯಾತ್ರಿಗಳಿಗೆ ಅವಕಾಶ ಮಾಡಿಕೊಡುತ್ತಿತ್ತು; ಬೇರೆ ಕಡೆಗಳಲ್ಲಿ ಜಲಜನಕವು ಸಾಮಾನ್ಯವಾಗಿತ್ತಾದರೂ, ಬಿಸಿ ಗಾಳಿಯ ಆಕಾಶಬುಟ್ಟಿಗಳದು ಇದೇ ಸ್ಥಿತಿಯಿರಲಿಲ್ಲ.
 • ಒಂದು ಗಾಳಿ ಚೀಲ ಮತ್ತು ಒಂದು ತೂಗಾಡುವ ತೂಗಾಸರೆಯನ್ನು ಹೊರತುಪಡಿಸಿದರೆ ಮತ್ತೇನನ್ನೂ ಹೊಂದಿರದ ಹಾರುವ ಆಕಾಶಬುಟ್ಟಿಗಳು ಅಥವಾ ಜಿಗಿತದ ಆಕಾಶಬುಟ್ಟಿಗಳನ್ನು , ಆಕಾಶಬುಟ್ಟಿಗಳ ಮೇಲ್ಮೈಗಳನ್ನು ಪರಿಶೀಲಿಸುವುದಕ್ಕೆ ಮತ್ತು ದುರಸ್ತಿಮಾಡುವುದಕ್ಕೆ ಸಂಬಂಧಿಸಿದ ಅಗ್ಗದ ಸಾಧನಗಳಾಗಿ ಬೃಹತ್‌ ವಾಯುನೌಕೆಗಳು ಮತ್ತು ವಾಯಗೋಳದ ಆಕಾಶಬುಟ್ಟಿಗಳ ನಿರ್ವಾಹಕರು ತತ್‌ಕ್ಷಣವೇ ಅಳವಡಿಸಿಕೊಂಡಿದ್ದರು.
 • ಬೃಹತ್‌ ಅತಿ-ಎತ್ತರದ ಆಕಾಶಬುಟ್ಟಿಗಳನ್ನು (ಸ್ಟ್ರಾಟೋಬೌl ಮತ್ತು ಕ್ರಾಸ್ಬಿ, ಮಿನ್ನೆಸೋಟಾ ಕಬ್ಬಿಣ ಕುಳಿಗಳು) ಉಡಾಯಿಸುವುದಕ್ಕೆ ಮೀಸಲಾದ ಅತಿ ಸುರಕ್ಷಿತ ಸ್ಥಳಗಳು ನಿಜವಾದ ವಿಮಾನ ನಿಲ್ದಾಣ ಸೌಕರ್ಯಗಳಿಲ್ಲದ ದೂರದ ಸ್ಥಳಗಳಲ್ಲಿ ನೆಲೆಗೊಂಡಿದ್ದರಿಂದ, ಈ ಸಾಧನವು ವಿಶೇಷವಾಗಿ ಕೈಗೆಟಕುವಂತಿತ್ತು ಅಥವಾ ಬಳಕೆಗೆ ಅನುಕೂಲವಾಗಿರುವಂತಿತ್ತು.
 • ಇಂಥದೊಂದು ನಿದರ್ಶನದಲ್ಲಿ, ಜಾರ್ಜಿ ಪ್ರೊಕೊಫೀವ್‌‌ನ ದುರದೃಷ್ಟದ USSR-೩ನ ಎರಡನೇ ಉಡಾವಣೆಯ ಸಂದರ್ಭದಲ್ಲಿ, ಬೃಹತ್‌‌ ಆಕಾಶಬುಟ್ಟಿಯ ಮೇಲ್ತುದಿಯಲ್ಲಿನ ಗೋಜಲಾಗಿರುವ ಬಲೆಗಳನ್ನು ವಿಮೋಚಿಸಲು ಎರಡು ಹಾರುವ ಆಕಾಶಬುಟ್ಟಿಗಳ ಅಗತ್ಯ ಕಂಡುಬಂತು: ಮೊದಲ ಜಿಗಿತಗಾರನು ತನ್ನ ಪೀಠದಿಂದ ಹಿಂದಕ್ಕೆ ಬಿದ್ದನಾದರೂ, ಆಕಾಶಬುಟ್ಟಿಯ ಕೇಬಲ್‌ಗಳನ್ನು ಹಿಡಿದುಕೊಳ್ಳುವಲ್ಲಿ ಆತ ಯಶಸ್ವಿಯಾದ ಮತ್ತು ಉಳಿದುಕೊಂಡ.[೩]
 • ಬಿಸಿ ಗಾಳಿಯ ಮೊದಲ ಆಧುನಿಕ ಆಕಾಶಬುಟ್ಟಿಯನ್ನು ಎಡ್‌ ಯೋಸ್ಟ್‌ ಎಂಬಾತ ಹಾರಿಸಿದ; ೧೯೬೦ರ ಅಕ್ಟೋಬರ್‌‌ ೨೨ರಂದು ನೆಬ್ರಸ್ಕಾದ ಬ್ರೂನಿಂಗ್‌ ಎಂಬಲ್ಲಿ ನಡೆದ ಈ ಉಡಾವಣೆಯ ಪ್ರಾಯೋಜಕತ್ವವನ್ನು U.S. ನೌಕಾ ಸಂಶೋಧನೆಯ ಕಚೇರಿಯು ವಹಿಸಿಕೊಂಡಿತ್ತು. ಯೋಸ್ಟ್‌‌ನ ಆಕಾಶಬುಟ್ಟಿಯು ೩೧,೦೦೦ ಘನ ಅಡಿಯಷ್ಟು (೯೦೦ m೩) ಸಾಮರ್ಥ್ಯದ ಒಂದು ಸಣ್ಣ ಅನಿಲಕೋಶವನ್ನು ಮತ್ತು ಒಂದು ಬುಟ್ಟಿಯಂಥ ರಚನೆಯ ಬದಲಿಗೆ ಚಾಲಕನಿಗಾಗಿ ಒಂದು ಆಸನವನ್ನು ಹೊಂದಿದ್ದರಿಂದ, ಇದೂ ಸಹ ವಾದಯೋಗ್ಯವಾಗಿ ೧೯೩೦ರ ದಶಕಗಳಲ್ಲಿ ಕಂಡುಬಂದ ವಾಯುನೌಕೆಗಳ ಸುವರ್ಣಯುಗದಿಂದಾರಭ್ಯ ಹಾರಿಸಲಾದ ಮೊದಲ ಹಾರುವ ಆಕಾಶಬುಟ್ಟಿ ಎನಿಸಿಕೊಂಡಿತು.

ಮೇಘಲಂಘನ ಬುಟ್ಟಿಸಂಪಾದಿಸಿ

 • ಒಂದು ಏಕ-ವ್ಯಕ್ತಿಯ ಬಳಕೆಯ ಬಿಸಿ ಗಾಳಿಯ ಆಕಾಶಬುಟ್ಟಿಗೆ ಉಲ್ಲೇಖಿಸುವುದಕ್ಕಾಗಿ ಮೇಘಲಂಘನ ಬುಟ್ಟಿ ಎಂಬ ಹೆಸರನ್ನು ಅನೇಕವೇಳೆ ಬಳಸಲಾಗುತ್ತದೆ; ಇದರಲ್ಲಿ ಒಂದು ಪಟ್ಟಿಯ ಸಲಕರಣೆ ಅಥವಾ ಸಣ್ಣ ಆಸನದಲ್ಲಿ ಚಾಲಕನು ಕುಳಿತುಕೊಳ್ಳುತ್ತಾನೆ. ಇದರಲ್ಲಿ, ಚಾಲಕನ ಬೆನ್ನಿನ ಹಿಂಭಾಗದಲ್ಲಿ ಅನೇಕವೇಳೆ ಒಂದು ಪ್ರೊಪೇನ್‌ ತೊಟ್ಟಿಯಿರುತ್ತದೆ ಮತ್ತು ಚಾಲಕನ ತಲೆಯ ಮೇಲಿನ ಒಂದು ಚೌಕಟ್ಟಿನ ಮೇಲೆ ದಾಹಕವಿರುತ್ತದೆ.
 • ದಾಹಕ, ತೊಟ್ಟಿ, ಮತ್ತು ಚಾಲಕನ ಪಟ್ಟಿಯ ಸಲಕರಣೆ ಇವುಗಳು ಅನೇಕವೇಳೆ ಬಿಸಿ ಗಾಳಿಯ ಆಕಾಶಬುಟ್ಟಿಯ ಅನಿಲಕೋಶವನ್ನು ಅವಲಂಬಿಸದೆ ಸ್ವತಂತ್ರವಾಗಿ ತಿರುಗಬಲ್ಲವಾಗಿರುತ್ತವೆ; ಚಾಲಕನು ತಾನು ಬಯಸಿದ ಯಾವುದೇ ದಿಕ್ಕಿಗೆ ತಿರುಗಲೆಂದು ಅವನಿಗೆ ಅವಕಾಶ ಮಾಡಿಕೊಡಲು ಅಥವಾ ಹಾರಾಟದಲ್ಲಿದ್ದಾಗ ಮತ್ತು ಇಳಿಯುವಿಕೆಗೆ ಸಂಬಂಧಿಸಿದಂತೆ ಅವನ ಅಗತ್ಯದ ಅನುಸಾರವಾಗಿ ವರ್ತಿಸಲು ಈ ಲಕ್ಷಣವು ಸಹಾಯ ಮಾಡುತ್ತದೆ.
 • ಕಾಲಿನ್‌‌ ಪ್ರೆಸ್ಕಾಟ್‌ ಎಂಬ ಬ್ರಿಟಿಷ್‌ ಆಕಾಶಬುಟ್ಟಿ ಯಾತ್ರಿಯು "ಮೇಘಲಂಘನ ಬುಟ್ಟಿ" (ಕ್ಲೌಡ್‌ಹಾಪರ್‌) ಎಂಬ ಪರಿಭಾಷೆಯನ್ನು ಮೂಲತಃ ರೂಪಿಸಿದ ಮತ್ತು ಅದಕ್ಕೆ ಸರಕುಮುದ್ರೆಯ ಹಕ್ಕನ್ನು ಪಡೆದ. ಕೋಲ್ಟ್‌‌ ಬಲೂನ್ಸ್‌ ಸಂಸ್ಥೆಯ ಪರ್‌‌ ಲಿಂಡ್‌ಸ್ಟ್ರಾಂಡ್‌ ಎಂಬಾತ ೧೯೭೯ರಲ್ಲಿ ಮೇಘಲಂಘನ ಬುಟ್ಟಿಯ ಅಭಿವೃದ್ಧಿಯನ್ನು ಕೈಗೊಂಡ.
 • ಕೋಲ್ಟ್‌‌ ಬಲೂನ್ಸ್‌ ಸಂಸ್ಥೆಯು ನಂತರದಲ್ಲಿ ಥಂಡರ್‌ ಬಲೂನ್ಸ್‌ ಸಂಸ್ಥೆಯೊಂದಿಗೆ ವಿಲೀನಗೊಂಡು ಥಂಡರ್‌ & ಕೋಲ್ಟ್‌‌ ಬಲೂನ್ಸ್‌ ಎಂಬ ಸಂಸ್ಥೆಯು ರೂಪುಗೊಂಡ ಪರಿಣಾಮವಾಗಿ, ಮೇಘಲಂಘನ ಬುಟ್ಟಿ (ಕ್ಲೌಡ್‌ಹಾಪರ್‌) ಹೆಸರನ್ನು ಉತ್ತರಾಧಿಕಾರದಿಂದ ಪಡೆಯಿತು. ಅಂತಿಮವಾಗಿ, ಥಂಡರ್‌ & ಕೋಲ್ಟ್‌ ಸಂಸ್ಥೆಯನ್ನು ತೊರೆದ ಪರ್‌‌ ಲಿಂಡ್‌ಸ್ಟ್ರಾಂಡ್‌, ಲಿಂಡ್‌ಸ್ಟ್ರಾಂಡ್‌ ಬಲೂನ್ಸ್ ಎಂಬ ತನ್ನದೇ ಸಂಸ್ಥೆಯನ್ನು ಹುಟ್ಟುಹಾಕಿದ; ಇದು ವರ್ತಮಾನದ ಮೇಘಲಂಘನ ಬುಟ್ಟಿಯನ್ನು ತಯಾರಿಸುತ್ತದೆ.
 • ಕೋಲ್ಟ್‌‌ ಸಂಸ್ಥೆಯಲ್ಲಿನ ತಂಡವು ತನ್ನ ಮೊದಲ ಮೇಘಲಂಘನ ಬುಟ್ಟಿಯನ್ನು ನಿರ್ಮಿಸಿ ಹಾರಿಸಿದ ನಂತರ, ಸ್ಕೈಹಾಪರ್ ಎಂಬ ಹೆಸರನ್ನು ಹೊಂದಿದ್ದ ಬೆನ್ನುಹೊರೆಯ-ಶೈಲಿಯ ತನ್ನ ಆಕಾಶಬುಟ್ಟಿಯನ್ನು ಕ್ಯಾಮೆರಾನ್‌ ಬಲೂನ್ಸ್‌ ಹೊರತಂದಿತು. ದಾಹಕವನ್ನು ನಿಯಂತ್ರಿಸುವ ಸಲುವಾಗಿ ಒಂದು ತೋಳಾಸರೆಯ ಮೇಲೆ ಅಳವಡಿಸಲಾದ ಒಂದು ತಿರುಚು-ಹಿಡಿತವು ಇದರ ಮುಖ್ಯವಾದ ಪ್ರತ್ಯೇಕಿಸುವ ಲಕ್ಷಣವಾಗಿತ್ತು.
 • ಮೂಲ ಕೋಲ್ಟ್‌‌ ಮೇಘಲಂಘನ ಬುಟ್ಟಿಯಲ್ಲಿ ಮತ್ತು ವರ್ತಮಾನದ ಮೇಘಲಂಘನ ಬುಟ್ಟಿಯ ಎಲ್ಲಾ ವಿನ್ಯಾಸಗಳಲ್ಲಿ, ದಾಹಕದ ಕೆಳತುದಿಯಲ್ಲಿ ದಾಹಕ ನಿಯಂತ್ರಣಗಳನ್ನು ಅಳವಡಿಸಲಾಗಿರುತ್ತದೆ; ಇದು ಪ್ರಯಾಣಿಕರನ್ನು-ಒಯ್ಯುವ ನಿಯತವಾದ ಬಿಸಿ ಗಾಳಿಯ ಆಕಾಶಬುಟ್ಟಿಗಳ ರೀತಿಯಲ್ಲಿರುತ್ತದೆ.

ಇವನ್ನೂ ಗಮನಿಸಿ‌ಸಂಪಾದಿಸಿ

 • ಬಿಸಿ ಗಾಳಿ ಆಕಾಶಬುಟ್ಟಿ
 • ಅನಿಲದ ಆಕಾಶಬುಟ್ಟಿ
 • ಸಮೂಹ ಆಕಾಶಬುಟ್ಟಿ ಹಾರಿಸುವಿಕೆ
 • ಪ್ರಾಯೋಗಿಕ ಆಕಾಶಬುಟ್ಟಿ
 • ಅತಿಹಗುರದ ಆಕಾಶಬುಟ್ಟಿ

ಉಲ್ಲೇಖಗಳು‌‌ಸಂಪಾದಿಸಿ

 1. ೧.೦ ೧.೧ ೧.೨ Green, Fitzhugh (USN) (1924-09). Sky Sports of Tomorrow. Popular Science, September 1924, pp. 26-27, 125. Retrieved 2009-04-23. Check date values in: |date= (help)
 2. TIME Magazine (1927-08-01). "Balloon Jumping". Time. Retrieved 2007-07-10.
 3. Druzhinin, Yu.A. (2006). [http:// vivovoco.rsl. ru/ VV/ JOURNAL/VIET/STRATO/STRATO.HTM "Polyoty v stratosfery v SSSR v 1930-e g. (Полёты в стратосферу в СССР в 1930-е г.)"] Check |url= value (help). Voprosy istorii estestvoznania i tehniki (in Russian) (4).CS1 maint: unrecognized language (link)

ಗ್ರಂಥಸೂಚಿಸಂಪಾದಿಸಿ

 • ಹಿಸ್ಟರಿ ಆಫ್‌ ದಿ ಸ್ಮಾಲ್‌ ಬಲೂನ್‌; ಗ್ಲೆನ್‌ ಮೊಯೆರ್‌; ಬಲೂನ್‌ ಲೈಫ್‌ ಮ್ಯಾಗಜೀನ್‌ (ಜುಲೈ ೧೯೯೫)
 • ಬಲೂನಿಂಗ್‌ - ದಿ ಕಂಪ್ಲೀಟ್‌ ಗೈಡ್‌ ಟು ರೈಡಿಂಗ್‌ ದಿ ವಿಂಡ್ಸ್‌; ಡಿಕ್‌ ವರ್ತ್‌ ಮತ್ತು ಜೆರ್ರಿ ಯಂಗ್‌; ಲಂಡನ್‌ (೧೯೮೦ ಮತ್ತು ೧೯೯೧)

ಬಾಹ್ಯ ಕೊಂಡಿಗಳು‌‌ಸಂಪಾದಿಸಿ