ಸಂಗೀತದ ಧ್ವನಿಯನ್ನು ಹೊರಡಿಸುವ ಉದ್ದೇಶದಿಂದ ಸಂಗೀತ ವಾದ್ಯ ವನ್ನು ತಯಾರಿಸಲಾಗಿದೆ. ಮೂಲತತ್ವದಲ್ಲಿ, ಧ್ವನಿಯನ್ನು ಹೊರಡಿಸುವ ಯಾವುದೇ ವಸ್ತು ಸಂಗೀತ ವಾದ್ಯವಾಗುತ್ತದೆ. ಸಂಗೀತ ವಾದ್ಯಗಳ ಇತಿಹಾಸವು ಮಾನವ ಸಂಸ್ಕೃತಿಯ ಪ್ರಾರಂಭದ ದಿನದಿಂದ ಇದೆ. ಸಂಗೀತ ವಾದ್ಯಗಳ ಶೈಕ್ಷಣಿಕ ಅಧ್ಯಯನವನ್ನು ಆರ್ಗನಾಲಜಿ ಎನ್ನುವರು.

ಮೊಟ್ಟಮೊದಲ ಸಂಗೀತ ವಾದ್ಯ ಎಂದು ಗುರುತಿಸಲ್ಪಟ್ಟ ಸಾಧನವು ಸುಮಾರು 67,000 ವರ್ಷ ಹಿಂದಿನದಾಗಿದೆ; 37,000 ವರ್ಷ ಹಿಂದೆ ಕೂಡ ಬಳಕೆಯಲ್ಲಿದ್ದ ಕೊಳಲನ್ನು ಮೊದಲ ಸಂಗೀತ ಸಾಧನ ಎಂದು ಒಪ್ಪಿಕೊಳ್ಳಲಾಗಿದೆ. ಸಂಗೀತ ವಾದ್ಯ ಎಂಬುದರ ವ್ಯಾಖ್ಯಾನವನ್ನು ನಿರ್ಧಿಷ್ಟವಾಗಿ ಹೇಳಲು ಅಸಾಧ್ಯವಾದ ಸಂದರ್ಭದಿಂದಾಗಿ ಇತಿಹಾಸಕಾರರಿಗೆ ಸಂಗೀತ ವಾದ್ಯದ ಉಗಮದ ನಿರ್ದಿಷ್ಟ ಅವಧಿಯನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಸಂಗೀತ ವಾದ್ಯಗಳು ಪ್ರಪಂಚದ ಬೇರೆ ಬೇರೆ ಜನವಸತಿಯ ಪ್ರದೇಶಗಳಲ್ಲಿ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿವೆ. ಆದಾಗ್ಯೂ, ನಾಗರೀಕತೆಯ ಸಂಪರ್ಕದಿಂದಾಗಿ ಬಹಳಷ್ಟ ವಾದ್ಯಗಳು ಅವರ ಮೂಲ ಪ್ರದೇಶದಿಂದ ಬಹು ದೂರದ ಜನರವರೆಗೆ ತ್ವರಿತವಾಗಿ ಹರಡಿದವು ಮತ್ತು ಅವರು ಅದನ್ನು ಅಳವಡಿಸಿಕೊಂಡರು. ಮಧ್ಯಯುಗದಲ್ಲಿ, ಮೆಸಪೊಟೆಮಿಯಾದ ವಾದ್ಯವನ್ನು ಮಲಾಯ್‌ ದ್ವೀಪಗಳಲ್ಲಿ ಬಳಸುತ್ತಿದ್ದರು. ಯುರೋಪಿಯನ್ನರು ಉತ್ತರ ಅಮೇರಿಕಾದ ವಾದ್ಯಗಳನ್ನು ನುಡಿಸುತ್ತಿದ್ದರು. ಅಮೇರಿಕಾದಲ್ಲಿ ಸಂಗೀತ ಸಾಧನಗಳ ಅಭಿವೃದ್ಧಿ ನಿಧಾನವಾಗಿತ್ತು. ಆದರೆ ಉತ್ತರ, ಮಧ್ಯ ಮತ್ತು ದಕ್ಷಿಣ ಅಮೇರಿಕಾದ ಸಂಸ್ಕೃತಿಗಳು ಸಂಗೀತ ವಾದ್ಯಗಳನ್ನು ಹಂಚಿಕೊಂಡಿದ್ದವು.

ಪುರಾತತ್ವ ಶಾಸ್ತ್ರ ಬದಲಾಯಿಸಿ

ಮೊದಲ ಸಂಗೀತ ವಾದ್ಯಗಳನ್ನು ಯಾರು ಮತ್ತು ಯಾವಾಗ ಕಂಡುಹಿಡಿದರು ಎಂದು ತಿಳಿಯುವ ಅನ್ವೇಷಣೆಯಲ್ಲಿ ಸಂಶೋಧನಾಕಾರರು ಪ್ರಪಂಚದ ವಿವಿಧ ಭಾಗಗಳಲ್ಲಿ ಸಂಗೀತ ವಾದ್ಯಗಳ ಬೇರೆ ಬೇರೆ ಅವಶೇಷಗಳನ್ನು ಪತ್ತೆ ಮಾಡಿದರು. ಕೆಲವು ಶೋಧನೆಗಳು ಸುಮಾರು 67,000 ವರ್ಷಕ್ಕಿಂತ ಹಳೆಯದು, ಆದರೆ ಸಂಗೀತ ವಾದ್ಯಗಳಾಗಿ ಅವುಗಳ ಸ್ಥಿತಿ ಕೆಲವೊಮ್ಮೆ ವಿವಾದಾತ್ಮಕವಾಗಿದೆ. ಸುಮಾರು 37,000 ವರ್ಷ ಹಳೆಯ ಮತ್ತು ನಂತರದ ಕಲಾಕೃತಿಗಳ ಬಗ್ಗೆ ಒಮ್ಮತವಾಗಿ ಒಪ್ಪಿಕೊಳ್ಳಲಾಗಿದೆ. ಕೇವಲ ಕಲಾಕೃತಿಗಳನ್ನು ಜೀವಿತವಾಗಿಡಲು ಬಾಳಿಕೆ ಬರುವ ಉಪಕರಣಗಳಿಂದ ತಯಾರಿಸಲಾಗಿದೆ ಅಥವಾ ಬಾಳಿಕೆ ಬರುವ ವಿಧಾನದಲ್ಲಿ ಉಪಯೋಗಿಸಲಾಗುತ್ತಿದೆ. ಹೀಗೆ, ಸಿಕ್ಕ ಮಾದರಿಗಳನ್ನು ಮೊದಲ ಸಂಗೀತ ವಾದ್ಯಗಳನ್ನು ಖಂಡಿಸಲಾಗದ ಸ್ಥಿತಿಯಲ್ಲಿ ಇಡಲು ಸಾಧ್ಯವಾಗಿಲ್ಲ.[೧]

ಚಿತ್ರ:Image-Divje01.jpg
ಬಾಬ್ ಪಿಂಕ್‌ರಿಂದ ಚರ್ಚಿತ ಕೊಳಲಿನ ಚಿತ್ರಣ

ಜುಲೈ 1995ರಲ್ಲಿ, ಸ್ಲೊವೇನಿಯಾದ ಉತ್ತರ ಪೂರ್ವ ಪ್ರದೇಶದಲ್ಲಿ ಪ್ರಾಣಿಗಳ ಎಲುಬುಗಳ ಕೆತ್ತನೆಯನ್ನು ಸ್ಲೊವೇನಿಯಾದ ಪುರಾತತ್ವ ಶಾಸ್ತ್ರಜ್ಞ ಐವನ್ ತರ್ಕ್ ಪತ್ತೆ ಮಾಡಿದರು. ದಿವ್‌ಜೆ ಬೇಬ್ ಫ್ಲೂಟ್ ಹೆಸರಿನ ಕೆತ್ತನೆ ನಾಲ್ಕು ತೂತುಗಳನ್ನು ಹೊಂದಿತ್ತು, ಇದನ್ನು ಅಪಸ್ವರ ಶ್ರೇಣಿಯ ನಾಲ್ಕು ನೋಟುಗಳನ್ನು ನುಡಿಸಲು ಬಳಸಬಹುದು ಎಂದು ಕೆನಡದ ಸಂಗೀತ ಶಾಸ್ತ್ರಜ್ಞ ಬಾಬ್ ಫಿಂಕ್ ಕಂಡುಹಿಡಿದರು. ಈ ಕೊಳಲು ಸುಮಾರು 43,400 ಮತ್ತು 67,000 ವರ್ಷಗಳ ಮಧ್ಯದಲ್ಲಿನ ಅವಧಿಯದು ಎಂದು ಸಂಶೋಧಕರು ಊಹಿಸಿದರು. ಅತ್ಯಂತ ಹಳೆಯ ಸಂಗೀತ ವಾದ್ಯ ಎಂದು ಇದನ್ನು ಪರಿಗಣಿಸಲಾಯಿತು. ನಿಯಾಂಡರ್ತಾಲ್ ಸಂಸ್ಕೃತಿಗೆ ಸಂಬಂಧಿಸಿದ ಏಕೈಕ ಸಂಗೀತವಾದ್ಯ ಇದಾಗಿದೆ.[೨] ಆದಾಗ್ಯೂ, ಕೆಲವು ಪುರಾತತ್ವ ಶಾಸ್ತ್ರಜ್ಞರು ಒಂದು ಸಂಗೀತ ವಾದ್ಯದ ರೂಪದಲ್ಲಿ ಕೊಳಲಿನ ಸ್ಥಿತಿಯನ್ನು ಪ್ರಶ್ನಿಸಿದರು.[೩] ಜರ್ಮನಿಯ ಪುರಾತತ್ವ ಶಾಸ್ತ್ರಜ್ಞರಿಗೆ ಸ್ವಾಬೇನ್ ಆಲ್ಬಿನಲ್ಲಿ 30,000 ದಿಂದ 37,000 ವರ್ಷ ಹಿಂದಿನ ಮಹಾಗಜ ಮತ್ತು ಹಂಸದ ಎಲುಬಿನಿಂದ ಮಾಡಿದ ಕೊಳಲುಗಳನ್ನು ಉತ್ಖನನ ಸಮಯದಲ್ಲಿ ದೊರೆಯಿತು. ಈ ಶಿಲಾಯುಗಕ್ಕೆ ಸಂಬಂಧಿಸಿದ ಕಾಲದಲ್ಲಿ ಮಾಡಿದ್ದಾಗಿರುವ ಕೊಳಲುಗಳು ಅತ್ಯಂತ ಹಳೆಯ ಸಂಗೀತ ವಾದ್ಯ ಎಂದು ಕರೆಯಲು ಹೆಚ್ಚು ಒಮ್ಮತದಿಂದ ನಿರ್ಧರಿಸಲಾಯಿತು.[೪]

ಸಂಗೀತ ವಾದ್ಯಗಳ ಪುರಾತನ ಪುರಾವೆಯು ಸುಮೇರಿಯಾಪುರಾತನ ನಗರದ ರಾಯಲ್ ಸಿಮೆಟರಿಯ ಉತ್ಖನನದಲ್ಲಿ ದೊರೆಯಿತು. (ಪುರಾತನ ಲೈರ್ ವಾದ್ಯಗಳನ್ನು ನೋಡಿ). ಈ ವಾದ್ಯಗಳು ಒಂಭತ್ತು ಲೈರುಗಳು, ಎರಡು ಹಾರ್ಪುಗಳು, ಒಂದು ಬೆಳ್ಳಿ ದ್ವಿಕೊಳಲು, ಸಿಸ್ಟ್ರ ಮತ್ತು ಸಿಂಬಲ್ ಗಳನ್ನು ಒಳಗೊಂಡಿವೆ. ಪುರಾತನ ಕಾಲದಲ್ಲಿ ಕಂಡುಬಂದ ಕೊಳಲಿನ-ಧ್ವನಿಯಿರುವ ಬೆಳ್ಳಿಯ ಕೊಳವೆಗಳ ಗುಂಪು ಆಧುನಿಕ ಬ್ಯಾಗ್‍ಪೈಪುಗಳ ಪೂರ್ವಿಕ ಆಗಿದ್ದಿರಬಹುದು.[೫] ಸಿಲೆಂಡರ್ ಆಕೃತಿಯ ಪೈಪುಗಳು ಹೊಂದಿರುವ ಮೂರು ಬದಿಯ-ತೂತುಗಳು ನುಡಿಸುವವರಿಗೆ ಪೂರ್ಣ ಪ್ರಮಾಣದ ಸ್ವರವನ್ನು ಹೊರಡಿಸಲು ಅವಕಾಶ ನೀಡುತ್ತವೆ.[೬] ಈ ಉತ್ಖನನಗಳು 1920ರ ದಶಕದಲ್ಲಿ ಲಿಯೋನಾರ್ಡ್ ವೂಲೆ ಅವರಿಂದ ಮಾಡಲ್ಪಟ್ಟಿತು, ವಾದ್ಯಗಳ ತೆರೆದ ಕೆಳದರ್ಜೆಗೆ ಇಳಿಸಲಾಗದ ಅವಶೇಷಗಳು ಮತ್ತು ಕೆಳದರ್ಜೆಗಿಳಿಸಿದ ಭಾಗಗಳ ಉಳಿದ ನಿರರ್ಥಕಗಳನ್ನು ಒಟ್ಟಿಗೆ ಸೇರಿಸಿ ಅವುಗಳ ಪುನರ್ ನಿರ್ಮಾಣಕ್ಕೆ ಉಪಯೋಗಿಸಲಾಯಿತು.[೭] ಯಾವ ಸಮಾಧಿಯಲ್ಲಿ ಈ ವಾದ್ಯಗಳು ದೊರೆತವೋ ಆ ಸಮಾಧಿಯ ಮೇಲೆ ಕ್ರಿ.ಪೂ 2600ರಿಂದ 2500 ಎಂದು ಬರೆಯಲಾಗಿತ್ತು.[೮]

ಕ್ರಿಸ್ತ ಪೂರ್ವ 2000ರ ಮೆಸಪೋಟೆಮಿಯದಲ್ಲಿ ನಿಪ್ಪುರಿನಿಂದ ಕ್ಯೂನಿಫಾರಂ ಫಲಕ, ಲೈರ್ ಮೇಲಿರುವ ತಂತಿಗಳ ಹೆಸರುಗಳನ್ನು ಸೂಚಿಸುತ್ತದೆ ಮತ್ತು ಮೊದಲ ಸಂಗೀತ ಸಂಕೇತವನ್ನು ಪ್ರತಿನಿಧಿಸುತ್ತದೆ.[೯]

ಇತಿಹಾಸ ಬದಲಾಯಿಸಿ

ಸಂಸ್ಕೃತಿಯಲ್ಲಿನ ಸಂಗೀತ ವಾದ್ಯಗಳ ನಿರ್ದಿಷ್ಟ ಕಾಲಕ್ರಮವನ್ನು ಕಂಡುಹಿಡಿಯಲು ಸಂಪೂರ್ಣವಾಗಿ ಅವಲಂಬಿತವಾಗುವ ಯಾವುದೇ ವಿಧಾನಗಳು ಇಲ್ಲ ಎಂದು ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ. ಅವುಗಳ ಸಂಕೀರ್ಣತೆಯ ಆಧಾರದ ಮೇಲೆ ಹೋಲಿಸುವ ಮತ್ತು ಸಂಘಟಿಸುವ ವಾದ್ಯಗಳು ದಾರಿ ತಪ್ಪಿಸುತ್ತವೆ, ಸಂಗೀತ ವಾದ್ಯಗಳಲ್ಲಿನ ಆಧುನಿಕತೆ ಸಂಕೀರ್ಣತೆಯನ್ನು ಕೆಲವೊಮ್ಮೆ ಕಡಿಮೆ ಮಾಡುತ್ತವೆ. ಉದಾಹರಣೆಗೆ, ಮುಂಚಿನ ಸ್ಲಿಟ್ ಡ್ರಮ್ಗಳ ನಿರ್ಮಾಣ, ದೊಡ್ಡ ಮರಗಳನ್ನು ಬೀಳಿಸಿ ಮತ್ತು ಟೊಳ್ಳಾದ ಭಾಗವನ್ನು ತೆಗೆಯುವುದನ್ನು ಒಳಗೊಂಡಿತ್ತು; ನಂತರ ಬಿದಿರನ್ನು ತೆರೆದು ಸ್ಲಿಟ್ ಡ್ರಮ್‌‍ಗಳನ್ನು ಸುಲಭವಾಗಿ ತಯಾರಿಸಲಾಯಿತು.[೧೦] ಕೆಲಸಗಾರಿಕೆಯಿಂದ ಸಂಗೀತ ವಾದ್ಯಗಳ ಅಭಿವೃದ್ಧಿಯನ್ನು ಜೋಡಿಸಲು ಇದು ದಾರಿ ತಪ್ಪಿಸಿದಂತೆ ವಿವಿಧ ಸ್ಥರಗಳಲ್ಲಿ ಎಲ್ಲ ಸಂಸ್ಕೃತಿಗಳು ಆಧುನಿಕವಾಗಿವೆ ಮತ್ತು ವಿವಿಧ ವಸ್ತುಗಳನ್ನು ಪಡೆಯುವ ಸೌಲಭ್ಯ ಹೊಂದಿವೆ. ಉದಾಹರಣೆಗೆ, ಒಂದೇ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಆದರೆ ಸಂಘಟನೆ, ಸಂಸ್ಕೃತಿ, ಕರಕೌಶಲ ಬೇರೆಯಾಗಿರುವ ಎರಡು ಬೇರೆ ಬೇರೆ ಜನಾಂಗಗಳು ತಯಾರಿಸಿದ ಸಂಗೀತ ವಾದ್ಯಗಳನ್ನು ಹೋಲಿಸಲು ಮಾನವಶಾಸ್ತ್ರಜ್ಞರು ಪ್ರಯತ್ನಿಸುತ್ತಿದ್ದಾರೆ, ಯಾವ ಸಾಧನಗಳು ಹೆಚ್ಚು "ಪ್ರಾಚೀನ" ಎಂದು ಕಂಡುಹಿಡಿಯಲು ಸಾಧ್ಯವಿಲ್ಲ.[೧೧] ಭೂಗೋಳದ ಮೂಲಕ ವಾದ್ಯಗಳನ್ನು ಜೋಡಿಸುವುದು ಸಹ ಅವಿಶ್ವಸನೀಯ, ಯಾವಾಗ ಮತ್ತು ಹೇಗೆ ಸಂಸ್ಕೃತಿಗಳು ಒಂದಕ್ಕೊಂದು ಸಂಪರ್ಕಿಸಿದವು ಮತ್ತು ಜ್ಞಾನವನ್ನು ಹಂಚಿಕೊಂಡವು ಎಂದು ಕಂಡುಹಿಡಿಯುವುದು ಸಾಧ್ಯವಿಲ್ಲ.

ಇದರ ಸೀಮಿತ ಪರಿಧಿಯ ಕಾರಣದಿಂದ ಸುಮಾರು 1400ರ ವರೆಗೆ ಭೌಗೋಳಿಕ ಕಾಲಕ್ರಮ ಸೂಕ್ತವಾಗಿತ್ತು ಎಂದು ಆಧುನಿಕ ಕಾಲದ ಜರ್ಮನಿಯ ಒಬ್ಬ ಪ್ರಸಿದ್ಧ ಸಂಗೀತ ಶಾಸ್ತ್ರಜ್ಞರು[೧೨] ಮತ್ತು ಸಂಗೀತ ಜನಾಂಗ ಶಾಸ್ತ್ರಜ್ಞರಾದ[೧೩] ಕರ್ಟ್ ಸಾಚ್ಸ್ ಪ್ರತಿಪಾದಿಸುತ್ತಾರೆ.[೧೪] 1400ರ ಹೊರತಾಗಿ, ಒಂದು ಕಾಲಾವಧಿಯ ಮೂಲಕ ಸಂಗೀತ ವಾದ್ಯಗಳ ಸಮಗ್ರ ಅಭಿವೃದ್ಧಿಯನ್ನು ಅನುಸರಿಸಬಹುದು.[೧೪]

ಸಂಗೀತ ವಾದ್ಯಗಳ ಜೋಡಣೆ ಮಾಡುವ ವಿಜ್ಞಾನ ಪುರಾತನ ಕಲಾಕೃತಿಗಳು, ಕಲಾತ್ಮಕ ಚಿತ್ರಣ, ಮತ್ತು ಸಾಹಿತಿಕ ಸಂದರ್ಭಗಳ ಮೇಲೆ ಅವಲಂಬಿತವಾಗಿದೆ. ಒಂದು ಸಂಶೋಧನಾ ಪಥದಲ್ಲಿನ ಅಂಕಿಅಂಶಗಳು ಅಪೂರ್ಣವಾಗಿರಬಹುದು, ಎಲ್ಲಾ ಮೂರು ಪಥಗಳು ಉತ್ತಮ ಐತಿಹಾಸಿಕ ಚಿತ್ರಣವನ್ನು ಒದಗಿಸುತ್ತವೆ.[೧]

ಪ್ರಾಚೀನ ಮತ್ತು ಇತಿಹಾಸಪೂರ್ವ ಬದಲಾಯಿಸಿ

 
ಎರಡು ಬದಿ ಸೀಳಿರುವ ಆಜ್‌ಟೆಕ್‌ ಡ್ರಮ್‌ ಅನ್ನು ಟೆಪೊನಾಝ್ಟ್ಲಿ ಎಂದು ಕರೆಯಲಾಗುತ್ತದೆ. ಮುಂಬಾಗದಲ್ಲಿ ಡ್ರಮ್‌ನ ಮೇಲ್ಬಾಗದಲ್ಲಿ "H" ರೀತಿಯ ಸೀಳಿರುವುದನ್ನು ಮುಂಬಾಗದಲ್ಲಿ ಕಾಣಬಹುದು.

ಹತ್ತೊಂಭತ್ತನೇ ಶತಮಾನದವರೆಗೆ, ಸಂಗೀತ ವಾದ್ಯಗಳು ಹೇಗೆ ಹುಟ್ಟಿಕೊಂಡವು ಎನ್ನುವ ಪೌರಾಣಿಕ ಕಥೆಗಳ ಜೊತೆ ಯುರೋಪಿಯನ್ನರು ಬರೆದ ಸಂಗೀತದ ಇತಿಹಾಸ ಪ್ರಾರಂಭವಾಗುತ್ತದೆ. ಇವುಗಳ ಇತಿಹಾಸವು ಕೈನ್‌ ರಾಜವಂಶಸ್ಥ ಜುಬಾಲ್‌ನಿಂದ ಪ್ರಾರಂಭವಾಗುತ್ತದೆ. ಇವನನ್ನು "ಹಾರ್ಪ್‌ ಮತ್ತು ಆರ್ಗನ್‌ ಮುಂತಾದ ಉಪಕರಣಗಳ ಜನಕ" ಎಂದು ಕರೆಯಲಾಗುತ್ತದೆ. ಪಾನ್ ಎಂಬುವವನು ’ಪಾನ್‌ ಪೈಪ್‌’ ಅನ್ನು ಕಂಡುಹಿಡಿದವನಾಗಿದ್ದಾನೆ. ಮರ್ಕ್ಯೂರಿ ಎಂಬುವವನು ಒಣಗಿಸಿದ ಆಮೆಯ ಚಿಪ್ಪನ್ನು ಮೊದಲ ’ಲೈರ್’ಕಂಡುಹಿಡಿದನು. ಆಧುನಿಕ ಇತಿಹಾಸಗಳು ಮಾನವಶಾಸ್ತ್ರೀಯ ಕಲ್ಪನೆಯ ಜೊತೆ ಪೌರಾಣಿಕ ಕಥೆಗಳನ್ನು ಬದಲಿಸಿವೆ, ಕೆಲವೊಮ್ಮೆ ಪುರಾತನ ಪುರಾವೆಗಳು ತಿಳಿಸುತ್ತವೆ. ಸಂಗೀತ ವಾದ್ಯಗಳನ್ನು ವ್ಯಾಖ್ಯಾನಿಸುವ ಯಾವುದೇ "ಆವಿಷ್ಕಾರ" ಇಲ್ಲ ಎಂದು ವಿಧ್ವಾಂಸರು ಒಪ್ಪಿಕೊಳ್ಳುತ್ತಾರೆ ಇದರಿಂದ "ಸಂಗೀತ ವಾದ್ಯಗಳು" ಪದದ ವ್ಯಾಖ್ಯೆ ವಿದ್ವಾಂಸರಿಗೆ ಮತ್ತು ಶೋಧನಾಕಾರರಿಗೆ ಸಂಪೂರ್ಣವಾಗಿ ವಸ್ತು ನಿಷ್ಠವಾಗಿದೆ. ಉದಾಹರಣೆಗೆ, ಹೊಮೊ ಹ್ಯಾಬಿಲ್ಲಿ ಗಳು ತಮ್ಮ ದೇಹವನ್ನು ಬಡಿದುಕೊಳ್ಳುವ ಮೂಲಕ ಸಂಗೀತ ಸಾಧನಗಳ ಬದಲಾಗಿ ಸಂಗೀತವನ್ನು ಹೊರಡಿಸುವುದನ್ನು ಕಲಿತುಕೊಂಡಿದ್ದರು.[೧೫]

ರ್ಯಾಟಲ್ಸ್, ಸ್ಟಾಂಪರ್ಸ್ ಮತ್ತು ವಿವಿಧ ರೀತಿಯ ಡ್ರಮ್‍ಗಳು ಮಾನವ ಶರೀರದ ಬಾಹ್ಯ ಮೊದಲ ಸಾಧನಗಳಲ್ಲಿ ಪರಿಗಣಿಸುವ ವಾದ್ಯಗಳಾಗಿವೆ.[೧೬] ನೃತ್ಯದಂತಹ ಭಾವನಾತ್ಮಕ ಸಂಗತಿಗಳಿಗೆ ಧ್ವನಿ ಒದಗಿಸುವ ಮಾನವರ ಅಂತಃಪ್ರೇರಣೆಯ ಕಾರಣದಿಂದ ಇಂತಹ ಮೊದಲ ವಾದ್ಯಗಳು ಕಾಣಿಸಿಕೊಂಡವು.[೧೭] ಕೆಲವು ಸಂಸ್ಕೃತಿಗಳು ಅವರ ಸಂಗೀತ ವಾದ್ಯಗಳಿಗೆ ಅನುಷ್ಠಾನ ಕಾರ್ಯಗಳನ್ನು ನಿಗದಿಪಡಿಸಿದವು. ಆ ಸಂಸ್ಕೃತಿಗಳು ಹೆಚ್ಚು ಸಂಕೀರ್ಣ ಘರ್ಷಣ ವಾದ್ಯಗಳನ್ನು ವಿಕಾಸಗೊಳಿಸಿದವು ಮತ್ತು ರಿಬ್ಬನ್ ರೀಡ್ಸ್, ಕೊಳಲುಗಳು, ಮತ್ತು ಕಹಳೆಗಳಂತಹ ವಾದ್ಯಗಳನ್ನು ಅಭಿವೃದ್ಧಿ ಪಡಿಸಿದವು. ಆಧುನಿಕ ಕಾಲದಲ್ಲಿ ಬಳಸಲಾಗುವ ವಾದ್ಯಗಳನ್ನು ಯಾವ ರೀತಿ ಬಳಸುತ್ತಿದ್ದಾರೆಯೋ ಅದಕ್ಕೆ ಭಿನ್ನವಾಗಿ ಈ ವಾದ್ಯಗಳನ್ನು ಬಳಸಲಾಗುತ್ತಿತ್ತು.[೧೮] ರಷ್ಯಾದ ಅತ್ಯಂತ ಪೂರ್ವ ಭಾಗದ ಚುಂಕ್ಚಿ ಜನರಿಗೆ, ಮೆಲನೇಷಿಯದ ಸ್ಥಳೀಯ ಜನರಿಗೆ ಮತ್ತು ಆಫ್ರಿಕಾದ ಬಹಳಷ್ಟು ಜನಾಂಗದವರಿಗೆ ಇದು ಧಾರ್ಮಿಕವಾಗಿ ಡ್ರಮ್ ಮುಖ್ಯ ಪಾತ್ರವನ್ನು ಪಡೆದಿದೆ. ನಿಜವಾಗಿಯೂ, ಡ್ರಮ್‍ಗಳು ಆಫ್ರಿಕನ್ ಜನಾಂಗದವರ ಮುಖ್ಯ ಸಂಗೀತ ವಾದ್ಯವಾಗಿತ್ತು.[೧೯] ಪೂರ್ವ ಆಫ್ರಿಕಾದ ವಹಿಂದ್ ಎನ್ನುವ[೨೦] ಒಂದು ಬುಡಕಟ್ಟು ಜನಾಂಗ ಡ್ರಮ್‌ ಅನ್ನು ತುಂಬಾ ಪವಿತ್ರ ಎಂದು ನಂಬಿತ್ತು. ಸುಲ್ತಾನನ್ನು ಬಿಟ್ಟು ಬೇರೆ ಯಾರಾದರೂ ಇದನ್ನು ನೋಡಿದರೆ ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇದೆ ಎಂದು ನಂಬಿತ್ತು.[೨೦]

ನಂತರ ಮಾನವರು ಇಂಪಾದ ಸಂಗೀತವನ್ನು ಹೊರಹೊಮ್ಮಿಸುವ ಸಲುವಾಗಿ ಸಂಗೀತ ವಾದ್ಯಗಳನ್ನು ಉಪಯೋಗಿಸುವ ಪರಿಕಲ್ಪನೆಯನ್ನು ವಿಕಾಸಗೊಳಿಸಿದರು. ಸಂಗೀತ ವಾದ್ಯಗಳ ವಿಕಸನದಲ್ಲಿ ಈ ಸಮಯದವರೆಗೆ, ಮಾಧುರ್ಯ ಹಾಡುವುದರಲ್ಲಿ ಮಾತ್ರ ಸಾಮಾನ್ಯವಾಗಿತ್ತು. ಭಾಷೆಯಲ್ಲಿ ಪುನರಾವರ್ತನೆಯ ಕ್ರಿಯೆಯಂತೆ ವಾದ್ಯ ನುಡಿಸುವವರು ಮೊದಲು ಪುನರುಕ್ತಿಯನ್ನು ನಂತರ ವ್ಯವಸ್ಥೆಯನ್ನು ವಿಕಾಸಗೊಳಿಸಿದರು. ಸ್ವಲ್ಪ ಬೇರೆ ಬೇರೆ ಅಳತೆಯ ಎರಡು ಟ್ಯೂಬುಗಳನ್ನು ಸೇರಿಸಿ ಮಾಧುರ್ಯದ ಮೊದಲ ರೂಪವನ್ನು ಸೃಷ್ಟಿಸಲಾಯಿತು, ಒಂದು ಟ್ಯೂಬ್ "ಸ್ಪಷ್ಟ" ಧ್ವನಿಯನ್ನು ಮತ್ತು ಇನ್ನೊಂದು "ಆಳವಾದ" ಧ್ವನಿಯಲ್ಲಿ ಉತ್ತರವನ್ನು ಹೊರಹೊಮ್ಮಿಸುವುದು. ಇಂತಹ ವಾದ್ಯ ಜೋಡಿಗಳು ಬುಲ್‍ರೋರರ‍್ಗಳು, ಸ್ಲಿಟ್ ಡ್ರಮ್‍ಗಳು, ಚಿಪ್ಪಿನ ಕಹಳೆಗಳು, ಮತ್ತು ಚರ್ಮದ ಡ್ರಮ್‍ಗಳನ್ನು ಒಳಗೊಂಡಿವೆ. ಈ ವಾದ್ಯ ಜೋಡಿಗಳನ್ನು ಉಪಯೋಗಿಸಿದ ಸಂಸ್ಕೃತಿಗಳು ಅವುಗಳ ಜೊತೆ ಲಿಂಗಗಳನ್ನು ಹೊಂದಿತ್ತು; ಹೆಚ್ಚು ದೊಡ್ಡದಾದ ಅಥವಾ ಹೆಚ್ಚು ಶಕ್ತಿಶಾಲಿಯಾಗಿರುವ ವಾದ್ಯ "ತಂದೆ" ಯಾಗಿತ್ತು, ಚಿಕ್ಕ ಅಥವಾ ಮಂದ ವಾದ್ಯ "ತಾಯಿ"ಯಾಗಿತ್ತು. ಮೂರು ಅಥವಾ ಹೆಚ್ಚು ಸ್ವರಗಳ ವಿನ್ಯಾಸಗಳು ಮೊದಲ ಕ್ಸಿಲೋಫೋನಿನ ರೂಪದಲ್ಲಿ ಹೊರಹೊಮ್ಮುವ ಮೊದಲು, ಸಂಗೀತ ವಾದ್ಯಗಳು ಸಾವಿರಾರು ವರ್ಷಗಳವರೆಗೆ ಇದೇ ರೀತಿಯಲ್ಲಿ ಅಸ್ತಿತ್ವದಲ್ಲಿದ್ದವು.[೨೧] ಕ್ಸಿಲೋಫೋನುಗಳು ದಕ್ಷಿಣ ಪೂರ್ವ ಏಷ್ಯಾದ ಮುಖ್ಯಭೂಭಾಗ ಮತ್ತು ಕುದುರುಗಡಲುಗಳಲ್ಲಿ ಹುಟ್ಟಿಕೊಂಡವು, ನಂತರ ಆಫ್ರಿಕ, ಯುರೋಪು, ಮತ್ತು ಅಮೇರಿಕಗಳಲ್ಲಿ ಹರಡಿತು.[೨೨] ಕ್ಸಿಲೋಫೋನುಗಳ ಜೊತೆಗೆ, ಸರಳವಾದ ಮೂರು ಲೆಗ್‌ ಬಾರ್‌ಗಳನ್ನು ಸೂಕ್ಷ್ಮವಾಗಿ ಕಟ್ಟುವ ಮೂಲಕ, ಭೂಮಿ ತಂತಿ ವಾದ್ಯ, ಭೂಮಿ ಸಿತಾರ್, ಸಂಗೀತ ಧನಸ್ಸು ಮತ್ತು ಜಾವ್ ಹಾರ್ಪ್‌‍ಗಳಂತಹ ವಾದ್ಯಗಳನ್ನು ವಿವಿಧ ಜನಾಂಗಗಳು ಅಭಿವೃದ್ಧಿ ಪಡಿಸಿದವು.[೨೩]

ಪ್ರಾಚೀನ ಕಾಲ ಬದಲಾಯಿಸಿ

ಕ್ರಿಸ್ತಪೂರ್ವ 2800ರ ಮೆಸಪೋಟೆಮಿಯ ಕಲಾಕೃತಿಗಳಲ್ಲಿ ಅಥವಾ ಅದಕ್ಕಿಂತ ಮೊದಲು ಸಂಗೀತ ವಾದ್ಯಗಳ ಚಿತ್ರಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಸುಮಾರು ಕ್ರಿಸ್ತಪೂರ್ವ 2000ರ ಪ್ರಾರಂಭದಲ್ಲಿ, ಶ್ರಮ ವಿಭಜನೆ ಮತ್ತು ವರ್ಗೀಕರಣ ವ್ಯವಸ್ಥೆಯ ಕಾರಣದಿಂದ ಸುಮೆರಿಯನ್ನರು ಮತ್ತು ಬೆಬಿಲೋನಿಯನ್ನರು ಎರಡು ಬೇರೆ ಬೇರೆ ರೀತಿಯ ಸಂಗೀತ ವಾದ್ಯಗಳನ್ನು ರೂಪಿಸಲು ಪ್ರಾರಂಭಿಸಿದರು. ಜನಪ್ರಿಯ ವಾದ್ಯಗಳು, ಸರಳ ಮತ್ತು ಯಾರಾದರೂ ನುಡಿಸಬಹುದಾದ, ವೃತ್ತಿನಿರತ ವಾದ್ಯಗಳಿಂದ ವಿಭಿನ್ನವಾಗಿರುವ ವಾದ್ಯಗಳನ್ನು ತಯಾರಿಸಿದರು, ಅವರ ಅಭಿವೃದ್ಧಿ ಪ್ರಭಾವಶೀಲತೆ ಮತ್ತು ಕೌಶಲ್ಯದ ಮೇಲೆ ಬೆಳಕು ಚೆಲ್ಲಿತ್ತು.[೨೪] ಅಭಿವೃದ್ಧಿ ಹೀಗಿದ್ದರೂ, ಮೆಸಪೋಟೆಮಿಯದಲ್ಲಿ ಅತಿ ಕಡಿಮೆ ಸಂಗೀತ ವಾದ್ಯಗಳು ವಿಕಾಸಗೊಂಡವು. ಮೆಸಪೋಟೆಮಿಯದಲ್ಲಿ ಸಂಗೀತ ವಾದ್ಯಗಳ ಮೊದಲಿನ ಇತಿಹಾಸವನ್ನು ಪುನರ್ನಿರ್ಮಿಸಲು ಮೇಧಾವಿಗಳು ಕಲಾಕೃತಿಗಳು ಮತ್ತು ಸುಮೆರಿಯನ್ನರು ಅಥವಾ ಅಕ್ಕಡಿಯನ್ನರು ಬರೆದ ಬೆಣೆಯಾಕಾರದ ಬರಹಗಳ ಮೇಲೆ ಅವಲಂಬಿತವಾಗಬೇಕಾಯಿತು. ವಿವಿಧ ವಾದ್ಯಗಳಲ್ಲಿ ಸ್ಪಷ್ಟ ವ್ಯತ್ಯಾಸವಿಲ್ಲದ ಕಾರಣ ಈ ವಾದ್ಯಗಳಿಗೆ ಹೆಸರುಗಳನ್ನು ಕೊಡುವ ಮತ್ತು ಅವುಗಳನ್ನು ವಿವರಿಸಲು ಶಬ್ದಗಳನ್ನು ಉಪಯೋಗಿಸುವ ಕಾರ್ಯ ಸಹ ಕಷ್ಟವಾಗಿತ್ತು.[೨೫] ಆದಾಗ್ಯೂ, ಸುಮೇರಿಯಾದ ಮತ್ತು ಬೆಬಿಲೋನಿಯಾದ ಕಲಾವಿದರು ಉತ್ಸವ-ಸಂಬಂಧಿ ವಾದ್ಯಗಳನ್ನು ಚಿತ್ರಿಸಿದರು, ಆರು ರೀತಿಯ ಐಡಿಯೋಫೋನುಗಳನ್ನು ವರ್ಗೀಕರಿಸಲು ಇತಿಹಾಸಕಾರರಿಗೆ ಸಾಧ್ಯವಾಯಿತು: ಅವು, ಕನ್‍ಕ್ಯುಶನ್ ಕ್ಲಬ್ಸ್, ಕ್ಲಾಪರ್ಸ್, ಸಿಸ್ಟ್ರ, ದೊಡ್ಡ ತಾಳಗಳು, ಘಂಟೆಗಳು, ಮತ್ತು ರ್ಯಾಟಲ್ಸ್.[೨೬] ಅಮೆನ್ಹೊತೆಪ್ IIIರ ಹೆಚ್ಚಿನ ನೆಮ್ಮದಿಯಲ್ಲಿ ಸಿಸ್ಟ್ರ ಚಿತ್ರಿತವಾಗಿದೆ, ಮತ್ತು ಇವು ವಿಶೇಷ ಆಸಕ್ತಿಯದಾಗಿವೆ ಏಕೆಂದರೆ ದೂರದ ಪ್ರದೇಶಗಳಾದ ತ್ಬಿಲಿಸಿ, ಜಾರ್ಜಿಯ, ಮತ್ತು ಅಮೇರಿಕಾದ ಮೂಲ ನಿವಾಸಿಗಳಾದ ಯಕ್ವಿ ಬುಡಕಟ್ಟು ಜನಾಂಗಗಳಲ್ಲಿ ಇಂತಹುದೇ ಚಿತ್ರಗಳು ಕಂಡುಬಂದಿವೆ.[೨೭] ಮೆಸಪೋಟೆಮಿಯದ ಜನರು ಉಳಿದವುಗಳಿಗಿಂತ ತಂತಿ ವಾದ್ಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದರು, ಮೆಸಪೋಟೆಮಿಯದ ಪ್ರತಿಮೆಗಳಲ್ಲಿ, ಅಲಂಕಾರ ಫಲಕಗಳಲ್ಲಿ ಮತ್ತು ಮೊಹರುಗಳಲ್ಲಿ ಅವರ ಪ್ರಸರಣ ಇದಕ್ಕೆ ಸಾಕ್ಷಿಯಾಗಿದೆ. ಲೆಕ್ಕವಿಲ್ಲದಷ್ಟು ನಮೂನೆಯ ತಂತಿ ವಾದ್ಯಗಳನ್ನು ಚಿತ್ರಿಸಿದ್ದಾರೆ, ವಯಲಿನ್ ನಂತಹ ಆಧುನಿಕ ತಂತಿ ವಾದ್ಯಗಳ ಪೂರ್ವಿಕರಾದ ಲೈರ‍್ಗಳು ಮತ್ತು ಲ್ಯುಟ್‍ಗಳನ್ನೂ ಸಹ ಚಿತ್ರಿಸಿದ್ದಾರೆ.[೨೮]

ಚಿತ್ರ:Egyptianluteplayers.jpg
18ನೇ ಶತಮಾನದ ಸಾಮ್ರಾಜ್ಯದ ಪ್ರಾಚೀನ ಈಜಿಪ್ಟಿನ ಸಮಾಧಿ ಮೇಲಿನ ವರ್ಣಚಿತ್ರಗಳು ಲೂಟ್ ನುಡಿಸುವವರನ್ನು ವರ್ಣಿಸುತ್ತದೆ, (ಸಿ. 3000 BCಗೆ ಸೇರಿದ್ದು).

ಕ್ರಿಸ್ತ ಪೂರ್ವ 2700ರ ಮೊದಲು ಈಜಿಪ್ಟಿಯನ್ನರಿಂದ ಉಪಯೋಗಿಸಲ್ಪಟ್ಟ ಸಂಗೀತ ವಾದ್ಯಗಳು ಮತ್ತು ಮೆಸಪೋಟೆಮಿಯದಲ್ಲಿ ಉಪಯೋಗಿಸಿದವುಗಳು ಒಂದೇ ಆಗಿರುವುದು ಗಮನಸೆಳೆಯುತ್ತದೆ, ಮುಖ್ಯ ನಾಗರೀಕತೆಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದಿರಲೇ ಬೇಕು ಎಂದು ಇತಿಹಾಸಕಾರರು ತೀರ್ಮಾನಿಸುತ್ತಾರೆ. ಈಜಿಪ್ಟ್ ಮತ್ತು ಸುಮೇರಿಯಾದ ಸಂಸ್ಕೃತಿಗಳು ಯಾವುದೇ ರೀತಿಯ ವಾದ್ಯಗಳನ್ನು ಹೊಂದಿರಲಿಲ್ಲ ಎಂದು ಸಾಚ್ಸ್ ಬರೆಯುತ್ತಾರೆ.[೨೯] ಆದಾಗ್ಯೂ, ಕ್ರಿಸ್ತಪೂರ್ವ 2700ರ ಹೊತ್ತಿಗೆ ಸಾಂಸ್ಕೃತಿಕ ಸಂಪರ್ಕಗಳು ಕಣ್ಮರೆಯಾದಂತೆ ಕಾಣುತ್ತವೆ; ಸುಮರಿನಲ್ಲಿ ಒಂದು ಪ್ರಮುಖ ಉತ್ಸವ-ಸಂಬಂಧಿ ವಾದ್ಯವಾದ ಲೈರ್, 800 ವರ್ಷಗಳವರೆಗೆ ಈಜಿಪ್ಟಿನಲ್ಲಿ ಕಾಣಿಸಿಕೊಂಡಿಲ್ಲ.[೨೯] ಕ್ರಿಸ್ತ ಪೂರ್ವ 3000ರ ಪ್ರಾರಂಭದಲ್ಲಿ ಈಜಿಪ್ತಿಯನ್ನರ ಹೂದಾನಿಗಳ ಮೇಲೆ ಕ್ಲಾಪರ್ಸ್ ಮತ್ತು ಕನ್‍ಕ್ಯುಶನ್ ಸ್ಟಿಕ್ಸ್ ಕಾಣಿಸಿಕೊಂಡಿವೆ. ಸಿಸ್ಟ್ರ, ನೆಟ್ಟಗಿನ ಕೊಳಲುಗಳು, ಜೋಡಿ ಕ್ಲಾರಿನೆಟ್ಸ್, ಬಾಗಿದ ಮತ್ತು ಕೋನಗಳುಳ್ಳ ತಂತಿ ವಾದ್ಯಗಳು, ಮತ್ತು ವಿವಿಧ ಡ್ರಮ್‍ಗಳನ್ನು ಸಹ ನಾಗರೀಕತೆ ಉಪಯೋಗಿಸಿದೆ.[೩೦] ಕ್ರಿಸ್ತ ಪೂರ್ವ 2700 ಮತ್ತು 1500ರ ಮಧ್ಯದ ಸ್ವಲ್ಪ ಇತಿಹಾಸ ಲಭ್ಯವಿದೆ, ಈಜಿಪ್ಟ್ (ಮತ್ತು ವಾಸ್ತವವಾಗಿ ಬೆಬಿಲೋನ್) ಯುದ್ಧ ಮತ್ತು ವಿನಾಶದ ಒಂದು ದೀರ್ಘ ಕಾಲವನ್ನು ಪ್ರವೇಶಿಸಿತು. ಕಸ್ಸಿಟರು ಮೆಸಪೋಟೆಮಿಯದಲ್ಲಿ ಬೆಬಿಲೋನಿಯನ್ ಸಾಮ್ರಾಜ್ಯ ನಾಶ ಮಾಡುವುದನ್ನು ಮತ್ತು ಹೈಕ್ಸೊರು ಈಜಿಪ್ಟಿನ ಮಧ್ಯಭಾಗದ ಆಧಿಪತ್ಯ ನಾಶ ಮಾಡುವುದನ್ನು ಈ ಅವಧಿ ಕಂಡಿತು. ಸುಮಾರು ಕ್ರಿಸ್ತ ಪೂರ್ವ 1500ರಲ್ಲಿ ಈಜಿಪ್ಟಿನ ಪಾರೋಹ್ ಗಳು ದಕ್ಷಿಣಪಶ್ಚಿಮ ಎಷ್ಯಾವನ್ನು ಜಯಿಸಿದಾಗ, ಮೆಸಪೋಟೆಮಿಯದ ಸಾಂಸ್ಕೃತಿಕ ಸಂಬಂಧ ನವೀಕರಣಗೊಂಡಿತು ಮತ್ತು ಈಜಿಪ್ಟಿನ ಸಂಗೀತ ವಾದ್ಯಗಳು ಸಹ ಏಷ್ಯಾದ ಸಂಸ್ಕೃತಿಗಳಿಂದ ಹೆಚ್ಚು ಪ್ರಾಭಾವಿತಗೊಂಡವು.[೨೯] ಅವರ ಹೊಸ ಸಾಂಸ್ಕೃತಿಕ ಪ್ರಭಾವಗಳ ಅಡಿಯಲ್ಲಿ, ಹೊಸ ಆಧಿಪತ್ಯದ ಜನರು ಓಬೋಸ್, ತುತ್ತೂರಿಗಳು, ಲೈರ‍್ಗಳು, ಲುಟ್‍ಗಳು, ಕಸ್ಟನೆಟ್ಸ್, ಮತ್ತು ದೊಡ್ಡ ತಾಳಗಳನ್ನು ಉಪಯೋಗಿಸಲು ಪ್ರಾರಂಭಿಸಿದರು.[೩೧]

ಮೆಸಪೋಟೆಮಿಯ ಮತ್ತು ಈಜಿಪ್ಟಿಗೆ ವೈಪರಿತ್ಯವಾಗಿ, ಕ್ರಿಸ್ತಪೂರ್ವ 2000 ಮತ್ತು 1000ರ ಮಧ್ಯ ಇಸ್ರೇಲಿನಲ್ಲಿ ವೃತ್ತಿನಿರತ ಸಂಗೀತಗಾರರು ಅಸ್ತಿತ್ವದಲ್ಲಿರಲಿಲ್ಲ. ಮೆಸಪೋಟೆಮಿಯ ಮತ್ತು ಈಜಿಪ್ಟಿನ ಸಂಗೀತ ವಾದ್ಯಗಳ ಇತಿಹಾಸ ಕಲಾತ್ಮಕ ಚಿತ್ರಣಗಳನ್ನು ಅವಲಂಬಿಸಿದೆ, ಇಸ್ರೇಲಿನ ಸಂಸ್ಕೃತಿ ಇಂತಹ ಕೆಲವು ಚಿತ್ರಣಗಳನ್ನು ಸೃಷ್ಟಿಸಿತು. ಆದ್ದರಿಂದ ಮೇಧಾವಿಗಳು ಬೈಬಲ್ ಮತ್ತು ತಲ್ಮುದ್ ಗಳಿಂದ ಶೇಖರಿಸಿದ ಮಾಹಿತಿಗಳ ಮೇಲೆ ಅವಲಂಬಿತವಾಗಲೇ ಬೇಕಾಗಿದೆ.[೩೨] ಜುಬಲ್, ಉಗಬ್ಸ್, ಮತ್ತು ಕಿನೋರ್ ಜೊತೆ ಕೂಡಿಕೊಂಡಿರುವ ಎರಡು ಮುಖ್ಯ ವಾದ್ಯಗಳನ್ನು ಹೆರ್ಬೆ ಬರಹಗಳು ಉಲ್ಲೇಖಿಸುತ್ತವೆ. ಇವುಗಳು ಬಹುಶಃ ಕ್ರಮವಾಗಿ ಪಾನ್ ಪೈಪ್‍ಗಳು ಲೈರ‍್ಗಳಂತೆ ಭಾಷಾಂತರಗೊಂಡಿದ್ದಿರಬೇಕು.[೩೩] ಈ ಅವಧಿಯು ಒಳಗೊಂಡಿರುವ ಇತರ ವಾದ್ಯಗಳೆಂದರೆ ಟೋಫ್ಸ್, ಅಥವಾ ಫ್ರೇಮ್ ಡ್ರಮ್‍ಗಳು, ಚಿಕ್ಕ ಘಂಟೆಗಳು ಅಥವಾ ಪಾ’ಅಮೊನ್ ಎನ್ನುವ ಗೆಜ್ಜೆಗಳು, ಶೊಫರ್ ಗಳು, ಮತ್ತು ಹಸೊಸ್ರದಂತಹ ತುತ್ತೂರಿ.[೩೪] ಇಸ್ರೇಲಿನಲ್ಲಿ ಕ್ರಿಸ್ತಪೂರ್ವ ಹನ್ನೊಂದನೇ ಶತಮಾನದ ಅರಸರ ಪರಿಚಯದಿಂದ ಮೊದಲ ವೃತ್ತಿಪರ ಸಂಗೀತಗಾರರನ್ನು ಸೃಷ್ಟಿಸಿದರು ಮತ್ತು ಇವರ ಜೊತೆ ವಿವಿಧ ಸಂಗೀತ ವಾದ್ಯಗಳ ಸಂಖ್ಯೆ ತೀವ್ರವಾಗಿ ಹೆಚ್ಚಿತು.[೩೫] ಆದಾಗ್ಯೂ, ಅರ್ಥವಿವರಣೆಯ ಕೊರತೆಯಿಂದಾಗಿ ವಾದ್ಯಗಳನ್ನು ಗುರುತಿಸುವುದು ಮತ್ತು ವರ್ಗೀಕರಿಸುವ ಕೆಲಸ ಸವಾಲಾಗಿಯೇ ಉಳಿಯಿತು. ಉದಾಹರಣೆಗೆ, ನೆವಲ್ಸ್ ಮತ್ತು ಅಸೋರ್ಸ್ ಎನ್ನುವ ಅನಿಶ್ಚಿತ ವಿನ್ಯಾಸದ ತಂತಿ ವಾದ್ಯಗಳು ಅಸ್ತಿತ್ವದಲ್ಲಿತ್ತು, ಆದರೆ ಪುರಾತತ್ವ ಶಾಸ್ತ್ರವಾಗಲೀ ವ್ಯುತ್ಪತ್ತಿ ಶಾಸ್ತ್ರವಾಗಲೀ ಇವುಗಳನ್ನು ಸ್ಪಷ್ಟವಾಗಿ ಅರ್ಥೈಸಲಿಲ್ಲ.[೩೬] "ತಂತಿ ವಾದ್ಯ"ದ ಫೋನಿಶಿಯನ್ ಶಬ್ದ "ನಬ್ಲಾ" ದ ಜೊತೆ ಇದರ ಸಂಬಂಧವಿರುವ ಕಾರಣದಿಂದ ನೇವಲ್ ಲಂಬ ತಂತಿ ವಾದ್ಯದ ಹಾಗೆ ಇರಲೇಬೇಕು ಎಂದು ಅಮೇರಿಕಾದ ಸಂಗೀತಗಾರ್ತಿ ಸಿಬಿಲ್ ಮಾರ್ಕಸ್ ಅ ಸರ್ವೆ ಆಫ್ ಮ್ಯೂಸಿಕಲ್ ಇನ್‍ಸ್ಟ್ರುಮೆಂಟ್ಸ್ ಅವಳ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ.[೩೭]

ಗ್ರೀಸ್, ರೋಮ್, ಮತ್ತು ಎತ್ರುರಿಯಗಳಲ್ಲಿ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಲ್ಲಿ ಆ ಸಂಸ್ಕೃತಿಗಳ ಕಾರ್ಯಸಾಧನೆಗಳಿಗೆ, ಸಂಗೀತ ವಾದ್ಯಗಳ ಬಳಕೆ ಮತ್ತು ಅಭಿವೃದ್ಧಿ ಕೇವಲವಾಗಿತ್ತು. ಆ ಕಾಲದ ವಾದ್ಯಗಳು ಸರಳವಾಗಿದ್ದವು ಮತ್ತು ಎಲ್ಲವೂ ಇತರ ಸಂಸ್ಕೃತಿಗಳಿಂದ ಆಮದು ಮಾಡಿಕೊಂಡಿದ್ದಾಗಿತ್ತು.[೩೮] ಲೈರ‍್ಗಳು ಮುಖ್ಯ ವಾದ್ಯಗಳಾಗಿದ್ದವು, ಸಂಗೀತಗಾರರು ಅವುಗಳನ್ನು ದೇವರನ್ನು ಸ್ತುತಿಸಲು ಉಪಯೋಗಿಸುತ್ತಿದ್ದರು.[೩೯] ಗ್ರೀಕರು ನುಡಿಸಿದ ವಿವಿಧ ಗಾಳಿ ವಾದ್ಯಗಳನ್ನು ಒಲೋಸ್ (ರೀಡ್ಸ್) ಅಥವಾ ಸಿರಿಂಕ್ಸ್ (ಕೊಳಲುಗಳು) ಎಂದು ಅವರು ವರ್ಗೀಕರಿಸಿದ್ದಾರೆ; ಆ ಸಮಯದ ಗ್ರೀಕ್ ಬರಹಗಳು ರೀಡ್‍ನ ಉತ್ಪಾದನೆ ಮತ್ತು ನುಡಿಸುವ ವಿಧಾನದ ಗಂಭೀರ ಅಧ್ಯಯನವನ್ನು ತೋರಿಸುತ್ತವೆ.[೬] ನುಡಿಸುವ ಕ್ರಮದಲ್ಲಿ ಹೆಚ್ಚು ಅನುಕೂಲತೆಯನ್ನು ಒದಗಿಸುವ, ಬದಿಯ ತೂತುಗಳನ್ನು ತೆರೆಯಲು ಅಥವಾ ಮುಚ್ಚಲು ಸಾಧ್ಯವಿರುವ ಲಕ್ಷಣ ಹೊಂದಿರುವ ತಿಬಿಯ ಹೆಸರಿನ ರೀಡ್ ವಾದ್ಯಗಳನ್ನು ರೋಮನ್ನರು ನುಡಿಸುತ್ತಿದ್ದರು.[೪೦] ಪ್ರದೇಶದಲ್ಲಿ ಸಾಮಾನ್ಯ ಬಳಕೆಯಲ್ಲಿದ್ದ ಇತರ ವಾದ್ಯಗಳೆಂದರೆ, ಪೂರ್ವ ಭಾಗದಲ್ಲಿ ಹುಟ್ಟಿದ ಲಂಬ ತಂತಿ ವಾದ್ಯಗಳು, ಈಜಿಪ್ಟಿಯನ್ ಮಾದರಿಯ ಲುಟ್ಸ್, ವಿವಿಧ ಕೊಳವೆಗಳು ಮತ್ತು ಆರ್ಗನ್ಸ್, ಮತ್ತು ಕ್ಲಾಪರ್ಸ್, ಇದನ್ನು ಮೊದಲು ಮಹಿಳೆಯರು ನುಡಿಸುತ್ತಿದ್ದರು.[೪೧]

ಭಾರತದ ನಾಗರೀಕತೆಗಳಲ್ಲಿ ಸಂಗೀತ ವಾದ್ಯಗಳನ್ನು ಉಪಯೋಗಿಸಿದ ಬಗ್ಗೆ ಪುರಾವೆಗಳ ಅಭಾವವಿದೆ, ಆ ಪ್ರದೇಶದಲ್ಲಿ ಮೊದಲು ನೆಲೆಗೊಂಡ ಮುಂಡ ಮತ್ತು ದ್ರಾವಿಡ ಭಾಷೆ ಮಾತಾಡುವ ಸಂಸ್ಕೃತಿಗಳ ವಿಶ್ವಾಸಾರ್ಹ ಗುಣಗಳಿರುವ ವಾದ್ಯಗಳು ಇದನ್ನು ಅಸಾಧ್ಯಗೊಳಿಸಿತು.

ಇದಕ್ಕಿಂತ ಹೆಚ್ಚಾಗಿ, ಸುಮಾರು ಕ್ರಿಸ್ತಪೂರ್ವ 3000 ರಲ್ಲಿ ಬೆಳಕಿಗೆ ಬಂದ ಹಿಂದೂ ಕಣಿವೆ ನಾಗರೀಕತೆಯ ಜೊತೆ ಈ ಪ್ರದೇಶಗಳಲ್ಲಿ ಸಂಗೀತ ವಾದ್ಯಗಳ ಇತಿಹಾಸ ಪ್ರಾರಂಭವಾಗುತ್ತದೆ. ಶೋಧಿಸಿದ ಕಲಾಕೃತಿಗಳಲ್ಲಿ ಕಂಡುಬಂದ ವಿವಿಧ ರ್ಯಾಟಲ್ಸ್ ಮತ್ತು ಸೀಟಿಗಳು ಮಾತ್ರ ಸಂಗೀತ ವಾದ್ಯಗಳಿಗೆ ಭೌತಿಕ ಸಾಕ್ಷಿಗಳಾಗಿವೆ.[೪೨] ಮಣ್ಣಿನ ಮೂರ್ತಿಗಳು ಡ್ರಮ್‍ಗಳ ಉಪಯೋಗವನ್ನು ಸೂಚಿಸುತ್ತವೆ, ಮತ್ತು ಸುಮೆರಿಯನ್ನರು ಚಿತ್ರಿಸಿದ ವಿನ್ಯಾಸಗಳಿಗೆ ಹೋಲಿಕೆಯಿರುವ ಲಂಬವಾಗಿ ಬಾಗಿದ ತಂತಿ ವಾದ್ಯಗಳ ಚಿತ್ರಣಗಳನ್ನು ಹಿಂದೂ ಕೈಬರಹಗಳ ಪರೀಕ್ಷೆ ತಿಳಿಯಪಡಿಸುತ್ತದೆ. ಹಿಂದೂ ಕಣಿವೆ ಮತ್ತು ಸುಮೆರಿಯನ್ನರ ಸಂಸ್ಕೃತಿಗಳು ಸಾಂಸ್ಕೃತಿಕವಾಗಿ ಸಂಪರ್ಕ ಹೊಂದಿದ್ದರು ಎಂಬುದನ್ನು ಈ ಅನ್ವೇಷಣೆ ಸೂಚಿಸುತ್ತದೆ. ಭಾರತದಲ್ಲಿ ಸಂಗೀತ ವಾದ್ಯಗಳಲ್ಲಿ ಮುಂದಿನ ಅಭಿವೃದ್ಧಿಗಳು ಋಗ್ವೇದ ಅಥವಾ ಧಾರ್ಮಿಕ ಗ್ರಂಥಗಳ ಮೂಲಕ ಆಗುತ್ತದೆ. ಈ ಪದ್ಯಗಳು ವಿವಿಧ ಡ್ರಮ್‍ಗಳು, ಚಿಪ್ಪಿನ ತುತ್ತೂರಿಗಳು, ತಂತಿ ವಾದ್ಯಗಳು, ಮತ್ತು ಕೊಳಲುಗಳನ್ನು ಉಪಯೋಗಿಸುತ್ತಿದ್ದವು.[೪೩] ಹಾವಾಡಿಗರಜೋಡಿ ನಳಿಗೆಯ ಪುಂಗಿ, ಬ್ಯಾಗ್‍ಪೈಪ್ಸ್, ಬ್ಯಾರಲ್ ಡ್ರಮ್‍ಗಳು, ಕ್ರಾಸ್ ಕೊಳಲುಗಳು, ಮತ್ತು ಸಣ್ಣ ಲೂಟ್‍ಗಳು ಇವು ಮುಂಚಿನ ಶತಮಾನಗಳಲ್ಲಿ ಉಪಯೋಗಿಸುತ್ತಿದ್ದ ಇತರ ಮುಖ್ಯ ವಾದ್ಯಗಳಾಗಿತ್ತು. ಮಧ್ಯಕಾಲೀನ ಯುಗದವರೆಗೆ ಭಾರತ ಯಾವುದೇ ವಿಶಿಷ್ಟವಾದ ಸಂಗೀತ ವಾದ್ಯಗಳನ್ನು ಹೊಂದಿರಲಿಲ್ಲ.[೪೪]

 
ಚೈನಾದ ಮರದಿಂದ ಮಾಡಿದ ಮೀನು ಬೌದ್ಧರ ಪಠನದಲ್ಲಿ ಉಪಯೋಗ

ಸುಮಾರು ಕ್ರಿಸ್ತಪೂರ್ವ 1100ರಲ್ಲಿ ಬರೆದ ಚೀನಾದ ಗ್ರಂಥಗಳಲ್ಲಿ ಸಿತಾರಿನಂತಹ ಸಂಗೀತ ವಾದ್ಯಗಳು ಕಾಣಿಸಿಕೊಂಡವು.[೪೫] ಮುಂಚಿನ ಚೀನೀ ತತ್ವಜ್ಞಾನಿಗಳಾದ ಕನ್‍ಫ್ಯುಷಿಯಸ್ (ಕ್ರಿಸ್ತಪೂರ್ವ 551-479), ಮೆನ್‍ಷಿಯಸ್ (ಕ್ರಿಸ್ತಪೂರ್ವ 372-289), ಮತ್ತು ಲೌಝಿಯವರುಗಳು ಚೀನಾದಲ್ಲಿ ಸಂಗೀತ ವಾದ್ಯಗಳ ಅಭಿವೃದ್ಧಿಗೆ ಆಕಾರ ಕೊಟ್ಟರು, ಗ್ರೀಕರ ಹಾಗೆ ಸಂಗೀತದ ಬಗ್ಗೆ ಒಳ್ಳೆಯ ಮನೋಭಾವ ಅಳವಡಿಸಿಕೊಂಡರು. ಸಂಗೀತ ವ್ಯಕ್ತಿಯ ಮತ್ತು ಸಮುದಾಯದ ಒಂದು ಅಗತ್ಯವಾದ ಭಾಗವಾಗಿತ್ತು ಎಂದು ಚೀನಿಯರು ನಂಬಿದ್ದರು, ಮತ್ತು ಸಂಗೀತ ವಾದ್ಯಗಳನ್ನು ತಯಾರಿಸಲು ಬಳಸಿದ ಸಾಮಗ್ರಿಗಳಿಗೆ ಅನುಗುಣವಾಗಿ ಅವುಗಳನ್ನು ವರ್ಗೀಕರಿಸುವ ವಿಶಿಷ್ಟವಾದ ಪದ್ಧತಿಯನ್ನು ಅಭಿವೃದ್ಧಿಗೊಳಿಸಿದರು.[೪೬] ಚೀನಿಯರ ಸಂಗೀತದಲ್ಲಿ ಐಡಿಯೋಫೋನುಗಳು ಅತ್ಯಂತ ಮುಖ್ಯವಾಗಿತ್ತು, ಆದ್ದರಿಂದ ಐಡಿಯೋಫೋನುಗಳು ಮುಂಚಿನ ಹೆಚ್ಚಿನ ಸಂಖ್ಯೆಯ ವಾದ್ಯಗಳಾಗಿತ್ತು. ಶಾಂಗ್ ದ್ನಾಸ್ತಿಯವರ ಪದ್ಯಗಳಲ್ಲಿ ಘಂಟೆಗಳು, ಚೈಮ್ಸ್, ಡ್ರಮ್‍ಗಳು, ಮತ್ತು ಎಲುಬುಗಳಿಂದ ಮಾಡಿದ ಗೋಲಾಕಾರದ ಕೊಳಲುಗಳನ್ನು ನಮೂದಿಸಿದ್ದಾರೆ, ಅನಂತರ ಇದನ್ನು ಪುರಾತತ್ವ ಶಾಸ್ತ್ರಜ್ಞರು ಶೋಧಿಸಿ ಸಂರಕ್ಷಿಸಿದ್ದಾರೆ.[೪೭] ಕ್ಲಾಪರ್ಸ್, ಟ್ರೋಸ್, ಮರದ ಮೀನು ಮತ್ತು ಯು ನಂತಹ ಸಂಘರ್ಷಣ ವಾದ್ಯಗಳನ್ನು ಝೌ ಸಾಮ್ರಾಜ್ಯ ಪರಿಚಯಿಸಿದರು. ಈ ಅವಧಿಯ ಸಮಯದಲ್ಲಿ ಊದುವ ವಾದ್ಯಗಳಾದ ಕೊಳಲು, ಪಾನ್-ಕೊಳವೆಗಳು, ಪಿಚ್-ಕೊಳವೆಗಳು, ಮತ್ತು ಬಾಯಿಯಿಂದ ನುಡಿಸುವ ವಾದ್ಯಗಳು ಸಹ ಕಾಣಿಸಿಕೊಂಡವು.[೪೮] ಚಿಕ್ಕ ಲೂಟ್, ಬಹಳ ಸಂಸ್ಕೃತಿಗಳ ಮೂಲಕ ಹರಡಿದ ಸೀಬೇಕಾಯಿ ಆಕಾರದ ಪಾಶ್ಚಿಮಾತ್ಯ ರೂಪದ ವಾದ್ಯ ಹ್ಯಾನ್ ದ್ನಾಸ್ತಿಯ ಕಾಲದಲ್ಲಿ ಚೀನಾದಲ್ಲಿ ಬಳಕೆಗೆ ಬಂತು.[೪೯]

ಹನ್ನೊಂದನೇ ಶತಮಾನ ವೇಳೆಗೆ ಮಧ್ಯ ಅಮೇರಿಕ ನಾಗರೀಕತೆಗಳು ಕೃತಕತೆಯ ಮೇಲಿನ ಹಂತವನ್ನು ಪಡೆದವು, ಅವು ಸಂಗೀತ ವಾದ್ಯಗಳ ಅಭಿವೃದ್ಧಿಯಲ್ಲಿ ಉಳಿದ ನಾಗರೀಕತೆಗಳಿಗಿಂತ ಹಿಂದುಳಿದವು. ಉದಾಹರಣೆಗೆ, ಅವರು ಯಾವುದೇ ತಂತಿ ವಾದ್ಯಗಳನ್ನು ಹೊಂದಿರಲಿಲ್ಲ; ಅವರ ಎಲ್ಲಾ ವಾದ್ಯಗಳು ಐಡಿಯೋಫೋನುಗಳು, ಡ್ರಮ್‍ಗಳು, ಮತ್ತು ಕೊಳಲುಗಳು ಮತ್ತು ತುತ್ತೂರಿಗಳಂತಹ ಊದುವ ವಾದ್ಯಗಳಾಗಿತ್ತು. ಇವುಗಳಲ್ಲಿ, ಕೊಳಲು ಮಾತ್ರ ಮಾಧುರ್ಯವನ್ನು ಹೊರಹೊಮ್ಮಿಸಲು ಸಮರ್ಥವಾಗಿತ್ತು.[೫೦] ಆಧುನಿಕ ಕಾಲದ ಪೆರು, ಕೊಲಂಬಿಯ, ಎಕೌದರ್, ಬೊಲ್ವಿಯ, ಮತ್ತು ಚಿಲಿಯಂತಹ ಪ್ರದೇಶಗಳಲ್ಲಿ ಮೊದಲ-ಕೊಲಂಬಿಯ ದಕ್ಷಿಣ ಅಮೆರಿಕಾದ ನಾಗರೀಕತೆಗಳು ಸಾಂಸ್ಕೃತಿಕವಾಗಿ ಹಿಂದುಳಿದಿದ್ದರೂ, ಸಂಗೀತ ಕ್ಷೇತ್ರದಲ್ಲಿ ಬಹಳ ಮುಂದುವರೆದಿದ್ದವು. ದಕ್ಷಿಣ ಅಮೇರಿಕದ ಸಂಸ್ಕೃತಿಗಳ ಸಮಯದಲ್ಲಿ ಪಾನ್-ಕೊಳವೆಗಳು, ವಿವಿಧ ರೀತಿಯ ಕೊಳಲುಗಳು, ಐಡಿಯೋಫೋನುಗಳು, ಡ್ರಮ್‍ಗಳು, ಮತ್ತು ಚಿಪ್ಪು ಮತ್ತು ಮರದ ತುತ್ತೂರಿಗಳನ್ನು ಉಪಯೋಗಿಸಲಾಗಿತ್ತು.[೫೧]

ಮಧ್ಯಕಾಲೀನ ಯುಗ ಬದಲಾಯಿಸಿ

ಸರಳವಾಗಿ ಮಧ್ಯಕಾಲೀನ ಯುಗದಲ್ಲಿ, ಚೀನಾ ವಿದೇಶಗಳ ಮೇಲೆ ವಿಜಯ ಸಾಧಿಸಿ ಅಥವಾ ವಿದೇಶೀಯರಿಂದ ಆಕ್ರಮಣಕ್ಕೊಳಗಾಗಿ ಸಂಗೀತದ ಪ್ರಭಾವ ಸಂಯೋಜನೆಯ ಸಂಪ್ರದಾಯ ಬೆಳೆಸಿತು. ಈ ಪ್ರಕಾರವಾದ ಪ್ರಭಾವಗೊಳಿಸುವಿಕೆಯ ಮೊದಲ ದಾಖಲೆ ಇರುವುದು ಕ್ರಿ.ಶ 384ರಲ್ಲಿ ,ಚೀನಾ ಟರ್ಕೆಸ್ತಾನವನ್ನು ವಶಪಡಿಸಿಕೊಂಡ ನಂತರ ಇಂಪೀರಿಯಲ್ ಕೋರ್ಟ್‌ನಲ್ಲಿ ಈಸ್ಟ್ ಟರ್ಕೇಸ್ತಾನಿಕ್ ಆರ್ಕೇಸ್ಟ್ರಾ ಸ್ಥಾಪಿಸಿತು. ಭಾರತದ ಪ್ರಭಾವದಿಂದ, ಮಂಗೊಲಿಯಾ, ಮತ್ತು ಇತರ ದೇಶಗಳು ಅನುಕರಿಸಿದವು. ವಾಸ್ತವವಾಗಿ, ಆ ಕಾಲದಲ್ಲಿ ಆ ದೇಶಗಳ ಹೆಚ್ಚಿನ ಸಂಗೀತ ವಾದ್ಯಗಳು ಚೀನಾದ ಸಾಂಪ್ರದಾಯ ವೈಶಿಷ್ಟ್ಯ ಹೊಂದಿದೆ .[೫೨] ಸಿಂಬಾಲ್ಸ್, ಕಂಸಾಳೆಗಳು, ಜೊತೆಗೆ ಹೆಚ್ಚಿಗೆ ಅಭಿವೃದ್ದಿ ಹೊಂದಿದ ತುತ್ತೂರಿ,ಕ್ಲಾರಿನೇಟ್ಸ್, ಒಬೊಯ್ಸ್, ಕೊಳಲು, ಡ್ರಮ್ಸ್,ಮತ್ತು ಲೂಟ್ಸ್ ಪ್ರಸಿದ್ಧಿ ಪಡೆದವು.[೫೩][೫೪] ಮಂಗೊಲಿಯನ್ ಸಂಸ್ಕೃತಿಯಿಂದ ಪ್ರಭಾವಿತಗೊಂಡು ಪ್ರಥಮವಾಗಿ ಬಾಗಿದ zithers ಒಂಭತ್ತು ಮತ್ತು ಹತ್ತನೇಯ ಶತಮಾನದಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿತು.[೫೪]

ಮಧ್ಯಯುಗದಲ್ಲಿ ಭಾರತ ಚೀನಾದ ಬೆಳವಣಿಗೆಯ ಜೊತೆಗೆ ಸಮಾನವಾಗಿ ಜ್ಞಾನ ಪಡೆಯಿತು; ಆದಾಗ್ಯೂ, ಬೇರೆ ಬೇರೆ ವಿನ್ಯಾಸದ ತಂತಿ ವಾದ್ಯಗಳು ಬೆಳವಣಿಗೆ ಹೊಂದಿದವು . ಚೀನಾದ ತಂತಿ ವಾದ್ಯಗಳು ನಿಖರವಾದ ಸ್ವರ ಉತ್ಪಾದನೆಗೆಗೋಸ್ಕರ ಘಂಟಾನಾದಕ್ಕೆ ಸಮನಾದ ಸ್ವರ ಹೊಂದಿವೆ,ಇವನ್ನು ಪರಿಗಣಿಸಿದರೆ ಭಾರತದ ತಂತಿ ವಾದ್ಯಗಳು ಹೆಚ್ಚಿನ ಹೊಂದಿಕೊಳ್ಳುವ ಗುಣ ಹೊಂದಿವೆ. ಈ ಹೊಂದಿಕೊಳ್ಳುವ ಗುಣ ಹಿಂದೂ ಸಂಗೀತದ ಜಾರುವಿಕೆ ಮತ್ತು ಟ್ರೆಮೊಲಸ್‌ಗೆ ಒಗ್ಗಿಕೊಳ್ಳುತ್ತದೆ. ಆ ಕಾಲದ ಭಾರತೀಯ ಸಂಗೀತದಲ್ಲಿ ರಿದಂ ಪ್ರಮುಖವಾದುದು, ಮಧ್ಯಕಾಲೀನ ಯುಗದಲ್ಲಿನ ಡ್ರಮ್ಸ್‌ಗಳ ಪುನರಾವರ್ತಿತ ಚಿತ್ರಣ ಇದಕ್ಕೆ ಸಾಕ್ಷಿಯಾಗಿದೆ. ಲಯಬದ್ಧತೆ ಭಾರತೀಯ ಸಂಗೀತದ ಪ್ರಮುಖವಾದ ಅಂಶವಾಗಿದ್ದು. ಸಂಗೀತ ಪ್ರಪಂಚಕ್ಕೆ ಲಯ ಭಾರತೀಯರ ಕೊಡುಗೆ.[೫೫] ಇತಿಹಾಸಕಾರರು ಮಧ್ಯಯುಗದಲ್ಲಿ ಭಾರತ ಮತ್ತು ಇಸ್ಲಾಂ ಪೂರ್ವ ಮತ್ತು ಇಸ್ಲಾಂನ ನಡುವಿನ ಅವಧಿಯ ಸಂಗೀತ ವಾದ್ಯಗಳ ಬೇರೆ ಬೇರೆ ಪ್ರಭಾವಗಳನ್ನು ,ಬೆಳವಣಿಗೆಯನ್ನು ಪ್ರತಿ ಅವಧಿಯಲ್ಲೂ ವಿಭಾಗಿಸುತ್ತಾರೆ.[೫೬] ಇಸ್ಲಾಂ -ಪೂರ್ವ ಅವಧಿಯಲ್ಲಿ, ಕೈ ಘಂಟೆಯಂತಹ ಇಡಿಯೊಫೋನ್ಸ್, ಸಿಂಬಾಲ್ಸ್,ಮತ್ತು ಕಂಸಾಳೆಯನ್ನು ಹೋಲುವಂತಹ ವಿಶಿಷ್ಟವಾದ ವಾದ್ಯಗಳು ಹಿಂದೂ ಸಂಗೀತದಲ್ಲಿ ಹೆಚ್ಚಿಗೆ ಉಪಯೋಗಿಸಲ್ಪಟ್ಟವು. ಕಂಸಾಳೆಯಂತಹ ವಾದ್ಯ ಕಂಚಿನ ಪದಕವಾಗಿದ್ದು ಮರದ ಸುತ್ತಿಗೆ ಬದಲಿಗೆ ಸುತ್ತಿಗೆಯಿಂದ ಬಡಿಯಲಾಸುತ್ತಿತ್ತು. ತುಬುಲಾರ್ ಡ್ರಮ್‌ಗಳು, ವೀಣೆ ಹೆಸರಿನ ಕಡ್ದಿ zither, ಚಿಕ್ಕದಾದ ಪಿಟೀಲು ವಾದ್ಯ, ಇಮ್ಮಡಿ ಮತ್ತು ಮುಮ್ಮಡಿ ಕೊಳಲು,ಸುರುಲಿಯಾಕಾರದ ತುತ್ತೂರಿ,ಮತ್ತು ಭಾರತದ ವಕ್ರವಾದ ಕೊಂಬು ಈ ಅವಧಿಯಲ್ಲಿ ಕಾಣಿಸಿಕೊಂಡಿತ್ತು.[೫೭] ಇಸ್ಲಾಂನ ಪ್ರಭಾವ ಹೊಸ ತರಹದ 124 ಡ್ರಮ್ಸ್‌ಗಳನ್ನು ಪರಿಚಯಿಸಿತು, ಸಂಪೂರ್ಣ ವೃತ್ತಾಕಾರದ ಅಥವಾ ಅಷ್ಟಾಕೃತಿಯ ರೀತಿಯ ಡ್ರಮ್‌ಗಳನ್ನು ಇಸ್ಲಾಮಿಕ್‌ ಪೂರ್ವ ಸಂದರ್ಭದ ಕ್ರಮವಲ್ಲದ ಡ್ರಮ್‌ಗಳಿಗೆ ಬದಲಾಗಿ ಪರಿಚಯಿಸಲಾಯ್ತು.[೫೮] ಪರ್ಶಿಯನ್ ಪ್ರಭಾವದಿಂದ ಸಿತಾರ್ ಮತ್ತು ಒಬೊಸ್ ಪರಿಚಯಿಸಲ್ಪಟ್ಟಿತು, ಪರ್ಶಿಯನ್ ಸಿತಾರ್ ಮೂರು ತಂತಿ ಹೊಂದಿತ್ತು,ಮತ್ತು ಭಾರತೀಯರು ರೂಪಾಂತರಗೊಳಿಸಿ ನಾಲ್ಕು ಅಥವಾ ಏಳು ತಂತಿಯ ಸಿತಾರ್ ತಯಾರಿಸಿದರು.[೫೯]

 
ಇಂಡೋನೆಷಿಯಾದ ಮೆಟಾಲ್ಲೊಫೋನ್

ಆಗ್ನೇಯ ಏಷ್ಯಾ ಹೊಸ ಕಲ್ಪನೆಯ ಸರಣಿ ಸಂಗೀತ ವಾದ್ಯಗಳಿಗೆ ಉತ್ತರದಾಯಿಯಾಗಿದೆ, ಒಂದು ನಿರ್ದಿಷ್ಟವಾದ ಅವಧಿಯಲ್ಲಿ ಸರಿಸುಮಾರು ಕ್ರಿ.ಶ 920 ರಷ್ಟರಲ್ಲಿ ಭಾರತೀಯ ಪ್ರಭಾವ ಕೊನೆಗೊಂಡಿತು.[೬೦] ಮೊದಲಿನ ಕಂಚಿನ ರೂಪದಲ್ಲಿ ಬಾಲಿನೀಸ್ ಮತ್ತು ಜವಾನೀಸ್ ಸಂಗೀತ ಕ್ಸಿಲೊಫೋನ್ಸ್ ಮತ್ತು ಮೆಟಾಲ್ಲೊಫೋನ್ಸ್‌ಗಳಲ್ಲಿ ಗಮನ ಸೆಳೆಯಿತು.[೬೧] ಆಗ್ನೇಯ ಏಷ್ಯಾದ ಒಂದು ಪ್ರಮುಖ ಮತ್ತು ಪ್ರಸಿದ್ಧ ಸಂಗೀತ ವಾದ್ಯ ಕಂಸಾಳೆ. ಕಂಸಾಳೆಯು ಟಿಬೇಟ್ ಮತ್ತು ಬರ್ಮಾ ದೇಶಗಳ ಭೂಪ್ರದೇಶಗಳ ಮಧ್ಯೆ ಆರಂಭವಾಯಿತು, ಇದು ಆಗ್ನೇಯ ಏಷ್ಯಾದ ಜಾವಾ ಮತ್ತು ಮಾಲ್ಡೀವ್ಸ್ ದ್ವೀಪಸಮೂಹಗಳಲ್ಲಿ ಪ್ರತಿಯೊಂದು ವರ್ಗದ ಮಾನವನ ಚಟುವಟಿಕೆಯ ಭಾಗವಾಗಿತ್ತು.[೬೨]

ಏಳನೇಯ ಶತಮಾನದಲ್ಲಿ ಮೆಸಪೋಟಮಿಯಾ ಮತ್ತು ಅರೇಬಿಯನ್ ಪೆನಿನ್ಸುಲಾ ಪ್ರದೇಶದಲ್ಲಿ ತೀವ್ರವಾದ ಬೆಳವನಣಿಗೆಯ ಅನುಭವ ಪಡೆಯಿತು, ಮತ್ತು ಸಂಗೀತ ವಾದ್ಯಗಳ ಹಂಚಿಕೆಯು ಒಮ್ಮೆ [೬೩]ಇಸ್ಲಾಂ ಸಂಸ್ಕೃತಿಯಿಂದ ಒಂದಾಯಿತು. ಫ್ರೇಮ್ ಡ್ರಮ್ಸ್ ಮತ್ತು ಸಿಲಿಂಡರಾಕೃತಿಯ ಡ್ರಮ್ಸ್‌ಗಳು ಎಲ್ಲ ಪ್ರಕಾರದ ಸಂಗೀತದಲ್ಲಿ ವಿವಿಧ ರೀತಿಯಲ್ಲಿ ಅಗಾಧವಾದ ಪ್ರಾಮುಖ್ಯತೆ ಹೊಂದಿವೆ.[೬೪] ಶಹನಾಯಿಯನ್ನು ಮದುವೆ ಮತ್ತು ಮುಸ್ಲಿಂ ಸಂಪ್ರದಾಯದ ಸುನ್ನಿ ಮಾಡುವ ಆಚರಣೆಗಳ ಸಂದರ್ಭದ ಸಂಗೀತದಲ್ಲಿ ಬಳಸಲಾಗುತ್ತಿತ್ತು. ಮೆಸಪೊಟೆಮಿಯಾದಲ್ಲಿನ ಕೆಟ್ಲ್ ಡ್ರಮ್ಸ್‌ನ ಬೆಳವಣಿಯು ದೂರದ ಜಾವಾದವರೆಗೂ ಹರಡಿದ್ದರ ಬಗ್ಗೆ ಪರ್ಶಿಯನ್ ಚಿತ್ರಕಲೆಗಳು ಮಾಹಿತಿ ಒದಗಿಸುತ್ತವೆ.[೬೫] ವಿವಿಧ ಲೂಟ್ಸ್, ಜೀದರ್ಸ್‌, ಡ್ಯುಕ್ಲೇಮರ್ ಮತ್ತು ತಂತಿವಾದ್ಯ ದಕ್ಷಿಣದ ಮೂಲಕ ಮಡಗಾಸ್ಕರ್‌ಗೆ ಮತ್ತು ಆಧುನಿಕ-ದಿನಗಳಲ್ಲಿ ಪೂರ್ವದ ಮೂಲಕ ಸುಲವೆಸಿಗೆ ಹರಡಿತು.[೬೬]

ಗ್ರೀಕ್ ಮತ್ತು ರೋಮ್‌ನ ಪ್ರಭಾವವಿದ್ದರೂ ಹೆಚ್ಚಿನ ಸಂಗೀತ ವಾದ್ಯಗಳು ಮಧ್ಯಯುಗದಲ್ಲಿ ಏಷ್ಯಾದಿಂದ ಯುರೋಪಿಗೆ ಬಂದಿತು, ಈ ಅವಧಿಯವರೆಗೂ ಲೈರ್ ಎನ್ನುವ ಒಂದೇ ಒಂದು ವಾದ್ಯ ಯುರೋಪಿನಲ್ಲಿ ಕಂಡುಹಿಡಿಯಲ್ಪಟ್ಟಿತ್ತು.[೬೭] ಮಧ್ಯಯುಗದ ಯುರೋಪಿನಲ್ಲಿ ತಂತಿವಾದ್ಯಗಳು ಪ್ರಮುಖವಾಗಿತ್ತು. ಮಧ್ಯ ಮತ್ತು ಉತ್ತರದ ಪ್ರಾಂತ್ಯಗಳು ಮುಖ್ಯವಾಗಿ ಲೈರೆ ವಾದ್ಯ ಬಳಸುತ್ತಿದ್ದರು, ದಕ್ಷಿಣದ ಪ್ರಾಂತ್ಯಗಳು ಕುತ್ತಿಗೆಯ ಜೊತೆಗೆ ತಂತಿವಾದ್ಯವಾದ ಲೂಟ್ಸ್ ಉಪಯೋಗಿಸಿದರು, ಎರಡು-ಬಾಹುವಿನ ದೇಹ ಮತ್ತು ಅಡ್ಡಪಟ್ಟಿ ಹೊಂದಿರುವುದು ಇದರ ಲಕ್ಷಣವಾಗಿದೆ.[೬೭] ವಿವಿಧ ತಂತಿ ವಾದ್ಯಗಳು ಯುರೋಪಿನ ಮಧ್ಯ ಮತ್ತು ಉತ್ತರ ಭಾಗ ದೂರದ ಉತ್ತರ ಐರ್ಲಾಂಡ್‌ನಲ್ಲಿ ಸೇವೆ ಸಲ್ಲಿಸಿದವು, ಅಂತಿಮವಾಗಿ ತಂತಿವಾದ್ಯಗಳು ರಾಷ್ಟ್ರೀಯ ಚಿನ್ಹೆಯಾಗಿ ಗುರುತಿಸಲ್ಪಟ್ಟಿತು.[೬೮] ಲೈರೆ ಇದೇ ಪ್ರಾಂತ್ಯಗಳ ಮೂಲಕ ದೂರದ ಪೂರ್ವದ ಎಸ್ತೋನೆಷಿಯಾದವರೆಗೂ ಹಬ್ಬಿತ್ತು.[೬೯] 800 ಮತ್ತು 1100 ಶತಮಾನಗಳ ಮಧ್ಯದ ಯುರೋಪಿನ ಸಂಗೀತ ಹೆಚ್ಚು ಸೂಕ್ಷ್ಮವಾಗಿತ್ತು. ಇತ್ತೀಚೆಗಿನ ಕೆಲವು ಉಪಕರಣಗಳು ಬಹುಸಂಗೀತ ಹೊರಡಿಸುವ ಉಪಕರಣಗಳಾಗಿದ್ದಾವೆ. 9ನೇಯ ಶತಮಾನದ (ಇಬ್ನ್ ಕೊರ್ದಾಬೆ)ಪರ್ಶಿಯನ್ ಭೂಗೋಳಶಾಸ್ತ್ರಜ್ಞರು ಬೈಜಾಂಟಿನ್ ಸಾಮ್ರಾಜ್ಯದ ವಿಶಿಷ್ಟ ವಾದ್ಯಗಳಾದ ಉರ್ಗಮ್ (ಆರ್ಗನ್),ಶಿಲ್ಯಾನಿ (ಬಹುಶಃ ಒಂದು ವಿಧದ ತಂತಿವಾದ್ಯ ಅಥವಾ ಲೈರೆ),ಸಲಜ್ಡ್ಜ್ (ಬಹುಶಃ ಬ್ಯಾಗ್‌ಪೈಪ್) ಮತ್ತು ಬೈಜಾಂಟಿನ್ ಲೈರಾ(ಗ್ರೀಕ್: λύρα ~ lūrā) ನ್ನೊಳಗೊಂಡಂತೆ ಅವರ ಸಂಗೀತ ವಾದ್ಯಗಳ ನಿಘಂಟು ರಚನೆಯ ಚರ್ಚೆಯಲ್ಲಿ ಉಲ್ಲೇಖಿಸಿದ್ದಾರೆ. ಲೈರಾ ಮಧ್ಯಕಾಲೀನ ಪೇರಲೆ ಹಣ್ಣಿನ ಆಕಾರಬಾಗಿದ ತಂತಿ ವಾದ್ಯವಾಗಿದ್ದು ಜೊತೆಗೆ ಮೂರು ಅಥವಾ ಐದು ತಂತಿ ಹೊಂದಿದೆ, ನೇರವಾಗಿ ಹಿಡಿದಿದ್ದು ಮತ್ತು ವಯೋಲಿನ್ ಒಳಗೊಂಡಂತೆ ಹೆಚ್ಚಿನ ಯುರೋಪಿನ ಬಾಗಿದ ವಾದ್ಯಗಳ ಪೂರ್ವಜ ಇದಾಗಿದೆ.[೭೦] ಏಕಧ್ವನಿಕ ತಂತಿವಾದ್ಯವು ಸಂಗೀತದ ಸ್ವರ ಮಾನದಂಡದ ನಿಖರವಾದ ಅಳತೆಯಾಗಿದ್ದು,ಹೆಚ್ಚು ನಿಖರವಾದ ಸಂಗೀತದ ವ್ಯವಸ್ಥೆಗೆ ಅನುವುಮಾಡಿಕೊಡುತ್ತದೆ.[೭೧] ಪಿಟೀಲು ವಾದ್ಯಕ್ಕಿಂತ ಸಂಕೀರ್ಣವಾದ ವಾದ್ಯದಳನ್ನು ಒಬ್ಬನೇ ಸಂಗೀತಜ್ಞ ನುಡಿಸುವುದಕ್ಕೆ ಯಾಂತ್ರಿಕ ಹರ್ಡಿ-ಗರ್ಡೀ ವಾದ್ಯಗಳು ಅನುವು ಮಾಡಿಕೊಟ್ಟವು,ಇವೆರಡು ಮಧ್ಯಯುಗದ ಜಾನಪದ ಸಂಗೀತ ವಾದ್ಯಗಳಲ್ಲಿ ಪ್ರಮುಖವಾದವು.[೭೨][೭೩] ಉತ್ತರ ಮತ್ತು ಮಧ್ಯ ಯುರೋಪಿಯನ್ನರಂತೆ ಹಿಮ್ಮುಖವಾದ ಬೆಣೆ ಹೊಂದಿದ ಲೂಟ್ಸ್‌ಗಳನ್ನಲ್ಲದೇ, ದಕ್ಷಿಣ ಯುರೋಪಿಯನ್ನರು ಚಿಕ್ಕ ಮತ್ತು ಉದ್ದವಾದ ಬದಿಯಲ್ಲಿ ಹರಡಲ್ಪಟ್ಟ ಬೆಣೆ ಹೊಂದಿದ ಲೂಟ್ಸ್ ನೆಡಿಸುತ್ತಿದ್ದರು.[೭೪] ಘಂಟೆಯಂತಹ ಇಡಿಯೊಫೋನ್ಸ್ ಮತ್ತು ತಾಳಗಳಂತಹ ಸಂಗೀತ ಸಾಧನಗಳನ್ನು ಕುಷ್ಠರೋಗಿಗಳು ಬರುತ್ತಿರುವುದನ್ನು ತಿಳಿಸಲು ಬಳಸಲಾಗುತ್ತಿತ್ತು.[೭೫] ಒಂಭತ್ತನೇಯ ಶತಮಾನ ಮೊದಲ ಬ್ಯಾಗ್‌ಪೈಪ್ ಬಹಿರಂಗ ಪಡಿಸಿತು,ಇದು ಯುರೋಪಿನ ತುಂಬಾ ಹರಡಿತು ಮತ್ತು ಜಾನಪದ ವಾದ್ಯಗಳಿಂದ ಮಿಲಿಟಲಿ ವಾದ್ಯಗಳಲ್ಲಿ ಬಹಳ ಬಳಕೆಯಾಯಿತು.[೭೬] ಐದನೇಯ ಶತಮಾನದಲ್ಲಿ ಸ್ಪೇನ್‌ನಲ್ಲಿ ವಾಯು ಚಾಲಿತ ಆರ್ಗನ್‌ ರಚನೆ ಶುರುವಾಯಿತು,ಏಳು ನೂರರ ಸುಮಾರಿಗೆ ಇಂಗ್ಲೇಂಡಿಗೆ ವ್ಯಾಪಿಸಿತು.[೭೭] ಪರಿಣಾಮವಾಗಿ ವೈವಿಧ್ಯವಾದ ಅಳತೆಯ ಮತ್ತು ಉಪಯ್ಯೋಗದ ವಾದ್ಯಗಳು ಬಳಕೆಗೆ ಬಂದವು. ಕುತ್ತಿಗೆಯ ಸುತ್ತ ಹಾಕಿಕೊಳ್ಳುವಂತಹ ದೊಡ್ಡ ಪೈಪ್ ರೀತಿಯ ಸಾಧನಗಳೂ ಕೂಡ ಇದೇ ಸಮಯದಲ್ಲಿ ಬಳಕೆಗೆ ಬಂದವು.[೭೮] ಸಾಹಿತ್ಯಿಕವಾಗಿ ಆರ್ಗನ್ ಹತ್ತನೇಯ ಶತಮಾನದ ಕೊನೆಗೆ ಚರ್ಚಿನ ಸಂಪರ್ಕಕ್ಕೆ ಬಂದು ಇಂಗ್ಲೇಂಡಿನಲ್ಲಿ ಬೆನೆಡಿಕ್ಟೆನ್ ಅಬೆಯ್‌ನಲ್ಲಿ ನುಡಿಸಲ್ಪಟ್ಟಿದ್ದರ ಉಲ್ಲೇಖವಿದೆ.[೭೯] ಮಧ್ಯಕಾಲೀನ ಯುಗದಲ್ಲಿ ಒಬೊ ನುಡಿಸುವ ಕಲಾವಿದರು ಕಡಿಮೆ ಇದ್ದರು, ಈ ಅವಧಿಯಲ್ಲಿ ಕ್ಲಾರಿನೇಟ್ ಅಸ್ತಿತ್ವದಲ್ಲಿದ್ದುದರ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ.[೮೦]

ಆಧುನಿಕತೆ ಇತಿಹಾಸ ಬದಲಾಯಿಸಿ

ನವೋದಯ ಬದಲಾಯಿಸಿ

1400ರಿಂದ ಪಾಶ್ಚಿಮಾತ್ಯ ದೇಶಗಳು ಸಂಗೀತ ವಾದ್ಯಗಳ ಬೆಳವಣಿಗೆಯ ಮೇಲೆ ನಿಜವಾದ ಪ್ರಭಾವ ಬೀರಿವೆ, ನವೋದಯ ಅವಧಿಯಲ್ಲಿ ಅಗಾಧವಾದ ಬದಲಾವಣೆ ಕಂಡುಬಂದಿತು. ವಾದ್ಯಗಳು ಹಾಡುವಿಕೆ ಅಥವಾ ನೃತ್ಯದ ಜೊತೆಗಿಂತ ಇತರ ಉದ್ದೇಶಗಳಿಗೆ,ಮತ್ತು ಅಭಿನಯಗಾರರು ಏಕ ವಾದ್ಯವಾಗಿಯೂ ಅವುಗಳನ್ನು ಉಪಯೋಗಿಸಿದರು. ಕೀಬೋರ್ಡ್ ಮತ್ತು ಲೂಟ್ಸ್‌ಗಳು ಬಹುವಿದದ ಸಂಗೀತ ಹೊರಡಿಸುವ ವಾದ್ಯಗಳಾಗಿ ಬೆಳವಣಿಗೆ ಹೊಂದಿದವು ಮತ್ತು ಸಂಯೋಜಕರು ಹೆಚ್ಚಿನದಾಗಿ ಸಂಕೀರ್ಣವಾದ ಉಪಕರಣಗಳನ್ನು ಬೆಳೆಸಿದರು. ಸಂಯೋಜಕರು ನಿರ್ದಿಷ್ಟವಾದ ಸಂಗೀತವಾದ್ಯಕ್ಕೆ ಸಂಗೀತದ ತುಣುಕುಗಳನ್ನು ರಚಿಸುವುದಕ್ಕೆ ಶುರುಮಾಡಿದರು .[೧೫] ಹದಿನಾರನೇಯ ಶತಮಾನದ ಅರ್ಧದ ನಂತರ, ವಿವಿಧ ಸಂಗೀತ ವಾದ್ಯಗಳಿಗೆ ಬರೆದು ಸಂಯೋಜಿಸುವ ವಿಧಾನ ಸಾಮಾನ್ಯವಾಗಿ ಆಚರಣೆಗೆ ಬಂದಿತು. ಈಗ ಸಂಯೋಜಕರ ನಿರ್ದಿಷ್ಟವಾದ ರಚನೆಯನ್ನು ವಯಕ್ತಿಕ ಅಭಿನಯಗಾರರು ತಮ್ಮ ಸ್ವಂತ ವಿವೇಚನೆಗೆ ಅನ್ವಯಿಸಿಕೊಂಡರು.[೮೧] ಬಹುಸ್ವರ ಶೈಲಿಯು ಪ್ರಸಿದ್ಧ ಸಂಗೀತವಾಗಿ ಪ್ರಭಾವ ಬೀರಿತು,ಮತ್ತು ವಾದ್ಯ ತಯಾರಕರು ಇದಕ್ಕೆ ಪ್ರತಿಸ್ಪಂದಿಸಿದರು.[೮೨]

1400ರ ಸುಮಾರಿಗೆ,ಸಂಗೀತ ವಾದ್ಯಗಳ ಬೆಳವಣಿಗೆಗೆ ಕ್ರಿಯಾಶೀಲವಾದ ನಾದದ ಶ್ರದ್ಧಾಪೂರ್ವಕ ಸಂಯೋಜನೆಗೆ ಹೆಚ್ಚಿನ ಒಲವು ಕಂಡುಬಂದಿತು. ಜನರು ಕೂಡ ಸೃಷ್ಟಿಸುವಿಕೆ, ನುಡಿಸುವಿಕೆ, ಮತ್ತು ಸಂಗೀತ ವಾದ್ಯಗಳ ಪೂರ್ಣಪಟ್ಟಿ ಕುರಿತು ಪುಸ್ತಕ ಬರೆಯಲು ಶುರುಮಾಡಿದರು; ಇವುಗಳಲ್ಲಿ ಮೊದಲ ಪುಸ್ತಕ ಸೆಬಾಸ್ಟಿಯನ್ ವೈರ್ದುಂಗ್ ರ 1511ರ ಶಾಸ್ತ್ರಗ್ರಂಥ Musica getuscht und angezogen (ಇಂಗ್ಲೀಷ್‌ನಲ್ಲಿ: ಮ್ಯೂಜಿಕ್ ಜರ್ಮನೈಸ್ಡ್ ಆ‍ಯ್‍೦ಡ್ ಆ‍ಯ್‌ಬ್‌ಸ್ಟ್ರಾಕ್ಟೆಡ್ ).[೮೧] ವೈರ್ದುಂಗ್‌ರ ಕೃತಿಯು ಹಂಟರ್ಸ್ ಹಾರ್ನ್,ಮತ್ತು ಆಕಳ ಘಂಟೆ ಒಳಗೊಂಡಂತೆ "ಅಸಹಜವಾದ" ವಾದ್ಯಗಳ ಸಂಪೂರ್ಣವಾದ ವಿವರಣೆ ಹೊಂದಿದ್ದು, ವೈರ್ದುಂಗ್ ಇವುಗಳನ್ನು ವಿಮರ್ಶಿಸಿದ್ದಾರೆ. ಆರ್ನಾಲ್ಟ್ ಸ್ಲಿಕ್‌ರ Spiegel der Orgelmacher und Organisten (ಇಂಗ್ಲೀಷ್‌ನಲ್ಲಿ : ಮಿರರ್ ಆಫ್ ಆರ್ಗನ್ ಮೇಕರ್ಸ್ ಆ‍ಯ್‌೦ಡ್ ಆರ್ಗನ್ ಪ್ಲೇಯರ್ಸ್ )ಒಳಗೊಂಡಂತೆ ಅದೇ ವರ್ಷ ಇತರ ಪುಸ್ತಕಗಳು ಅನುಕರಿಸಿದವು,ಈ ಶಾಸ್ತ್ರಗ್ರಂಥವು ಆರ್ಗನ ರಚನೆ ಮತ್ತು ನುಡಿಸುವುದರ ಮೇಲಿದೆ.[೮೩] ಭೋದನೆಯ ಮತ್ತು ಆಕರ ಗ್ರಂಥಗಳು ನವೋದಯ ಯುಗದಲ್ಲಿ ಪ್ರಕಟವಾದವು, ಎಲ್ಲಾ ವಾಯು ಮತ್ತು ತಂತಿವಾದ್ಯಗಳ ಅಳತೆಯ ಆಧಾರ ಒಳಗೊಂಡಂತೆ ವಿವರವಾದ ನಿರೂಪಣೆ ಮತ್ತು ವರ್ಣನೆ ಹೊಂದಿದೆ. ಮಿಶೆಲ್ ಪ್ರಿಟೊರಿಯಸ್‌ರ ಸಿಂಟಗ್ಮಾ ಮ್ಯೂಜಿಕಮ್ ಈ ಪುಸ್ತಕವು, ಹದಿನಾರನೇಯ ಶತಮಾನದ ಸಂಗೀತ ವಾದ್ಯಗಳ ಮೇಲಿನ ವಿಶ್ವಾಸಾರ್ಹ ಉಲ್ಲೇಖವೆಂದು ಪರಿಗಣಿಸಲ್ಪಟ್ಟಿದೆ.[೮೪]

ಹದಿನಾರನೇಯ ಶತಮಾನದಲ್ಲಿ ವಾದ್ಯ ಮಾಡುವವರು ವಯೋಲಿನ್‌ನಂತಹ "ಸಂಪ್ರದಾಯ ಬದ್ಧ ಆಕಾರ"ದ ಹೆಚ್ಚು ವಾದ್ಯಗಳನ್ನು ತಯಾರಿಸಿದರು, ಇದು ಇಂದಿಗೂ ಉಳಿದುಕೊಂಡಿದೆ. ಸಂಗೀತ ಕೇಳುಗರ ಸೌಂಧರ್ಯ ಪ್ರಜ್ಞೆಯನ್ನು ಅನುಸರಿಸಿ ಸಂಗೀತ ಸಾಧನಗಳ ಸ್ವರ ಹೊರಡಿಸುವ ಹಿನ್ನೆಲೆಯ ಜೊತೆಗೆ ಭೌತಿಕ ಆಕಾರದ ಮೇಲೂ ಕೂಡ ಗಮನ ಹರಿಸಲಾಯಿತು. ಅದಕ್ಕಾಗಿ, ತಯಾರಕರು ಸಾಮಗ್ರಿಗಳು ಮತ್ತು ಕಾರ್ಯನೈಪುಣ್ಯತೆಯ ಮೇಲೆ ವಿಶೇಷವಾದ ಗಮನ ಹರಿಸಿದರು,ಮತ್ತು ವಾದ್ಯಗಳು ಮನೆಗಳಲ್ಲಿ ಮತ್ತು ವಸ್ತುಸಂಗ್ರಹಾಲಯಗಳಲ್ಲಿ ಕಲೆಹಾಕಲು ಯೋಗ್ಯವಾದವು.[೮೫] ಈ ಅವಧಿಯಲ್ಲಿ ತಯಾರಕರು ವಾದ್ಯಗೋಷ್ಠಿ ಗಳ ಬೇಡಿಕೆಗೆ ತಕ್ಕಂತೆ ಅದೇ ತರಹದ ವಿವಿಧ ಅಳತೆಯ ವಾದ್ಯಗಳನ್ನು ತಯಾರಿಸಲು ಶುರುಮಾಡಿದರು,ಅಥವಾ ಈ ಗುಂಪಿನ ವಾದ್ಯಗಳ ಮೇಲೆ ರಚಿಸಿ ಮೇಳದಲ್ಲಿ ನುಡಿಸಿದರು.[೮೬] ವಾದ್ಯ ತಯಾರಕರು ಇಂದಿಗೂ ಉಳಿದುಕೊಳ್ಳುವ ಲಕ್ಷಣ ಹೊಂದಿದ ವಾದ್ಯ ಅಭಿವೃದ್ಧಿ ಪಡಿಸಿದರು. ಉದಾಹರಣೆಗೆ, ಆರ್ಗನ್‌ನ ಬಹು ವಿಧವಾದ ಕೀಬೋರ್ಡ್‌ಗಳು ಮತ್ತು ಪೆಡಲ್‌ಗಳು ಈಗಲೂ ಅಸ್ತಿತ್ವದಲ್ಲಿವೆ,ಮೊದಲ ಏಕ stops ಒಳಗೊಂಡ ಆರ್ಗನ್ ಹದಿನೈದನೇಯ ಶತಮಾನದ ಆರಂಭದಲ್ಲಿ ಕಾಣಿಸಿಕೊಂಡಿತ್ತು. ಈ stops ಗಳು ಮಿಶ್ರವಾದ ಸ್ವರ ಉತ್ಪಾದಿಸುತ್ತಿತ್ತು, ಅ ಸಮಯದಲ್ಲಿ ಸಂಯುಕ್ತವಾದ ಸಂಗೀತದ ಬೆಳವಣಿಗೆಯ ಅವಶ್ಯಕತೆ ಇದ್ದಿತು.[೮೭] ಕಹಳೆಯ ರೀತಿಯ ಸಾಧನಗಳು ಆಧುನಿಕ ರೂಪವನ್ನು ಪಡೆದುಕೊಂಡು ಇದನ್ನು ನುಡಿಸುವವರು ಒಳಾಂಗಣ ಸಂಗೀತಕ್ಕೆ ಇದನ್ನು ಅಳವಡಿಸಿಕೊಳ್ಳಲು ಮ್ಯೂಟ್‌‍ಗಳನ್ನು ಸೇರ್ಪಡಿಸಿದರು.[೮೮]

ವಿಲಕ್ಷಣ ಬದಲಾಯಿಸಿ

ಹದಿನೇಳನೇಯ ಶತಮಾನದ ಆರಂಭದಲ್ಲಿ ಸಂಯೋಜಕರು ಹೆಚ್ಚು ಭಾವನಾತ್ಮಕ ಶೈಲಿಯಲ್ಲಿ ಕೃತಿಗಳನ್ನು ರಚಿಸಲು ಆರಂಭಿಸಿದರು. ಮೊನೊಪೊಲಿಕ್ ಶೈಲಿಯು ಭಾವನಾತ್ಮಕ ಸಂಗೀತಕ್ಕೆ ತುಂಬಾ ಸೂಕ್ತವಾಗಿತ್ತು ಮತ್ತು ಮಾನವನ ಧ್ವನಿಯಲ್ಲಿ ಹಾಡಲು ಪೂರಕವಾಗಿ ಸಂಗೀತದ ಭಾಗಗಳನ್ನು ಬರೆಯಲಾಯಿತು.[೮೨] ಇದರ ಪರಿಣಾಮವಾಗಿ,ವಾದ್ಯಗಳು ಸಮಗ್ರವಾಗಿ ಮತ್ತು ಕ್ರಿಯಾತ್ಮಕವಾಗಿರಲು ಅಸಮರ್ಥವಾದವು,ಮತ್ತು ಅದಕ್ಕಾಗಿ ಅವುಗಳು ನೋಡಲು ಭಾವನರಹಿತವಾಗಿ ಕಂಡುಬಂದವು fell out of favor. ಒಬೆಯ್ ಇವುಗಳಲ್ಲಿ ಒಂದು.[೮೯] ಬಾಗಿದ ವಾದ್ಯಗಳಾದ ವಯೋಲಿನ್,ವಯೋಲಾ,ಬ್ಯಾರಿಟನ್ ಮತ್ತು ವಿವಿಧ ಲೂಟ್ಸ್‌ಗಳು ಸಂಗೀತ ಪ್ರಸಿದ್ಧವಾಗಲು ಪ್ರಭಾವ ಬೀರಿದವು.[೯೦] ಸರಿಸುಮಾರು 1750ರ ಆರಂಭದಲ್ಲಿ ಗೀಟಾರ್‌ನ ಪ್ರಾಮುಖ್ಯತೆ ಹೆಚ್ಚಿದ್ದರಿಂದ ಸಂಗೀತ ಸಂಯೋಜನೆಯಲ್ಲಿ ಲೂಟ್ ಕಣ್ಮರೆಯಾಯಿತು.[೯೧] ಹೆಚ್ಚಾಗಿ ತಂತಿ ವಾದ್ಯಗಳ ಸಂಗೀತ ಮೇಳ ಉನ್ನತಿಯಾದಂತೆ, ಗಾಳಿ ವಾದ್ಯಗಳಾದ ಕೊಳಲು, ಶಹನಾಯಿ ಮತ್ತು ಬಾನ್ಸುರಿ ಮುಂತಾದ ಸಂಗೀತ ಸಾಧನಗಳು ತಂತಿ ವಾದ್ಯಗಳ ಏಕತಾನತೆಯನ್ನು ಹೋಗಲಾಡಿಸಲು ಸಹಾಯಕವಾದವು.[೯೨]

ಹದಿನೆಳನೇಯ ಶತಮಾನದ ಮಧ್ಯಭಾಗದಲ್ಲಿ, ಹಂಟರ್ ಹಾರ್ನ್ ಉದ್ದವಾದ ಕೊಳವೆಯಾಗಿ "ಕಲಾತ್ಮಕ ವಾದ್ಯ"ವಾಗಿ ರೂಪಾಂತರ ಗೊಂಡಿತು, ಕಿರಿದಾದ ರಂಧ್ರ, ವಿಶಾಲವಾದ ಘಂಟೆ,ಮತ್ತು ಹೆಚ್ಚಿಗೆ ವಿಶಾಲವಾದ ವ್ಯಾಪ್ತಿ ಪಡೆಯಿತು. ಈ ರೂಪಾಂತರದ ವಿವರ ಸ್ಪಷ್ಟವಾಗಿಲ್ಲ,ಆದರೆ ಆಧುನಿಕ ಕೊಂಬು ಅಥವಾ , ಫ್ರೆಂಚ್ ಕೊಂಬು,ಆಡುಮಾತಿನ ಪ್ರಕಾರ 1725ರಲ್ಲಿ ಪರಿಚಯಗೊಂಡಿತು.[೯೩] ಉದ್ದ ಕುತ್ತಿಗೆಯ ಒಳ ಮತ್ತು ಹೊರ ಚಾಚಿರುವ ವಾದಕನಿಗೆ ಸ್ವರವನ್ನು ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶ ಇರುವಂತಹ ಹಲವು ಬದಲಾವಣೆ ಇರುವ ಸ್ಲೈಡ್ ಟ್ರಮ್‌ಪೆಟ್ ಕಾಣಿಸಿಕೊಂಡಿತು. ಈ ಏರಿಳಿತ ನುಡಿಸಲು ಕಷ್ಟವಾದ್ದರಿಂದ ಟ್ರಮ್‌ಪೆಟ್ ಪ್ರಸಿದ್ಧವಾಗಲಿಲ್ಲ.[೯೪] ಬರಾಕ್‌ನ ಅವಧಿಯಲ್ಲಿ ಆರ್ಗನ್‌ನ ನಾದದಲ್ಲಿ ಬದಲಾವಣೆಗೆ ಕಂಡುಬಂದಿತು. ಅಬ್ರಹಾಮ್‌ ಜೊರ್ಡಾನ್‌ನಂತಹ ತಯಾರಕರು ನಿಲ್ಲುವಿಕೆಯಲ್ಲಿ ಹೆಚ್ಚಿನ ಅಭಿವ್ಯಕ್ತಿಯನ್ನು ಸೇರಿಸಿದರು ಮತ್ತು ಪೆಡಲ್‌ನಂತ ಹೆಚ್ಚಿನ ಸಲಕರಣೆಯನ್ನು ಅಳವಡಿಸಿದರು. ಸ್ಯಾಚ್ಸ್‌‌ನು ಈ ರೀತಿಯ ಬೆಳವಣಿಗೆಯನ್ನು ಸಾಮಾನ್ಯ ಆರ್ಗನ್‌ನ ಸಂಗೀತದ ’ಅವನತಿ’ ಎಂದು ವಿಮರ್ಶಿಸಿದರು.[೯೫]

ವರ್ಗೀಕರಣ ಬದಲಾಯಿಸಿ

ಸಂಗೀತದ ವರ್ಗೀಕರಣ ಮಾಡಲು ಹಲವಾರು ಬೇರೆ ಬೇರೆ ವಿಧಾನಗಳನ್ನು ಬಳಸಲಾಗುತ್ತದೆ. ಎಲ್ಲಾ ವಿಧಾನಗಳು ವಾದ್ಯಗಳ ಕೆಲವು ಭೌತಿಕ ಲಕ್ಷಣಗಳ ಸಂಯೋಜನೆಯಿಂದ ,ವಾದ್ಯಗಳ ಮೇಲೆ ಸಂಗೀತ ಹೇಗೆ ಕಾರ್ಯನಿರ್ವಹಿಸುತ್ತದೆ, ವಾದ್ಯಗಳ ವ್ಯಾಪ್ತಿ,ಮತ್ತು ಗಾಯನಗೋಷ್ಠಿ ಮತ್ತು ಮೇಳಗಳಲ್ಲಿ ವಾದ್ಯಗಳ ಸ್ಥಾನದ ಆಧಾರದ ಮೇಲೆ ಪರೀಕ್ಷಿಸಲಾಗುವುದು. ವಾದ್ಯಗಳನ್ನು ಹೇಗೆ ವರ್ಗೀಕರಿಸಬೇಕು ಎಂಬುದಕ್ಕೆ ಕುರಿತಂತೆ ತಜ್ಞರ ಮಧ್ಯೆ ಭಿನ್ನಾಭಿಪ್ರಾಯವಿದೆ. ಈ ಲೇಖನವು ವರ್ಗೀಕರಣ ವ್ಯವಸ್ಥೆಯ ಸಂಪೂರ್ಣ ಸಮೀಕ್ಷೆಯ ಆಸ್ಪದಕ್ಕೆ ಒಳಪಟ್ಟಿಲ್ಲ. ಸಾರಾಂಶವು ಪ್ರಮುಖವಾದ ವ್ಯವಸ್ಥೆಯನ್ನು ಅನುಕರಿಸುತ್ತದೆ.

ಪ್ರಾಚೀನ ಪದ್ಧತಿಗಳು ಬದಲಾಯಿಸಿ

ಪ್ರಾಚೀನ ಪದ್ಧತಿಯಲ್ಲಿ,ಕ್ರಿ.ಶ ಪೂರ್ವ ಒಂದನೇಯ ಶತಮಾನದಿಂದ, ವಾದ್ಯಗಳನ್ನು ಪ್ರಮುಖವಾಗಿ ಈ ನಾಲ್ಕು ಗುಂಪುಗಳಲ್ಲಿ ವಿಭಾಗಿಸಲಾಗಿದೆ: ವಾದ್ಯದ ತಂತಿಯ ಕಂಪನದಿಂದ ಸ್ವರ ಉತ್ಪಾದನೆ; ವಾಯುವಿನಲ್ಲಿ ಲಂಬಸಾಲಿನ ಕಂಪನದಿಂದ ಸ್ವರ ಉತ್ಪಾದನೆ; ಮರ ಅಥವಾ ಲೋಹದಿಂದ ಮಾಡಿದ ಸಂಘರ್ಷಣ ವಾದ್ಯಗಳು;ಮತ್ತು ಚರ್ಮದ ತಲೆ ಹೊಂದಿರುವ ಸಂಘರ್ಷಣ ವಾದ್ಯಗಳು ಅಥವಾ ಡ್ರಮ್ಸ್. ವಿಕ್ಟರ್-ಚಾರ್ಲ್ಸ್ ಮಹಿಲ್ಲಾನ್ ನಂತರ ಇದಕ್ಕೆ ತೀವ್ರವಾಗಿ ಹೋಲಿಕೆಯಾಗುವಂತಹ ಪದ್ಧತಿ ಅಳವಡಿಸಿದ . ಇವನು ಬ್ರುಸೆಲ್ಸ್‌ನ ಸಂಗೀತ ವಾದ್ಯಗಳ ಸಂಗ್ರಹ ಲಲಿತಕಲಾ ಶಾಲೆಯ ಮೇಲ್ವಿಚಾರಕನಾಗಿದ್ದ,ಮತ್ತು 1888 ಸಂಗ್ರಹದ ಕ್ಯಾಟಲಾಗ್‌ನಲ್ಲಿ ತಂತಿ ವಾದ್ಯಗಳು, ವಾಯು ವಾದ್ಯಗಳು, ಸಂಘರ್ಷಣ ವಾದ್ಯಗಳು,ಮತ್ತು ಡ್ರಮ್ಸ್ ಈ ನಾಲ್ಕು ಗುಂಪುಗಳಲ್ಲಿ ವಿಭಾಗಿಸಲಾಗಿದೆ

ಸಾಚ್ಸ್-ಹಾರ್ನ್‌ಬೊಸ್ಟೆಲ್ ಬದಲಾಯಿಸಿ

ನಂತರ 1914ರಲ್ಲಿ ಎರಿಚ್ ವೊನ್ ಹಾರ್ನ್‌ಬೊಸ್ಟೆಲ್ ಮತ್ತು ಕರ್ಟ್ ಸಾಚ್ಸ್ ಪ್ರಾಚೀನ ಸೂತ್ರನ್ನು ತೆಗೆದುಕೊಂಡರು ಮತ್ತು Zeitschrift für Ethnologie ವರ್ಗೀಕರಣಕ್ಕೆ ಹೊಸ ಸೂತ್ರ ಪ್ರಕಟಿಸಿದರು. ಅವರ ಸೂತ್ರ ಇಂದು ಅಪಾರವಾಗಿ ಬಳಸಲ್ಪಡುತ್ತಿದೆ,ಮತ್ತು ಹಲವಾರು ಬಾರಿ ಹಾರ್ನ್‌ಬೊಸ್ಟೆಲ್-ಸಾಚ್ಸ್ ಪದ್ಧತಿ ಎಂದೆ ಕರೆಯಲಾಗುತ್ತದೆ.

ಸಾಚ್ಸ್-ಹಾರ್ನ್‌ಬೊಸ್ಟೆಲ್‌ರ ಮೂಲ ಪದ್ಧತಿಯು ವಾದ್ಯಗಳನ್ನು ಪ್ರಮುಖ ನಾಲ್ಕು ಗುಂಪುಗಳಲ್ಲಿ ವರ್ಗೀಕರಿಸುತ್ತದೆ:

  • ಕ್ಸಿಲೊಫೋನ್‌ ಮತ್ತು ರ್ಯಾಟಲ್‌ನಂತಹ ಇಡಿಯೊಫೋನ್‌ಗಳು, ಕಂಪನಕ್ಕೊಳಗಾಗಿ ನಾದ ಉತ್ಪಾದಿಸುತ್ತದೆ,ಇವು ಕನ್ಕ್ಯೂಶನ್,ಪರ್ಕ್ಯೂಶನ್, ಶೇಕನ್,ಸ್ರ್ಕಾಪ್ಡ್,ಸ್ಪ್ಲಿಟ್,ಮತ್ತು ಪ್ಲಕ್ಡ್ ಇಡಿಯೊಫೋನ್‌ಗಳಾಗಿ ವರ್ಗೀಕರಿಸಲ್ಪಡುತ್ತದೆ.[೯೬]
  • ಡ್ರಮ್‌ ಅಥವಾ ಕಾಜೂಗಳಂತಹ ಮೆಂಬ್ರಾನೋಫೋನ್‌ಗಳು ಚರ್ಮಗಳ ಕಂಪನದಿಂದ ಶಬ್ದವನ್ನು ಹೊರಡಿಸುತ್ತವೆ; ಇವು ಪ್ರಿಡ್ರಮ್ ಮೆಂಬ್ರೊಫೋನ್, ಕೊಳವೆಯಂತಹ ಡ್ರಮ್, ಫ್ರಿಕ್ಷನ್ ಇಡಿಯೋಫೋನ್, ಕೆಟಲ್‌ಡ್ರಮ್ಸ್‌, ಫ್ರಿಕ್ಷನ್ ಡ್ರಮ್ ಮತ್ತು ಮಿರ್ಲಿಟೋನ್ಸ್‌ಗಳಾಗಿ ವರ್ಗೀಕರಿಸಲ್ಪಡುತ್ತವೆ.[೯೭]
  • ಪಿಯಾನೋ ಅಥವಾ ಸೆಲ್ಲೋ ನಂತಹ ಕಾರ್ಡೋಫೋನ್ಸ್ ತಂತಿಗಳ ಕಂಪನದಿಂದ ಶಬ್ದ ಹೊರಡಿಸುತ್ತವೆ; ಇವು ಜಿಥೆರ್ಸ,ಕೀಬೋರ್ಡ್ ಕಾರ್ಡೋಫೋನ್ಸ್, ಲೈರೆ,ಲೂಟ್ಸ್,ಮತ್ತು ಬಾಗಿದ ಕಾರ್ಡೋಫೋನ್ಸ್‌ಗಳಾಗಿ ವರ್ಗಿಕರಿಸಲ್ಪಡುತ್ತದೆ.[೯೮]
  • ಪೈಪ್‌ ಆರ್ಗನ್ ಅಥವಾ ಒಬೊಯ್‌ನಂತಹ ಏರೊಫೋನ್ಸ್,ಗಾಳಿಯ ಲಂಬವಾಗಿ ಕಂಪಿಸುವುದರಿಂದ ಶಬ್ದ ಹೊರದಿಸುತ್ತವೆ; ಫ್ರೀ ಏರೊಫೋನ್ಸ್,ಪ್ಲೂಟ್ಸ್,ಆರ್ಗನ್ಸ್,ರೀಡ್‌ಪೈಪ್ಸ್,ಮತ್ತು ತುಟಿಯಿಂದ ಕಂಪಿಸುವ ಏರೊಫೋನ್ಸ್‌ಗಳಾಗಿ ವರ್ಗಿಕರಿಸಲ್ಪಡುತ್ತದೆ.[೯೯]

ನಂತರ ಸಾಚ್ಸ್ ಐದನೇಯ ವರ್ಗ ಸೇರಿಸಿದ , ದೆರ್‌ಮಿನ್ಸ್‌ನಂತಹ ಎಲೆಕ್ಟ್ರೋಫೋನ್ಸ್, ವಿದ್ಯುತ್ ಕಲ್ಪಿಸುವಿಕೆಯಿಂದ ಶಬ್ದ ಹೊರಡಿಸುತ್ತದೆ.[೧೦೦] ಪ್ರತಿಯೊಂದು ವರ್ಗವು ಬಹಳಷ್ಟು ಉಪಗುಂಪುಗಳನ್ನು ಹೊಂದಿದೆ. ಈ ಪದ್ಧತಿಯು ವರ್ಷಗಳಿಂದಲೂ ವಿಮರ್ಶೆಗೆ ಹಾಗೂ ಪರಿಷ್ಕರಣೆಗೊಳಪಟ್ಟಿದೆ,ಆದರೆ ಎತ್ನೊಮ್ಯುಜಿಕೊಲಾಜಿಸ್ಟ್ ಮತ್ತು ಅರ್ಗೊನೊಲಾಜಿಸ್ಟ್‌ಗಳಿಂದ ಹೆಚ್ಚಿಗೆ ಉಪಯೋಸಿಸಲ್ಪಡುತ್ತದೆ.

ಸ್ಕೆಫ್ನರ್ ಬದಲಾಯಿಸಿ

ಆ‍ಯ್‌೦ದ್ರೆ ಸ್ಕೆಫ್ನರ್ ,Musée de l'Homme, ನಲ್ಲಿ ಮೇಲ್ವಿಚಾರಕನಾಗಿದ್ದ, ಹಾರ್ನ್‌ಬೊಸ್ಟಲ್-ಸಾಚ್ಸ್‌ರ ಪದ್ಧತಿಯನ್ನು ಒಪ್ಪಲಿಲ್ಲ ಮತ್ತು 1932ರಲ್ಲಿ ಅವನ ಸ್ವಂತ ಪದ್ಧತಿ ಅಭಿವೃದ್ಧಿ ಪಡಿಸಿದ. ಸ್ಕೆಫ್ನರ್ ಸಂಗೀತ ವಾದ್ಯಗಳ ಬಾಹ್ಯ ರಚನೆಗಿಂತ ನುಡಿಸುವಿಕೆ ವಿಧಾನವು ,ಇದರ ವರ್ಗೀಕರಣ ನಿರ್ಧರಿಸುತ್ತದೆ ಎಂದು ನಂಬಿದ್ದ. ಇವನ ಪದ್ಧತಿ ವಾದ್ಯಗಳನ್ನು ಎರಡು ಗುಂಪುಗಳಲ್ಲಿ ವಿಭಾಗಿಸುತ್ತಾರೆ: ಗಟ್ಟಿ ಪದಾರ್ಥ ಹೊಂದಿದ ವಾದ್ಯ, ಕಂಪಿಸುವ ಮುಖ್ಯಭಾಗ ಮತ್ತು ಕಂಪಿಸುವ ಗಾಳಿ ಹೊಂದಿರುವ ವಾದ್ಯಗಳು ಎಂದು ವಿಭಾಗಿಸುತ್ತಾರೆ.[೧೦೧]

ವ್ಯಾಪ್ತಿ ಬದಲಾಯಿಸಿ

ಪಾಶ್ವಿಮಾತ್ಯ ವಾದ್ಯಗಳನ್ನು ಅವುಗಳ ಸಂಗೀತದ ವ್ಯಾಪ್ತಿಯನ್ನು ಅದೇ ಕುಟುಂಬದ ಇತರ ವಾದ್ಯಗಳ ಜೊತೆಗೆ ಹೋಲಿಕೆಯಿಂದ ವರ್ಗೀಕರಿಸಲಾಗಿದೆ ಈ ಹಾಡಿದ ನಂತರದ ಧ್ವನಿಯ ಹೆಸರಿನಿಂದ ವರ್ಗಿಕರಣ ಮಾಡಲಾಗಿದೆ:

ಕೆಲವು ವಾದ್ಯಗಳು ಒಂದಕ್ಕಿಂತ ಹೆಚ್ಚಿನ ಭಾಗದಲ್ಲಿ ಬರುತ್ತವೆ : ಉದಾಹರಣೆಗೆ, ಸೆಲ್ಲೊವನ್ನು ಟೆನರ್ ಆಗಿಯೂ ಬಾಸ್ ಆಗಿಯೂ ಪರಿಗಣಿಸಬಹುದು, ಇದು ಸಂಗೀತದ ಮೇಳಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ,ಟಮ್ಬೊನ್ ಕೂಡ ಆಲ್ಟೊ ಆಗಬಹುದು,ಟೆನರ್ ಅಥವಾ ಬಾಸ್ ಮತ್ತು ಫ್ರೆಂಚ್ ಹಾರ್ನ್,ಬಾಸ್,ಬ್ಯಾರಿಟೋನ್ ಟೆನರ್, ಅಥವಾ ಆಲ್ಟೊ ಇವುಗಳನ್ನು ಯಾವ ವ್ಯಾಪ್ತಿಯಲ್ಲಿ ನುಡಿಸುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.

ಬಹಳಷ್ಟು ವಾದ್ಯಗಳು ಅವುಗಳ ಹೆಸರಿನ ಭಾಗದ ವ್ಯಾಪ್ತಿ ಹೊಂದಿವೆ: ಸೊಪ್ರಾನೊ ಸಾಕ್ಸಾಫೋನ್, ಟೆನರ್ ಸಾಕ್ಸಾಫೋನ್, ಬ್ಯಾರಿಟೋನ್ ಸಾಕ್ಸಾಫೋನ್, ಬ್ಯಾರಿಟೋನ್ ಹಾರ್ನ್, ಆಲ್ಟೊ ಕೊಳಲು, ಬಾಸ್ ಕೊಳಲು , ಆಲ್ಟೊ ಧ್ವನಿ ಮುದ್ರಣ ಯಂತ್ರ , ಬಾಸ್ ಗಿಟಾರ್, ಮುಂತಾದವುಗಳು. ತಾರಕ ಸ್ವರ ವ್ಯಾಪ್ತಿ ಅಥವಾ ಬಾಸ್‌ಗಿಂತ ಕೆಳಗೆ ಸ್ವರಗಳನ್ನು ಹೆಚ್ಚಿನ ವಿಶೇಷಣ ವಿವರಿಸುತ್ತವೆ, ಉದಾಹರಣೆಗೆ: ಸೊಪ್ರಾನಿನೊ ಸಾಕ್ಸಾಫೋನ್, ಕಾಂಟ್ರಾಬಾಸ್ ಕ್ಲಾರಿನೆಟ್

ಮಾನವ ಧ್ವನಿ ವ್ಯಾಪ್ತಿ ಅಥವಾ ಇತರೆ ವರ್ಗದ ವಾದ್ಯಗಳ ವ್ಯಾಪ್ತಿಗಲ್ಲದೇ ಇದೇ ವರ್ಗದ ಇತರ ವಾದ್ಯಗಳ ಹೋಲಿಕೆಯಲ್ಲಿ ವಾದ್ಯಗಳ ವ್ಯಾಪ್ತಿ ಮತ್ತು ವಾದ್ಯಗಳ ಹೆಸರಿನಲ್ಲಿ ಉಪಯೋಗಿಸಿದಾಗ,ಇವು ಸಂಬಂಧಿತ ಶಬ್ದಗಳು. ಉದಾಹರಣೆಗೆ, ಬಾಸ್ ಕೊಳಲಿನ ವ್ಯಾಪ್ತಿ C3 F♯6 ರಿಂದ, ಯಾವಾಗ ಬಾಸ್ ಕ್ಲಾರಿನೇಟ್ ನುಡಿಸಿದಾಗ ಒಂದು ಅಷ್ಟಪದಿ ಕೆಳಗೆ.

ನಿರ್ಮಾಣ-ರಚನೆ ಬದಲಾಯಿಸಿ

ಸಂಗೀತ ವಾದ್ಯಗಳ ರಚನೆಯು ವಿಶೇಷವಾದ ವೃತ್ತಿಯಾಗಿದ್ದು ಇದು ವರ್ಷಾನುಗಟ್ಟಲೆಯ ತರಬೇತಿ,ಅಭ್ಯಾಸ,ಮತ್ತು ಕೆಲವೊಮ್ಮೆ ಶಿಷ್ಯವೃತ್ತಿಯಾಗಿದೆ. ಹೆಚ್ಚಿನ ಸಂಗೀತ ವಾದ್ಯ ತಯಾರಕರು ಒಂದು ಶೈಲಿಯ ವಾದ್ಯ ತಯಾರಿಕೆಯಲ್ಲಿ ವಿಶೇಷ ಪ್ರಾವೀಣ್ಯತೆ ಹೊಂದಿರುತ್ತಾರೆ; ಉದಾಹರಣೆಗೆ, ಲೂಥಿಯನ್ ಕೇವಲ ತಂತಿವಾದ್ಯ ಮಾತ್ರ ತಯಾರಿಸುತ್ತಾರೆ. ಕೆಲವರು ಪಿಯಾನೋ ತರಹದ ವಾದ್ಯ ಮಾತ್ರ ತಯಾರಿಸುತ್ತಾರೆ.

ಬಳಕೆದಾರರ ಜೊತೆಗಿನ ಅಂತರ್ ಸಂಪರ್ಕ‌ ಬದಲಾಯಿಸಿ

ವಾದ್ಯವು ಹೇಗೆ ಸ್ವರ ಹೊರಡಿಸುತ್ತದೆ ಎನ್ನುವುದನ್ನು ಗಮನಿಸದೇ,ಹಲವಾರು ಸಂಗೀತ ವಾದ್ಯಗಳು ಕೀಲಿಮಣೆಯನ್ನು ಬಳಕೆದಾರರಿಗೆ ಸಂಪರ್ಕ ಸಾಧನವಾಗಿ ಉಪಯೋಗವಾಗುತ್ತದೆ. ಕೀಬೋರ್ಡ್ ವಾದ್ಯಗಳು ಯಾವುದೇ ವಾದ್ಯಗಳು ಸಂಗೀತದ ಕೀಬೋರ್ಡ್ ಜೊತೆ ನುಡಿಸಲ್ಪಡುತ್ತದೆ. ಪ್ರತಿಯೊಂದು ಕೀಲಿಯು ಒಂದು ಅಥವಾ ಹೆಚ್ಚಿನ ಸ್ವರ ಹೊರಡಿಸುತ್ತದೆ;ಹೆಚ್ಚಿನ ಕೀಬೋರ್ಡ್ ವಾದ್ಯಗಳು ವಿಶೇಷ ಅರ್ಥ ಸೂಚಿಸುತ್ತವೆ,ಪಿಯಾನೋನ(ಪೆಡಲ್,ಆರ್ಗನ್‌ನ stops ) ಕುಶಲತೆಯಿಂದ ಈ ಸ್ವರಗಳನ್ನು ಬಳಸುತ್ತವೆ . ಸ್ವರವನ್ನು ಗಾಳಿಯನ್ನು ಊದುವ ಮೂಲಕ ಆರ್ಗನ್‌ನಲ್ಲಿ ಅಥವಾ ಗಾಳಿಯನ್ನು ತುಂಬಿಸುವ ಮೂಲಕ ಅಕಾರ್ಡಿಯನ್‌‌ನಲ್ಲಿ[೧೦೨][೧೦೩], ತಂತಿಯನ್ನು ಕಂಪನಕ್ಕೊಳಪಡಿಸುವ ಮೂಲಕ ಅಥವಾ ಅದನ್ನು ಒತ್ತುವ ಮೂಲಕ ಪಿಯಾನೋವಿನಲ್ಲಿ ಅಥವಾ ಹೊರಗೆಳೆಯುವ ಮೂಲಕ ಹಾರ್ಪಿಸ್‌ಕಾರ್ಡ್‌ನಲ್ಲಿಯೂ[೧೦೪][೧೦೫] ಮತ್ತು ಎಲೆಕ್ಟ್ರಾನಿಕ್‌ ವಿಧಾನದಲ್ಲಿ ಸಿಂಥಸೈಸ್‌ರ್‌ನಲ್ಲಿ ಅಥವಾ ಇನ್ನಾವುದೋ ರೀತಿಯಲ್ಲಿ ಸ್ವರ ಹೊರಡಿಸಲಾಗುತ್ತದೆ.

ಕೆಲವು ವೇಳೆ, ಕೀಬೋರ್ಡ್ ಇಲ್ಲದ ಸಾಧನಗಳಲ್ಲಿ, ಉದಾಹರಣೆಗೆ ಗ್ಲಾಕೆನ್‌‍ಸ್ಪೈಲ್‌ ಮುಂತಾದವುಗಳಿಗೆ ಕೀಬೋರ್ಡ್‌ ಅನ್ನು ಸೇರಿಸಲಾಗುತ್ತದೆ.[೧೦೬] ಅವುಗಳಲ್ಲಿ ಯಾವುದೇ ಚಲನಶೀಲ ಭಾಗಗಳು ಇಲ್ಲದಿದ್ದರೂ ಕೂಡ ವಾದಕರ ಕೈಯಲ್ಲಿ ಕೆಲವು ಸಲಕರಣೆಗಳನ್ನು ಇದಕ್ಕೆ ಸಂಬಂಧಿಸಿದಂತೆ ಇಟ್ಟುಕೊಳ್ಳಲಾಗುತ್ತದೆ. ಇವು ಕೀ ಬೋರ್ಡ್‌ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತವೆ.

ಇವನ್ನೂ ನೋಡಿ ಬದಲಾಯಿಸಿ

ಟಿಪ್ಪಣಿಗಳು ಬದಲಾಯಿಸಿ

  1. ೧.೦ ೧.೧ Blades 1992, pp. 34
  2. Slovenian Academy of Sciences 1997, pp. 203–205
  3. Chase and Nowell 1998, pp. 549
  4. CBC Arts 2004
  5. Collinson 1975, pp. 10
  6. ೬.೦ ೬.೧ Campbell 2004, pp. 82
  7. de Schauensee 2002, pp. 1–16
  8. Moorey 1977, pp. 24–40
  9. West 1994, pp. 161–179
  10. Sachs 1940, p. 60
  11. Sachs 1940, p. 61
  12. Brown 2008
  13. Baines 1993, p. 37
  14. ೧೪.೦ ೧೪.೧ Sachs 1940, p. 63
  15. ೧೫.೦ ೧೫.೧ Sachs 1940, p. 297
  16. Blades 1992, pp. 36
  17. Sachs 1940, p. 26
  18. Sachs 1940, pp. 34–52
  19. Blades 1992, pp. 51
  20. ೨೦.೦ ೨೦.೧ Sachs 1940, p. 35
  21. Sachs 1940, pp. 52–53
  22. Marcuse 1975, pp. 24–28
  23. Sachs 1940, pp. 53–59
  24. Sachs 1940, p. 67
  25. Sachs 1940, pp. 68–69
  26. Sachs 1940, p. 69
  27. Sachs 1940, p. 70
  28. Sachs 1940, p. 82
  29. ೨೯.೦ ೨೯.೧ ೨೯.೨ Sachs 1940, p. 86
  30. Sachs 1940, pp. 88–97
  31. Sachs 1940, pp. 98–104
  32. Sachs 1940, p. 105
  33. Sachs 1940, p. 106
  34. Sachs 1940, pp. 108–113
  35. Sachs 1940, p. 114
  36. Sachs 1940, p. 116
  37. Marcuse 1975, p. 385
  38. Sachs 1940, p. 128
  39. Sachs 1940, p. 129
  40. Campbell 2004, p. 83
  41. Sachs 1940, p. 149
  42. Sachs 1940, p. 151
  43. Sachs 1940, p. 152
  44. Sachs 1940, p. 161
  45. Sachs 1940, p. 185
  46. Sachs 1940, pp. 162–164
  47. Sachs 1940, p. 166
  48. Sachs 1940, p. 178
  49. Sachs 1940, p. 189
  50. Sachs 1940, p. 192
  51. Sachs 1940, p. 196–201
  52. Sachs 1940, p. 207
  53. Sachs 1940, p. 218
  54. ೫೪.೦ ೫೪.೧ Sachs 1940, p. 216
  55. Sachs 1940, p. 221
  56. Sachs 1940, p. 222
  57. Sachs 1940, p. 222–228
  58. Sachs 1940, p. 229
  59. Sachs 1940, p. 231
  60. Sachs 1940, p. 236
  61. Sachs 1940, p. 238–239
  62. Sachs 1940, p. 240
  63. Sachs 1940, p. 246
  64. Sachs 1940, p. 249
  65. Sachs 1940, p. 250
  66. Sachs 1940, p. 251–254
  67. ೬೭.೦ ೬೭.೧ Sachs 1940, p. 260
  68. Sachs 1940, p. 263
  69. Sachs 1940, p. 265
  70. Grillet 1901, p. 29
  71. Sachs 1940, p. 269
  72. Sachs 1940, p. 271
  73. Sachs 1940, p. 274
  74. Sachs 1940, p. 273
  75. Sachs 1940, p. 278
  76. Sachs 1940, p. 281
  77. Sachs 1940, p. 284
  78. Sachs 1940, p. 286
  79. Bicknell 1999, p. 13
  80. Sachs 1940, p. 288
  81. ೮೧.೦ ೮೧.೧ Sachs 1940, p. 298
  82. ೮೨.೦ ೮೨.೧ Sachs 1940, p. 351
  83. Sachs 1940, p. 299
  84. Sachs 1940, p. 301
  85. Sachs 1940, p. 302
  86. Sachs 1940, p. 303
  87. Sachs 1940, p. 307
  88. Sachs 1940, p. 328
  89. Sachs 1940, p. 352
  90. Sachs 1940, p. 353–357
  91. Sachs 1940, p. 374
  92. Sachs 1940, p. 380
  93. Sachs 1940, p. 384
  94. Sachs 1940, p. 385
  95. Sachs 1940, p. 386
  96. Marcuse 1975, p. 3
  97. Marcuse 1975, p. 117
  98. Marcuse 1975, p. 177
  99. Marcuse 1975, p. 549
  100. Sachs 1940, p. 447
  101. Kartomi 1990, p. 174–175
  102. ಬಿಕ್‌ನೆಲ್, ಸ್ಟೀಫನ್, (1999). "ದ ಆರ್ಗನ್ ಕೇಸ್". ಇನ್ ತಿಸಲ್‌ವೈಟ್‌, ನಿಕೊಲಸ್ & ವೆಬ್ಬರ್, ಜಾಫ್ರಿ (Eds.), ದ ಕ್ಯಾಂಬ್ರಿಜ್ ಕಂಪಾನಿಯನ್ ಟು ದ ಆರ್ಗನ್, ಪುಟ. 55–81. ಕೇಂಬ್ರಿಡ್ಜ್‌ : ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಮುದ್ರಣಾಲಯ. ISBN 0-471-80580-7.
  103. ಹೋವಾರ್ಡ್, ರೋಬ್ (2003)ಆ‍ಯ್‌ನ್ ಎ ಟು ಜೆಡ್ ಆಫ್ ದ ಆಕಾರ್ಡಿಯನ್ ಅ‍ಯ್‌೦ಡ್ ರಿಲೇಟೆಡ್ ಇನ್ಸ್ಟ್ರುಮೆಂಟ್ಸ್ ಸ್ಟಾಕ್‌ಪೊರ್ಟ್: ರೊಬಾಕಾರ್ಡ್ ಪಬ್ಲೀಕೇಶನ್ ISBN 0-9546711-0-4
  104. ಫೈನ್, ಲಾರ್ರಿ. ದ ಪಿಯಾನೋ ಬುಕ್ , 4ನೇಯ ಆವೃತ್ತಿ. ಮ್ಯಾಸ್ಸಾಚ್ಯುಸೆಟ್ಸ್: ಬ್ರೂಕ್‌ಸೈಡ್ ಮುದ್ರಣಾಲಯ, 2001. ISBN 1-929145-01-2
  105. ರಿಪಿನ್ (ಆವೃತ್ತಿ) ಎಟ್ ಅಲ್. ಅರ್ಲಿ ಕೀಬೋರ್ಡ್ ಇನ್ಟ್ರುಮೆಂಟ್ಸ್ . ನ್ಯೂ ಗ್ರೋವ್ ಮ್ಯೂಜಿಕಲ್ ಇನ್ಟ್ರುಮೆಂಟ್ಸ್ ಸೀರೀಸ್, 1989, PAPERMAC
  106. "Glockenspiel: Construction". Vienna Symphonic Library. Retrieved 2009-08-17.

ಆಕರಗಳು ಬದಲಾಯಿಸಿ

  • Baines, Anthony (1993), Brass Instruments: Their History and Development, Dover Publications, ISBN 0486275744
  • Bicknell, Stephen (1999), The History of the English Organ, Cambridge University Press, ISBN 0521654092
  • Blades, James (1992), Percussion Instruments and Their History, Bold Strummer Ltd, ISBN 0933224613
  • Brown, Howard Mayer (2008), Sachs, Curt, Grove Dictionary of Music and Musicians, retrieved 2008-06-05
  • Campbell, Murray; Greated, Clive A.; Myers, Arnold (2004), Musical Instruments: History, Technology, and Performance of Instruments of Western Music, Oxford University Press, ISBN 0198165048
  • Canadian Broadcasting Corporation (December 30, 2004), Archeologists discover ice age dwellers' flute, Canadian Broadcasting Corporation, archived from the original on 2006-11-16, retrieved 2009-02-07{{citation}}: CS1 maint: date and year (link)
  • Chase, Philip G.; Nowell, April (1998), "Taphonomy of a Suggested Middle Paleolithic Bone Flute from Slovenia", Current Anthropology, 39 (4): 549, doi:10.1086/204771 {{citation}}: Unknown parameter |month= ignored (help)
  • Collinson, Francis M. (1975), The Bagpipe, Routledge, ISBN 0710079133
  • de Schauensee, Maude (2002), Two Lyres from Ur, University of Pennsylvania Museum of Archaeology and Anthropology, ISBN 092417188X
  • Grillet, Laurent (1901), Les ancetres du violon v.1, Paris
  • Kartomi, Margaret J. (1990), On Concepts and Classifications of Musical Instruments, University of Chicago Press, ISBN 0226425487
  • Marcuse, Sibyl (1975), A Survey of Musical Instruments, Harper & Row, ISBN 0060127767
  • Moorey, P.R.S. (1977), "What Do We Know About the People Buried in the Royal Cemetery?", Expedition, 20 (1): 24–40</ref>
  • Rault, Lucie (2000), Musical Instruments: A Worldwide Survey of Traditional Music-making Musical Instruments: A Worldwide Survey of Traditional Music-making, Thames & Hudson Ltd, ISBN 978-0500510353
  • Remnant, Mary (1989), Musical Instruments: An Illustrated History from Antiquity to the Present, Batsford, ISBN 0713451696.
  • Sachs, Curt (1940), The History of Musical Instruments, Dover Publications, ISBN 0486452654
  • Slovenian Academy of Sciences (April 11, 1997), "Early Music", Science, 276 (5310): 203–205, doi:10.1126/science.276.5310.203g{{citation}}: CS1 maint: date and year (link)
  • West, M.L. (May 1994), "The Babylonian Musical Notation and the Hurrian Melodic Texts", Music & Letters, 75 (2): 161–179, doi:10.1093/ml/75.2.161

ಹೆಚ್ಚಿನ ಮಾಹಿತಿಗಾಗಿ ಬದಲಾಯಿಸಿ

  • Campbell, Donald Murray; Greated, Clive Alan; Myers, Arnold (2006), Musical Instruments: History, Technology and Performance of Instruments of Western Music, Oxford University Press, ISBN 019921185X
  • Wade-Matthews, Max (2003), Musical Instruments: Illustrated Encyclopedia, Lorenz, ISBN 0754811824

ಬಾಹ್ಯ ಕೊಂಡಿಗಳು ಬದಲಾಯಿಸಿ