ಶಿವಮೊಗ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)

ಶಿವಮೊಗ್ಗ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ೨೦೦೫ರಲ್ಲಿ ಈ ಕ್ಷೇತ್ರದಲ್ಲಿ ೧,೨೮೬,೧೮೧ ಮತದಾರರಿದ್ದರು.

ಸಂಸತ್ತಿನ ಸದಸ್ಯರು

ಬದಲಾಯಿಸಿ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಗೋಡಿನ ಕೆ.ಜಿ.ಒಡೆಯರ್ ಶಿವಮೊಗ್ಗದ ಮೊದಲ ಸಂಸತ್ ಸದಸ್ಯರಾಗಿದ್ದರು. ಅವರು ಒಮ್ಮೆ ಗಾಂಧೀಜಿಯವರನ್ನು ಭೇಟಯಾದ ಮೇಲೆ ತಮ್ಮ ಸೂಟ್ ಬೂಟ್ ಬಿಟ್ಟು ಖಾದಿಧಾರಿಯಅಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಐದು ಬಾರಿ ಸೆರೆವಾಸ ಅನುಭವಿಸಿದ್ದರು. ಒಟ್ಟು ೫ ವರ್ಷ ಸೆರೆವಾಸ ಅನುಭವಿಸಿದ್ದರರು; ೫ ತಿಂಗಳ ಕಠಿಣ ಶಿಕ್ಷೆಯನ್ನೂ ಅನುಭವಿಸಿದ್ದರು. ಸಾಗರದಲ್ಲಿ ಮುಖ್ಯ ಬಸ್ ನಿಲ್ದಾಣದ ಹತ್ತಿರ ಅವರ ಮನೆ ಇತ್ತು/ಇದೆ . ಅವರು ನೆಹರೂ ಅವರ ನಿಕಟವರ್ತಿಗಳಾಗಿದ್ದು , ನೆಹರೂ ಅವರನ್ನು ಜೋಗಕ್ಕೂ ಕರೆತಂದಿದ್ದರು.ಕಾಗೋಡು ಸತ್ಯಾಗ್ರಹದ ನಂತರ 'ಗೇಣೀದಾರರಿಗೇ ಜಮೀನು' ಕಾನೂನು ಬರುವುದಕ್ಕೆ ಮೊದಲೇ,ರೈತರ ಸತ್ಯಾಗ್ರಹಕ್ಕೆ ಓಗೊಟ್ಟು. ತಮ್ಮ ೮೦೦ ಎಕರೆ ಜಮೀನನ್ನು ರೈತರ ಹೆಸರಿಗೆ ಮಾಡಿಕೊಟ್ಟರು.

೨೦೧೪ರ ಚುನಾವಣೆ

ಬದಲಾಯಿಸಿ
  • ೨೦೧೪ ರ ಲೋಕಸಭೆ ಕರ್ಣಾಟಕದಲ್ಲಿ ಮತದಾನ ದಿನಾಂಕ:17- 4-2014 ಒಂದೇ ದಿನ.
  • ಎಣಿಕೆ ೧೬-೫-೨೦೧೪.
  • ಶಿವಮೊಗ್ಗ ಜಿಲ್ಲಾ ಕ್ಷೇತ್ರ್ರ ಮತದಾರರ ವಿವರ (೨-೪-೨೦೧೪):-
ಶಿವಮೊಗ್ಗ ಜಿಲ್ಲಾ ಕ್ಷೇತ್ರ ಪುರುಷ ಮಹಿಳೆ ಇತರೆ ಮತದಾರರು
ಶಿವಮೊಗ್ಗ- ಗ್ರಾಮ 99312 97417 09 196758
ಭದ್ರಾವತಿ 104023 106749 07 210779
ಶಿವಮೊಗ್ಗ- ನಗರ 116368 116486 17 232871
ತೀರ್ಥಹಳ್ಳಿ 87502 87620 04 175216
ಶಿಕಾರಿಪುರ 89940 87099 14 177053
ಸೊರಬ 90506 87013 10 177529
ಸಾಗರ 92607 93150 06 185763
ಬೈಂದೂರು 97669 107635 15 205319
ಒಟ್ಟು 778037 783169 82 1561288
  • ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಅವರು ಶಿವಮೊಗ್ಗ ಕ್ಷೇತ್ರದಲ್ಲಿ 3,63,305 ಮತಗಳ ಅಂತರದಿಂದ ಜಯಗಳಿಸಿದ್ದಾರೆ.[]

ಉಲ್ಲೇಖಗಳು

ಬದಲಾಯಿಸಿ

ಇದನ್ನೂ ನೋಡಿ

ಬದಲಾಯಿಸಿ