ಶಿರಸಿ

ಕರ್ನಾಟಕದ ಬೆಟ್ಟಪ್ರದೇಶ, ಭಾರತ
{{#if:|

ಮಲೇನಾಡಿನ ಹೆಬ್ಬಾಗಿಲು ಶಿರಸಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ನಗರ ಹಾಗು ತಾಲ್ಲೂಕು ಕೇಂದ್ರವಾಗಿದ್ದು, ಈ ಊರಿನಲ್ಲಿ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಇದೆ. ಶ್ರೀ ಮಾರಿಕಾಂಬ ಜಾತ್ರೆ ಎರಡು ವರ್ಷಕ್ಕೊಮ್ಮೆ ಎಂಟು ದಿನಗಳ ಕಾಲ ನಡೆಯುತ್ತದೆ. ಶಿರಸಿಯು ಅಡಿಕೆ ತೋಟಗಳು, ಕಾಡುಗಳು ಹಾಗೂ ಜಲಪಾತಗಳಿಂದ ಸುತ್ತುವರಿಯಲ್ಪಟ್ಟಿದೆ. ಅಡಿಕೆ ಬೆಳೆ ಮತ್ತು ಮಾರಾಟ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು.ಸೋಂದಾ ಸ್ವರ್ಣವಲ್ಲಿ ಮಠ,ವಾದಿರಾಜ ಮಠ,ಮೊಗದ್ದೆ ದೇವಸ್ಥಾನ ಪ್ರಸಿದ್ಧ ಯಾತ್ರಾಸ್ಥಳಗಳು. ಹಚ್ಚ ಹಸಿರಿನಿಂದ ಕೂಡಿರುವ ಶಿರಸಿ ಪ್ರವಾಸಿಗರ ಸ್ವರ್ಗ ಎಂದೇ ಹೇಳಬಹುದು. ಶಿರಸಿಯನ್ನು ಮಲೆನಾಡಿನ ಹೆಬ್ಬಾಗಿಲು ಅಂತಾನು ಕರೆಯಲ್ಪಡುತ್ತೆ.

Sirsi
ಶಿರಸಿ
—  ತಾಲ್ಲೂಕು  —
ಶಿರಸಿ ಮಾರಿಕಾಂಬಾ ದೇವಸ್ಥಾನ
ಶಿರಸಿ ಮಾರಿಕಾಂಬಾ ದೇವಸ್ಥಾನ
Sirsi is located in Karnataka
Sirsi
Sirsi
Location in Karnataka, India
ರೇಖಾಂಶ: 14°37′10″N 74°50′07″E / 14.6195°N 74.8354°E / 14.6195; 74.8354Coordinates: 14°37′10″N 74°50′07″E / 14.6195°N 74.8354°E / 14.6195; 74.8354
Country  India
State Karnataka
ಜಿಲ್ಲೆ ಉತ್ತರ ಕನ್ನಡ
ವಿಸ್ತೀರ್ಣ
 - ಒಟ್ಟು ೧೧.೩೩ ಚದರ ಕಿಮಿ (೪.೪ ಚದರ ಮೈಲಿ)
ಎತ್ತರ ೫೯೦ ಮೀ (೧,೯೩೬ ಅಡಿ)
ಜನಸಂಖ್ಯೆ (2018)
 - ಒಟ್ಟು ೧೮೭,೦೦೦
 - ಸಾಂದ್ರತೆ ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ","./ಚದರ ಕಿಮಿ (Expression error: Unexpected < operator./ಚದರ ಮೈಲಿ)
{{{language}}} {{{ಭಾಷೆ}}}
PIN 5814xx
ದೂರವಾಣಿ ಕೋಡ್ +91-8384
ಅಂತರ್ಜಾಲ ತಾಣ: www.sirsicity.mrc.gov.in

ಪ್ರವಾಸೀ ತಾಣಗಳುಸಂಪಾದಿಸಿ

ಬನವಾಸಿಸಂಪಾದಿಸಿ

ಕ್ರಿಸ್ತಶಕ ೩೪೫ – ೫೨೫ ವರೆಗೆ ಆಳಿದ ಕದಂಬ ಅರಸರ ರಾಜಧಾನಿಯಾಗಿದ್ದ ಬನವಾಸಿ ಸಿರಸಿಯಿಂದ ೨೪ ಕಿ.ಮಿ. ದೂರದಲ್ಲಿದೆ. ಇಲ್ಲಿ ಕದಂಬರು ಕಟ್ಟಿಸಿದ ಮಧುಕೇಶ್ವರ ದೇವಸ್ಥಾನ ತುಂಬ ಸುಂದರವಾಗಿದೆ.

ಸಹಸ್ರಲಿಂಗಸಂಪಾದಿಸಿ

ಸಿರಸಿಯಿಂದ ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಬಹಳ ಜನ ಬರುತ್ತಾರೆ.

ಸೊಂದಾಸಂಪಾದಿಸಿ

ಶಿರಸಿಯಿಂದ 20ಕಿ.ಮಿ. ದೂರದಲ್ಲಿರುವ ಸೊಂದಾದಲ್ಲಿ (ಇತರೆ ಹೆಸರುಗಳು ಸೋದೆ, ಸ್ವಾದಿ) ಪ್ರಸಿದ್ಧ ವಾದಿರಾಜ ಮಠವಿದೆ. ಮತ್ತು ಅಲ್ಲಿ ಕೆಲ ಶತಮಾನಗಳ ಹಿಂದಿನ ಸುಂದರವಾದ ಕೋಟೆಯಿದೆ.

ಉಂಚಳ್ಳಿ ಜಲಪಾತಸಂಪಾದಿಸಿ

೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರಸಿಯಿಂದ ೩೦ ಕಿ.ಮಿ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ. ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಶಿರಸಿ ಇಂದ ೪೫ ಕಿ.ಮಿ. ದೂರದಲ್ಲಿದೆ.

ಶ್ರೀ ಮಾರಿಕಾಂಬ ದೇವಸ್ಥಾನಸಂಪಾದಿಸಿ

ಶಿರಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಸುಮಾರು ೧೬ನೇ ಶತಮಾನದ ಶ್ರೀ ಮಾರಿಕಾಂಬಾ ದೇವಾಲಯವಿದೆ. ೧೯೩೩ರಲ್ಲಿ ಗಾಂಧೀಜಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಉಲ್ಲೇಖವಿದೆ.

ಜನಸಂಖ್ಯೆಸಂಪಾದಿಸಿ

೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ 81 ಶೇಕಡಾ ಜನರು ಸಾಕ್ಷರರು. ಶಿರಸಿಯಲ್ಲಿ ಕನ್ನಡ, (ಹವ್ಯಕ ಕನ್ನಡ), ಕೊಂಕಣಿ, ಮರಾಠಿ ಭಾಷೆಗಳನ್ನು ಮಾತಾಡುವ ಜನರಿದ್ದಾರೆ. ಮುಖ್ಯ ವ್ಯಾವಹಾರಿಕ ಭಾಷೆ ಕನ್ನಡ ಮತ್ತು ಹವ್ಯಕ ಕನ್ನಡ

ಪ್ರಮುಖ ಶಿಕ್ಷಣ ಸಂಸ್ಥೆಗಳುಸಂಪಾದಿಸಿ

 1. ಎಮ್.ಇ.ಎಸ್ ಎಜುಕೇಶನ್ ಟ್ರಸ್ಟ್
 2. ಆವೆ ಮರಿಯಾ ಎಜುಕೇಶನ್ ಟ್ರಸ್ಟ್
 3. ಪ್ರೋಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್
 4. ಡೊನ್ ಬೊಸ್ಕೊ ಎಜುಕೇಶನ್ ಟ್ರಸ್ಟ್
 5. ಆರ್.ನ್.ಸ್ ಪೊಲಿಟೇಕ್ನಿಕ್ ಎಜುಕೇಶನ್ ಟ್ರಸ್ಟ್
 6. ಶ್ರೀ ಮಾತಾ ವಿದ್ಯಾನಿಕೇತನ, ಶಿರಸಿ
 7. ಚಂದನ ಪ್ರೌಢಶಾಲೆ,ಶಿರಸಿ
 8. GSS ವಾನಳ್ಳಿ
 9. Shridevi high school Hulekal
 10. ಲಯನ್ಸ್ ಶಿಕ್ಷಣ ಸಂಸ್ಥೆ,ಶಿರಸಿ
 11. ಶ್ರೀ ಸಿದ್ಧಿ ವಿನಾಯಕ ಪ್ರೌಢಶಾಲೆ, ಗೋಳಿ
 12. ಶ್ರೀ ಕಾಳಿಕ ಭವಾನಿ ಸೆಕೆಂಡರಿ ಶಾಲೆ ಕಾನ್ಸೂರ್

ಪ್ರಮುಖ ವ್ಯಕ್ತಿಗಳುಸಂಪಾದಿಸಿ

ಉಲ್ಲೇಖಸಂಪಾದಿಸಿ

"https://kn.wikipedia.org/w/index.php?title=ಶಿರಸಿ&oldid=1006154" ಇಂದ ಪಡೆಯಲ್ಪಟ್ಟಿದೆ