ವಿಶ್ವೇಶ್ವರ ಹೆಗಡೆ ಕಾಗೇರಿ

ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕದ ಭಾರತೀಯ ಜನತಾ ಪಕ್ಷದ ಮುಖಂಡರಾಗಿದ್ದಾರೆ. ಅವರು ಸತತ ಆರನೇ ಬಾರಿಗೆ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕರ್ನಾಟಕದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಅವಧಿಯಲ್ಲಿ (೨೦೦೮-೨೦೧೩) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.[]

ವಿಶ್ವೇಶ್ವರ ಹೆಗಡೆ ಕಾಗೇರಿ
ಕರ್ನಾಟಕ ವಿಧಾನಸಭಾ ಸ್ಪೀಕರ್
Assumed office
ಜುಲೈ ೩೧, ೨೦೧೯
Preceded byಕೆ.ಆರ್.ರಮೇಶ್ ಕುಮಾರ್
Constituencyಸಿರ್ಸಿ
ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು
In office
ಮೇ ೩೦, ೨೦೦೮ – ಮೇ ೨೩, ೨೦೧೩
Preceded byರಾಷ್ಟ್ರಪತಿ ಆಡಳಿತ
Succeeded byಕಿಮ್ಮನೆ ರತ್ನಾಕರ್
Constituencyಸಿರ್ಸಿ
ಕರ್ನಾಟಕ ವಿಧಾನಸಭಾ ಸದಸ್ಯರು
Assumed office
೨೦೧೮
Constituencyಸಿರ್ಸಿ
In office
೨೦೧೩–೨೦೧೮
Constituencyಸಿರ್ಸಿ
In office
೨೦೦೮–೨೦೧೩
Constituencyಸಿರ್ಸಿ
In office
೨೦೦೫–೨೦೦೮
Constituencyಅಂಕೋಲಾ
In office
೧೯೯೯–೨೦೦೪
Constituencyಅಂಕೋಲಾ
In office
೧೯೯೪–೧೯೯೯
Preceded byಉಮೇಶ್ ಭಟ್
Constituencyಅಂಕೋಲಾ
Personal details
Born (1961-07-10) 10 July 1961 (ವಯಸ್ಸು 63)
ಸಿರ್ಸಿ, ಉತ್ತರ ಕನ್ನಡ, ಕರ್ನಾಟಕ, ಭಾರತ
Nationalityಭಾರತೀಯ
Political partyಭಾರತೀಯ ಜನತಾ ಪಕ್ಷ
Occupationಕೃಷಿಕ

ಆರಂಭಿಕ ಜೀವನ

ಬದಲಾಯಿಸಿ

ಕಾಗೇರಿಯವರು ೧೦ ಜುಲೈ ೧೯೬೧ ರಂದು ಕರ್ನಾಟಕದ ಸಿರ್ಸಿಯಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಕಾಂ ಮುಗಿಸಿದ ಅವರು, ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಾಗಿದ್ದರು ಮತ್ತು ವಿದ್ಯಾರ್ಥಿ ಸಂಘದ ಪ್ರಭಾವಿ ನಾಯಕರಾಗಿದ್ದರು.[]

ರಾಜಕೀಯ ಜೀವನ

ಬದಲಾಯಿಸಿ

ಅವರು ಮೊದಲ ಮೂರು ಅವಧಿಗೆ ಅಂಕೋಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು: ೧೯೯೪-೯೯, ೧೯೯೯-೨೦೦೪ ಮತ್ತು ೨೦೦೪-೦೮. ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ, ಅವರು ಹೊಸದಾಗಿ ರಚಿಸಲಾದ ಸಿರ್ಸಿ ಕ್ಷೇತ್ರಕ್ಕೆ ಸ್ಥಳಾಂತರಗೊಂಡರು ಮತ್ತು ೨೦೦೮, ೨೦೧೩ ಮತ್ತು ೨೦೧೮ ರ ಚುನಾವಣೆಗಳಲ್ಲಿ ಶಾಸಕರಾಗಿ ಆಯ್ಕೆಗೊಂಡರು.[] ಅವರು ತಮ್ಮ ರಾಜಕೀಯ ಜೀವನದಲ್ಲಿ ೬ ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ

ಹುದ್ದೆಗಳು

ಬದಲಾಯಿಸಿ
  • ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು (೨೦೦೮-೨೦೧೩)
  • ವಿಧಾನ ಸಭೆ ಸ್ಪೀಕರ್ (೨೦೧೯ - )

ಉಲ್ಲೇಖ

ಬದಲಾಯಿಸಿ
  1. https://vijaykarnataka.indiatimes.com/state/karnataka/vishweshwar-hegde-kageri-elected-as-karnataka-assembly-speaker/articleshow/70451772.cms
  2. https://www.prajavani.net/stories/stateregional/speaker-vishweshwar-hegde-654996.html
  3. "ಆರ್ಕೈವ್ ನಕಲು". Archived from the original on 2019-08-01. Retrieved 2019-08-01.