ಮತ್ತೂರು ಕೃಷ್ಣಮೂರ್ತಿ
ಮತ್ತೂರು ಕೃಷ್ಣಮೂರ್ತಿ: [೧](ಜನನ-ಆಗಸ್ಟ್ 8,೧೯೨೯) ರಂದು ಶಿವಮೊಗ್ಗ ಜಿಲ್ಲೆ ಮತ್ತೂರು ಗ್ರಾಮದ ಶ್ರೀ ಎಂ.ರಾಮಕೃಷ್ಣಯ್ಯ ಹಾಗೂ ಶ್ರಿಮತಿ.ನ೦ಜಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣವನ್ನು ಹೊಂದಿ,ಪದವಿಯ ನಂತರ ಕೃಷಿಯನ್ನು ತೆಗೆದುಕೊಂಡು ಸಂಸ್ಕೃತವನ್ನು ಕಲಿತರು. ಇವರು ರಾಮಾಯಣ, ಮಹಾಭಾರತ, ಮತ್ತು ಭಾಗವತಪುರಾಣದಲ್ಲಿ ಅಧ್ಯಯನವನ್ನು ಹೊ೦ದಿದ್ದರು.ಇವರು ಬಹಳವಾಗಿ ಗಮಕ ಕಲಾವಿದರಾದ ರಾಮಶಾಸ್ತ್ರಿ ಮತ್ತು ಲಕ್ಷ್ಮಿ ಕೇಶವ ಶಾಸ್ತ್ರಿ ಅವರಿ೦ದ ಪ್ರಭಾವಿತರಾಗಿದ್ದರು. ಸ್ವಾತಂತ್ರ್ಯಹೋರಾಟದಲ್ಲಿ ಅವರ ಭಾಗವಹಿಸುವಿಕೆ ಅವರಿಗೆ ತಮಿಳು ಮತ್ತು ಹಿಂದಿ ಕಲಿಯಲು ಅನುಕೂಲ ಕಲ್ಪಿಸಿತು. ಸಂಸ್ಕೃತ ವಿದ್ವಾಂಸರಾದ ಇವರು ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ಸಲ್ಲಿಸಿದ್ದಾರೆ. ಏಪ್ರಿಲ್ ೨೦೦೯ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಅನನ್ಯ ಸೇವೆಗಾಗಿ ಡಿಸೆಂಬರ್ ೨೦೦೪ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು,ಡಾಕ್ಟರೇಟ್ ಪದವಿಯನ್ನು ಕೊಟ್ಟೂ ಗೌರವಿಸಿದ್ದಾರೆ. ಅವರು ೬-೧೦-೨೦೧೧ ರಂದು ೮೨ ನೇ ವಯಸ್ಸಿನಲ್ಲಿ ನಿಧನರಾದರು. [೨]
ವೃತ್ತಿಜೀವನ
ಬದಲಾಯಿಸಿ(೧೯೬೫-೧೯೬೬) ಮೈಸೂರು ಮತ್ತು ಮಿನರ್ವ ಮಿಲ್ಸ್, ಬೆಂಗಳೂರು ಮಿನರ್ವ ಮಿಲ್ಸ್ ಎ೦ಬ ಹತ್ತಿ ಕಾರ್ಖಾನೆಯ ಟೈಮ್ ಕಚೇರಿ ಅಸಿಸ್ಟಂಟ್ ಕಾರ್ಮಿಕರಾಗಿ ಕಾನೂನು ಸಲಹೆ ನೀಡುವ ಕೆಲಸ ಮಾಡುತ್ತಿದ್ದರು.
(೧೯೬೭-೧೯೬೮) ಸಂಯುಕ್ತ ಕರ್ನಾಟಕ (ಕನ್ನಡ ಡೈಲಿ) ಎ೦ಬ ಪತ್ರಿಕೆಯ ವರದಿಗಾರರಾಗಿ ಕಾರ್ಯವಹಿಸುತ್ತಿದ್ದರು.
(೧೯೬೮-೧೯೬೯) ಅಖಿಲ ಭಾರತ ರೇಡಿಯೋ,ಬೆಂಗಳೂರು (ಮಕ್ಕಳ ವಿಂಗ್)ಅಲ್ಲಿ ಮಕ್ಕಳ ನಾಟಕ ಪ್ರದರ್ಶನವನ್ನು ಒಂದು ವರ್ಷ ಕಾಲ ನಿರ್ದೇಶಿಸಿದರು.
(೧೯೬೯-೧೯೭೦) 'ಸಂಯುಕ್ತ ಕರ್ನಾಟಕ' ಪತ್ರಕರ್ತ ಪೋಸ್ಟ್ ನಿಂದ ಉಪ ಸಂಪಾದಕರಾಗಿ ಬಡ್ತಿ ಹೊಂದಿ ಕಾರ್ಯನಿರ್ವಹಿಸಿದರು.
(೧೯೭೦-೧೯೭೨) ಭಾರತೀಯ ವಿದ್ಯಾ ಭವನ(ಬೆಂಗಳೂರು)ದ ದಾಖಲೆ ಅಧಿಕಾರಿಯಾಗಿ ತಮ್ಮ ವೃತ್ತಿ ಆರಂಭಿಸಿದರು,ಭಾರತೀಯ ವಿದ್ಯಾ ಭವನದಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಹಿತ್ಯ ಚಟುವಟಿಕೆಗಳನ್ನು ಆರಂಭಿಸಿದರು.
ಇವುಗಳಲದೆ ಅನೆಕ ಶಾಲೆಗಳು, ಕಾಲೇಜುಗಳು, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.ಕುಮಾರವ್ಯಾಸ ಭಾರತದ ಮೇಲೆ ವ್ಯಾಖ್ಯಾನ ನೀಡಿದರು.ತಮಿಳಿನಿಂದ ಕನ್ನಡ, ಹಿಂದಿಯಿ೦ದ ಕನ್ನಡ, ಮತ್ತು ಕನ್ನಡದಿ೦ದ ತಮಿಳಿಗೆ ಪುಸ್ತಕಗಳನ್ನು ಭಾಷಾಂತರಿಸಿದರು.
(೧೯೭೨-೧೯೯೫) ಭಾರತೀಯ ವಿದ್ಯಾ ಭವನ, ಲಂಡನ್ ನಲ್ಲಿ. [೩]ಭಾರತೀಯ ವಿದ್ಯಾ ಭವನದ ಒಂದು ಶಾಖೆ ಸ್ಥಾಪಿಸಲು ಜವಾಬ್ದಾರಿ ನೀಡಿತು.ಭಾರತೀಯ ವಿದ್ಯಾ ಭವನ ಬ್ರಿಟನ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಇವರ ಅವಧಿಯಲ್ಲಿ, ಪ್ರಿನ್ಸ್ ಆಫ್ ವೇಲ್ಸ್ ಹಾಗೂ ಬ್ರಿಟನ್ ನ ಇಬ್ಬರು ಪ್ರಧಾನ ಮಂತ್ರಿಗಳು ಭವನಕ್ಕೆ ಭೇಟಿ ನೀಡಿದ್ದರು. ಬಿಬಿಸಿಯು ಇವರ ಹಿಂದೂ ಧರ್ಮದ ಬಗ್ಗೆ ೧೨೦ ಕ್ಕೊ ಹೆಚ್ಚು ಉಪನ್ಯಾಸಗಳನ್ನು ಪ್ರಸಾರ ಮಾಡಿತು. ೧೯೯೫ ರ ನಂತರ ಭಾರತೀಯ ವಿದ್ಯಾ ಭವನ ಬೆಂಗಳೂರು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡಿದರು.
ಕೃತಿಗಳು
ಬದಲಾಯಿಸಿಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳು
- ಬಾಳಿನ ಹಾದಿ.
- ಭಾನು.
- ದೀಪಾ ಧಾರಿಣಿ.
- ಡಾಕ್ಟರ್ ಅಖಿಲಾ.
- ಶಿಕ್ಷಣ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ.
- ಭಾರತದ ಶೈಕ್ಷಣಿಕ ಪುನರ್ನಿರ್ಮಾಣ.
- ದಕ್ಷಿಣ ಭಾರತದ ಮಹಾನ್ ಸಂಗೀತಗಾರರು.
- ಹಿಮಾಲಯದ ಹೀರೋಸ್.
- ಜವಾಹರಲಾಲ್ ನೆಹರು.
- ವೀರ ಸಾವರ್ಕರ್.
- ಜ಼ಕೀರ್ ಹುಸೇನ್.
- ಯೋಗಕ್ಷೇಮಂ ವಹಾಮ್ಯಹಮ್.
- ಕುಮಾರವ್ಯಾಸ ಭಾರತ ಆದಿ ಪರ್ವ.
- ಅ೦ತರ ದ್ರಿಷ್ಟಿ (ಶ್ರೀ ಪಿ.ವಿ. ನರಸಿ೦ಹ ರಾವ್ ಅವರ 'ಇನ್ಸೈಡರ್' ನ ಕನ್ನಡ ಅನುವಾದ).
- ಹಿಮಾಲಯದ ನಾಯಕರು.
ಇಂಗ್ಲೀಷ್ ನಲ್ಲಿ ಪ್ರಕಟವಾದ ಪುಸ್ತಕಗಳು
- ಅಗ್ನಿ ಕಾರ್ಯ.
- ಇ೦ದ್ರಾಕ್ಷಿ.
- ಪೂಜಾ ವಿಧಿ.
- ಹವನ ವಿಧಿ.
- ಡೈಲಿ ಪ್ರಾರ್ಥನೆ.
- ಹಿಂದೂ ಧರ್ಮ.
ವೀಡಿಯೊ ಆಡಿಯೋ ಕ್ಯಾಸೆಟ್ಗಳು
- ಭಾರತದ ಹಬ್ಬಗಳು(ವೀಡಿಯೊ ಕ್ಯಾಸೆಟ್ಟು)
- ಕುಮಾರವ್ಯಾಸ ಭಾರತ(ಆಡಿಯೋ ಕ್ಯಾಸೆಟ್ಟು)
ಪ್ರಶಸ್ತಿ, ಸನ್ಮಾನಗಳು
ಬದಲಾಯಿಸಿ- ಗಾಂಧಿ ಸೆಂಟೆನರಿ ಸೆಲೆಬ್ರೇಶನ್ ಪ್ರಶಸ್ತಿ.
- ಕರ್ನಾಟಕರಾಜ್ಯ ಪ್ರಶಸ್ತಿ.
- ಭಾರತ ಸೇವಾರತ್ನ ಪ್ರಶಸ್ತಿ, ಬ್ರಿಟನ್.
- ಶ್ರೀ ಕ್ಷೇತ್ರ ಧರ್ಮಸ್ಥಳ ಧಾರ್ಮಿಕ ಕಾನ್ಫರೆನ್ಸ್ ಪ್ರಶಸ್ತಿ.
- 'ವ್ಯಾಕ್ಯನ ಕೂಕೀಲ' ಪ್ರಶಸ್ತಿ
- ರಾಮಾಯಣದ ಅನುವಾದಕ್ಕಾಗಿ 'ರಾಮಾಕಥಾಸಾಗರ' ಪ್ರಶಸ್ತಿ.
- ಯೋಗಕ್ಷೇಮಂ ವಾಹಮ್ಯಾಹಮ್ ಪುಸ್ತಕಕ್ಕೆ ೨೦೦೧ ರಲ್ಲಿ ಗೊರುರ್ ಪ್ರಶಸ್ತಿ ಲಭಿಸಿದೆ.
- ಗಾಂಧಿ ಉಪನಿಷತ್ ಪುಸ್ತಕಕ್ಕೆ ೨೦೦೨ ರಲ್ಲಿ ಗಾಂಧಿ ಸಾಹಿತ್ಯ ಸಂಘ ಮತ್ತು ಜಯಶ್ರೀ ಪ್ರಶಸ್ತಿ ದೂರತಿದೆ.
- ಗಾಯನ ಸಮಾಜದಿ೦ದ 'ವ್ಯಾಖ್ಯಾನ ಭೀಮ' ಏ೦ಬ ಬಿರುದು ದೂರತಿದೆ.
- ೨೦೦೫ ರ ಕರ್ನಾಟಕ ಸಂಗೀತ ಹಾಗೂ ನೃತ್ಯಕಲಾ ಅಕಾಡೆಮಿ ಪ್ರಶಸ್ತಿ.
- 'ವ್ಯಾಖ್ಯಾನ ಗ೦ಡುಬೀರು೦ಡ' ಏ೦ಬ ಬಿರುದು.
- ಸಾಹಿತ್ಯ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿ ಕುವೆಂಪು ವಿಶ್ವವಿದ್ಯಾಲಯ (ಶಿವಮೊಗ್ಗ) ಡಿಸೆಂಬರ್ ೨೦೦೪ ರಲ್ಲಿ ಡಾಕ್ಟರೇಟ್ ನೀಡಿ ಗೌರವಿಸಿದೆ.
- ೨೦೦೫ ರಲ್ಲಿ ವಿದ್ಯಾ ರತ್ನ ಪ್ರಶಸ್ತಿ.
- ೨೦೦೭ ರಲ್ಲಿ ಆಳ್ವಾಸ್ 'ನುಡಿ-ಸಿರಿ 'ಪ್ರಶಸ್ತಿ.
- ಶ್ರೀ ಡಿ ಸುಬ್ಬರಾಮಯ ಫೈನ್ ಆರ್ಟ್ಸ್ ಟ್ರಸ್ಟ್ ನಿಂದ ಲಲಿತಾ ಕಲಾಶ್ರಾಯ ಏ೦ಬ ಬಿರುದು ದೂರತಿದೆ.
- ೨೦೦೯ ರಲ್ಲಿ ಭಾರತ ಸರ್ಕಾರದಿಂದ "ಪದ್ಮಶ್ರೀ" ಪ್ರಶಸ್ತಿ ದೂರತಿದೆ.
ನಿಧನ
ಬದಲಾಯಿಸಿತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮತ್ತೂರು ಕೃಷ್ಣಮೂರ್ತಿಯವರು, ೫, ಅಕ್ಟೋಬರ್ ೨೦೧೧ ರಲ್ಲಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. [೪]
ಉಲ್ಲೇಖಗಳು
ಬದಲಾಯಿಸಿ- ↑ http://timesofindia.indiatimes.com/city/bangalore/Mathoor-Krishnamurti-From-bus-conductor-to-Sanskrit-scholar/articleshow/10262379.cms
- ↑ http://www.dnaindia.com/bangalore/report-padma-shri-awardee-mathoor-krishnamurthy-dies-at-84-1595888
- ↑ "ಆರ್ಕೈವ್ ನಕಲು". Archived from the original on 2014-07-24. Retrieved 2014-05-07.
- ↑ ಭಾರತೀಯ-ವಿದ್ಯಾಭವನ-ನಿರ್ದೇಶಕ-ಡಾ-ಮತ್ತೂರು-ಕೃಷ್ಣಮೂರ್ತಿ ವಿಧಿವಶ[ಶಾಶ್ವತವಾಗಿ ಮಡಿದ ಕೊಂಡಿ]