ವಿಕಿಪೀಡಿಯ:ಯೋಜನೆ/ಕರ್ನಾಟಕದ ಜಿಲ್ಲೆಗಳ ಪುಟಗಳ ಸಂಪಾದನಾ ಯೋಜನೆ
ಕರ್ನಾಟಕದ ಜಿಲ್ಲೆಗಳ ಮಾಹಿತಿಯನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ವಿಕಿಪೀಡಿಯ ಮೂಲಕ ಒದಗಿಸಲು ಸಾಧ್ಯವಾಗಿಸುವ ಯೋಜನೆ.
ಉದ್ದೇಶ
ಬದಲಾಯಿಸಿಕರ್ನಾಟಕದ ಎಲ್ಲ ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ವಿಕಿಪೀಡಿಯದಲ್ಲಿ ದೊರೆಯುವಂತೆ ಮಾಡುವುದು.
ಹೇಗೆ
ಬದಲಾಯಿಸಿ- ನಿಮ ಜಿಲ್ಲೆಯ ಬಗ್ಗೆ ಈಗಾಗಲೇ ಇತರ ಭಾಷೆಯಲ್ಲಿ ಇರುವ ಪುಟವನ್ನು ಕನ್ನಡ ಪುಟದೊಂದಿಗೆ ಹೊಂದಿಸಿ ನೋಡಿ, ಉತ್ತಮ ಮಾಹಿತಿಯನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸಿ
ಉದಾಹರಣೆ':-' ಹಾಸನ ಜಿಲ್ಲೆಯ ಬಗ್ಗೆ ಲೇಖನವನ್ನು ಅಭಿವೃದ್ದಿ ಪಡಿಸಲು ಇಂಗ್ಲೀಷ್ ವಿಕಿಪೀಡಿಯದಲ್ಲಿರುವ en:Hassan district ಪುಟವನ್ನು ಮಾದರಿಯಾಗಿ ಬಳಸಿಕೊಳ್ಳಬಹುದಾಗಿದೆ. ಹಾಗೆಯೇ ಹಾಸನ ಪಟ್ಟಣಕ್ಕೆ ಸಂಬಂಧಿಸಿದ ಪುಟಕ್ಕೆ en:Hassan ಸೂಕ್ತ ಉದಾಹರಣೆಯಾಗಿರುತ್ತದೆ.
- ಪ್ರತಿಯೊಂದು ಜಿಲ್ಲೆಯ ಬಗ್ಗೆ ಮಾಹಿತಿಗಳನ್ನು ಸರ್ಕಾರಿ, ಸರ್ಕಾರೇತರ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಗಳಿಂದ ಪಡೆಯಬಹುದು. ಈ ಯೋಜನಾ ಪುಟದ ಕೊನೆಯಲ್ಲಿ ಕೊಟ್ಟಿರುವ ಸಂಬಂಧಪಟ್ಟ ಬಾಹ್ಯಕೊಂಡಿಗಳು ಪಟ್ಟಿಯನ್ನು ಒಮ್ಮೆ ಗಮನಿಸಿ,
ಉದಾಹರಣೆ:- ಹಾಸನ ಜಿಲ್ಲೆಯ ಬಗ್ಗೆ ಸರ್ಕಾರಿ ಜಾಲತಾಣವಾದ http://www.hassan.nic.in ಮೂಲಕ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು.
ಕೆಲಸಗಳು
ಬದಲಾಯಿಸಿ- ಜಿಲ್ಲೆಯ ಬಗ್ಗೆ ಕಿರುಪರಿಚಯ ಕೊಡುವ ಮೊದಲ ಭಾಗವು ಉತ್ತಮವಾದ ಮಾಹಿತಿ ಹೊಂದುವಂತೆ ಮಾಡಿ.
- ಒಂದೇ ಜಿಲ್ಲೆಯ ಮತ್ತು ಜಿಲ್ಲಾ ನಗರ ಕೇಂದ್ರದ ಪುಟಗಳಿಗೆ ಪುನರ್ನಿರ್ದೇಶನಗಳಿದ್ದರೆ, ಅವುಗಳನ್ನು ಬೇರ್ಪಡಿಸಿ ಎರಡು ಲೇಖನಗಳನ್ನು ಮಾಡಿ. ಉದಾ: ಚಿತ್ರದುರ್ಗ ಜಿಲ್ಲೆ ಲೇಖನದಲ್ಲಿ ಜಿಲ್ಲೆಯ ಮಾಹಿತಿ ಮತ್ತು ಚಿತ್ರದುರ್ಗ ಪುಟದಲ್ಲಿ ನಗರದ ಮಾಹಿತಿಗಳಿರುವ ರೀತಿ.
- ನಗರದ ಪುಟಗಳಿಗೆ ಹವಮಾನ ಪೆಟ್ಟಿಗೆ ಟೆಂಪ್ಲೇಟಅನ್ನು ಬಳಸಿ. ಇದಕ್ಕೆ ಹವಮಾನದ ಮಾಹಿತಿಯನ್ನು ಆ ನಗರದ ಆಂಗ್ಲ ಪುಟದಿಂದ ಅಥವಾ ಹವಮಾನ ವೆಬ್‍ಸೈಟ್‍ನಿಂದ ಪಡೆಯಬಹುದು. ಉದಾ: ಚಿತ್ರದುರ್ಗದ ಹವಮಾನ ಮಾಹಿತಿ.
ಉತ್ತಮ ಅಭ್ಯಾಸಗಳು
ಬದಲಾಯಿಸಿ- ಇಂಗ್ಲೀಷಿನಿಂದ ಅನುವಾದ ಮಾಡುವಾಗ ಪದಗಳನ್ನು ಯಥಾವತ್ತಾಗಿ ಕನ್ನಡೀಕರಿಸುವುದನ್ನು ತಪ್ಪಿಸಿ, ಸಾಧ್ಯವಾದಷ್ಟೂ ಕನ್ನಡ ಪದಗಳನ್ನೇ ಬಳಸಿ.
- ಸಂಖ್ಯೆಗಳನ್ನು ಬಳಸುವಾಗ ಕನ್ನಡ ಅಂಕೆಗಳಲ್ಲೇ ಬರೆಯಿರಿ.
- ಸಂಪಾದಿಸುತ್ತಿರುವ ವಿಷಯಗಳನ್ನು ಆದಷ್ಟೂ ಸಣ್ಣ ಮತ್ತು ಸುಂದರ ವಾಕ್ಯಗಳಲ್ಲಿ ಬರೆಯಲು ರೂಢಿ ಮಾಡಿಕೊಳ್ಳಿ.
ಜಿಲ್ಲೆಯ ಪುಟದ ಮಾದರಿ
ಬದಲಾಯಿಸಿ- ಪರಿಚಯ ವಿಭಾಗ
- ಇತಿಹಾಸ
- Demographics / ಸೆನ್ಸಸ್ ದತ್ತಾಂಶ
- ಭೂಗೋಳ / ಹವಾಮಾನ
- ಸಂಪರ್ಕ / ಸಾರಿಗೆ
- ಕೃಷಿ
- ವಾಣಿಜ್ಯ ಮತ್ತು ಉದ್ದಿಮೆಗಳು
- ಶಿಕ್ಷಣ ಮತ್ತು ಸಂಶೋಧನೆ
- ಐತಿಹಾಸಿಕ ಸ್ಥಳಗಳು
- ಉಲ್ಲೇಖಗಳು
- ಬಾಹ್ಯಕೊಂಡಿಗಳು
ಸದಸ್ಯರು
ಬದಲಾಯಿಸಿಕ್ರಮಸಂಖ್ಯೆ | ನಿಮ್ಮ ಜಿಲ್ಲೆ | ನಿಮ್ಮ ಹೆಸರು |
---|---|---|
೧ | ಹಾಸನ | ಸಾತ್ವಿಕ್ |
೨ | ಬೆಂಗಳೂರು | ಓಂಶಿವಪ್ರಕಾಶ್ /ಚರ್ಚೆ/ಕಾಣಿಕೆಗಳು |
೩ | ತುಮಕೂರು | ತೇಜಸ್ |
೪ | ಬೆಂಗಳೂರು | ಅನ್ನಪೂರ್ಣಿಮ |
೫ | ಜಿಲ್ಲೆ | ನಿಮ್ಮ ಹೆಸರು |
೬ | ಜಿಲ್ಲೆ | ನಿಮ್ಮ ಹೆಸರು |
ಕೆಲಸಗಳು
ಬದಲಾಯಿಸಿಕೆಳಗಿನ ಲೇಖನಗಳಿಗೆ ಹೆಚ್ಚಿನ ಮಾಹಿತಿ ಸೇರಿಸಬೇಕು.