ಶ್ರೀಲಂಕಾ

ದಕ್ಷಿಣ ಏಷಿಯಾದ ದೇಶ
(ಲ೦ಕಾ ಇಂದ ಪುನರ್ನಿರ್ದೇಶಿತ)

ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ (೧೯೭೨ ರ ಮೊದಲು ಸಿಲೋನ್) ಭಾರತೀಯ ಉಪಖಂಡದ ಆಗ್ನೇಯದಲ್ಲಿರುವ ದ್ವೀಪ ರಾಷ್ಟ್ರ. ಪುರಾತನ ಕಾಲದಿಂದ ಲಂಕಾ, ಲಂಕಾದ್ವೀಪ, ಸಿಂಹಳದ್ವೀಪ, ಸೆರೆಂದಿಬ್ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಶ್ರೀಲಂಕಾ ಬ್ರಿಟಿಷ್ ಆಡಳಿತದ ಕಾಲದಲ್ಲಿ ಸಿಲೋನ್ ಎಂದು ಹೆಸರು ಪಡೆದಿತ್ತು. ೧೯೭೨ ರಲ್ಲಿ ಅದರ ಹೆಸರನ್ನು ಶ್ರೀಲಂಕಾ ಎಂದು ಬದಲಾಯಿಸಲಾಯಿತು.[೧೪]

Democratic Socialist Republic of Sri Lanka
  • ශ්‍රී ලංකා ප්‍රජාතාන්ත්‍රික සමාජවාදී ජනරජය (Sinhala)
  • இலங்கை சனநாயக சோசலிசக் குடியரசு (Tamil)
  • Sinhala:Śrī Laṅkā Prajātāntrika Samājavādī Janarajaya
    Tamil:Ilaṅkai Jaṉanāyaka Sōsalisak Kuṭiyarasu
Flag of Sri Lanka
Flag
Emblem of Sri Lanka
Emblem
Anthem: "Sri Lanka Matha"
(ಆಂಗ್ಲ:"Mother Sri Lanka")
Location of Sri Lanka
Capital
Largest cityColombo
Official languages
Recognised languagesEnglish
Ethnic groups
(2012[])
Religion
(2012)
70.2% Buddhism (official)[]
12.6% Hinduism
9.7% Islam
7.4% Christianity
0.1% Other/None
Demonym(s)Sri Lankan
GovernmentUnitary semi-presidential republic[]
• President
Ranil Wickremesinghe
Dinesh Gunawardena
Mahinda Yapa Abeywardena
Jayantha Jayasuriya
LegislatureParliament
Formation
• Kingdom established[]
543 BCE
• Rajarata established[]
437 BCE
1796
• Kandyan Convention signed
1815
4 February 1948
• Republic
22 May 1972
7 September 1978
Area
• Total
65,610 km2 (25,330 sq mi) (120th)
• Water (%)
4.4
Population
• 2020 estimate
ಟೆಂಪ್ಲೇಟು:IncreaseNeutral 22,156,000[] (57th)
• 2012 census
20,277,597[೧೦]
• Density
337.7/km2 (874.6/sq mi) (24th)
GDP (PPP)2022 estimate
• Total
Decrease $318.6 billion[೧೧] (60th)
• Per capita
Decrease $14,230[೧೧] (101th)
GDP (nominal)2022 estimate
• Total
Decrease $73.7 billion[೧೧] (79th)
• Per capita
Decrease $3,293[೧೧] (132th)
Gini (2016)39.8[೧೨]
medium
HDI (2021)Increase 0.782[೧೩]
high · 73rd
CurrencySri Lankan rupee (Rs) (LKR)
Time zoneUTC+5:30 (SLST)
Date format
  • dd-mm-yyyy
Driving sideleft
Calling code+94
ISO 3166 codeLK
Internet TLD
Website
gov.lk

ಚರಿತ್ರೆ

ಬದಲಾಯಿಸಿ

ಶ್ರೀಲಂಕೆಗೆ ಸಿಂಹಳ ಜನರು ಸುಮಾರು ಕ್ರಿ.ಪೂ. ೬ನೇ ಶತಮಾನದಲ್ಲಿ ಪ್ರಾಯಶಃ ಉತ್ತರ ಭಾರತದಿಂದ ಬಂದಿರಬಹುದೆಂದು ಊಹಿಸಲಾಗಿದೆ. ಕ್ರಿ.ಪೂ. ಮೂರನೇ ಶತಮಾನದಲ್ಲಿ ಇಲ್ಲಿಗೆ ಬೌದ್ಧ ಧರ್ಮವನ್ನು ಪರಿಚಯಿಸಲಾಯಿತು. ನಂತರ ದಕ್ಷಿಣ ಭಾರತದಿಂದ ತಮಿಳರ ವಲಸೆ ಆರಂಭವಾಗಿ ಕ್ರಿ.ಶ. ೧೩ನೇ ಶತಮಾನದ ಕಾಲಕ್ಕೆ ಸಾಕಷ್ಟು ತಮಿಳರ ಜನಸಂಖ್ಯೆ ಶ್ರೀಲಂಕೆಯಲ್ಲಿತ್ತು.

೧೬ನೆಯ ಶತಮಾನದಲ್ಲಿ ಶ್ರೀಲಂಕೆಯ ಕೆಲ ಭಾಗಗಳನ್ನು ಪೋರ್ಚುಗೀಸರು ವಶಪಡಿಸಿಕೊಂಡರು. ನಂತರ ಇತರ ಯೂರೋಪಿನ ದೇಶಗಳೂ ಬಂದವು. ೧೭೯೬ ರಲ್ಲಿ ಶ್ರೀಲಂಕಾ ಸಂಪೂರ್ಣವಾಗಿ ಬ್ರಿಟಿಷರ ಕೈಸೇರಿತು. ೧೯೪೮ ರಲ್ಲಿ ಸ್ವಾತಂತ್ರ್ಯ ಪಡೆದ ಶ್ರೀಲಂಕಾ, ೧೯೭೨ ರಲ್ಲಿ ತನ್ನ ಹೆಸರನ್ನು ಅಧಿಕೃತವಾಗಿ "ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ" ಎಂದು ಬದಲಾಯಿಸಿತು.

ಕಳೆದ ಎರಡು ದಶಕಗಳಲ್ಲಿ ಶ್ರೀಲಂಕೆಯ ತಮಿಳು ಜನರು ಮತ್ತು ಸಿಂಹಳೀಯರ ನಡುವೆ ಸಾಕಷ್ಟು ಅಶಾಂತಿ ಏರ್ಪಟ್ಟಿದ್ದು, ಎಲ್‍ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಾಕಷ್ಟು ತೊಂದರೆಗಳುಂಟಾಗಿವೆ. ೨೦೦೪ರಲ್ಲಿ ಒಂದು ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು.

ರಾಜಕೀಯ

ಬದಲಾಯಿಸಿ

ಶ್ರೀಲಂಕೆಯ ಈಗಿನ ಅಧ್ಯಕ್ಷರು ಮೈತೀಪಾಲ ಸಿರಿಸೇನಾ. ಈಗಿನ ಪ್ರಧಾನ ಮಂತ್ರಿಗಳು ವಿಕ್ರಮಸಿಘ್ಹ.

ಸಂಪರ್ಕಗಳು

ಬದಲಾಯಿಸಿ

ಪ್ರಮುಖ ಪ್ರವಾಸಿ ತಾಣಗಳು

ಬದಲಾಯಿಸಿ

ಶ್ರೀಲಂಕಾ ಅತೀ ಚಿಕ್ಕ ದ್ವೀಪ ಹಾಗೂ ಕಡಿಮೆ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ.ಇಲ್ಲಿ ಅನೇಕ ಬೀಚ್,ಹೋಟೆಲ್,ರೆಸ್ಟೋರೆಂಟ್‍ಗಳು ಅಭಿವೃಧ್ದಿಯ ಪಥದಲ್ಲಿವೆ.ಇದರ ಜೊತೆಗೆ ವನ್ಯಸಂಪತ್ತು ಕೂಡ ಪ್ರವಸಿಗರನ್ನು ಆಕರ್ಷಿಸುತ್ತಿದೆ.ಈ ದೇಶದ ದಕ್ಷಿಣ ಕರಾವಳಿಯಲ್ಲಿನ ಮೊಟ್ಟೆ ಇಡುವ ಆಮೆಗಳು,ವರ್ಣರಂಜಿತ ಪಕ್ಷಿಗಳು,ನಾನಾ ಬಗೆಯ ಮಂಗಗಳು,ಚಿರತೆಗಳು,ನೀಲಿ ತಿಮಿಂಗಿಲ, ಹಾರುವ ಮೀನು ಮತ್ತು ಡಾ‌‍ಲ್ಫಿನ್ಜತೆಗಿನ ಆಟ ಇಲ್ಲಿನ ಪ್ರವಾಸಿ ತಾಣದ ಪ್ರಮುಖ ಅಂಶಗಳು.ಈ ದೇಶ ಇತ್ತೀಚೆಗೆ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ.ಪರ್ವತಅರೋಹಿಗಲಿಗೆ ಶ್ರೀಲಂಕಾವು ಬಹಳ ಉಪಯುಕ್ತವಾದ ದೇಶ.ಶ್ರೀಲಂಕಾದ ಹೆದ್ದಾರಿಯ ಪಕ್ಕದಲ್ಲಿ ಆನೆಗಳಿಗೆ ಪಾರ್ಕ್ ಗಳನ್ನು ಮಾಡಿಸಲಾಗಿದೆ, ಗಾಲೆ ಎಂಬಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು,ಯೇಲ್ ನ್ಯಾಷನಲ್ ಪಾರ್ಕ್ ನಲ್ಲಿರುವ ಚಿರತೆಗಳು, ಶ್ರೀಲಂಕಾದ ಬೆಟ್ಟ ಪ್ರದೇಶಗಳಲ್ಲಿ ತಯಾರಾಗಿ ಮಾರುಕಟ್ಟೆಗೆ ಹೋಗುವ ಕಾಫಿ,ಟೀ ವ್ಯವಹಾರ, ಕಾಡಿನ ನಡುವಿನಲ್ಲಿರುವ ಪ್ರಾಚೀನ ಅವಶೇಷಗಳು ಇಲ್ಲಿನ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳು. ಈ ಕಾರಣಗಳಿಂದಾಗಿ ಪ್ರಸಿಧ್ದ ಪ್ರವಾಸಿಗ "ಮಾರ್ಕೋ ಪೋಲೋ" ಶ್ರೀಲಂಕಾ ದೇಶವನ್ನು ವಿಶ್ವದ ಅತ್ಯುತ್ತಮ ದ್ವೀಪಗಳ ಸಾಲಿಗೆ ಸೇರಿಸಿರುತ್ತಾನೆ.

ಕೊಲಂಬೋ

ಬದಲಾಯಿಸಿ

ಕೊಲಂಬೊ ಶ್ರೀಲಂಕಾದ ರಾಜಧಾನಿಯಾಗಿದೆ.ಮಾರ್ಚ್ನಿನಿಂದ ಮೇ ತಿಂಗಳಿನೊಳಗೆ ಇಲ್ಲಿಗೆ ಭೇಟಿ ನೀಡುವುದು ಉತ್ತಮ.ಇಲ್ಲಿ ಮಹಾದೇವಿ ವಿಹಾರ,ಪಾರ್ಕ್,ಹೂಗಳ ಮಾರುಕಟ್ಟೆ,ಅತ್ಯುತ್ತಮ ಶ್ರೇಣಿಯ ರೆಸ್ಟೋರೆಂಟ್ಗಳನ್ನು ನೋಡಬಹುದು.ಇಲ್ಲಿ ಜು‍ಲೈ ಆಗಸ್ಟ್ ತಿಂಗಳುಗಳ ನಡುವೆಯು ಇಲ್ಲಿನ ಪ್ರಸಿದ್ದ ಹಬ್ಬವಾದ "ವೇಲೇ" ‌ಫೆಸ್ಟಿವಲ್ ನಡೆಯುತ್ತದೆ.

ಕೊಲಂಬೊ (ಸಿಂಹಳ:කොළඹ, ಕಾರ್ಯನಿರ್ವಾಹಕ ಮತ್ತು ನ್ಯಾಯಾಂಗ ರಾಜಧಾನಿ ಮತ್ತು ಜನಸಂಖ್ಯೆಯ ಪ್ರಕಾರ ಶ್ರೀಲಂಕಾದ ಅತಿದೊಡ್ಡ ನಗರವಾಗಿದೆ. ಬ್ರೂಕಿಂಗ್ಸ್ ಸಂಸ್ಥೆಯ ಪ್ರಕಾರ, ಕೊಲಂಬೊ ಮೆಟ್ರೋಪಾಲಿಟನ್ ಪ್ರದೇಶವು 5.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಮತ್ತು ಪುರಸಭೆಯಲ್ಲಿ ೭೫೨,೯೯೩ ಜನಸಂಖ್ಯೆಯನ್ನು ಹೊಂದಿದೆ. ಇದು ಆರ್ಥಿಕ ಕೇಂದ್ರವಾಗಿದೆ. ದ್ವೀಪ ಮತ್ತು ಪ್ರವಾಸಿ ತಾಣ.ಇದು ದ್ವೀಪದ ಪಶ್ಚಿಮ ಕರಾವಳಿಯಲ್ಲಿದೆ ಮತ್ತು ಶ್ರೀಲಂಕಾದ ಶಾಸಕಾಂಗ ರಾಜಧಾನಿ ಶ್ರೀ ಜಯವರ್ಧನೆಪುರ ಕೊಟ್ಟೆ ಮತ್ತು ದೆಹಿವಾಲಾ-ಮೌಂಟ್ ಲ್ಯಾವಿನಿಯಾವನ್ನು ಒಳಗೊಂಡಿರುವ ಗ್ರೇಟರ್ ಕೊಲಂಬೊ ಪ್ರದೇಶದ ಪಕ್ಕದಲ್ಲಿದೆ. ಕೊಲಂಬೊವನ್ನು ಹೆಚ್ಚಾಗಿ ರಾಜಧಾನಿ ಎಂದು ಕರೆಯಲಾಗುತ್ತದೆ ಶ್ರೀ ಜಯವರ್ಧನೆಪುರ ಕೊಟ್ಟೆ ಕೊಲಂಬೊದ ನಗರ/ಉಪನಗರ ಪ್ರದೇಶದಲ್ಲಿದೆ.ಇದು ಪಶ್ಚಿಮ ಪ್ರಾಂತ್ಯದ ಆಡಳಿತ ರಾಜಧಾನಿ ಮತ್ತು ಕೊಲಂಬೊ ಜಿಲ್ಲೆಯ ಜಿಲ್ಲಾ ರಾಜಧಾನಿಯಾಗಿದೆ. ಕೊಲಂಬೊ ಆಧುನಿಕ ಜೀವನ, ವಸಾಹತುಶಾಹಿ ಕಟ್ಟಡಗಳು ಮತ್ತು ಮಿಶ್ರಣವನ್ನು ಹೊಂದಿರುವ ಕಾರ್ಯನಿರತ ಮತ್ತು ರೋಮಾಂಚಕ ನಗರವಾಗಿದೆ. ಸ್ಮಾರಕಗಳು.

ಅದರ ದೊಡ್ಡ ಬಂದರು ಮತ್ತು ಪೂರ್ವ-ಪಶ್ಚಿಮ ಸಮುದ್ರ ವ್ಯಾಪಾರ ಮಾರ್ಗಗಳ ಉದ್ದಕ್ಕೂ ಅದರ ಕಾರ್ಯತಂತ್ರದ ಸ್ಥಾನದಿಂದಾಗಿ, ಕೊಲಂಬೊವು ಪ್ರಾಚೀನ ವ್ಯಾಪಾರಿಗಳಿಗೆ ೨,೦೦೦ ವರ್ಷಗಳ ಹಿಂದೆ ಪರಿಚಿತವಾಗಿತ್ತು.[ಉಲ್ಲೇಖದ ಅಗತ್ಯವಿದೆ] ಶ್ರೀಲಂಕಾವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಬಿಟ್ಟುಕೊಟ್ಟಾಗ ಇದನ್ನು ದ್ವೀಪದ ರಾಜಧಾನಿಯನ್ನಾಗಿ ಮಾಡಲಾಯಿತು. ೧೮೧೫, ಮತ್ತು ೧೯೪೮ ರಲ್ಲಿ ರಾಷ್ಟ್ರವು ಸ್ವತಂತ್ರವಾದಾಗ ರಾಜಧಾನಿಯಾಗಿ ಅದರ ಸ್ಥಾನಮಾನವನ್ನು ಉಳಿಸಿಕೊಳ್ಳಲಾಯಿತು. ೧೯೭೮ ರಲ್ಲಿ, ಆಡಳಿತಾತ್ಮಕ ಕಾರ್ಯಗಳನ್ನು ಶ್ರೀ ಜಯವರ್ಧನೆಪುರ ಕೊಟ್ಟೆಗೆ ಸ್ಥಳಾಂತರಿಸಿದಾಗ, ಕೊಲಂಬೊವನ್ನು ಶ್ರೀಲಂಕಾದ ವಾಣಿಜ್ಯ ರಾಜಧಾನಿಯಾಗಿ ಗೊತ್ತುಪಡಿಸಲಾಯಿತು.

ಅನೇಕ ನಗರಗಳಂತೆ, ಕೊಲಂಬೊದ ನಗರ ಪ್ರದೇಶವು ಒಂದೇ ಸ್ಥಳೀಯ ಪ್ರಾಧಿಕಾರದ ಗಡಿಯನ್ನು ಮೀರಿ ವಿಸ್ತರಿಸಿದೆ, [ಉಲ್ಲೇಖದ ಅಗತ್ಯವಿದೆ] ಇತರ ಪುರಸಭೆ ಮತ್ತು ನಗರ ಸಭೆಗಳಾದ ಶ್ರೀ ಜಯವರ್ಧನೆಪುರ ಕೊಟ್ಟೆ ಮುನ್ಸಿಪಲ್ ಕೌನ್ಸಿಲ್, ದೆಹಿವಾಲಾ ಮೌಂಟ್ ಲ್ಯಾವಿನಿಯಾ ಮುನ್ಸಿಪಲ್ ಕೌನ್ಸಿಲ್, ಕೊಲೊನ್ನಾವಾ ನಗರ ಸಭೆ, ಕಡುವೆಲಾ ಮುನ್ಸಿಪಲ್ ಕೌನ್ಸಿಲ್, ಮತ್ತು ಕೋಟಿಕಾವಟ್ಟೆ ಮುಲ್ಲೇರಿಯಾವಾ ಪ್ರಾಂತೀಯ ಸಭೆ.[ಉಲ್ಲೇಖದ ಅಗತ್ಯವಿದೆ] ಶ್ರೀಲಂಕಾದ ಬಹುಪಾಲು ಕಾರ್ಪೊರೇಟ್ ಕಛೇರಿಗಳು, ರೆಸ್ಟೋರೆಂಟ್‌ಗಳು ಮತ್ತು ಮನರಂಜನಾ ಸ್ಥಳಗಳಿಗೆ ಮುಖ್ಯ ನಗರವು ನೆಲೆಯಾಗಿದೆ. ಕೊಲಂಬೊದಲ್ಲಿನ ಪ್ರಸಿದ್ಧ ಹೆಗ್ಗುರುತುಗಳು ಗಾಲ್ ಫೇಸ್ ಗ್ರೀನ್, ವಿಹಾರಮಹಾದೇವಿ ಪಾರ್ಕ್, ಬೈರಾ ಲೇಕ್, ಕೊಲಂಬೊ ರೇಸ್‌ಕೋರ್ಸ್, ಪ್ಲಾನೆಟೋರಿಯಂ, ಕೊಲಂಬೊ ವಿಶ್ವವಿದ್ಯಾಲಯ, ಮೌಂಟ್ ಲ್ಯಾವಿನಿಯಾ ಬೀಚ್, ಡೆಹಿವಾಲಾ ಝೂಲಾಜಿಕಲ್ ಗಾರ್ಡನ್, ನೆಲುಮ್ ಪೊಕುನಾ ಥಿಯೇಟರ್, ಒನ್ ಗಾಲ್ ಫೇಸ್, ಗಂಗಾರಾಮಾಯ ದೇವಸ್ಥಾನ, ಡಚ್ ಮ್ಯೂಸಿಯಂ, ಕೊಲಂಬೊ ಲೋಟಸ್ ಟವರ್ ಜೊತೆಗೆ ರಾಷ್ಟ್ರೀಯ ವಸ್ತುಸಂಗ್ರಹಾಲಯ.

ಕಡಲ ತೀರಗಳು

ಬದಲಾಯಿಸಿ

ಶ್ರೀಲಂಕಾದ ಪಾಮ್ ಬೀಚ್ ಸುಮಾರು ೧೬೦೦ ಕಿ.ಮೀವರೆಗೆ ವ್ಯಾಪಿಸಿರುವುದು.ಇದರ ಪಕ್ಕದಲ್ಲಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇರುವುದರಿಂದ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚು.ಗಾಲೆಯಲ್ಲಿರುವ "ಅನ್ ವಾಟೂನಾ" ಕಡಲ ತೀರ ಪ್ರಪಂಚದ ಮುಂಚೂಣಿಯಲ್ಲಿರುವ ೧೫ ಕಡಲ ತೀರಗಳ ಪಟ್ಟಿಯಲ್ಲಿದೆ.ಇಲ್ಲಿನ ಬೆಂಟೋಟ ಕಡಲ ತೀರದಲ್ಲಿ ಡೈವಿಂಗ್ ಮತ್ತು ಸ್ನಾರ್ಕ್ ಲಿಂಗ್ ಮಾಡುವ ಅವಕಾಶವಿದೆ.ಹವಳದ ಮತ್ತು ನೀರಿನೊಳಗಿರುವ ಗುಹೆಗಳು ಅಭಿವ್ರದ್ದಿಯ ಪಥದಲ್ಲಿದೆ.

ಆಡಮ್ಸ್ ಪೀಕ್

ಬದಲಾಯಿಸಿ

ಶ್ರೀಲಂಕಾದ ಅತ್ಯುನ್ನತ ಪರ್ವತ ಶ್ರೇಣಿಯಲ್ಲಿ ಒಂದಾಗಿರುವ ಇದು ಆ ದೇಶದ ಜಾನಪದ ವಿದ್ವತ್ತಿಗೂ ಕಾರಣವಾಗಿದೆ.ಇದಕ್ಕೆ ಮುಖ್ಯ ಕಾರಣ ಶ್ರೀಪಾದ ಇರುವುದು ಇದೇ ಜಾಗದಲ್ಲಿ.ಬೌದ್ಧ,ಹಿಂದು,ಮುಸ್ಲಿಂ,ಕ್ರೈಸ್ತರೆಲ್ಲರೂ ಈ ಪರ್ವತ ಶ್ರೇಣಿಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಿದ್ದಾರೆ. ಈ ಪರ್ವತ ಶ್ರೇಣಿಯನ್ನು ತಲುಪಬೇಕಾದರೆ ಸುಮಾರು ೪೮೦೦ ಮೆಟ್ಟಿಲುಗಳನ್ನು ದಾಟಿಕೊಂಡು ಸಾಗಬೇಕು.

ಅನುರಾಧ ಪುರ

ಬದಲಾಯಿಸಿ

ಸಾವಿರಾರು ವರ್ಷಗಳ ಹಿಂದೆ ಅನುರಾಧಪುರವು ಶ್ರೀಲಂಕಾ ದೇಶದ ರಾಜಧಾನಿಯಾಗಿತ್ತು. ಈ ಪ್ರಾಚೀನ ನಗರಿಯನ್ನು ನೋಡಿದಾಗ ಇಲ್ಲಿ ಬಹು ಹಿಂದೆಯೇ ನಾಗರಿಕತೆಯು ಚಾಲ್ತಿಯಲ್ಲಿತ್ತು ಎಂದು ತಿಳಿದು ಬರುತ್ತದೆ.ಈ ಊರಿನ ರಚನೆಯನ್ನು ಕೂಡ ಬಹಳ ಯೋಜನಾಬದ್ದವಾಗಿ ಮಾಡಲಾಗಿದೆ. ಇಲ್ಲಿನ ಪ್ರಾಚೀನ ದೇವಸ್ಧಾನಗಳ ಅವಶೇಷಗಳು, ಅರಮನೆ, ದೈತ್ಯ ಗಾತ್ರದ ಸ್ತೂಪಗಳು ಇಲ್ಲಿನ ಇತಿಹಾಸವನ್ನು ವಿವರಿಸುತ್ತದೆ.

ಡಂಬುಲ್ಲ ಗುಹೆ ದೇವಾಲಯ

ಬದಲಾಯಿಸಿ

ಶ್ರೀಲಂಕಾದ ಬೌದ್ಧ ಪರಂಪರೆಯ ಒಂದು ಒಳನೋಟವು ಡಂಬುಲ್ಲ ಗುಹೆ ದೇವಾಲಯದಲ್ಲಿ ಕಾಣಸಿಗುತ್ತದೆ. ಇಲ್ಲಿ ದೈತ್ಯಕಾರದ ಕಲ್ಲಿನ ಶಿಲಾ ಸ್ತರದಲ್ಲಿ ಧಾರ್ಮಿಕ ಭಿತ್ತಿ ಚಿತ್ರಗಳನ್ನು ಸಂಗ್ರಹಿಸಲಾಗಿದೆ.

ಗಾಲೆ ಡಚ್ ಕೋಟೆ

ಬದಲಾಯಿಸಿ

ಇದು ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ.ಇಲ್ಲಿ ನಡೆಯುವ ಸಾಹಿತ್ಯ ಉತ್ಸವ ಬಹಳ ಜನಪ್ರಿಯವಾಗಿದೆ.ಈ ಪ್ರದೇಶ ಕರಿ ಮರದ ಕೆತ್ತನೆ ಹಾಗೂ ವಜ್ರದ ಹೊಳಪು ಹೊಂದಿರುವ ಕರಕುಶಲ ಕೇಂದ್ರವಾಗಿಯೂ ಪ್ರಸಿದ್ದಿಯಾಗಿದೆ.

ನೋಡಲೇ ಬೇಕಾದ ಸ್ಥಳಗಳು

ಬದಲಾಯಿಸಿ
  • ಕ್ಯಾಂಡಿಯನ್ ರಾಜ ಮನೆತನದ ಕುರುಹುಗಳಿರುವ ಕ್ಯಾಂಡಿ ಪ್ರದೇಶ.
  • ರಾಫ್ಟಿಂಗ್ ಹಬ್ ಆಗಿರುವ ಕೀಟುಗುಲ್ಲಾ
  • ನೂರಕ್ಕೂ ಅಧಿಕ ಜಾತಿಯ ಪಾರಿವಳಗಳಿರುವ 'ಮೀರಿಸಾ'
  • ಏಷ್ಯಾದ ಆನೆಗಳಿರುವ ಪಿನಿನಾವಾಲಾ
  • ದೊಡ್ಡ ಗಾತ್ರದ ಬುದ್ಧನ ಪ್ರತಿಮೆಗಳಿರುವ ಪೊಲೊನ್ನಾ
  • ರಾಯಲ್ ಅರಮನೆಗಳು
  • ಆರ್.ಪ್ರೇಮದಾಸ ಸ್ಟೇಡಿಯಂ
  • ಸಿಗಿರಿಯಾ ರಾಕ್ ಫೊರ್ಟ್ರೆಸ್
  • ಅಡಾವಾಲೇ ನ್ಯಾಷನಲ್ ಪಾರ್ಕ್ ಮತ್ತು ಯೇಲ್ ನ್ಯಾಷನಲ್ ಪಾರ್ಕ್

ಇದನ್ನು ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Sri Jayewardenepura Kotte". Encyclopædia Britannica. Retrieved 12 May 2020.
  2. "Colombo". Encyclopædia Britannica. Retrieved 12 May 2020.
  3. "Official Languages Policy". languagesdept.gov.lk. Department of Official Languages. Archived from the original on 12 ಏಪ್ರಿಲ್ 2021. Retrieved 20 May 2021.
  4. "South Asia: Sri Lanka". CIA. 22 September 2021.
  5. "2018 Report on International Religious Freedom: Sri Lanka". United States Department of State. Retrieved 3 March 2022.
  6. "Constitution of Sri Lanka" (PDF). Parliament of Sri Lanka. Retrieved 24 October 2022.
  7. De Silva, K. M. (1981). A History of Sri Lanka. University of California Press. ISBN 978-0-19-561655-2. A History of Sri Lanka.
  8. Nicholas, C. W.; Paranavitana, S. (1961). A Concise History of Ceylon. Colombo University Press.
  9. "Mid‐year Population Estimates by District & Sex, 2016 ‐ 2021". statistics.gov.lk. Department of Census and Statistics. Retrieved 1 October 2021.
  10. "Census of Population and Housing 2011 Enumeration Stage February–March 2012" (PDF). Department of Census and Statistics – Sri Lanka. Archived from the original (PDF) on 6 December 2013. Retrieved 15 July 2014.
  11. ೧೧.೦ ೧೧.೧ ೧೧.೨ ೧೧.೩ "World Economic Outlook Database, October 2022". IMF.org. International Monetary Fund. October 2022. Retrieved October 11, 2022.
  12. "Gini Index". World Bank.
  13. "Human Development Report 2021/2022" (PDF) (in ಇಂಗ್ಲಿಷ್). United Nations Development Programme. 8 September 2022. Retrieved 8 September 2022.
  14. A BRIEF HISTORY OF SRI LANKA localhistories.org