ಭಾರತೀಯ ಉಪಖಂಡ
Population | 1.8 billion |
---|---|
Countries | List
|
Dependencies | British Indian Ocean Territory |
Languages | |
Largest cities |
ಭಾರತೀಯ ಉಪಖಂಡ, ಅಥವಾ ಸರಳವಾಗಿ ಉಪಖಂಡ, ದಕ್ಷಿಣ ಏಷ್ಯಾದ ಭೌಗೋಳಿಕ ಪ್ರದೇಶವಾಗಿದೆ. ಇದು ಭಾರತೀಯ ಫಲಕ (ಟೆಕ್ಟೊನಿಕ್ ಪ್ಲೆಟ್) ಹಿಮಾಲಯದಿಂದ ದಕ್ಷಿಣಕ್ಕೆ ಹಿಂದೂ ಮಹಾಸಾಗರಕ್ಕೆ ಚಾಚಿಕೊಂಡಿದೆ. ಭಾರತೀಯ ಉಪಖಂಡವು ಸಾಮಾನ್ಯವಾಗಿ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳನ್ನು ಒಳಗೊಂಡಿದೆ . [೧] [೨] [೩] ಭೂವೈಜ್ಞಾನಿಕವಾಗಿ, ಭಾರತೀಯ ಉಪಖಂಡವು, ಸುಮಾರು ೫.೫ ಕೊಟಿ ವರ್ಶಗಳ ಹಿಂದಿನ ಕ್ರಟೇಶಿಯಸ್ ಕಾಲದಲ್ಲಿದ್ದ ಗೊಂಡ್ವಾನ ಎಂಬಮಹಾಖಂಡದ ಬಿರುಕುಗೊಂಡ ಒಂದು ಭೂಪ್ರದೆಶಕ್ಕೆ ಸೆರಿದ್ದು. [೪] ಭೌಗೋಳಿಕವಾಗಿ, ಇದು ದಕ್ಷಿಣ-ಮಧ್ಯ ಏಷ್ಯಾದ ಪರ್ಯಾಯ ದ್ವೀಪ ಪ್ರದೇಶವಾಗಿದ್ದು, ಉತ್ತರದಲ್ಲ ಹಿಮಾಲಯ, ಪಶ್ಚಿಮದಲ್ಲಿ ಹಿಂದೂ ಕುಶ್ ಮತ್ತು ಪೂರ್ವದಲ್ಲಿ ಅರಕಾನೀಸ್ ನಿಂದ ನಿರೂಪಿಸಲಾಗಿದೆ. [೫] ಭಾರತೀಯ ಉಪಖಂಡ ಮತ್ತು ದಕ್ಷಿಣ ಏಷ್ಯಾ ಪದಗಳನ್ನು ಕೆಲವೊಮ್ಮೆ ಈ ಪ್ರದೇಶವನ್ನು ಸೂಚಿಸಲು ಪರ್ಯಾಯವಾಗಿ ಬಳಸಲಾಗುತ್ತದೆ, ಆದರೂ ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯ ಪದವು ಸಾಮಾನ್ಯವಾಗಿ ಅಫ್ಘಾನಿಸ್ತಾನವನ್ನು ಸಹ ಒಳಗೊಂಡಿದೆ.
ಹೆಸರು
ಬದಲಾಯಿಸಿಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನ ಪ್ರಕಾರ, ಉಪಖಂಡ ಎಂಬ ಪದವು "ಒಂದು ಪ್ರತ್ಯೇಕ ಭೌಗೋಳಿಕ, ರಾಜಕೀಯ ಅಥವಾ ಸಾಂಸ್ಕೃತಿಕ ಗುರುತನ್ನು ಹೊಂದಿರುವ ಖಂಡದ ಉಪವಿಭಾಗ" ಹಾಗು "ಒಂದು ಖಂಡಕ್ಕಿಂತಲು ಸ್ವಲ್ಪ ಕಡಿಮೆಯಾದ ದೊಡ್ಡ ಭೂಪ್ರದೇಶ" ಎಂದು ಸೂಚಿಸಲಾಗಿದೆ. [೬] [೭] ಆರಂಭಿತ ಇಪ್ಪತ್ತನೇ ಶತಮಾನದಿಂದಲು ಹೆಚ್ಚಿನ ಭಾರತ ಪ್ರದೇಶವು ಬ್ರಿಟಿಷ್ ಸಾಮ್ರಾಜ್ಯದ ಆಡಳಿತದಲ್ಲಿದ್ದು ಮತ್ತು ಈ ಉಪಖಂಡ ಎಂಬ ಪದವು ಬ್ರಿಟಿಷ್ ಭಾರತ ಮತ್ತು ಬ್ರಿಟಿಷ್ ಪ್ಯಾರಾಮೌಂಟ್ಸಿ ಅಡಿಯಲ್ಲಿದ್ದ ಸಂಸ್ಥಾನಗಳನ್ನು ಸೂಚಿಸಲು ಸುಲಭವಾಗ್ಗಿದ್ದರಿಂದ ಇದರ ಬಳಕೆಯನ್ನು ಸಾಮಾನ್ಯವಾಗಿ ಭಾರತ ಉಪಖಂಡಕ್ಕೆ ಸೂಚಿಸಲಾಗಿದೆ.
ಭಾರತೀಯ ಉಪಖಂಡ ಎಂಬ ಪದವು ಬ್ರಿಟಿಷ್ ಸಾಮ್ರಾಜ್ಯ ಮತ್ತು ಅದರ ಉತ್ತರಾಧಿಕಾರಿಗಳಲ್ಲಿ ಸಾಮಾನ್ಯವಾಗಿದೆ, ಆದರೆ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ದಕ್ಷಿಣ ಏಷ್ಯಾ ಎಂಬ ಪದವು ಹೆಚ್ಚು ಸಾಮಾನ್ಯವಾಗಿದೆ. ಇತಿಹಾಸಕಾರರಾದ ಸುಗತ ಬೋಸ್ ಮತ್ತು ಆಯೇಷಾ ಜಲಾಲ್ ಅವರ ಪ್ರಕಾರ "ಇತ್ತೀಚಿನ ಮತ್ತು ತಟಸ್ಥ ಭಾಷೆಯಲ್ಲಿ" ಭಾರತೀಯ ಉಪಖಂಡವನ್ನು ದಕ್ಷಿಣ ಏಷ್ಯಾ ಎಂದು ಕರೆಯಲ್ಪಟ್ಟಿದೆ . ಇಂಡೋಲಾಜಿಸ್ಟ್ ರೊನಾಲ್ಡ್ ಬಿ. ಇಂಡೆನ್ ಅವರು ದಕ್ಷಿಣ ಏಷ್ಯಾ ಎಂಬ ಪದದ ಬಳಕೆ ಹೆಚ್ಚು ವ್ಯಾಪಕವಾಗಿ ಹರಡುತ್ತಿದೆ ಎಂದು ವಾದಿಸುತ್ತಾರೆ ಏಕೆಂದರೆ ಇದು ಪೂರ್ವ ಏಷ್ಯಾದಿಂದ ಈ ಪ್ರದೇಶವನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಈ ಪ್ರದೇಶದ ಸಮಕಾಲೀನ ರಾಜಕೀಯ ಗಡಿಗಳನ್ನು ಪ್ರತಿಬಿಂಬಿಸುವುದರಿಂದ ದಕ್ಷಿಣ ಏಷ್ಯಾ ಎಂಬ ಪದವು ಹೆಚ್ಚು ನಿಖರವಾಗ್ಗಿದ್ದು ಭಾರತೀಯ ಉಪಖಂಡ ಪದವನ್ನು ಬದಲಿಸುತ್ತದೆ, ಈ ಪದವು ಪ್ರದೇಶದ ವಸಾಹತು ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿದೆ ಮತ್ತು ಹೆಚ್ಛುವರಿಯಾಗಿ ಈ ಪದವನ್ನು ಇನ್ನೂ ಟೈಪೊಲಾಜಿಕಲ್ ಅಧ್ಯಯನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಭಾರತದ ವಿಭಜನೆಯ ನಂತರ, ಪಾಕಿಸ್ತಾನದ ನಾಗರಿಕರು (ಇದು 1947 ರಲ್ಲಿ ಬ್ರಿಟಿಷ್ ಭಾರತದಿಂದ ಸ್ವತಂತ್ರವಾಯಿತು) ಮತ್ತು ಬಾಂಗ್ಲಾದೇಶ ನಾಗರಿಕರು (1971 ರಲ್ಲಿ ಪಾಕಿಸ್ತಾನದಿಂದ ಸ್ವತಂತ್ರವಾಯಿತು) ಭಾರತದ ಪ್ರಬಲ ಸ್ಥಾನದಿಂದಾಗಿ ಭಾರತದ ಉಪಖಂಡ ಪದದ ಬಳಕೆಯನ್ನು ಆಕ್ರಮಣಕಾರಿ ಮತ್ತು ಸಂಶಯಾಸ್ಪದವೆಂದು ಗ್ರಹಿಸುತ್ತಾರೆ, ಅದರಂತೆ ಆ ದೇಶಗಳಲ್ಲಿ ಇದನ್ನು ಬಹಳ ಕಡಿಮೆಯಾಗಿ ಬಳಸಲಾಗುತ್ತಿದೆ. ಆದರೆ ಈ ಪ್ರದೇಶದ ಸಾಮಾಜಿಕ-ಸಾಂಸ್ಕೃತಿಕ ಸಾಮ್ಯತೆಗಳಿಂದಾಗಿ ಅನೇಕ ಭಾರತೀಯ ವಿಶ್ಲೇಷಕರು ಈ ಪದವನ್ನು ಬಳಸಲು ಬಯಸುತ್ತಾರೆ. ಈ ಪ್ರದೇಶವನ್ನು "ಏಷ್ಯನ್ ಉಪಖಂಡ", [೮] "ದಕ್ಷಿಣ ಏಷ್ಯಾ ಉಪಖಂಡ", ಹಾಗೂ "ಭಾರತ" ಅಥವಾ " ಗ್ರೇಟರ್ ಇಂಡಿಯಾ" ಎಂಬ ಪದಬಳಿಕೆಯಲ್ಲು ಶಾಸ್ತ್ರೀಯ ಮತ್ತು ಪೂರ್ವ ಆಧುನಿಕ ಅರ್ಥದಲ್ಲಿ ಕರೆಯಲಾಗಿದೆ.
ಭೂವಿಜ್ಞಾನ
ಬದಲಾಯಿಸಿಭಾರತೀಯ ಉಪಖಂಡವು ಹಿಂದೆ ಗೊಂಡ್ವಾನ ಭಾಗವಾಗಿತ್ತು, ಇದು ನಿಯೋಪ್ರೊಟೆರೊಜೊಯಿಕ್ ಮತ್ತು ಆರಂಭಿಕ ಪ್ಯಾಲಿಯೋಜೋಯಿಕ್ ಸಮಯದಲ್ಲಿ ರೂಪುಗೊಂಡ ಸೂಪರ್ ಖಂಡವಾಗಿದೆ. [೪] ಮೆಸೊಜೊಯಿಕ್ ಸಮಯದಲ್ಲಿ ಗೊಂಡ್ವಾನಾ ಒಡೆಯಲು ಪ್ರಾರಂಭಿಸಿತು, ಭಾರತೀಯ ಉಪಖಂಡವು ಅಂಟಾರ್ಟಿಕಾದಿಂದ ೧೩-೧೨ ಕೊಟಿ ವರ್ಷಗಳ ಹಿಂದೆ [೯] ಮತ್ತು ಮಡಗಾಸ್ಕರ್ ಸುಮಾರು ೯ ಕೊಟಿ ವರ್ಷಗಳ ಹಿಂದೆ ಬೇರ್ಪಟ್ಟಿತು. [೧೦] ಭಾರತೀಯ ಉಪಖಂಡವು ತರುವಾಯ ಉತ್ತರ-ಈಶಾನ್ಯ ದಿಕ್ಕಿಗೆ ಚಲಿಸಿತು, ಸುಮಾರು ೫.೫ ಕೊಟಿ ವರ್ಶಗಳ ಹಿಂದೆ ಪ್ಯಾಲಿಯೊಸೀನ್ ಅಂತ್ಯದಲ್ಲಿ ಯುರೇಷಿಯನ್ ಫಲಕಗಳಿಗೆ (ಟೆಕ್ಟೊನಿಕ್ ಪ್ಲೆಟ್) ಡಿಕ್ಕಿ ಹೊಡೆಯಿತು . [೪] ಯುರೇಷಿಯನ್ ಮತ್ತು ಭಾರತೀಯ ಉಪಖಂಡದ ಫಲಕಗಳು ಸಂಧಿಸುವ ವಲಯವು ಭೌಗೋಳಿಕವಾಗಿ ಇಂದಿಗೂ ಸಕ್ರಿಯವಾಗಿದೆ ಹಾಗು ದೊಡ್ಡ ಭೂಕಂಪಗಳಿಗೆ ಒಳಗಾಗುತ್ತದೆ. [೧೧] [೧೨]
ಭೌತಿಕವಾಗಿ, ಇದು ದಕ್ಷಿಣ-ಮಧ್ಯ ಏಷ್ಯಾದ ಪರ್ಯಾಯ ದ್ವೀಪ ಪ್ರದೇಶವಾಗಿದ್ದು, ಉತ್ತರದಲ್ಲಿ ಹಿಮಾಲಯ, ಪಶ್ಚಿಮದಲ್ಲಿ ಹಿಂದೂ ಕುಶ್ ಮತ್ತು ಪೂರ್ವದಲ್ಲಿ ಅರಕಾನೀಸ್ ನಿಂದ ನಿರೂಪಿಸಲಾಗಿದೆ. [೫] [೧೩] ಇದು ದಕ್ಷಿಣಕ್ಕೆ ಹಿಂದೂ ಮಹಾಸಾಗರದವರೆಗೆ, ನೈರುತ್ಯಕ್ಕೆ ಅರಬ್ಬಿ ಸಮುದ್ರದವರೆಗೆ ಮತ್ತು ಆಗ್ನೇಯಕ್ಕೆ ಬಂಗಾಳ ಕೊಲ್ಲಿ ವರೆಗೆ ವಿಸ್ತರಿಸಿದೆ. ಈ ಪ್ರದೇಶದ ಬಹುಪಾಲು ಭಾರತೀಯ ಫಲಕದ ಮೇಲೆ ನಿಂತಿದೆ ಮತ್ತು ದೊಡ್ಡ ಪರ್ವತ ತಡೆಗಳಿಂದ ಏಷ್ಯಾದ ಉಳಿದ ಭಾಗಗಳಿಂದ ಪ್ರತ್ಯೇಕಿಸಲ್ಪಟ್ಟಿದೆ. [೧೪] ಲಕ್ಕಡಿವ್ ದ್ವೀಪಗಳು, ಮಾಲ್ಡೀವ್ಸ್ ಮತ್ತು ಚಾಗೋಸ್ ದ್ವೀಪಸಮೂಹವು ಭಾರತೀಯ ಫಲಕದಲ್ಲಿರುವ ಹವಳದ ಅಟಾಲ್‌ಗಳು (ಕೊರಲ್ ರೀಫ಼್), ಕೇಸ್ (ತೆಳ ಭಾಗದ ದ್ವೀಪ) ಮತ್ತು ಫಾರೋಗಳ (ದ್ವೀಪಗಳ ಸಮೂಹ) ಮೂರು ಸರಣಿಗಳಾಗಿದ್ದು,ಕ್ರಿಟೇಶಿಯಸ್ ಮತ್ತು ಆರಂಭಿಕ ಸೆನೋಜೋಯಿಕ್ ಸಮಯದಲ್ಲಿಚಾಗೋಸ್ -ಲಕ್ಕಡಿವ್ ರಿಡ್ಜ್, ಜಲಾಂತರ್ಗಾಮಿ ಪರ್ವತಶ್ರೇಣಿಯು ಭಾರತೀಯ ಫಲಕವು ಉತ್ತರದ ದಿಕ್ಚ್ಯುತಿಯ ಮೂಲಕ ರೀಯೂನಿಯನ್ ಹಾಟ್‌ಸ್ಪಾಟ್‌ನಿಂದ ಉತ್ಪತ್ತಿಯಾಯಿತು . [೧೫] [೧೬] ಮಾಲ್ಡೀವ್ಸ್ ದ್ವೀಪಸಮೂಹವು ಜ್ವಾಲಾಮುಖಿ ಬಸಾಲ್ಟ್ ಹೊರಹರಿವಿನ ನೆಲಮಾಳಿಗೆಯಿಂದ ಸುಮಾರು 2000 ಮೀಟರ್ ಆಳದಿಂದ ಲಕ್ಕಾಡಿವ್ಸ್ ಮತ್ತು ಗ್ರೇಟ್ ಚಾಗೋಸ್ ಬ್ಯಾಂಕ್ ನಡುವಿನ ಪರ್ವತದ ಮಧ್ಯ ಭಾಗವನ್ನು ರೂಪಿಸುತ್ತದೆ.
ಮಾನವಶಾಸ್ತ್ರಜ್ಞ ಜಾನ್ ಆರ್. ಲುಕೆಕ್ಸ್ ರವರ ಪ್ರಕಾರ "ಭಾರತ ಉಪ್ಪಖಂಡವು ದಕ್ಶಿಣ ಏಶ್ಯಾದ ಭಾಗದ ಬಹುದೊಡ್ದ ಭೂಪ್ರದೇಶವನ್ನು ಒಳಗೊಂಡಿದೆ" ಇತಿಹಾಸಕಾರ ಬಿ.ಎನ್.ಮುಖರ್ಜಿ ಅವರ ಪ್ರಕಾರ, "ಭ್ಹಾರತ ಉಪಖಂಡವು ಒಂದು ಅವಿಭಾಜ್ಯ ಭೌಗೋಳಿಕ ಘಟಕವಾಗಿದೆ." ಭೂಗೋಳಶಾಸ್ತ್ರಜ್ಞ ಡಡ್ಲಿ ಸ್ಟಾಂಪ್ ಪ್ರಕಾರ, "ಭಾರತದ ಉಪಖಂಡವು ಪ್ರಪಂಚದ ಯಾವುದೇ ಮುಖ್ಯ ಭೂಭಾಗಕ್ಕಿಂತ ಪ್ರಕೃತಿಯಿಂದಲೇ ಒಂದು ಪ್ರದೇಶವಾಗಿ ಅಥವಾ 'ಸಾಮ್ರಾಜ್ಯ'ವಾಗಿ ಉತ್ತಮವಾಗಿ ಗುರುತಿಸಲ್ಪಟ್ಟಿದೆ." [೧೭][ಅವಿಶ್ವಾಸನೀಯ ]
ದಕ್ಷಿಣ ಏಷ್ಯಾದ ಈ ನೈಸರ್ಗಿಕ ಭೌತಿಕ ಭೂಪ್ರದೇಶವು ಭಾರತೀಯ ಫಲಕದ ಒಣ ಭೂಮಿ ಭಾಗವಾಗಿದ್ದು, ಇದನ್ನು ಯುರೇಷಿಯಾದ ಉಳಿದ ಭಾಗಗಳಿಂದ ತುಲನಾತ್ಮಕವಾಗಿ ಪ್ರತ್ಯೇಕಿಸಲಾಗಿದೆ. [೧೮] ಹಿಮಾಲಯಗಳು (ಪೂರ್ವದಲ್ಲಿ ಬ್ರಹ್ಮಪುತ್ರ ನದಿಯಿಂದ ಪಶ್ಚಿಮದಲ್ಲಿನ ಸಿಂಧೂ ನದಿಯವರೆಗೆ ), ಕರಕೋರಂ (ಪೂರ್ವದಲ್ಲಿ ಸಿಂಧೂ ನದಿಯಿಂದ ಪಶ್ಚಿಮದಲ್ಲಿ ಯಾರ್ಕಂದ್ ನದಿಯವರೆಗೆ ) ಮತ್ತು ಹಿಂದು ಕುಶ್ ಪರ್ವತಗಳು (ಯಾರ್ಕಂಡ್ ನದಿಯಿಂದ ಪಶ್ಚಿಮಕ್ಕೆ) ಅದರ ಉತ್ತರ ಗಡಿಯನ್ನು ರೂಪಿಸುತ್ತವೆ. ಪಶ್ಚಿಮದಲ್ಲಿ ಇದು ಹಿಂದೂ ಕುಶ್, ಸ್ಪಿನ್ ಘರ್ (ಸಫೇದ್ ಕೊಹ್), ಸುಲೈಮಾನ್ ಪರ್ವತಗಳು, ಕೀರ್ತರ್ ಪರ್ವತಗಳು, ಬ್ರಾಹೂಯಿ ಶ್ರೇಣಿ ಮತ್ತು ಪ್ಯಾಬ್ ಶ್ರೇಣಿಯ ಪರ್ವತ ಶ್ರೇಣಿಗಳ ಭಾಗಗಳಿಂದ ಸುತ್ತುವರೆದಿದೆ [೧೯] ಗಡಿಯುದ್ದಕ್ಕೂ ಪಶ್ಚಿಮ ಪಟ್ಟು ಬೆಲ್ಟ್ ( ಸುಲೈಮಾನ್ ರೇಂಜ್ ಮತ್ತು ಚಮನ್ ಫಾಲ್ಟ್ ನಡುವೆ) ಭಾರತೀಯ ಫಲಕದಲ್ಲಿ ಪಶ್ಚಿಮದ ಗಡಿಯಾಗಿದೆ, ಅಲ್ಲಿ, ಪೂರ್ವ ಹಿಂದೂ ಕುಶದಲ್ಲಿ, ಅಫ್ಘಾನಿಸ್ತಾನ -ಪಾಕಿಸ್ತಾನ ಗಡಿ ಇದೆ. ಪೂರ್ವದಲ್ಲಿ, ಇದು ಪಟ್ಕೈ, ನಾಗ, ಲುಶಾಯ್ ಮತ್ತು ಚಿನ್ ಬೆಟ್ಟಗಳಿಂದ ಸುತ್ತುವರಿದಿದೆ. [೧೯] ಹಿಂದೂ ಮಹಾಸಾಗರ ದಕ್ಷಿಣಕ್ಕೆ, ಬಂಗಾಳ ಕೊಲ್ಲಿ ಆಗ್ನೇಯಕ್ಕೆ ಮತ್ತು ಅರಬ್ಬಿ ಸಮುದ್ರವು ನೈತ್ಯದಲ್ಲಿ ಸುತ್ತುವರಿದು ಭಾರತೀಯ ಉಪಖಂಡದ ಗಡಿಯಾಗಿದೆ. [೧೯]
ಹಿಮಾಲಯದ ಮೂಲಕ ಹಾದುಹೋಗುವ ದಾರಿ ಕಷ್ಟವಾದ್ದರಿಂದ, ಭಾರತೀಯ ಉಪಖಂಡದ ಸಾಮಾಜಿಕ-ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಪರಸ್ಪರ ಕ್ರಿಯೆಯು ಹೆಚ್ಚಾಗಿ ವಾಯುವ್ಯದಲ್ಲಿರುವ ಅಫ್ಘಾನಿಸ್ತಾನದ ಕಣಿವೆಗಳ ಮೂಲಕ ನಡೆದಿವೆ, [೨೦] ಹಾಗು ಅದರ ಪೂರ್ವದಲ್ಲಿರುವ ಮಣಿಪುರದ ಕಣಿವೆಗಳು ಮತ್ತು ಸಮುದ್ರ ಮಾರ್ಗಗಳ ಮೂಲಕ ನಡೆದಿವೆ. [೧೮] ಹೆಚ್ಚು ಕಷ್ಟಕರವಾದ ಆದರೆ ಐತಿಹಾಸಿಕವಾಗಿ ಪ್ರಮುಖವಾದ ಸಂವಹನವು ಟಿಬೆಟಿಯನ್ನರಿಂದ ಪ್ರವರ್ತಿತವಾದ ಹಾದಿಗಳ ಮೂಲಕವೂ ಸಂಭವಿಸಿದೆ. ಈ ಮಾರ್ಗಗಳು ಮತ್ತು ಪರಸ್ಪರ ಕ್ರಿಯೆಗಳು ಭಾರತದ ಉಪಖಂಡದಿಂದ ಏಷ್ಯಾದ ಇತರ ಭಾಗಗಳಿಗೆ ಬೌದ್ಧ ಧರ್ಮದ ಹರಡುವಿಕೆಗೆ ಕಾರಣವಾಗಿವೆ. ಮತ್ತು ಇಸ್ಲಾಮಿಕ್ ವಿಸ್ತರಣೆಯು ಎರಡು ರೀತಿಯಲ್ಲಿ ಭಾರತೀಯ ಉಪಖಂಡಕ್ಕೆ ಬಂದಿತು, ಅಫ್ಘಾನಿಸ್ತಾನದ ಮೂಲಕ ಭೂಮಿಯಲ್ಲಿ ಮತ್ತು ಭಾರತೀಯ ಕರಾವಳಿಗೆ ಅರೇಬಿಯನ್ ಸಮುದ್ರದ ಸಮುದ್ರ ಮಾರ್ಗಗಳ ಮೂಲಕ. [೧೮]
ಭೌಗೋಳಿಕ ರಾಜಕೀಯ
ಬದಲಾಯಿಸಿಆಧುನಿಕ ಭೌಗೋಳಿಕ ರಾಜಕೀಯ ಗಡಿಗಳ ಪ್ರಕಾರ, ಭಾರತೀಯ ಉಪಖಂಡವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ಅನ್ನು ರೂಪಿಸುತ್ತದೆ, ಜೊತೆಗೆ ಸಮಾವೇಶದ ಪ್ರಕಾರ, ಶ್ರೀಲಂಕಾ ದ್ವೀಪ ರಾಷ್ಟ್ರ ಮತ್ತು ಹಿಂದೂ ಮಹಾಸಾಗರದ ಇತರ ದ್ವೀಪಗಳಾದ ಮಾಲ್ಡೀವ್ಸ್ ಕೂದ ಸೇರಿದೆ. [೧] [೨೧] [೨] ಕ್ರಿಸ್ ಬ್ರೂಸ್ಟರ್ ಮತ್ತು ವುಲ್ಫ್‌ಗ್ಯಾಂಗ್ ಮೇರ್‌ಹೋಫರ್ ಪ್ರಕಾರ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಭೂತಾನ್ ಭಾರತೀಯ ಉಪಖಂಡಗಳಾಗಿವೆ. ಬ್ರೂಸ್ಟರ್ ಮತ್ತು ಮೇರ್‌ಹೋಫರ್ ರವರ ಪ್ರಕಾರ ಅಫ್ಘಾನಿಸ್ತಾನ ಮತ್ತು ಮಾಲ್ಡೀವ್ಸ್ ಪ್ರದೇಶವನ್ನು ಸೇರಿಸಿದ್ದಲ್ಲಿ ಈ ಮಹಾಪ್ರದೇಶವನ್ನು ದಕ್ಷಿಣ ಏಷ್ಯಾ ಎಂದು ಕೂಡ ಉಲ್ಲೇಖಿಸಬಹುದು. ಪಾಕಿಸ್ತಾನ, ಬಾಂಗ್ಲಾದೇಶ, ಕಾಶ್ಮೀರ ಮತ್ತು ಲಕ್ಷದ್ವೀಪ ಹಾಗು ಮಾಲ್ಡೀವ್ಸ್ ದ್ವೀಪ ಸರಪಳಿಗಳು ಸೇರಿದಂತೆ ಉಪಖಂಡದ ಪರಿಧಿಯು ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ, ಆದರೆ ಮಧ್ಯಭಾಗವಾದ ಭಾರತ, ನೇಪಾಳ ಮತ್ತು ಶ್ರೀಲಂಕಾ ಪ್ರದೇಶದಲ್ಲಿ ಹೆಚ್ಚುವರಿ ಜನಾಂಗ ಹಿಂದೂ ಅಥವಾ ಬೌದ್ಧ ಧರ್ಮವನ್ನು ಅವಲಂಬಿಸಿದ್ದಾರೆ. ಈ ದೇಶಗಳಲ್ಲಿ ಹೆಚ್ಚಿನವು ಭಾರತೀಯ ಫಲಕದ ಮೇಲೆ ಅಥವಾ ನಿರಂತರ ಭೂಪ್ರದೇಶದ ಮೇಲೆ ಇರುವುದರಿಂದ, ಇಲ್ಲಿ ಎರಡು ದೇಶಗಳ ನಡುವಿನ ಗಡಿಗಳು ಹೆಚ್ಚಾಗಿ ನದಿ ಅಥವಾ ನಿರ್ಜನ ಪ್ರದೇಶವಾಗಿದೆ. [೨೨]
ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ "ಭಾರತೀಯ ಉಪಖಂಡ" ದ ನಿಖರವಾದ ವ್ಯಾಖ್ಯಾನವು ಸ್ವಲ್ಪಮಟ್ಟಿಗೆ ವಿವಾದಾಸ್ಪದವಾಗಿದೆ ಏಕೆಂದರೆ ಯಾವ ದೇಶಗಳು ದಕ್ಷಿಣ ಏಷ್ಯಾ ಅಥವಾ ಭಾರತೀಯ ಉಪಖಂಡದ ಭಾಗವಾಗಿದೆ ಎಂಬುದರ ಕುರಿತು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ವ್ಯಾಖ್ಯಾನವಿಲ್ಲ. [೨೩] [೨೪] [೨೫] [೩] ಭಾರತೀಯ ಉಪಖಂಡ ಅಥವಾ ದಕ್ಷಿಣ ಏಷ್ಯಾ ಎಂದು ಕರೆಯಲಾಗಿದ್ದರೂ, ಈ ಪ್ರದೇಶದ ಭೌಗೋಳಿಕ ವ್ಯಾಪ್ತಿಯ ವ್ಯಾಖ್ಯಾನವು ಬದಲಾಗುತ್ತದೆ. ಅಫ್ಘಾನಿಸ್ತಾನವನ್ನು ಸಾಮಾನ್ಯವಾಗಿ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಲಾಗಿದ್ದರೂ, ಇದನ್ನು ಸಾಮಾನ್ಯವಾಗಿ ಭಾರತೀಯ ಉಪಖಂಡದಲ್ಲಿ ಸೇರಿಸಲಾಗುವುದಿಲ್ಲ. [೨೩] ಅಫ್ಘಾನಿಸ್ತಾನದ ಕೆಲವು ಭಾಗಗಳು ಕೆಲವೊಮ್ಮೆ ಭಾರತೀಯ ಉಪಖಂಡದಲ್ಲಿ ಮಧ್ಯ ಏಷ್ಯಾ ಮತ್ತು ಭಾರತೀಯ ಉಪಖಂಡದ ವಾಯುವ್ಯ ಭಾಗಗಳ ನಡುವಿನ ಗಡಿ ಪ್ರದೇಶವಾಗಿ ಸೇರಿಕೊಂಡಾಗಲೂ, ಅಫ್ಘಾನಿಸ್ತಾನದ ಸಾಮಾಜಿಕ-ಧಾರ್ಮಿಕ ಇತಿಹಾಸವು ತುರ್ಕಿಕ್ ಪ್ರಭಾವಿತ ಮಧ್ಯ ಏಷ್ಯಾಕ್ಕೆ ಹೆಚ್ಚು ನಿಕಟ ಸಂಬಂಧ ಹೊಂದಿದೆ. [೨೬] [೨೭] ಮಾಲ್ಡೀವ್ಸ್, ಪರ್ಯಾಯ ದ್ವೀಪದ ನೈತ್ಯದಲ್ಲಿರುವ ಒಂದು ಸಣ್ಣ ದ್ವೀಪಸಮೂಹವನ್ನು ಒಳಗೊಂಡಿರುವ ಒಂದು ದೇಶ, ಇದನ್ನು ಹೆಚ್ಚಾಗಿ ಭಾರತೀಯ ಉಪಖಂಡದ ಭಾಗವೆಂದು ಪರಿಗಣಿಸಲಾಗುತ್ತದೆ, [೨] ಆದರು ಕೆಲವೊಮ್ಮೆ ಅಂತರರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಮೂಲಗಳಿಂದ ಇದು ಭಾರತ ಉಪಖಂಡದಿಂದ ನೈತ್ಯ ದಿಕ್ಕಿನಲ್ಲಿ ದೂರದಲ್ಲಿರುವ ದ್ವೀಪಗಳ ಗುಂಪುಗಳ್ಳಲಿ ಒಂದು ಎಂದು ಉಲ್ಲೇಖಿಸಲಾಗುತ್ತದೆ
ಸಹ ನೋಡಿ
ಬದಲಾಯಿಸಿ- ಹಿಂದುಸ್ಥಾನ
- ಬೃಹತ್ ಭಾರತ
- ದಕ್ಷಿಣ ಏಷ್ಯಾ
- ಸಾರ್ಕ್
ಉಲ್ಲೇಖಗಳು
ಬದಲಾಯಿಸಿ
- ↑ ೧.೦ ೧.೧ Dhavendra Kumar (2012). Genomics and Health in the Developing World. Oxford University Press. p. 889. ISBN 978-0-19-537475-9.
- ↑ ೨.೦ ೨.೧ ೨.೨ Mariam Pirbhai (2009). Mythologies of Migration, Vocabularies of Indenture: Novels of the South Asian Diaspora in Africa, the Caribbean, and Asia-Pacific. University of Toronto Press. p. 14. ISBN 978-0-8020-9964-8.
- ↑ ೩.೦ ೩.೧ Michael Mann (2014). South Asia's Modern History: Thematic Perspectives. Taylor & Francis. pp. 13–15. ISBN 978-1-317-62445-5.
- ↑ ೪.೦ ೪.೧ ೪.೨ Robert Wynn Jones (2011). Applications of Palaeontology: Techniques and Case Studies. Cambridge University Press. pp. 267–271. ISBN 978-1-139-49920-0.
- ↑ ೫.೦ ೫.೧ Baker, Kathleen M.; Chapman, Graham P. (11 March 2002), The Changing Geography of Asia, Routledge, pp. 10–, ISBN 978-1-134-93384-6,
This greater India is well defined in terms of topography; it is the Indian sub-continent, hemmed in by the Himalayas on the north, the Hindu Khush in the west and the Arakanese in the east.
- ↑ Webster's Third New International Dictionary, Unabridged, Merriam-Webster, 2002. Retrieved 6 December 2016; Quote: "a large landmass smaller than a continent; especially: a major subdivision of a continent ! e Indian subcontinent | "
- ↑ Subcontinent Archived 2017-08-30 ವೇಬ್ಯಾಕ್ ಮೆಷಿನ್ ನಲ್ಲಿ., Oxford English Dictionaries (2012). Retrieved 6 December 2016; Quote: "A large distinguishable part of a continent..."
- ↑ Lizzie Crouch and Paula McGrath, "Humanity's global battle with mosquitoes", Health check, BBC World Service
- ↑ Gaina, Carmen; Müller, R. Dietmar; Brown, Belinda; Ishihara, Takemi; Ivanov, Sergey (July 2007). "Breakup and early seafloor spreading between India and Antarctica". Geophysical Journal International (in ಇಂಗ್ಲಿಷ್). 170 (1): 151–169. Bibcode:2007GeoJI.170..151G. doi:10.1111/j.1365-246X.2007.03450.x.
{{cite journal}}
: CS1 maint: unflagged free DOI (link) - ↑ Torsvik, T.H.; Tucker, R.D.; Ashwal, L.D.; Carter, L.M.; Jamtveit, B.; Vidyadharan, K.T.; Venkataramana, P. (October 2000). "Late Cretaceous India-Madagascar fit and timing of break-up related magmatism". Terra Nova (in ಇಂಗ್ಲಿಷ್). 12 (5): 220–224. Bibcode:2000TeNov..12..220T. doi:10.1046/j.1365-3121.2000.00300.x. ISSN 0954-4879.
- ↑ Bethany D. Rinard Hinga (2015). Ring of Fire: An Encyclopedia of the Pacific Rim's Earthquakes, Tsunamis, and Volcanoes. ABC-CLIO. pp. 89–90. ISBN 978-1-61069-297-7.
- ↑ Alexander E. Gates; David Ritchie (2006). Encyclopedia of Earthquakes and Volcanoes. Infobase. pp. 116–118. ISBN 978-0-8160-7270-5.
- ↑ Dhavendra Kumar (2012). Genomics and Health in the Developing World. Oxford University Press. pp. 889–890. ISBN 978-0-19-537475-9.
- ↑ "Asia" > Geologic history – Tectonic framework. Encyclopædia Britannica. Encyclopædia Britannica, 2009: "The paleotectonic evolution of Asia terminated some 50 million years ago as a result of the collision of the Indian subcontinent with Eurasia. Asia's subsequent neotectonic development has largely disrupted the continents pre-existing fabric. The neotectonic units of Asia are Stable Asia, the Arabian and Indian cratons, the Alpide plate boundary zone (along which the Arabian and Indian platforms have collided with the Eurasian continental plate), and the island arcs and marginal basins."
- ↑ E. Bredow, R. Gassmöller, J. Dannberg and B. Steinberger, Geodynamic Models of Plume-Ridge Interaction in the Indian Ocean and its Effect on the Crustal Thickness of the Réunion Hotspot Track (abstract), Astrophysics Data System (ADS), Harvard–Smithsonian Center for Astrophysics
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedRHK
- ↑ L. Dudley Stamp, India, Pakistan, Ceylon and Burma, page 185, Methuen, 1957, ASIN B001SKS8VE
- ↑ ೧೮.೦ ೧೮.೧ ೧೮.೨ Asher, Catherine B.; Talbot, Cynthia (2006), India Before Europe, Cambridge University Press, pp. 5–8, 12–14, 51, 78–80, ISBN 978-0-521-80904-7
- ↑ ೧೯.೦ ೧೯.೧ ೧೯.೨ ಉಲ್ಲೇಖ ದೋಷ: Invalid
<ref>
tag; no text was provided for refs namedBNMNSI
- ↑ John L. Esposito; Emad El-Din Shahin (2016). The Oxford Handbook of Islam and Politics. Oxford University Press. pp. 453–456. ISBN 978-0-19-063193-2.
- ↑ Dhavendra Kumar (2012). Genomics and Health in the Developing World. Oxford University Press. p. 889. ISBN 978-0-19-537475-9. Archived from the original on 21 February 2018. Retrieved 9 December 2016.
India, Pakistan, Bangladesh, Sri Lanka, Nepal, Bhutan and other small islands of the Indian Ocean
- ↑ Chandra K. Sharma, Geology of Nepal Himalaya and Adjacent Countries, page 14, Sangeeta Sharma Books, 1990, ASIN B0006EWSCI
- ↑ ೨೩.೦ ೨೩.೧ Ewan W. Anderson; Liam D. Anderson (4 December 2013). An Atlas of Middle Eastern Affairs. Routledge. p. 5. ISBN 978-1-136-64862-5., Quote: "To the east, Iran, as a Gulf state, offers a generally accepted limit to the Middle East. However, Afghanistan, also a Muslim state, is then left in isolation. It is not accepted as a part of Central Asia and it is clearly not part of the Indian subcontinent".
- ↑ Jona Razzaque (2004). Public Interest Environmental Litigation in India, Pakistan, and Bangladesh. Kluwer Law International. pp. 3 with footnotes 1 and 2. ISBN 978-90-411-2214-8.
- ↑ Akhilesh Pillalamarri, South Asia or India: An Old Debate Resurfaces in California, The Diplomat, 24 May 2016;
Ahmed, Mukhtar (2014), Ancient Pakistan – An Archaeological History: Volume II: A Prelude to Civilization, Foursome, p. 14, ISBN 978-1-4959-4130-6 - ↑ Ira M. Lapidus (2014). A History of Islamic Societies. Cambridge University Press. pp. 269, 698–699. ISBN 978-0-521-51430-9.
- ↑ Louis D Hayes (2014). The Islamic State in the Post-Modern World: The Political Experience of Pakistan. Ashgate. pp. 55–56. ISBN 978-1-4724-1262-1.;
Robert Wuthnow (2013). The Encyclopedia of Politics and Religion. Routledge. pp. 11–. ISBN 978-1-136-28493-9.