ರೋಹು
Conservation status
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಆ್ಯಕ್ಟಿನೋಟೆರಿಜೀ
ಗಣ: ಸಿಪ್ರಿನಿಫ಼ಾರ್ಮೀಸ್
ಕುಟುಂಬ: ಸಿಪ್ರಿನಿಡೀ
ಉಪಕುಟುಂಬ: ಲಾಬಿಯೊನಿನೀ
ಕುಲ: ಲಾಬಿಯೊ
ಪ್ರಜಾತಿ:
ಲ. ರೋಹಿತಾ
Binomial name
ಲಾಬಿಯೊ ರೋಹಿತಾ
Synonyms
  • Cyprinus rohita Hamilton, 1822

ರೋಹು ಪ್ರಮುಖ ಕಾರ್ಪ್ ಮೀನುಗಳ ಪೈಕಿ ಒಂದು. ಕಾಟ್ಲದಂತೆಯೇ ಸರ್ವವ್ಯಾಪಿ ಎನ್ನಬಹುದು. ಭಾರತದಲ್ಲಿ ಸಿಕ್ಕುವ ಕಾರ್ಪ್ ಮೀನುಗಳಲ್ಲೆಲ್ಲ ಅತ್ಯಂತ ರುಚಿಕರವೆಂದು ಹೆಸರಾಗಿದೆ. ಉತ್ತರ ಭಾರತದ ಎಲ್ಲ ನದಿಗಳಲ್ಲಿಯೂ ವಾಸಿಸುತ್ತದೆ.[] ಆಂಧ್ರದ ಗೋದಾವರಿ ನದಿಯಲ್ಲಿ ಸ್ವಲ್ಪಮಟ್ಟಿಗೆ ಸಿಕ್ಕುತ್ತದೆ. ಕರ್ನಾಟಕದಲ್ಲಿ ಇತ್ತೀಚೆಗೆ ಇದನ್ನು ಸಾಕುವ ಪ್ರಯತ್ನ ನಡೆದಿದೆ. ದಕ್ಷಿಣ ಭಾರತದ ಬೇರೆ ಯಾವ ನದಿಯಲ್ಲೂ ಸಿಕ್ಕುವುದಿಲ್ಲ.

ದೇಹರಚನೆ

ಬದಲಾಯಿಸಿ

ಇದರ ತಲೆ ಕಾಟ್ಲದ್ದಕ್ಕಿಂತ ಚಿಕ್ಕದು. ಆದರೆ ಅದಕ್ಕಿಂತ ಚೂಪು. ಮೈಮೇಲೆ ಮಾಸಲು ಕೆಂಪು ಬಣ್ಣದ ಹುರುಪೆಗಳಿವೆ. ದೇಹ ಕಾಟ್ಲದ್ದಕ್ಕಿಂತ ಹೆಚ್ಚು ಉದ್ದವಾಗಿದೆ.

ರೋಹು ತಾನು ವಾಸಿಸುವ ನೀರಿನ ಮಧ್ಯ ಮತ್ತು ತಳಭಾಗಗಳಲ್ಲಿರುವ ಆಹಾರವನ್ನು ತೆಗದುಕೊಳ್ಳುತ್ತದೆ. ದೇಹದ ಮುಂಭಾಗದ ತುದಿಯಲ್ಲಿ ಛಿದ್ರವಾದ ತುಟಿ ಇರುವುದರಿಂದ ಆಳವಿಲ್ಲದ ಕೊಳಗಳ ತಳಭಾಗದಲ್ಲಿರುವ ಆಹಾರ ಆರಿಸಲು ಸಹಾಯವಾಗುತ್ತದೆ. ಮರಳು ಮಣ್ಣು, ಕೊಳೆಯುತ್ತಿರುವ ಸಸ್ಯಜನ್ಯವಸ್ತು, ಅತಿಸೂಕ್ಷ್ಮವಾದ ಪಾಚಿ ಮುಂತಾದವು ಈ ಮೀನಿನ ಮೆಚ್ಚಿನ ಆಹಾರ.

ಸಂತಾನವೃದ್ಧಿ

ಬದಲಾಯಿಸಿ

ಕಾಟ್ಲದಂತೆಯೇ ರೋಹು ಮೀನು ಕೂಡ ನದಿಗಳಲ್ಲಿ ಮುಂಗಾರು ಮಳೆಯ ಕಾಲದಲ್ಲಿ ಮರಿ ಮಾಡುತ್ತದೆ. ಕಾಟ್ಲದ ತತ್ತಿಕೂಟದ ಜೊತೆಗೆ ರೋಹುವಿನ ತತ್ತಿಕೂಟವೂ ಸಿಕ್ಕುತ್ತದೆ. ಪ್ರಮುಖ ಕಾರ್ಪುಗಳ ತತ್ತಿಕೂಟ ಮರಿಗಳಲ್ಲಿ ರೋಹುವಿನದೇ ಬಹುಪಾಲು.

ಕರ್ನಾಟಕದಲ್ಲಿ

ಬದಲಾಯಿಸಿ

ಕರ್ನಾಟಕಕ್ಕೆ ಕಳೆದ ಹಲವಾರು ವರ್ಷಗಳಿಂದ ಕೊಲ್ಕತ್ತದಿಂದ ತರಸಿ ಇದನ್ನು ಸಾಕಲಾಗುತ್ತಿದೆ. ಇದು ಈಗ ಬೀಳಂದೂರು, ಹೆಸರಘಟ್ಟ, ಬೈರಮಂಗಲ, ನೀರಸಾಗರಗಳಿಗೆ ಚೆನ್ನಾಗಿ ಹೊಂದಿಕೊಂಡಿದೆ.

ಉಲ್ಲೇಖಗಳು

ಬದಲಾಯಿಸಿ
  1. Dahanukar, N. (2010). "Labeo rohita". IUCN Red List of Threatened Species. 2010: e.T166619A6248771. doi:10.2305/IUCN.UK.2010-4.RLTS.T166619A6248771.en. Retrieved 19 November 2021.
  2. "Rohu Fish Farming Information Guide - Agri Farming". Agrifarming.in. 26 August 2015. Retrieved 8 September 2018.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರೋಹು&oldid=1192858" ಇಂದ ಪಡೆಯಲ್ಪಟ್ಟಿದೆ