ನೀರಸಾಗರ
ನೀರಸಾಗರವು ಭಾರತದ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಒಂದು ಹಳ್ಳಿ.
Neerasagar | |
---|---|
Village | |
Country | India |
State | ಕರ್ನಾಟಕ |
District | Dharwad |
ಸರ್ಕಾರ | |
• ಮಾದರಿ | Panchayat raj |
• ಪಾಲಿಕೆ | Gram panchayat |
Population (2011) | |
• Total | ೧,೪೯೩ |
Languages | |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
ISO 3166 code | IN-KA |
ವಾಹನ ನೋಂದಣಿ | KA |
ಜಾಲತಾಣ | karnataka |
ಇದು ಹುಬ್ಬಳ್ಳೀ, ಧಾರವಾಡಗಳಿಂದ ೧೯ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿ ಬೃಂದಾವನ ಮಾದರಿಯಲ್ಲಿ ಪ್ರವಾಸಿತಾಣವಾಗಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇಲ್ಲಿ ಮೀನುಮರಿ ಪಾಲನಾ ಕೇಂದ್ರವೂ ಇದೆ.[೧]
ನೀರಸಾಗರ ಜಲಾಶಯ
ಬದಲಾಯಿಸಿಇಲ್ಲಿನ ಕೆರೆಯು ೧೯೫೫ರಿಂದ ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ೧೯೫೫ ರಲ್ಲಿ ಬೇಡ್ತಿ ಹಳ್ಳಕ್ಕೆ ಆಣೆಕಟ್ಟು ನಿರ್ಮಿಸಿ ಇಲ್ಲಿನ ನೀರಸಾಗರ ಜಲಾಶಯದ ನಿರ್ಮಾಣ ಮಾದಲಾಯಿತು. ಇದರ ಸಾಮರ್ಥ್ಯವು ೧.೦೨ ಟಿ.ಎಂ.ಸಿ ಆಗಿದೆ. ಒಂದು ಕಾಲದಲ್ಲಿ ಹುಬ್ಬಳ್ಳೀ-ಧಾರವಾಡ ಅವಳಿನಗರದ ಜನತೆಗೆ ಕುಡಿಯುವ ನೀರಿಗೆ ಆಧಾರವಾಗಿತ್ತು. ಇಂದಿಗೂ ಇದು ಹುಬ್ಬಳ್ಳಿಯ ಶೇ.೨೫ರಷ್ಟು ಪ್ರದೇಶಕ್ಕೆ ನೀರು ಒದಗಿಸುತ್ತಿದೆ.[೨]
ಈ ಕೆರೆಯು ತುಂಬಲು ಬೇಡ್ತಿ ಹಳ್ಳದ ನೀರು ಪ್ರಮುಖ ಮೂಲವಾಗಿದೆ.
ಈ ಕೆರೆ 181 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ.
ಇಲ್ಲಿ ಅನೇಕ ಪ್ರವಾಸಿಗಳು ಬರುತ್ತಾದರೂ ಹೊಟೆಲ್,ಅಂಗಡಿ, ಸುಸಜ್ಜಿತ ಉದ್ಯಾನವನಗಳು ಇಲ್ಲ.
ಜನಸಂಖ್ಯಾಶಾಸ್ತ್ರ
ಬದಲಾಯಿಸಿ2011 ರ ಭಾರತದ ಜನಗಣತಿಯ ಪ್ರಕಾರ ನೀರಸಾಗರದಲ್ಲಿ 290 ಮನೆಗಳು ಮತ್ತು ಒಟ್ಟು 1,493 ಜನಸಂಖ್ಯೆಯು 803 ಪುರುಷರು ಮತ್ತು 690 ಮಹಿಳೆಯರನ್ನು ಒಳಗೊಂಡಿದೆ. 0-6 ವಯಸ್ಸಿನ 213 ಮಕ್ಕಳು ಇದ್ದರು. [೩]
ಉಲ್ಲೇಖಗಳು
ಬದಲಾಯಿಸಿ- ↑ https://fisheries.karnataka.gov.in/page/Contact/Fish+Seed+Production+and+Rearing+Farm/kn
- ↑ https://www.prajavani.net/pravasa/neerasagar-dam-in-hubli-759108.html
- ↑ "C.D. Block Wise Primary Census Abstract Data(PCA) - KARNATAKA". Census Commission of India. Retrieved 1 August 2020.