ಮಾನಸ್ ವನ್ಯಜೀವಿ ಧಾಮ
ಮಾನಸ್ ವನ್ಯಜೀವಿ ಧಾಮ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಪ್ರಾಕೃತಿಕ |
ಆಯ್ಕೆಯ ಮಾನದಂಡಗಳು | vii, ix, x |
ಆಕರ | 338 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1985 (9ನೆಯ ಅಧಿವೇಶನ) |
ಅವನತಿಯತ್ತ | 1992 |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಮಾನಸ್ ರಾಷ್ಟ್ರೀಯ ಉದ್ಯಾನ | |
---|---|
IUCN category II (national park) | |
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Assam" does not exist. | |
ಸ್ಥಳ | Assam, India |
ಹತ್ತಿರದ ನಗರ | Barpeta Road |
ಪ್ರದೇಶ | 950 km². |
ಸ್ಥಾಪನೆ | 1990 |
ಸಂದರ್ಶಕರು | NA (in NA) |
ಆಡಳಿತ ಮಂಡಳಿ | Ministry of Environment and Forests, ಭಾರತ ಸರ್ಕಾರ |
ಜಾಲತಾಣ | http://www.manasassam.org |
Type | Natural |
Criteria | vii, ix, x |
Designated | 1985 (9th session) |
Reference no. | 338 |
State Party | ಭಾರತ |
Region | Asia-Pacific |
Endangered | 1992–2011 |
ಮಾನಸ್ ವನ್ಯಜೀವಿಧಾಮ
ಬದಲಾಯಿಸಿಮಾನಸ್ ವನ್ಯಜೀವಿ ಧಾಮವು ಭಾರತದ ಅಸ್ಸಾಂ ರಾಜ್ಯದಲ್ಲಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಘೋಷಿಸಿದೆ. ಅಲ್ಲದೆ 'ಮಾನಸ್ ವನ್ಯಜೀವಿ ಧಾಮವು ಪ್ರಾಜೆಕ್ಟ್ ಟೈಗರ್ ಮೀಸಲು, ಆನೆ ಮೀಸಲು ಮತ್ತು ಜೀವಗೋಲ ಮೀಸಲು ವಲಯವೆಂದು ಸಹ ಘೋಷಿಸಲ್ಪಟ್ಟಿದೆ. ಹಿಮಾಲಯದ ಪಾದದಲ್ಲಿರುವ ಮಾನಸ್ ವನ್ಯಜೀವಿ ಧಾಮವು ಭೂತಾನ್ ರಾಷ್ಟ್ರದಲ್ಲಿ ಸಹ ಕೊಂಚ ಭಾಗ ವ್ಯಾಪಿಸಿದೆ. ಮಾನಸ್ ವನ್ಯಜೀವಿ ಧಾಮವು ಅಸ್ಸಾಂನ ಸೂರುಳ್ಳ ಆಮೆ, ಹಿಸ್ಪಿಡ್ ಮೊಲ, ಚಿನ್ನದ ಬಣ್ಣದ ಲಂಗೂರ್ ಮತ್ತು ಪಿಗ್ಮಿ ಕಾಡುಹಂದಿ ಗಳಂತಹ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ಈ ನಾಲ್ಕು ಬಗೆಯ ಪ್ರಾಣಿಗಳು ವಿಶ್ವದ ಬೇರೆ ಯಾವುದೇ ಭಾಗದಲ್ಲಿ ಕಾಣಬರುವುದಿಲ್ಲ. ಈ ಧಾಮದ ಹೆಸರು ಇಲ್ಲಿ ಹರಿಯುವ ಮಾನಸ್ ನದಿಯಿಂದ ಬಂದಿರುತ್ತದೆ. ಈ ನದಿಯು ಬ್ರಹ್ಮಪುತ್ರ ಮಹಾನದಿಯ ಒಂದು ಪ್ರಮುಖ ಉಪನದಿಯಾಗಿದೆ. ಸುಮಾರು ೩೯೧ ಚದರ ಕಿ.ಮೀ. ಗಳಷ್ಟು ವಿಸ್ತಾರವಾಗಿರುವ ಮಾನಸ್ ವನ್ಯಜೀವಿ ಧಾಮವು ಸರಾಸರಿ ಸಮುದ್ರ ಮಟ್ಟದಿಂದ ೬೧ ರಿಂದ ೧೧೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಮಾನಸ್ ವನ್ಯಜೀವಿ ಧಾಮದ ಪ್ರದೇಶದಲ್ಲಿ ೩೭೪ ತಳಿಗಳ ಗಿಡಮರಗಳು, ೫೫ ತಳಿಯ ಸಸ್ತನಿಗಳು, ೩೮೦ ಪ್ರಕಾರದ ಪಕ್ಷಿಗಳು, ೫೦ ತಳಿಗಳ ಉರಗಗಳು ಮತ್ತು ೩ ಪ್ರಬೇಧದ ದ್ವಿಚರಿಗಳನ್ನು ಗುರುತಿಸಲಾಗಿದೆ. ಇಲ್ಲಿನ ಪ್ರಾಣಿ ಸಂಕುಲದಲ್ಲಿ ೩೧ ತಳಿಗಳು ಅಳಿವಿನಂಚಿನಲ್ಲಿರುವುದಾಗಿ ಘೋಷಿಸಲ್ಪಟ್ಟಿವೆ. ಮೇಲೆ ತಿಳಿಸಿದ ಪ್ರಾಣಿಗಳ ಹೊರತಾಗಿ ಮಾನಸ್ ವನ್ಯಜೀವಿ ಧಾಮವು ಏಷ್ಯನ್ ಆನೆ, ಭಾರತದ ಘೇಂಡಾಮೃಗ, ಕಾಡೆಮ್ಮೆ, ನೀರೆಮ್ಮೆ, ಬಾರಾಸಿಂಘಾ, ಹುಲಿ, ಚಿರತೆ, ಕರಡಿ ಮತ್ತು ಹಲವು ಪ್ರಕಾರದ ಕೋತಿ ಮತ್ತು ಜಿಂಕೆಗಳಿಗೆ ವಾಸಸ್ಥಾನವಾಗಿದೆ.
ಇವನ್ನೂ ನೋಡಿ
ಬದಲಾಯಿಸಿಬಾಹ್ಯ ಸಂಪರ್ಕಕೊಂಡಿಗಳು
ಬದಲಾಯಿಸಿ- ಕಾಜಿರಂಗ ಮತ್ತು ಮಾನಸ್ ಗಳಿಗೆ ಒಂದು ಪ್ರವಾಸ
- ಮಾನಸ್ನ ರಕ್ಷಕರು
- Official Website of ಮಾನಸ್ ವನ್ಯಜೀವಿ ಧಾಮದ ಅಧಿಕೃತ ಅಂತರಜಾಲ ತಾಣ
- Manas Tiger Reserve of Assam Archived 2013-09-26 ವೇಬ್ಯಾಕ್ ಮೆಷಿನ್ ನಲ್ಲಿ.
- Wildlife Times: A trip to Kaziranga and Manas National Park
- Manas Maozigendri Ecotourism Society - Protectors of Manas
- Official Website of Manas National Park
- Photo essay on the rhino translocations from Pobitora to Manas National Park Archived 2012-04-07 ವೇಬ್ಯಾಕ್ ಮೆಷಿನ್ ನಲ್ಲಿ.