ಎಲ್ಲೋರಾ ಗುಹೆಗಳು
ಎಲ್ಲೋರಾ ಗುಹೆಗಳು ( ಮೂಲ ಮರಾಠಿ ಹೆಸರು ವೆರುಳ್ ) ಭಾರತದ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ನಗರದಿಂದ ೩೦ ಕಿ.ಮೀ. ದೂರದಲ್ಲಿವೆ. ರಾಷ್ಟ್ರಕೂಟ ಅರಸರಿಂದ ನಿರ್ಮಿಸಲ್ಪಟ್ಟ ಎಲ್ಲೋರಾ ಗುಹಾಂತರ್ದೇವಾಲಯಗಳನ್ನು ೧೯೮೩ರಲ್ಲಿ ವಿಶ್ವ ಪರಂಪರೆಯ ತಾಣವನ್ನಾಗಿ ಯುನೆಸ್ಕೋ ಘೋಷಿಸಿತು.
ಎಲ್ಲೋರಾ ಗುಹೆಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | Cultural |
ಆಯ್ಕೆಯ ಮಾನದಂಡಗಳು | (i)(iii)(vi) |
ಆಕರ | b 243 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1983 (7ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಶಿಲೆಯಲ್ಲಿ ಕೊರೆದು ಮಾಡುವ ಶಿಲ್ಪಶಾಸ್ತ್ರದ ಭಾರತೀಯ ಶೈಲಿಯ ಮಹಾನ್ ದ್ಯೋತಕವಾಗಿರುವ ಎಲ್ಲೋರಾ ಗುಹೆಗಳಲ್ಲಿ ಹಿಂದೂ, ಬೌದ್ಧ ಮತ್ತು ಜೈನ ದೇವಾಲಯಗಳಿವೆ. ಜೊತೆಗೆ ಧರ್ಮಶಾಲೆಗಳು ಸಹ ಇರುವ ಈ ಸಂಕೀರ್ಣವನ್ನು ೫ ರಿಂದ ೧೦ನೆಯ ಶತಮಾನದ ಮಧ್ಯೆ ನಿರ್ಮಿಸಲಾಯಿತು. ಒಟ್ಟು ೧೨ ಬೌದ್ಧ , ೧೭ ಹಿಂದೂ ಮತ್ತು ೫ ಜಿನಾಲಯಗಳು ಒತ್ತೊತ್ತಾಗಿ ಇಲ್ಲಿ ಇದ್ದು ಇದು ಅಂದಿನ ಕಾಲದ ಧರ್ಮ ಸಹಿಷ್ಣುತೆಯ ಮಹೋನ್ನತ ಸಂಕೇತವಾಗಿದೆ. ಎಲ್ಲೋರಾದಿಂದ ೩ ಕಿ.ಮೀ. ದೂರದಲ್ಲಿ ದೇವಸರೋವರ್ ಎಂಬಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗೃಷ್ಣೇಶ್ವರ ಮಂದಿರವಿದೆ.
ಇವನ್ನೂ ನೋಡಿ
ಬದಲಾಯಿಸಿ
ಬಾಹ್ಯ ಸಂಪರ್ಕಗಳು
ಬದಲಾಯಿಸಿWikimedia Commons has media related to Ellora Caves.
- ಎಲ್ಲೋರಾ ಗುಹೆಗಳ ಬಗ್ಗೆ ಒಂದು ವಿಡಿಯೋ ಚಿತ್ರ Archived 2008-03-27 ವೇಬ್ಯಾಕ್ ಮೆಷಿನ್ ನಲ್ಲಿ.
- ಯುನೆಸ್ಕೋ ಪಟ್ಟಿಯಲ್ಲಿ ಎಲ್ಲೋರಾ ಗುಹೆಗಳು
- ಎಲ್ಲೋರಾ ಗುಹೆಗಳ ಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆ Archived 2007-12-10 ವೇಬ್ಯಾಕ್ ಮೆಷಿನ್ ನಲ್ಲಿ.
- ಎಲ್ಲೋರಾ ಮತ್ತು ಇತರ ಗುಹಾಂತರ್ದೇವಾಲಯಗಳ ಚಿತ್ರಗಳು
- ಗುಹೆಗಳ ಚಿತ್ರಗಳು