ಭೀಮ್‌ಬೇಟ್ಕಾದ ಶಿಲಾಶ್ರಯಗಳು
ಭೀಮ್‌ಬೇಟ್ಕಾದ ಶಿಲಾಶ್ರಯಗಳು ಭಾರತದ ಮಧ್ಯ ಪ್ರದೇಶ ರಾಜ್ಯದ ರಾಯ್‌ಸೇನ್ ಜಿಲ್ಲೆಯಲ್ಲಿರುವ ಪುರಾತತ್ವ ಕ್ಷೇತ್ರ. ಇಲ್ಲಿನ ಶಿಲಾಶ್ರಯಗಳು (ಹೆಚ್ಚಿನವು ಗುಹೆಗಳು) ಭಾರತದ ಅತಿ ಪ್ರಾಚೀನ ಕಾಲದ ಜನಜೀವನದ ಕುರುಹುಗಳನ್ನು ಹೊಂದಿವೆ. ಇಲ್ಲಿ ಕಲ್ಲಿನ ಮೇಲೆ ರಚಿಸಲಾಗಿರುವ ವರ್ಣಚಿತ್ರಗಳು ಸುಮಾರು ೯೦೦೦ ವರ್ಷಗಳಷ್ಟು ಹಿಂದಿನ ಕಾಲದ ಶಿಲಾಯುಗಕ್ಕೆ ಸೇರಿದವೆಂದು ಅಭಿಪ್ರಾಯ ಪಡಲಾಗಿದೆ.
ಭೀಮ್‌ಬೇಟ್ಕಾದ ಶಿಲಾಶ್ರಯಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | (iii)(v) |
ಆಕರ | 925 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 2003 (27ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಮಧ್ಯ ಪ್ರದೇಶದ ರಾಜಧಾನಿ ಭೋಪಾಲದ ದಕ್ಷಿಣಕ್ಕೆ ಸುಮಾರು ೪೫ ಕಿ.ಮೀ. ದೂರದಲ್ಲಿರುವ ಭೀಮ್‌ಬೇಟ್ಕಾದ ಶಿಲಾಶ್ರಯಗಳು ವಿಂಧ್ಯ ಪರ್ವತಗಳ ದಕ್ಷಿಣದ ಅಂಚಿನಲ್ಲಿವೆ. ಇಲ್ಲಿನ ಪರಿಸರದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿದ್ದು ಅಂದಿನ ಕಾಲದ ಮಾನವನ ಜೀವನಕ್ಕೆ ಬಹಳ ಅನುಕೂಲಕರ ಪರಿಸರವಿದ್ದಿತು.
ಗುಹೆಗಳು
ಬದಲಾಯಿಸಿಭೀಮ್ಬೇಟ್ಕಾದ ಶಿಲಾಶ್ರಯಗಳನ್ನು ೧೮೮೮ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಅಲ್ಲಿನ ಆದಿವಾಸಿಗಳು ನೀಡಿದ ಮಾಹಿತಿಯ ಆಧಾರದ ಮೇರೆಗೆ ಬೌದ್ಧ ಕ್ಷೇತ್ರವೆಂದು ಘೋಷಿಸಿತ್ತು. ಮುಂದೆ ಸಂಶೋಧಕರು ಇಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಇತಿಹಾಸಪೂರ್ವ ಕಾಲದ ಅನೇಕ ಗುಹೆಗಳನ್ನು ಬೆಳಕಿಗೆ ತಂದರು. ಇಂದು ಈ ಪ್ರದೇಶದಲ್ಲಿ ೭೦೦ಕ್ಕೂ ಹೆಚ್ಚಿನ ಸಂಖ್ಯೆಯ ಶಿಲಾಶ್ರಯಗಳನ್ನು ಗುರುತಿಸಲಾಗಿದ್ದು ಇವುಗಳ ಪಕಿ ೨೪೩ ಭೀಮ್‌ಬೇಟ್ಕಾ ಸಮೂಹಕ್ಕೆ ಮತ್ತು ೧೭೮ ಲಾಖಾ ಜುವಾರ್ ಸಮೂಹಕ್ಕೆ ಸೇರಿವೆ. ಇಲ್ಲಿ ವಿಶ್ವದ ಅತಿ ಪ್ರಾಚೀನ ಮಾನವ ನಿರ್ಮಿತ ಕಲ್ಲಿನ ಗೋಡೆ ಮತ್ತು ಕಲ್ಲಿನ ನೆಲಹಾಸುಗಳನ್ನು ಬೆಳಕಿಗೆ ತರಲಾಗಿದೆ. ಭೀಮ್‌ಬೇಟ್ಕಾದ ಗುಹೆಗಳಲ್ಲಿ ಅಂದಿನ ಕಾಲದ ಮಾನವಜೀವನಕ್ಕೆ ಸಂಬಂಧಿಸಿರುವ ವರ್ಣಚಿತ್ರಗಳನ್ನು ದೊಡ್ಡ ಸಂಖ್ಯೆಯಲ್ಲಿ ರಚಿಸಲಾಗಿದೆ. ಇವು ಶಿಶುವಿನ ಜನನ, ಸಮೂಹ ನೃತ್ಯ, ಪಾನಗೋಷ್ಠಿ, ಧಾರ್ಮಿಕ ಕ್ರಿಯೆಗಳು , ಬೇಟೆಯಾಡುವಿಕೆ ಮತ್ತು ದಫನಗಳನ್ನು ಕುರಿತಾಗಿವೆ. ಜೊತೆಗೆ ಸುತ್ತಲಿನ ಪರಿಸರವನ್ನು ಬಿಂಬಿಸುವ ಚಿತ್ರಗಳು ಸಹ ಬಹಳಷ್ಟಿವೆ. ಈ ಪ್ರದೇಶದಲ್ಲಿ ಕಂಡುಬರುತ್ತಿದ್ದ ವನ್ಯಪ್ರಾಣಿಗಳನ್ನು ಕುರಿತ ವರ್ಣಚಿತ್ರಗಳು ಅನೇಕ.
--
ಬದಲಾಯಿಸಿಚಿತ್ರಗಳು
ಬದಲಾಯಿಸಿಇಲ್ಲಿನ ಚಿತ್ರಗಳಲ್ಲಿ ಕೆಂಪು ಮತ್ತು ಬಿಳಿ ಬಣ್ಣಗಳನ್ನು ಹೆಚ್ಚಾಗಿ ಬಳಸಲಾಗಿದೆ. ಉಳಿದಂತೆ ಹಸಿರು ಮತ್ತು ಹಳದಿ ಬಣ್ಣಗಳ ಬಳಕೆ ಸಹ ಮಾಡಲಾಗಿದೆ. ಸಾವಿರಾರು ವರ್ಷಗಳ ನಂತರ ಇಂದು ಸಹ ಇಲ್ಲಿನ ಚಿತ್ರಗಳ ಬಣ್ಣವು ಮಾಸದೆ ಉಳಿದಿರುವುದು ಒಂದು ಸೋಜಿಗದ ಸಂಗತಿಯಾಗಿದೆ. ಇಲ್ಲಿ ಬಳಲಾಗಿರುವ ಬಣ್ಣಗಳನ್ನು ಬಣ್ಣದ ಮಣ್ಣುಗಳು, ಸಸ್ಯಜನ್ಯ ವರ್ಣಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಮಿಶ್ರಮಾಡಿ ತಯಾರಿಸಲಾಯಿತೆಂದು ಅಭಿಪ್ರಾಯಪಡಲಾಗಿದೆ. ನಾರುಳ್ಳ ಸಸ್ಯಗಳ ಕಾಂಡವನ್ನು ಕುಂಚವನ್ನಾಗಿ ಬಳಸಿರಬಹುದು. ಸೂರ್ಯನ ತೀಕ್ಷ್ಣಬೆಳಕು ನೇರವಾಗಿ ಬೀಳದ ಸ್ಥಾನಗಳಲ್ಲಿ ಚಿತ್ರಗಳನ್ನು ರಚಿಸಿರುವುದು ಸಹ ಇಂದಿಗೂ ಇವುಗಳ ಬಣ್ಣ ಮಾಸದೆ ಇರುವುದಕ್ಕೊಂದು ಕಾರಣವಿರಬಹುದು.
ಇವನ್ನೂ ನೋಡಿ
ಬದಲಾಯಿಸಿಬಾಹ್ಯ ಸಂಪರ್ಕಕೊಂಡಿಗಳು
ಬದಲಾಯಿಸಿ- ಯುನೆಸ್ಕೋ ಅಧಿಕೃತ ತಾಣದಲ್ಲಿ ಭೀಮ್‌ಬೇಟ್ಕಾದ ಶಿಲಾಶ್ರಯಗಳ ಬಗ್ಗೆ ಮಾಹಿತಿ
- ಭೀಮ್ಬೇಟ್ಕಾದಲ್ಲಿನ ಇತಿಹಾಸಪೂರ್ವ ಕಾಲದ ಚಿತ್ರಕಲೆ Archived 2015-11-15 ವೇಬ್ಯಾಕ್ ಮೆಷಿನ್ ನಲ್ಲಿ.
- ಭೀಮ್‌ಬೇಟ್ಕಾದ ಛಾಯಾಚಿತ್ರಗಳು
- ಮಧ್ಯ ಪ್ರದೇಶ ಸರಕಾರದ ಪ್ರವಾಸೋದ್ಯಮ ಇಲಾಖೆಯ ಮಾಹಿತಿತಾಣ
- ಮಧ್ಯ ಭಾರತದ ಶಿಲಾಚಿತ್ರಕಲೆ