ಮಾಡಗಿರಿ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಒಂದು ದೊಡ್ಡ ಗ್ರಾಮ. ಮಾಡಗಿರಿಯು ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಗ್ರಾಮಕ್ಕೆ ಪ್ರಸಿದ್ಧವಾಗಿದೆ. ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗ್ರಾಮಗಳಲ್ಲಿ ಒಂದಾಗಿದೆ.ಇದು ತಾಲೂಕು ಕೇಂದ್ರ ಸಿರವಾರದಿಂದ 20 ಕೀ.ಮೀ.ಜಿಲ್ಲಾ ಕೇಂದ್ರವಾದ ರಾಯಚೂರಿನಿಂದ 45 ಕೀ. ಮೀ. ಮತ್ತು ರಾಜ್ಯದ ರಾಜಧಾನಿ ಬೆಂಗಳೂರುನಿಂದ ಸುಮಾರು 453 ಕೀ. ಮೀ. ದೂರದಲ್ಲಿದೆ.

ಮಾಡಗಿರಿ

ಮಾಡಗಿರಿ
ರಾಜ್ಯ
 - ಜಿಲ್ಲೆ
[[ಕರ್ನಾಟಕ]]
 - ರಾಯಚೂರು
ನಿರ್ದೇಶಾಂಕಗಳು 16.05° N 77.04° E
ವಿಸ್ತಾರ
 - ಎತ್ತರ
1791 km²
 - 680 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
4511
 - 179/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 584129
 - +
 - KA-36

ಜನಸಂಖ್ಯೆ

ಬದಲಾಯಿಸಿ

ಭಾರತಿಯ ಜನಗಣತಿ ೨೦೦೧ ರ ಪ್ರಕಾರ ಮಾಡಗಿರಿಯು ೪೫೧೧ ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ೨೨೭೨ ಮಹಿಳೆಯರು ಮತ್ತು ೨೨೩೯ ಪುರುಷರನ್ನು ಹೊಂದಿದೆ.[]

ಪ್ರಮುಖ ಜಾತ್ರೆಗಳು

ಬದಲಾಯಿಸಿ

ಗುಂಡಿನ ಮಾರುತೇಶ್ವರ ಜಾತ್ರೆ, ಬೆಟ್ಟದ ಬಸವೇಶ್ವರ ಜಾತ್ರೆ, ಬೀರಲಿಂಗೇಶ್ವರ ಜಾತ್ರೆ ಮತ್ತು ಮಾರಿಕಂಬಾ ದೇವಿ ಜಾತ್ರೆಗಳು ನಡೆಯುತ್ತವೆ.

ಸಾರಿಗೆ ಮತ್ತು ಸಂಪರ್ಕ

ಬದಲಾಯಿಸಿ

ಮಾಡಗಿರಿ ಗ್ರಾಮವೂ ರಾಜ್ಯ ಹೆದ್ದಾರಿ ಸಂಖ್ಯೆ ೬೧ ರ ಅಡ್ಡ ರಸ್ತೆಯಿಂದ ೩ ಕಿ.ಮೀ ದೂರದಲ್ಲಿದೆ.[] ಇಲ್ಲಿಂದ ಪ್ರಮುಖ ನಗರಗಳಾದ ಕಲಬುರ್ಗಿ, ಬಳ್ಳಾರಿ, ಬೆಂಗಳೂರು, ಯಾದಗಿರಿ, ಶಹಾಪುರ, ಮಾನ್ವಿ, ದೇವದುರ್ಗ ಮತ್ತು ಸಿರವಾರ ಮುಂತಾದ ಸ್ಥಳಗಳಿಗೆ ನೇರ ಬಸ್ ಸೌಲಭ್ಯವಿದೆ.

ಉಲ್ಲೇಖಗಳು

ಬದಲಾಯಿಸಿ
  1. https://geoiq.io/places/Madagiri/0OLGAhB1GX
  2. "ಆರ್ಕೈವ್ ನಕಲು". Archived from the original on 2022-09-26. Retrieved 2022-09-26.


ಬಾಹ್ಯ ಸಂಪರ್ಕಗಳು

ಬದಲಾಯಿಸಿ

ರಾಯಚೂರು ಜಿಲ್ಲೆ http://Raichur.nic.in/

"https://kn.wikipedia.org/w/index.php?title=ಮಾಡಗಿರಿ&oldid=1143262" ಇಂದ ಪಡೆಯಲ್ಪಟ್ಟಿದೆ