ಮಹಾಪದ್ಮ ನಂದ (ಸು. ಕ್ರಿ.ಶ. 400 - 329) ನಂದ ರಾಜವಂಶದ ಮೊದಲ ರಾಜನಾಗಿದ್ದನು. ಇವನು ಶಿಶುನಾಗ ರಾಜವಂಶದ ರಾಜ ಮಹಾನಂದಿನ್ ಮತ್ತು ಒಬ್ಬ ಶೂದ್ರ ತಾಯಿಯ ಮಗನಾಗಿದ್ದನು. ಮಹಾನಂದಿನ್‍ನ ಇತರ ಹೆಂಡತಿಯರಿಂದ ಹುಟ್ಟಿದ ಪುತ್ರರು ಮಹಾಪದ್ಮ ನಂದನ ಏಳಿಗೆಯನ್ನು ವಿರೋಧಿಸಿದರು. ಇದಕ್ಕೆ ಪ್ರತಿಯಾಗಿ ಮಹಾಪದ್ಮನಂದನು ಅವರೆಲ್ಲರನ್ನೂ ತೊಡೆದುಹಾಕಿ ಸಿಂಹಾಸನವೇರಿದನು.

ಮಹಾಪದ್ಮ ನಂದ
ನಂದ ರಾಜವಂಶದ ರಾಜ
ಆಳ್ವಿಕೆ ಸು. ಕ್ರಿ.ಶ. 345 - 329
ಪೂರ್ವಾಧಿಕಾರಿ ಮಹಾನಂದಿನ್
ಉತ್ತರಾಧಿಕಾರಿ ಧನ ನಂದ
ಸಂತಾನ
ಧನ ನಂದ
ತಂದೆ ಮಹಾನಂದಿನ್
ಜನನ ಕ್ರಿ.ಪೂ. 400
ಮರಣ ಕ್ರಿ.ಪೂ. 329

ಹೆಸರುಗಳು

ಬದಲಾಯಿಸಿ

ಪುರಾಣಗಳ ಪ್ರಕಾರ ಮೊದಲ ನಂದನು ಮಹಾಪದ್ಮ ಅಥವಾ ಮಹಾಪದ್ಮಪತಿ ಎಂದು ಮತ್ತು ಬೋಧಿವಂಶದ ಪ್ರಕಾರ ಉಗ್ರಸೇನ ಎಂಬ ಹೆಸರನ್ನು ಹೊಂದಿದನು.[] ಪುರಾಣಗಳು ಇವನನ್ನು ಎಲ್ಲ ಕ್ಷತ್ರಿಯರ ವಿನಾಶಕ ಎಂದು ವರ್ಣಿಸಿದವು.[]

ಪರಿಶಿಷ್ಟಪರ್ವನ್ ಮತ್ತು ಆವಶ್ಯಕ ಸೂತ್ರದಂತಹ ಜೈನ ಕೃತಿಗಳು ಇವನನ್ನು ಒಬ್ಬ ಗಣಿಕೆ ಮತ್ತು ಒಬ್ಬ ಕ್ಷೌರಿಕನ ಮಗನೆಂದು ವರ್ಣಿಸುತ್ತವೆ.[][]

ವಾಸ್ತವವಾಗಿ ಅವನ ತಂದೆ ಒಬ್ಬ ಕ್ಷೌರಿಕನಾಗಿದ್ದನು, ಮತ್ತು ತನ್ನ ದಿನದ ವರಮಾನದಿಂದ ಕಷ್ಟದಿಂದ ಹಸಿವನ್ನು ನಿವಾರಿಸಿಕೊಳ್ಳುತ್ತಿದ್ದನು. ಆದರೆ, ವ್ಯಕ್ತಿತ್ವದಲ್ಲಿ ಯೋಗ್ಯನಿದ್ದ ಕಾರಣ ರಾಣಿಯ ಅಕ್ಕರೆಯನ್ನು ಗಳಿಸಿದ್ದನು ಮತ್ತು ಅವಳ ಪ್ರಭಾವದಿಂದ ಆಳುತ್ತಿದ್ದ ರಾಜನ ವಿಶ್ವಾಸ ಪಡೆದುಕೊಂಡನು. ಆದರೆ ನಂತರ, ಅವನು ತನ್ನ ಸಾರ್ವಭೌಮನನ್ನು ಮೋಸದಿಂದ ಕೊಲೆ ಮಾಡಿದನು, ಮತ್ತು ರಾಜನ ಮಕ್ಕಳಿಗೆ ಪೋಷಕನಾಗಿ ಕಾರ್ಯನಿರ್ವಹಿಸುವ ಸೋಗಿನಲ್ಲಿ ಸರ್ವೋಚ್ಚ ಅಧಿಕಾರವನ್ನು ಆಕ್ರಮಿಸಿಕೊಂಡನು, ಮತ್ತು ಯುವ ರಾಜಕುಮಾರನನ್ನು ಸಾಯಿಸಿ ಪ್ರಸಕ್ತ ರಾಜನಿಗೆ ಜನ್ಮವಿತ್ತನು.[]

— ಕರ್ಟಿಯಸ್

ಎಂದು ರೋಮನ್ ಇತಿಹಾಸಕಾರ ಕರ್ಟಿಯಸ್ ತಿಳಿಸುತ್ತಾನೆ.

ಒಬ್ಬ ಭಾರತಾದ್ಯಯನಕಾರನು ನಂದನ ಪಟ್ಟಾಭಿಷೇಕ ಕ್ರಿ.ಪೂ. ೩೮೨ ಎಂದು ಕಾಲನಿರ್ಣಯ ಮಾಡಿದನು, ಮತ್ತೊಬ್ಬರು ಇದನ್ನು ಕ್ರಿ.ಪೂ. ೩೬೪ ಎಂದು ಕಾಲನಿರ್ಣಯ ಮಾಡಿದರು.[] ಆದರೆ, ರಾಯ್‍ಚೌಧರಿ ಈ ಘಟನೆಯನ್ನು ಸು. ಕ್ರಿ.ಪೂ. ೩೪೫ ಎಂದು ನಿಗದಿ ಮಾಡುತ್ತಾರೆ.[]

ಪುರಾಣಗಳ ಪ್ರಕಾರ, ಮಹಾಪದ್ಮನಿಗೆ ಎಂಟು ಪುತ್ರರಿದ್ದರು.[] ಇವನು ಪಾಂಚಾಲ, ಕಾಸಿ, ಹೈಹಯ, ಕಲಿಂಗ[lower-alpha ೧], ಅಶ್ಮಕ, ಕುರು, ವಿದೇಹ, ಶೂರಸೇನ, ವಿತಿಹೋತ್ರ ಸೇರಿದಂತೆ ಅನೇಕ ರಾಜ್ಯಗಳನ್ನು ಪರಾಜಿತಗೊಳಿಸಿದನು.[]

ಟಿಪ್ಪಣಿಗಳು

ಬದಲಾಯಿಸಿ
  1. ಕಲಿಂಗ ನಂದ ಸಾಮ್ರಾಜ್ಯದ ಭಾಗವಾಗಿತ್ತು ಆದರೆ ತರುವಾಯ ಬೇರೆಯಾಯಿತು. ಅಶೋಕನಿಂದ ಸು. ಕ್ರಿ.ಪೂ. ೨೬೦ರಲ್ಲಿ ಪುನಃ ವಶಪಡಿಸಿಕೊಳ್ಳುವವರೆಗೆ ಇದು ಮುಕ್ತವಾಗಿಯೇ ಇತ್ತು.[][]


ಆಧಾರಗಳು

ಬದಲಾಯಿಸಿ


ಉಲ್ಲೇಖಗಳು

ಬದಲಾಯಿಸಿ