ಕ್ಷೌರಿಕನು ಮುಖ್ಯವಾಗಿ ಪುರುಷರ ಮತ್ತು ಹುಡುಗರ ಕೂದಲನ್ನು ಕತ್ತರಿಸುವ, ಬಾಚಿ ಕಟ್ಟುವ, ಅಂದಗೊಳಿಸುವ, ವಿನ್ಯಾಸಗೊಳಿಸುವ ಮತ್ತು ಬೋಳಿಸುವ ವೃತ್ತಿ ಹೊಂದಿದ ವ್ಯಕ್ತಿ.

Interior of a barber's shop, circa 1920

ಇತಿವೃತ್ತ

ಬದಲಾಯಿಸಿ
  • ಮಕ್ಕಳಿಂದಿಡಿದು ಮುದುಕರವರೆಗೂ ಎಲ್ಲರಿಗೂ ಅನಿವಾರ್ಯವಾಗಿ ಬೇಕಾದ ವ್ಯಕ್ತಿ ಈತನಾಗಿದ್ದಾನೆ ಶ್ರೀಮಂತರಿಗೆ ಮಾತ್ರ ಕ್ಷೌರ ಮಾಡಿಸಿಕೊಳ್ಳುವ, ತಲೆಗೂದಲನ್ನು ಕತ್ತರಿಸಿ ಕೊಳ್ಳುವ ಅವಕಾಶವಿತ್ತು. ಆತನ ಸಂಬಳವೂ ಬಹಳ ಕಡಿಮೆ ಇತ್ತು.
  • ಕಾಲ ಬದಲಾದಂತೆ ಎಲ್ಲಾ ಜಾತಿ, ಧರ್ಮ, ವರ್ಗಗಳ ಜನರಿಗೂ ಕ್ಷೌರಿಕ ಅಗತ್ಯವ್ಯಕ್ತಿಯಾಗತೊಡಗಿದ. ವಿಧ ವಿಧ ಶೈಲಿಯಲ್ಲಿ ಜನ ತಲೆಗೂದಲನ್ನು ಕತ್ತರಿಸಿಕೊಳ್ಳ ತೊಡಗಿದರು. ಒಂದು ಕಾಲದಲ್ಲಿ ಹೀನಾಯ ವೃತ್ತಿಯಾಗಿದ್ದ ಕ್ಷೌರಿಕ ಕಾಯಕ ಇಂದು ಗೌರವಯುತ ಕೆಲಸವಾಗಿ ಮಾರ್ಪಟ್ಟಿದೆ.

ಆಧುನಿಕತೆ ಬೆಳೆದಂತೆಲ್ಲಾ ಕ್ಷೌರವಿನ್ಯಾಸದಲ್ಲಿ ಹೊಸ ಹೊಸ ಬದಲಾವಣೆಗಳಾಗಿ ಕ್ಷೌರಿಕರು ತಮ್ಮ ವ್ಯಾಪಾರ ವೃತ್ತಿಯನ್ನು ಬದಲಾಯಿಸಿಕೊಂಡಿದ್ದಾರೆ. ಕ್ಷೌರದಂಗಡಿಗಳು ಸಾಮಾಜಿಕ ಸೇರಿಕೆ ಮತ್ತು ಸಾರ್ವಜನಿಕ ಸಂವಾದದ ಸ್ಥಳಗಳು ಕೂಡ. ಒಂದು ರೀತಿಯಲ್ಲಿ ಅದು ಅರಳಿಕಟ್ಟೆ ಇದ್ದಂತೆ. ಪ್ರತಿ ಊರುಗಳಲ್ಲಿಯೂ ಕ್ಷೌರಿಕನ ಅಂಗಡಿಳು ಇದ್ದೇ ಇರುತ್ತವೆ.

  • ಕೆಲವು ಸಂದರ್ಭಗಳಲ್ಲಿ, ಕ್ಷೌರದಂಗಡಿಗಳು ಸಾರ್ವಜನಿಕ ವೇದಿಕೆಗಳು ಕೂಡ. ಅವು ಮುಕ್ತ ಚರ್ಚೆಗಳು, ಸಾರ್ವಜನಿಕ ಕಳವಳಗಳನ್ನು ತಿಳಿಸುವ, ಮತ್ತು ನಾಗರಿಕರನ್ನು ಸಮಕಾಲೀನ ವಿಷಯಗಳ ಬಗ್ಗೆ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ನೆಲೆಗಳು. ಅವು ಪುರುಷ ಅಸ್ಮಿತೆಯನ್ನು ನಿರ್ಮಿಸಲು ಸಹಾಯಮಾಡುವುದರಲ್ಲೂ ಪ್ರಭಾವಶಾಲಿಯಾಗಿದ್ದವು.
  • ಹಿಂದಿನ ಕಾಲದಲ್ಲಿ, ಕ್ಷೌರಿಕರು ಶಸ್ತ್ರಚಿಕಿತ್ಸೆ ಮತ್ತು ದಂತಚಿಕಿತ್ಸೆಯನ್ನೂ ನಡೆಸುತ್ತಿದ್ದರು. ನಿರಪಾಯ ಕತ್ತಿಗಳ ಅಭಿವೃದ್ಧಿ ಮತ್ತು ಗಡ್ಡಗಳ ಇಳಿಕೆಯಾಗುತ್ತಿರುವ ವ್ಯಾಪಕತೆಯೊಂದಿಗೆ, ಇಂಗ್ಲಿಷ್ ಮಾತನಾಡುವ ಸಂಸ್ಕೃತಿಗಳಲ್ಲಿ, ಬಹುತೇಕ ಕ್ಷೌರಿಕರು ಈಗ ಪುರುಷರ ಮುಖದ ಕೂದಲ ಬದಲು ನೆತ್ತಿ ಕೂದಲು ಕತ್ತರಿಸುವುದರಲ್ಲಿ ಪರಿಣಿತರಾಗಿದ್ದಾರೆ.
  • ಐತಿಹಾಸಿಕವಾಗಿ, ಎಲ್ಲ ಕೇಶ ವಿನ್ಯಾಸಕರು ಕ್ಷೌರಿಕರೆಂದು ಪರಿಗಣಿತರಾಗಿದ್ದರು. ೨೦ನೇ ಶತಮಾನದಲ್ಲಿ, ಪ್ರಸಾಧನ ಕಲೆ ಕ್ಷೌರ ವೃತ್ತಿಯಿಂದ ಕವಲೊಡೆಯಿತು, ಮತ್ತು ಇಂದು ಕೇಶ ವಿನ್ಯಾಸಕರು ಕ್ಷೌರಿಕರು ಅಥವಾ ಪ್ರಸಾಧನ ವೃತ್ತಿಗರಾಗಿ ಪರವಾನಗಿ ಪಡೆದಿರಬಹುದು.
"https://kn.wikipedia.org/w/index.php?title=ಕ್ಷೌರಿಕ&oldid=1141994" ಇಂದ ಪಡೆಯಲ್ಪಟ್ಟಿದೆ