ಭಿನ್ನವರ್ತನೆ
ಭಿನ್ನವರ್ತನೆ(allotropy) ರಸಾಯನಶಾಸ್ತ್ರದಲ್ಲಿ ಒಂದು ಮೂಲಧಾತುವು ಒಂದಕ್ಕಿಂತ ಹೆಚ್ಚಿನ ರೂಪದಲ್ಲಿ ಇರುವ ಸಾಮರ್ಥ್ಯವನ್ನು ಭಿನ್ನವರ್ತನೆ ಎಂದು ಕರೆಯುತ್ತಾರೆ.ಉದಾಹರಣೆಗೆ ಇಂಗಾಲವು ಮೂರು ರೂಪಗಳಲ್ಲಿ ಪ್ರಕೃತಿಯಲ್ಲಿ ಕಂಡುಬರುತ್ತದೆ. ೧)ಗಟ್ಟಿಯಾದ ಹಾಗೂ ಪಾರದರ್ಶಕವಾದ ವಜ್ರದ ರೂಪದಲ್ಲಿ,೨)ಮೆದುವಾದ ಹಾಗೂ ಕಪ್ಪಾದ ಗ್ರಾಫೈಟ್ ಹರಳಿನ ರೂಪದಲ್ಲಿ;೩) ಕಪ್ಪಾದ ಪುಡಿಯ ರೂಪದಲ್ಲಿ. ಘನರೂಪದ ಮೂಲಧಾತುಗಳ ಭಿನ್ನವರ್ತನೆಗಳು ಅದರ ಹರಳಿನ ರಚನೆಯಲ್ಲಿ ಬದಲಾವಣೆಯ ರೂಪದಲ್ಲಿ ಕಂಡು ಬಂದರೆ,ಅನಿಲ ರೂಪದ ಮೂಲಧಾತುಗಳ ಭಿನ್ನವರ್ತನೆಗಳು ಅದರ ಅಣುರಚನೆಯ ವ್ಯತ್ಯಾಸದ ರೂಪದಲ್ಲಿ ಕಂಡುಬರುತ್ತದೆ.ಆಮ್ಲಜನಕವು ಎರಡು ರೂಪದಲ್ಲಿ ಕಂಡುಬರುತ್ತದೆ.ಸಾಮಾನ್ಯ ಆಮ್ಲಜನಕದಲ್ಲಿ ಎರಡು ಪರಮಾಣು ಜತೆಯಾಗಿ ಇದ್ದರೆ ಓಜೋನ್ ಅನಿಲ (ಆಮ್ಲಜನಕದ ಭಿನ್ನವರ್ತನೆ)ದಲ್ಲಿ ಮೂರು ಪರಮಾಣುಗಳು ಸೇರಿ ಇರುತ್ತವೆ. ಸಾಮಾನ್ಯ ಆಮ್ಲಜನಕಕ್ಕೆ ಯಾವುದೇ ವಾಸನೆ ಇರದಿದ್ದರೂ ಓಜೋನ್‌ಗೆ ನಿರ್ದಿಷ್ಟವಾದ ತೀಕ್ಷ್ಣ್ಣವಾಸನೆ ಇರುತ್ತದೆ.ಭಿನ್ನವರ್ತನೆಗಳನ್ನು ಹೊಂದಿರುವ ಕೆಲವು ಮುಖ್ಯ ಮೂಲಧಾತುಗಳು:ಇಂಗಾಲ,ಆಮ್ಲಜನಕ,ರಂಜಕ,ಸಾರಜನಕ,ಗಂಧಕ,ಸಿಲಿಕಾನ್,ಕಬ್ಬಿಣ.