ಬನಶಂಕರಿ ದೇವಿ ಕ್ಷೇತ್ರ

ಬನಶಂಕರಿ ದೇವಿ ಕ್ಷೇತ್ರವು ಬಾದಾಮಿಯ ಚೊಳಚಗುಡ್ಡ ಎಂಬ ಊರಿನಲ್ಲಿದೆ. ಬನಶಂಕರಿ ದೇವಿಯ ಜಾತ್ರೆ ಉತ್ತರ ಕರ್ನಾಟಕದ ಬಹು ದೊಡ್ಡ ಜಾತ್ರೆ. ನೂರಾರು ವರ್ಷಗಳಿಂದ ಈ ಜಾತ್ರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಜಾತ್ರೆಗೆ ನೆರೆ ರಾಜ್ಯಗಳಿಂದ (ಮಹಾರಾಷ್ಟ್ರ) ಸಾವಿರಾರು ಜನರು ಬರುತ್ತಾರೆ

.ಶಾಕಂಭರಿ ದೇವಿಯ ಮೊದಲ ಶಕ್ತಿಪೀಠ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿದೆ. ಶಾಕಂಭರಿ ದೇವಿಯ ಇತರ ಎಲ್ಲಾ ದೇವಾಲಯಗಳನ್ನು ಈ ಶಕ್ತಿಪೀಠದ ನಂತರ ನಿರ್ಮಿಸಲಾಗಿದೆ.ಶಾಕಂಭರಿ ದೇವಿಯ ಮೊದಲ ಶಕ್ತಿಪೀಠ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿದೆ. ಶಾಕಂಭರಿ ದೇವಿಯ ಇತರ ಎಲ್ಲಾ ದೇವಾಲಯಗಳನ್ನು ಈ ಶಕ್ತಿಪೀಠದ ನಂತರ ನಿರ್ಮಿಸಲಾಗಿದೆ.

ದೇಶದಲ್ಲಿರುವ ಶಕ್ತಿ ದೇವತೆಯ ಪ್ರಮುಖ ಪೀಠಗಳಲ್ಲಿ ಬನಶಂಕರಿ ಕ್ಷೇತ್ರವೂ ಒಂದು. ಬನಶಂಕರಿ ದೇವಿ ಚಾಲುಕ್ಯ ಕುಲದೇವತೆ. ಬನಶಂಕರಿ ದೇವಾಲಯವು ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದು ಎನ್ನಲಾಗಿದೆ. ಹಳೆಯ ಬನಶಂಕರಿ ದೇವಾಲಯದ ಗರ್ಭ ಗೃಹವು ಮಣ್ಣಿನಲ್ಲಿ ಹೂತು ಹೋಗಿದೆ. ಈ ಪೀಠದಲ್ಲಿ ಪರಶುರಾಮ ಅನಗಳ ಎಂಬುವವರ ಹೆಸರು ಸಹ ಇದೆ.

ಬನಶಂಕರಿದೇವಿ ಮೂರ್ತಿ

ಬದಲಾಯಿಸಿ

ಬನಶಂಕರಿ ದೇವಿಯ ಮೂರ್ತಿ ಐದು ಅಡಿ ಎತ್ತರವಿದೆ. ಕಪ್ಪು ಶಿಲೆಯಲ್ಲಿ ಸಿಂಹ ರೂಪಿಣಿಯಾಗಿ ತಾಯಿ ಮೂಡಿದ್ದಾಳೆ. ದೇವಿಗೆ ಅಷ್ಟ ಭುಜ,ಕೈಗಳಿವೆ. ಬಲಗೈಯಲ್ಲಿ ಖಡ್ಗ, ಗಂಟೆ, ತ್ರಿಶೂಲ ಮತ್ತು ಲಿಪ್ತಿ ಹಾಗೂ ಎಡಗೈಯಲ್ಲಿ ಡಮರು, ಡಾಲು, ರುಂಡ ಮತ್ತು ಅಮೃತ ಪಾತ್ರೆಗಳಿವೆ. ಈ ದೇವಿ ತ್ರಿನೇತ್ರೆ. ಬನಶಂಕರಿಯನ್ನು ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತಿ ಎಂತಲೂ ಕರೆಯುತ್ತಾರೆ. ತಾಯಿಯ ಬಲಗೈಯು ಸುಜ್ಞಾನದ ಸಂಕೇತವಾದರೆ ಎಡಗೈಯು ಶೌರ್ಯದ ಸಂಕೇತವಾಗಿದೆ. ದೇವಸ್ಥಾನದ ಶಿಖರವು ಚೌಕ ಕೋನಾಕಾರವಾಗಿ ಹಂತ ಹಂತವಾಗಿ ಮೇಲೆರುತ್ತಾ ಹೋಗಿದೆ. ಗೋಪುರದಲ್ಲಿ ಯಾವ ದೇವರ ವಿಗ್ರಹಗಳೂ ಇಲ್ಲ. ದೇವಾಲಯಕ್ಕೆ ನಾಲ್ಕೂ ದಿಕ್ಕಿನಲ್ಲಿ ದ್ವಾರಗಳಿವೆ. ದೇವಾಲಯದ ಆವರಣದಲ್ಲಿ ನಾಲ್ಕು ದೀಪಸ್ತಂಭಗಳಿವೆ. ಕಾರ್ತಿಕ ಮಾಸದಲ್ಲಿ ಈ ದೀಪಸ್ತಂಭಗಳಲ್ಲಿ ಭಕ್ತರು ದೀಪವನ್ನು ಬೆಳಗಿಸುತ್ತಾರೆ.