ಡಮರು
ಡಮರು ಹಿಂದೂ ಧರ್ಮ ಮತ್ತು ಟಿಬೇಟಿಯನ್ ಬೌದ್ಧ ಧರ್ಮದಲ್ಲಿ ಬಳಸಲ್ಪಡುವ ಒಂದು ಸಣ್ಣದಾದ ಎರಡು-ತಲೆಯ ಡೋಲು. ಹಿಂದೂ ಧರ್ಮದಲ್ಲಿ, ಡಮರುವನ್ನು ಶಿವನ ವಾದ್ಯವೆಂದು ಕರೆಯಲಾಗುತ್ತದೆ ಮತ್ತು ಆಧ್ಯಾತ್ಮಿಕ ಶಬ್ದಗಳನ್ನು ಉತ್ಪತ್ತಿ ಮಾಡಲು ಶಿವನಿಂದ ಸೃಷ್ಟಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಈ ಶಬ್ದಗಳಿಂದಲೇ ಬ್ರಹ್ಮಾಂಡದ ಸೃಷ್ಟಿ ಮತ್ತು ನಿಯಂತ್ರಣವಾಗುತ್ತದೆ ಎಂದು ಹೇಳಲಾಗಿದೆ. ಟಿಬೇಟಿಯನ್ ಬೌದ್ಧ ಧರ್ಮದಲ್ಲಿ, ಡಮರುವನ್ನು ತಾಂತ್ರಿಕ ಆಚರಣೆಗಳಲ್ಲಿ ವಾದ್ಯವಾಗಿ ಬಳಸಲಾಗುತ್ತದೆ.
ಸಾಮಾನ್ಯವಾಗಿ ಡಮರುವನ್ನು ಕಟ್ಟಿಗೆ, ಲೋಹ, ಅಥವಾ ಮೂಳೆಯಿಂದ (ವಿಶಿಷ್ಟವಾಗಿ ಮಾನವ ಕಪಾಲಗಳ ಪೀನ ಅಗ್ರಭಾಗಗಳು) ತಯಾರಿಸಲಾಗುತ್ತದೆ, ಮತ್ತು ಎರಡೂ ಕೊನೆಗಳಲ್ಲಿ ಚಕ್ಕಳದ ಮೇಲ್ಭಾಗಗಳಿರುತ್ತವೆ. ಅನುರಣಕವನ್ನು ಹಿತ್ತಾಳೆಯಿಂದ ತಯಾರಿಸಲಾಗುತ್ತದೆ. ಡಮರುವಿನ ಎತ್ತರ ೬ ಅಂಗುಲಗಳು ಮತ್ತು ತೂಕ ೨೫೦-೩೩೦ ಗ್ರಾಮ್‍ವರೆಗೆ ಬದಲಾಗುತ್ತದೆ.[೧] ಇದರ ಎತ್ತರ ಕೆಲವು ಅಂಗುಲಗಳಿಂದ ಒಂದು ಅಡಿಗಿಂತ ಸ್ವಲ್ಪ ಹೆಚ್ಚು ಇತುತ್ತದೆ. ಇದನ್ನು ಒಂದೇ ಕೈಯಿಂದ ನುಡಿಸಲಾಗುತ್ತದೆ. ಬಡಿಯುವ ಸಾಧನಗಳು ಸಾಮಾನ್ಯವಾಗಿ ಡಮರುವಿನ ನಡದ ಸುತ್ತಲಿರುವ ಚಕ್ಕಳದ ಹುರಿಗಳ ಕೊನೆಗಳಿಗೆ ಬಂಧಿಸಲಾದ ಮಣಿಗಳಾಗಿರುತ್ತವೆ. ಚಕ್ಕಳದಲ್ಲಿನ ಗಂಟುಗಳನ್ನೂ ಬಡಿಯುವ ಸಾಧನಗಳಾಗಿ ಬಳಸಬಹುದು, ಕ್ರೋಶ ವಸ್ತುವೂ ಸಾಮಾನ್ಯವಾಗಿದೆ. ಬಾರಿಸುವವನು ತಿರುಚು ಮಣಿಕಟ್ಟು ಚಲನೆಯನ್ನು ಬಳಸಿ ಡಮರುವನ್ನು ಆಡಿಸಿದಾಗ, ಬಡಿಯುವ ಸಾಧನಗಳು ಡಮರುವಿನ ಶಿರದ ಮೇಲೆ ಹೊಡೆಯುತ್ತವೆ.
ಭಾರತೀಯ ಉಪಖಂಡದಾದ್ಯಂತ ಡಮರು ಬಹಳ ಸಾಮಾನ್ಯವಾಗಿದೆ. ಡಮರುವನ್ನು ನುಡಿಸಿದಾಗ ಅದು ಆಧ್ಯಾತ್ಮಿಕ ಶಕ್ತಿಯನ್ನು ಉತ್ಪಾದಿಸುತ್ತದೆ ಎಂದು ನಂಬಲಾಗಿದೆ. ಇದು ಹಿಂದೂ ದೇವತೆ ಶಿವನೊಂದಿಗೆ ಸಂಬಂಧಿಸಿದೆ. ಸಂಸ್ಕೃತ ಭಾಷೆಯನ್ನು ಡಮರುವಿನ ಬಡಿತಗಳಿಂದ ಮತ್ತು ಅವನ ತಾಂಡವ ನೃತ್ಯ ಪ್ರದರ್ಶನದಿಂದ ಗುರುತಿಸಲಾಯಿತು ಎಂದು ನಂಬಲಾಗಿದೆ. ಅದರ ಚಿಕ್ಕದಾದ ಭಾರವಿಲ್ಲದ ಗಾತ್ರದ ಕಾರಣ, ಡಮರುವನ್ನು ಸಂಚಾರಿ ಸಂಗೀತಗಾರರು ಬಳಸುತ್ತಾರೆ.
ಕೆಲವು ಡಮರುಗಳ ಗುರಾಣಿ ಆಕಾರದಲ್ಲಿ, ತ್ರಿಕೋನಾಕಾರದ ಮೇಲಿನ ಚಿತ್ರಣ ಪುರುಷ ಜನನಾಂಗವನ್ನೂ ಸಂಕೇತಿಸುತ್ತದೆ (ಲಿಂಗ), ಮತ್ತು ಕೆಳಮುಖದ ದುಂಡನೆಯ ಚಿತ್ರಣ ಸ್ತ್ರೀ ಜನನಾಂಗವನ್ನು ಸಂಕೇತಿಸುತ್ತದೆ (ಯೋನಿ). ಸಾಂಕೇತಿಕವಾಗಿ, ಲಿಂಗ ಮತ್ತು ಯೋನಿಗಳು ಡಮರುವಿನ ಮಧ್ಯಬಿಂದುವಿನಲ್ಲಿ ಸೇರಿದಾಗ, ವಿಶ್ವದ ಸೃಷ್ಟಿ ಆರಂಭವಾಗುತ್ತದೆ, ಮತ್ತು ಅವು ಪರಸ್ಪರ ಪ್ರತ್ಯೇಕಗೊಂಡಾಗ ವಿನಾಶವಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ