ಪದ್ಮಭೂಷಣ

ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ
(ಪದ್ಮಭೂಷಣ ಪ್ರಶಸ್ತಿ ಇಂದ ಪುನರ್ನಿರ್ದೇಶಿತ)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪದ್ಮಭೂಷಣ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೧೨೫೪
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಹಿಂದಿನ ಹೆಸರು(ಗಳು) ಪದ್ಮವಿಭೂಷಣ
ದೂಸ್ರಾ ವರ್ಗ್
Ribbon
ಪ್ರಶಸ್ತಿಯ ಶ್ರೇಣಿ
ಪದ್ಮ ವಿಭೂಷಣಪದ್ಮಭೂಷಣಪದ್ಮಶ್ರೀ

ಪುರಸ್ಕೃತರ ಪಟ್ಟಿ

ಬದಲಾಯಿಸಿ


ಆಧಾರಗಳು

ಬದಲಾಯಿಸಿ
  1. "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2015-01-31.
  2. English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ