ಜಮಲಾಬಾದ್ ಕೋಟೆಯು ಕರ್ನಾಟಕದಕ್ಷಿಣ ಕನ್ನಡ ಜಿಲ್ಲೆಬೆಳ್ತಂಗಡಿಯಿಂದ ೮ ಕಿ.ಮಿ ಉತ್ತರದಲ್ಲಿದೆ(ಮಂಗಳೂರಿನಿಂದ ೬೫ ಕಿ.ಮಿ) ಇದು ಸಮುದ್ರ ಮಟ್ಟಕ್ಕಿಂತ ೧೭೮೮ ಅಡಿ ಎತ್ತರದಲ್ಲಿದ್ದು ಹಿಂದೆ ನರಸಿಂಹ ಘಡ ಎಂದು ಕರೆಯಲ್ಪಡುತ್ತಿತ್ತು. ಮೈಸೂರು ಸಂಸ್ಥಾನವನ್ನು ಆಳಿದ ಟಿಪ್ಪುವು ತನ್ನ ಸಂಪ್ರದಾಯದಂತೆ ಈ ಕೋಟೆಯ ಹೆಸರು ಬದಲಾಯಿಸಿ ಜಮಾಲಾಬಾದ್ ಎಂದು ಕರೆದನು. ಇದಕ್ಕೆ ಗಡಾಯಿಕಲ್ಲು ಎಂದೂ ಕರೆಯುತ್ತಾರೆ.ಇಲ್ಲಿಗೆ ಬೆಳ್ತಂಗಡಿ-ಉಜಿರೆ ರಸ್ತೆಯಲ್ಲಿ ಸಿಗುವ ಲಾಯಿಲ(ಭಗತ್ ಸಿಂಗ್ ವೃತ್ತ) ಎಂಬಲ್ಲಿ ತಿರುಗಿ ಸುಮಾರು 5 ಕಿಮೀ ಪ್ರಯಾಣಿಸಿದಾಗ ಗಡಾಯಿಕಲ್ಲಿಗೆ ಹೋಗುವ ರಸ್ತೆ ಸಿಗುತ್ತದೆ.ಅದರಲ್ಲಿ 2 ಕಿಮೀ ಕ್ರಮಿಸಿದಾಗ ಗಡಾಯಿಕಲ್ಲಿನ ಪ್ರವೇಶ ಸ್ಥಳ ಸಿಗುತ್ತದೆ.ವಯಸ್ಸಿಗನುಸಾರ ಚಾರಣಕ್ಕೆ ಅವಕಾಶವಿದೆ.

Gadaikallu entrance, Reading: Welcome to Jamlabad, height:1700 feet
ಕೋಟೆಗೆ ಏರುವ ಕಿರಿದಾದ ಮೆಟ್ಟಿಲು
ಬೆಟ್ಟದ ತುದಿಯಿಂದ ಕಾಣುವ ನೋಟ

ಬಾಹ್ಯ ಸಂಪರ್ಕಗಳು

ಬದಲಾಯಿಸಿ
Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.