ಉಜಿರೆ
ಉಜಿರೆ ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ ಒಂದು ಚಿಕ್ಕ ಪಟ್ಟಣ. ಇದು ಬೆಳ್ತಂಗಡಿಯಿಂದ ಚಾರ್ಮಾಡಿ ಅಥವಾ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ೬ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಶ್ರೀಕ್ಷೇತ್ರ ಧರ್ಮಸ್ಥಳವು ೯ ಕಿ.ಮೀ. ದೂರ ಇದೆ.
ಉಜಿರೆ
ಉಜ್ರೆ | |
---|---|
ಪಟ್ಟಣ | |
Coordinates: 12°59′31″N 75°19′55″E / 12.992°N 75.332°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
Population | |
• Total | ೧೩,೪೨೯ |
ಭಾಷೆಗಳು | |
• ಅಧಿಕೃತ | ಕನ್ನಡ, ತುಳು |
Time zone | UTC+5:30 (Indian Standard Time) |
ಪಿನ್ ಕೋಡ್ | 574240 |
Telephone code | 08256 |
ಜನಸಂಖ್ಯೆ
ಬದಲಾಯಿಸಿ೨೦೧೧ ರ ಭಾರತದ ಜನಗಣತಿಯ ಪ್ರಕಾರ ಉಜಿರೆಯು 13429 ಜನಸಂಖ್ಯೆಯನ್ನು ಹೊಂದಿದ್ದು, 6628 ಪುರುಷರು ಮತ್ತು 6801 ಮಹಿಳೆಯರು ಇದ್ದಾರೆ.[೧]
ಶಿಕ್ಷಣ ಸಂಸ್ಥೆಗಳು
ಬದಲಾಯಿಸಿಉಜಿರೆ ಶೈಕ್ಷಣಿಕ ಪಟ್ಟಣವೆಂದು ಖ್ಯಾತಿ ಪಡೆದಿದೆ.
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು,
- ಎಸ್ ಡಿ ಎಂ ಸ್ನಾತಕೋತ್ತರ ಕಾಲೇಜು,
- ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜು,
- ಎಸ್ ಡಿ ಎಂಪ್ರಕೃತಿ ಮತ್ತು ಯೋಗ ಚಿಕಿತ್ಸೆಯ ಕಾಲೇಜು,
- ಎಸ್ ಡಿ ಎಂ ಪದವಿಪೂರ್ವ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳಿವೆ.
ಧಾರ್ಮಿಕ ಸ್ಥಳಗಳು
ಬದಲಾಯಿಸಿ- ಶ್ರೀ ಜನಾರ್ಧನಸ್ವಾಮಿ ದೇವಸ್ಥಾನ
- ಸೂರ್ಯ ಸದಾಶಿವರುದ್ರ ದೇವಾಲಯ,
- ಸೇಂಟ್. ಆಂಟನಿ ಚರ್ಚ್, ಉಜಿರೆ
- ಮೊಹಿದ್ದೀನ್ ಜುಮಾ ಮಸೀದಿ.
- ತಂಗಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
- ಶ್ರೀ ರಾಮ ಮಂದಿರ
- ಮಹಾಮಾಯಿ ಮಾರಿ ಗುಡಿ
- ಸೇಂಟ್ ಜಾರ್ಜ್ ಚರ್ಚ್
- ಶಿಶಿಲೇಶ್ವರ ದೇವಾಲಯ, ಶಿಶಿಲ.
ಪ್ರವಾಸಿ ತಾಣಗಳು
ಬದಲಾಯಿಸಿಉಜಿರೆ, ಅದರ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಟ್ರೆಕ್ಕಿಂಗ್ ಆರಂಭ ಸ್ಥಳಗಳಿಗೆ ಹತ್ತಿರದಲ್ಲಿದೆ. ಹತ್ತಿರದಲ್ಲಿರುವ ಚಾರಣ ಸ್ಥಳಗಳೆಂದರೆ
- ನರಸಿಂಹ ಘಡ / ಜಮಾಲಾಬಾದ್ ಕೋಟೆ - 5 ಕಿಮೀ
- ಬಂಡಾಜೆ ಅರ್ಬಿ ಫಾಲ್ಸ್ / ಜಲಪಾತ -15 ಕಿಮೀ
- ಚಾರ್ಮಾಡಿ ಘಾಟಿ
ಚಿತ್ರಗಳು
ಬದಲಾಯಿಸಿ-
View of SDMIT from the front
-
Ujire junction