ಶಿಶಿಲ
ಶಿಶಿಲವು ಕರ್ನಾಟಕ ರಾಜ್ಯದ ಬೆಳ್ತಂಗಡಿ ತಾಲೂಕಿನಲ್ಲಿದೆ.[೧] ಶಿಶಿಲೇಶ್ವರ ದೇವಾಲಯವು ಈ ಗ್ರಾಮದ ಪ್ರಸಿದ್ಧ ದೇವಾಲಯವಾಗಿದೆ.
ಶಿಶಿಲ | |
---|---|
ಗ್ರಾಮ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ತಾಲೂಕು | ಬೆಳ್ತಂಗಡಿ |
ಅಂಚೆ ಸೂಚ್ಯಂಕ ಸಂಖ್ಯೆ | ೫೭೪೧೯೮ |
ಹಿನ್ನೆಲೆ
ಬದಲಾಯಿಸಿಇಲ್ಲಿನ ಶಿಶಿಲೇಶ್ವರ ದೇವಾಲಯವು ಕಪಿಲಾ ನದಿಯ ದಡದಲ್ಲಿದೆ. ನದಿಯಲ್ಲಿರುವ ಮೀನುಗಳನ್ನು ಗ್ರಾಮಸ್ಥರು ಪವಿತ್ರವೆಂದು ಪರಿಗಣಿಸುತ್ತಾರೆ ಮತ್ತು ಅವುಗಳಿಗೆ ನೈವೇದ್ಯವಾಗಿ ಅನ್ನವನ್ನು ನೀಡುತ್ತಾರೆ. ಸ್ಥಳೀಯರು ಈ ಸ್ಥಳವನ್ನು 'ಮತ್ಸ್ಯ ತೀರ್ಥ' ಎಂಬ ಹೆಸರಿನಿಂದ ಕರೆಯುತ್ತಾರೆ. ೧೯೩೦ ರಲ್ಲಿ ಜಿಲ್ಲೆಯ ಕಲೆಕ್ಟರ್ ಆಗಿದ್ದ ಶ್ರೀ ಕೋಚ್‌ಮ್ಯಾನ್ ದೇವಾಲಯದ ಆವರಣದ ಸುತ್ತಲೂ ಮೀನುಗಾರಿಕೆಯನ್ನು ನಿಷೇಧಿಸಿದರು. ಮೇ ೨೫, ೧೯೯೬ ರಂದು ಬೆಳಿಗ್ಗೆ, ದುಷ್ಕರ್ಮಿಗಳು ನದಿಗೆ ವಿಷವನ್ನು ಹಾಕಿದ್ದರಿಂದ ಸಾವಿರಾರು ಮೀನುಗಳು ತಮ್ಮ ಅಂತ್ಯವನ್ನು ಕಂಡವು. ಕಲ್ಲಿನಲ್ಲಿ ಕೆತ್ತಿದ ಸ್ಮಾರಕವು ದೇವಾಲಯದ ಪಕ್ಕದಲ್ಲಿ ನಡೆದ ಮೀನುಗಳ ದುರಂತ ವಿಷಯವನ್ನು ನೆನಪಿಸುತ್ತದೆ.[೨] ಈ ದುರಂತದಿಂದಾಗಿ ಗ್ರಾಮಸ್ಥರು ಮೀನುಗಳ ರಕ್ಷಣೆಗೆ ಮತ್ಸ್ಯ ಹಿತಾರ್ಕಷ್ಣ ವೇದಿಕೆಯನ್ನು ಸ್ಥಾಪಿಸಿದರು.[೩] ಭಾರತದ ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಕೆಲವು ಸ್ಥಳಗಳಲ್ಲಿ ಶಿಶಿಲವು ಒಂದಾಗಿದೆ.
ಜನಸಂಖ್ಯಾಶಾಸ್ತ್ರ
ಬದಲಾಯಿಸಿ೨೦೧೧ರ ಭಾರತದ ಜನಗಣತಿಯ ಪ್ರಕಾರ, ಶಿಶಿಲಾ ಗ್ರಾಮವು ೨೦೯೦ ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ೧೦೩೯ ಪುರುಷರು, ೧೦೫೧ ಮಹಿಳೆಯರು[೪] ಮತ್ತು ೦-೬ ವರ್ಷ ವಯಸ್ಸಿನ ೧೮೯ ಮಕ್ಕಳು. ಗ್ರಾಮದ ಒಟ್ಟು ಜನಸಂಖ್ಯೆಯ ೯.೦೪% ರಷ್ಟಿದೆ. ಶಿಶಿಲ ಗ್ರಾಮದ ಸರಾಸರಿ ಲಿಂಗ ಅನುಪಾತವು ಪ್ರತಿ ೧೦೦೦ ಪುರುಷರಿಗೆ ೧೦೧೨ ಮಹಿಳೆಯರು, ಇದು ಕರ್ನಾಟಕ ರಾಜ್ಯದ ಸರಾಸರಿ ೯೭೩ ಕ್ಕಿಂತ ಹೆಚ್ಚಾಗಿದೆ.[೫] ಜನಗಣತಿಯ ಪ್ರಕಾರ ಶಿಶಿಲದ ಮಕ್ಕಳ ಲಿಂಗ ಅನುಪಾತವು ೮೧೭, ಇದು ಕರ್ನಾಟಕದ ಸರಾಸರಿ ೯೪೮ ಕ್ಕಿಂತ ಕಡಿಮೆಯಾಗಿದೆ.
ಧರ್ಮ
ಬದಲಾಯಿಸಿಶಿಶಿಲದಲ್ಲಿನ ಜನಸಂಖ್ಯೆಯು ಮುಖ್ಯವಾಗಿ ಮೊಗೇರ, ನಲಿಕೆ, ಮಲೆಕುಡಿಯ, ಗೌಡ, ಮರಾಟಿ ನಾಯ್ಕರು, ಬಿಲ್ಲವ ಮತ್ತು ಬ್ರಾಹ್ಮಣರ ಸಮುದಾಯಗಳಿಗೆ ಸೇರಿದ ಬುಡಕಟ್ಟು ಜನರಿಂದ ಕೂಡಿದೆ.
ಭಾಷೆಗಳು
ಬದಲಾಯಿಸಿಈ ಹಳ್ಳಿಯಲ್ಲಿ ಪ್ರಮುಖವಾಗಿ ಕನ್ನಡ ಮತ್ತು ತುಳು ಜೊತೆಗೆ ಹವ್ಯಕ, ಕೊಂಕಣಿ, ಮರಾಠಿ ಮತ್ತು ಬ್ಯಾರಿ ಭಾಷೆಗಳನ್ನು ಬಳಸುತ್ತಾರೆ.
ಶಿಕ್ಷಣ
ಬದಲಾಯಿಸಿಶಿಶಿಲ ಗ್ರಾಮವು ಹೆಚ್ಚಿನ ಸಾಕ್ಷರತೆಯನ್ನು ಹೊಂದಿದೆ. ೨೦೧೧ ರಲ್ಲಿ, ಶಿಶಿಲ ಗ್ರಾಮದ ಸಾಕ್ಷರತೆಯ ಪ್ರಮಾಣವು ೮೩.೦೬% ರಷ್ಟಿದೆ. ಪುರುಷರ ಸಾಕ್ಷರತೆ ೯೦.೫೯% ಮತ್ತು ಮಹಿಳೆಯರ ಸಾಕ್ಷರತೆ ೭೫.೭೮%.
ಶಿಶಿಲದಲ್ಲಿರುವ ಶೈಕ್ಷಣಿಕ ಸೌಲಭ್ಯಗಳ ಪಟ್ಟಿ:
ಕೃಷಿ
ಬದಲಾಯಿಸಿಶಿಶಿಲ ಗ್ರಾಮದ ಮುಖ್ಯ ಬೆಳೆಗಳು ಭತ್ತ, ತೆಂಗು, ಅಡಿಕೆ, ಮಲ್ಲಿಗೆ, ಕರಿಮೆಣಸು, ರಬ್ಬರ್ ಮತ್ತು ಕೋಕೋ. ಹೈನುಗಾರಿಕೆ ಮತ್ತು ಕೋಳಿ ಸಾಕಣೆ ಶಿಶಿಲಾದ ಕುಲಕಸುಬುಗಳು.
ಸಾರಿಗೆ
ಬದಲಾಯಿಸಿವಿಮಾನ ನಿಲ್ದಾಣ
ಬದಲಾಯಿಸಿಶಿಶಿಲಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದು ಶಿಶಿಲದಿಂದ ೯೨ ಕಿ.ಮೀ ದೂರದಲ್ಲಿದೆ.[೮] ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ ಮತ್ತು ಅಬುಧಾಬಿ, ಬಹ್ರೇನ್, ದಮ್ಮಾಮ್, ದೋಹಾ, ದುಬೈ-ಇಂಟರ್ನ್ಯಾಷನಲ್, ಕುವೈತ್, ಮಸ್ಕತ್‌ನಂತಹ ಪ್ರಮುಖ ಭಾರತೀಯ ನಗರಗಳಿಗೆ ವಿಮಾನಗಳು ಲಭ್ಯವಿದೆ.
ರೈಲ್ವೆ ನಿಲ್ದಾಣ
ಬದಲಾಯಿಸಿಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣವು ಶಿಶಿಲಕ್ಕೆ ಸಮೀಪದ ರೈಲು ಜಂಕ್ಷನ್ ಆಗಿದೆ. ಇದು ಸುಮಾರು ೮೬ ಕಿ.ಮೀ ದೂರದಲ್ಲಿದೆ.[೯] ಇದು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ಪಟ್ಟಣಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಹತ್ತಿರದ ರೈಲು ನಿಲ್ದಾಣವೆಂದರೆ ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ.
ಬಸ್ ನಿಲ್ದಾಣ
ಬದಲಾಯಿಸಿಶಿಶಿಲವು ಮಂಗಳೂರು, ಪುತ್ತೂರು, ಮಡಿಕೇರಿ, ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ಕಾಸರಗೋಡು ಮುಂತಾದ ಹತ್ತಿರದ ಪಟ್ಟಣಗಳಿಗೆ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.[೧೦]
ಉಲ್ಲೇಖಗಳು
ಬದಲಾಯಿಸಿ- ↑ "Shishila Village Population - Beltangadi , Dakshina Kannada, Karnataka". Census India. Retrieved 6 February 2024.
- ↑ "The sacred fish tales of Shishila". The New Indian Express. Retrieved 2022-03-30.
- ↑ "BIODIVERSITY HOTSPOTS OF KARNATAKA". wgbis.ces.iisc.ernet.in. Retrieved 2022-03-30.
- ↑ "Shishila Population (2021/2022), Village in Beltangadi Taluka". www.indiagrowing.com. Archived from the original on 2024-03-27. Retrieved 2022-03-30.
- ↑ Sunitha Rao R. (28 Nov 2021). "Govt scheme, PNDT Act improve sex ratio in Karnataka | Bengaluru News - Times of India". The Times of India (in ಇಂಗ್ಲಿಷ್). Retrieved 2022-03-30.
- ↑ "Schools in the district of DAKSHINA-KANNADA : DISE information - Classes, Infrastructure, Facilities". schools.thelearningpoint.net. Archived from the original on 2021-09-20. Retrieved 2022-03-30.
- ↑ "Subrahmanya Road to Shree Shishileshwara Temple". Subrahmanya Road to Shree Shishileshwara Temple (in Indian English). Retrieved 2022-03-30.
- ↑ "Mangaluru International Airport to Shishila". Mangaluru International Airport to Shishila (in ಇಂಗ್ಲಿಷ್). Retrieved 2022-03-30.
- ↑ "Subrahmanya Road to Shree Shishileshwara Temple". Subrahmanya Road to Shree Shishileshwara Temple (in Indian English). Retrieved 2022-03-30.
- ↑ "DC interacts with residents of Shishila village during 'Grama Vastavya'". Deccan Herald (in ಇಂಗ್ಲಿಷ್). 2021-02-21. Retrieved 2022-03-30.