ಕೊಂಡಗೂಳಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ಈಗ ದೇವರ ಹಿಪ್ಪರಗಿ ತಾಲ್ಲೂಕಿನಲ್ಲಿದೆ.

ಕೊಂಡಗೂಳಿ
ಕೊಂಡಗೂಳಿ
village
ಚರೀತ್ರೆಯಲ್ಲಿ ಕೇಶಿರಾಜ,
  ಕೊಂಡಗುಳಿ ಕೇಶಿರಾಜ ಕರ್ನಾಟಕದ ಮೊದಲ ವೀರಶೈವ ಕವಿಯೆನ್ನಿಸಿಕೊಂಡಿದ್ದಾನೆ. ಕವಿಯಾಗಿ ವಿದ್ವಾಂಸನಾಗಿ ಮಂತ್ರಿಯಾಗಿ ಬಹುಮುಖ ಖ್ಯಾತಿಗೆ ಪಾತ್ರನಾದ ಕನ್ನಡಿಗ.
       ===ಕಾಲ===                                                              
                                                                

೧೧೬೦ ಎಂದು ಕನ್ನಡ ಕವಿಚರಿತ್ರೆಯಲ್ಲಿ ಹೇಳಿದೆ. ಈತ ವೀರಶೈವ.

       ===ಕೃತಿಗಳು===                                                      
                                                                

ಷಡಕ್ಷರ ಮಂತ್ರಮಹಿಮೆ,ಲಿಂಗಮಹತ್ವದ ಕಂದ, ಮಂತ್ರಮಹತ್ವದಕಂದ ಎಂಬ ಗ್ರಂಥ ಬರೆದಿದ್ದಾನೆ. ಮಂತ್ರಮಹತ್ವದ ಕಂದ ಈ ಕೃತಿಯಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರದ ಮಹಾತ್ಮ್ಯವನ್ನು ಇದರಲ್ಲಿ ಬಗೆಬಗೆಯಾಗಿ ಬಣ್ಣಿಸಲಾಗಿದೆ. ಇದರಲ್ಲಿ 110 ಕಂದಪದ್ಯಗಳಿವೆ. ಇವನ ಬಂಧ ಪ್ರೌಢವಾದುದು. . ಪ್ರಾಚೀನ ಕವಿಗಳಾದ ಹಂಪೆಯ ಹರೀಶ್ವರ, ರಾಘವಾಂಕರು ತಮ್ಮ ಗಿರಿಜಾಕಲ್ಯಾಣ ಮತ್ತು ಹರಿಶ್ಚಂದ್ರ ಕಾವ್ಯಗಳಲ್ಲಿ ಈತನ ಬಗೆಗೆ `ಫಾಲಲೋಚನನಲ್ಲದೆ ಪೊಗಳದ ಕೇಶಿರಾಜ' ಎಂದು ಮೊದಲಾಗಿ ಸ್ಮರಿಸಿದ್ದಾರೆ. ಪಾಲ್ಕುರಿಕೆ ಸೋಮನಾಥನ ಗಣಸಹಸ್ರನಾಮದಲ್ಲಿ ಇವನ ಹೆಸರಿನ ಉಲ್ಲೇಖವಿದೆ. ಬೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರದಲ್ಲಿ ಮತ್ತು ಇತರ ವೀರಶೈವ ಗ್ರಂಥಗಳಲ್ಲಿ ಈತನ ವಿಷಯವಾಗಿ ಅನೇಕ ಉಲ್ಲೇಖಗಳಿವೆ. ಶಿಕಾರಿಪುರದ 119 ಮತ್ತು 123ನೆಯ ಶಾಸನಗಳಲ್ಲಿ ಇವನನ್ನು ಕುರಿತು ಬಣ್ಣಿಸಲಾಗಿದೆ. ಈತನೊಬ್ಬ ವೀರಶೈವರಲ್ಲಿ ಮಹಿಮಾ ಪುರುಷನೆಂಬ ನಂಬಿಕೆ ಇದೆ.

ಕೇಶಿರಾಜನ ಊರು ಕೊಂಡುಗುಳಿ. ಇದು ವಿಜಯಪುರ ಜಿಲ್ಲೆಯ ಸಿಂದಗಿ ಗ್ರಾಮಕ್ಕೆ 10 ಮೈಲಿ ದೂರದಲ್ಲಿ ಆಗ್ನೇಯ ದಿಕ್ಕಿಗಿದೆ. ಕೇಶಿರಾಜ ಹುಟ್ಟಿದ ಸ್ಥಳವಿದು. ಈತನ ತಂದೆ ಹೂಳಲಮರಸ, ತಾಯಿ ದುರ್ಗಾದೇವಿ ಎಂದು ಶಿಕಾರಿಪುರದ ಶಾಸನಗಳಲ್ಲಿ ಹೇಳಿದೆ. ಈತನ ಹೆಂಡತಿಯ ಹೆಸರು ಗಂಗಾದೇವಿ. ಗುರುವಿನ ಹೆಸರು ವಿರೂಪಾಕ್ಷ. ಇವನ ಇಷ್ಟ ದೇವತೆ ಸೋಮನಾಥ. ಕೇಶಿರಾಜ ದೊಡ್ಡ ವಿದ್ವಾಂಸನಾಗಿದ್ದ. ಪ್ರತಿದಿನವೂ ಕಂದ, ತ್ರಿಪದಿ, ರಗಳೆ, ವಚನ, ಪದ, ಪದ್ಯ, ದಂಡಕ, ಅಷ್ಟಕ ಮೊದಲಾದವನ್ನು ರಚಿಸಿ, ಪರಮೇಶ್ವರನ ಮುಂದೆ ಹಾಡುತ್ತಿದ್ದ. ಕೆಲವು ಕಾಲಾನಂತರ ಈತ ಭಕ್ತರ ಕೋರಿಕೆಯಂತೆ ಆಗ ಚಾಲುಕ್ಯರ ರಾಜಧಾನಿಯಾದ ಕಲ್ಯಾಣಪಟ್ಟಣಕ್ಕೆ ಸಮೀಪದ ಶಿವಪುರ ಎಂಬ ಗ್ರಾಮಕ್ಕೆ ಬಂದು ನಿಂತ. ಅಲ್ಲಿ ಲಿಂಗಾರ್ಚನೆ, ಜಂಗಮದಾಸೋಹ ಮೊದಲಾದವನ್ನು ನಡೆಸುತ್ತಿದ್ದ. ಇವನ ಶಾಸ್ತ್ರ ಪಾಂಡಿತ್ಯ, ವಿಚಾರಲಹರಿ ಮತ್ತು ಮಹತ್ವದ ಸದ್ಗುಣಗಳು ಸಮಕಾಲೀನ ಜನರ ಮೇಲೆ ಒಳ್ಳೆಯ ಪರಿಣಾಮವನ್ನುಂಟುಮಾಡಿದವು. ಆ ಕಾಲದಲ್ಲಿ ತರ್ದೆವಾಡಿ ನಾಡಿನ ರಾಜಧಾನಿಯಾದ ಮಂಗಳವಾಡದಲ್ಲಿ(ಸೊಲ್ಲಾಪುರ ಜಿಲ್ಲೆ) ಕಳಚುರಿ ವಂಶೀಯನಾದ ಪೆರ್ಮಾಡಿ ಎಂಬ ರಾಜ ಆಳುತ್ತಿದ್ದ. ಕೇಶಿರಾಜನ ಕೀರ್ತಿ ವಿದ್ವತ್ತು, ಮೊದಲಾದುವನ್ನು ದಿನವೂ ಕೇಳಿದ ರಾಜ ಇವನನ್ನು ಮಂಗಳವಾಡಕ್ಕೆ ಕರೆಸಿದ. ಕೇಶಿರಾಜನ ಪ್ರಭಾವ ಅರಸನ ಮೇಲೆಯೂ ಬಿತ್ತು. ಕೆಲ ದಿನಗಳಲ್ಲಿಯೇ ಕೇಶಿರಾಜ ಪೆರ್ಮಾಡಿಯ ಮಂತ್ರಿಯಾದ. ಈತನಿಗೆ ದಂಡನಾಯಕ ಎಂಬ ಬಿರುದೂ ಸಂದಿತು. ಅಂದಿನಿಂದ ಕೇಶಿರಾಜ ದಂಣ್ಣಾಯಕ ಕೇಶಿರಾಜ ಎಂದು ಕರೆಸಿಕೊಂಡ.

ಕೇಶಿರಾಜ ಸಕಲಶಾಸ್ತ್ರ ಪಂಡಿತನೂ, ರಾಜನೀತಿ ವಿಷಾರದನು ಎನಿಸಿದ್ದುದರಿಂದ ಇವನ ಆಡಳಿತ ಜನಪ್ರಿಯವೆನಿಸಿತು. ಶಿವಶರಣನಾದುದರಿಂದ ಅವರ ಉದಾರ ತತ್ತ್ವಗಳನ್ನು ಈತ ಪ್ರಸಾರಮಾಡತೊಡಗಿದ್ದ. ಇದರಿಂದ ಅಸಮಾಧಾನಗೊಂಡ ಕೆಲವರು ರಾಜನಲ್ಲಿ ದೂರಿತ್ತರು. ದುರಾದೃಷ್ಟದಿಂದ ರಾಜ ಚಾಡಿಕೋರರ ಮಾತನ್ನು ನಂಬಿದ. ರಾಜನಿಗೂ ಕೇಶಿರಾಜನಿಗೂ ವಿರಸ ಉಂಟಾಗಿ ಕೇಶಿರಾಜ ಮಂತ್ರಿಪದವಿಯನ್ನು ತೊರೆದು ಮನೆಗೆ ಬಂದ. ಈತನ ಹೆಂಡತಿ ಮಹಾಶಿವಶರಣೆಯಾದ್ದರಿಂದ ನರನಸೇವೆ ತೊಲಗಿ ಹರನಸೇವೆಗೆ ಅನುಕೂಲವಾಯಿತು-ಎಂದು ಸಮಾಧಾನಪಟ್ಟಳು. ಸತಿಪತಿಗಳಿಬ್ಬರೂ ಮಂಗಳವಾಡದಿಂದ ಹೊರಟಾಗ ತತ್ತ್ವನಿಷ್ಟರಾದ ಜನ ಅವರನ್ನು ಸತ್ಕರಿಸಿದರು. ಕೇಶಿರಾಜನ ತ್ಯಾಗಬುದ್ಧಿ, ಸತ್ಯಸಂಧತೆ, ಧೈರ್ಯಸ್ಥೈರ್ಯಗಳು ನಾಡಿನಲ್ಲಿ ಮನೆಮಾತಾದವು. ಅನಂತರ ಅರಸ ಪೆರ್ಮಾಡಿ ತಾನು ಚಾಡಿಕೋರರ ಮಾತನ್ನು ಕೇಳಿದ್ದು ತಪ್ಪಾಯಿತೆಂದು ಗ್ರಹಿಸಿ, ಹಿಂದಿರುಗುವಂತೆ ಕೇಶಿರಾಜನಿಗೆ ಕರೆ ಕಳುಹಿಸಿದ. ಸ್ವಾಭಿಮಾನಿಯಾದ ಕೇಶಿರಾಜ ಆಹ್ವಾನವನ್ನು ತಿರಸ್ಕರಿಸಿ, ಸ್ವಗ್ರಾಮವಾದ ಕೊಂಡಗುಳಿಗೆ ತೆರಳಿದ. ಮಾರ್ಗಮಧ್ಯದಲ್ಲಿ ಭೀಮಾನದಿ ತೀರದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಅಲ್ಲಿ ಪತ್ನಿ ಸಮೇತ ಶಿವಪೂಜೆಯಲ್ಲಿ ತೊಡಗಿರಲು ಗರುಡಪಕ್ಷಿಯೊಂದು ಬಂದು ಈತ ಪೂಜಿಸುತ್ತಿದ್ದ ಇಷ್ಟಲಿಂಗವನ್ನು ಕಚ್ಚಿಕೊಂಡುಹೋಗಿ ನದಿಯಲ್ಲಿ ಹಾಕಿತು. ಇದರಿಂದ ಬಹಳವಾಗಿ ದುಗುಡಗೊಂಡ ಕೇಶಿರಾಜ ತನ್ನ ಇಷ್ಟಲಿಂಗವನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸಲು ಅದು ಭೀಮಾನದಿಯಿಂದ ಬಂದು ಇವನ ಅಂಗೈಯಲ್ಲಿ ಕುಳಿತುಕೊಂಡಿತು. ಪೂಜಾನಂತರ ಇವರು ತಮ್ಮ ಗ್ರಾಮವನ್ನು ಸೇರಿಕೊಂಡರು.

ಕೇಶಿರಾಜ ಬಸವೇಶ್ವರನಿಗಿಂತ ಮೊದಲು ಕಳಚುರಿಗಳಲ್ಲಿ ಮಂತ್ರಿಯಾಗಿದ್ದ ಪ್ರಪ್ರಥಮ ವೀರಶೈವ. ಕೊಂಡಗುಳಿಯಲ್ಲಿ ಇವನ ಹೆಸರಿನ ದೇವಾಲಯವಿದೆ. ಕೊಂಡಗುಳಿಯಲ್ಲಿಯೇ ಈತ ಐಕ್ಯನಾದಂತೆ ಕಾಣುತ್ತದೆ. ಅಲ್ಲಿ ಈತನ ಸಮಾಧಿ ಉಂಟೆಂದು ಹೇಳುತ್ತಾರೆ. ವೀರಶೈವ ಸಾಹಿತ್ಯದಲ್ಲಿ ಇವನ ಹೆಸರು ವಿಖ್ಯಾತವಾಗಿದೆ.

ಭೌಗೋಳಿಕ

ಬದಲಾಯಿಸಿ

ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

ಬದಲಾಯಿಸಿ
  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - 35°C-42°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - 18°C-28°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ.
  • ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಬದಲಾಯಿಸಿ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 1500 ಇದೆ. ಅದರಲ್ಲಿ 800 ಪುರುಷರು ಮತ್ತು 700 ಮಹಿಳೆಯರು ಇದ್ದಾರೆ. ಒಟ್ಟಾರೆ ಸುಮಾರು 1000ಕ್ಕೂ ಹೆಚ್ಚು ಮತಗಳನ್ನು ಹೊಂದಿದೆ.

ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವು ಗ್ರಾಮದ ಕಲೆಯಾಗಿದೆ.

ಸಂಸ್ಕೃತಿ

ಬದಲಾಯಿಸಿ
 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆಗಳನ್ನು ಧರಿಸುತ್ತಾರೆ.

ಆಹಾರ (ಖಾದ್ಯ)

ಬದಲಾಯಿಸಿ

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.

ಗ್ರಾಮದ ಪ್ರತಿಶತ 90 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

ಬದಲಾಯಿಸಿ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಉದ್ಯೋಗ

ಬದಲಾಯಿಸಿ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 90% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿಸಾಕಾಣಿಕೆ ಉಪಕಸುಬುಗಳಾಗಿವೆ.

ಬೆಳೆಗಳು

ಬದಲಾಯಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ ವರ್ಗ

ಬದಲಾಯಿಸಿ

ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ ವರ್ಗ

ಬದಲಾಯಿಸಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.

ಆರ್ಥಿಕತೆ

ಬದಲಾಯಿಸಿ

ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.

ಧರ್ಮಗಳು

ಬದಲಾಯಿಸಿ

ಗ್ರಾಮದಲ್ಲಿ ಹಿಂದೂ ಜೈನ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು

ಬದಲಾಯಿಸಿ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ.

ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

ಬದಲಾಯಿಸಿ
  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ
  • ಶ್ರೀ ಮಾಳಿಂಗರಾಯ ದೇವಾಲಯ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು

ಬದಲಾಯಿಸಿ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಓಕುಳಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಬದಲಾಯಿಸಿ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ.

ಸಾಕ್ಷರತೆ

ಬದಲಾಯಿಸಿ

ಗ್ರಾಮದ ಸಾಕ್ಷರತೆ ಪ್ರಮಾಣವು ಸುಮಾರು 75%. ಅದರಲ್ಲಿ 65% ಪುರುಷರು ಹಾಗೂ 55% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಬದಲಾಯಿಸಿ

ಗ್ರಾಮವು ಸಿಂದಗಿ ವಿಧಾನ ಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.