ಎರಿಟ್ರಿಯ

(ಎರಿಟ್ರಿಯಾ ಇಂದ ಪುನರ್ನಿರ್ದೇಶಿತ)
(ಕೆಲವು ಅಕ್ಷರಗಳು ಕಾಣುತ್ತಿಲ್ಲವೇ?)

ಎರಿಟ್ರಿಯ (ಗಿಇಜ್ ኤርትራ ; ʾĒrtrā) ಪೂರ್ವ ಆಫ್ರಿಕಾದ ಉತ್ತರದಲ್ಲಿ ಕೆಂಪು ಸಮುದ್ರದ ಅಂಚಿಗಿರುವ ದೇಶ. ಜನವರಿ ೧, ೧೮೯೦ರಲ್ಲಿ ಇಟಲಿಯ ವಸಾಹತುಗಳ ಸಮ್ಮಿಲನವಾಗಿ ಎರಿಟ್ರಿಯ ಸ್ಥಾಪಿತವಾಯಿತು.[] ಆಧುನಿಕ ಎರಿಟ್ರಿಯ ದೇಶ ೧೯೬೧ರಿಂದ ೧೯೯೧ರ ವರೆಗಿನ ೩೦ ವರ್ಷಗಳ ಯುದ್ಧದ ನಂತರ ಇತ್ಯೋಪಿಯದಿಂದ ಸ್ವಾತಂತ್ರ್ಯ ಪಡೆಯಿತು. ೧೯೯೭ರ ಸಂವಿಧಾನದ ಪ್ರಕಾರ ಎರಿಟ್ರಿಯ ರಾಷ್ಟ್ರಪತಿ ಆಳ್ವಿಕೆ ಆಧಾರಿತ ಸಂಸದೀಯ ಗಣರಾಜ್ಯ. ಆದರೆ ಮೇ ೧೯೯೮ರಲ್ಲಿ ಇತಿಯೋಪಿಯದೊಂದಿಗೆ ಪುನಃ ಯುದ್ಧ ಪ್ರಾರಂಭವಾದುದರಿಂದ ಈ ಸಂವಿಧಾನ ಕಾರ್ಯಕ್ಕೆ ಬಂದಿಲ್ಲ. ಚುನಾವಣೆಗಳು ನಡೆಯದೆ ಪ್ರಸಕ್ತವಾಗಿ ಎರಿಟ್ರಿಯ ಸಂಪೂರ್ಣ ರಾಷ್ಟ್ರಪತಿ ಆಳ್ವಿಕೆಯಲ್ಲಿ ಇದೆ. ಒಂಬತ್ತು ಜನಾಂಗಗಳಿಗೆ ಸೇರುವ ಜನರನ್ನು ಹೊಂದಿರುವ ಎರಿಟ್ರಿಯದಲ್ಲಿ ಸುನ್ನಿ ಇಸ್ಲಾಂ ಮತ್ತು ಸಾಂಪ್ರದಾಯಿಕ ಕ್ರೈಸ್ತ ಧರ್ಮ ಮುಖ್ಯ ಧರ್ಮಗಳು. ಆಡಳಿತದಲ್ಲಿ ಟಿಗ್ರಿನ್ಯ, ಅರಬ್ಬಿ ಮತ್ತು ಆಂಗ್ಲ ಉಪಯೋಗಿಸಲ್ಪಟ್ಟರೂ, ಯಾವುದೂ ಅಧಿಕೃತ ಭಾಷೆಯಲ್ಲ.

ಎರಿಟ್ರಿಯ ರಾಜ್ಯ
Hagere Ertra
ሃገረ ኤርትራ
دولة إرتريا
ಹಾಗರೆ ಎರ್ಟ್ರ
Flag of ಎರಿಟ್ರಿಯ
Flag
Anthem: ಎರ್ಟ್ರ್, ಎರ್ಟ್ರ್, ಎರ್ಟ್
Location of ಎರಿಟ್ರಿಯ
Capital
and largest city
ಅಸ್ಮರ
Official languagesಯಾವುದೂ ಇಲ್ಲ1
Governmentಹಂಗಾಮಿ ಸರಕಾರ
ಇಸ್ಸಯಾಸ್ ಅಫೆವೆರ್ಕಿ
ಸ್ವಾತಂತ್ರ್ಯ 
• ವಾಸ್ತವಿಕವಾಗಿ
ಮೇ ೨೯ ೧೯೯೧
• ಕಾನೂನಿನ ಪ್ರಕಾರ
ಮೇ ೨೪ ೧೯೯೩
• Water (%)
ತುಂಬ ಕಡಿಮೆ
Population
• ಜುಲೈ ೨೦೦೫ estimate
೪,೪೦೧,೦೦೦ (೧೧೮ನೇ)
• ೨೦೦೨ census
೪,೨೯೮,೨೬೯
GDP (PPP)೨೦೦೫ estimate
• Total
$೪.೪೭೧ ಬಿಲಿಯನ್ (೧೬೮ನೇ)
• Per capita
$೧,೦೦೦ (೨೧೪ನೇ)
HDI (೨೦೦೫)೦.೪೫೪
Error: Invalid HDI value · ೧೫೭ನೇ
Currencyನಕ್ಫ (ERN)
Time zoneUTC+೩ (EAT)
• Summer (DST)
UTC+೩ (ಪಾಲಿಸುವದಿಲ್ಲ)
Calling code೨೯೧
Internet TLD.er
1 ಆಡಳಿತದ ಭಾಷೆಗಳು: ಟಿಗ್ರಿನ್ಯ, ಅರಬ್ಬಿ ಮತ್ತು ಆಂಗ್ಲ [][]

ಇತಿಹಾಸ

ಬದಲಾಯಿಸಿ

ಕ್ರಿಸ್ತಪೂರ್ವ ೨೦೦೦ ವರ್ಷಗಳ ಹಿಂದೆ ಆಫ್ರಿಕದ ಮಧ್ಯಭಾಗದಿಂದ ಇಲ್ಲಿಗೆ ಜನರು ಬಂದು ನೆಲಸಿದರೂ,ಇತ್ತೀಚಿನವರೇಗೂ ಅಂದರೆ ೧೯೯೩ರ ವರೆಗೆ ಇದು ಇತಿಯೋಪಿಯದ ಒಂದು ಭಾಗವಾಗಿತ್ತು. ಹಿಂದೆ ೧೮೯೦ರಲ್ಲಿ ಇಟೆಲಿಯ ಒಂದು ವಸಾಹತು ಆಗಿದ್ದ ಇದು ೧೯೪೧ ರಲ್ಲಿ ಬ್ರಿಟಿಷರ ಕೈ ಸೇರಿತು. ಎರಡನೇ ಮಹಾಯುದ್ಧದ ನಂತರ ವಿಶ್ವಸಂಸ್ಥೆಯ ನಿರ್ಣಯದಂತೆ ಇತಿಯೋಪಿಯದ ಒಂದು ಸ್ವಾಯತ್ತ ಪ್ರಾಂತ್ಯವಾಯಿತು. ೧೯೬೨ರಲ್ಲಿ ಇತಿಯೋಪಿಯದ ಚಕ್ರವರ್ತಿ ಹೈಲಿ ಸೆಲ್ಲಸಿ ಎರಿಟ್ರಿಯದ ಜನರ ಇಚ್ಛೆಗೆ ವಿರುದ್ಧವಾಗಿ ಪ್ರಾಂತ್ಯವನ್ನು ಇತಿಯೋಪಿಯದೊಂದಿಗೆ ಸಂಪೂರ್ಣವಾಗಿ ವಿಲಯನಗೊಳಿಸಿದ. ಇದರಿಂದ ೬೦ರ ದಶಕದ ಮದ್ಯ ಭಾಗದಿಂದ ಸತತವಾಗಿ ಅಂತರ್ಯುದ್ಧ ನಡೆದು ಕೊನೆಯದಾಗಿ ಮೇ ೨೪, ೧೯೯೩ರಲ್ಲಿ ಆಫ್ರಿಕ ಖಂಡದ ೫೨ನೇ ದೇಶವಾಗಿ ಸ್ವತಂತ್ರವಾಯಿತು. ೧೯೯೮ರಲ್ಲಿ ಇತಿಯೊಪಿಯದೊಂದಿಗಿನ ಗಡಿವಿವಾದದಿಂದ ಯುದ್ಡ ನಡೆದು ಸಾವಿರಾರು ಜನ ಕೊಲ್ಲಲ್ಪಟ್ಟರು. ಮೇ ೨೦೦೦ರಲ್ಲಿ ಎರಿಟ್ರಿಯ ವಿವಾದಿತ ಪ್ರದೇಶದಿಂದ ಹಿಂದೆ ಸರಿದರೂ ಸಂಘರ್ಷ ಇನ್ನೂ ಮುಂದುವರೆದಿದೆ.

ಭೌಗೋಳಿಕ ಮಹಿತಿ

ಬದಲಾಯಿಸಿ

ಆಫ್ರಿಕದ ಉತ್ತರ ಭಾಗದಲ್ಲಿ ಸುಡಾನ್ ದೇಶದ ಪೂರ್ವಕ್ಕೆ,ಇತಿಯೋಪಿಯದ ಉತ್ತರಕ್ಕೆ ಇದೆ. ಕೆಂಪುಸಮುದ್ರದ ಅಂಚಿಗೆ ಸುಮಾರು ಒಂದು ಸಾವಿರ ಕಿ.ಮೀ.ನಷ್ಟು ಚಾಚಿಕೊಂಡಿದೆ.ಇದರ ಕರಾವಳಿ ೧೪ ರಿಂದ ೬೪ ಕಿ.ಮೀ.ಗಳಷ್ಟು ಅಗಲವಾಗಿದೆ. ಸಮುದ್ರ ಮಟ್ಟದಿಂದ ೩೦೦೦ ಮೀಟರ್ ಎತ್ತರ ಇರುವ "ಸೋಯಿರ" ಪರ್ವತ ದೇಶದ ಅತ್ಯಂತ ಎತ್ತರದ ಶಿಖರ. ಆಗ್ನೇಯ ಭಾಗದಲ್ಲಿ "ವೆನಾಕಿಲ್" ಮರುಭೂಮಿ ಇದೆ. "ಬರಕ" ಎಂಬುದು ಮುಖ್ಯ ನದಿ. ಉತ್ತರ ಅಕ್ಷಾಂಶ 18º2ದಿ-12º42ದಿವರಗೆ ಪು.ರೇ. 36º-43º ವರೆಗೆ. ಕಸಾರ್ ಭೂಶಿರದಿಂದ ಡುಮೈರಾ ಭೂಶಿರದವರೆಗೆ ಹಬ್ಬಿರುವ ಇದರ ವಿಸ್ತೀರ್ಣ 1,17,600 ಚ.ಕಿಮೀ. (45,405 ಚ.ಮೈ) ಜನಸಂಖ್ಯೆ ೬೪ ಲಕ್ಷ (೨೦೧೪)[] ಅಸ್ಮಾರ ರಾಜಧಾನಿ. ಇದು ಸಮುದ್ರಮಟ್ಟಕ್ಕಿಂತ 2280ಮೀ ಎತ್ತರದಲ್ಲಿದ್ದು 1,17,000 ಜನಸಂಖ್ಯೆ ಹೊಂದಿದೆ. ದೇಶದಲ್ಲಿ ನೆಲೆಸಿರುವ 17,500 ಇಟಾಲಿಯನರಲ್ಲಿ ಬಹು ಮಂದಿ ನಗರದಲ್ಲಿದ್ದಾರೆ. ಮುಖ್ಯ ರೇವುಪಟ್ಟಣ ಕೆಂಪುಸಮುದ್ರದ ತೀರದಲ್ಲಿರುವ ಮಸಾವ.

ಮೇಲ್ಮೈ ಲಕ್ಷಣ

ಬದಲಾಯಿಸಿ

ಎರಿಟ್ರಿಯದ ಉತ್ತರ ಭಾಗ ಸುಡಾನಿನ ಮೈದಾನದಿಂದ ಕೆಂಪು ಸಮುದ್ರದ ಕರಾವಳಿಯವರೆಗೆ ಇಥಿಯೋಪಿಯ ಪ್ರಸ್ಥಭೂಮಿಯನ್ನು ಹಾಯ್ದು ಹಬ್ಬಿದೆ. ಎರಿಟ್ರಿಯದ ಸಮುದ್ರ ತೀರದ ಉದ್ದ 1079 ಕಿಮೀ. ತೀರದ ಬಯಲು ಪ್ರದೇಶ ಸು. 35-80 ಕಿಮೀ ಅಗಲ. ಇಲ್ಲಿ ಸೆಕೆ ಹೆಚ್ಚು, ಆರ್ದ್ರತೆಯೂ ಹೆಚ್ಚು; ಮಳೆ ಅನಿಶ್ಚಿತ. ಈ ಬಯಲಿನಿಂದ ಪಶ್ಚಿಮದ ಪರ್ವತಗಳ ಕಡೆಗೆ ಭೂಮಿ ಏರುತ್ತ ಹೋಗುತ್ತದೆ. ಈ ಪರ್ವತಗಳಲ್ಲಿ ಸೋನ (ಸು. 3013 ಮೀ) ಅತ್ಯುನ್ನತ ಶಿಖರ. ಉನ್ನತ ಪ್ರದೇಶಕ್ಕೆ ಹೋದಂತೆ ಸಮಶೀತೋಷ್ಣ ವಾಯಗುಣವನ್ನು ಕಾಣಬಹುದು. ಇಲ್ಲಿ ಬೇಸಗೆಯಲ್ಲಿ ಮಳೆಯಾಗುತ್ತದೆ. ವಾಯವ್ಯದಲ್ಲಿ ಈ ಪ್ರದೇಶ ಸುಡಾನಿನ ಬೆಂಗಾಡಿನ ಕಡೆಗೆ ಇಳಿಜಾರಾಗಿದೆ.

ಆರ್ಥಿಕ ಮಾಹಿತಿ

ಬದಲಾಯಿಸಿ

ಆಫ್ರಿಕದ ಹಿಂದುಳಿದ ದೇಶಗಳೊಲ್ಲೊಂದಾದ ಎರಿಟ್ರಿಯಾದ ಆರ್ಥಿಕತೆ ಸತತವಾಗಿ ನಡೆದ ಯುದ್ಧದಿಂದ ನಲುಗಿದೆ. ಕೇವಲ ಶೇಕಡಾ ೫ ರಷ್ಟು ಭೂಮಿ ಮಾತ್ರ ಕೃಷಿಗೆ ಒಳಪಟ್ಟಿದೆ. ಕೃಷಿ ಪ್ರಧಾನ ಉದ್ಯೋಗವಾದರೂ ಕೆಂಪುಸಮುದ್ರದಲ್ಲಿ ಮೀನುಗಾರಿಕೆ ಕೂಡಾ ಮುಖ್ಯ ಉದ್ಯೋಗವಾಗಿದೆ. ಚಿನ್ನ, ಕಬ್ಬಿಣಅದಿರು ಹಾಗೂ ತಾಮ್ರಗಣಿಗಳಿವೆ. ಉಪ್ಪು, ಸಿಮೆಂಟು ಮುಖ್ಯ ರಫ್ತು ಸಾಮಗ್ರಿಗಳು ಇಲ್ಲಿ ನೀರಾವರಿಯ ಸಹಾಯದಿಂದ ಎತ್ತರಕ್ಕೆ ಅನುಸಾರವಾಗಿ ಉಷ್ಣವಲಯದ ಮತ್ತು ಸಮಶೀತೋಷ್ಣವಲಯದ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಎತ್ತರ ಪ್ರದೇಶಗಳಲ್ಲಿ ಆಹಾರಧಾನ್ಯ (ಹೆಚ್ಚಾಗಿ ಗೋದಿ), ಕಾಫಿ,ಹೊಗೆಸೊಪ್ಪು, ಹಣ್ಣು ತರಕಾರಿ - ಇವು ಮುಖ್ಯ ಬೆಳೆಗಳು, ಮಳೆ ಕಡಿಮೆಯಿರುವ ತಗ್ಗಿನ ಪ್ರದೇಶಗಳಲ್ಲಿ ಮರಗೋಂದು, ಎಣ್ಣೆ ಬೀಜಗಳು, ಖರ್ಜೂರ-ಇವು ಮುಖ್ಯ ಉತ್ಪನ್ನಗಳು, ಪಶುಪಾಲನೆಯೂ ನಡೆಯುತ್ತದೆ. ಕಣಿವೆಗಳಲ್ಲಿ ನೀರಾವರಿಯಿಂದ ಹತ್ತಿ ಬೆಳೆಸುತ್ತಾರೆ; ಮಸಾವದ ಸುತ್ತಮುತ್ತಲೂ ಇದರ ಬಳಿ ಇರುವ ಡಾಹ್ಲಾಕ್ ದ್ವೀಪ ಸ್ತೋಮದಲ್ಲೂ ಮೀನು ಹಿಡಿಯುವುದು ಜನರ ಮುಖ್ಯ ಉದ್ಯೋಗ. ಉಗಾರೋ ಮತ್ತು ಮಸಾವಗಳ ಹತ್ತಿರ ಸ್ವಲ್ಪ ಚಿನ್ನ ದೊರಕಿದೆ. ಕೈಗಾರಿಕೆ ಅತ್ಯಲ್ಪ. ಹತ್ತಿ ಮತ್ತು ಸಿಮೆಂಟ್ ಕಾರ್ಖಾನೆಗಳು ಕೆಲವಿವೆ. ಉಪ್ಪನ್ನೂ ತಯಾರಿಸುತ್ತಾರೆ.

 
Eritrean women performing a traditional Tigrinya dance.

ಎರಿಟ್ರಿಯದ ಜನ ಮುಖ್ಯವಾಗಿ ಒಂಬತ್ತು ಬುಡಕಟ್ಟು ಜನಾಂಗಗಳಿಗೆ ಸೇರಿದವರು. ಇಸ್ಲಾಂ ಮತ್ತು ಕ್ರೈಸ್ತಧರ್ಮ ಮುಖ್ಯವಾದ ಧರ್ಮಗಳು. ಸುಮಾರು ೮೦ ಶೇಕಡಾ ಜನ ರೈತರು ಹಾಗೂ ದನಗಾಹಿಗಳು. ಇವರಲ್ಲಿ ಹೆಚ್ಚಿನವರು ಮುಸ್ಲಿಮರು ಹಾಗೂ ನಿರಕ್ಷರಿಗಳು. ದಶಕಗಳ ಕಾಲ ನಡೆದ ಅಂತರ್ಯುದ್ಡ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಿದೆ. ಎರಿಟ್ರಿಯದ ಪ್ರಸ್ಥಭೂಮಿ ಪ್ರದೇಶದಲ್ಲಿ ಕಾಪ್ಟ್‌ ಕ್ರೈಸ್ತ ಪಂಗಡದ ಜನರೂ, ಉತ್ತರದಲ್ಲಿ ಮತ್ತು ಸಮುದ್ರತೀರದಲ್ಲಿ ಮುಸ್ಲಿಮರೂ, ನೈರುತ್ಯ ಭಾಗದಲ್ಲಿ ನೀಗ್ರೊಗಳೂ ಹೆಚ್ಚಾಗಿ ವಾಸಿಸುತ್ತಾರೆ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2010-01-06. Retrieved 2006-12-25.
  2. http://lcweb2.loc.gov/frd/cs/profiles/Eritrea.pdf
  3. Killion, Tom (1998). Historical Dictionary of Eritrea. ISBN 0-8108-3437-5.
  4. CIA – Eritrea – Ethnic groups Archived 2018-11-16 ವೇಬ್ಯಾಕ್ ಮೆಷಿನ್ ನಲ್ಲಿ.. Cia.gov. Retrieved 25 June 2012.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
Government
Other
Magazine
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: