ಸಿಮೆಂಟ್ ಒಂದು ಮುಖ್ಯ ಸಿಂಥೆಟಿಕ್ ವಸ್ತು. ಇದು ಕಟ್ಟಡ ಸಾಮಾಗ್ರಿಗಳ ಪ್ರಮುಖ ಘಟಕ. ಇದು ರಾಸಾಯನಿಕವಾಗಿ ಕ್ಯಾಲ್ಸಿಯಮ್ ಸಿಲಿಕೇಟ್ ಮತ್ತು ಕ್ಯಾಲ್ಸಿಯಮ್ ಅಲ್ಯುಮಿನೇಟ್ ಮಿಶ್ರಣವಾಗಿದ್ದು, ಅಲ್ಪಪ್ರಮಾಣದಲ್ಲಿ ಜಿಪ್ಸಮ್ ಲವಣ ಹೊಂದಿದೆ. ಜೇಡಿಮಣ್ಣು ಮತ್ತು ಸುಣ್ಣಕಲ್ಲು- ಇವು ಸಿಮೆಂಟ್ ಉತ್ಪಾದನೆಯಲ್ಲಿ ಕಚ್ಚಾವಸ್ತುಗಳು. ನೀರಿನೊಂದಿಗೆ ಗಡಸಾಗುವ ದರವನ್ನು ನಿಯಂತ್ರಿಸಲು ಜಿಪ್ಸಮ್ ಬಳಸುತ್ತಾರೆ.

ಉತ್ಪಾದನೆ

ಬದಲಾಯಿಸಿ

ನಯವಾಗಿ ಅರೆದ ಜೇಡೀಮಣ್ಣು ಮತ್ತು ಸುಣ್ಣಕಲ್ಲಿನ ಮಿಶ್ರಣವನ್ನು ನೀರಿನೊಂದಿಗೆ ಸೇರಿಸಲಾಗುತ್ತದೆ. ಇದನ್ನು ಉರುಳು ಕುಲುಮೆಗೆ ಕಳುಹಿಸಲಾಗುತ್ತದೆ. ಕುಲುಮೆಯ ಕೆಳ ತುದಿಯಿಂದ ಸುಮಾರು ೧೮೭೩k ತಾಪದಲ್ಲಿ ಗಾಳಿಯನ್ನು ಊದಲಾಗುತ್ತದೆ.ಈ ಹೆಚ್ಚಿನ ತಾಪದಿಂದಾಗಿ ಮಿಶ್ರಣದಲ್ಲಿನ ನೀರು ಆವಿಯಾಗಿ ಜೇಡಿಮಣ್ಣು ಮತ್ತು ಸುಣ್ಣಕಲ್ಲು ಸಿಮೆಂಟ್ ಉಂಡೆಗಳಾಗುತ್ತವೆ. ಇದನ್ನು ಕ್ಲಿಂಕರ್ ಎಂದು ಕರೆಯುತ್ತಾರೆ. ಇವುಗಳನ್ನು ಕುಲುಮೆಯಿಂದ ಹೊರತೆಗೆದು ತಂಪು ಮಾಡಲಾಗುತ್ತದೆ. ನಂತರ್ ಶೇ.೩ ಜಿಪ್ಸಮ್ ಲವಣ ಸೇರಿಸಿ ನಯವಾದ ಪುಡಿಯಾಗಿ ಅರೆಯಲಾಗುತ್ತದೆ. ಸಿಮೆಂಟ್ ನೀರಿನೊಂದಿಗೆ ಸೇರಿ ಗಟ್ಟಿಯಾಗುತ್ತದೆ. ಇದರಿಂದಾಗಿ ರಚನಾಕಾರ್ಯದಲ್ಲಿ ಸಿಮೆಂಟ್ ಅತ್ಯುತ್ತಮ ಬಂಧಕ ವಸ್ತು. ಸಿಮೆಂಟ್ ನಂತರ ನೀರು ಸೇರಿಸುವುದರಿಂದ ಇನ್ನಷ್ಟು ಗಟ್ಟಿಯಾಗುತ್ತದೆ. ಈ ಪ್ರಕ್ರಿಯೆಯನ್ನು ಜಲಸತ್ಕಾರ ಎನ್ನುತ್ತೇವೆ. ಈ ಸಮಯದಲ್ಲಿ ಅದರಲ್ಲಿನ ಕ್ಯಾಲ್ಸಿಯಮ್ ಸಿಲಿಕೇಟ್ ಮತ್ತು ಅಲ್ಯುಮಿನೇಟ್ ಕಲಿಲ ಜೆಲ್ ಗಳಾಗಿ ಬದಲಾಗುತ್ತವೆ.ಈ ವಿಧಾನವು ಬಹಿರುಷ್ಣಕ. ಆದುದರಿಂದ ಗಟ್ಟೀಕರಣ ಪೂರ್ಣಗೊಳ್ಳುವ ವರೆಗೂ ಸಿಮೆಂಟ್ ನಿರಂತರವಾಗಿ ಜಲ ಸತ್ಕಾರವನ್ನು ಬಯಸುತ್ತದೆ.

"https://kn.wikipedia.org/w/index.php?title=ಸಿಮೆಂಟ್&oldid=616777" ಇಂದ ಪಡೆಯಲ್ಪಟ್ಟಿದೆ