ಸುನ್ನಿ ಇಸ್ಲಾಂ ಇಸ್ಲಾಂ ಧರ್ಮದ ಅತಿ ಹಳೆಯ ಹಾಗು ದೊಡ್ಡ ಪಂಗಡ. ಸುನ್ನಿ ಪದ "ಸುನ್ನ", ಅಂದರೆ ಮೊಹಮ್ಮದ್ ಅವರ ನುಡಿ ಮತ್ತು ನಡತೆಗಳು ಎಂಬುದರಿಂದ ಬಂದಿದೆ. ಸುನ್ನಿಗಳ ಪ್ರಕಾರ ಇಸ್ಲಾಂ ಧರ್ಮದ ಮೊದಲ ನಾಲ್ಕು ಖಲೀಫಾಗಳಾದ ಹಜರತ್ ಅಬೂ ಬಕರ, ಹಜರತ್ ಉಮರ, ಹಜರತ್ ಉಸ್ಮಾನ ಗನಿ ಹಾಗೂ ಹಜರತ ಅಲಿ ಯವರನ್ನು ಅನುಸರಿಸುವ ಒಂದು ಬೃಹತ ಸಮುದಾಯ. ನಂತರದ ಶತಕಗಳಲ್ಲಿ ಶಿಯಾ ಇಸ್ಲಾಂ ಎಂಬ ಹೊಸ ಪಂಗಡ ಹುಟ್ಟಿತು. ಇದು ಕೇವಲ ಹಜರತ್ ಅಲಿ ಹಾಗೂ ಅವರ ಮಕ್ಕಳನ್ನು ಅನುಸಿರಿಸಿತು. ಅಲ್ಲದೆ ಮೊದಲನೆಯ ಖಲೀಫ ಸ್ಥಾನಕ್ಕೆ ಅರ್ಹ ಹಜ್ರತ್ ಅಲಿ ಮಾತ್ರವೆಂದು ಅವರ ವಾದ.

ಕೈರೋದಲ್ಲಿರುವ ಆಲ್ ಆಝರ್ ಮಸೀದಿ ಮತ್ತು ವಿಶ್ವವಿದ್ಯಾಲಯ: ಸುನ್ನಿ ಇಸ್ಲಾಂನ ಮುಖ್ಯ ಬೋಧನಾ ಕೇಂದ್ರ

ಸುನ್ನಿ ಇಸ್ಲಾಂ ಮತ್ತು ಶಿಯಾ ಇಸ್ಲಾಂರವ ಮುಖ್ಯ ವ್ಯತ್ಯಾಸಗಳು ಹುಟ್ತಿಕೊಂಡದ್ದು ಭಿನ್ನಾಭಿಪ್ರಾಯಗಳಿಂದ ಮುಹಮ್ಮದ್ರವರನ್ನು ಉತ್ತರಾಧಿಕಾರಿಯಾಗಿ ಆಯ್ಕೆಮಾಡಿದ್ದರಿಂದ.

ಬಾಹ್ಯ ಸಂಪರ್ಕಗಳು ಬದಲಾಯಿಸಿ