ಮಳೆಬಿಲ್ಲು

(ಇಂದ್ರಚಾಪ ಇಂದ ಪುನರ್ನಿರ್ದೇಶಿತ)

ಮಳೆಬಿಲ್ಲು (ಅಥವಾ ಕಾಮನಬಿಲ್ಲು) ಎಂಬುದೊಂದು ದೃಗ್ವೈಜ್ಞಾನಿಕ ಮತ್ತು ಪವನಶಾಸ್ತ್ರದ ವಿದ್ಯಮಾನವಾಗಿದ್ದು, ಭೂಮಿಯ ವಾತಾವರಣದಲ್ಲಿನ ಸಣ್ಣಹನಿಗಳ ಮೇಲೆ ಸೂರ್ಯನು ಬೆಳಗಿದಾಗ ಆಕಾಶದಲ್ಲಿ ಬೆಳಕಿನ ಬಣ್ಣಗಳ ಪಟ್ಟಿಯೊಂದು ಕಾಣಿಸುವಂಥ ಪರಿಣಾಮವನ್ನು ಇದು ಉಂಟು ಮಾಡುತ್ತದೆ. ಒಂದು ಬಹುವರ್ಣದ ಬಿಲ್ಲಿನ ಸ್ವರೂಪವನ್ನು ತಳೆಯುವ ಇದು ತನ್ನ ಹೊರಗಿನ ಭಾಗದಲ್ಲಿ ಕೆಂಪು ಬಣ್ಣವನ್ನೂ ಒಳಗಿನ ವಿಭಾಗದಲ್ಲಿ ನೇರಿಳೆ ಬಣ್ಣವನ್ನೂ ಹೊಂದಿರುತ್ತದೆ.

ಅರ್ಧವೃತ್ತಾಕಾರದ ಜೋಡಿ ಮಳೆಬಿಲ್ಲು. ಪ್ರಧಾನ ಚಾಪದ ಒಳಭಾಗದಲ್ಲಿರುವ ಹೆಚ್ಚುವರಿ ಮಳೆಬಿಲ್ಲುಗಳು. ಛಾಯಾಗ್ರಾಹಕನ ನೆರಳು ಮಳೆಬಿಲ್ಲು ವೃತ್ತದ ಕೇಂದ್ರವನ್ನು ಗುರುತು ಮಾಡುತ್ತದೆ (ಸೂರ್ಯನಿಗೆ ವಿರುದ್ಧವಾಗಿರುವ ತಾಣ).

ಒಂದು ಅಖಂಡವಾಗಿರುವ ಬಣ್ಣಗಳ ರೋಹಿತವನ್ನು (ಬಣ್ಣಗಳ ಪಟ್ಟಿಯನ್ನು) ಒಂದು ಮಳೆಬಿಲ್ಲು ವ್ಯಾಪಿಸಿಕೊಳ್ಳುತ್ತದೆ; ಇದರ ವಿಶಿಷ್ಟ-ವಿಸ್ಪಷ್ಟ ಪಟ್ಟಿಗಳು ಮಾನವನ ವರ್ಣ ಕಲ್ಪನಾಚಿತ್ರದ ಒಂದು ಕಲಾಕೃತಿಯಂತೆ ಭಾಸವಾಗುತ್ತವೆ. ಇಂಗ್ಲಿಷ್‌ನಲ್ಲಿ ಅತ್ಯಂತ ಸಾಮಾನ್ಯವಾಗಿ ಉಲ್ಲೇಖಿಸಲಾಗುವ ಮತ್ತು ನೆನಪಿಸಿಕೊಳ್ಳಲಾಗುವ ಶ್ರೇಣಿಯು ನ್ಯೂಟನ್‌ನ ಸಪ್ತಾಂಶಕವಾದ ಕೆಂಪು (red), ಕಿತ್ತಳೆ (orange), ಹಳದಿ (yellow), ಹಸಿರು (green), ನೀಲಿ (blue), ಊದಾನೀಲಿ (indigo) ಮತ್ತು ನೇರಿಳೆಯ (violet) ರೀತಿಯಲ್ಲಿ ಇರುತ್ತದೆ (ಶ್ರೇಣಿಯ ಕ್ರಮವನ್ನು Roy G. Biv- ರೀತಿಯ ನೆನಪಿನ ಸಾಧನಗಳಿಂದ ಜನಪ್ರಿಯವಾಗಿ ಕಂಠಪಾಠ ಮಾಡಲಾಗುತ್ತದೆ). ಮಳೆಯನ್ನು ಹೊರತುಪಡಿಸಿ ನೀರಿನ ಇತರ ಸ್ವರೂಪಗಳಿಂದಲೂ ಮಳೆಬಿಲ್ಲುಗಳು ರೂಪುಗೊಳ್ಳಬಹುದಾಗಿದ್ದು, ಮಂಜು, ತುಂತುರು ಹನಿ, ಮತ್ತು ಇಬ್ಬನಿ ಈ ಸ್ವರೂಪಗಳಲ್ಲಿ ಸೇರಿವೆ.

ಜಲಪಾತವೂಂದರ ಬಳಿ ಕಂಡು ಬರುವಂತೆ, ಮಂಜಿನಲ್ಲಿಯೂ ಮಳೆಬಿಲ್ಲುಗಳು ರೂಪುಗೊಳ್ಳಬಹುದು.

thumb|ಸರೋವರದಲ್ಲಿರುವ ಮಳೆಬಿಲ್ಲಿನ ಒಂದು ಮಸುಕಾದ ಪ್ರತಿಬಿಂಬದೊಂದಿಗಿನ ಮಳೆಬಿಲ್ಲು

ಗೋಚರತ್ವ

ಬದಲಾಯಿಸಿ
 
ಅಲೆಗಳಿಂದ ಸೃಷ್ಟಿಸಲ್ಪಟ್ಟ ತುಂತುರು ಹನಿಯಲ್ಲಿಯೂ ಮಳೆಬಿಲ್ಲುಗಳು ರೂಪುಗೊಳ್ಳಬಹುದು (ತುಂತುರು ಹನಿ ಬಿಲ್ಲುಗಳು ಎಂದು ಇವನ್ನು ಕರೆಯಲಾಗುತ್ತದೆ)
 
ನ್ಯೂಜಿಲೆಂಡ್‌ನ ಮರೇಟಾಯ್‌ನಲ್ಲಿ ಒಂದು ತೀವ್ರ ವರ್ಷಧಾರೆಯ ನಂತರ ಸೂರ್ಯನ ಬೆಳಕು ತೂರಿಕೊಂಡು ಬಂದಾಗ ಕಂಡ ಮಳೆಬಿಲ್ಲು.

ಗಾಳಿಯಲ್ಲಿ ನೀರಿನ ಹನಿಗಳು ಇದ್ದು, ಒಂದು ಕೆಳಮಟ್ಟದ ಉನ್ನತಿಯ ಕೋನದಲ್ಲಿ ಅವುಗಳ ಹಿಂಭಾಗದಿಂದ ಸೂರ್ಯನ ಬೆಳಕು ಹೊಳೆಯುತ್ತಿರುವ ಸಂದರ್ಭದಲ್ಲೆಲ್ಲಾ ಮಳೆಬಿಲ್ಲುಗಳನ್ನು ವೀಕ್ಷಿಸಲು ಸಾಧ್ಯವಿದೆ. ಮಳೆಯನ್ನು ಸುರಿಸುತ್ತಿರುವ ಮೋಡಗಳಿಂದಾಗಿ ಅರ್ಧದಷ್ಟು ಆಕಾಶವು ಇನ್ನೂ ಗಾಢತೆಯಿಂದ ಅಥವಾ ಮಸುಕಿನಿಂದ ಕೂಡಿದ್ದಾಗ ಮತ್ತು ಸೂರ್ಯನ ದಿಕ್ಕಿನಲ್ಲಿ ಆಕಾಶವು ನಿಚ್ಚಳವಾಗಿರುವ ತಾಣವೊಂದರಲ್ಲಿ ವೀಕ್ಷಕನಿದ್ದಾಗ, ಅತ್ಯಂತ ನಯನ ಮನೋಹರವಾದ ಮಳೆಬಿಲ್ಲಿನ ಪ್ರದರ್ಶನಗಳು ಸಂಭವಿಸುತ್ತವೆ. ಇದರ ಪರಿಣಾಮವಾಗಿ ಒಂದು ಪ್ರಕಾಶಿಸುವ ಮಳೆಬಿಲ್ಲು ಹೊರಹೊಮ್ಮುತ್ತದೆ ಮತ್ತು ಅದು ಕತ್ತಲಾಗಿರುವ ಹಿನ್ನೆಲೆಯೊಂದಿಗೆ ಒಂದು ವೈದೃಶ್ಯವನ್ನು ತೋರಿಸುತ್ತದೆ.

ಜಲಪಾತಗಳು ಅಥವಾ ಕಾರಂಜಿಗಳ ಸಮೀಪದಲ್ಲಿಯೂ ಮಳೆಬಿಲ್ಲಿನ ಪರಿಣಾಮವನ್ನು ಸಾಮಾನ್ಯವಾಗಿ ಕಾಣಬಹುದು. ಇದರ ಜೊತೆಗೆ, ಸೂರ್ಯಪ್ರಕಾಶದಿಂದ ಬೆಳಗುತ್ತಿರುವ ದಿನವೂಂದರ ಅವಧಿಯಲ್ಲಿ ಗಾಳಿಯೊಳಗೆ ನೀರಿನ ಸಣ್ಣಹನಿಗಳನ್ನು ಚೆದುರಿಸುವ ಮೂಲಕವೂ ಈ ಪರಿಣಾಮವನ್ನು ಕೃತಕವಾಗಿ ಸೃಷ್ಟಿಸಬಹುದು. ಅಪರೂಪಕ್ಕೆಂಬಂತೆ, ಒಂದು ಚಂದ್ರನ ಬಿಲ್ಲು ಎಂದು ಕರೆಯಲ್ಪಡುವ ಚಾಂದ್ರ /ಇಂದ್ರಚಾಪ ಅಥವಾ ರಾತ್ರಿವೇಳೆಯ ಮಳೆಬಿಲ್ಲನ್ನು ಗಾಢವಾಗಿ ಬೆಳದಿಂಗಳು ಬೆಳಗುವ ರಾತ್ರಿಗಳಂದು ಕಾಣ ಬಹುದು. ಕಡಿಮೆ ಮಟ್ಟದ ಬೆಳಕಿನಲ್ಲಿ ಬಣ್ಣಕ್ಕೆ ಸಂಬಂಧಿಸಿದ ಮಾನವನ ದೃಷ್ಟಿಯ ಗ್ರಹಿಕೆಯು ಕಳಪೆಯಾಗಿರುವುದರಿಂದ ಚಂದ್ರನ ಬಿಲ್ಲುಗಳು ಬಿಳಿ ಬಣ್ಣದಲ್ಲಿರುವಂತೆ ಅನೇಕ ವೇಳೆ ಗ್ರಹಿಸಲ್ಪಡುತ್ತವೆ.[] ಒಂದು ಚೌಕಟ್ಟಿನಲ್ಲಿ ಮಳೆಬಿಲ್ಲೊಂದರ ಸಂಪೂರ್ಣ ಅರ್ಧವೃತ್ತವನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯುವುದು ಕಷ್ಟಕರ; ಏಕೆಂದರೆ ಇದಕ್ಕಾಗಿ 84°ಯಷ್ಟಿರುವ ಒಂದು ನೋಟದ ಕೋನವು ಅಗತ್ಯವಾಗಿರುತ್ತದೆ. ಒಂದು 35 ಮಿ.ಮೀ. ಬಿಂಬಗ್ರಾಹಿ (ಕ್ಯಾಮರಾ) ಆದಲ್ಲಿ, 19 ಮಿ.ಮೀ.ನಷ್ಟು ನಾಭಿ ದೂರವನ್ನು (ಫೋಕಲ್‌ ಲೆಂತ್‌) ಹೊಂದಿರುವ ಒಂದು ಮಸೂರ ಅಥವಾ ಕಡಿಮೆ ವಿಶಾಲ-ಕೋನದ ಮಸೂರವು ಇದಕ್ಕೆ ಬೇಕಾಗಬಹುದು. ಒಂದು ಸಮಗ್ರ ನೋಟಕ್ಕೆ ಹಲವಾರು ಬಿಂಬಗಳನ್ನು ಲಗತ್ತಿಸಿ ಹೊಲಿಗೆ ಹಾಕುವುದಕ್ಕೆ ಸಂಬಂಧಿಸಿದ ಶಕ್ತಿಯುತವಾದ ತಂತ್ರಾಂಶವು ಈಗ ಲಭ್ಯವಿರುವುದರಿಂದ, ಅತಿಕ್ರಮಿಸುವ ಚೌಕಟ್ಟುಗಳ ಸರಣಿಯೊಂದರಿಂದ ಸಮಗ್ರ ಚಾಪದ, ಅಷ್ಟೇ ಏಕೆ, ದ್ವಿತೀಯಕ ಬಿಲ್ಲುಗಳ ಬಿಂಬಗಳನ್ನು ಯುಕ್ತವಾದ ರೀತಿಯಲ್ಲಿ ಸುಲಭವಾಗಿ ಸೃಷ್ಟಿಸಬಹುದು. ವಿಮಾನವೊಂದರಿಂದ ಓರ್ವರು ಮಳೆಬಿಲ್ಲಿನ ಸಮಗ್ರ ವೃತ್ತವನ್ನು ನೋಡುವ ಸದವಕಾಶವನ್ನು ಹೊಂದಬಹುದಾಗಿದ್ದು, ಇಲ್ಲಿ ವಿಮಾನದ ನೆರಳು ಕೇಂದ್ರಭಾಗದಲ್ಲಿರುತ್ತದೆ. ಈ ವಿದ್ಯಮಾನ ಮತ್ತು ಪ್ರಭಾಮಂಡಲದ ನಡುವೆ ಗೊಂದಲ ಹುಟ್ಟಿಕೊಳ್ಳುವ ಸಾಧ್ಯತೆಯಿರುತ್ತದೆಯಾದರೂ, ಒಂದು ಪ್ರಭಾಮಂಡಲವು ಸಾಮಾನ್ಯವಾಗಿ ಸಾಕಷ್ಟು ಸಣ್ಣದಾಗಿದ್ದು, ಕೇವಲ 5–20°ಯಷ್ಟು ಪ್ರಮಾಣಕ್ಕೆ ವ್ಯಾಪಿಸುತ್ತದೆ. ಉತ್ತಮವಾಗಿರುವ ಗೋಚರತ್ವದ ಸ್ಥಿತಿಗತಿಗಳಲ್ಲಿ (ಉದಾಹರಣೆಗೆ, ಮಳೆಬಿಲ್ಲಿನ ಹಿಂಭಾಗದಲ್ಲಿ ಒಂದು ಗಾಢವಾದ ಮೋಡವಿರುವುದು), ಎರಡನೇ ಚಾಪವನ್ನು ನೋಡಲು ಸಾಧ್ಯವಿದ್ದು, ಇದರಲ್ಲಿನ ಬಣ್ಣಗಳ ಜೋಡಣಾಕ್ರಮವು ತಿರುಗು-ಮುರುಗಾಗಿರುತ್ತದೆ. ನೀಲಿ ಆಕಾಶದ ಹಿನ್ನೆಲೆಯಲ್ಲಾದರೆ, ಎರಡನೇ ಚಾಪವು ಎಷ್ಟುಬೇಕೋ ಅಷ್ಟು ಗೋಚರವಾಗುತ್ತದೆ.

ವೈಜ್ಞಾನಿಕ ವಿವರಣೆ

ಬದಲಾಯಿಸಿ

ಬೆಳಕು ಮಳೆಹನಿಯ ಮೇಲ್ಮೈಯನ್ನು ಪ್ರವೇಶಿಸುವಾಗ ಮೊದಲು ವಕ್ರೀಭವನಗೊಳ್ಳುತ್ತದೆ, ಹನಿಯ ಹಿಂಭಾಗದಿಂದ ಆಚೆಗೆ ಪ್ರತಿಫಲಿಸುತ್ತದೆ, ಹಾಗೂ ಅದು ಹನಿಯನ್ನು ಬಿಡುವಾಗ ಮತ್ತೊಮ್ಮೆ ವಕ್ರೀಭವನಗೊಳ್ಳುತ್ತದೆ. ಇದರ ಒಟ್ಟಾರೆ ಪರಿಣಾಮವೆಂದರೆ, ಒಳಬರುವ ಬೆಳಕು ಒಂದು ವ್ಯಾಪಕ ಶ್ರೇಣಿಯ ಕೋನಗಳ ಮೇಲೆ ಮರಳಿ ಪ್ರತಿಫಲಿಸುತ್ತದೆ ಹಾಗೂ ಅತ್ಯಂತ ತೀಕ್ಷ್ಣವಾದ ಬೆಳಕು 40–42°ಯಷ್ಟಿರುವ ಒಂದು ಕೋನವನ್ನು ಹೊಂದಿರುತ್ತದೆ. ಹನಿಯ ಗಾತ್ರವು ಎಷ್ಟೇ ಇರಲಿ ಕೋನವು ಅದನ್ನು ಅವಲಂಬಿಸಿರದೆ ಸ್ವತಂತ್ರವಾಗಿರುತ್ತದೆ, ಆದರೆ ಹನಿಯ ವಕ್ರೀಭವನ ಸೂಚಿಯ ಮೇಲೆ ಕೋನವು ಅವಲಂಬಿತವಾಗಿರುತ್ತದೆ. ಸಮುದ್ರದ ನೀರು ಮಳೆನೀರಿಗಿಂತ ಉನ್ನತವಾಗಿರುವ ಒಂದು ವಕ್ರೀಭವನ ಸೂಚಿಯನ್ನು ಹೊಂದಿರುತ್ತದೆ. ಆದ್ದರಿಂದ ಸಮುದ್ರದ ತುಂತುರು ಹನಿಯಲ್ಲಿ ಕಂಡುಬರುವ "ಮಳೆಬಿಲ್ಲು" ಒಂದರ ತ್ರಿಜ್ಯವು, ಒಂದು ನಿಜವಾದ ಮಳೆಬಿಲ್ಲಿನದಕ್ಕಿಂತ ಸಣ್ಣದಾಗಿರುತ್ತದೆ. ಈ ಬಿಲ್ಲುಗಳ ತಪ್ಪುಜೋಡಣೆಯೊಂದರಿಂದ ಇದು ಬರಿಗಣ್ಣಿಗೆ ಗೋಚರವಾಗುತ್ತದೆ.[] ಬೆಳಕು ವಕ್ರೀಭವನಕ್ಕೆ ಒಳಗಾಗುವ ಪ್ರಮಾಣವು ಅದರ ತರಂಗಾಂತರದ ಮೇಲೆ ಅವಲಂಬಿಸಿರುತ್ತದೆ, ಮತ್ತು ಈ ಕಾರಣದಿಂದ ಅದರ ಬಣ್ಣ ವ್ಯಕ್ತವಾಗುತ್ತದೆ. ಕೆಂಪು ಬೆಳಕಿಗಿಂತಲೂ ನೀಲಿ ಬೆಳಕು (ಮೊಟಕಾದ ತರಂಗಾಂತರ) ಒಂದು ಮಹತ್ತರವಾದ ಕೋನದಲ್ಲಿ ವಕ್ರೀಭವನಗೊಳ್ಳುತ್ತದೆ, ಆದರೆ ಸಣ್ಣಹನಿಯ ಹಿಂಭಾಗದಿಂದ ಬೆಳಕಿನ ಕಿರಣಗಳು ಪ್ರತಿಫಲನವಾಗುವುದರಿಂದ, ಕೆಂಪು ಬೆಳಕಿನದಕ್ಕಿಂತಲೂ ಸಣ್ಣದಾದ ಒಂದು ಕೋನದಲ್ಲಿ ನೀಲಿ ಬೆಳಕು ಬೀಳುವ ಮೂಲ ಬಿಳಿಯ ಬೆಳಕಿನ ಕಿರಣಕ್ಕೆ ಸಣ್ಣಹನಿಯಿಂದ ಹೊರಹೊಮ್ಮುತ್ತದೆ. ಹೀಗಿರುವಾಗ, ಮಳೆಬಿಲ್ಲೊಂದರಲ್ಲಿನ ಬಣ್ಣಗಳ ನಮೂನೆಯು ಚಾಪದ ಹೊರಭಾಗದ ಮೇಲೆ ಕೆಂಪು ಬಣ್ಣವನ್ನು ಮತ್ತು ಒಳಭಾಗದ ಮೇಲೆ ನೀಲಿ ಬಣ್ಣವನ್ನೂ ಹೊಂದಿರುವುದು ವಿಚಿತ್ರವಾಗಿದೆ ಎಂದು ನೀವು ಭಾವಿಸಬಹುದು. ಏನೇ ಆದರೂ, ಈ ವಿಷಯವನ್ನು ನಾವು ಹೆಚ್ಚು ನಿಕಟವಾಗಿ ಅವಲೋಕಿಸಿದಾಗ ನಮಗೆ ಅರ್ಥವಾಗುವುದೇನೆಂದರೆ, ಸಣ್ಣಹನಿಯೊಂದರಿಂದ ಬರುವ ಕೆಂಪು ಬೆಳಕನ್ನು ಒಂದು ವೇಳೆ ವೀಕ್ಷಕನೊಬ್ಬನು ನೋಡಿದರೆ, ಆಗ ಆ ಸಣ್ಣಹನಿಯಿಂದ ಬರುವ ನೀಲಿ ಬೆಳಕನ್ನು ಅವನು ನೋಡಲಾಗುವುದಿಲ್ಲ, ಏಕೆಂದರೆ ಅದು ಕೆಂಪು ಬೆಳಕಿನಿಂದ ವಿಭಿನ್ನವಾಗಿರುವ ಒಂದು ಪಥದ ಮೇಲಿರುತ್ತದೆ: ಇದು ವೀಕ್ಷಕನ ಕಣ್ಣುಗಳಿಗೆ ಬೀಳದಿರುವ ಒಂದು ಪಥವಾಗಿರುತ್ತದೆ. ಆದ್ದರಿಂದ, ಈ ಮಳೆಬಿಲ್ಲಿನಲ್ಲಿ ನೋಡಲಾದ ನೀಲಿ ಬೆಳಕು ಒಂದು ವಿಭಿನ್ನ ಸಣ್ಣಹನಿ ಯಿಂದ ಬಂದುದಾಗಿರುತ್ತದೆ ಹಾಗೂ ಯಾವುದರ ಕೆಂಪು ಬೆಳಕನ್ನು ವೀಕ್ಷಿಸಲು ಸಾಧ್ಯವೋ ಅದರ ಕೆಳಗೆ ಅದು ಇರಬೇಕಾಗಿರುತ್ತದೆ.

ಜನಪ್ರಿಯ ನಂಬಿಕೆಗೆ ಪ್ರತಿಕೂಲವಾಗಿ ಹೇಳುವುದಾದರೆ, ಮಳೆಹನಿಯ ಹಿಂಭಾಗದಲ್ಲಿರುವ ಬೆಳಕು ಒಟ್ಟಾರೆ ಆಂತರಿಕ ಪ್ರತಿಫಲನಕ್ಕೆ ಒಳಗಾಗುವುದಿಲ್ಲ, ಮತ್ತು ಒಂದಷ್ಟು ಬೆಳಕು ಹಿಂಭಾಗದಿಂದ ಹೊರಹೊಮ್ಮುತ್ತದೆ. ಅದೇನೇ ಇದ್ದರೂ, ಮಳೆಹನಿಯ ಹಿಂಭಾಗದಿಂದ ಹೊರಬರುತ್ತಿರುವ ಬೆಳಕು, ವೀಕ್ಷಕ ಮತ್ತು ಸೂರ್ಯನ ನಡುವೆ ಮಳೆಬಿಲ್ಲೊಂದನ್ನು ಸೃಷ್ಟಿಸುವುದಿಲ್ಲ; ಏಕೆಂದರೆ ಮಳೆಹನಿಯ ಹಿಂಭಾಗದಿಂದ ಹೊರಹೊಮ್ಮಿದ ರೋಹಿತಗಳು ಗೋಚರಿಸುವ ಇತರ ಮಳೆಬಿಲ್ಲುಗಳ ರೀತಿಯಲ್ಲಿ ಒಂದು ಗರಿಷ್ಟ ಪ್ರಖರತೆಯನ್ನು ಹೊಂದಿರುವುದಿಲ್ಲ, ಮತ್ತು ಹೀಗಾಗಿ ಒಂದು ಮಳೆಬಿಲ್ಲನ್ನು ರೂಪಿಸುವುದಕ್ಕಿಂತ ಹೆಚ್ಚಾಗಿ ಸದರಿ ಬಣ್ಣಗಳು ಒಟ್ಟಾಗಿ ಹದವಾಗಿ ಸಂಯೋಜಿತ ವಾಗುತ್ತವೆ.[]

 
ಬೆಳಕಿನ ಕಿರಣಗಳು ಮಳೆಹನಿಯೊಂದನ್ನು ಒಂದು ದಿಕ್ಕಿನಿಂದ ಪ್ರವೇಶಿಸುತ್ತವೆ (ವಿಶಿಷ್ಟವೆಂಬಂತೆ, ಸೂರ್ಯನಿಂದ ಬಂದ ಒಂದು ಸರಳರೇಖೆಯಂತೆ), ಮಳೆಹನಿಯ ಹಿಂಭಾಗದಿಂದ ಪ್ರತಿಫಲಿಸುತ್ತವೆ, ಮತ್ತು ಮಳೆಹನಿಯನ್ನು ಬಿಟ್ಟು ಹೋಗುವಾಗ ಗಾಳಿ ಆಡಿಸುತ್ತವೆ. ಮಳೆಬಿಲ್ಲನ್ನು ಬಿಡುವ ಬೆಳಕು ಒಂದು ಅಗಲ ಕೋನದ ಮೇಲೆ ವ್ಯಾಪಿಸಿದ್ದು, ಅದರ ಗರಿಷ್ಟ ತೀವ್ರತಾ ಮಾಪನವು 40.89–42°ನಷ್ಟಿದೆ.
 
ನೀಲಿ ಬೆಳಕಿಗಿಂತ ಕಡಿಮೆಯಿರುವ ಒಂದು ಕೋನದಿಂದ ಕೆಂಪು ಬೆಳಕು ವಕ್ರೀಭವನಗೊಳ್ಳುತ್ತದೆಯಾದ್ದರಿಂದ, ಬಿಳಿಯ ಬೆಳಕು ಮಳೆಹನಿಯನ್ನು ಪ್ರವೇಶಿಸುವಾಗ ವಿಭಿನ್ನ ಬಣ್ಣಗಳಾಗಿ ಪ್ರತ್ಯೇಕಿಸಲ್ಪಡುತ್ತದೆ. ಮಳೆಹನಿಯನ್ನು ಬಿಡುವಾಗ, ನೀಲಿ ಕಿರಣಗಳಿಗಿಂತ ಸಣ್ಣದಾಗಿರುವ ಒಂದು ಕೋನದ ಮೂಲಕ ಕೆಂಪು ಕಿರಣಗಳು ತಿರುಗಿಕೊಳ್ಳುತ್ತವೆ ಮತ್ತು ಒಂದು ಮಳೆಬಿಲ್ಲನ್ನು ಉಂಟುಮಾಡುತ್ತವೆ.

ಮಳೆಬಿಲ್ಲೊಂದು ವಾಸ್ತವವಾಗಿ ಆಕಾಶದಲ್ಲಿನ ನಿರ್ದಿಷ್ಟ ತಾಣವೂಂದರಲ್ಲಿ ಸಂಭವಿಸುವುದಿಲ್ಲ. ವೀಕ್ಷಕನ ತಾಣ ಮತ್ತು ಸೂರ್ಯನ ಸ್ಥಾನದ ಮೇಲೆ ಇದರ ಸ್ಪಷ್ಟ ಸ್ಥಾನವು ಅವಲಂಬಿಸಿ ರುತ್ತದೆ. ಎಲ್ಲಾ ಮಳೆಹನಿಗಳು ಒಂದೇ ರೀತಿಯಲ್ಲಿ ಸೂರ್ಯನ ಬೆಳಕನ್ನು ವಕ್ರೀಕರಿಸುತ್ತವೆ ಮತ್ತು ಪ್ರತಿಫಲಿಸುತ್ತವೆಯಾದರೂ, ಕೆಲವೊಂದು ಮಳೆಹನಿಗಳಿಂದ ಬರುವ ಬೆಳಕು ಮಾತ್ರವೇ ವೀಕ್ಷಕನ ಕಣ್ಣನ್ನು ತಲುಪುತ್ತದೆ. ಆ ವೀಕ್ಷಕನಿಗೆ ಸಂಬಂಧಿಸಿದಂತೆ ಈ ಬೆಳಕೇ ಮಳೆಬಿಲ್ಲನ್ನು ರೂಪಿಸುತ್ತದೆ. ಆಕಾಶದಲ್ಲಿನ ಮಳೆಬಿಲ್ಲೊಂದರ ಸ್ಥಾನವು ಯಾವಾಗಲೂ ವೀಕ್ಷಕನಿಗೆ ಸಂಬಂಧಿಸಿದಂತೆ ಸೂರ್ಯನ ವಿರುದ್ಧ ದಿಕ್ಕಿನಲ್ಲಿಯೇ ಇರುತ್ತದೆ, ಮತ್ತು ಅದರ ಒಳಭಾಗವು ಹೊರಭಾಗಕ್ಕಿಂತ ಯಾವಾಗಲೂ ಕೊಂಚಮಟ್ಟಿಗೆ ಉಜ್ವಲವಾಗಿರುತ್ತದೆ. ವೀಕ್ಷಕನ ತಲೆಯ ನೆರಳಿನ ಮೇಲೆ ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ ಸೂರ್ಯನಿಗೆ ವಿರುದ್ಧವಾಗಿರುವ ತಾಣದಲ್ಲಿ (ಇದು ಹಗಲುವೇಳೆಯಲ್ಲಿ ದಿಗಂತದ ಕೆಳಗೆ ಇರುತ್ತದೆ) ಚಾಪವು ಕೇಂದ್ರೀಕರಿಸಲ್ಪಟ್ಟಿರುತ್ತದೆ, ಮತ್ತು ವೀಕ್ಷಕನ ತಲೆ ಹಾಗೂ ಅದರ ನೆರಳಿನ ನಡುವಿನ ರೇಖೆಗೆ 40–42°ಯಷ್ಟಿರುವ ಕೋನವೊಂದರಲ್ಲಿ ಅದು ಕಾಣಿಸುತ್ತದೆ. ಇದರ ಪರಿಣಾಮವಾಗಿ, ಒಂದು ವೇಳೆ ಸೂರ್ಯನು 42°ಗಿಂತ ಎತ್ತರದಲ್ಲಿದ್ದರೆ, ಆಗ ಮಳೆಬಿಲ್ಲು ದಿಗಂತದ ಕೆಳಗೆ ಇರುತ್ತದೆ ಮತ್ತು ಸಾಮಾನ್ಯವಾಗಿ ಅದನ್ನು ಕಾಣಲಾಗುವುದಿಲ್ಲ; ಏಕೆಂದರೆ, ಈ ವಿದ್ಯಮಾನಕ್ಕೆ ಕೊಡುಗೆಯಾಗಿ ನೀಡಲು ವಾಡಿಕೆಯಾಗಿ ಸಾಕಷ್ಟಿರಬೇಕಾದ ಮಳೆಹನಿಗಳು ದಿಗಂತ (ಅಂದರೆ ಕಣ್ಣಿನ ಎತ್ತರ) ಮತ್ತು ನೆಲದ ನಡುವೆ ಇರುವುದಿಲ್ಲ. ಇಲ್ಲಿ ವಿನಾಯಿತಿಗಳಿಗೂ ಅವಕಾಶವಿದೆ; ವೀಕ್ಷಕನು ನೆಲಕ್ಕಿಂತ ಮೇಲಿನ ಎತ್ತರದಲ್ಲಿದ್ದಾಗ, ಉದಾಹರಣೆಗೆ ವಿಮಾನವೊಂದರಲ್ಲಿದ್ದಾಗ (ಮೇಲೆ ನೀಡಿರುವ ನಿದರ್ಶನವನ್ನು ನೋಡಿ), ಪರ್ವತವೂಂದರ ತುದಿಯ ಮೇಲೆ, ಅಥವಾ ಜಲಪಾತವೊಂದರ ಮೇಲಿದ್ದಾಗ ಇದಕ್ಕೆ ಅಪವಾದವಾಗಿರುವ ನಿದರ್ಶನಗಳು ಸಂಭವಿಸುತ್ತವೆ.

ಮಾರ್ಪಾಡುಗಳು

ಬದಲಾಯಿಸಿ
 
ನೋಡುಗರಿಗಾಗಿ ನಿರ್ಗಮಿಸುವುದಕ್ಕೆ ಮುಂಚಿತವಾಗಿ ಒಂದಷ್ಟು ಬೆಳಕು ಮಳೆಹನಿಯ ಒಳಭಾಗದಲ್ಲಿ ಎರಡು ಬಾರಿ ಪ್ರತಿಫಲಿಸುತ್ತದೆ. ಬೀಳುವ ಬೆಳಕು ಅತ್ಯಂತ ಉಜ್ವಲವಾಗಿದ್ದಾಗ, ಒಂದು ದ್ವಿತೀಯಕ ಮಳೆಬಿಲ್ಲಾಗಿ ಇದನ್ನು ನೋಡಲು ಸಾಧ್ಯವಿದ್ದು, ಇದು 50–53°ನಷ್ಟು ಮಾಪನದಲ್ಲಿದ್ದು ಅತ್ಯಂತ ಉಜ್ವಲವಾಗಿರುತ್ತದೆ.
 
ಒಂದು ಜೋಡಿ ಮಳೆಬಿಲ್ಲು ತನ್ನ ಹೊರಗಿನ (ದ್ವಿತೀಯಕ) ಬಿಲ್ಲಿನಲ್ಲಿ ವಿರುದ್ಧ-ಕ್ರಮದ ಬಣ್ಣಗಳನ್ನು ಒಳಗೊಂಡಿರುತ್ತದೆ ಹಾಗೂ ಬಿಲ್ಲುಗಳ ನಡುವೆ ಗಾಢವಾದ ಅಲೆಕ್ಸಾಂಡರ್‌ನ ಪಟ್ಟಿಯಿರುತ್ತದೆ.

ಪ್ರಧಾನ ಬಿಲ್ಲಿನ ಹೊರಭಾಗದಲ್ಲಿ ಒಂದು ಮಬ್ಬಾದ ದ್ವಿತೀಯಕ ಮಳೆಬಿಲ್ಲು ಆಗಾಗ ಕಂಡು ಬರುತ್ತದೆ. ಮಳೆಹನಿಗಳ ಒಳಭಾಗದಲ್ಲಿ ಆಗುವ ಸೂರ್ಯನ ಬೆಳಕಿನ ಒಂದು ಜೋಡಿ ಪ್ರತಿಫಲನದಿಂದ ದ್ವಿತೀಯಕ ಮಳೆಬಿಲ್ಲುಗಳು ಸೃಷ್ಟಿಯಾಗುತ್ತವೆ, ಮತ್ತು 50–53°ಯಷ್ಟಿರುವ ಕೋನದಲ್ಲಿ ಕಾಣಿಸುತ್ತವೆ. ಎರಡನೇ ಪ್ರತಿಫಲನದ ಒಂದು ಪರಿಣಾಮವಾಗಿ, ಪ್ರಧಾನ ಬಿಲ್ಲಿಗೆ ಹೋಲಿಸಿದಾಗ ದ್ವಿತೀಯಕ ಮಳೆಬಿಲ್ಲೊಂದರ ಬಣ್ಣಗಳು ತಲೆಕೆಳಗಾಗಿರುತ್ತವೆ; ಅಂದರೆ ಅದರ ಹೊರಭಾಗದಲ್ಲಿ ನೀಲಿ ಬಣ್ಣವಿದ್ದರೆ ಒಳಭಾಗದಲ್ಲಿ ಕೆಂಪು ಬಣ್ಣವಿರುತ್ತದೆ. ಪ್ರಧಾನ ಮಳೆಬಿಲ್ಲಿಗಿಂತಲೂ ದ್ವಿತೀಯಕ ಮಳೆಬಿಲ್ಲು ಮಸುಕಾಗಿರುತ್ತದೆ. ಏಕೆಂದರೆ, ಒಂದು ಪ್ರತಿಫಲನದಲ್ಲಿ ಆಗುವುದಕ್ಕೆ ಹೋಲಿಸಿದಾಗ ಎರಡು ಪ್ರತಿಫಲನಗಳಿಂದ ಹೆಚ್ಚು ಬೆಳಕು ತಪ್ಪಿಸಿಕೊಳ್ಳುತ್ತದೆ ಹಾಗೂ ಸ್ವತಃ ಮಳೆಬಿಲ್ಲೇ ಆಕಾಶದ ಒಂದು ಮಹತ್ತರವಾದ ವಿಸ್ತೀರ್ಣದ ಮೇಲೆ ವ್ಯಾಪಿಸಿರುವುದೂ ಇದರ ಹಿಂದಿನ ಮತ್ತೊಂದು ಕಾರಣವಾಗಿರುತ್ತದೆ. ಪ್ರಧಾನ ಬಿಲ್ಲು ಮತ್ತು ದ್ವಿತೀಯಕ ಬಿಲ್ಲುಗಳ ನಡುವೆ ವ್ಯಾಪಿಸಿಕೊಂಡಿರುವ ಬೆಳಕಿಲ್ಲದ ಆಕಾಶದ ಮಸುಕಾದ ಪ್ರದೇಶವನ್ನು ಅಲೆಕ್ಸಾಂಡರ್‌ನ ಪಟ್ಟಿ ಎಂದು ಕರೆಯಲಾಗುತ್ತದೆ; ಇದನ್ನು ಮೊದಲು ವಿವರಿಸಿದ ಅಫ್ರೋಡಿಸಿಯಾಸ್‌ನ ಅಲೆಕ್ಸಾಂಡರ್‌‌‌ನ ಹೆಸರನ್ನೇ ಇದಕ್ಕೆ ಇಡಲಾಗಿದೆ ಎಂಬುದು ಗಮನಾರ್ಹ ಸಂಗತಿ.

ಒಂದು ಮೂರನೆಯ ಅಥವಾ ತೃತೀಯಕ ಮಳೆಬಿಲ್ಲನ್ನು ಅಪರೂಪದ ಸಂದರ್ಭಗಳಲ್ಲಿ ಕಾಣಬಹುದು. ಚತುರಂಶೀ ಮಳೆಬಿಲ್ಲುಗಳನ್ನು ನೋಡಿರುವುದರ ಕುರಿತಾಗಿ ಕೆಲವೂಂದು ವೀಕ್ಷಕರು ವರದಿ ಮಾಡಿದ್ದಾರೆ. ಇಂಥ ಮಳೆಬಿಲ್ಲುಗಳಲ್ಲಿ ಅತ್ಯಂತ ಹೊರಗಿನ ಒಂದು ಮಬ್ಬಾದ ಬಿಲ್ಲು ತರಂಗದಂತಿರುವ ಮತ್ತು ಕಂಪಿಸುತ್ತಿರುವ ಚಹರೆಯೊಂದನ್ನು ಹೊಂದಿದ್ದುದು ತಿಳಿದುಬಂದಿದೆ. ಇಂಥ ಮಳೆಬಿಲ್ಲುಗಳನ್ನು ಗುರುತಿಸುವುದಕ್ಕೆ ಸೂರ್ಯನು ತೊಡಕಾಗಿ ಪರಿಣಮಿಸುವುದರಿಂದ, ಆಕಾಶದ ಅದೇ ಪಾರ್ಶ್ವದಲ್ಲಿ ಈ ಮಳೆಬಿಲ್ಲುಗಳು ಕಾಣಿಸುತ್ತವೆ. ಪ್ರಧಾನ ಬಿಲ್ಲಿನ ಹೊರಭಾಗದ ಪಕ್ಕದಲ್ಲಿಯೇ ಇರುವ ದ್ವಿತೀಯಕ ಮಳೆಬಿಲ್ಲೊಂದರ ಚಹರೆಯೊಂದನ್ನು, ತೃತೀಯಕ ಮಳೆಬಿಲ್ಲಿನ ಒಂದು ಬಗೆಯು ತನ್ನೊಂದಿಗೆ ಹೊಂದಿರುತ್ತದೆ. ಅತ್ಯಂತ ಹೊರಗಿನ (ತೃತೀಯಕ) ಮಳೆಬಿಲ್ಲು ಕಣ್ಮರೆಯಾಗುವ ಅದೇ ಸಮಯದಲ್ಲಿಯೇ ಸಕ್ರಿಯವಾಗಿ ರೂಪುಗೊಳ್ಳುವಂತೆ ನಿಕಟವಾಗಿ ಇರಿಸಲ್ಪಟ್ಟಿರುವ ಹೊರಗಿನ ಬಿಲ್ಲು ಕಂಡುಬಂದಿದೆ. ಈ ಬದಲಾವಣೆಯ ಸಂದರ್ಭದಲ್ಲಿ, ಉಳಿದಿರುವ ಎರಡು ಮಳೆಬಿಲ್ಲುಗಳು ಬಿಳಿಯ ಬೆಳಕಿನ ಒಂದು ಪಟ್ಟಿಯೊಳಗೆ ವಿಲೀನಗೊಂಡು, ಒಳಗಿನ ಒಂದು ನೀಲಿ ಪಟ್ಟಿ ಹಾಗೂ ಹೊರಗಿನ ಕೆಂಪು ಪಟ್ಟಿಯನ್ನು ಹೊಂದಿರುವುದು ಕಂಡುಬಂದಿದೆ. ದ್ವಿಗುಣಗೊಂಡ ಮಳೆಬಿಲ್ಲಿನ ಈ ನಿರ್ದಿಷ್ಟ ಸ್ವರೂಪವು ಜೋಡಿ ಮಳೆಬಿಲ್ಲಿನ ಶಿಷ್ಟಸ್ವರೂಪದ ರೀತಿಯಲ್ಲಿ ಇರುವುದಿಲ್ಲ; ಎರಡು ಬಿಲ್ಲುಗಳ ನಡುವಿನ ಅಂತರ ಬಿಡುವಿಕೆ ಹಾಗೂ ವಿಲೀನಗೊಳ್ಳುವುದಕ್ಕೆ ಮುಂಚಿತವಾಗಿ ಎರಡೂ ಬಿಲ್ಲುಗಳು ತದ್ರೂಪಿಯಾದ, ಬಣ್ಣದ ಸಾಮಾನ್ಯ ಜೋಡಣೆಯನ್ನು ಹಂಚಿಕೊಳ್ಳುವುದು ಇದಕ್ಕಿರುವ ಕಾರಣಗಳಾಗಿವೆ. ಈ ಎರಡೂ ಬಿಲ್ಲುಗಳಲ್ಲಿ, ಒಳಗಿನ ಬಣ್ಣವು ನೀಲಿ ಆಗಿರುತ್ತದೆ ಮತ್ತು ಹೊರಗಿನ ಬಣ್ಣವು ಕೆಂಪು ಆಗಿರುತ್ತದೆ.

ಮೇಲ್ದರ್ಜೆಯ ಮಳೆಬಿಲ್ಲುಗಳ ಕುರಿತಾಗಿ ಫೆಲಿಕ್ಸ್‌ ಬಿಲೆಟ್‌ (1808–1882) ಎಂಬಾತ ವಿವರಿಸಿದ. 19ನೇ-ದರ್ಜೆಯ ಮಳೆಬಿಲ್ಲಿನವರೆಗೆ ಈತ ಕೋನೀಯ ಸ್ಥಾನಗಳನ್ನು ಚಿತ್ರಿಸಿದ್ದು, ಈ ಒಂದು ಮಾದರಿಗೆ ಅವನು "ಗುಲಾಬಿ" (ರೋಸ್‌) ಎಂದು ಕರೆದಿದ್ದಾನೆ.[] ಲೇಸರ್‌‌ ಸಾಧನಗಳಿಂದ ಉತ್ಪಾದಿಸಲ್ಪಟ್ಟ ಅತೀವವಾಗಿ ಉಜ್ವಲವಾಗಿರುವ ಮತ್ತು ಉತ್ತಮವಾಗಿ ಸಮಾಂತರೀಕರಿಸಿದ ಬೆಳಕನ್ನು ಬಳಸಿಕೊಂಡು ಪ್ರಯೋಗಾಲಯದಲ್ಲಿ ಉನ್ನತ-ದರ್ಜೆಯ ಮಳೆಬಿಲ್ಲುಗಳನ್ನು ವೀಕ್ಷಿಸಲು ಸಾಧ್ಯವಿದೆ. ಒಂದು ಹೀಲಿಯಂ-ನಿಯಾನ್‌ (HeNe) ಲೇಸರ್‌‌ ಕಿರಣ ಹಾಗೂ ಒಂದು ತೂಗುವ ನೀರಿನ ಲೋಲಕವನ್ನು ಬಳಸಿಕೊಂಡು, K. ಸಸ್ಸಾನ್‌ ಎಂಬಾತ 1979ರಲ್ಲಿ ಆರನೇ-ದರ್ಜೆಯ ಮಳೆಬಿಲ್ಲೊಂದನ್ನು ಮೊದಲು ವೀಕ್ಷಿಸಿದ.[] ಇದೇ ರೀತಿಯ ವಿಧಾನವೊಂದನ್ನು ಆದರೆ ಒಂದು ಆರ್ಗಾನ್‌ ಅಯಾನು ಲೇಸರ್‌‌ ಕಿರಣವನ್ನು ಬಳಸಿಕೊಂಡು ಕಂಡುಕೊಳ್ಳಲಾದ 200ನೇ-ದರ್ಜೆಯವರೆಗಿನ ಮಳೆಬಿಲ್ಲಿನ ಕುರಿತು ಎಂಗ್‌ ಮತ್ತು ಇತರರು 1998ರಲ್ಲಿ ವರದಿ ಮಾಡಿದ್ದಾರೆ.[]

ಹೆಚ್ಚುವರಿ ಮಳೆಬಿಲ್ಲು

ಬದಲಾಯಿಸಿ
 
ಒಂದು ಹೆಚ್ಚುವರಿ ಮಳೆಬಿಲ್ಲಿನ ವೈದೃಶ್ಯದರ್ಶನ-ವರ್ಧಿತ ಛಾಯಾಚಿತ್ರ; ಪ್ರಧಾನ ಬಿಲ್ಲಿನ ಒಳಭಾಗದಲ್ಲಿ ಹೆಚ್ಚುವರಿ ಹಸಿರು ಮತ್ತು ಕೆನ್ನೀಲಿ ಚಾಪಗಳಿವೆ.

ಒಂದು ಪೇರಿಸಿಕೊಳ್ಳುವ ಮಳೆಬಿಲ್ಲು ಎಂಬುದಾಗಿಯೂ ಕರೆಯಲ್ಪಡುವ ಒಂದು ಹೆಚ್ಚುವರಿ ಮಳೆಬಿಲ್ಲು ಒಂದು ವಿರಳವಾದ ವಿದ್ಯಮಾನವಾಗಿದ್ದು, ಪ್ರಧಾನ ಮಳೆಬಿಲ್ಲಿನ ಒಳಗಿನ ಪಾರ್ಶ್ವದ ಮೇಲೆ, ಮತ್ತು ಅತಿ ವಿರಳವಾಗಿ ದ್ವಿತೀಯಕ ಮಳೆಬಿಲ್ಲಿನ ಹೊರಭಾಗದ ಮೇಲೂ ಹಲವಾರು ಮಸುಕಾದ ಮಳೆಬಿಲ್ಲುಗಳನ್ನು ಇದು ಒಳಗೊಂಡಿರುತ್ತದೆ. ಹೆಚ್ಚುವರಿ ಮಳೆಬಿಲ್ಲುಗಳು ಕೂಡಿಕೊಂಡಿರದೆ ಕೊಂಚಮಟ್ಟಿಗೆ ಪ್ರತ್ಯೇಕವಾಗಿರುತ್ತವೆ ಮತ್ತು ವಾಡಿಕೆಯ ಮಾದರಿಗೆ ಹೊಂದಿಕೊಳ್ಳದ ಪ್ಯಾಸ್ಟಲ್‌-ನೀಲಿ ಬಣ್ಣದ ಪಟ್ಟಿಗಳನ್ನು ಹೊಂದಿರುತ್ತವೆ.

ಆದರ್ಶಪ್ರಾಯವಾದ ಜ್ಯಾಮಿತೀಯ ದೃಗ್ವಿಜ್ಞಾನವನ್ನು ಬಳಸಿಕೊಂಡು ಅವುಗಳ ಅಸ್ತಿತ್ವವನ್ನು ವಿವರಿಸುವುದಕ್ಕೆ ಆಗುವುದಿಲ್ಲ. ಮಳೆಹನಿಗಳ ವ್ಯಾಪ್ತಿಯೊಳಗೆ, ಕೊಂಚಮಟ್ಟಿಗೆ ಬದಲಾಗುವ ಉದ್ದಗಳೊಂದಿಗೆ ಕೊಂಚಮಟ್ಟಿಗೆ ವಿಭಿನ್ನವಾಗಿರುವ ಪಥಗಳನ್ನು ಅನುಸರಿಸಿಕೊಂಡು ಬರುವ ಬೆಳಕಿನ ಕಿರಣಗಳ ನಡುವಿನ ವ್ಯತಿಕರಣದಿಂದ ಒಂದಾದ ಮೇಲೆ ಒಂದರಂತೆ ಪರ್ಯಾಯವಾಗಿ ಬರುವ ಮಸುಕಾದ ಮಳೆಬಿಲ್ಲುಗಳು ಉಂಟಾಗುತ್ತವೆ. ಕೆಲವೊಂದು ಕಿರಣಗಳು ಸಮಾನಕಲೆಯಲ್ಲಿದ್ದು, ರಚನಾತ್ಮಕ ವ್ಯತಿಕರಣದ ಮೂಲಕ ಪರಸ್ಪರರ ಬಲವರ್ಧಿಸಿಕೊಂಡು ಒಂದು ಉಜ್ವಲವಾದ ಪಟ್ಟಿಯನ್ನು ಸೃಷ್ಟಿಸುತ್ತವೆ; ಇತರ ಕಿರಣಗಳು ಅರ್ಧದಷ್ಟರವರೆಗಿನ ತರಂಗಾಂತರದಿಂದ ಸಮಾನಕಲೆಯ ಹೊರಗಿದ್ದು, ರಚನಾತ್ಮಕವಲ್ಲದ ವ್ಯತಿಕರಣದ ಮೂಲಕ ಪರಸ್ಪರರನ್ನು ರದ್ದುಗೊಳಿಸಿಕೊಂಡು ಒಂದು ಅಂತರವನ್ನು ಸೃಷ್ಟಿಸುತ್ತವೆ. ವಿಭಿನ್ನ ಬಣ್ಣಗಳ ಕಿರಣಗಳಿಗೆ ಸಂಬಂಧಿಸಿದ ವಕ್ರೀಭವನದ ನಿರ್ದಿಷ್ಟ ವಿಭಿನ್ನ ಕೋನಗಳಲ್ಲಿ, ವಿಭಿನ್ನ ಬಣ್ಣಗಳ ಕಿರಣಗಳಿಗೆ ಸಂಬಂಧಿಸಿದಂತೆ ವ್ಯತಿಕರಣದ ಮಾದರಿಗಳು ಕೊಂಚಮಟ್ಟಿಗೆ ವಿಭಿನ್ನವಾಗಿರುತ್ತವೆ; ಆದ್ದರಿಂದ ಪ್ರತಿಯೊಂದು ಉಜ್ವಲ ಪಟ್ಟಿಯೂ ಬಣ್ಣದಲ್ಲಿ ವ್ಯತ್ಯಾಸ ಮಾಡಲ್ಪಟ್ಟಿದ್ದು, ಅದು ಒಂದು ಚಿಕಣಿ ಮಳೆಬಿಲ್ಲನ್ನು ಸೃಷ್ಟಿಸುತ್ತದೆ. ಮಳೆಹನಿಗಳು ಸಣ್ಣದಾಗಿದ್ದು, ಒಂದೇ ರೀತಿಯ ಗಾತ್ರದಲ್ಲಿದ್ದಾಗ ಹೆಚ್ಚುವರಿ ಮಳೆಬಿಲ್ಲುಗಳು ಅತ್ಯಂತ ನಿಚ್ಚಳವಾಗಿರುತ್ತವೆ. ಹೆಚ್ಚುವರಿ ಮಳೆಬಿಲ್ಲುಗಳ ಪರಮ ಅಸ್ತಿತ್ವವು ಐತಿಹಾಸಿಕವಾಗಿ ಬೆಳಕಿನ ತರಂಗ ಸ್ವರೂಪದ ಒಂದು ಮೊದಲ ಸೂಚನೆಯಾಗಿತ್ತು, ಮತ್ತು ಇದರ ಮೊದಲ ವಿವರಣೆಯನ್ನು ಥಾಮಸ್‌ ಯಂಗ್‌ ಎಂಬಾತ 1804ರಲ್ಲಿ ಒದಗಿಸಿದ.

ಪ್ರತಿಫಲಿತ ಮಳೆಬಿಲ್ಲು, ಪ್ರತಿಫಲನದ ಮಳೆಬಿಲ್ಲು

ಬದಲಾಯಿಸಿ
 
ಸೂಯಾಸ್ತದ ವೇಳೆ ಕಂಡುಬಂದಂತೆ, ಪ್ರತಿಫಲನದ ಮಳೆಬಿಲ್ಲು ಮತ್ತು ಸಾಮಾನ್ಯ ಮಳೆಬಿಲ್ಲು.

ಜಲರಾಶಿಯೊಂದರ ಮೇಲೆ ಮಳೆಬಿಲ್ಲೊಂದು ಕಾಣಿಸಿಕೊಂಡಾಗ, ವಿಭಿನ್ನ ಬೆಳಕಿನ ಪಥಗಳಿಂದ ಹುಟ್ಟಿಕೊಂಡಿರುವ ಎರಡು ಪೂರಕ ಪ್ರತಿಬಿಂಬಕ ಬಿಲ್ಲುಗಳನ್ನು ದಿಗಂತದ ಕೆಳಗೆ ಮತ್ತು ಮೇಲೆ ಕಾಣಬಹುದು. ಅವುಗಳ ಹೆಸರುಗಳು ಕೊಂಚಮಟ್ಟಿಗೆ ವಿಭಿನ್ನವಾಗಿವೆ. ದಿಗಂತದ ಕೆಳಗಿನ ನೀರಿನ ಮೇಲ್ಮೈ ಒಂದು ವೇಳೆ ಶಾಂತವಾಗಿದ್ದಲ್ಲಿ (ಮೇಲಿನ ಚಿತ್ರವನ್ನು ನೋಡಿ), ಆ ಮೇಲ್ಮೈಯಲ್ಲಿ ಒಂದು ದರ್ಪಣದ ಬಿಂಬವಾಗಿ ಒಂದು ಪ್ರತಿಫಲಿತ ಮಳೆಬಿಲ್ಲು ಕಾಣಿಸುತ್ತದೆ. ಸೂರ್ಯನ ಬೆಳಕು ಮಳೆಹನಿಗಳಿಂದ ಮೊದಲು ವಿಚಲಿಸಲ್ಪಡುತ್ತದೆ, ಮತ್ತು ವೀಕ್ಷಕನಿಗೆ ತಲುಪುವುದಕ್ಕೆ ಮುಂಚಿತವಾಗಿ, ಆಮೇಲೆ ಜಲರಾಶಿಯಿಂದ ಆಚೆಗೆ ಪ್ರತಿಫಲಿಸಲ್ಪಡುತ್ತದೆ. ಪ್ರತಿಫಲಿತ ಮಳೆಬಿಲ್ಲು ಕನಿಷ್ಟಪಕ್ಷ ಭಾಗಶಃವಾಗಿಯಾದರೂ ಆಗಾಗ ಗೋಚರವಾಗುತ್ತದೆ, ಮತ್ತು ಸಣ್ಣದಾದ ಕೊಳಕು ನೀರಿನ ಹಳ್ಳಗಳಲ್ಲೂ ಅದು ಗೋಚರಿಸುತ್ತದೆ.

ಒಂದು ವೇಳೆ ಜಲರಾಶಿಯೊಂದು ದೊಡ್ಡದಾಗಿದ್ದು, ತನ್ನ ಸಮಗ್ರ ಮೇಲ್ಮೈನಾದ್ಯಂತವೂ ಶಾಂತವಾಗಿದ್ದು, ಮಳೆಯ ತೆರೆಗೆ ನಿಕಟವಾಗಿದ್ದಲ್ಲಿ, ಮಳೆಹನಿಗಳನ್ನು ತಲುಪುವುದಕ್ಕೆ ಮುಂಚಿತವಾಗಿ ಸದರಿ ಜಲರಾಶಿಯಿಂದ ಆಚೆಗೆ ಸೂರ್ಯಬೆಳಕು ಎಲ್ಲಿ ಪ್ರತಿಫಲಿಸುತ್ತದೆಯೋ (ರೇಖಾಚಿತ್ರ ವನ್ನು ನೋಡಿ) ಅಲ್ಲಿ ಒಂದು ಪ್ರತಿಫಲನದ ಮಳೆಬಿಲ್ಲನ್ನು ಅದು ಉಂಟುಮಾಡಬಹುದು (ಬಲಭಾಗದಲ್ಲಿರುವ ಚಿತ್ರವನ್ನು ನೋಡಿ). ಸದರಿ ಪ್ರತಿಫಲನದ ಮಳೆಬಿಲ್ಲು ದಿಗಂತದ ಮೇಲೆ ಕಾಣಿಸುತ್ತದೆ. ಇದು ಸಾಮಾನ್ಯ ಮಳೆಬಿಲ್ಲನ್ನು ದಿಗಂತದಲ್ಲಿ ಛೇದಿಸುತ್ತದೆ, ಮತ್ತು ಇದರ ಚಾಪವು ಆಕಾಶದಲ್ಲಿ ಎತ್ತರಕ್ಕೆ ತಲುಪುತ್ತದೆ ಹಾಗೂ ಇದರ ಕೆಳಗೆ ಸಾಮಾನ್ಯ ಮಳೆಬಿಲ್ಲಿನ ಕೇಂದ್ರವಿರುವಂತೆ, ಇದರ ಕೇಂದ್ರವು ದಿಗಂತದ ಮೇಲಿನಷ್ಟು ಎತ್ತರದಲ್ಲಿರುತ್ತದೆ. ಅವಶ್ಯಕತೆಗಳ ಸಂಯೋಜನೆಯಿಂದಾಗಿ ಒಂದು ಪ್ರತಿಫಲನದ ಮಳೆಬಿಲ್ಲು ಅಪರೂಪವಾಗಿ ಗೋಚರಿಸುತ್ತದೆ.

ಪ್ರತಿಫಲನದ ಬಿಲ್ಲಿನ ಪ್ರತಿಫಲನ ಮತ್ತು ತನ್ನ ಪ್ರತಿಫಲನಗಳೊಂದಿಗಿನ ದ್ವಿತೀಯಕ ಬಿಲ್ಲು ಇವು ಏಕಕಾಲದಲ್ಲಿ ಕಾಣಿಸುವಂತೆ ಸಂಭವಿಸಿದರೆ, ಆರು (ಅಥವಾ ಕೆಲವೊಮ್ಮೆ ಎಂಟು) ಬಿಲ್ಲುಗಳನ್ನು ವಿಂಗಡಿಸಬಹುದು ಅಥವಾ ಅವುಗಳ ವೈಲಕ್ಷಣ್ಯವನ್ನು ಕಾಣಬಹುದು.[]

ಸುತ್ತು ಸಮತಲವಾದ ಬಿಲ್ಲು

ಬದಲಾಯಿಸಿ

ಸುತ್ತು ಸಮತಲವಾದ ಬಿಲ್ಲನ್ನು "ಅಗ್ನಿಯ ಮಳೆಬಿಲ್ಲು" ಎಂಬ ಅಪಪ್ರಯೋಗದಿಂದ ಕೆಲವೊಮ್ಮೆ ಉಲ್ಲೇಖಿಸಲಾಗುತ್ತದೆ. ಇದು ಮಂಜಿನ ಹರಳುಗಳಲ್ಲಿ ಹುಟ್ಟುವುದರಿಂದ, ಇದೊಂದು ಮಳೆಬಿಲ್ಲು ಅಲ್ಲವಾದರೂ ಒಂದು ತೇಜೋಮಂಡಲವಾಗಿದೆ.[]

ಟೈಟನ್‌ ಮೇಲಿನ ಮಳೆಬಿಲ್ಲುಗಳು

ಬದಲಾಯಿಸಿ

ಶನಿಗ್ರಹದ ಉಪಗ್ರಹವಾದ ಟೈಟನ್‌ ಒಂದು ತೇವದ ಮೇಲ್ಮೈ ಮತ್ತು ಒದ್ದೆಯಾದ ಮೋಡಗಳನ್ನು ಹೊಂದಿರುವುದರಿಂದ, ಇದರ ಮೇಲೆ ಮಳೆಬಿಲ್ಲುಗಳು ಸಂಭವಿಸಬಹುದು ಎಂಬುದಾಗಿ ಸೂಚಿಸಲಾಗಿದೆ. ಟೈಟನ್‌ನ ತಂಪು ಪರಿಸರದಲ್ಲಿರುವ ದ್ರವಪದಾರ್ಥವು ನೀರು ಆಗಿರದೆ ಅದರ ಬದಲಿಗೆ ಮೀಥೇನ್‌ ಆಗಿರುವುದರಿಂದ, ಟೈಟನ್‌ನ ಮಳೆಬಿಲ್ಲೊಂದರ ತ್ರಿಜ್ಯವು 42°ಯ ಬದಲಿಗೆ ಸುಮಾರು 49°ಯಷ್ಟಿರುತ್ತದೆ. ಆ ತರಂಗಾಂತರಗಳಿಗೆ ಸಂಬಂಧಿಸಿದಂತೆ ಟೈಟನ್‌ನ ವಾತಾವರಣವು ಹೆಚ್ಚು ಪಾರದರ್ಶಕವಾಗಿರುವುದರಿಂದ, ಅಲ್ಲಿ ಮಳೆಬಿಲ್ಲನ್ನು ನೋಡಲು ಸಂದರ್ಶಕನೊಬ್ಬನಿಗೆ ಅವರೋಹಿತ ಬಿಸಿಲು ಕನ್ನಡಕಗಳ (ಇನ್‌ಫ್ರಾರೆಡ್‌ ಗಾಗಲ್ಸ್‌) ಅಗತ್ಯ ಕಂಡುಬರಬಹುದು.[]

ವೈಜ್ಞಾನಿಕ ಇತಿಹಾಸ

ಬದಲಾಯಿಸಿ

ಮಳೆಬಿಲ್ಲಿನೆಡೆಗೆ ಗಂಭೀರ ಸ್ವರೂಪದ ಗಮನವನ್ನು ಸಮರ್ಪಿಸುವಲ್ಲಿ ಗ್ರೀಕ್‌ ದಾರ್ಶನಿಕ ಅರಿಸ್ಟಾಟಲ್‌ (384–322 BCE) ಮೊದಲಿಗನಾಗಿದ್ದ. ಅರಿಸ್ಟಾಟಲ್‌ನ ಸಾವಿನ ನಂತರ ಬಂದ ಬಹಳಷ್ಟು ಮಳೆಬಿಲ್ಲು ಸಿದ್ಧಾಂತಗಳು ಅವನ ಕಾರ್ಯಕ್ಕೆ ನೀಡಲಾದ ಪ್ರತಿಕ್ರಿಯೆಗಳಾಗಿದ್ದವಾದರೂ, ಅವುಗಳೆಲ್ಲವೂ ವಿಮರ್ಶಾರಹಿತವಾಗಿರಲಿಲ್ಲ.[೧೦]

ಅರಬ್‌ ಭೌತವಿಜ್ಞಾನಿ ಮತ್ತು ಮಹಾವಿದ್ವಾಂಸನಾದ ಇಬ್ನ್‌ ಅಲ್‌-ಹಯ್‌ಥಾಮ್‌ (ಅಲ್ಹಾಜೆನ್‌; 965–1039) ಎಂಬಾತ ಮಳೆಬಿಲ್ಲಿನ ವಿದ್ಯಮಾನಕ್ಕೆ ಒಂದು ವೈಜ್ಞಾನಿಕ ವಿವರಣೆಯನ್ನು ಒದಗಿಸಲು ಪ್ರಯತ್ನಿಸಿದ. ತನ್ನ ಮಕಾಲಾ ಫಿ ಅಲ್‌-ಹಲಾ ಡಾ ಕಾಸ್‌ ಕಝಾಹ್‌ (ಆನ್‌ ದಿ ರೇನ್‌ಬೋ ಅಂಡ್‌ ಹ್ಯಾಲೊ ) ಕೃತಿಯಲ್ಲಿ ಆತ ಮಳೆಬಿಲ್ಲು ರೂಪುಗೊಳ್ಳುವುದರ ಕುರಿತು ಹೀಗೆ ವಿವರಿಸಿದ: "ಮಳೆಬಿಲ್ಲು ಒಂದು ಬಿಂಬವಾಗಿ ರೂಪುಗೊಳ್ಳುತ್ತದೆ. ಈ ಬಿಂಬವು ನಿಮ್ನ ಕನ್ನಡಿಯೊಂದರಲ್ಲಿ ರೂಪುಗೊಳ್ಳುತ್ತದೆ. ಹೆಚ್ಚು ದೂರದಲ್ಲಿರುವ ಬೆಳಕಿನ ಮೂಲವೊಂದರಿಂದ ಬರುತ್ತಿರುವ ಬೆಳಕಿನ ಕಿರಣಗಳು ಒಂದು ವೇಳೆ ನಿಮ್ನ ಕನ್ನಡಿಯ ಅಕ್ಷದ ಮೇಲಿನ ಯಾವುದೇ ಬಿಂದುವಿಗೆ ಪ್ರತಿಫಲಿಸಿದರೆ, ಆ ಬಿಂದುವಿನಲ್ಲಿ ಅವು ಏಕಕೇಂದ್ರಕ ವೃತ್ತಗಳನ್ನು ರೂಪಿಸುತ್ತವೆ. ಸೂರ್ಯನನ್ನು ಹೆಚ್ಚು ದೂರದಲ್ಲಿರುವ ಒಂದು ಬೆಳಕಿನ ಮೂಲವಾಗಿ, ನೋಡುಗನ ಕಣ್ಣನ್ನು ಕನ್ನಡಿಯ ಅಕ್ಷದ ಮೇಲಿನ ಒಂದು ಬಿಂದುವಾಗಿ ಮತ್ತು ಮೋಡವೊಂದನ್ನು ಒಂದು ಪ್ರತಿಫಲಿಸುವ ಮೇಲ್ಮೈ ಆಗಿ ಭಾವಿಸಿದಾಗ, ಅಕ್ಷದ ಮೇಲೆ ಏಕಕೇಂದ್ರಕ ವೃತ್ತಗಳು ರೂಪುಗೊಳ್ಳುತ್ತಿರುವುದನ್ನು ವೀಕ್ಷಿಸಬಹುದು."[೧೧] ಇದನ್ನು ಪರಿಶೀಲಿಸುವಷ್ಟು ಆತ ಸಮರ್ಥನಾಗಿರಲಿಲ್ಲ. ಏಕೆಂದರೆ, "ಸೂರ್ಯನಿಂದ ಬಂದ ಬೆಳಕು ಕಣ್ಣನ್ನು ತಲುಪುವುದಕ್ಕೆ ಮುಂಚಿತವಾಗಿ ಮೋಡವೊಂದರಿಂದ ಪ್ರತಿಫಲಿಸಲ್ಪಡುತ್ತದೆ" ಎಂಬ ಅವನ ಸಿದ್ಧಾಂತವು ಒಂದು ಕಾರ್ಯಸಾಧ್ಯವಾದ ಪ್ರಾಯೋಗಿಕ ಪರಿಶೀಲನೆಗೆ ಅವಕಾಶ ನೀಡಲಿಲ್ಲ.[೧೨] ಈ ವಿವರಣೆಯು ನಂತರದಲ್ಲಿ ಅವೆರಿಯಸ್‌‌ನಿಂದ[೧೧] ಪುನರಾವರ್ತಿಸಲ್ಪಟ್ಟಿತು; ಇದು ತಪ್ಪಾಗಿದ್ದರೂ ಸಹ ನಂತರದಲ್ಲಿ ಕಮಾಲ್‌ ಅಲ್‌-ದೀನ್‌ ಅಲ್‌-ಫಾರಿಸೀ (1267–ಸುಮಾರು 1319/1320) ಮತ್ತು ಫ್ರೀಬರ್ಗ್‌ನ ಥಿಯೋಡೋರಿಕ್‌‌ (ಸುಮಾರು 1250–1310) ಎಂಬಿಬ್ಬರಿಂದ ನೀಡಲ್ಪಟ್ಟ ಸರಿಯಾದ ವಿವರಣೆಗಳಿಗೆ ಸಂಬಂಧಿಸಿದಂತೆ ತಳಹದಿಯನ್ನು ಒದಗಿಸಿತು.[೧೩] ಪ್ರತಿಫಲನ ಮಾತ್ರದಿಂದಲೇ ಮಳೆಬಿಲ್ಲು ಉಂಟಾಗುತ್ತದೆ ಮತ್ತು ಇದರ ಬಣ್ಣಗಳು ಭೌತಿಕವಸ್ತುಗಳ ಬಣ್ಣಗಳಂತೆ ನಿಜವಾದವುಗಳಲ್ಲ ಎಂಬಂಥ ಅರಿಸ್ಟಾಟಲನ ಅಭಿಪ್ರಾಯಗಳನ್ನು ಇಬ್ನ್‌ ಅಲ್‌-ಹಯ್‌ಥಾಮ್‌ ಬೆಂಬಲಿಸಿದ.[೧೪]

ಇಬ್ನ್‌ ಅಲ್‌-ಹಯ್‌ಥಾಮ್‌ನ ಸಮಕಾಲೀನನಾದ ಪರ್ಷಿಯಾದ ದಾರ್ಶನಿಕ ಮತ್ತು ಮಹಾವಿದ್ವಾಂಸ ಇಬ್ನ್‌ ಸೀನಾ (ಅವಿಸೆನ್ನಾ; 980–1037) ಎಂಬಾತ ಪರ್ಯಾಯ ವಿವರಣೆಯೊಂದನ್ನು ಒದಗಿಸಿದ. ಅವನು ಈ ಕುರಿತಾಗಿ ಬರೆಯುತ್ತಾ, "ಮಸುಕಾದ ಅಥವಾ ಗಾಢವಾಗಿರುವ ಮೋಡದಲ್ಲಿ ಬಿಲ್ಲು ರೂಪುಗೊಳ್ಳುವುದಿಲ್ಲ, ಆದರೆ ಅದರ ಬದಲಿಗೆ ಮೋಡ ಮತ್ತು ಸೂರ್ಯ ಅಥವಾ ವೀಕ್ಷಕನ ನಡುವೆ ಸೇರಿಕೊಂಡಿರುವ ಅತಿ ತೆಳುವಾದ ಮಂಜಿನಲ್ಲಿ ರೂಪುಗೊಳ್ಳುತ್ತದೆ. ಕನ್ನಡಿಯೊಂದರಲ್ಲಿನ ಗಾಜಿನ ಹಿಂಭಾಗದ ಮೇಲ್ಮೈ ಮೇಲೆ ಒಂದು ಪಾದರಸದ ಲೇಪವನ್ನು ಇರಿಸಲಾಗಿರುವಂತೆಯೇ, ಮೋಡವು ಕೇವಲ ಈ ತೆಳುವಾದ ವಸ್ತುವಿನ ಹಿನ್ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ವರ್ಣವೈವಿಧ್ಯ ಎಂಬುದು ಕೇವಲವಾಗಿ ಕಣ್ಣಿನಲ್ಲಿರುವ ಒಂದು ವೈಯಕ್ತಿಕ ಸಂವೇದನೆಯಷ್ಟೇ ಎಂಬುದಾಗಿ ಭಾವಿಸಿಕೊಂಡು, ಬಿಲ್ಲಿನ ಸ್ಥಳವನ್ನು ಮಾತ್ರವೇ ಅಲ್ಲದೇ ಬಣ್ಣದ ರಚನೆಯ ಸ್ಥಳವನ್ನೂ ಇಬ್ನ್‌ ಸೀನಾ ಬದಲಿಸುತ್ತಾನೆ" ಎಂದು ತಿಳಿಸಿದ.[೧೫] ಅದೇನೇ ಇದ್ದರೂ, ಈ ವಿವರಣೆಯೂ ಸಹ ತಪ್ಪಾಗಿತ್ತು.[೧೧] ಮಳೆಬಿಲ್ಲಿನ ಕುರಿತಾದ ಅರಿಸ್ಟಾಟಲ್‌ ವಾದಗಳ ಪೈಕಿ ಅನೇಕವನ್ನು ಇಬ್ನ್‌ ಸೀನಾನ ಪರಿಗಣನೆಯು ಅಂಗೀಕರಿಸುತ್ತದೆ.[೧೪]

ಚೀನಾದ ಸಾಂಗ್‌ ರಾಜವಂಶದಲ್ಲಿ (960–1279) ನಾನಾಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದ ಷೆನ್‌ ಕುವೊ (1031–1095) ಎಂಬ ಹೆಸರಿನ ಓರ್ವ ವಿದ್ವಾಂಸ-ಅಧಿಕಾರಿಯು, ಸನ್‌ ಸಿಕಾಂಗ್‌‌ (1015–1076) ಎಂಬ ಯಾರೋ ಒಬ್ಬ ವ್ಯಕ್ತಿಯು ಅವನಿಗಿಂತ ಮುಂಚಿತವಾಗಿ ಮಾಡಿದ್ದಂತೆಯೇ ಆಧಾರ-ಕಲ್ಪನೆಯನ್ನು ರೂಪಿಸಿದ: ಗಾಳಿಯಲ್ಲಿನ ಮಳೆಯ ಸಣ್ಣಹನಿಗಳಿಗೆ ಮುಖಾಮುಖಿಯಾಗುವ ಸೂರ್ಯನ ಬೆಳಕಿನ ವಿದ್ಯಮಾನವೊಂದರಿಂದ ಮಳೆಬಿಲ್ಲುಗಳು ರೂಪುಗೊಳ್ಳುತ್ತವೆ ಎಂಬುದು ಅವನ ವಾದವಾಗಿತ್ತು.[೧೬] ಪಾಲ್‌ ಡಾಂಗ್‌‌ ಈ ಕುರಿತು ಬರೆಯುತ್ತಾ, ಮಳೆಬಿಲ್ಲನ್ನು ವಾತಾವರಣದ ವಕ್ರೀಭವನದ ಒಂದು ವಿದ್ಯಮಾನವೆಂಬಂತೆ ತಿಳಿಸುವ ಷೆನ್‌ನ ವಿವರಣೆಯು "ಮೂಲಭೂತವಾಗಿ ಆಧುನಿಕ ವೈಜ್ಞಾನಿಕ ತತ್ತ್ವಗಳಿಗೆ ಅನುಸಾರವಾಗಿದೆ" ಎಂದು ತಿಳಿಸುತ್ತಾನೆ.[೧೭]

ಪರ್ಷಿಯಾದ ಖಗೋಳ ಶಾಸ್ತ್ರಜ್ಞನಾದ ಕುತ್ಬ್‌ ಅಲ್‌-ದಿನ್‌ ಅಲ್‌-ಷಿರಾಜಿ (1236–1311) ಎಂಬಾತ ಮಳೆಬಿಲ್ಲಿನ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಯುಕ್ತವಾದ ರೀತಿಯಲ್ಲಿ ನಿಖರವಾಗಿರುವ ವಿವರಣೆಯೊಂದನ್ನು ನೀಡಿದ. ಕಮಾಲ್‌ ಅಲ್‌-ದೀನ್‌ ಅಲ್‌-ಫಾರಿಸೀ (1260–1320) ಎಂಬ ಅವನ ವಿದ್ಯಾರ್ಥಿಯು ಇದನ್ನು ವಿಶದೀಕರಿಸಿ ವಿಸ್ತರಿಸಿದ ಮತ್ತು ಗಣಿತಶಾಸ್ತ್ರರೀತ್ಯಾ ಹೆಚ್ಚು ತೃಪ್ತಿದಾಯಕವಾಗಿರುವ, ಮಳೆಬಿಲ್ಲಿನ ಕುರಿತಾದ ವಿವರಣೆಯೊಂದನ್ನು ಅವನು ನೀಡಿದ. "ಸೂರ್ಯನಿಂದ ಬಂದ ಬೆಳಕಿನ ಕಿರಣವು ನೀರಿನ ಸಣ್ಣಹನಿಯೊಂದರಿಂದ ಎರಡುಬಾರಿ ವಕ್ರೀಭವನಗೊಳ್ಳುತ್ತದೆ, ಎರಡು ವಕ್ರೀಭವನಗಳ ನಡುವೆ ಒಂದು ಅಥವಾ ಹೆಚ್ಚು ಪ್ರತಿಫಲನಗಳು ಸಂಭವಿಸುತ್ತವೆ" ಎಂದು ಪ್ರತಿಪಾದಿಸುವ ಮಾದರಿಯೊಂದನ್ನು ಅವನು ಪ್ರಸ್ತಾವಿಸಿದ. ನೀರಿನಿಂದ ತುಂಬಿಸಲ್ಪಟ್ಟ ಒಂದು ಪಾರದರ್ಶಕ ಗೋಳ ಹಾಗೂ ಒಂದು ಬಿಂಬಗ್ರಾಹಿ ಮಸುಕನ್ನು ಬಳಸಿಕೊಂಡು ವ್ಯಾಪಕ ಪ್ರಯೋಗ ಪರೀಕ್ಷೆಯನ್ನು ಮಾಡುವ ಮೂಲಕ ಇದನ್ನು ಅವನು ಪರಿಶೀಲಿಸಿದ.[೧೨][unreliable source?] ಕಿತಾಬ್‌ ತನ್‌ಕಿಹ್‌ ಅಲ್‌-ಮನಾಜಿರ್‌ (ದಿ ರಿವಿಷನ್‌ ಆಫ್‌ ದಿ ಆಪ್ಟಿಕ್ಸ್‌ ) ಎಂಬ ತನ್ನ ಕೃತಿಯಲ್ಲಿ ಅವನು ಉಲ್ಲೇಖಿಸಿರುವಂತೆ, ಗೋಳವೊಂದರ ಆಕಾರದಲ್ಲಿರುವ ಒಂದು ದೊಡ್ಡದಾದ ಗಾಜಿನ ನಿಚ್ಚಳ ಪಾತ್ರೆಯನ್ನು ಅಲ್‌-ಫಾರಿಸಿ ಬಳಸಿದ. ಮಳೆ ಹನಿಯೊಂದರ ಬೃಹತ್‌-ಪ್ರಮಾಣದ ಪ್ರಾಯೋಗಿಕ ಮಾದರಿಯೊಂದನ್ನು ಹೊಂದುವ ಸಲುವಾಗಿ ಈ ಪಾತ್ರೆಯಲ್ಲಿ ನೀರನ್ನು ತುಂಬಿಸಲಾಗಿತ್ತು. ಆಮೇಲೆ, ಬೆಳಕಿನ ಪ್ರವೇಶನಕ್ಕಾಗಿ ಒಂದು ನಿಯಂತ್ರಿತ ಬೆಳಕು ಕಿಂಡಿಯನ್ನು ಹೊಂದಿದ್ದ ಒಂದು ಬಿಂಬಗ್ರಾಹಿ ಮಸುಕಿನ ಒಳಗಡೆ ಈ ಮಾದರಿಯನ್ನು ಅವನು ಇರಿಸಿದ. ಗೋಳದ ಮೇಲೆ ಬೆಳಕನ್ನು ಪ್ರಕ್ಷೇಪಿಸಿದ ಆತ, ಬೆಳಕಿನ ಪ್ರತಿಫಲನಗಳು ಮತ್ತು ವಕ್ರೀಭವನಗಳ ಹಲವಾರು ಪರೀಕ್ಷಾ ಪ್ರಯೋಗಗಳು ಹಾಗೂ ವಿಸ್ತೃತವಾದ ವೀಕ್ಷಣೆಗಳನ್ನು ಕೈಗೊಳ್ಳುವ ಮೂಲಕ, ಮಳೆಬಿಲ್ಲಿನ ಬಣ್ಣಗಳು ಬೆಳಕಿನ ವಿಭಜನೆಯ ವಿದ್ಯಮಾನಗಳಾಗಿವೆ ಎಂಬುದನ್ನು ಅಂತಿಮವಾಗಿ ತಾರ್ಕಿಕವಾಗಿ ಊಹಿಸಿದ. ಅವನ ಈ ಸಂಶೋಧನೆಯು ಅವನ ಕೆಲ ಸಮಕಾಲೀನರ ಅಧ್ಯಯನಗಳಲ್ಲಿ ಒಂದಷ್ಟು ಪ್ರತಿಧ್ವನಿಗಳನ್ನು ಉಂಟುಮಾಡಿತು. ಫ್ರೀಬರ್ಗ್‌ನ ಥಿಯೋಡೋರಿಕ್‌‌‌‌ನ ಅಧ್ಯಯನಗಳಲ್ಲಿ (ಅವರ ನಡುವೆ ಯಾವುದೇ ಸಂಪರ್ಕಗಳು ಇರಲಿಲ್ಲ; ಆದರೂ ಅವರಿಬ್ಬರೂ ಅರಿಸ್ಟಾಟಲ್‌ನ ಮತ್ತು ಇಬ್ನ್‌ ಅಲ್‌-ಹಯ್‌ಥಾಮ್‌ನ ಪರಂಪರೆಯ ಮೇಲೆ ನೆಚ್ಚಿಕೊಂಡಿದ್ದರು), ಹಾಗೂ ನಂತರದಲ್ಲಿ ಬಿಂಬರೂಪಣ ಶಾಸ್ತ್ರದಲ್ಲಿ ಡೆಸ್ಕಾರ್ಟೆಸ್‌ ಮತ್ತು ನ್ಯೂಟನ್‌ ಮಾಡುತ್ತಿದ್ದ ಪ್ರಯೋಗಗಳಲ್ಲಿ ಇದು ಪ್ರತಿಧ್ವನಿಸಿತು (ಇದಕ್ಕೆ ನಿದರ್ಶನವಾಗಿ, ಟ್ರಿನಿಟಿ ಕಾಲೇಜಿನಲ್ಲಿ ಇದೇ ರೀತಿಯ ಪ್ರಯೋಗವೊಂದನ್ನು ನ್ಯೂಟನ್‌ ನಡೆಸಿದ, ಆದರೆ ಒಂದು ಗೋಳಕ್ಕೆ ಬದಲಾಗಿ ಅವನು ಒಂದು ಪಟ್ಟಕವನ್ನು ಬಳಸಿದ ಎಂಬುದು ಗಮನಾರ್ಹ ಸಂಗತಿ) ಎನ್ನಬಹುದು.[೧೮][೧೯][೨೦][೨೧][verification needed]

ಯುರೋಪ್‌ನಲ್ಲಿ ಇಬ್ನ್‌ ಅಲ್‌-ಹಯ್‌ಥಾಮ್‌ನ ಬುಕ್‌ ಆಫ್‌ ಆಪ್ಟಿಕ್ಸ್‌ ಕೃತಿಯು ಲ್ಯಾಟಿನ್‌ ಭಾಷೆಗೆ ಭಾಷಾಂತರಿಸಲ್ಪಟ್ಟಿತು ಮತ್ತು ರಾಬರ್ಟ್‌ ಗ್ರಾಸ್ಸೆಟೆಸ್ಟೆಯಿಂದ ಅಧ್ಯಯನ ಮಾಡಲ್ಪಟ್ಟಿತು. ಬೆಳಕಿನ ಕುರಿತಾದ ಅವನ ಕಾರ್ಯವನ್ನು ರೋಜರ್‌ ಬೇಕನ್‌ ಎಂಬಾತ ಮುಂದುವರಿಸಿದ; ಹರಳುಗಳು ಮತ್ತು ನೀರಿನ ಸಣ್ಣಹನಿಗಳ ಮೂಲಕ ಹೊಳೆಯುತ್ತಿರುವ ಬೆಳಕು ಮಳೆಬಿಲ್ಲಿನ ಬಣ್ಣಗಳನ್ನು ತೋರಿಸುತ್ತಿರುವುದರ ಪ್ರಯೋಗಗಳ ಕುರಿತಾಗಿ 1268ರಲ್ಲಿ ಬಂದ ಓಪಸ್‌ ಮಜುಸ್‌ ಎಂಬ ತನ್ನ ಕೃತಿಯಲ್ಲಿ ರೋಜರ್‌ ಬೇಕನ್ ಬರೆದ.[೨೨] ಇದರ ಜೊತೆಗೆ, ಮಳೆಬಿಲ್ಲಿನ ಕೋನೀಯ ಗಾತ್ರವನ್ನು ಲೆಕ್ಕಹಾಕುವಲ್ಲಿ ಬೇಕನ್‌ ಮೊದಲಿಗನಾಗಿದ್ದ. ದಿಗಂತದ ಮೇಲೆ 42°ಗಿಂತ ಎತ್ತರದದಲ್ಲಿ ಮಳೆಬಿಲ್ಲಿನ ಶೃಂಗವು ಕಾಣಿಸಲಾರದು ಎಂದು ಅವನು ಪ್ರತಿಪಾದಿಸಿದ.[೨೩] ಪ್ರಧಾನ ಮಳೆಬಿಲ್ಲು ಮತ್ತು ದ್ವಿತೀಯಕ ಮಳೆಬಿಲ್ಲುಗಳೆರಡರ ಕುರಿತಾಗಿಯೂ ಒಂದು ನಿಖರವಾದ ಸೈದ್ಧಾಂತಿಕ ವಿವರಣೆಯನ್ನು ಫ್ರೀಬರ್ಗ್‌ನ ಥಿಯೋಡೋರಿಕ್‌‌ 1307ರಲ್ಲಿ ನೀಡಿದ್ದಾನೆ ಎಂದು ತಿಳಿದುಬಂದಿದೆ. ಪ್ರಧಾನ ಮಳೆಬಿಲ್ಲಿನ ಕುರಿತಾಗಿ ಅವನು ವಿವರಿಸುತ್ತಾ, "ಆರ್ದ್ರತೆಯ ಏಕೋದ್ದಿಷ್ಟ ಹನಿಗಳ ಮೇಲೆ ಸೂರ್ಯನ ಬೆಳಕು ಬಿದ್ದಾಗ, ವೀಕ್ಷಕನ ಕಣ್ಣಿಗೆ ರವಾನೆಯಾಗುವುದಕ್ಕೆ ಮುಂಚಿತವಾಗಿ ಕಿರಣಗಳು ಎರಡು ವಕ್ರೀಭವನಗಳಿಗೆ (ಸಂಕ್ರಮಣದ ಆರಂಭದಲ್ಲಿ ಮತ್ತು ಸಂಕ್ರಮಣದಿಂದ ಮೋಕ್ಷವಾಗುವಾಗ) ಮತ್ತು ಒಂದು ಪ್ರತಿಫಲನಕ್ಕೆ (ಹನಿಯ ಹಿಂಭಾಗದಲ್ಲಿ) ಒಳಗಾಗುತ್ತವೆ" ಎಂದು ಸೂಚಿಸಿದ.[೨೪] ಎರಡು ವಕ್ರೀಭವನಗಳು ಮತ್ತು ಎರಡು ಪ್ರತಿಫಲನಗಳನ್ನು ಒಳಗೊಂಡಿರುವ ಇದೇ ರೀತಿಯ ವಿಶ್ಲೇಷಣೆಯೊಂದರ ಮೂಲಕ ಅವನು ದ್ವಿತೀಯಕ ಮಳೆಬಿಲ್ಲನ್ನು ವಿವರಿಸಿದ.

 
ಪ್ರಾಥಮಿಕ ಮತ್ತು ದ್ವಿತೀಯಕ ಮಳೆಬಿಲ್ಲುಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದರ ಕುರಿತಾದ ರೆನೆ ಡೆಸ್ಕಾರ್ಟೆಸ್‌ರ ರೇಖಾಚಿತ್ರ

1637ರಲ್ಲಿ ಬಂದ ಡೆಸ್ಕಾರ್ಟೆಸ್‌‌ನ ಡಿಸ್ಕೋರ್ಸ್‌ ಆನ್‌ ಮೆಥಡ್‌ ಎಂಬ ಪ್ರಕರಣ ಗ್ರಂಥವು ಈ ವಿವರಣೆಯನ್ನು ಮತ್ತಷ್ಟು ಮುಂದುವರೆಸಿತು. ವೀಕ್ಷಿಸಲ್ಪಟ್ಟ ಮಳೆಬಿಲ್ಲಿನ ಮೇಲೆ ಮಳೆಹನಿಗಳ ಗಾತ್ರವು ಪರಿಣಾಮವನ್ನು ಉಂಟುಮಾಡಿದಂತೆ ಕಾಣಲಿಲ್ಲ ಎಂಬುದನ್ನು ಅರಿತ ಅವನು, ನೀರಿನಿಂದ ತುಂಬಿಸಲ್ಪಟ್ಟ ಒಂದು ಬೃಹತ್‌ ಗಾಜಿನ ಗೋಳದ ಮೂಲಕ ಬೆಳಕಿನ ಕಿರಣಗಳನ್ನು ಹಾಯಿಸುವ ಪ್ರಯೋಗವನ್ನು ಮಾಡಿದ. ಕಿರಣಗಳು ಹೊರಹೊಮ್ಮಿಸಿದ ಕೋನಗಳನ್ನು ಅಳೆಯುವ ಮೂಲಕ ಅವನೊಂದು ತೀರ್ಮಾನಕ್ಕೆ ಬಂದ: ಮಳೆಹನಿಯ ಒಳಭಾಗದಲ್ಲಿನ ಒಂದು ಏಕೈಕ ಆಂತರಿಕ ಪ್ರತಿಫಲನದಿಂದ ಪ್ರಧಾನ ಬಿಲ್ಲು ಉಂಟಾಗುತ್ತದೆ ಮತ್ತು ಎರಡು ಆಂತರಿಕ ಪ್ರತಿಫಲನಗಳಿಂದ ಒಂದು ದ್ವಿತೀಯಕ ಬಿಲ್ಲು ಉಂಟಾಗಬಲ್ಲದಾಗಿರುತ್ತದೆ ಎಂಬುದೇ ಅವನ ತೀರ್ಮಾನವಾಗಿತ್ತು. ವಕ್ರೀಭವನದ ನಿಯಮದ ಒಂದು ಊಹನದೊಂದಿಗೆ ಈ ತೀರ್ಮಾನವನ್ನು ಅವನು ಬೆಂಬಲಿಸಿದ (ಸ್ನೆಲ್‌‌ಗೆ ತರುವಾಯದಲ್ಲಿ, ಆದರೆ ಅವನ ಮೇಲೆ ಅವಲಂಬಿತನಾಗದೆ) ಮತ್ತು ಎರಡೂ ಬಿಲ್ಲುಗಳಿಗೆ ಸಂಬಂಧಿಸಿದಂತಿರುವ ಕೋನಗಳನ್ನು ನಿಖರವಾಗಿ ಲೆಕ್ಕಹಾಕಿದ. ಆದಾಗ್ಯೂ, ಬಿಳಿ ಬೆಳಕಿನ ಒಂದು ಮಾರ್ಪಾಡಿನಿಂದ ಬಣ್ಣಗಳು ಉತ್ಪಾದಿಸಲ್ಪಟ್ಟವು ಎಂಬ ಸಾಂಪ್ರದಾಯಿಕ ಸಿದ್ಧಾಂತದ ಒಂದು ಯಾಂತ್ರಿಕ ರೂಪಾಂತರವನ್ನು ಬಣ್ಣಗಳ ಕುರಿತಾದ ಅವನ ವಿವರಣೆಯು ಆಧರಿಸಿತ್ತು.[೨೫][೨೬]

ಮಳೆಬಿಲ್ಲಿನ ಎಲ್ಲಾ ಬಣ್ಣಗಳ ಬೆಳಕಿನಿಂದ ಬಿಳಿಯ ಬೆಳಕು ಮಾಡಲ್ಪಟ್ಟಿದೆ ಮತ್ತು ಇದನ್ನು ಒಂದು ಗಾಜಿನ ಪಟ್ಟಕವು ಬಣ್ಣಗಳ ಒಂದು ಪೂರ್ಣ ರೋಹಿತವಾಗಿ ಪ್ರತ್ಯೇಕಿಸಬಲ್ಲದು ಎಂಬುದನ್ನು ಐಸಾಕ್‌ ನ್ಯೂಟನ್‌ ನಿರೂಪಿಸಿದ, ಹಾಗೂ ತನ್ಮೂಲಕ ಬಿಳಿ ಬೆಳಕಿನ ಒಂದು ಮಾರ್ಪಾಡಿನಿಂದ ಬಣ್ಣಗಳು ಉತ್ಪಾದಿಸಲ್ಪಟ್ಟವು ಎಂಬ ಸಿದ್ಧಾಂತವನ್ನು ತಿರಸ್ಕರಿಸಿದ. ನೀಲಿ ಬೆಳಕಿಗಿಂತ ಕಡಿಮೆ ಪ್ರಮಾಣದಲ್ಲಿ ಕೆಂಪು ಬೆಳಕು ವಕ್ರೀಭವನಗೊಳ್ಳುತ್ತದೆ ಎಂಬುದನ್ನೂ ಅವನು ತೋರಿಸಿಕೊಟ್ಟ; ಮಳೆಬಿಲ್ಲಿನ ಪ್ರಮುಖ ಲಕ್ಷಣಗಳ ಮೊದಲ ವೈಜ್ಞಾನಿಕ ವಿವರಣೆಗೆ ಇದು ನಾಂದಿಯಾಯಿತು.[೨೭] ನ್ಯೂಟನ್‌ನ ಬೆಳಕಿನ ಕಣವಾದವು ಹೆಚ್ಚುವರಿ ಮಳೆಬಿಲ್ಲುಗಳ ಕುರಿತು ವಿವರಿಸಲು ಅಸಮರ್ಥವಾಗಿತ್ತು. ನಿರ್ದಿಷ್ಟ ಸ್ಥಿತಿಗತಿಗಳ ಅಡಿಯಲ್ಲಿ ಬೆಳಕು ಒಂದು ತರಂಗದಂತೆ ವರ್ತಿಸುವುದು, ಮತ್ತು ಸ್ವತಃ ವ್ಯತಿಕರಿಸಬಲ್ಲದು ಎಂಬುದನ್ನು ಥಾಮಸ್‌ ಯಂಗ್‌ ಅರ್ಥಮಾಡಿಕೊಳ್ಳುವವರೆಗೂ ಒಂದು ತೃಪ್ತಿದಾಯಕವಾದ ವಿವರಣೆಯು ದೊರಕಿರಲಿಲ್ಲ.

ಯಂಗ್‌ನ ಕಾರ್ಯವು 1820ರ ದಶಕದಲ್ಲಿ ಜಾರ್ಜ್‌ ಬಿಡ್ಡೆಲ್‌ ಐರಿ ಎಂಬಾತನಿಂದ ಪರಿಷ್ಕರಿಸಲ್ಪಟ್ಟಿತು; ನೀರಿನ ಸಣ್ಣಹನಿಗಳ ಗಾತ್ರದ ಮೇಲೆ ಮಳೆಬಿಲ್ಲಿನ ಬಣ್ಣಗಳ ಬಲವು ಅವಲಂಬಿತವಾಗಿರುವುದನ್ನು ಈತ ವಿವರಿಸಿದ. 1908ರಲ್ಲಿ ಗುಸ್ಟಾವ್‌ ಮೀ ಎಂಬಾತನಿಂದ ಪ್ರಕಟಿಸಲ್ಪಟ್ಟ ಮೀ ಸ್ಕ್ಯಾಟರಿಂಗ್‌ ಎಂಬ ಕೃತಿಯ ಮೇಲೆ ಮಳೆಬಿಲ್ಲಿನ ಕುರಿತಾದ ಆಧುನಿಕ ಭೌತಶಾಸ್ತ್ರೀಯ ವಿವರಣೆಗಳು ಆಧರಿಸಿವೆ. ಲೆಕ್ಕ ಹಾಕುವಿಕೆಯ ವಿಧಾನಗಳು ಮತ್ತು ದೃಗ್ವೈಜ್ಞಾನಿಕ ಸಿದ್ಧಾಂತದಲ್ಲಿನ ಪ್ರಗತಿಗಳು ಮುಂದುವರಿದು, ಮಳೆಬಿಲ್ಲುಗಳ ಕುರಿತಾದ ಒಂದು ಸಂಪೂರ್ಣವಾದ ಗ್ರಹಿಕೆಗೆ ಕಾರಣವಾದವು. ಉದಾಹರಣೆಗೆ, ಒಂದು ಆಧುನಿಕ ಸ್ಥೂಲ ಅವಲೋಕನವು ನುಸೆನ್‌ಜ್ವೀಗ್‌ನಿಂದ ಒದಗಿಸಲ್ಪಟ್ಟಿದೆ.[೨೮]

ಸಂಸ್ಕೃತಿ

ಬದಲಾಯಿಸಿ
 
ಮಳೆಬಿಲ್ಲೊಂದರ ಅಂತ್ಯ

ಮಳೆಬಿಲ್ಲು ತನ್ನ ಸೌಂದರ್ಯದಿಂದಾಗಿ ಮತ್ತು ಸದರಿ ವಿದ್ಯಮಾನವನ್ನು ವಿವರಿಸುವಲ್ಲಿನ ಐತಿಹಾಸಿಕ ತೊಡಕಿನಿಂದಾಗಿ, ಐತಿಹ್ಯದಲ್ಲಿ ಅಥವಾ ದಂತಕಥೆಗಳಲ್ಲಿ ಒಂದು ಸ್ಥಾನವನ್ನು ಗಿಟ್ಟಿಸಿದೆ.

ಗ್ರೀಕ್‌ ಪುರಾಣದಲ್ಲಿ, ಭೂಮಿ ಮತ್ತು ಸ್ವರ್ಗದ ನಡುವೆ ಓರ್ವ ದೂತನಿಂದ (ಐರಿಸ್‌) ನಿರ್ಮಿಸಲ್ಪಟ್ಟ ಒಂದು ಪಥವಾಗಿ ಮಳೆಬಿಲ್ಲು ಪರಿಗಣಿಸಲ್ಪಟ್ಟಿತ್ತು. ಚೀನಾದ ಪುರಾಣದಲ್ಲಿ, ಮಳೆಬಿಲ್ಲು ಎಂಬುದು ಆಕಾಶದಲ್ಲಿನ ಒಂದು ಸೀಳಿಕೆಯಾಗಿದ್ದು, ಐದು ವಿಭಿನ್ನ ಬಣ್ಣಗಳ ಕಲ್ಲುಗಳನ್ನು ಬಳಸಿಕೊಂಡು ನ್ಯೂವಾ ದೇವತೆಯಿಂದ ಅದು ಮುಚ್ಚಲ್ಪಟ್ಟಿತು ಎಂಬ ವಿವರಣೆಯಿತ್ತು.

ಹಿಂದೂ ಪುರಾಣದಲ್ಲಿ, ಮಳೆಬಿಲ್ಲನ್ನು ಇಂದ್ರಧನುಷ್‌ ಎಂದು ಕರೆಯಲಾಗುತ್ತದೆ; ಅಂದರೆ ಇದು "ಮಿಂಚು, ಸಿಡಿಲು ಮತ್ತು ಮಳೆಯ ದೇವರಾದ ಇಂದ್ರನ ಬಿಲ್ಲು (ಸಂಸ್ಕೃತ ಮತ್ತು ಹಿಂದಿಯಲ್ಲಿ ಧನುಷ್‌ ಎಂದರೆ ಬಿಲ್ಲು) ಎಂದರ್ಥ. ಮತ್ತೊಂದು ಭಾರತೀಯ ಪುರಾಣವು ಹೇಳುವ ಪ್ರಕಾರ, ಮಳೆಬಿಲ್ಲು ಎಂಬುದು ವಿಷ್ಣುವಿನ ಅವತಾರವಾದ ರಾಮನ ಬಿಲ್ಲು ಆಗಿದೆ. ಬಂಗಾಳಿ ಭಾಷೆಯಲ್ಲಿ ಇದನ್ನು ರಾಮ್‌ಧೊನು ಎಂದು ಕರೆಯಲಾಗುತ್ತದೆ; ಧೊನು (ಧನುಷ್‌) ಎಂದರೆ ಬಿಲ್ಲು ಎಂದರ್ಥ. ಅದೇರೀತಿಯಲ್ಲಿ, ಅರೇಬಿಯಾದ ಪರ್ಯಾಯ ದ್ವೀಪದ ಪುರಾಣದಲ್ಲಿ, ಅರೇಬಿಕ್‌ನಲ್ಲಿ ಕವಾಸ್‌ ಕಜಾಹ್‌ ಎಂದು ಕರೆಯಲ್ಪಡುವ ಮಳೆಬಿಲ್ಲು, ಕಜಾಹ್ ದೇವರ ಯುದ್ಧದ ಬಿಲ್ಲಾಗಿದೆ.

ನಾರ್ವೆ ದೇಶದ ಪುರಾಣದಲ್ಲಿ, ಮಳೆಬಿಲ್ಲೊಂದನ್ನು ಬೈಫ್ರಾಸ್ಟ್‌ ಸೇತುವೆ ಎಂದು ಕರೆಯಲಾಗಿದ್ದು, ಕ್ರಮವಾಗಿ ದೇವರುಗಳು ಮತ್ತು ಮಾನವರ ನೆಲೆಗಳಾದ ಆಸ್ಗಾರ್ಡ್‌ ಮತ್ತು ಮಿಡ್ಗಾರ್ಡ್‌ ಸಾಮ್ರಾಜ್ಯಗಳನ್ನು ಇದು ಸಂಪರ್ಕಿಸುತ್ತದೆ. ಐರ್ಲಂಡಿನ ಲೆಪ್ರಕಾನ್‌ ಎಂಬ ಪುಟ್ಟ ತುಂಟ ಭೂತದ ಬಂಗಾರದ ಮಡಿಕೆಗೆ ಸಂಬಂಧಿಸಿದ ರಹಸ್ಯ ಅಡಗುತಾಣವು ಮಳೆಬಿಲ್ಲಿನ ತುದಿಯಲ್ಲಿದೆ ಎಂದು ವಾಡಿಕೆಯಾಗಿ ಹೇಳಲಾಗುತ್ತದೆ. ಈ ಸ್ಥಳವನ್ನು ತಲುಪುವುದು ಅಸಾಧ್ಯ; ಏಕೆಂದರೆ ಮಳೆಬಿಲ್ಲು ಎಂಬುದು ಒಂದು ದೃಗ್ವೈಜ್ಞಾನಿಕ ಪರಿಣಾಮವಾಗಿದ್ದು, ಇದು ನೋಡುಗನ ತಾಣದ ಮೇಲೆ ಅವಲಂಬಿತವಾಗಿರುತ್ತದೆ. ಮಳೆಬಿಲ್ಲೊಂದರ ತುದಿಯೆಡೆಗೆ ನಡೆಯುವಾಗ, ಅದು ಮತ್ತಷ್ಟು ದೂರಕ್ಕೆ "ಚಲಿಸುವಂತೆ" ಕಾಣಿಸುತ್ತದೆ (ಒಂದು ಮಳೆಬಿಲ್ಲನ್ನು ವಿಭಿನ್ನ ತಾಣಗಳಲ್ಲಿ ಏಕಕಾಲದಲ್ಲಿ ವೀಕ್ಷಿಸುತ್ತಿರುವ ಇಬ್ಬರು ಮಂದಿ ಮಳೆಬಿಲ್ಲೊಂದು ಎಲ್ಲಿದೆ ಎಂಬುದರ ಬಗ್ಗೆ ಅಸಮ್ಮತಿಸುತ್ತಾರೆ, ಅಂದರೆ ಒಂದೇ ಅನುಮೋದನೆಯನ್ನು ಹೊಂದಿರುವುದಿಲ್ಲ).

ಮಳೆಬಿಲ್ಲಿನ ಕುರಿತಾದ ಮತ್ತೊಂದು ಪ್ರಾಚೀನ ವರ್ಣನೆಯು ಗಿಲ್ಗಮೇಶ್‌ನ ಮಹಾಕಾವ್ಯದಲ್ಲಿ ನೀಡಲ್ಪಟ್ಟಿದೆ: "ಮಳೆಬಿಲ್ಲು ಎಂಬುದು ಮಹಾತಾಯಿ ಇಷ್ತಾರ್‌‌ಳ ರತ್ನಖಚಿತ ಕಂಠಹಾರವಾಗಿದ್ದು, ತನ್ನ ಮಕ್ಕಳನ್ನು ನಾಶಪಡಿಸಿದ ಈ ಮಹಾನ್‌ ಪ್ರವಾಹದ ದಿನಗಳನ್ನು ತಾನು ಎಂದಿಗೂ ಮರೆತುಹೋಗುವುದಿಲ್ಲ ಎಂಬುದರ ಒಂದು ಭರವಸೆಯಾಗಿ ಆ ಹಾರವನ್ನು ಅವಳು ಆಕಾಶದೊಳಗೆ ಎತ್ತಿಹಿಡಿಯುತ್ತಾಳೆ". (ಗಿಲ್ಗಮೇಶ್‌ನ ಮಹಾಕಾವ್ಯ, ಫಲಕ ಹನ್ನೊಂದು)

ಆಮೇಲೆ ಇಷ್ತಾರ್‌ ಆಗಮಿಸಿದಳು. ಅವಳನ್ನು ಸಂತೋಷಗೊಳಿಸಲೆಂದು ಅವಳ ತಂದೆಯಾದ ಅನು ಸೃಷ್ಟಿಸಿದ್ದ ಮಹಾನ್‌ ರತ್ನಗಳ ಕಂಠಹಾರವನ್ನು ಅವಳು ಎತ್ತಿ ಹಿಡಿದು ಹೀಗೆ ಹೇಳಿದಳು: "ದೇವಲೋಕದ ದೇವರುಗಳೇ, ಈ ರತ್ನಖಚಿತ ಕಂಠಹಾರವು ಖಂಡಿತವಾಗಿ ನನ್ನ ಕೊರಳಿನಲ್ಲಿ ತೂಗುತ್ತಿರುವಂತೆಯೇ, ನಾನು ಮಹಾನ್‌ ಪ್ರವಾಹದ ಈ ದಿನಗಳನ್ನು ಎಂದಿಗೂ ಮರೆತುಹೋಗುವುದಿಲ್ಲ. ಎನ್‌ಲಿಲ್‌ನನ್ನು ಹೊರತುಪಡಿಸಿ ಎಲ್ಲಾ ದೇವರುಗಳೂ ಕೊಡುಗೆಗೆಂದು ಬರಲಿ. ಎನ್‌ಲಿಲ್‌ ಬರದಿರಬಹುದು, ಏಕೆಂದರೆ ಯಾವುದೇ ಕಾರಣವಿಲ್ಲದೆಯೇ ಅವನು ಉಂಟುಮಾಡಿದ ಪ್ರವಾಹವು ನನ್ನ ಜನರನ್ನು ನಾಶಪಡಿಸಿತು."

ಕ್ರೈಸ್ತ ಪುರಾಣ ಮತ್ತು ಯೆಹೂದ್ಯರ ಪುರಾಣದ ಅನುಸಾರ, ನೋವಾದ ಪ್ರವಾಹದ ನಂತರ, ಭೂಮಿಯ ಮೇಲಿನ ಜೀವವು ಮತ್ತೆಂದಿಗೂ ಪ್ರವಾಹದಿಂದ ನಾಶಗೊಳ್ಳುವುದಿಲ್ಲ ಎಂಬ ದೇವರ ಭರವಸೆಯ ಸಂಕೇತವಾಗಿ ಮಳೆಬಿಲ್ಲು ಅರ್ಥವನ್ನು ಪಡೆದುಕೊಂಡಿತು (ಸೃಷ್ಟಿಪರ್ವ 9:13–17):[೨೯]

ನಾನು ಮೋಡದಲ್ಲಿ ನನ್ನ ಬಿಲ್ಲನ್ನು ಸಜ್ಜುಗೊಳಿಸುತ್ತೇನೆ, ಹಾಗೂ ಇದು ನನ್ನ ಮತ್ತು ಭೂಮಿಯ ನಡುವಿನ ಒಡಂಬಡಿಕೆಯೊಂದರ ಸಂಕೇತವೂಂದಕ್ಕೆ ಮೀಸಲಾಗಲಿದೆ. ಮತ್ತು ನಾನು ಭೂಮಿಯ ಮೇಲೆ ಮೋಡವೂಂದನ್ನು ತಂದಾಗ ಇದು ಹಾದು ಹೋಗಲು ಬರುತ್ತದೆ, ಹೀಗಾಗಿ ಮೋಡದಲ್ಲಿ ಬಿಲ್ಲು ಕಾಣಿಸಿಕೊಳ್ಳುತ್ತದೆ: ಮತ್ತು, ನನ್ನ ಹಾಗೂ ನಿಮ್ಮ ಮತ್ತು ಎಲ್ಲಾ ಜೀವರಾಶಿಗಳ ನಡುವಿರುವ ನನ್ನ ಒಡಂಬಡಿಕೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ; ಜಲರಾಶಿಯು ಇನ್ನೆಂದಿಗೂ ಎಲ್ಲ ಶರೀರಿಗಳನ್ನು ನಾಶಪಡಿಸುವ ಪ್ರವಾಹವೊಂದರ ರೂಪವನ್ನು ತಳೆಯುವುದಿಲ್ಲ. ಮತ್ತು ಬಿಲ್ಲು ಮೋಡದಲ್ಲಿಯೇ ಇರುತ್ತದೆ; ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿ ಹಾಗೂ ದೇವರ ನಡುವಿನ ಚಿರಂತನ ಒಡಂಬಡಿಕೆಯನ್ನು ನಾನು ನೆನಪಿಸಿಕೊಳ್ಳಬಹುದು ಎಂಬುದಾಗಿ ನಾನು ಭಾವಿಸುತ್ತೇನೆ. ಮತ್ತು ದೇವರು ನೋವಾಗೆ ಹೇಳಿದ, ಇದು ಒಡಂಬಡಿಕೆಯ ಸಂಕೇತ; ಇದನ್ನು ನಾನು ನನ್ನ ಹಾಗೂ ಭೂಮಿಯ ಮೇಲಿನ ಸಕಲ ಜೀವರಾಶಿಯ ನಡುವೆ ಸ್ಥಾಪಿಸಿರುವೆ.

ಆಸ್ಟ್ರೇಲಿಯಾದ ಮೂಲನಿವಾಸಿಗಳ ಪುರಾಣದ ಸುವರ್ಣಯುಗದಲ್ಲಿ (ಡ್ರೀಮ್‌ಟೈಮ್‌), ಮಳೆಬಿಲ್ಲಿನ ಹಾವು ನೀರಿನ ಮೇಲೆ ಅಧಿಪತ್ಯ ನಡೆಸುವ ದೇವತೆಯಾಗಿದೆ. ರಣಾಂಗನೆಯ ಸಂಸ್ಕೃತಿಗಳಲ್ಲಿ, ಗರ್ಭಸ್ರಾವಗಳು ಮತ್ತು (ವಿಶೇಷವಾಗಿ) ಚರ್ಮದ ಸಮಸ್ಯೆಗಳಂಥ ಹಾನಿಗೆ ಕಾರಣವಾಗುವ, ಕೇಡುಂಟು ಮಾಡುವ ಅಲೌಕಿಕ ಜೀವಿಗಳೊಂದಿಗೆ ಮಳೆಬಿಲ್ಲುಗಳು ಸುದೀರ್ಘ ಅವಧಿಯ ಸಂಬಂಧವನ್ನು ಹೊಂದಿವೆ. ಮಧ್ಯ ಪೆರುವಿನ ಅಮುಯೆಷಾ ಭಾಷೆಯಲ್ಲಿ, ಕೆಲವೊಂದು ಕಾಯಿಲೆಗಳನ್ನು ಅಯೊನಾಅಚಾರ್ತನ್‌ ಎಂದು ಕರೆಯಲಾಗುತ್ತದೆ; "ಮಳೆಬಿಲ್ಲು ನನ್ನ ಚರ್ಮವನ್ನು ಘಾಸಿಗೊಳಿಸಿತು" ಎಂಬುದು ಇದರರ್ಥ. ಕಾಯಿಲೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಳೆಬಿಲ್ಲೊಂದರ ದೃಶ್ಯದಿಂದ ಓರ್ವರ ಬಾಯಿಯನ್ನು ಮುಚ್ಚುವ ಸಂಪ್ರದಾಯವೊಂದು ಇಂಕನ ಸಾಮ್ರಾಜ್ಯದಷ್ಟು ಹಿಂದೆ ಜರುಗಿದ್ದಂತೆ ಕಂಡುಬರುತ್ತದೆ.[೩೦][೩೧]

ನವಯುಗ ಮತ್ತು ಹಿಂದೂ ದರ್ಶನಶಾಸ್ತ್ರದಲ್ಲಿ ಮೊದಲ ಚಕ್ರದಿಂದ (ಕೆಂಪು) ಏಳನೇ ಚಕ್ರದವರೆಗಿನ (ನೇರಿಳೆ) ಏಳು ಚಕ್ರಗಳನ್ನು ಮಳೆಬಿಲ್ಲಿನ ಏಳು ಬಣ್ಣಗಳು ಪ್ರತಿನಿಧಿಸುತ್ತವೆ.

ಮಳೆಬಿಲ್ಲುಗಳನ್ನು ಅತ್ಯಂತ ವರ್ಣರಂಜಿತ ಮತ್ತು ಶಾಂತಿಯುತ ಅಂಶಗಳಾಗಿ ಸಾಮಾನ್ಯವಾಗಿ ವರ್ಣಿಸಲಾಗುತ್ತದೆ. ಮಳೆಬಿಲ್ಲು ಅನೇಕ ವೇಳೆ ವರ್ಣಚಿತ್ರಕಲೆಗಲ್ಲಿ ಕಂಡು ಬರುತ್ತದೆ. ಇವು ಆಗಾಗ ಒಂದು ಸಾಂಕೇತಿಕ ಅಥವಾ ಸರಣಿಬದ್ಧವಾದ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ (ಉದಾಹರಣೆಗೆ, ಆಲ್‌ಬ್ರೆಕ್ಟ್‌ ಡ್ಯೂರರ್‌‌‌ನ ಮೆಲಂಕೋಲಿಯ I). ನಿರ್ದಿಷ್ಟವಾಗಿ ಹೇಳುವುದಾದರೆ, ಧಾರ್ಮಿಕ ಕಲೆಯಲ್ಲಿ ಮಳೆಬಿಲ್ಲು ನಿಯತವಾಗಿ ಕಾಣಿಸುತ್ತದೆ (ಉದಾಹರಣೆಗೆ, ಜೋಸೆಫ್‌ ಆಂಟನ್‌ ಕೋಚ್‌‌‌ನ ನೋವಾ'ಸ್‌ ಥ್ಯಾಂಕ್ಸ್‌ಆಫರಿಂಗ್‌‌ ). ಟರ್ನರ್‌‌ ಮತ್ತು ಕಾನ್‌ಸ್ಟೇಬಲ್‌‌ರಂಥ ರಮ್ಯತಾವಾದಿ ಭೂದೃಶ್ಯ ವರ್ಣಚಿತ್ರಕಾರರು, ಬೆಳಕಿನ ಕ್ಷಣಿಕ ಪರಿಣಾಮಗಳನ್ನು ದಾಖಲಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು (ಉದಾಹರಣೆಗೆ, ಕಾನ್‌ಸ್ಟೇಬಲ್‌ನ ಸ್ಯಾಲಿಸ್‌ಬರಿ ಕೆಥೆಡ್ರಲ್‌ ಫ್ರಂ ದಿ ಮೆಡೋಸ್‌). ಹಾನ್ಸ್‌ ಮೆಮ್ಲಿಂಗ್‌‌, ಕ್ಯಾಸ್ಪರ್‌‌ ಡೇವಿಡ್‌ ಫ್ರೆಡ್‌ರಿಕ್‌, ಮತ್ತು ಪೀಟರ್‌ ಪಾಲ್‌ ರೂಬೆನ್ಸ್‌ ಮೊದಲಾದವರಿಂದ ಸೃಷ್ಟಿಸಲ್ಪಟ್ಟ ಕೃತಿಗಳಲ್ಲಿ ಇತರ ಗಮನಾರ್ಹ ಉದಾಹರಣೆಗಳು ಕಾಣಿಸುತ್ತವೆ.

 
ದಿ ಬ್ಲೈಂಡ್‌ ಗರ್ಲ್‌- ಜಾನ್‌ ಎವೆರೆಟ್‌ ಮಿಲಾಯಿಸ್‌ ರಚಿಸಿದ ಒಂದು ತೈಲಚಿತ್ರ (1856). ಕುರುಡು ಹುಡುಗಿಯು ತನ್ನ ಅನುಭವಕ್ಕೆ ತಂದುಕೊಳ್ಳಲಾಗದ ಪ್ರಕೃತಿಯ ಸೌಂದರ್ಯಗಳ ಪೈಕಿ ಒಂದಾದ ಮಳೆಬಿಲ್ಲನ್ನು ಅವಳ ಸ್ಥಿತಿಗತಿಯ ವಿಷಾದಗಳಿಗೆ ಒತ್ತುನೀಡಲು ಬಳಸಲಾಗಿದೆ.
 
ಜೋಸೆಫ್‌ ಆಂಟನ್‌ ಕೋಚ್‌ ಸೃಷ್ಟಿಸಿದ ನೋವಾ'ಸ್‌ ಥ್ಯಾಂಕ್ಸ್‌ಆಫರಿಂಗ್‌‌ (ಸುಮಾರು 1803).ಪ್ರವಾಹದಿಂದ ವಿಮುಕ್ತಿಗೊಳಿಸಲ್ಪಟ್ಟ ನಂತರ ನೋವಾ ದೇವರಿಗೆ ಒಂದು ಪೂಜಾವೇದಿಕೆಯನ್ನು ನಿರ್ಮಿಸುತ್ತಾನೆ; ದೇವರು ತನ್ನ ಒಡಂಬಡಿಕೆಯ ಒಂದು ಸಂಕೇತವಾಗಿ ಮಳೆಬಿಲ್ಲನ್ನು ಕಳಿಸುತ್ತಾನೆ (ಸೃಷ್ಟಿಪರ್ವ 8–9).

ಸಾಹಿತ್ಯ

ಬದಲಾಯಿಸಿ

ರೂಪಕಾಲಂಕಾರ ಮತ್ತು ಉಪಮಾಲಂಕಾರಗಳಿಗೆ ಮಳೆಬಿಲ್ಲು ಪ್ರೇರಣೆ ನೀಡುತ್ತದೆ. ಟು ದಿ ಲೈಟ್‌ಹೌಸ್‌ ಎಂಬ ತನ್ನ ಸಾಹಿತ್ಯಸೃಷ್ಟಿಯಲ್ಲಿ ಶ್ರೀಮತಿ ರಾಮ್‌ಸೇಯ ಆಲೋಚನೆಯ ಮೂಲಕ ಜೀವನದ ನಶ್ವರತೆ ಹಾಗೂ ಮನುಷ್ಯನ ಮರಣಾಧೀನತೆಯನ್ನು ವರ್ಜೀನಿಯಾ ವೂಲ್ಫ್ ಎತ್ತಿತೋರಿಸುತ್ತಾಳೆ,

"ಇಟ್‌ ವಾಸ್‌ ಆಲ್‌ ಆಸ್‌ ಎಫಿಮೆರಲ್‌ ಆಸ್‌ ಎ ರೇನ್‌ಬೋ"

1802ರಲ್ಲಿ ಬಂದ ವರ್ಡ್ಸ್‌ವರ್ತ್‌‌‌ನ "ಮೈ ಹಾರ್ಟ್‌ ಲೀಪ್ಸ್‌ ಅಪ್‌ ವೆನ್‌ ಐ ಬಿಹೋಲ್ಡ್‌ ದಿ ರೇನ್‌ಬೋ" ಎಂಬ ಕವಿತೆಯು ಹೀಗೆ ಆರಂಭವಾಗುತ್ತದೆ:

ಮೈ ಹಾರ್ಟ್‌ ಲೀಪ್ಸ್‌ ಅಪ್‌ ವೆನ್‌ ಐ ಬಿಹೋಲ್ಡ್‌
ಎ ರೇನ್‌ಬೋ ಇನ್‌ ದಿ ಸ್ಕೈ:
ಸೋ ವಾಸ್‌ ಇಟ್‌ ವೆನ್‌ ಮೈ ಲೈಫ್‌ ಬಿಗ್ಯಾನ್‌;
ಸೋ ಈಸ್‌ ಇಟ್‌ ನೌ ಐ ಆಮ್‌ ಎ ಮ್ಯಾನ್‌;
ಸೋ ಬಿ ಇಟ್‌ ವೆನ್‌ ಐ ಶಲ್ ಗ್ರೋ ಓಲ್ಡ್‌‌,
ಆರ್‌ ಲೆಟ್‌ ಮಿ ಡೈ

!...'

ನ್ಯೂಟನ್ನನ ಮಳೆಬಿಲ್ಲಿನ ವಿಘಟನೆಯು ಜಾನ್‌ ಕೀಟ್ಸ್‌‌‌ನನ್ನು ಪ್ರಚೋದಿಸಿತು ಮತ್ತು ಅವನು ಈ ಕುರಿತಾಗಿ 1820ರಲ್ಲಿ ಬಂದ "ಲಮಿಯಾ" ಎಂಬ ತನ್ನ ಕವಿತೆಯಲ್ಲಿ ವಿಷಾದಿಸಲು ಅದು ಕಾರಣವಾಯಿತು ಎಂದು ಹೇಳಲಾಗುತ್ತದೆ:

ಡು ನಾಟ್‌ ಆಲ್‌ ಚಾರ್ಮ್ಸ್‌ ಫ್ಲೈ
ಅಟ್‌ ದಿ ಮಿಯರ್‌ ಟಚ್‌ ಆಫ್‌ ಕೋಲ್ಡ್‌ ಫಿಲಾಸಫಿ?
ದೇರ್‌ ವಾಸ್‌ ಆನ್‌ ಆಫುಲ್‌ ರೇನ್‌ಬೋ ಒನ್ಸ್‌ ಇನ್‌ ಹೆವನ್‌:
ವೀ ನೋ ಹರ್‌ ವೂಫ್‌, ಹರ್‌ ಟೆಕ್ಸ್‌ಚರ್‌; ಷೀ ಈಸ್‌ ಗಿವನ್‌
ಇನ್‌ ದಿ ಡಲ್‌ ಕೆಟಲಾಗ್‌ ಆಫ್‌ ಕಾಮನ್‌ ಥಿಂಗ್ಸ್‌.
ಫಿಲಾಸಫಿ ವಿಲ್‌ ಕ್ಲಿಪ್‌ ಆನ್‌ ಏಂಜಲ್‌'ಸ್‌ ವಿಂಗ್ಸ್‌,
ಕಾನ್‌ಕರ್‌ ಆಲ್‌ ಮಿಸ್ಟರೀಸ್‌ ಬೈ ರೂಲ್‌ ಅಂಡ್‌ ಲೈನ್‌,
ಎಂಪ್ಟಿ ದಿ ಹಾಂಟೆಡ್‌ ಏರ್‌, ಅಂಡ್‌ ಗ್ನಾಮ್ಡ್‌ ಮೈನ್‌ –
ಅನ್‌ವೀವ್‌ ಎ ರೇನ್‌ಬೋ

ರಿಚರ್ಡ್‌ ಡಾಕಿನ್ಸ್‌ ಇದಕ್ಕೆ ವ್ಯತಿರಿಕ್ತವಾದ ನಿಲುವು ತಳೆಯುತ್ತಾನೆ; ಅನ್‌ವೀವಿಂಗ್‌ ದಿ ರೇನ್‌ಬೋ: ಸೈನ್ಸ್‌, ಡೆಲ್ಯೂಷನ್‌ ಅಂಡ್‌ ದಿ ಅಪಟೈಟ್‌ ಫಾರ್‌ ವಂಡರ್‌ ಎಂಬ ತನ್ನ ಪುಸ್ತಕದ ಕುರಿತಾಗಿ ಅವನು ಮಾತನಾಡುತ್ತಾ ಹೀಗೆನ್ನುತ್ತಾನೆ:

"ಮಳೆಬಿಲ್ಲನ್ನು ಪಟ್ಟಕದಿಂದ ಹೊಮ್ಮಿದ ಬಣ್ಣಗಳ ಮಟ್ಟಕ್ಕೆ ತಗ್ಗಿಸುವ ಮೂಲಕ ಮಳೆಬಿಲ್ಲಿನ ಕುರಿತಾದ ಎಲ್ಲಾ ಕಾವ್ಯವನ್ನು ನ್ಯೂಟನ್‌ ನಾಶಪಡಿಸಿದ ಎಂದು ನಂಬಿದ್ದ ಕೀಟ್ಸ್‌‌‌ನಿಂದ ನನ್ನ ಶೀರ್ಷಿಕೆಯನ್ನು ಪಡೆದಿರುವೆ. ಕೀಟ್ಸ್‌ ತೀರಾ ಹೆಚ್ಚಿನ ತಪ್ಪು ಎಸಗಿರುವುದು ಅಸಂಭವ. ಇದೇ ರೀತಿಯ ನೋಟವೂಂದರಿಂದ ವಿರುದ್ಧ ತೀರ್ಮಾನದೆಡೆಗೆ ಯಾರೆಲ್ಲಾ ಪ್ರಚೋದಿಸಲ್ಪಟ್ಟಿದ್ದಾರೋ ಅವರಿಗೆ ಮಾರ್ಗದರ್ಶನ ಮಾಡುವುದು ನನ್ನ ಉದ್ದೇಶ. ವಿಜ್ಞಾನವು ಮಹಾನ್‌ ಕಾವ್ಯಕ್ಕೆ ಸಂಬಂಧಿಸಿದ ಪ್ರೇರಣೆಯಾಗಿದೆ ಅಥವಾ ಪ್ರೇರಣೆಯಾಗಿರಲೇಬೇಕಾಗಿದೆ.

  • ದಿ ವಿಜರ್ಡ್‌ ಆಫ್‌ ಓಜ್‌ ಚಲನಚಿತ್ರದ "ಓವರ್‌ ದಿ ರೇನ್‌ಬೋ" ಎಂಬ ಹಾಡಿನಲ್ಲಿ, ಮಳೆಬಿಲ್ಲಿನ ಮೇಲಿನ ಒಂದು ಸ್ಥಳದ ಕುರಿತಾಗಿ ಪ್ರಮುಖ ಪಾತ್ರವಾದ ಡೊರೊಥಿ ಗೇಲ್‌ ಕಾಲ್ಪನಿಕವಾಗಿ ಚಿತ್ರಿಸಿಕೊಳ್ಳುತ್ತಾಳೆ; ಈ ಸ್ಥಳದಲ್ಲಿ ಪ್ರಪಂಚವು ಶಾಂತಿ ಮತ್ತು ಸೌಹಾರ್ದದಿಂದ ಕೂಡಿರುತ್ತದೆ.
  • ಕೆರ್ಮಿಟ್‌ ಎಂಬ ಕಪ್ಪೆಯಿಂದ ಹಾಡಲ್ಪಡುವ ಹಾಡು ಎಂಬುದಕ್ಕಾಗಿ ಸುಪರಿಚಿತವಾಗಿರುವ "ರೇನ್‌ಬೋ ಕನೆಕ್ಷನ್‌" ಎಂಬ ಗೀತೆಯಲ್ಲಿ, ಮಳೆಬಿಲ್ಲೊಂದರ ಪರಿಕಲ್ಪನೆಯನ್ನು ಬಯಕೆಯ ಒಂದು ವಸ್ತುವಿನ ರೂಪದಲ್ಲಿ ಕಾಣಲಾಗಿದೆ; ಒಂದು ಸ್ವಪ್ನವಸ್ತುವಾಗಿ, ಅಥವಾ ಭರವಸೆಯ ಸಂಕೇತವಾಗಿ ಇದನ್ನು ಜನಪ್ರಿಯವಾಗಿ ನೋಡಲಾಗಿರುವುದರಿಂದ ಅದು ಹಾಗೆ ಮೂಡಿಬಂದಿದೆ.
  • ಸೆಪ್ಟೆಂಬರ್‌ ಹಾಡಿರುವ "ಎಂಡ್‌ ಆಫ್‌ ದಿ ರೇನ್‌ಬೋ" ಗೀತೆಯಲ್ಲಿ ಮಳೆಬಿಲ್ಲಿನ ಕುರಿತಾಗಿ ಗಾಯಕಿಯು ಹಾಡುತ್ತಾಳೆ; ಮಳೆಬಿಲ್ಲಿನ ತುದಿಯಲ್ಲಿ ತಾನು ಹೇಗಿರುತ್ತೇನೆ, ತನ್ನ ಮಾಜಿ-ಸಂಗಾತಿಯು ಮಳೆಬಿಲ್ಲಿನ ತುದಿಯನ್ನು ತಲುಪಿದಾಗ ತನ್ನನ್ನು ಹೇಗೆ ನೋಡಬಹುದು ಎಂಬ ಭಾವಗಳು ಈ ಹಾಡಿನಲ್ಲಿ ವ್ಯಕ್ತವಾಗಿವೆ.
  • ಎಂಡ್‌ ಆಫ್‌ ದಿ ರೇನ್‌ಬೋ ಎಂಬುದೊಂದು ಸಂಗೀತವನ್ನೊಳಗೊಂಡ ಪ್ರಶಸ್ತಿ ವಿಜೇತ ರಂಗನಾಟಕವಾಗಿದ್ದು (ಅಥವಾ ಸಾಂಗೀತಕ ನಾಟಕ), ಪೀಟರ್‌ ಕ್ವಿಲ್ಟರ್‌ ಇದರ ಕರ್ತೃವಾಗಿದ್ದಾನೆ.
  • ಉದಾಹರಣೆಗಳಲ್ಲಿ ಉರೈ ಹೀಪ್‌ ಎಂಬಾತನ "ರೇನ್‌ಬೋ ಡೆಮನ್‌" ಹಾಡು ಮತ್ತು ರೇನ್‌ಬೋ ಎಂಬ ತಂಡ ಸೇರಿವೆ.
  • "ಐ ಕೆನ್‌ ಸಿಂಗ್‌ ಎ ರೇನ್‌ಬೋ" ಎಂಬುದು ಅರ್ಥರ್‌ ಹ್ಯಾಮಿಲ್ಟನ್‌ನಿಂದ ಬರೆಯಲ್ಪಟ್ಟಿರುವ ಒಂದು ಜನಪ್ರಿಯವಾದ ಮಕ್ಕಳ ಶ್ರೇಷ್ಠಗೀತೆಯಾಗಿದೆ; ಹಾಡಿನ ಹೆಸರು ಹಾಗಿದ್ದಾಗ್ಯೂ, ನಮೂದಿಸಲ್ಪಟ್ಟ ಎಲ್ಲಾ ಬಣ್ಣಗಳು ವಾಸ್ತವವಾಗಿ ಮಳೆಬಿಲ್ಲಿನ ಬಣ್ಣಗಳಾಗಿಲ್ಲ.
  • ರೋನೀ ಜೇಮ್ಸ್‌ ಡಿಯೋ ಎಂಬಾತ ತನ್ನ ಅನೇಕ ಹಾಡುಗಳಲ್ಲಿ ಮಳೆಬಿಲ್ಲುಗಳನ್ನು ಒಂದು ಆವರ್ತಕ ಅಂಶವಾಗಿ ಬಳಸಿಕೊಂಡ; ಅದರಲ್ಲೂ ನಿರ್ದಿಷ್ಟವಾಗಿ, ರಿಚೀ ಬ್ಲ್ಯಾಕ್‌ಮೋರ್‌‌‌ನ ರೇನ್‌ಬೋ ವಾದ್ಯವೃಂದಕ್ಕೆ ಸಂಬಂಧಿಸಿದಂತೆ ಗಾಯಕ ಮತ್ತು ಗೀತರಚನೆಕಾರನಾಗಿ ಕಾರ್ಯನಿರ್ವಹಿಸಿದಾಗ ಇದನ್ನು ಕಾಣಬಹುದು. ಇವುಗಳ ಪೈಕಿ ಅತ್ಯಂತ ಗಮನಾರ್ಹವಾದ ಹಾಡುಗಳೆಂದರೆ, ಕ್ಯಾಚ್‌ ದಿ ರೇನ್‌ಬೋ, ರೇನ್‌ಬೋ ಐಸ್‌ ಮತ್ತು ಡಿಯೋ ಹಾಡಾದ ರೇನ್‌ಬೋ ಇನ್‌ ದಿ ಡಾರ್ಕ್‌.

ಧ್ವಜಗಳು

ಬದಲಾಯಿಸಿ

ಮಳೆಬಿಲ್ಲಿನ ಧ್ವಜಗಳು ಹೊಸ ಯುಗವೂಂದರ, ಭರವಸೆಯ ಅಥವಾ ಸಾಮಾಜಿಕ ಬದಲಾವಣೆಯ ಒಂದು ಸಂಕೇತವಾಗಿ ಬಳಸಲ್ಪಟ್ಟಿರುವುದರ ಪ್ರವೃತ್ತಿ ಕಂಡುಬರುತ್ತದೆ. ಶತ ಶತಮಾನಗಳಿಂದಲೂ ಮಳೆಬಿಲ್ಲಿನ ಧ್ವಜಗಳು ಅನೇಕ ಸ್ಥಳಗಳಲ್ಲಿ ಬಳಸಲ್ಪಟ್ಟಿವೆ: 16ನೇ ಶತಮಾನದಲ್ಲಿನ ಜರ್ಮನ್‌ ಕೃಷಿಕರ ಯುದ್ಧದಲ್ಲಿ ಸಹಕಾರಿ ಆಂದೋಲನದ ಒಂದು ಸಂಕೇತವಾಗಿ; ವಿಶೇಷವಾಗಿ ಇಟಲಿಯಲ್ಲಿ ಶಾಂತಿಯ ಸಂಕೇತವಾಗಿ; ಮುಖ್ಯವಾಗಿ ಪೆರು ಮತ್ತು ಬೊಲಿವಿಯಾದಲ್ಲಿ[೩೨] ತವಾಂಟಿನ್‌ ಸುಯು, ಅಥವಾ ಇಂಕ ರಾಜ್ಯವನ್ನು ಪ್ರತಿನಿಧಿಸುವುದಕ್ಕಾಗಿ; ಯೆಹೂದಿಗಳ ಸ್ವಯಮಾಧಿಕಾರದ ಒಬ್ಲಾಸ್ಟ್‌‌‌ನಿಂದ; 1920ರ ದಶಕದಿಂದಲೂ ಹುಡುಗಿಯರಿಗೆ ಸಂಬಂಧಿಸಿದಂತಿರುವ ಮಳೆಬಿಲ್ಲಿನ ಅಂತರರಾಷ್ಟ್ರೀಯ ದರ್ಜೆಯನ್ನು ಪ್ರತಿನಿಧಿಸಲು; ಮತ್ತು 1970ರ ದಶಕದಿಂದಲೂ ಸಲಿಂಗಕಾಮಿ ಹೆಮ್ಮೆಯ ಹಾಗೂ LGBT ಸಾಮಾಜಿಕ ಆಂದೋಲನಗಳ ಒಂದು ಸಂಕೇತವಾಗಿ ಇದು ಬಳಸಲ್ಪಟ್ಟಿದೆ.[೩೩][೩೪]

ಪಾಶ್ಚಾತ್ಯರಲ್ಲಿ ಕಾಮನಬಿಲ್ಲು

ಬದಲಾಯಿಸಿ
  1. ದಕ್ಷಿಣ ಅಮೆರಿಕಾದ ಅರವಕರು ನಂಬುವಂತೆ ಸಮುದ್ರದ ಮೇಲೆದ್ದ ಕಾಮನಬಿಲ್ಲು ಅದೃಷ್ಟದ ಸಂಕೇತ.
  2. ಮಲಯದ ಸೆಮಿಂಗ್ ಜನರ ಪ್ರಕಾರ-ಕಾಮನಬಿಲ್ಲು ಭೂಮಿಯನ್ನು ಸ್ಪರ್ಶಿಸುವ ಪ್ರದೇಶಗಳೆಲ್ಲ ಅನಾರೋಗ್ಯಕಾರಿಯಾದುವು.
  3. ಯೂರೋಪಿನಲ್ಲಿರುವ ನಂಬಿಕೆಯಂತೆ ಕಾಮನಬಿಲ್ಲಿನ ಕೆಳಗೆ ಹಾಯುವ ಪುರುಷನು ಮಹಿಳೆಯಾಗಿಯೂ, ಮಹಿಳೆಯೂ ಪುರುಷನಾಗಿಯೂ ಬದಲಾಗುತ್ತಾರೆ.
  4. ಉತ್ತರ ಅಮೆರಿಕಾದ ಆಗ್ನೇಯ ಭಾಗದಲ್ಲಿ ವಾಸಿಸುವ ಕಟಾವ ಇಂಡಿಯನ್ನರು ಕಾಮನಬಿಲ್ಲು ಸತ್ತವರ ಸಂಚಾರಕ್ಕಿರುವ ದಾರಿ ಎಂದು ಭಾವಿಸಿದ್ದಾರೆ.
  5. ಆಸ್ಟ್ರೇಲಿಯಾದ ಮೂಲ ನಿವಾಸಿಗಳು, ಪಶ್ಚಮ ಆಫ್ರಿಕಾದ ದಹೋಮೀನ್ಸ್, ಪರ್ಷಿಯನ್ನರಿಗೆ ಕಾಮನಬಿಲ್ಲೆಂದರೆ ಒಂದು ಬಗೆಯ ಹಾವಿದ್ದಂತೆ.
  6. ಟೈಮಿಸ್ಕೇಮಿಂಗ್, ಆಲ್ಗೋಂಕ್ವಿನ್ನರು ಕಾಮನಬಿಲ್ಲು ನೀರಿನಿಂದ ರೂಪಿತವಾದದ್ದು ಎಂದು ನಂಬುತ್ತಾರೆ.
  7. ಆಗ್ನೇಯ ಭಾಗದ ಯೂಚಿ ಜನರ ನಂಬಿಕೆಯ ಪ್ರಕಾರ ಕಾಮನಬಿಲ್ಲು ಶುಷ್ಕ ಹವಾಮಾನವನ್ನು ಉಂಟುಮಾಡುತ್ತದೆ.
  8. ಉತ್ತರ ಕ್ಯಾಲಿಫೋರ್ನಿಯಾದ ಬುಡಕಟ್ಟಿನಲ್ಲಿ ಕಾಮನಬಿಲ್ಲಿನೆಡೆಗೆ ಕೈ ಮಾಡಿ ತೋರಿಸಿ ಅದರಲ್ಲಿರುವ ಬಣ್ಣಗಳನ್ನು ಎಣಿಸಿದರೆ ಕೆಡಾಗುತ್ತದೆ ಎಂದು ನಂಬುತ್ತಾರೆ.
  9. ದಹೋಮ ನಿಗ್ರೋಗಳ ನಂಬಿಕೆಯಂತೆ ಅಗಾಧ ಗಾತ್ರದ, ಬಾಯಲ್ಲಿ ಬಾಲವಿರಿಸಿಕೊಂಡ ಸರ್ಪವೂಂದು ಭೂಮಂಡಲವನ್ನು ಸುತ್ತುವರಿದಿದೆ.

ಕಾಮನ ಬಿಲ್ಲಿನ ಬಗೆಗಿರುವ ನಂಬಿಕೆಗಳು

ಬದಲಾಯಿಸಿ
  1. ಮುಂಜಾನೆ ಕಾಮನಬಿಲ್ಲು ಗೋಚರಿಸಿದರೆ ನಾವಿಕರು ಜಾಗೃತರಾಗಿ, ಮುದಗೊಳ್ಳುತ್ತಾರೆ.
  2. ಗಾಳಿ ಬೀಸುವ ದಿಕ್ಕಿನಲ್ಲಿ ಕಾಮನಬಿಲ್ಲು ಕಂಡರೆ ಆ ದಿನ ಪ್ರತಿಕೂಲ ವಾತಾವರಣ ಇರುತ್ತದೆ.
  3. ಬಿರುಗಾಳಿ ಬೀಸಿದ ನಂತರ ಕಾಮನಬಿಲ್ಲು ಕಾಣಿಸಿದಲ್ಲಿ ಕೆಲಕಾಲ ಮಳೆ ಬರುವುದಿಲ್ಲ.
  4. ಜೋಡಿ ಕಾಮನಬಿಲ್ಲುಗಳು ಶುಷ್ಕ ಹವಾಮಾನ ನಿಧಾನವಾಗಿ ಕೊನೆಗೊಳ್ಳುವುದನ್ನು ಸೂಚಿಸುತ್ತದೆ.
  5. ಪೂರ್ವದಿಕ್ಕಿನ ಕಾಮನಬಿಲ್ಲು ಒಳ್ಳೆಯ ಅದೃಷ್ಟವನ್ನು ತರುತ್ತದೆ.
  6. ಕಾಮನಬಿಲ್ಲು ನೆಲ ಮುಟ್ಟುವ ಪ್ರದೇಶಗಳು ಅದೃಷ್ಟದಿಂದ ಕೂಡಿರುತ್ತವೆ.
  7. ಕಾಮನಬಿಲ್ಲು ಭೂ ಸ್ಪರ್ಶ ಮಾಡುವ ಕಡೆ ನೀರು ಕುಡಿಯುತ್ತದೆ.
  8. ಕಾಮನಬಿಲ್ಲು ತಲೆಯ ಮೇಲೆ ಅಥವಾ ಸಮೀಪದಲ್ಲಿ ಬಿದ್ದಂತೆ ಬಡವರಿಗೆ ಕನಸಾದರೆ ಅವರು ಐಶ್ವರ್ಯವಂತರಾಗುತ್ತಾರೆ, ಐಶ್ವರ್ಯವಂತರು ಬಡವರಾಗುತ್ತಾರೆ.

ಇತರ ಧರ್ಮಗಳಲ್ಲಿ ಕಾಮನಬಿಲ್ಲು

ಬದಲಾಯಿಸಿ
  1. ಭಾರತೀಯ ಧರ್ಮದ ಪ್ರಕಾರ ಕಾಮನಬಿಲ್ಲು ಪೂಜಾರ್ಹವಾದುದು.
  2. ಇರಾನಿನ ಮುಸ್ಲಿಮರು ಕಾಮನಬಿಲ್ಲನ್ನು ರುಸ್ತುಮನ ಬಿಲ್ಲು-ಬಾಣವೆಂದೂ, ಆಲಿಯ ಖಡ್ಗವೆಂದೂ, ಮಾಂತ್ರಿಕ ಪರ್ವತ ಖಾಫ್ ನ ಚಿತ್ರವೆಂದೂ ಗುರ್ತಿಸುತ್ತಾರೆ.
  3. ಕ್ರೆಸ್ತರಿಗೆ ಕಾಮನಬಿಲ್ಲು ವಿಸ್ಮಯದ, ಜಾಗೃತಿಯ ಸಂಕೇತ.
  4. ವಾಯುವ್ಯ ಬುಡಕಟ್ಟಿನ ಜನರು ಕಾಮನಬಿಲ್ಲನ್ನು 'ಕಲ್ಸೇರು' ಎಂಬ ಹೆಸರಿನಿಂದ ಕರೆಯುತ್ತಾರೆ.

ಮಳೆಬಿಲ್ಲಿನ ಏಳು ಬಣ್ಣಗಳು

ಬದಲಾಯಿಸಿ

ಬಣ್ಣಗಳ ಒಂದು ಅಖಂಡವಾಗಿರುವ ರೋಹಿತವನ್ನು ಒಂದು ಮಳೆಬಿಲ್ಲು ವ್ಯಾಪಿಸುತ್ತದೆ- ಅಲ್ಲಿ ಯಾವುದೇ "ಪಟ್ಟಿಗಳು" ಇಲ್ಲ. ಇದರ ಸ್ಪಷ್ಟ ವಿಚ್ಛಿನ್ನತೆಯು ಮಾನವ ಕಣ್ಣಿನಲ್ಲಿರುವ ದ್ಯುತಿ ವರ್ಣದ್ರವ್ಯಗಳ ಒಂದು ಕಲಾಕೃತಿ ಮತ್ತು ಮಿದುಳಿನಲ್ಲಿನ ನಮ್ಮ ದ್ಯುತಿಗ್ರಾಹಿ ಫಲಿತಗಳ ನರದ ಸಂಸ್ಕರಣೆಯಾಗಿದೆ. ಮಾನವ ಬಣ್ಣ ಗ್ರಾಹಿಗಳ ಗರಿಷ್ಟ ಪ್ರತಿಕ್ರಿಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುವುದರಿಂದ, ವಿಭಿನ್ನ ವ್ಯಕ್ತಿಗಳು ಕೊಂಚಮಟ್ಟಿಗೆ ವಿಭಿನ್ನವಾಗಿರುವ ಬಣ್ಣಗಳನ್ನು ನೋಡುತ್ತಾರೆ, ಮತ್ತು ವರ್ಣಾಂಧತೆಯನ್ನು ಹೊಂದಿರುವ ವ್ಯಕ್ತಿಗಳು ಬಣ್ಣಗಳ ಒಂದು ಸಣ್ಣದಾದ ರಾಶಿಯನ್ನು ನೋಡುತ್ತಾರೆ. ಅದೇನೇ ಇದ್ದರೂ, ಈ ಕೆಳಗೆ ಪಟ್ಟಿಮಾಡಲಾಗಿರುವ ಏಳು ಬಣ್ಣಗಳು, ಬಣ್ಣವನ್ನು ನೋಡುವ ಸಾಮಾನ್ಯ ಶಕ್ತಿಯನ್ನು ಹೊಂದಿರುವ ಎಲ್ಲೆಡೆಯಲ್ಲಿನ [೩೫] ಮಾನವರು ಮಳೆಬಿಲ್ಲನ್ನು ಹೇಗೆ ನೋಡುತ್ತಾರೆ ಎಂಬುದನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ.

ನ್ಯೂಟನ್‌ ಮೂಲತಃ (1672) ಕೇವಲ ಐದು ಪ್ರಧಾನ ಬಣ್ಣಗಳನ್ನಷ್ಟೇ ಹೆಸರಿಸಿದ: ಕೆಂಪು, ಹಳದಿ, ಹಸಿರು, ನೀಲಿ ಮತ್ತು ನೇರಿಳೆ ಇವೇ ಆ ಐದು ಬಣ್ಣಗಳಾಗಿದ್ದವು. ನಂತರದಲ್ಲಿ ಆತ ಕಿತ್ತಳೆ ಮತ್ತು ಊದಾನೀಲಿ ಬಣ್ಣಗಳನ್ನು ಸೇರಿಸಿ, ಸಾಂಗೀತಕ ಸ್ವರ ಶ್ರೇಣಿಯೊಂದರಲ್ಲಿನ ಪ್ರಸ್ತಾರಗಳ ಸಂಖ್ಯೆಗೆ ಏಳು ಬಣ್ಣಗಳ ಹೋಲಿಕೆಯನ್ನು ನೀಡಿದ.[೩೬]

ಕೆಂಪು:  . ಕಿತ್ತಳೆ:  . ಹಳದಿ:  . ಹಸಿರು:  . ನೀಲಿ:  . ಊದಾನೀಲಿ:  . ನೇರಿಳೆ: .

ಮಳೆಬಿಲ್ಲಿನಿಂದ ವಿಂಗಡಿಸಲ್ಪಡಬೇಕಾದ ಪರಿಣಾಮಗಳು

ಬದಲಾಯಿಸಿ
  • ಸುತ್ತು ಸಮತಲವಾದ ಚಾಪ
  • ಸುತ್ತುಖಮಧ್ಯದ ಚಾಪ
  • ದಟ್ಟಮಂಜಿನ ಬಿಲ್ಲು
  • ಪ್ರಭಾಮಂಡಲ
  • ತೇಜೋಮಂಡಲ
  • ಸಾಬೂನು ಗುಳ್ಳೆಗಳಲ್ಲಿನ ವರ್ಣವೈವಿಧ್ಯದ ಬಣ್ಣಗಳು
  • ಚಂದ್ರನ ಬಿಲ್ಲು
  • ಸೂರ್ಯಾಭಾಸ

ಟಿಪ್ಪಣಿಗಳು

ಬದಲಾಯಿಸಿ
  1. Walklet, Keith S. (2006). archive.org/web/ 20070525033800/http: //www.anseladams.com/ content/ newsletter/lunar_rainbow.html "Lunar Rainbows - When to View and How to Photograph a "Moonbow"". The Ansel Adams Gallery. Archived from anseladams.com/ content/newsletter/ lunar_ rainbow. html the original on May 25, 2007. Retrieved 2007-06-07. {{cite web}}: Check |archiveurl= value (help); Check |url= value (help)
  2. Cowley, Les. atoptics.co.uk/ rainbows/seabow.htm "Sea Water Rainbow". Atmospheric Optics. Retrieved 2007-06-07. {{cite web}}: Check |url= value (help)
  3. ಕೌಲೆ, ಲೆಸ್‌. "ಜೀರೋ ಆರ್ಡರ್‌ ಗ್ಲೋ" ಅಟ್ಮಾಸ್ಫಿಯರಿಕ್‌ ಆಪ್ಟಿಕ್ಸ್‌.
  4. Billet, Felix (1868). "Mémoire sur les Dix-neuf premiers arcs-en-ciel de l'eau". Annales scientifiques de l'École Normale Supérieure. 1 (5): 67–109. Retrieved 2008-11-25.
  5. K. ಸಾಸ್ಸೆನ್‌, J. ಆಪ್ಟ್‌. ಸಾಕ್‌. ಆಮ್‌. 69 (1979) 1083. doi:10.1364/JOSA.69.001083
  6. P.H. ಎಂಗ್‌, M.Y. ಟ್ಸೇ, ಮತ್ತು W.K. ಲೀ, J. ಆಪ್ಟ್‌. ಸಾಕ್‌. ಆಮ್‌. B 15 (1998) 2782 doi:10.1364/JOSAB.15.002782
  7. Terje O. Nordvik. "Six Rainbows Across Norway". APOD (Astronomy Picture of the Day). Retrieved 2007-06-07.
  8. Les Cowley. "Circumhorizontal arc". Atmospheric Optics. Retrieved 2007-04-22.
  9. Science@NASA. "Rainbows on Titan". Archived from the original on 2005-02-27. Retrieved 2008-11-25.
  10. "ದಿ ರೇನ್‌ಬೋ ಬ್ರಿಜ್‌: ರೇನ್‌ಬೋಸ್‌ ಇನ್‌ ಆರ್ಟ್‌, ಮಿಥ್‌, ಅಂಡ್‌ ಸೈನ್ಸ್‌ ". ರೇಮಂಡ್‌ L. ಲೀ, ಆಲಿಸ್ಟರ್‌ B. ಫ್ರೇಸರ್‌ (2001). ‌ಪೆನ್‌ ಸ್ಟೇಟ್‌ ಪ್ರೆಸ್. ಪುಟ 109. ISBN 0-271-01977-8
  11. ೧೧.೦ ೧೧.೧ ೧೧.೨ Topdemir, Hüseyin Gazi (2007). "Kamal Al-Din Al-Farisi's Explanation of the Rainbow" (PDF). Humanity & Social Sciences Journal. 2 (1): 75–85 [77]. Retrieved 2008-09-16.
  12. ೧೨.೦ ೧೨.೧ O'Connor, J.J.; Robertson, E.F. (November 1999). "Kamal al-Din Abu'l Hasan Muhammad Al-Farisi". MacTutor History of Mathematics archive, University of St Andrews. Archived from the original on 2017-07-21. Retrieved 2007-06-07.{{cite web}}: CS1 maint: multiple names: authors list (link)
  13. Topdemir, Hüseyin Gazi (2007). "Kamal Al-Din Al-Farisi's Explanation of the Rainbow" (PDF). Humanity & Social Sciences Journal. 2 (1): 75–85 [83]. Retrieved 2008-09-16.
  14. ೧೪.೦ ೧೪.೧ "ದಿ ರೇನ್‌ಬೋ ಬ್ರಿಜ್‌: ರೇನ್‌ಬೋಸ್‌ ಇನ್‌ ಆರ್ಟ್‌, ಮಿಥ್‌, ಅಂಡ್‌ ಸೈನ್ಸ್‌ ". ರೇಮಂಡ್‌ L. ಲೀ, ಆಲಿಸ್ಟರ್‌ B. ಫ್ರೇಸರ್‌ (2001). ಪೆನ್‌ ಸ್ಟೇಟ್‌ ಪ್ರೆಸ್‌. ಪುಟಗಳು 141-144. ISBN 0-271-01977-8
  15. ಕಾರ್ಲ್‌ ಬೆಂಜಮಿನ್‌ ಬಾಯರ್‌ (1954), "ರಾಬರ್ಟ್‌ ಗ್ರಾಸ್ಸೆಟೆಸ್ಟೆ ಆನ್‌ ದಿ ರೇನ್‌ಬೋ", ಓಸಿರಿಸ್‌‌ 11 : 247–258 [248]
  16. ‌ಸಿವಿನ್, ನಾಥನ್‌ (1995). ಸೈನ್ಸ್‌ ಇನ್‌ ಏನ್ಷಿಯಂಟ್‌ ಚೈನಾ: ರಿಸರ್ಚಸ್‌ ಅಂಡ್‌ ರಿಫ್ಲೆಕ್ಷನ್ಸ್‌ ಬ್ರೂಕ್‌ಫೀಲ್ಡ್‌, ವೆರ್ಮಾಂಟ್‌: ವೇರಿಯೋರಿಯಂ, ಆಶ್‌ಗೇಟ್‌ ಪಬ್ಲಿಷಿಂಗ್‌. III, ಪುಟ 24.
  17. ‌‌ಡಾಂಗ್, ಪಾಲ್‌ (2000), ಚೈನಾ'ಸ್‌ ಮೇಜರ್‌ ಮಿಸ್ಟರೀಸ್‌: ಪ್ಯಾರಾನಾರ್ಮಲ್‌ ಫೆನಾಮೆನಾ ಅಂಡ್‌ ದಿ ಅನ್‌ಎಕ್ಸ್‌ಪ್ಲೇನ್ಡ್‌ ಇನ್‌ ದಿ ಪೀಪಲ್‌'ಸ್‌ ರಿಪಬ್ಲಿಕ್‌ , ಪುಟ 72, ಸ್ಯಾನ್‌ ಫ್ರಾನ್ಸಿಸ್ಕೊ: ಚೈನಾ ಬುಕ್ಸ್‌ ಅಂಡ್‌ ಪೀರಿಯಾಡಿಕಲ್ಸ್‌, ಇಂಕ್‌., ISBN 0-8351-2676-5
  18. ನಾಡರ್‌ ಎಲ್‌-ಬಿಜ್ರಿ, "ಇಬ್ನ್‌ ಅಲ್‌-ಹಯ್‌ಥಾಮ್‌"; ಮೆಡಿಇವಲ್‌ ಸೈನ್ಸ್‌, ಟೆಕ್ನಾಲಜಿ, ಅಂಡ್‌ ಸೈನ್ಸ್‌: ಆನ್‌ ಎನ್‌ಸೈಕ್ಲೋಪೀಡಿಯಾ ದಲ್ಲಿರುವಂಥದ್ದು, ಸಂಪಾದಕರು: ಥಾಮಸ್‌ F. ಗ್ಲಿಕ್‌, ಸ್ಟೀವನ್‌ J. ಲಿವೆಸೆ, ಮತ್ತು ಫೇಯ್ತ್‌ ವಾಲಿಸ್‌ (ನ್ಯೂಯಾರ್ಕ್‌ — ಲಂಡನ್‌: ರೌಲೆಟ್ಜ್‌‌, 2005), ಪುಟಗಳು 237–240.
  19. ನಾಡರ್‌ ಎಲ್‌-ಬಿಜ್ರಿ, "ಆಪ್ಟಿಕ್ಸ್‌"; ಮೆಡಿಈವಲ್‌ ಇಸ್ಲಾಮಿಕ್‌ ಸಿವಿಲಿಸೇಷನ್‌: ಆನ್‌ ಎನ್‌ಸೈಕ್ಲೋಪೀಡಿಯಾ ದಲ್ಲಿರುವಂಥದ್ದು, ಸಂಪಾದಕ: ಜೋಸೆಫ್‌ W. ಮೇರಿ (ನ್ಯೂಯಾರ್ಕ್‌ – ಲಂಡನ್‌: ರೌಲೆಟ್ಜ್‌‌, 2005), ಸಂಪುಟ II, ಪುಟಗಳು 578–580
  20. ನಾಡರ್‌ ಎಲ್‌-ಬಿಜ್ರಿ, "ಅಲ್‌-ಫಾರಿಸಿ, ಕಮಲ್‌ ಅಲ್‌-ದಿನ್‌"; ದಿ ಬಯಾಗ್ರಫಿಕಲ್‌ ಎನ್‌ಸೈಕ್ಲೋಪೀಡಿಯಾ ಆಫ್‌ ಇಸ್ಲಾಮಿಕ್‌ ಫಿಲಾಸಫಿ ಯಲ್ಲಿರುವಂಥದ್ದು, ಸಂಪಾದಕ: ಆಲಿವರ್‌‌ ಲೀಮನ್‌ (ಲಂಡನ್‌ — ನ್ಯೂಯಾರ್ಕ್‌: ಥೋಮೆಸ್‌ ಕಂಟಿನ್ಯುಯಂ, 2006), ಸಂಪುಟ I, ಪುಟಗಳು 131–135
  21. ನಾಡರ್‌ ಎಲ್‌-ಬಿಜ್ರಿ, "ಇಬ್ನ್‌ ಅಲ್‌-ಹಯ್‌ಥಾಮ್‌, ಸಲ್‌-ಹಸನ್‌"; ದಿ ಬಯಾಗ್ರಫಿಕಲ್‌ ಎನ್‌ಸೈಕ್ಲೋಪೀಡಿಯಾ ಆಫ್‌ ಇಸ್ಲಾಮಿಕ್‌ ಫಿಲಾಸಫಿ ಯಲ್ಲಿರುವಂಥದ್ದು, ಸಂಪಾದಕ: ಆಲಿವರ್‌‌ ಲೀಮನ್‌ (ಲಂಡನ್‌ — ನ್ಯೂಯಾರ್ಕ್‌: ಥೋಮೆಸ್‌ ಕಂಟಿನ್ಯುಯಂ, 2006), ಸಂಪುಟ I, ಪುಟಗಳು 248–255.
  22. Davidson, Michael W. (August 1, 2003). "Roger Bacon (1214–1294)". Florida State University. Retrieved 2006-08-10.
  23. ದಿ ರೇನ್‌ಬೋ ಬ್ರಿಜ್‌: ರೇನ್‌ಬೋಸ್‌ ಇನ್‌ ಆರ್ಟ್‌, ಮಿಥ್‌, ಅಂಡ್‌ ಸೈನ್ಸ್‌, ಪುಟ 156, ರೇಮಂಡ್‌ L. ಲೀ, ಆಲಿಸ್ಟರ್‌ B. ಫ್ರೇಸರ್‌
  24. Lindberg, David C (Summer, 1966). "Roger Bacon's Theory of the Rainbow: Progress or Regress?". Isis. 57 (2): 235. doi:10.1086/350116. Retrieved 2007-06-07. {{cite journal}}: Check date values in: |date= (help)
  25. Boyer, Carl B. (1952). "Descartes and the Radius of the Rainbow". Isis. 43 (2): 95–98. doi:10.1086/349399.
  26. Gedzelman, Stanley David (1989). "Did Kepler's Supplement to Witelo Inspire Descartes' Theory of the Rainbow?". Bulletin of the American Meteorological Society. 70 (7): 750. doi:10.1175/1520-0477(1989)070<0750:DKSTWI>2.0.CO;2. Retrieved 2007-06-19.
  27. O'Connor, J.J.; Robertson, E.F. (January 2000). "Sir Isaac Newton". University of St. Andrews. Retrieved 2007-06-19.{{cite web}}: CS1 maint: multiple names: authors list (link)
  28. ನುಸೆನ್‌ಜ್ವೀಗ್‌, H. ಮೋಸೆಸ್‌, "ದಿ ಥಿಯರಿ ಆಫ್‌ ದಿ ರೇನ್‌ಬೋ," ಸೈಂಟಿಫಿಕ್‌ ಅಮೆರಿಕನ್‌ ಸಂಪುಟ 236, ಸಂ.4 (1977), 116.
  29. ಹೋಲಿ ಬೈಬಲ್: (ಕಿಂಗ್‌ ಜೇಮ್ಸ್‌ ಆವೃತ್ತಿ.) (2004). ಇಂಟೆಲೆಕ್ಚುಯಲ್‌ ರಿಸರ್ವ್‌, ಇಂಕ್..
  30. sciencedirect.com/ science?_ob=ArticleURL&_udi=B6T8D-4XFPR09-1&_user= 9544096&_ coverDate=01%2F08% 2F2010& _rdoc=1&_fmt=high&_orig=search&_origin=search&_sort=d&_docanchor=&view=c&_searchStrId=1448860523&_rerunOrigin=google&_acct=C000039618&_version=1&_urlVersion=0&_userid=9544096&md5=55d589e8367329b7e92f31a06e4c7021&searchtype=a ದಿ ರೇನ್‌ಬೋ ಹರ್ಟ್ಸ್ ಮೈ ಸ್ಕಿನ್‌: ಮೆಡಿಸಿನಲ್‌ ಕಾನ್ಸೆಪ್ಟ್ಸ್‌ ಅಂಡ್‌ ಪ್ಲಾಂಟ್ಸ್‌ ಯೂಸಸ್‌ ಅಮಾಂಗ್‌ ದಿ ಯನೇಶಾ (ಅಮುಯೆಶಾ), ಆನ್‌ ಅಮೆಜೋನಿಯನ್‌ ಪೆರುವಿಯನ್‌ ಎತ್ನಿಕ್‌ ಗ್ರೂಪ್‌. ಸೆಲೀನ್‌ ವಲಾಡಿಯು, ಜೋಕ್ವಿನಾ ಆಲ್ಬನ್‌ ಕ್ಯಾಸ್ಟಿಲ್ಲೊ, ಮೈಕೇಲ್‌‌ ಸೌವೈನ್‌, ಅಗಸ್ಟೊ ಫ್ರಾನ್ಸಿಸ್‌ ಲೋರೇಸ್‌ ಮತ್ತು ಜೆನೆವೀವ್‌ ಬೌರ್ಡಿ. ಜರ್ನಲ್‌ ಆಫ್‌ ಎತ್ನೊಫಾರ್ಮಕಾಲಜಿ. ಸಂಪುಟ 127, ಸಂಚಿಕೆ 1, ಜನವರಿ 8, 2010, ಪುಟಗಳು 175-192
  31. ಯುಟಿಲೈಜಿಂಗ್‌ ವೆಸ್ಟರ್ನ್‌ ಅಂಡ್‌ ಟ್ರೆಡಿಷನಲ್‌ ರೆಮಿಡೀಸ್‌ ಇನ್‌ ದಿ ಪೆರುವಿಯನ್‌ ಅಮೆಜಾನ್‌ Archived 2011-07-25 ವೇಬ್ಯಾಕ್ ಮೆಷಿನ್ ನಲ್ಲಿ.. ವೆಬ್‌ಸ್ಟರ್‌, ಪ್ಯಾಟಿ
  32. "Flagspot.net". Flagspot.net. Retrieved 2010-10-16.
  33. "The Rainbow Flag". Retrieved 2007-08-21. {{cite journal}}: Cite journal requires |journal= (help)
  34. Gilbert Baker (October 18, 2007). "Pride-Flyin' Flag: Rainbow-flag founder marks 30-years anniversary". Metro Weekly. Washington DC. Retrieved 2008-03-13.
  35. ಬರ್ಲಿನ್‌, B. ಮತ್ತು ಕೇ, P., Basic Color Terms: Their Universality and Evolution , ಬರ್ಕ್‌ಲಿ: ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ ಪ್ರೆಸ್‌, 1969.
  36. "Umn.edu". Umn.edu. Archived from the original on 2014-09-29. Retrieved 2010-10-16.


ಉಲ್ಲೇಖಗಳು

ಬದಲಾಯಿಸಿ
  • Greenler, Robert (1980). Rainbows, Halos, and Glories. Cambridge University Press. ISBN 0195218337.
  • Lee, Raymond L. and Alastair B. Fraser (2001). The Rainbow Bridge: Rainbows in Art, Myth and Science. New York: Pennsylvania State University Press and SPIE Press. ISBN 0-271-01977-8.
  • Lynch, David K.; Livingston, William (2001). Color and Light in Nature (2nd ed.). Cambridge University Press. ISBN 0-521-77504-3.{{cite book}}: CS1 maint: multiple names: authors list (link)
  • Minnaert, Marcel G.J. (1993). Light and Color in the Outdoors. Springer-Verlag. ISBN 0-387-97935-2. {{cite book}}: Unknown parameter |coauthors= ignored (|author= suggested) (help)
  • Minnaert, Marcel G.J. (1973). The Nature of Light and Color in the Open Air. Dover Publications. ISBN 0-486-20196-1. {{cite book}}: Unknown parameter |coauthors= ignored (|author= suggested) (help)
  • Naylor, John (2002). Out of the Blue: A 24-Hour Skywatcher's Guide. Cambridge University Press. ISBN 0-521-80925-8. {{cite book}}: Unknown parameter |coauthors= ignored (|author= suggested) (help)
  • Boyer, Carl B. (1987). The Rainbow, From Myth to Mathematics. Princeton University Press. ISBN 0-691-08457-2.
  • ಗ್ರಹಾಂ, ಲೇನಿಯರ್‌‌ F. (ಸಂಪಾದಕ) ದಿ ರೇನ್‌ಬೋ ಬುಕ್‌ ಬರ್ಕ್‌ಲಿ, ಕ್ಯಾಲಿಫೋರ್ನಿಯಾ: ಶಂಭಾಲಾ ಪಬ್ಲಿಕೇಷನ್ಸ್‌ ಮತ್ತು ದಿ ಫೈನ್‌ ಆರ್ಟ್ಸ್‌ ಮ್ಯೂಸಿಯಮ್ಸ್‌ ಆಫ್‌ ಸ್ಯಾನ್‌ಫ್ರಾನ್ಸಿಸ್ಕೋ (1976) (1976ರ ಬೇಸಿಗೆ ವಸ್ತುಪ್ರದರ್ಶನವಾದ ದಿ ರೇನ್‌ಬೋ ಆರ್ಟ್‌ ಷೋ ಗಾಗಿ ರೂಪಿಸಲಾದ ದೊಡ್ಡ ಸ್ವರೂಪ ಕೈಪಿಡಿ; ಈ ವಸ್ತುಪ್ರದರ್ಶನವು ಪ್ರಧಾನವಾಗಿ ಡಿ ಯಂಗ್‌ ಮ್ಯೂಸಿಯಂನಲ್ಲಿ ನಡೆಯಿತಾದರೂ ಇತರ ವಸ್ತುಸಂಗ್ರಹಾಲಯಗಳಲ್ಲೂ ಆಯೋಜಿಸಲ್ಪಟ್ಟಿತು. ಈ ಪುಸ್ತಕವು ಏಳು ವಿಭಾಗಗಳಾಗಿ ವಿಭಜಿಸಲ್ಪಟ್ಟಿದ್ದು, ಪ್ರತಿ ವಿಭಾಗವೂ ಮಳೆಬಿಲ್ಲಿನ ಒಂದು ವಿಭಿನ್ನ ಬಣ್ಣದಿಂದ ಕೂಡಿದೆ.)
  • De Rico, Ul (1978). The Rainbow Goblins. Thames & Hudson. ISBN 0-500-27759-1.

ಬಾಹ್ಯ ಕೊಂಡಿಗಳು

ಬದಲಾಯಿಸಿ